Tag: breastfeed

  • ತಾಯಿಯಿಂದ ಬೇರ್ಪಟ್ಟ ಮಗುವಿಗೆ ಎದೆಹಾಲು ಉಣಿಸಿದ ಮಹಿಳಾ ಪೇದೆ – ಭಾರೀ ಪ್ರಶಂಸೆ

    ತಾಯಿಯಿಂದ ಬೇರ್ಪಟ್ಟ ಮಗುವಿಗೆ ಎದೆಹಾಲು ಉಣಿಸಿದ ಮಹಿಳಾ ಪೇದೆ – ಭಾರೀ ಪ್ರಶಂಸೆ

    ತಿರುವನಂತಪುರಂ: ತಾಯಿಯಿಂದ ಬೇರ್ಪಟ್ಟಿದ್ದ ಮಗುವಿಗೆ (Infant) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು (Police Officer) ಹಾಲುಣಿಸಿ (Breastfeed) ಮಾನವೀಯತೆ ಮೆರೆದಿರುವುದಕ್ಕೆ ಕೇರಳ ಪೊಲೀಸ್ (Kerala Police) ಮುಖ್ಯಸ್ಥ ಅನಿಲ್ ಕಾಂತ್ ಅವರು ಪೇದೆಗೆ ಸನ್ಮಾನಿಸಿದ್ದಾರೆ.

    ಕೋಝಿಕ್ಕೋಡ್ ಚೇವಾಯೂರ್ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಆರ್ ರಮ್ಯಾ ಮತ್ತು ಅವರ ಕುಟುಂಬವನ್ನು ಪೊಲೀಸ್ ಪ್ರಧಾನ ಕಚೇರಿಗೆ ಆಹ್ವಾನಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.

    ವರದಿಗಳ ಪ್ರಕಾರ, ಶನಿವಾರ ಬೆಳಗ್ಗೆ ಮಗುವಿನ (Baby) ತಾಯಿ ತನ್ನ 12 ದಿನದ ಮಗು ಕಾಣೆಯಾಗಿದೆ ಎಂದು ಚೆವಾಯೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗುವನ್ನು ತಾಯಿಯಿಂದ ದೂರ ಮಾಡಿ, ತಂದೆ ಮಗುವನ್ನು ಹಿಡಿದುಕೊಂಡು ಹೋಗಿದ್ದಾನೆ. ಬಳಿಕ ಆತ ಮಗುವನ್ನು ಹಿಡಿದುಕೊಂಡು ಬೆಂಗಳೂರಿಗೆ ಕೆಲಸಕ್ಕೆ ಹೋಗಿರುವ ಮಾಹಿತಿ ಪಡೆದ ಪೊಲೀಸರು ವಯನಾಡು ಗಡಿಯಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತ ಮಗುವಿನೊಂದಿಗೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಹೊರಗೆ ಬರದಿದ್ರೆ ಕಾಲು ಮುರಿಯುತ್ತೇವೆ- SFI ಕಾರ್ಯಕರ್ತರಿಂದ ಪ್ರಾಂಶುಪಾಲರಿಗೆ ಧಮ್ಕಿ

    ಬಳಿಕ ಪೊಲೀಸರು ಹಸಿವಿನಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ಆಸ್ಪತ್ರೆಗೆ ಸಾಗಿಸಿದರು. ಶಿಶುವಿನ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದು, ಈ ವೇಳೆ ಆಸ್ಪತ್ರೆ ತಲುಪಿದ ರಮ್ಯಾ ಮಗುವಿಗೆ ಹಾಲುಣಿಸಲು ಮುಂದಾಗಿದ್ದಾರೆ. ಅದೇ ದಿನ ಸಂಜೆ ಮಗು ತಾಯಿಯ ಮಡಿಲು ಸೇರಿದೆ.

    ರಮ್ಯಾ ಅವರು ಕೋಝಿಕ್ಕೋಡ್‌ನ ಚಿಂಗಪುರಂ ಮೂಲದವರಾಗಿದ್ದು, 4 ವರ್ಷಗಳ ಹಿಂದೆ ಪೊಲೀಸ್ ಪಡೆಗೆ ಸೇರಿದ್ದಾರೆ. ಮಹಿಳಾ ಬೆಟಾಲಿಯನ್‌ನ 2ನೇ ಬ್ಯಾಚ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ ಅವರು, ಸಶಸ್ತ್ರ ಪೊಲೀಸ್ ಬೆಟಾಲಿಯನ್‌ನ 4ನೇ ತಂಡದಲ್ಲಿ ಸೇವೆ ಸಲ್ಲಿಸಿದ್ದರು. ಹೆರಿಗೆ ರಜೆಯ ನಂತರ ಅವರು ಚೆವಾಯೂರ್ ಪೊಲೀಸ್ ಠಾಣೆಗೆ ಸೇರಿದ್ದರು. 2 ಮಕ್ಕಳ ತಾಯಿಯಾಗಿರುವ ರಮ್ಯಾ ಅವರ ಪತಿ ಅಶ್ವಂತ್ ವಿಶ್ವನ್ ಶಾಲಾ ಶಿಕ್ಷಕರಾಗಿದ್ದಾರೆ. ಇದನ್ನೂ ಓದಿ: ʼನಮ್ಮ ಮೆಟ್ರೊʼದಿಂದ ಆನ್‌ಲೈನ್‌ ಟಿಕೆಟ್‌ ಲೋಕಾರ್ಪಣೆ – ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್‌

    Live Tv
    [brid partner=56869869 player=32851 video=960834 autoplay=true]

  • ರೈಲ್ವೆ ಹಳಿಯ ಬಳಿ ಮನಕಲಕುವ ಘಟನೆ: ಮೃತಪಟ್ಟ ಅಮ್ಮನ ಎದೆಹಾಲು ಕುಡಿಯಲು ಯತ್ನಿಸಿತು ಕಂದಮ್ಮ

    ರೈಲ್ವೆ ಹಳಿಯ ಬಳಿ ಮನಕಲಕುವ ಘಟನೆ: ಮೃತಪಟ್ಟ ಅಮ್ಮನ ಎದೆಹಾಲು ಕುಡಿಯಲು ಯತ್ನಿಸಿತು ಕಂದಮ್ಮ

    ಭೋಪಾಲ್: ತನ್ನ ಅಮ್ಮ ಮೃತಪಟ್ಟಿದ್ದಾಳೆ ಅಂತಾ ತಿಳಿಯದ ಪುಟ್ಟ ಮಗುವೊಂದು ತಾಯಿಯ ಎದೆ ಹಾಲು ಕುಡಿಯಲು ಯತ್ನಿಸುತ್ತಿದ್ದ ಮನಕುಲಕುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

    ಘಟನೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಫೋಟೋ ನೋಡಿದರೆ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ.

    ಏನಿದು ಘಟನೆ?: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಿಂದ ಸುಮಾರು 250 ಕಿ.ಮೀ ದೂರದ ದಮೋಹ್ ಎಂಬಲ್ಲಿ ರೈಲ್ವೇ ಹಳಿ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಒಂದು ವರ್ಷದ ಪಟ್ಟ ಮಗುವೊಂದು ಕುಳಿತು ತನ್ನ ಅಮ್ಮನ ಎದೆ ಹಾಲು ಕುಡಿಯಲು ಪ್ರಯತ್ನಿಸುತ್ತಿತ್ತು. ತನ್ನ ತಾಯಿ ಕೊಟ್ಟಿರಬಹುದಾದ ಬಿಸ್ಕೆಟ್‍ವೊಂದನ್ನ ಕೂಡ ಮಗು ತಿನ್ನುತ್ತಿತ್ತು. ಇದನ್ನ ನೋಡಿದ ಕೆಲ ಪ್ರತ್ಯಕ್ಷದರ್ಶಿಗಳು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ರೈಲಿನಿಂದ ಕೆಳಗೆ ಬಿದ್ದು ಅಥವಾ ರೈಲು ಡಿಕ್ಕಿಯಾಗಿ ಮಹಿಳೆ ಸಾವನಪ್ಪಿರಬಹುದು ಅಂತಾ ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ತಲೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ತಾಯಿ ಮಗುವನ್ನು ಹಿಡಿದುಕೊಂಡಿದ್ದರಿಂದ ಮಗು ಬಚಾವಾಗಿರಬಹುದು ಎಂದು ಊಹಿಸಲಾಗಿದೆ. ಅಧಿಕಾರಿಗಳು ಹೇಳೋ ಪ್ರಕಾರ ರೈಲು ಡಿಕ್ಕಿಯಾದ ನಂತರ ತಾಯಿಗೆ ಕೆಲ ಕಾಲ ಪ್ರಜ್ಞೆ ಇದ್ದು, ತನ್ನ ಮಗುವಿಗೆ ಹಾಲುಣಿಸುವ ಪ್ರಯತ್ನ ಮಾಡಿರಬೇಕು ಎನ್ನಲಾಗಿದೆ.

    ಪೊಲೀಸರು ಹಾಗೂ ಅಧಿಕಾರಿಗಳು ತಾಯಿಯ ಶವವನ್ನ ಅಲ್ಲಿಂದ ತೆಗೆದುಕೊಂಡು ಹೋದಾಗ ಮಗುವಿನ ಅಳು ಕಂಡು ಮಮ್ಮಲ ಮರುಗಿದ್ದಾರೆ.

    ಮತ್ತೊಂದು ದುರಂತ ಅಂದ್ರೆ ಮಗು ಮತ್ತು ಮೃತ ತಾಯಿಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಅಲ್ಲಿ ಮಗುವನ್ನು ಸೇರಿಸಿಕೊಳ್ಳಲು ಕೇವಲ 10 ರೂ. ಕೊಟ್ಟು ಅಡ್ಮಿಶನ್ ಮಾಡಿಕೊಳ್ಳಲು ಯಾರೊಬ್ಬರೂ ಮುಂದೆ ಬಂದಿಲ್ಲ. ನಂತರ ವಾರ್ಡ್ ಬಾಯ್ ಹಣ ಕೊಟ್ಟಿದ್ದರಿಂದ ಮಗುವನ್ನ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿದೆ. ಸದ್ಯ ಮಗು ಮಕ್ಕಳ ರಕ್ಷಣಾ ಕೇಂದ್ರದಲ್ಲಿದ್ದು, ಮಗುವಿನ ಕುಟುಂಬಸ್ಥರು ಅಥವಾ ಸಂಬಂಧಿಕರಾದ ಯಾರಾದ್ರೂ ಬರಬಹುದು ಎಂದು ಅಧಿಕಾರಿಗಳು ಎದುರುನೋಡುತ್ತಿದ್ದಾರೆ.

    ಮಹಿಳೆಯನ್ನ ಗುರುತಿಸಲು ನಡೆಸಿದ ಪ್ರಯತ್ನದಲ್ಲಿ ಪೊಲೀಸರಿಗೆ ಮಹಿಳೆಯ ಪಕ್ಕದಲ್ಲಿ ಬಿದ್ದಿದ್ದ ಪರ್ಸ್‍ವೊಂದು ಸಿಕ್ಕಿದೆ.