Tag: breastfeeding

  • ಬೇಬಿ ಫಾರ್ಮುಲಾ ಕೊರತೆ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ತಾಯಿ

    ಬೇಬಿ ಫಾರ್ಮುಲಾ ಕೊರತೆ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ತಾಯಿ

    ವಾಷಿಂಗ್ಟನ್: ಪೋಷಕಾಂಶಗಳಿಂದ ವಂಚಿತವಾದ ಪುಟ್ಟ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಸಹಾಯ ಮಾಡಲು ಯುಎಸ್ ತಾಯಿಯೊಬ್ಬರು ತನ್ನ 118 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ್ದಾರೆ.

    ಯುನೈಟೆಡ್ ಸ್ಟೇಟ್‌ನಲ್ಲಿ ಬೇಬಿ ಫಾರ್ಮುಲಾ ಕೊರತೆ ಹೆಚ್ಚಾಗುತ್ತಿದೆ. ಈ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಹಿನ್ನೆಲೆ ಯುಎಸ್ ಉತಾಹ್ ತಾಯಿಯು ತನ್ನ 118 ಲೀಟರ್‌ಗಿಂತಲೂ ಹೆಚ್ಚು ಎದೆ ಹಾಲನ್ನು ಅಗತ್ಯವಿರುವವರಿಗೆ ಮಾರಾಟ ಮಾಡುವ ಮೂಲಕ ಸಹಾಯ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಂಭ್ರಮದ ಮನೆ ಈಗ ಸ್ಮಶಾನ ಮೌನ – ಗೆಳೆಯ ಎಂದು ಕರೆ ಮಾಡಿ ಚಾಕು ಇರಿದ 

    US Mother Selling 118 Litres Of Her Breast Milk To Help Families Amid Baby Formula Shortage

    ಈ ಕುರಿತು ತಾಯಿ ಅಲಿಸ್ಸಾ ಚಿಟ್ಟಿ ಮಾತನಾಡಿದ್ದು, ಎದೆಹಾಲು ತುಂಬಿರುವ ಮೂರಕ್ಕಿಂತ ಹೆಚ್ಚು ಫ್ರೀಜ್‍ಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದರು. ನಾನು ಮನೆಯಿಂದ ಯಾವಾಗಲೂ ಹೊರಗೆ ಇರಲು ಬಯಸುತ್ತೇನೆ. ಇದರಿಂದ ಬೇರೆಯವರಿಗೆ ಸಹಾಯ ಮಾಡಬಹುದು ಎಂದು ತಿಳಿದುಕೊಂಡಿದ್ದೇನೆ. ನನ್ನ ಬಳಿ 3,000 ಔನ್ಸ್‌ಗಳಿವೆ ಎಂದು ನನಗೆ ತಿಳಿದಿದೆ ಎಂದರು.

    ಮೊದಲಿಗೆ, ಚಿಟ್ಟಿ ಹಾಲಿನ ಬ್ಯಾಂಕ್‍ಗೆ ದೇಣಿಗೆ ನೀಡಲು ಪ್ರಯತ್ನಿಸಿದರು. ಅವರ ಸುದೀರ್ಘ ಪ್ರಯತ್ನದಿಂದ ತಮ್ಮ ಎದೆಹಾಲಿನ ಬೆಲೆಯನ್ನು ಒಂದು ಔನ್ಸ್‌ ಗೆ 1 ಡಾಲರ್(77.48) ನಿಗದಿಪಡಿಸಿದರು. ಅಲ್ಲದೇ ದೇಶದಲ್ಲಿ ಬೇಬಿ ಫಾರ್ಮುಲಾ ಕೊರತೆಯ ಬಗ್ಗೆ ನಮ್ಮ ಮನೆಯವರಿಗೆ ತಿಳಿಸುವುದು ಮತ್ತು ಅವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧ ನಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ಏನೂ ಪ್ರಯೋಜನವಿಲ್ಲ: ಬಿಜೆಪಿ

    ನನಗೆ ಗೊತ್ತು, ಬಹಳಷ್ಟು ತಾಯಂದಿರಿಗೆ ಹಾಲಿನ ತೊಂದರೆ ಇರುವುದರಿಂದ ಮಕ್ಕಳಿಗೆ ಯಾವುದೇ ನಿರ್ದಿಷ್ಟ ಪೋಷಕಾಂಶ ಸಿಗುವುದಿಲ್ಲ. ಇದು ಎಷ್ಟು ಕಷ್ಟವಾಗಬಹುದು ಎಂದು ನನಗೆ ತಿಳಿದಿದೆ. ಈ ಬಗ್ಗೆ ಯಾರಿಗೂ ತಿಳಿಯುವುದಿಲ್ಲ ಎಂದು ತಿಳಿಸಿದರು.

  • ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

    ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

    ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೇ ಜೊತೆಗೆ ಸರಳತೆಯಿಂದ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಪತಿ ರಾಕಿಂಗ್ ಸ್ಟಾರ್ ಯಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾದಲ್ಲಿ ಅಷ್ಟು ಕಾಣಿಸಿಕೊಳ್ಳದಿಂದ್ರೂ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಯಾವಾಗಲೂ ಕನೆಕ್ಟ್ ಆಗಿರುತ್ತಾರೆ. ಮದುವೆಯಾದ ನಂತರ ಇಬ್ಬರು ಸ್ಟಾರ್ ಕಪಲ್‍ಗಳು ಸಿನಿಮಾ ಜೊತೆಗೆ ಜನಸಾಮಾನ್ಯರಿಗೆ ಸಹಾಯವಾಗುವ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಇಂದು ಸಹ ರಾಧಿಕಾ ಎದೆಹಾಲನ್ನು ದಾನ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದು, ಎದೆಹಾಲು ದಾನ ಮಾಡಿ ಎಂದು ಸಂದೇಶ ಕೊಟ್ಟಿದ್ದಾರೆ.

    ಎದೆಹಾಲು ಮಕ್ಕಳಿಗೆ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದನ್ನು ಕುರಿತು ರಾಧಿಕಾ ವೀಡಿಯೋ ಮಾಡಿದ್ದು, ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋವನ್ನು ವೈದ್ಯರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

    ಮಕ್ಕಳಿಗೆ ಎದೆ ಹಾಲು ತುಂಬಾನೆ ಮುಖ್ಯ
    ಈ ವೀಡಿಯೋದಲ್ಲಿ ರಾಧಿಕಾ, ಜೀವನ ಅತ್ಯಮೂಲ್ಯ ಉಡುಗೊರೆಗಳಲ್ಲಿ ಎದೆಹಾಲು ಕೂಡ ಒಂದು. ಎದೆಹಾಲಿನಲ್ಲಿ ಇರುವ ಅಂಶಗಳನ್ನು ಮತ್ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಆಗಷ್ಟೇ ಹುಟ್ಟಿರುವ ಮಕ್ಕಳಿಗೆ ಎದೆ ಹಾಲು ತುಂಬಾನೆ ಮುಖ್ಯ. ಪೋಷಕಾಂಶಗಳು ಹಾಗೂ ರೋಗ ನಿರೋಧಕ ಶಕ್ತಿಯ ಗುಣಗಳು ಈ ಎದೆ ಹಾಲಿನಲ್ಲಿ ಮಾತ್ರ ಇದೆ ಎಂದು ತಿಳಿಸಿದ್ದಾರೆ.

    ಎದೆ ಹಾಲು ದಾನ ಮಾಡಿ
    ಎಳೆ ಮಕ್ಕಳಿಗೆ ಎದೆಹಾಲು ತುಂಬಾನೇ ಮುಖ್ಯ. ಭಾರತದಲ್ಲಿ ಅದೆಷ್ಟೋ ಮಕ್ಕಳು ಈ ಎದೆ ಹಾಲು ಸಿಗದೆ ವಂಚಿತರಾಗುತ್ತಾರೆ. ಇಂತಹವರಿಗಾಗಿ ಎದೆ ಹಾಲು ದಾನ ಮಾಡಿ ಎಂದು ಹೇಳಿದ್ದಾರೆ. ಅಂತಹ ಮಕ್ಕಳಿಗೆ ಸಹಾಯ ಮಾಡಲಿ ಅಂತಾನೇ ಮಿಲ್ಕ್ ಬ್ಯಾಂಕ್ ಶುರುಮಾಡಿದ್ದಾರೆ ಎಂದು ಮಿಲ್ಕ್ ಬ್ಯಾಂಕ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಯಾವ ತಾಯಂದಿರಲ್ಲಿ ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಇದೆ. ಯಾವ ತಾಯಂದಿರು ಎದೆಹಾಲನ್ನು ದಾನ ಮಾಡಬಹುದು ಅಂತಹವರಿಂದ ತುಂಬಾನೇ ಸಹಾಯ ಆಗುತ್ತೆ. ನಿಮ್ಮ ಜಿಲ್ಲೆಗಳಲ್ಲಿ ಈ ಮಿಲ್ಕ್ ಬ್ಯಾಂಕ್ ಇರುತ್ತೆ. ಅಲ್ಲಿ ಬಂದು ನೀವು ಎದೆಹಾಲು ದಾನ ಮಾಡಿದರೆ, ಅದೆಷ್ಟೋ ಮಕ್ಕಳಿಗೆ ಸಹಾಯ ಆಗುತ್ತೆ ಎಂದು ಮಹತ್ವದ ಮಾಹಿತಿಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’ ‌

    ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಎಂಬ ಉದ್ದೇಶದಿಂದ ಮಾರ್ಚ್ 27 ರಂದು ಎದೆ ಹಾಲು ದಾನದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಭಾಗವಹಿಸುವಂತೆ ವೀಡಿಯೋ ಮೂಲಕ ಅಭಿಮಾನಿಗಳಿಗೆ ರಾಧಿಕಾ ಸಂದೇಶ ಕೊಟ್ಟಿದ್ದಾರೆ.

  • ಆಟದ ಮಧ್ಯೆಯೇ ಹಾಲುಣಿಸಿ ತಾಯಿ ಪ್ರೇಮ ಮೆರೆದ ಆಟಗಾರ್ತಿ- ನೆಟ್ಟಿಗರಿಂದ ಮೆಚ್ಚುಗೆ

    ಆಟದ ಮಧ್ಯೆಯೇ ಹಾಲುಣಿಸಿ ತಾಯಿ ಪ್ರೇಮ ಮೆರೆದ ಆಟಗಾರ್ತಿ- ನೆಟ್ಟಿಗರಿಂದ ಮೆಚ್ಚುಗೆ

    ಐಜಾಲ್: ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿದ್ದರೂ, ಇದರ ಮಧ್ಯೆಯೇ ಬ್ರೇಕ್ ತೆಗೆದುಕೊಂಡು ವಾಲಿಬಾಲ್ ಆಟಗಾರ್ತಿಯೊಬ್ಬರು ತನ್ನ ಮಗುವಿಗೆ ಹಾಲು ಕುಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಿಜೋರಾಂನ ಮ್ಯಾಸ್ಕಾಟ್‍ನಲ್ಲಿ ಈ ಘಟನೆ ನಡೆದಿದ್ದು, ನಿಂಗ್ಲುನ್ ಹಂಘಲ್ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೂಲವಾಗಿ ಇದನ್ನು ಲಿಂಡಾ ಚಕ್ಚುವಾಕ್ ಎಂಬವರು ಪೋಸ್ಟ್ ಮಾಡಿದ್ದಾರೆ. ಟುಕುಮ್ ಮಾವಿಲಿಬಾಲ್ ತಂಡದ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಅವರು ಈ ವಿಡಿಯೋದಲ್ಲಿ ತನ್ನ ಮಗುವಿಗೆ ಎದೆಹಾಲು ಕುಡಿಸುತ್ತಿದ್ದಾರೆ. ಹಂಘಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ಲಾಲ್ವೆಂಟ್ಲುವಾಂಗಿ ಅವರು ವಾಲಿಬಾಲ್ ಆಟವಾಡುತ್ತಿದ್ದರು. ಆಗ ಚಿಕ್ಕ ವಿರಾಮ ತೆಗೆದುಕೊಂಡು ಪ್ಲೇಯರ್ಸ್ ಕ್ಯಾಂಪ್ ಬಳಿ 7 ತಿಂಗಳ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದರು ಎಂದು ಹೊಗಳಿದ್ದಾರೆ.

    ಪೋಸ್ಟ್ ನ ಮಾಹಿತಿ ಪ್ರಕಾರ 2019ರ ಮಿಜೋರಾಂ ರಾಜ್ಯ ಮಟ್ಟದ ಆಟಗಳು ಮ್ಯಾಸ್ಕಾಟ್‍ನಲ್ಲಿ ನಡೆಯುತ್ತಿದ್ದವು. ಈ ವೇಳೆ ಲಾಲ್ವೆಂಟ್ಲುವಾಂಗಿ ಅವರು ತಮ್ಮ ಮಗುವಿಗೆ ಹಾಲು ಕುಡಿಸಿದ್ದಾರೆ. ಅಲ್ಲದೆ ಇದಕ್ಕೆ ಪ್ರೋತ್ಸಾಹ ನೀಡಲು ಮೀಜೊರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಅವರು ಲಾಲ್ವೆಂಟ್ಲುವಾಂಗಿ ಅವರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಿದರು ಎಂದು ಫೇಸ್ಬುಕ್ ಪೋಸ್ಟಿನಲ್ಲಿ ಬರೆಯಲಾಗಿದೆ.

    ಈ ಪೋಸ್ಟಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಾಲ್ವೆಂಟ್ಲುವಾಂಗಿ ಅವರು ಕ್ರೀಡಾಪಟುವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ತಾಯಿಯಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದರೆ. ಇನ್ನೊಬ್ಬ ಬಳಕೆದಾರರು ತಾಯಿ ಎಂದರೆ ತಾಯಿ, ಸದಾ ಮಕ್ಕಳ ಸೇವೆಯಲ್ಲಿಯೇ ತೊಡಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮಗುವಿಗೆ ಸ್ತನಪಾನ ಮಾಡಿಸುತ್ತಲೇ ರ‍್ಯಾಂಪ್ ಮೇಲೆ ರೂಪದರ್ಶಿ ಕ್ಯಾಟ್‍ವಾಕ್: ವಿಡಿಯೋ ನೋಡಿ

    ಮಗುವಿಗೆ ಸ್ತನಪಾನ ಮಾಡಿಸುತ್ತಲೇ ರ‍್ಯಾಂಪ್ ಮೇಲೆ ರೂಪದರ್ಶಿ ಕ್ಯಾಟ್‍ವಾಕ್: ವಿಡಿಯೋ ನೋಡಿ

    ವಾಷಿಂಗ್ಟನ್: ಅಮೆರಿಕಾದ ರೂಪದರ್ಶಿಯೊಬ್ಬರು ಮಗುವಿಗೆ ಸ್ತನಪಾನ ಮಾಡಿಸುತ್ತ, ರ‍್ಯಾಂಪ್ ಮೇಲೆ ಕ್ಯಾಟ್‍ವಾಕ್ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

    ಮಾರಾ ಮಾರ್ಟಿನ್ ಕ್ಯಾಟ್‍ವಾಕ್ ಮಾಡುತ್ತಲೇ ತನ್ನ ಮಗಳಿಗೆ ಸ್ತನಪಾನ ಮಾಡಿಸಿದ ಸ್ವಿಮ್ ಸೂಟ್ ಮಾಡೆಲ್. ಇತ್ತೀಚೆಗೆ ಮಿಯಾಮಿ ಸ್ವಿಮ್ ವೀಕ್ ರ‍್ಯಾಂಪ್ ವಾಕ್ ಕಾರ್ಯಕ್ರಮದಲ್ಲಿ ಮಾರಾ ಮಾರ್ಟಿನ್ ತನ್ನ ಐದು ತಿಂಗಳ ಮಗಳಿಗೆ ಸ್ತನಪಾನ ಮಾಡುತ್ತಲೇ ಹೆಜ್ಜೆ ಹಾಕಿ ಭಾರೀ ಸದ್ದು ಮಾಡಿದ್ದರು.

    ಮಾರಾ ಮಾರ್ಟಿನ್ ಮಗುವಿಗೆ ಸ್ತನಪಾನ ಮಾಡಿಸುತ್ತ ಹೆಜ್ಜೆ ಹಾಕುವಾಗ, ಅಲ್ಲಿನ ಶಬ್ಧದಿಂದ ಮಗಳು ಗಾಬರಿಯಾಗದಿರಲಿ ಅಂತಾ ಮಗುವಿನ ಕಿವಿಗೆ ಹೆಡ್‍ಫೋನ್ ಹಾಕಿದ್ದರು. ಮಾರಾ ಮಾರ್ಟಿನ್ ಪುಳಕ ನೀಡುವ ಕ್ಯಾಟ್‍ವಾಕ್ ಹಾಗೂ ಆಕೆ ಮಗುವಿಗೆ ಸ್ತನಪಾನ ಮಾಡಿಸುತ್ತಲೇ ಧೈರ್ಯದಿಂದ ರ್ಯಾಂಪ್‍ವಾಕ್ ಮಾಡಿದ್ದನ್ನು ಕಂಡು ಪ್ರೇಕ್ಷಕರು ಬೆರಗಾಗಿದ್ದರು.

    ನಾನು ನಿತ್ಯವೂ ಹೀಗೆ ನನ್ನ ಮಗುವಿಗೆ ನಡೆದಾಡುತ್ತಲೇ ಸ್ತನಪಾನ ಮಾಡಿಸುತ್ತೇನೆ. ಮಹಿಳೆ ಹೀಗೂ ಮಾಡುತ್ತ ಮಗುವಿಗೆ ಸ್ತನಪಾನ ಮಾಡಿಸಬಹುದು ಎನ್ನುವುದನ್ನು ಮಹಿಳೆಯರಿಗೆ ಹೇಳಿಕೊಡಲು ಹೀಗೆ ಮಾಡಿದ್ದಾಗಿ ಮಾರಾ ಹೇಳಿಕೊಂಡಿದ್ದಾರೆ.

    ರ‍್ಯಾಂಪ್ ವಾಕ್ ಕಾರ್ಯಕ್ರಮದಲ್ಲಿ ಇನ್ನೇನು ಹೆಜ್ಜೆ ಹಾಕಬೇಕು ಎನ್ನುವಷ್ಟರಲ್ಲಿ ಮಗಳು ಹಸಿವಿನಿಂದ ಅಳಲಾರಂಭಿಸಿದಳು. ಆಗ ಅಲ್ಲಿದ್ದವರು ಮಗುವಿನೊಂದಿಗೆ ಕ್ಯಾಟ್‍ವಾಕ್ ಮಾಡಲು ಸಲಹೆ ನೀಡಿದ್ದರು ಎಂದು ಮಾರಾ ಹೇಳುವ ಮೂಲಕ ನಿಜವಾದ ಕಾರಣವನ್ನು ತೆರೆದಿಟ್ಟಿದ್ದಾರೆ.

    ಮಗುವಿಗೆ ಹಾಲುಣಿಸುತ್ತಾ ಕ್ಯಾಟ್‍ವಾಕ್ ಮಾಡಲು ಅವಕಾಶ ನೀಡಿದ ನಿಮಗೆ ಧನ್ಯವಾದಗಳು, ನಿಮ್ಮಂಥವರಿಂದಾಗಿ ನನ್ನ ಮಗಳು ಒಂದು ಉತ್ತಮ ಪ್ರಪಂಚದಲ್ಲಿ ಬೆಳೆಯುತ್ತಾಳೆ ಎಂದು ಮಾರಾ ಮಾರ್ಟಿನ್ ಸಾಮಾಜಿಕ ತಾಣದಲ್ಲಿ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    https://www.instagram.com/p/BlVtY2Xhyj3/?utm_source=ig_embed