Tag: breakup

  • I’m Loving It – ಕೊನೆಗೂ ಬ್ರೇಕಪ್ ಬಗ್ಗೆ ಮೌನಮುರಿದ ಸಿಡ್ನಿ ಸ್ವೀನಿ!

    I’m Loving It – ಕೊನೆಗೂ ಬ್ರೇಕಪ್ ಬಗ್ಗೆ ಮೌನಮುರಿದ ಸಿಡ್ನಿ ಸ್ವೀನಿ!

    ಹಾಲಿವುಡ್‌ನ ಪ್ರಸಿದ್ಧ ನಟಿ ಸಿಡ್ನಿ ಸ್ವೀನಿ (Sydney Sweeney) ಕೊನೆಗೂ ತಮ್ಮ ಬ್ರೇಕಪ್ (Breakup) ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಹಾಗೂ ಜೊನಾಥನ್ ಡೇವಿನೊ (Jonathan Davino) ಮಧ್ಯೆ ಯಾವುದೇ ಸಂಬಂಧವಿಲ್ಲ, ನಾವಿಬ್ಬರು ಬ್ರೇಕಪ್ ಮಾಡಿಕೊಂಡಿದ್ದೇವೆ. ಇದೀಗ ನಾನು ಒಂಟಿಯಾಗಿರುವುದನ್ನೇ ಇಷ್ಟಪಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಇತ್ತೀಚಿಗೆ ನಟಿ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ವದಂತಿಗಳು ಕೇಳಿಬರುತ್ತಿದ್ದವು. ಈ ಕುರಿತು ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬ್ರೇಕಪ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. ನಾನು ಮದುವೆಯಾಗುತ್ತಿದ್ದೇನೆ ಎನ್ನುವುದು ಸುಳ್ಳು. ಸದ್ಯಕ್ಕೆ ನಾನು ಒಬ್ಬಂಟಿಯಾಗಿದ್ದೇನೆ ಹಾಗೂ ಇದನ್ನೇ ಇಷ್ಟಪಡುತ್ತಿದ್ದೇನೆ ಎಂದು ವದಂತಿಗಳನ್ನು ತಳ್ಳಿಹಾಕಿದ್ದಾರೆ.ಇದನ್ನೂ ಓದಿ: ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!

    ಮೂರು ವರ್ಷಗಳ ಹಿಂದೆ ನಾನು ಹಾಗೂ ಜೊನಾಥನ್ ನಿಶ್ಚಿತಾರ್ಥ ಮಾಡಿಕೊಂಡಿದ್ದೆವು. ಆದರೆ ನಾವಿಬ್ಬರು ಬ್ರೇಕಪ್ ಮಾಡಿಕೊಂಡಿದ್ದೇವೆ. ಸದ್ಯ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧವಿಲ್ಲ. ಆದರೆ ನಾನು ಈಗ ಒಬ್ಬಂಟಿಯಾಗಿರುವುದನ್ನು ತುಂಬಾ ಇಷ್ಟಪಡುತ್ತಿದ್ದೇನೆ. ನನ್ನ ಬಗ್ಗೆ ನಾನು ಹೆಚ್ಚಾಗಿ ತಿಳಿದುಕೊಳ್ಳುತ್ತಿದ್ದೇನೆ. ಜೊತೆಗೆ ನನ್ನ ಸ್ನೇಹಿತರೊಟ್ಟಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ ಎಂದು ತಿಳಿಸಿದರು.

    ನಾನು ಹೇಗೆ ಜೀವನ ನಡೆಸಬೇಕು ಅಂದುಕೊಂಡಿದ್ದೆ, ಹಾಗೆಯೇ ಬದುಕುತ್ತಿದ್ದೇನೆ. ಕೆಲಸಕ್ಕೆ ಹೆಚ್ಚಿನ ಮಹತ್ವ ಕೊಡುತ್ತೇನೆ. ಹೊಸ ಕೆಲಸಗಳಿಂದ ಉತ್ಸುಕಳಾಗಿದ್ದೇನೆ. ಆದರೆ ಇದೆಲ್ಲದರಿಂದ ನನ್ನನ್ನು ದೂರ ಮಾಡಿದ್ದು ನನ್ನ ರಿಲೇಶನ್‌ಶಿಪ್ ಹಾಗೂ ಮದುವೆ. ಹೀಗಾಗಿ ಅದ್ಯಾವುದು ಕೂಡ ಸರಿ ಎನಿಸಲಿಲ್ಲ ಎಂದರು.

    2018ರಲ್ಲಿ ಡೇಟಿಂಗ್‌ನಲ್ಲಿದ್ದ ಇಬ್ಬರು, 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದಾದ ಬಳಿಕ ಸಿಡ್ನಿ ಹಾಗೂ ಜೊನಾಥನ್ ತಮ್ಮ ನಿಶ್ಚಿತಾರ್ಥದ ಉಂಗುರ ಹಾಕಿಕೊಳ್ಳದೇ ಕೆಲವು ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದು, ಈ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಸದ್ಯ ನಟಿ `ಯುಪೋರಿಯಾ’ ಎಂಬ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.

    ಇತ್ತೀಚಿಗಷ್ಟೇ ನಟಿ ತಾವು ಸ್ನಾನ ಮಾಡಿದ ನೀರಲ್ಲಿ `ಬಾತ್‌ವಾಟರ್ ಬ್ಲಿಸ್’ (Bathwater Bliss) ಎಂಬ ಸೋಪ್ ತಯಾರಾಗುತ್ತಿದೆ ಎಂಬ ಮಾಹಿತಿಯನ್ನು ಸ್ವತಃ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು.ಇದನ್ನೂ ಓದಿ: Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ

  • ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

    ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

    ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ? ಅದಕ್ಕೆ ಕಾಯ್ತಿದ್ಯಾ? ಇನ್ನೂ ಸ್ವಲ್ಪ ಹೋರಾಟ ಮಾಡ್ಬೇಕಿತ್ತು… ತುಂಬಾ ನೋವು ಕೊಟ್ಬಿಟ್ಟೆ..! ನಿನ್ನನ್ನ ನಂಬಿಸಿ ಮೋಸ ಮಾಡ್ಬಿಟ್ಟೆ ಕಣೋ.. ಅದೇ ನೋವು ಕಾಡ್ತಿದೆ ಗೋಪಾಲ.. ಆದ್ರೂ ಹೇಗಾದ್ರೂ ಮಾಡಿ ನನ್ನ ನೀನು ನಿನ್ನ ಜೊತೆನೇ ಉಳಿಸ್ಕೊಳ್ಬೇಕಿತ್ತು..!

    ನಿನಗೆ ಈಗ ಖುಷಿ ಆಗ್ತಾ ಇರಬಹುದು ಅಲ್ವಾ? ನಾನಿಲ್ಲಿ ದುಃಖ ಪಡ್ತಿರೋದ್ಕೆ..? ಅವಾಗ ಬೇಡ ಹೋಗು ಅಂತ ಹೇಳಿ, ಈಗ ನಿನ್ನ ನೆನಪು ಮಾಡ್ಕೊಂಡು ಅಳ್ತಿನಿ ಅಂತ.. ನನಗೆ ಆಗ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ ಕಣೋ… ನಾನು ನಿನ್ನ ಪ್ರೀತಿಸ್ತಿದಿನಿ ಅಂತ ಹೇಳ್ಕೊಂಡ್ರೆ ಎಲ್ಲಿ ನಮ್ಮ ಮನೆಲಿ, ನಮ್ಮ ಏರಿಯಾದಲ್ಲಿ ಯಾರು ಏನು ಅಂದ್ಕೊಂಡು ಬಿಡ್ತಾರೋ ಅಂತ ಭಯ… ನನ್ನ ಬದುಕಲ್ಲಿ ನಿನ್ನ ಉಳಿಸಿಕೊಳ್ಳೋಕೆ ಸ್ವಲ್ಪಾನೂ ಪ್ರಯತ್ನ ಮಾಡ್ಲೇ ಇಲ್ಲ.. ನನಗೆ ಗೊತ್ತು ನೀನು ಕ್ಷಮಿಸಲ್ಲ… ಆದ್ರೂ ಯಾಕೆ ನೀನು ನನ್ನ ಬಿಟ್ಟು ಹೋದವನು ನೋಡೋಕೆ ಬರಲೇ ಇಲ್ಲ ಮತ್ತೆ? ಆ ಕಡೆಯಿಂದ ಇಷ್ಟೆಲ್ಲ ಮಾತಾಡಿದ್ದ ರೂಪ ಒಂದೇ ಸಮನೆ ಅಳ್ತಿದ್ಲು..! ಇದನ್ನೂ ಓದಿ: ಅವತ್ತು ನೆಟ್ಟ ಪಾರಿಜಾತ ಗಿಡ ಹೂ ಬಿಟ್ಟಿದೆ ಗೋಪಾಲ…!

    ನನಗೆ ಯಾವ ರೀತಿ ಸಮಾಧಾನ ಮಾಡ್ಬೇಕು ಅನ್ನೋದೇ ಗೊತ್ತಾಗದೇ.. ರೂಪ.. ನೀನೇನೂ ತಪ್ಪು ಮಾಡಿಲ್ಲ.. ಒಳ್ಳೆಯ ಆಯ್ಕೆಗಳನ್ನ ಮಾಡೋದ್ರಲ್ಲಿ ನೀನು ತುಂಬಾ ಜಾಣೆ..! ಒಳ್ಳೆಯ ಬದುಕನ್ನೇ ಆಯ್ಕೆ ಮಾಡ್ಕೊಂಡಿದಿಯಾ, ಅದರಲ್ಲಿ ಯಾವ ಅನುಮಾನವೂ ಬೇಡ.. ಈಗ ಆಗೋದೆಲ್ಲ ಆಗಿದೆ, ಇನ್ನು ಈ ನೆನಪುಗಳಿಗೆಲ್ಲ ಅರ್ಥ ಇಲ್ಲ.. ಯಾಕೆ ನೊಂದ್ಕೋತಿಯಾ ನನ್ನ ನೆನಪು ಮಾಡ್ಕೊಂಡು ಅಂತ ಹೇಳ್ದೆ… ಆಗ ಸಿಕ್ಕಿದ್ದು ನನಗೆ ನನ್ನ ಹಳೆಯ ರೂಪ.. ಅದೇ ಕೋಪ.. ಅದೇ ಜಗಳ.. ಓಹೋ ನಿನಗೆ ಈಗ ನನ್ನ ನೆನಪು ಕಹಿನಾ? ನನ್ನ ನೆನಪು ಮಾಡ್ಕೊಂಡ್ರೆ ನೋವಾಗುತ್ತಾ..? ಇಲ್ಲ ನಿನ್ನ ನೆನಪಲ್ಲಿ ತುಂಬಾ ನೆಮ್ಮದಿಯಾಗಿ ಇದಿನಿ ಕಣೇ ಅಂದೆ.. ! ನಾನು ಅಷ್ಟೇ ಗೋಪಾಲ… ನಿನ್ನ ನೆನಪಲ್ಲಿ ತುಂಬಾ ಖುಷಿಯಲ್ಲಿ ಇದಿನಿ.. ಆದ್ರೂ ಕೆಲವು ಸಲ ಕಣ್ಣಲ್ಲಿ ನೀರು ಬರುತ್ತೆ.. ತುಂಬಾ ಮಿಸ್‌ ಮಾಡ್ಕೊಳ್ತಾ ಇದಿನಿ.. ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!

    ನಾನು ಮತ್ತೆ ನಿನ್ನ ಹತ್ರ ಮಾತಾಡ್ತಿನೋ ಇಲ್ವೋ ಅಂದ್ಕೊಂಡಿದ್ದೆ.. ನಿನಗೆ ಮೋಸ ಮಾಡಿ ಇಷ್ಟು ವರ್ಷದ ಮೇಲೆ ನಿನಗೆ ಫೋನ್‌ ಮಾಡಿದಿನಿ, ನೀನು ಎಂಥ ಮನುಷ್ಯನೋ? ನನಗೆ ಬಯ್ಯೋದಿಲ್ವಾ.. ನನಗೆ ಜೋರು ಮಾಡು ಗೋಪಾಲ.. ಬಂದು ಕೆನ್ನೆಗೆ ನಾಲ್ಕು ಬಾರಿಸಿದ್ರು ಸರಿ… ನಿನಗೆ ಮೋಸ ಮಾಡಿದ್ಕೆ ಒಂದು ಚೆಂದದ ಶಿಕ್ಷೆನೂ ಇಲ್ವಾ..? ಏನು ಶಿಕ್ಷೆ ಕೊಡೋದೆ..? ನೀನೆನು ಅಪರಾಧಿನಾ.. ಅಲ್ವಲ್ಲಾ.. ನೀನು ಈ ಹೃದಯದ ಅರಸಿ… ನೀನು ಎಲ್ಲೋ ಚೆನ್ನಾಗಿದಿಯಾ ಅನ್ನೋ ನಂಬಿಕೆನೆ ನನ್ನ ಸಂಭ್ರಮ ಅಲ್ವಾ.. ಏನೇ ಇರಲಿ.. ನೀನು ನನ್ನವಳೆ…. ನೀನು ಅಷ್ಟೇ ಗೋಪಾಲ.. ಅಂತ ಕಾಲ್‌ ಕಟ್‌ ಮಾಡಿದ್ಲು.. !

    ಹಾಗೇ ಹಳೆಯ ದಿನಗಳೆಲ್ಲ ಸುಮ್ಮನೆ ನನ್ನ ಕಣ್ಮುಂದೆ ಬಂತು… ಅಷ್ಟೆಲ್ಲ ಅನ್ಯೋನ್ಯವಾಗಿದ್ದ ಪ್ರೀತಿಯಲ್ಲಿ ಅದೆಂತಹ ಬಿರುಗಾಳಿ ಬಂತು ಅಂದ್ರೆ… ಯಾವುದು ಕಾರಣವೇ ಇಲ್ಲದೇ, ನೀನು ನನ್ನ ಬದುಕಿಗೆ ಬೇಡ ಅಂದಿದ್ದ ಅವಳ ಆ ದಿನದ ಧ್ವನಿ.. ಅವಳನ್ನ ನನ್ನ ಬದುಕಲ್ಲಿ ಉಳಿಸಿಕೊಳ್ಳಲು ನಾನು ಚಡಪಡಿಸಿದ ರೀತಿ….. ಹುಚ್ಚನಂತೆ ಅವಳನ್ನು ಪರಿಪರಿಯಾಗಿ ಬೇಡಿಕೊಂಡಿದ್ದು, ಕೊನೆಯ ಪ್ರಯತ್ನವನ್ನೂ ಮಾಡಿ, ನನ್ನಕ್ಕ ಆಶಾಳ ಜೊತೆ ಹೇಳಿಸಿದ್ದು… ಕೊನೆಗೂ ಉಳಿಸಿಕೊಳ್ಳಲು ಆಗದೇ ಹೋಗಿದ್ದು.. ಅದೆಲ್ಲ ನೆನಪಾಗಿ.. ನನ್ನನ್ನೇ ನಾನು ಪಾತ್ರವಾಗಿ ನೋಡಿ ನಕ್ಕು, ಬೇಜಾರು ಮಾಡಿಕೊಂಡು ಸುಮ್ಮನಾದೆ..! ಇದನ್ನೂ ಓದಿ: ಉರಿ ಬಿಸಿಲ ಕಡಲಲ್ಲಿ ಅಲೆಯಾಗಿ ಬಂದ ನಗು..!

    ನೀನು ಹೇಳಿದಂತೆ ನಾನು ನಿನ್ನನ್ನ ಮರೆತಿಲ್ಲ ರೂಪ.. ಮರೆಯೋದು ಇಲ್ಲ..! ನೀನೇ ಹೇಳಿದ್ಯಲ್ಲ.. ನಾನು ಖುಷಿಯಿಂದ ಇರೋದು ನಿನಗೆ ಇಷ್ಟ ಇಲ್ವಾ? ನಾನು ಖುಷಿಯಿಂದ ಇರಬೇಕು ಅಂದ್ರೆ ನನ್ನಿಂದ ದೂರ ಹೋಗ್ಬಿಡು ಗೋಪಾಲ ಅಂತ… ನನಗೆ ಬೇಕಾಗಿದ್ದು, ನೀನು ಹಕ್ಕಿಯಂತೆ ಹಾರಾಡೋದು…. ಹೂವಿನಂತೆ ಸಂಭ್ರಮಿಸೋದು… ಅದನ್ನ ದೂರದಲ್ಲೆಲ್ಲೋ ಚಿಟ್ಟೆ ಸಂಭ್ರಮಿಸುವುದನ್ನು ಹೂದೋಟದಲ್ಲಿ ಕುಳಿತು ಮನಸ್ಸು, ಹೃದಯಕ್ಕೆ ತುಂಬಿಕೊಂಡು ಕವಿಯಾಗುವುದು… ಇಷ್ಟೇ ಸಾಕು ಅಂದ್ಕೊಂಡು ಸುಮ್ಮನಾದವನು ನಾನು..! ನಿನ್ನ ಮೇಲೆ ಖಂಡಿತ ಬೇಜಾರಿಲ್ಲ…. ನಿನ್ನ ಮಾತು, ನಗು, ಸಿಟ್ಟು ಈಗಲೂ ನನ್ನ ಜೊತೆಗಿವೆ… ನಿನ್ನ ಆ ಸಿಟ್ಟಿನ ಕೆಂಪು ಮೂಗು… ಕವಿತೆ ಬರೆಯುವಾಗ ಪೆನ್ನಿನ ಮುಂದೆಯೇ ಇರುತ್ತದೆ…!

    ನೀನು ಹೋಗು ಅಂದಾಗ… ನನಗೆ ಕಂಡಿದ್ದು ನಿನ್ನ ಸಂಭ್ರಮ…, ನನ್ನ ಇರುವಿಕೆ, ನನ್ನ ಮಾತು, ನನ್ನ ಪ್ರೀತಿ ನಿನಗೆ ಉಸಿರು ಕಟ್ಟಿಸುತ್ತಿದೆ ಅಂದ್ರೆ.. ಅಲ್ಲಿಂದ ದೂರ ಹೋಗೋದೆ ಒಳ್ಳೆಯದಲ್ವಾ..? ನೀನು ಮಾತ್ರ ಅಲ್ಲ.. ಯಾರಿಗೇ ಆಗಲಿ.. ನಮ್ಮಿಂದ ಅವರಿಗೆ ತೊಂದರೆ ಆಗ್ತಿದೆ ಅಂದ್ರೆ.. ಅಲ್ಲಿಂದ ಸುಮ್ಮನೇ ಹೊರಟು ಸೋಜಿಗವಾಗಿಯೇ ಉಳಿದ್ಬಿಡ್ಬೇಕು… ಅನ್ನೋದು ನನ್ನ ಪಾಲಿಸಿ..! ಹಾಗಾಗಿನೇ ಸುಮ್ನೆ ಬಂದ್ಬಿಟ್ಟೆ.. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!

                                                                                                                                                                  – ಗೋಪಾಲಕೃಷ್ಣ

  • ಬಿಟೌನ್ ಟಾಕ್:  ನಟಿ ಮಲೈಕಾ ಅರೋರಾ- ಅರ್ಜುನ್‍ ಕಪೂರ್ ಬ್ರೇಕಪ್

    ಬಿಟೌನ್ ಟಾಕ್: ನಟಿ ಮಲೈಕಾ ಅರೋರಾ- ಅರ್ಜುನ್‍ ಕಪೂರ್ ಬ್ರೇಕಪ್

    ಸೋಷಿಯಲ್ ಮೀಡಿಯಾದಲ್ಲಿ ನಟಿ ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ (Arjun Kapoor) ಟ್ರೆಂಡಿಂಗ್ ನಲ್ಲಿದ್ದಾರೆ. ಬಿಟೌನ್‍ ನಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಮಲೈಕಾ ಮತ್ತು ಅರ್ಜುನ್ ನಡುವೆ ಬ್ರೇಕ್ ಅಪ್ (Breakup) ಆಗಿದೆಯಂತೆ. ಪರಸ್ಪರ ಇಬ್ಬರೂ ಒಪ್ಪಿಗೆ ಪಡೆದುಕೊಂಡೇ ದೂರವಾಗಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲಿಗೆ ಆರು ವರ್ಷದ ಡೇಟಿಂಗ್ ಸಮಾಚಾರಕ್ಕೆ ಕೊನೆ ಮೊಳೆ ಹೊಡೆದಿದ್ದಾರೆ.

    ಬಿಟೌನ್ ಅಂಗಳದ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕೂಡ ಒಬ್ಬರಾಗಿದ್ದರು. ಸಾಕಷ್ಟು ವರ್ಷಗಳಿಂದ ಲಿಪ್ ಇನ್ ರಿಲೇಷನ್ ಶಿಪ್‌ನಲ್ಲಿರೋ ಈ ಜೋಡಿ, ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ  ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

    ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು, ಇವರ ಲವ್ವಿ ಡವ್ವಿ ನೋಡಿರೋ ನೆಟ್ಟಿಗರು ಅದೆಷ್ಟೋ ಬಾರಿ ಇವರಿಬ್ಬರದ್ದು ಟೈಮ್ ಪಾಸ್ ಲವ್ ಎಂದು ಹೇಳಿದ್ದು ಇದೆ. ಆದರೆ ಈ ಹಿಂದೆ ಮಲೈಕಾ ತಮ್ಮ ಪ್ರೀತಿಯ ಜೀವನದ ಕುರಿತು ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾನಾಡಿದ್ದರು.

    ಪ್ರತಿಯೊಂದು ರಿಲೇಶನ್‌ಶಿಷ್‌ನಲ್ಲಿಯೂ ತನ್ನದೇ ಆದ ರೀತಿ ನೀತಿಗಳಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯುವ ವಿಚಾರ ನಮಗೆಷ್ಟೇ ತಿಳಿದಿರಬೇಕು ಎಂದು ಇನಿಯನ ಜತೆ ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಕೆಲ ದಿನಗಳ ಹಿಂದೆ ಇವರಿಬ್ಬರ ಬ್ರೇಕ್ ಅಪ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಮಲೈಕಾರ ಈ ಮಾತು ಬ್ರೇಕ್ ಅಪ್ ಕಥೆಗೂ ಅಂತ್ಯ ಹಾಡಿತ್ತು.

    ನಾವು ಬಹಳಷ್ಟು ವಿಷಯಗಳನ್ನು ಒಟ್ಟಿಗೆ ಚರ್ಚಿಸುತ್ತೇವೆ. ನಾವು ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದೇವೆ ಮತ್ತು ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತೇವೆ. ನಾವು ಭವಿಷ್ಯದಲ್ಲಿ ಒಟ್ಟಿಗೆ ಇರಲು ಬಯಸುತ್ತೇವೆ. ಸಂಬಂಧದಲ್ಲಿ ಯಾವಾಗೂ ನಾವು ಸೇಫ್ ಮತ್ತು ಪಾಸಿಟಿವ್ ಎಂಬ ಭಾವನೆ ಇರಬೇಕು ಎಂದು ಹೇಳಿಕೊಂಡಿದ್ದರು. ಈಗ ನೋಡಿದರೆ ಎಲ್ಲವೂ ಉಲ್ಟಾ ಆಗಿದೆ.

  • ಶುಭ್ ಮನ್ ಗಿಲ್-ಸಾರಾ ಅಲಿಖಾನ್ ನಡುವಿನ ಪ್ರೇಮದಲ್ಲಿ ಬಿರುಕು

    ಶುಭ್ ಮನ್ ಗಿಲ್-ಸಾರಾ ಅಲಿಖಾನ್ ನಡುವಿನ ಪ್ರೇಮದಲ್ಲಿ ಬಿರುಕು

    ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿ ಖಾನ್ (Sara Ali Khan) ಹಾಗೂ ಕ್ರಿಕೆಟಿಗ ಶುಭ್ ಮನ್ (Shubh Man Gill) ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಹಳೆಯ ಸುದ್ದಿ. ಈ ಸುದ್ದಿಗೆ ಪುಷ್ಠಿ ಕೊಡುವಂತೆ ಇಬ್ಬರೂ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಾಜಾ ಸಾಮಾಚಾರ ಎಂದರೆ, ಇಬ್ಬರ ನಡುವಿನ ಲವ್ ಬ್ರೇಕ್ ಅಪ್ ಆಗಿದೆ ಎನ್ನುವುದು. ಇಬ್ಬರೂ ಡೇಟ್ (Dating) ಮಾಡುತ್ತಿದ್ದಾರಾ, ಇಲ್ಲವಾ ಎನ್ನುವ ಅನುಮಾನದ ನಡುವೆಯೇ ಇಬ್ಬರೂ ದೂರವಾಗಿದ್ದು ಮಾತ್ರ ನಿಜ.

    ಶುಭ್ ಮನ್ ಗಿಲ್ ಮತ್ತು ಸಾರಾ ಅಲಿಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದರು. ಹಲವು ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದರು. ಇದೀಗ ಇಬ್ಬರೂ ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಅನ್ ಫ್ರೆಂಡ್ ಮಾಡಿಕೊಂಡಿದ್ದಾರೆ. ಹಾಗಾಗಿ ಪ್ರೀತಿಯ ಪಾರಿವಾಳ ಹಾರಿ ಹೋಗಿದೆ ಎಂದು ಹೇಳಲಾಗುತ್ತಿದೆ.

    ಬಿಟೌನ್‌ನ ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸೈಫ್ ಅಲಿ ಖಾನ್ ಪುತ್ರಿ ಸಾರಾ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿದ್ದರು.  ಮುಂಬೈ ಮತ್ತು ದೆಹಲಿಯಲ್ಲಿ ಶುಭ್ ಮನ್ ಗಿಲ್ ಮತ್ತು ಸಾರಾ ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರ ಲವ್ವಿ ಡವ್ವಿ ವಿಚಾರವನ್ನು ಬಹಿರಂಗಗೊಳಿಸಿದ್ದರು.

    ಇತ್ತೀಚೆಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡಿದ್ದರು. ನಂತರ ದೆಹಲಿಯಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಕ್ಯಾಶುಯಲ್ ಉಡುಗೆಯಲ್ಲಿ ದೆಹಲಿ ಹೋಟೆಲ್‌ನಿಂದ ಇಬ್ಬರು ನಿರ್ಗಮಿಸಿದ್ದರು. ಬಳಿಕ ವಿಮಾನದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ಕೊಡುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗಿತ್ತು.

    ಸದ್ಯ ಬಿಟೌನ್‌ನಲ್ಲಿ ಸಾರಾ ಮತ್ತು ಶುಭಮನ್ ಗಿಲ್ ಲವ್ವಿ ಡವ್ವಿ ಬ್ರೇಕ್ ಅಪ್ (Breakup) ವಿಚಾರವೇ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ  ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.

  • ಬ್ರೇಕ್‍ಅಪ್ ಮಾಡಿದ್ದಕ್ಕೆ ಪ್ರಿಯತಮೆಯ ನಗ್ನ ಫೋಟೋ ಲೀಕ್ ಮಾಡ್ದ

    ಬ್ರೇಕ್‍ಅಪ್ ಮಾಡಿದ್ದಕ್ಕೆ ಪ್ರಿಯತಮೆಯ ನಗ್ನ ಫೋಟೋ ಲೀಕ್ ಮಾಡ್ದ

    ನವದೆಹಲಿ: ಬ್ರೇಕ್‍ಅಪ್ ಮಾಡಿದ್ದಕ್ಕೆ ತನ್ನ ಮಾಜಿ ಗೆಳತಿಯ ನಗ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ ಆರೋಪದಡಿ 22 ವರ್ಷದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಜಾರ್ಖಂಡ್‍ನ ರಾಂಚಿಯ ಡೊರಾಂಡಾ ನಿವಾಸಿ ಮೊಹಮ್ಮದ್ ತಂಝೀಮ್ ಅಹ್ಮದ್ ಎಂದು ಗುರುತಿಸಲಾಗಿದೆ. ಈತನೊಬ್ಬ ಸ್ಕೆಚ್ ಆರ್ಟಿಸ್ಟ್ (Sketch Artist) ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಹಿಳಾ ಫಾಲೋವರ್ಸ್‍ಗಳನ್ನು ಹೊಂದಿದ್ದಾನೆ. ಇದೀಗ ಆರೋಪಿ ವಿರುದ್ಧ ದೆಹಲಿ ವಿಶ್ವವಿದ್ಯಾಲಯದ (Delhi University) ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಸೈಬರ್ ನಾರ್ತ್ ಪೊಲೀಸ್ ಠಾಣೆಯಲ್ಲಿ (Cyber North Police Station) ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಪೌರ ಕಾರ್ಮಿಕರ ಕೆಲಸ ನೋಡಿದ್ರೆ ಕಣ್ಣೀರು ಬರುತ್ತೆ – ಬೊಮ್ಮಾಯಿ ಭಾವುಕ

    KILLING CRIME

    ಇನ್‍ಸ್ಟಾಗ್ರಾಮ್ ಮೂಲಕ ಫೆಬ್ರವರಿಯಲ್ಲಿ ಪರಿಚಯವಾದ ತಂಝೀಮ್ ಅಹ್ಮದ್ ಜೊತೆ ಚಾಟ್ ಮಾಡಲು ಆರಂಭಿಸಿದ ಯುವತಿ, ನಂತರದ ದಿನಗಳಲ್ಲಿ ಈತನೊಂದಿಗೆ ರಿಲೇಶನ್ ಶಿಪ್‍ನಲ್ಲಿದ್ದಳು. ಈ ವೇಳೆ ಆರೋಪಿ ಒತ್ತಾಯಕ್ಕೆ ಮಣಿದು ತನ್ನ ಖಾಸಗಿ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಆತನೊಂದಿಗೆ ಶೇರ್ ಮಾಡಿಕೊಂಡಿದ್ದಳು. ಕೆಲವು ದಿನಗಳ ಹಿಂದೆಯಷ್ಟೇ ಆರೋಪಿಯನ್ನು ಮೊದಲ ಬಾರಿಗೆ ಭೇಟಿಯಾದ ಯುವತಿ, ಈ ವೇಳೆ ಆಕಸ್ಮಿಕವಾಗಿ ಆರೋಪಿಯ ಮೊಬೈಲ್ ಫೋನ್ ಚೆಕ್ ಮಾಡಿದಾಗ ಅವಳ ನಗ್ನ ಫೋಟೋವನ್ನು ಗೂಗಲ್ ಡ್ರೈವ್‍ನಲ್ಲಿ ಆತ ಉಳಿಸಿಕೊಂಡಿರುವ ವಿಚಾರ ತಿಳಿದು ಬಂದಿದೆ. ಇಷ್ಟೇ ಅಲ್ಲದೇ ಇತರ ಹುಡುಗಿಯರ ಖಾಸಗಿ ಫೋಟೋ ಹಾಗೂ ವೀಡಿಯೋಗಳಿರುವುದನ್ನು ನೋಡಿದ್ದಾಳೆ. ಹೀಗಾಗಿ ಆರೋಪಿ ಜೊತೆಗೆ ಬ್ರೇಕ್‍ಅಪ್ ಮಾಡಿಕೊಂಡಿಕೊಂಡಿದ್ದಾಳೆ.

    ಇದರಿಂದ ಕೋಪಗೊಂಡ ತಂಝೀಮ್ ಅಹ್ಮದ್ ಯುವತಿಯ ನಗ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಇದೀಗ ಈ ಪ್ರಕರಣ ಸಂಬಂಧ ಆರೋಪಿಯ ಸೋಶಿಯಲ್ ಮೀಡಿಯಾ ಅಕೌಂಟ್ ವಿವರ ಸೇರಿದಂತೆ ಇತರೆ ಮಾಹಿತಿಗಳನ್ನು ದೂರುದಾರರಿಂದ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಉಪ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಹಿಂಸಾಚಾರ – PFI ವಿರುದ್ಧ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಕೇಸ್‌

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ಅನ್ನು ಆತನಿಂದ ವಶಪಡಿಸಿಕೊಂಡಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಳೆಯರಿಂದ ಮೊಬೈಲ್ ಸಂಖ್ಯೆ ಪಡೆದುಕೊಂಡು ಮಹಿಳೆಯರೊಂದಿಗೆ ಆರೋಪಿ ಲಲ್ಲೆ ಹೊಡೆಯುತ್ತಿದ್ದನಲ್ಲದೇ, ಅವರ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ, ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹಾರ್ ಬಾಳಲ್ಲೂ ಲವ್ ಬ್ರೇಕಪ್: ಇದೇನ್ ಗುರೂ ಹೊಸ ಸುದ್ದಿ ಅಂತಿದೆ ಬಿಟೌನ್

    ಕರಣ್ ಜೋಹಾರ್ ಬಾಳಲ್ಲೂ ಲವ್ ಬ್ರೇಕಪ್: ಇದೇನ್ ಗುರೂ ಹೊಸ ಸುದ್ದಿ ಅಂತಿದೆ ಬಿಟೌನ್

    ಬಾಲಿವುಡ್ ನಲ್ಲಿ ನಡೆಯುವ ಲವ್ (Love), ಬ್ರೇಕ್ ಅಪ್, ಅಫೇರ್ ಇಂತಹ ವಿಷಯಗಳು ಮೊದಲು ತಿಳಿಯುವುದು ಕರಣ್ ಜೋಹಾರ್ (Karan Johar) ಗೆ. ಹಾಗಾಗಿ ಕಾಫಿ ವಿತ್ ಕರಣ್ ಶೋನಲ್ಲಿ (Koffee With Karan) ಬಹುತೇಕ ಇಂತಹ ಪ್ರಶ್ನೆಗಳನ್ನೇ ಅತಿಥಿಗಳಿಗೆ ಕರಣ್ ಕೇಳುತ್ತಾನೆ. ಬಹುತೇಕ ಅವು ನಿಜವೂ ಆಗಿರುವುದರಿಂದ ಅನೇಕ ನಟ ನಟಿಯರು ಅವುಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ತೇಲಿಸಿ ಬಿಟ್ಟಿದ್ದಾರೆ. ಆದರೂ, ಕರಣ್ ಸುದ್ದಿ ಪಕ್ಕಾ ಆಗಿರುತ್ತದೆ.

    ಬಿಟೌನ್ (Bollywood) ಟಾ‍ಪ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಹೀಗೆ ಅನೇಕರು ಕರಣ್ ಶೋ ಗೆ ಬಂದಿದ್ದಾರೆ. ತಮ್ಮ ಖಾಸಗಿ ಸಂಗತಿಗಳನ್ನು ಬಟಾಬಯಲು ಮಾಡಿಕೊಂಡಿದ್ದಾರೆ. ತಮ್ಮ ಸೆಕ್ಸ್ ಲೈಫ್ ನಿಂದ ಹಿಡಿದು ಮದುವೆ, ಅಫೇರ್, ಡೇಟಿಂಗ್ ಹೀಗೆ ಸೆನ್ಸಾರ್ ಇಲ್ಲದೇ ಮಾತನಾಡಿದ್ದಾರೆ. ಆದರೂ, ಈವರೆಗೂ ಕರಣ್ ವಿಚಾರವನ್ನು ಕೆದಕಲು ಯಾರೂ ಹೋಗಿರಲಿಲ್ಲ. ಅಲ್ಲದೇ, ಕರಣ್ ಜೀವನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಮೊನ್ನೆಯಷ್ಟೇ ಕರಣ್ ಶೋ ಗೆ ಅನಿಲ್ ಕಪೂರ್ ಮತ್ತು ವರುಣ್ ಧವನ್ (Varun Dhawan) ಆಗಮಿಸಿದ್ದರು. ಅನಿಲ್ ಕಪೂರ್ ಕೂಡ ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ಮಾತನಾಡಿದರು. ಈ ವಯಸ್ಸಲ್ಲೂ ಹ್ಯಾಂಡ್ ಸಮ್ ಆಗಿ ಕಾಣುವುದರ ಹಿಂದಿನಿ ಸಿಕ್ರೇಟ್ ಏನು ಅಂತ ಅನಿಲ್ ಕಪೂರ್ ಗೆ ಕೇಳಿದಾಗ, ಕ್ಷಣ ಹೊತ್ತೂ ಯೋಚಿಸಿದೇ ಸೆಕ್ಸ್ ಅಂದರು ಅನಿಲ್. ಹಾಗೆಯೇ ವರಣ್ ಧವನ್ ಅವರನ್ನು ಕೇಳಲಾಯಿತು. ಅದರಲ್ಲೂ ವರಣ್ ಬ್ರೇಕ್ ಅಪ್ ಬಗ್ಗೆ ಕರಣ್ ಕೇಳಿ  ತಾವೇ ತಗಲಕ್ಕೊಂಡಿದ್ದಾರೆ.

    ವರಣ್ ಮದುವೆಗೂ ಮುಂಚೆ ಆದ ಲವ್ ಬ್ರೇಕ್ ಅಪ್ (Breakup) ಬಗ್ಗೆ ಕರಣ್ ಕೇಳಿದಾಗ, ನನ್ನದೇನೂ ಸರಿ ನಿಮ್ಮ ಜೀವನದಲ್ಲೂ ಅದು ನಡೆದಿದೆಯಲ್ಲ ಎಂದು ನೇರವಾಗಿಯೇ ಕೇಳಿದರು. ಕರಣ್ ತಪ್ಪಿಸಿಕೊಳ್ಳುವುದಕ್ಕೆ ನೋಡಿದರು, ಆದರೂ ಧವನ್ ಸುಮ್ಮನೆ ಬಿಡಲಿಲ್ಲ. ಕೊನೆಗೂ ತನ್ನ ಜೀವನದಲ್ಲೂ ಲವ್ ಬ್ರೇಕ್ ಅಪ್ ಆಗಿದೆ. ನಾನು ಹೇಗೆ ಅಂತ ನಿನಗೆ ಗೊತ್ತಲ್ಲ. ಈ ವಿಷಯದಲ್ಲಿ ಸಹಕರಿಸು ಎಂದು ಹೇಳಿ ಟಾಪಿಕ್ ಮುಗಿಸಿಬಿಟ್ಟರು ಕರಣ್. ಅಲ್ಲಿಗೆ ಮೊದಲ ಬಾರಿಗೆ ಕರಣ್ ಲವ್ ಬ್ರೇಕ್ ಅಪ್ ವಿಚಾರ ಆಚೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ ಬ್ರೇಕ್‍ಅಪ್‍ಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ ಕಿಯಾರಾ

    ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ ಬ್ರೇಕ್‍ಅಪ್‍ಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ ಕಿಯಾರಾ

    ಬಾಲಿವುಡ್ ಕ್ಯೂಟ್ ಜೋಡಿ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ನಡುವಿನ ಪ್ರೇಮದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಬಿ-ಟೌನ್ ಅಂಗಳದಲ್ಲಿ ಭಾರೀ ಗಾಸಿಪ್‍ಗಳು ಹರಿದಾಡಿದವು. ಇಬ್ಬರ ಸಂಬಂಧ ಕಿತ್ತೇ ಹೋಯಿತು ಎನ್ನುವ ಸುದ್ದಿ ಕೂಡ ಆಯಿತು. ಆದರೆ ಈ ಎಲ್ಲಾ ವದಂತಿಗಳಿಗೆ ಕಿಯಾರಾ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕೊಟ್ಟಿದ್ದಾರೆ. ಪೋಸ್ಟರ್‌ವೊಂದನ್ನು ಹಂಚಿಕೊಂಡಿರುವ ಅವರು, ಈಗ ಹರಿದಾಡುತ್ತಿರುವ ಸುದ್ದಿ ಸುಳ್ಳೆಂದು ಹೇಳಿಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಕೆಲವು ದಿನಗಳ ಹಿಂದೆಯಷ್ಟೇ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ವರದಿಗಳು ಹರಡಿದ್ದವು. ಈ ವದಂತಿಗಳ ನಡುವೆಯೇ ಕಿಯಾರಾ ಅವರು ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಮೂಡಿಬಂದ ‘ಶೇರ್ಷಾ’ ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಒಟ್ಟಿಗೆ ನಟಿಸಿದ್ದರು. 2021ರಲ್ಲಿ ಬಿಡುಗಡೆ ಆಗಿದ್ದ ಈ ಚಿತ್ರಕ್ಕೆ ಒಟಿಟಿ ಪ್ರಶಸ್ತಿ ಕೂಡಾ ಲಭಿಸಿತ್ತು. ಇಬ್ಬರಿಗೂ ಸಹ ಅತ್ಯುತ್ತಮ ನಟ, ನಟಿ ಪ್ರಶಸ್ತಿ ದೊರೆಕಿತ್ತು. ಪ್ರಶಸ್ತಿ ಪಡೆದ ಪೋಸ್ಟರ್ ಅನ್ನೇ ಪೋಸ್ಟ್ ಮಾಡಿರುವ ಅವರು ಹಾರ್ಟ್ ಮತ್ತು ನಮಸ್ತೆ ಎಮೋಜಿಗಳನ್ನು ಹಾಕಿ ಹಂಚಿಕೊಂಡಿದ್ದಾರೆ.

    ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನು ಯಾವತ್ತೂ ಬಹಿರಂಗವಾಗಿ ಹೇಳಿಕೊಂಡವರಲ್ಲ. ಹಾಗಂತ ನಿರಾಕರಿಸಿಯೂ ಇಲ್ಲ. ಶೇರ್ಷಾ ಸಿನಿಮಾ ಬಿಡುಗಡೆ ಬಳಿಕ ಈ ಜೋಡಿ ಮತ್ತಷ್ಟು ಫೇಮಸ್ ಆಗಿತ್ತು. ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇದೀಗ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೆ ಬಿಟ್ಟಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

    ಇಬ್ಬರೂ ತಮ್ಮ ರಿಲೇಶನ್ ಶಿಪ್ ಕೊನೆಗೊಳಿಸಿದ್ದರಿಂದ, ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೇ ನಿಲ್ಲಿಸಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಅಸಲಿ ಕಾರಣ ಬೇರೆಯೇ ಇದೆ. ಇಬ್ಬರೂ ಬೇರೆ ಆಗಿರುವುದು ನಿಜವೇ ಆಗಿದ್ದರೂ, ತಮ್ಮ ತಮ್ಮ ಬ್ಯುಸಿ ಕೆಲಸಗಳಿಂದ ಸೇರಲು ಆಗಿಲ್ಲ ಎನ್ನಲಾಗುತ್ತಿದೆ.

  • ಇನ್‌ಸ್ಟಾಗ್ರಾಮ್‌ನ ಸೆಲ್ಫಿ ಫೋಟೋ ತೆಗೆದುಹಾಕು, ಇಲ್ಲಾಂದ್ರೆ ಬ್ರೇಕ್‌ಅಪ್‌ ಆಗು: ಯುವತಿಗೆ ಪ್ರಿಯಕರ ಎಚ್ಚರಿಕೆ

    ಇನ್‌ಸ್ಟಾಗ್ರಾಮ್‌ನ ಸೆಲ್ಫಿ ಫೋಟೋ ತೆಗೆದುಹಾಕು, ಇಲ್ಲಾಂದ್ರೆ ಬ್ರೇಕ್‌ಅಪ್‌ ಆಗು: ಯುವತಿಗೆ ಪ್ರಿಯಕರ ಎಚ್ಚರಿಕೆ

    ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಸೆಲ್ಫಿ ಫೋಟೋ ಡಿಲೀಟ್‌ ಮಾಡು. ಇಲ್ಲದಿದ್ದರೆ ಬ್ರೇಕ್‌ ಅಪ್‌ ಆಗೋಣ ಎಂದು ಪ್ರೇಯಸಿಗೆ ಪ್ರಿಯತಮ ವಿಧಿಸಿರುವ ಷರತ್ತಿನ ಸಂದೇಶ ಎಲ್ಲೆಡೆ ವೈರಲ್‌ ಆಗಿದೆ.

    ಈ ಸಂದೇಶದಿಂದಾಗಿ ಕೊನೆಗೂ ಪ್ರೇಮಿಗಳು ದೂರಾಗಿದ್ದಾರೆ. ಮಾಜಿ ಪ್ರಿಯಕರ ತನಗೆ ಷರತ್ತು ವಿಧಿಸಿ ಮಾಡಿದ್ದ ಮೆಸೇಜ್‌ ಅನ್ನು ಯುವತಿ ಶೇರ್‌ ಮಾಡಿಕೊಂಡಿದ್ದಾಳೆ. ಆ ಬಗ್ಗೆ ಕಾಮೆಂಟ್‌ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಜೊತೆಗೆ ಹೋಟೆಲ್‍ನಲ್ಲಿ ಉಳಿದಿದ್ದ ಮಹಿಳೆ ಸಾವು- ಗೆಳೆಯ ಸಾಪತ್ತೆ

    ಟೀಸೆ ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಯುವತಿಗೆ ಮಾಜಿ ಪ್ರಿಯಕರ ಮಾಡಿರುವ ಮೆಸೇಜ್‌ನಲ್ಲಿ, ಇನ್‌ಸ್ಟಾ ಸ್ಟೇಟಸ್‌ಗೆ ಹಾಕಿರುವ ಸೆಲ್ಫೀ ಮೆಸೇಜ್‌ ತೆಗೆದುಹಾಕಬೇಕು. ಮುಂದಿನ 5 ನಿಮಿಷಗಳಲ್ಲಿ ನಾನು ಇದನ್ನು ನೋಡಬಾರದು ಎಂದು ಸಮಯವನ್ನೂ ಉಲ್ಲೇಖಿಸಿ ಸಂದೇಶ ಕಳುಹಿಸಿದ್ದಾನೆ.

    ತಾನು ಕೊಟ್ಟಿದ್ದ ಗಡುವು ಮುಗಿದ ನಂತರ ಮತ್ತೊಂದು ಮೆಸೇಜ್‌ನಲ್ಲಿ, ಕೊಟ್ಟಿದ್ದ ಸಮಯ ಮುಗಿಯಿತು. ನಿಮಗೆ ಒಳ್ಳೆಯ ಜೀವನವಿದೆ. ಇನ್ನು ಮುಂದೆ ನೀನು ನನ್ನೊಂದಿಗೆ ಇರಬೇಕಾಗಿಲ್ಲ. ನೀನು ಏನು ಬೇಕಾದರೂ ಮಾಡಬಹುದು ಎಂದು ಬ್ರೇಕ್‌ ಅಪ್‌ ಹೇಳಿದ್ದಾನೆ. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಯೂಫೋರಿಯಾ (ಅತಿಯಾದ ಸಂತೋಷ) ನಾಟಕೀಯವಾಗಿರುತ್ತದೆ ಎಂದು ಜನ ಹೇಳುತ್ತಾರೆ. ಆದರೆ ನಾನು ಈಗ ಅದನ್ನು ಅನುಭವಿಸಿದ್ದೇನೆ ಎಂದು ಪ್ರಿಯಕರನ ಸಂದೇಶಕ್ಕೆ ಯುವತಿ ವೀಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾಳೆ. ಇದು ಎಲ್ಲೆಡೆ ವೈರಲ್‌ ಆಗಿದೆ.

    ಇದಕ್ಕೆ ಅನೇಕರು ಕಾಮೆಂಟ್‌ಗಳನ್ನು ಕೂಡ ಮಾಡಿದ್ದಾರೆ. ಆ ಚಿತ್ರದಲ್ಲಿ ಏನು ತಪ್ಪಾಗಿದೆ ಎಂದು ಒಬ್ಬರು ಪ್ರಶ್ನಿಸಿದರೆ. ಅದು ಅವನಲ್ಲಿ ಮುಜುಗರ ಉಂಟುಮಾಡಿದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬರುವ ಸಾಧ್ಯತೆ: ಹೆಚ್‍ಡಿಕೆ

  • ಮದುವೆ ಬೇಡವೆಂದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದಳು

    ಮದುವೆ ಬೇಡವೆಂದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದಳು

    ತಿರುವನಂತಪುರ: ಪ್ರೇಮ ವೈಫಲ್ಯದಿಂದ ಕುಪಿತಗೊಂಡ ಯುವತಿಯೊಬ್ಬಳು ಯುವಕನ ಮೇಲೆ ಆ್ಯಸಿಡ್ ಎರಚಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿಯಲ್ಲಿ ನಡೆದಿದೆ.

    ತಿರುವನಂತಪುರಂ ಜಿಲ್ಲೆಯ ಅರುಣ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಇಡುಕ್ಕಿ ಜಿಲ್ಲೆಯ ಆದಿಮಾಲಿಯ ಶಿಬಾ ಹಲ್ಲೆ ಮಾಡಿದ ಯುವತಿಯಾಗಿದ್ದಾಳೆ. ಅರುಣ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನವೆಂಬರ್ 16ರಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

    ಶಿಬಾ ಅರುಣ್‍ಕುಮಾರ್ ಅವರ ಮಾಜಿ ಗೆಳತಿಯಾಗಿದ್ದರು. ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಅರುಣ್‍ಕುಮಾರ್ ಬೇರೆಯೊಬ್ಬರನ್ನು ಮದುವೆಯಾಗುತ್ತಿರುವ ಸುದ್ದಿ ಕೇಳಿದ್ದ ಶಿಬಾ ಕೋಪಗೊಂಡಿದ್ದಳು. ಅಷ್ಟೇ ಅಲ್ಲದೇ ಬ್ರೆಕಪ್‍ನಿಂದಾಗಿ ಮಾನಸಿಕವಾಗಿ ಕುಗ್ಗಿದ್ದಳು. ನವೆಂಬರ್ 16ರಂದು ಸುಮಾರು 10 ಗಂಟೆ ವೇಳೆಗೆ ಆದಿಮಾಲಿ ಇರುಂಪುಪಾಲಂ ಕ್ರಿಶ್ಚಿಯನ್ ಚರ್ಚ್‍ಗೆ ಕಕರೆಸಿದ ಶಿಬಾ, ಅರುಣ್‍ಕುಮಾರ್ ಅವರ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಇದನ್ನೂ ಓದಿ: ರೈತರು ಸ್ಮಾರ್ಟ್‍ಫೋನ್ ಕೊಳ್ಳಲು 1500 ರೂ. ಆರ್ಥಿಕ ನೆರವು ಕೊಟ್ಟ ಸರ್ಕಾರ

    ಈ ಕುರಿತಾದ ಪ್ರಕರಣದ ವೀಡಿಯೋ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದಿಮಾಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಶಿಬಾಳನ್ನು ಬಂಧಿಸಿದ್ದಾರೆ. ಅರುಣ್ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಬ್ಯಾಂಕಾಕ್: ಥೈಲ್ಯಾಂಡ್‍ನ 36 ವರ್ಷದ ಮಹಿಳೆಯೊಬ್ಬಳು ತನ್ನ ಜೊತೆಗಿರಲು ನಿರಾಕರಿಸಿದ ಮಾಜಿ ಪ್ರಿಯಕರನ ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾಳೆ.

    ಮಹಿಳೆ ತನ್ನ ಪ್ರಿಯಕರನಿಗೆ 23 ಲಕ್ಷ ರೂ. ಮೌಲ್ಯದ ಟ್ರಯಂಫ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಳು. ಆದರೆ ಅವರಿಬ್ಬರ ನಡುವೆ ಬ್ರೇಕ್ ಆಪ್ ಆದ ನಂತರ ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬೈಕನ್ನೇ ಸುಟ್ಟುಹಾಕಿದ್ದಾಳೆ.

    ಈ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕನೋಕ್ ವಾನ್ ಎಂಬ ಮಹಿಳೆ, ಡಬ್ಬವೊಂದರಲ್ಲಿ ತಂದಿದ್ದ ಇಂಧನವನ್ನು ಬೈಕ್ ಮೇಲೆ ಸುರಿದಿದ್ದಾಳೆ. ನಂತರ ಬೈಕ್‍ಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಕೆನಡಾದಲ್ಲಿ ಮಗನ ಮದುವೆ – ಆನ್‍ಲೈನ್‍ನಲ್ಲಿ ಆಶೀರ್ವಾದಿಸಿದ ಪೋಷಕರು

    ಈ ಘಟನೆ ವೇಳೆ ತನ್ನ ಮಾಜಿ ಪ್ರಿಯಕರನ ಬೈಕ್ ಜೊತೆಯಲ್ಲಿಯೇ ನಿಲ್ಲಿಸಿದ್ದ ಇನ್ನೂ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದಾರೆ. ಅದೃಷ್ಟ ಎಂಬಂತೆ ಘಟನೆ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.