Tag: breakfast

  • ಮನೆಯಲ್ಲೇ ಮಾಡಿ ರುಚಿರುಚಿಯಾದ ಮಂಗಳೂರು ಶೈಲಿಯ ಬನ್ಸ್

    ಮನೆಯಲ್ಲೇ ಮಾಡಿ ರುಚಿರುಚಿಯಾದ ಮಂಗಳೂರು ಶೈಲಿಯ ಬನ್ಸ್

    ಮಂಗಳೂರು ಕಡೆ ಹೋದ್ರೆ ಅಂತೂ ಈ ತಿಂಡಿ ಸ್ಪೆಷಲ್. ಇಲ್ಲಿ ಬೆಳಗ್ಗೆ ಬ್ರೇಕ್ ಫಾಸ್ಟ್ ಗೂ ಇದನ್ನೇ ತಿಂತಾರೆ ಸಂಜೆ ತಿಂಡಿಗೂ ಇದನ್ನೇ ಮಾಡ್ತಾರೆ. ಹೌದು, ಇದೇ ನಮ್ಮ ರುಚಿ ರುಚಿಯಾದ ಮಂಗಳೂರು ಬನ್ಸ್. ಪೂರಿ ಹೋಲಿಕೆಯ ಬನ್ಸ್ ಗೆ ಚಟ್ನಿ ಅಂತೂ ಸೂಪರ್ ಕಾಂಬಿನೇಷನ್. ಈ ಮಂಗಳೂರು ಬನ್ಸ್ ಸುಲಭವಾಗಿ ಮನೆಯಲ್ಲೇ ತಯಾರಿಸುವುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಾದ್ರೆ ತಡ ಮಾಡದೆ ನೀವು ಸಹ ಮನೆಯಲ್ಲೇ ಮಂಗಳೂರು ಶೈಲಿಯ ಬನ್ಸ್ ತಯಾರಿಸಿ.

    ಬೇಕಾಗುವ ಸಾಮಗ್ರಿಗಳು:
    ಬಲಿತ ಬಾಳೆಹಣ್ಣು-2-3
    ಮೈದಾ ಹಿಟ್ಟು – 2 ಕಪ್
    ಸಕ್ಕರೆ-3 ಟೇಬಲ್ ಚಮಚ
    ಜೀರಿಗೆ-1 ಟೀ ಚಮಚ
    ಮೊಸರು- 1/4 ಕಪ್
    ಬೇಕಿಂಗ್ ಸೋಡಾ- ಚಿಟಿಕೆಯಷ್ಟು
    ಉಪ್ಪು-1/2 ಟೀ ಚಮಚ
    ಅಡುಗೆ ಎಣ್ಣೆ- ಕರಿಯಲು ಬೇಕಾಗುವಷ್ಟು

    ಮಾಡುವ ವಿಧಾನ:
    *ಸಿಪ್ಪೆ ತೆಗೆದ ಬಾಳೆಹಣ್ಣುಗಳನ್ನು ಒಂದು ಪಾತ್ರೆಗೆ ಹಾಕಿ ಚಮಚ ಅಥವಾ ಕೈಯಿಂದ ನಯವಾದ ಪೇಸ್ಟ್ ರೀತಿ ಮಾಡಿಕೊಳ್ಳಿ.
    * ಇದಕ್ಕೆ 2 ಟೇಬಲ್ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಬಳಿಕ ಜೀರಿಗೆ ಮತ್ತು ಉಪ್ಪು ಸೇರಿಸಿ. ಇದೇ ಮಿಶ್ರಣಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈ ಮಿಶ್ರಣಕ್ಕೆ ಮೈದಾ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ಹಿಟ್ಟು ಮೃದುವಾಗಲು 5 ನಿಮಿಷ ನಾದಿಕೊಳ್ಳಿ. ಬಳಿಕ ಇದನ್ನು ದೊಡ್ಡ ಉಂಡೆಯನ್ನಾಗಿ ಮಾಡಿ ಅದಕ್ಕೆ ಎಣ್ಣೆ ಹಚ್ಚಿ.
    * ಒಂದು ತೆಳುವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದು ಹಿಂಡಿಕೊಳ್ಳಿ. ಬಟ್ಟೆಯಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿಕೊಳ್ಳಿ. ಒದ್ದೆ ಬಟ್ಟೆಯನ್ನು ಹಿಟ್ಟಿನ ಮೇಲೆ ಮುಚ್ಚಿದ ಬಳಿಕ ಅದನ್ನು ಬೆಚ್ಚಗಿನ ಸ್ಥಳದಲ್ಲಿ 8 ಗಂಟೆಗಳ ಕಾಲ ಇಡಿ.
    * 8 ಗಂಟೆಗಳಾದ ಬಳಿಕ ಈ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ.
    * ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಮೈದಾವನ್ನು ಮೇಲೆ ಹಾಕಿ ಪೂರಿಗಿಂತ ಸ್ವಲ್ಪ ದಪ್ಪವಿರುವಂತೆ ಲಟ್ಟಿಸಿಕೊಳ್ಳಿ.
    * ಬಳಿಕ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.
    * ಎಣ್ಣೆ ಬಿಸಿಯಾದ ಬಳಿಕ ಲಟ್ಟಿಸಿಕೊಂಡ ಬನ್ಸ್ ಹಾಕಿ ಕಂದು ಬಣ್ಣ ಬರುವ ತನಕ ಕರಿಯಿರಿ.
    * ಬನ್ಸ್ ನ ಎರಡೂ ಬದಿಯನ್ನು ಚೆನ್ನಾಗಿ ಕರಿಯಬೇಕು.
    * ಈಗ ರುಚಿರುಚಿಯಾದ ಮಂಗಳೂರು ಬನ್ಸ್ ಅನ್ನು ಚಟ್ನಿಯೊಂದಿಗೆ ಸವಿಯಿರಿ.

  • ಶೋಭಾ ಕರಂದ್ಲಾಜೆ ಹುಟ್ಟುಹಬ್ಬ – ಮಾವುತ, ಕಾವಾಡಿಗಳಿಗೆ ಉಪಹಾರಕೂಟ ಏರ್ಪಡಿಸಿ ಆಚರಣೆ

    ಶೋಭಾ ಕರಂದ್ಲಾಜೆ ಹುಟ್ಟುಹಬ್ಬ – ಮಾವುತ, ಕಾವಾಡಿಗಳಿಗೆ ಉಪಹಾರಕೂಟ ಏರ್ಪಡಿಸಿ ಆಚರಣೆ

    ಮೈಸೂರು: ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandalaje) ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಅರಮನೆ ಆವರಣದಲ್ಲಿ ಕಾವಾಡಿಗರಿಗೆ ಮತ್ತು ಮಾವುತರಿಗೆ ವಿಶೇಷ ಉಪಹಾರ (Breakfast) ಬಡಿಸಿ ವಿಭಿನ್ನ ರೀತಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ವಿಶ್ವ ವಿಖ್ಯಾತ ಮೈಸೂರಿನಲ್ಲಿ (Mysuru) ದಸರಾ ಮಹೋತ್ಸವ ನಡೆಯುತ್ತಿದೆ. ಇಲ್ಲಿನ ಮಾವುತರು ಮತ್ತು ಕಾವಾಡಿಗಳಿಗೆ ಸ್ವತಃ ಶೋಭಾ ಕರಂದ್ಲಾಜೆ ಉಪಾಹಾರ ಬಡಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅರಮನೆ ಆವರಣದಲ್ಲಿ ಉಪಾಹಾರಕ್ಕೆ ವ್ಯವಸ್ಥೆ ಮಾಡಿದ್ದು, ಮಾವುತರು ಮತ್ತು ಕಾವಾಡಿಗಳಿಗಾಗಿ ವಿಶೇಷ ಉಪಾಹಾರ ಸಿದ್ಧಪಡಿಸಲಾಗಿದೆ. ಇಷ್ಟುಮಾತ್ರವಲ್ಲದೇ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಶೋಭಾ ಆಚರಿಸಿಕೊಂಡಿದ್ದು, ಸಚಿವೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳಿಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಕೌಂಟ್‍ಡೌನ್?- ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿ

     

    ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಬೆನ್ನಲ್ಲೇ ಕೇಂದ್ರ ಗೃಹ ಸಚಿವರಿಂದ ಶೋಭಾ ಕರಂದ್ಲಾಜೆಗೆ ಫೋನ್ ಬಂದಿದೆ. ಹುಟ್ಟುಹಬ್ಬ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶೋಭಾ ಕರಂದ್ಲಾಜೆಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು ಮೈಸೂರಿನಲ್ಲಿ ಶೋಭಾ ಕರಂದ್ಲಾಜೆಗೆ ಸಂಸದ ಪ್ರತಾಪ್ ಸಿಂಹ (Prathap Simha) ವಿಶ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದಾರೆ. ಅಲ್ಲದೇ ರಾಜ್ಯ ರಾಜಕಾರಣಕ್ಕೆ ಆದಷ್ಟು ಬೇಗ ಬನ್ನಿ ಮೇಡಂ. ನಿಮಗೆ ರಾಜ್ಯದಲ್ಲಿ ಒಳ್ಳೆಯ ಹುದ್ದೆ ಸಿಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಪರಶುರಾಮ ಹೆಸರಲ್ಲಿ ಕಾಂಗ್ರೆಸ್, ಬಿಜೆಪಿ ಸಂಘರ್ಷ- ಎರಡೂ ಪಕ್ಷಗಳ ವಿರುದ್ಧ FIR

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರದ್ಲಾಂಜೆ, ನಾನು ಕೇಂದ್ರ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ. ನಾನು ಅಲ್ಲಿಯೇ ಇರುತ್ತೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವೇ ಇಲ್ಲ. ನನಗೆ ಒಳ್ಳೆ ಖಾತೆ ಸಿಕ್ಕಿದೆ. ಅಲ್ಲಿಯೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಯಾವ ವರಿಷ್ಠರಿಂದಲೂ ನನಗೆ ಯಾವ ಸೂಚನೆಗಳು ಇಲ್ಲ. ಇವೆಲ್ಲ ಸುದ್ದಿ ಹೇಗೆ ಬರುತ್ತಿವೆಯೂ ನನಗೆ ಗೊತ್ತಿಲ್ಲ. ಮುಂದಿನ ಬಾರಿಯೂ ಮೋದಿ ಪ್ರಧಾನಿಯಾಗಬೇಕು ಎಂಬುದು ನನ್ನ ಇಚ್ಛೆ. ಅದನ್ನೇ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ- ಗಗನಕ್ಕೇರಿದ ಹೂ, ಹಣ್ಣುಗಳ ದರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

    ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

    ರೋಗ್ಯಕರ ಹಾಗೂ ಪೌಷ್ಟಿಕಾಂಶವುಳ್ಳ ಉಪಾಹಾರ ಪ್ರತಿ ದಿನ ಮಾಡಬೇಕೆಂದರೆ, ಒಮ್ಮೆ ಹೆಸರು ಬೇಳೆಯ ದೋಸೆ (Moong Dal Dosa) ಮಾಡಿ ನೋಡಿ. ಸರಳವಾಗಿ ತಯಾರಿಸಬಹುದಾದ ಹೆಸರು ಬೇಳೆ ದೋಸೆ ಕೆಲವೇ ಪದಾರ್ಥಗಳನ್ನು ಬಳಸಿ ಮಾಡಬಹುದು. ಇದನ್ನು ಯಾವುದೇ ಸೈಡ್ ಡಿಶ್ ಇಲ್ಲದೇ ಸವಿಯಬಹುದಾದರೂ ಚಟ್ನಿಯೊಂದಿಗೆ ಇದರ ರುಚಿ ದುಪ್ಪಟ್ಟಾಗುತ್ತದೆ. ಒಮ್ಮೆ ಮನೆಯಲ್ಲಿ ಹೆಸರು ಬೇಳೆ ದೋಸೆಯನ್ನು ಮಾಡಿನೋಡಿ.

    ಬೇಕಾಗುವ ಪದಾರ್ಥಗಳು:
    ಹೆಸರು ಬೇಳೆ – 1 ಕಪ್
    ಮೆಣಸಿನಕಾಯಿ – 1
    ಶುಂಠಿ – 1 ಇಂಚು
    ಜೀರಿಗೆ – 1 ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಹಿಂಗ್ – ಚಿಟಿಕೆ
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – ದೋಸೆ ಕಾಯಿಸಲು ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ದೋಸೆ ಒಮ್ಮೆ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ ಹೆಸರು ಬೇಳೆ ತೆಗೆದುಕೊಂಡು, ಮುಳುಗುವಷ್ಟು ನೀರು ಹಾಕಿ 3 ಗಂಟೆಗಳ ಕಾಲ ನೆನೆಸಿ.
    * ನೀರನ್ನು ಸೋಸಿ ಹೆಸರು ಬೇಳೆಯನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ.
    * ಈಗ ಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಸೇರಿಸಿ, ಅಗತ್ಯವಿರುವಷ್ಟು ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಬ್ಯಾಟರ್ ಅನ್ನು ಪಾತ್ರೆಗೆ ವರ್ಗಾಯಿಸಿ, ಅರಿಶಿನ, ಕೊತ್ತಂಬರಿ ಸೊಪ್ಪು, ಹಿಂಗ್ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.

    * ಬಿಸಿ ತವಾದ ಮೇಲೆ ಒಂದು ಸೌಟು ಬ್ಯಾಟರ್ ಸುರಿದು, ನಿಧಾನವಾಗಿ ಹರಡಿ.
    * ದೋಸೆಯ ಮೇಲೆ 1 ಟೀಸ್ಪೂನ್ ಎಣ್ಣೆ ಹಾಕಿ, ತವಾ ಮುಚ್ಚಿ, 1 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ.
    * ದೋಸೆಯನ್ನು ಮಗುಚಿ ಹಾಕಿ, ಎರಡೂ ಬದಿ ಕಾಯಿಸಿಕೊಳ್ಳಿ.
    * ಇದೀಗ ಹೆಸರು ಬೇಳೆ ದೋಸೆ ತಯಾರಾಗಿದ್ದು, ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್

    Live Tv
    [brid partner=56869869 player=32851 video=960834 autoplay=true]

  • ದಿಢೀರ್ ಅಂತ ತಯಾರಿಸಿ ಜೋಳದ ದೋಸೆ

    ದಿಢೀರ್ ಅಂತ ತಯಾರಿಸಿ ಜೋಳದ ದೋಸೆ

    ಜೋಳದ ಹಿಟ್ಟನ್ನು ಬಳಸಿ ಅತ್ಯಂತ ಸುಲಭವಾಗಿ ದೋಸೆ ತಯಾರಿಸುವುದು ಹೇಗೆ ಎಂಬುದು ನಿಮಗೆ ಗೊತ್ತಾ? ತುಂಬಾನೇ ಸರಳವಾಗಿ ಹಾಗೂ ಆರೋಗ್ಯಕರವಾಗಿ ಜೋಳದ ದೋಸೆಯನ್ನು ದಿಢೀರ್ ಅಂತಲೇ ತಯಾರಿಸಬಹುದು. ಚಟ್ನಿಯೊಂದಿಗಿನ ಇದರ ಸ್ವಾದ ಎಂತಹವರನ್ನೂ ತನ್ನ ಅಭಿಮಾನಿಯನ್ನಾಗಿ ಮಾಡಬಲ್ಲುದು. ಸಿಂಪಲ್ ಆಗಿ ಮಾಡಬಹುದಾಗ ಜೋಳದ ದೋಸೆ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಜೋಳದ ಹಿಟ್ಟು – ಒಂದೂವರೆ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – 4 ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕತ್ತರಿಸಿದ ಕರಿಬೇವಿನ ಎಲೆಗಳು – ಸ್ವಲ್ಪ
    ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
    ಜೀರಿಗೆ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಎಣ್ಣೆ – ದೋಸೆ ತಯಾರಿಸಲು ಬೇಕಾಗುವಷ್ಟು ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಉಪ್ಪು ಹಾಗೂ ನೀರನ್ನು ಸೇರಿಸಿ ಗಂಟಿಲ್ಲದಂತೆ ಮಿಶ್ರಣ ಮಾಡಿ.
    * ಈಗ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳು, ಮೆಣಸಿನಕಾಯಿ, ಜೀರಿಗೆ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಅದನ್ನು 10 ನಿಮಿಷಗಳ ಕಾಲ ವಿಶ್ರಾಂತಿಗೆ ಬಿಡಿ.
    * ಬಳಿಕ ಹಿಟ್ಟಿನ ಸ್ಥಿರತೆಯನ್ನು ನೋಡಿ, ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಿ.
    * ಈಗ ಪ್ಯಾನ್ ಅನ್ನು ಬಿಸಿಗಿಟ್ಟು, ಒಂದು ಸೌಟು ಹಿಟ್ಟನ್ನು ಪ್ಯಾನ್‌ನಲ್ಲಿ ತೆಳುವಾಗಿ ಹರಡಿ.
    * ಅದರ ಮೇಲೆ 1 ಟೀಸ್ಪೂನ್ ಎಣ್ಣೆ ಹಾಕಿ, ಗರಿಗರಿಯಾಗುವವರೆಗೆ ಹುರಿಯಿರಿ.
    * ಇದೀಗ ಜೋಳದ ದೋಸೆ ತಯಾರಾಗಿದ್ದು, ಅದನ್ನು ಚಟ್ನಿಯೊಂದಿಗೆ ಸವಿದರೆ ಸೂಪರ್ ಆಗಿರುತ್ತದೆ. ಇದನ್ನೂ ಓದಿ: ಎಷ್ಟೊಂದು ರುಚಿಕರ ಆಲೂ ಟಿಕ್ಕಿ ಕಬಾಬ್

    Live Tv
    [brid partner=56869869 player=32851 video=960834 autoplay=true]

  • ಬೆಳಗ್ಗಿನ ಉಪಹಾರಕ್ಕೆ ಮಾಡಿ ಕೇರಳ ಶೈಲಿಯ ಅಪ್ಪಂ

    ಬೆಳಗ್ಗಿನ ಉಪಹಾರಕ್ಕೆ ಮಾಡಿ ಕೇರಳ ಶೈಲಿಯ ಅಪ್ಪಂ

    ಕೇರಳದ ಬೆಳಗ್ಗಿನ ಫೇಮಸ್ ಉಪಹಾರಗಳಲ್ಲಿ ಒಂದು ಈ ಅಪಂ. ತಳವಿರುವ ಪ್ಯಾನ್ ಒಂದಿದ್ದರೆ, ಸಿಂಪಲ್ ಆಗಿ ಹಾಗೂ ಸುಲಭವಾಗಿಯೇ ತಯಾರಿಸಬಹುದು ಅಪ್ಪಂ. ಅತ್ಯಂತ ರುಚಿಕರ ಅಪ್ಪಂ ಅನ್ನು ಒಂದು ಸಲ ಮಾಡಿ ಸವಿದರೆ, ಪದೇ ಪದೇ ಮಾಡಬೇಕೆನಿಸುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ – 3 ಕಪ್
    ನೀರು – ನೆನೆಸಲು ಮತ್ತು ರುಬ್ಬಲು
    ತುರಿದ ತೆಂಗಿನಕಾಯಿ – ಅರ್ಧ ಕಪ್
    ಅನ್ನ – ಕಾಲು ಕಪ್
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ.
    * ಬಳಿಕ ಅಕ್ಕಿಯನ್ನು ಬಸಿದು, ಮಿಕ್ಸರ್ ಜಾರ್‌ಗೆ ಹಾಕಿ ಹಿಟ್ಟಿಗೆ ಬೇಕಾಗುವಷ್ಟು ನೀರು ಹಾಕಿ ನಯವಾಗಿ ರುಬ್ಬಿ.
    * ಈಗ ಬಾಣಲೆಗೆ ಈ ಅಕ್ಕಿ ಹಿಟ್ಟನ್ನು ಹಾಕಿ, ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ.
    * ಈಗ ಆ ಹಿಟ್ಟು ಸಂಪೂರ್ಣ ತಣ್ಣಗಾಗಲು ಬಿಟ್ಟು, ಬಳಿಕ ಮತ್ತೆ ಮಿಕ್ಸರ್ ಜಾರ್‌ಗೆ ಹಾಕಿ.
    * ಅದಕ್ಕೆ ತೆಂಗಿನ ತುರಿ, ಅನ್ನ ಹಾಗೂ ನೀರನ್ನು ಹಾಕಿ, ನಯವಾಗಿ ರುಬ್ಬಿ.
    * ಈಗ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ, 8 ಗಂಟೆಗಳ ಕಾಲ ಚೆನ್ನಾಗಿ ಹುದುಗಲು ಬಿಡಿ.
    * 8 ಗಂಟೆ ಬಳಿಕ ಅದಕ್ಕೆ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
    * ಅಪ್ಪಂ ಮಾಡುವ ಪ್ಯಾನ್ ಅನ್ನು ಬಿಸಿ ಮಾಡಿ, 1 ಸೌಟು ಹಿಟ್ಟು ಸುರಿದು, ಇಡೀ ಪ್ಯಾನ್ ಸುತ್ತುವರಿಯುವಂತೆ ತಿರುಗಿಸಿ.
    * ಅಪ್ಪಂ ಚೆನ್ನಾಗಿ ಬೇಯುವವರೆಗೆ ಮುಚ್ಚಿ.
    * ಈಗ ಅಪ್ಪಂ ತಯಾರಾಗಿದ್ದು, ತೆಂಗಿನಕಾಯಿ ಚಟ್ನಿಯೊಂದಿಗೆ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ದಿಢೀರ್ ಅಂತ ಮಾಡ್ಬೋದು ಆರೋಗ್ಯಕರ ಬೀಟ್ರೂಟ್ ದೋಸಾ

    ದಿಢೀರ್ ಅಂತ ಮಾಡ್ಬೋದು ಆರೋಗ್ಯಕರ ಬೀಟ್ರೂಟ್ ದೋಸಾ

    ರೋಗ್ಯಕರ ಉಪಹಾರದ ರೆಸಿಪಿ ಹುಡುಕುತ್ತಿರುವವರಿಗೆ ಇಲ್ಲಿದೆ ದಿಢೀರ್ ಅಂತ ಮಾಡಬಹುದಾದ ಬೀಟ್ರೂಟ್ ದೋಸಾ. ಬೆಳಗ್ಗಿನ ತಿಂಡಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡ ಬೀಟ್ರೂಟ್ ದೋಸಾ ಅಷ್ಟೇ ರುಚಿಕರವೂ ಆಗಿದೆ. ಗೃಹಿಣಿಯರಿಗೆ ಅರ್ಜೆಂಟ್ ಆಗಿ ಹಾಗೂ ಸ್ಪೆಷಲ್ ಆಗಿ ಮಾಡಬೇಕಾದ ಉಪಹಾರಗಳ ಪಟ್ಟಿಯಲ್ಲಿ ಇದನ್ನೂ ಸೇರಿಸಬಹುದು.

    ಬೇಕಾಗುವ ಪದಾರ್ಥಗಳು:
    * ಹೆಚ್ಚಿದ ಬೀಟ್ರೂಟ್ – ಅರ್ಧ ಕಪ್
    * ಅಕ್ಕಿ ಹಿಟ್ಟು – 1 ಕಪ್
    * ರವೆ – ಅರ್ಧ ಕಪ್
    * ಉಪ್ಪು – ರುಚಿಗೆ ತಕ್ಕಷ್ಟು
    * ನೀರು – 3 ಕಪ್
    * ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    * ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
    * ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ಕತ್ತರಿಸಿದ ಕರಿಬೇವಿನ ಎಳೆಗಳು – ಸ್ವಲ್ಪ
    * ಜೀರಿಗೆ – 1 ಟೀಸ್ಪೂನ್
    * ನೀರು – ಹಿಟ್ಟಿಗೆ
    * ಎಣ್ಣೆ – ಹುರಿಯಲು

    ಮಾಡುವ ವಿಧಾನ:
    * ಮೊದಲಿಗೆ ಮಿಕ್ಸರ್ ಜಾರ್‌ನಲ್ಲಿ ಬೀಟ್ರೂಟ್ ಮತ್ತು ಅರ್ಧ ಕಪ್ ನೀರನ್ನು ತೆಗೆದುಕೊಳ್ಳಿ. ನಯವಾಗಿ ರುಬ್ಬಿ.
    * ಬೀಟ್ರೂಟ್ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಅಕ್ಕಿ ಹಿಟ್ಟು, ರವೆ, ಉಪ್ಪು, 3 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕೆಲವು ಕರಿಬೇವಿನ ಎಲೆಗಳು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * 10 ನಿಮಿಷ ವಿಶ್ರಾಂತಿ ನೀಡಿ, ಬಳಿಕ ಅಗತ್ಯವಿದ್ದರೆ ನೀರನ್ನು ಸೇರಿಸಿ, ಹಿಟ್ಟನ್ನು ಸರಿಹೊಂದಿಸಬಹುದು.
    * ಪ್ಯಾನ್ ಅನ್ನು ಬಿಸಿಗಿಟ್ಟು, ಕಾದ ಬಳಿಕ ಹಿಟ್ಟನ್ನು ಹರಡಿ, 1 ಟೀಸ್ಪೂನ್ ಎಣ್ಣೆ ಹಾಕಿ, 2 ನಿಮಿಷ ಬಿಡಿ.
    * ಗರಿಗರಿಯಾದ ಬೀಟ್ರೂಟ್ ದೋಸೆಯನ್ನು ಪ್ಲೇಟ್‌ಗೆ ಹಾಕಿ, ನಿಮಗಿಷ್ಟದ ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಯೂಟರ್ನ್‌ ಬೆನ್ನಲ್ಲೇ ಡಿಕೆಶಿಯನ್ನು ಉಪಹಾರಕ್ಕೆ ಆಹ್ವಾನಿಸಿದ ಸಿದ್ದರಾಮಯ್ಯ

    ಯೂಟರ್ನ್‌ ಬೆನ್ನಲ್ಲೇ ಡಿಕೆಶಿಯನ್ನು ಉಪಹಾರಕ್ಕೆ ಆಹ್ವಾನಿಸಿದ ಸಿದ್ದರಾಮಯ್ಯ

    ಬೆಂಗಳೂರು: ಸಿದ್ದರಾಮೋತ್ಸವಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಡಿಕೆ ಶಿವಕುಮಾರ್‌ ಗುರುವಾರದಿಂದ ಯೂ ಟರ್ನ್‌ ಹೊಡೆದಿದ್ದಾರೆ. ಸಿದ್ದರಾಮೋತ್ಸವ ಪಕ್ಷದ ವೇದಿಕೆಯಲ್ಲೇ ನಡೆಯುತ್ತಿರುವ ಕಾರ್ಯಕ್ರಮ ಎಂದ ಡಿಕೆಶಿ ಘೋಷಣೆ ಮಾಡಿದ್ದಾರೆ.

    ಸಿದ್ದರಾಮೋತ್ಸವ ಸಂಪೂರ್ಣವಾಗಿ ಸಿದ್ದರಾಮಯ್ಯ ಮಯವಾಗಬೇಕು ಹೊರತು ಪಕ್ಷದ ನೆರಳಿರಬಾರದು ಎನ್ನುವುದು ಸಿದ್ದು ಬೆಂಬಲಿಗರ ಹಠ. ಈಗ ಪಕ್ಷವೇ ಜೊತೆಗಿದೆ ಎನ್ನುವ ಮೂಲಕ ಸಿದ್ದರಾಮೋತ್ಸವವನ್ನ ಕಾಂಗ್ರೆಸ್ ಉತ್ಸವ ಆಗಿಸಲು ಡಿಕೆಶಿ ಅಂಡ್ ಟೀಂ ಪ್ರಯತ್ನ ಮಾಡುತ್ತಿದೆ.

    ಸಿದ್ದರಾಮಯ್ಯಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಎಂಬಂತೆ ಸಿದ್ದರಾಮಯ್ಯ ವಿರೋಧಿ ಬಣ ಮಾತನಾಡುತ್ತಿದೆ. ಅದರಲ್ಲೂ ‌ಕೆಪಿಸಿಸಿ ಅಧ್ಯಕ್ಷರೇ ಇದು ಪಕ್ಷದ ವೇದಿಕೆಯಲ್ಲಿ‌ ನಡೆಯುತ್ತಿರುವ ಕಾರ್ಯಕ್ರಮ ಎನ್ನುವ ಮೂಲಕ ಸಿದ್ದರಾಮೋತ್ಸವ ಕಾಂಗ್ರೆಸ್ ಸಮಾವೇಶ ಎಂಬಂತೆ ಬಿಂಬಿಸಲು ಮುಂದಾಗಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಜೆಪಿ ನಡ್ಡಾ ಭೇಟಿ- ಬಿಜೆಪಿ ಸೇರ್ಪಡೆ?

    ಪಕ್ಷದ ಒಳಗಡೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಮಧ್ಯೆ ಡಿಕೆಶಿಯನ್ನು ಸಿದ್ದರಾಮಯ್ಯ ಬೆಳಗಿನ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಈ ಮೂಲಕ ಸಿದ್ದರಾಮೋತ್ಸವವನ್ನು ಪಕ್ಷದ ಸಮಾವೇಶವಾಗಿ ಬಿಂಬಿಸಲು ಹೊರಟ ಡಿಕೆಶಿಯನ್ನ ವಿಶ್ವಾಸದ ದಾಳದ ಮೂಲಕ ಕಟ್ಟಿ ಹಾಕಲು ಸಿದ್ದರಾಮಯ್ಯ ಪ್ರಯತ್ನ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕರಾವಳಿ ಫೇಮಸ್ ರೆಸಿಪಿ ‘ಪತ್ರೋಡೆ’ ಮಾಡಿ ಸವಿಯಿರಿ

    ಕರಾವಳಿ ಫೇಮಸ್ ರೆಸಿಪಿ ‘ಪತ್ರೋಡೆ’ ಮಾಡಿ ಸವಿಯಿರಿ

    ಡುಪಿ ಮತ್ತು ಮಂಗಳೂರಿನ ಕರಾವಳಿ ಸ್ಥಳವು ಸಾತ್ವಿಕ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇದು ಉಪಾಹಾರ, ಬಾಳೆ ಎಲೆ ಊಟಕ್ಕೆ ವ್ಯಾಪಕವಾಗಿ ಜನಪ್ರಿಯವಾಗಿದೆ. ಆದರೆ ಪತ್ರೋಡೆ ರೆಸಿಪಿ ಸಾಂಪ್ರದಾಯಿಕ ಸ್ನ್ಯಾಕ್ಸ್‌ ಪಾಕವಿಧಾನವಾಗಿದ್ದು, ಕೊಲೊಕೇಶಿಯಾ/ಕೆಸು ಎಲೆಯಲ್ಲಿ ಮಾಡಲಾಗುತ್ತದೆ. ಈ ವಿಧಾನ ಸುಲಭವಾಗಿದ್ದು, ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಅಕ್ಕಿ – 1 ಕಪ್
    * ಉದ್ದಿನ ಬೇಳೆ – 2 ಟೇಬಲ್ಸ್ಪೂನ್
    * ತುರಿದ ತೆಂಗಿನಕಾಯಿ – 1 ಕಪ್
    * ಕೊತ್ತಂಬರಿ ಬೀಜ – 2 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಮೆಂತ್ಯೆ ಬೀಜ – ಅರ್ಧ ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಬೆಲ್ಲ – ಅರ್ಧ ಕಪ್
    * ಹುಣಿಸೇಹಣ್ಣು – 30 ಗ್ರಾಂ
    * ಉಪ್ಪು – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 7
    * ಕೊಲೊಕೇಶಿಯಾ ಎಲೆಗಳು/ ಕೆಸುವಿನ ಎಲೆ – 20

    ಒಗ್ಗರಣೆಗೆ ಬೇಕಾದ ಪದಾರ್ಥ:
    * ತೆಂಗಿನ ಎಣ್ಣೆ – 2 ಟೇಬಲ್ಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಕಡ್ಲೆ ಬೇಳೆ – 1 ಟೀಸ್ಪೂನ್
    * ಕಡ್ಲೆ ಬೀಜ – 2 ಟೇಬಲ್ಸ್ಪೂನ್
    * ಕರಿ ಬೇವಿನ ಎಲೆ – ಅರ್ಧ ಕಪ್
    * ತುರಿದ ತೆಂಗಿನಕಾಯಿ – ಅರ್ಧ ಕಪ್
    * ಬೆಲ್ಲ – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ ಮತ್ತು 2 ಟೇಬಲ್ಸ್ಪೂನ್ ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಮಿಕ್ಸರ್ ಹಾಕಿ ರುಬ್ಬಿಕೊಳ್ಳಿ.
    * ಈ ಮಿಶ್ರಣಕ್ಕೆ ತೆಂಗಿನಕಾಯಿ, ಕೊತ್ತಂಬರಿ ಬೀಜ, ಜೀರಾ, ಮೆಂತ್ಯೆ ಮತ್ತು ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ.
    * ಬೆಲ್ಲ, ಹುಣಿಸೇಹಣ್ಣು, ಉಪ್ಪು ಮತ್ತು ಕೆಂಪು ಮೆಣಸಿನಕಾಯಿಯನ್ನು ಸೇರಿಸಿ. ಅಗತ್ಯವಿರುವಂತೆ ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ಈಗ ಮಸಾಲಾ ಪೇಸ್ಟ್ ಸಿದ್ಧವಾಗಿದೆ.
    * ಕೆಸುವಿನ ಎಲೆಗಳನ್ನು ತೆಗೆದುಕೊಂಡು ಗೆರೆಗಳನ್ನು ಟ್ರಿಮ್ ಮಾಡಿ. ಮಸಾಲಾ ಪೇಸ್ಟ್ ಎಲೆಗೆ ಸಮವಾಗಿ ಹರಡಿ.
    * ಕೆಸುವಿನ ಎಲೆಗಳಿಗೆ 4 ಬಾರಿ ಮಸಾಲಾ ಪೇಸ್ಟ್ ಹರಡಿ. ಈಗ ಎಲೆಯ ಒಂದು ಬದಿಗಳನ್ನು ಮಡಚಿ ರೋಲ್ ಮಾಡಿ. 30 ನಿಮಿಷಗಳ ಕಾಲ ಸ್ಟೀಮ್ ಮಾಡಿ. ತಣ್ಣಗಾದ ಮೇಲೆ ಅದನ್ನು ಕಟ್ ಮಾಡಿ.
    * ತೆಂಗಿನ ಎಣ್ಣೆಯನ್ನು ಬಿಸಿ ಮಾಡುವ ಮೂಲಕ ಒಗ್ಗರಣೆಯನ್ನು ತಯಾರಿಸಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಪೀನಟ್ಸ್ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ.
    * ಅದಕ್ಕೆ ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ. ಒಂದು ನಿಮಿಷ ಅಥವಾ ತೆಂಗಿನಕಾಯಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
    * ಅಲ್ಲದೇ ತುಂಡರಿಸಿದ ಪತ್ರೋಡೆ ತುಣುಕುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

    – ಪತ್ರೋಡೆಯನ್ನು ಬೆಳಗಿನ ತಿಂಡಿ ಅಥವಾ ಸಂಜೆಯ ಸ್ನ್ಯಾಕ್ಸ್‌ ಗೆ ಮಾಡಿ ಆನಂದಿಸಿ.

  • ಗೋಧಿ ನುಚ್ಚಿನ ಪೊಂಗಲ್ ಮಾಡುವ ಸರಳ ವಿಧಾನ ನಿಮಗಾಗಿ

    ಗೋಧಿ ನುಚ್ಚಿನ ಪೊಂಗಲ್ ಮಾಡುವ ಸರಳ ವಿಧಾನ ನಿಮಗಾಗಿ

    ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಗೋಧಿ ನುಚ್ಚಿನ ಪೊಂಗಲ್ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    * ಗೋಧಿ ನುಚ್ಚು- 1 ಕಪ್
    * ಹೆಸರುಬೇಳೆ- ಅರ್ಧ ಕಪ್
    * ಹಾಲು ಅರ್ಧ ಲೀಟರ್
    * ಬೆಲ್ಲ- 1 ಕಪ್
    * ತುಪ್ಪ – ಅರ್ಧ ಕಪ್
    * ಒಣಕೊಬ್ಬರಿ- ಅರ್ಧ ಕಪ್
    * ಲವಂಗದ ಪುಡಿ-1 ಚಮಚ
    * ಏಲಕ್ಕಿ ಪುಡಿ -1 ಚಮಚ
    * ಗೋಡಂಬಿ, ದ್ರಾಕ್ಷಿ – ಸ್ವಲ್ಪ

    ಮಾಡುವ ವಿಧಾನ:
    * ಹೆಸರುಬೇಳೆ ಮತ್ತು ಗೋಧಿನುಚ್ಚನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು.

    * ನಂತರ ಹುರಿದ ಬೇಳೆ ಮತ್ತು ಗೋಧಿ ನುಚ್ಚನ್ನು ಕುಕ್ಕರಿನಲ್ಲಿ ಹಾಕಿ. ನೀರು ಮತ್ತು ಹಾಲನ್ನು ಸೇರಿಸಿ. 5-6 ವಿಷಲ್ ಕೂಗಿಸಿ.
    * ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಕಾಲು ಕಪ್ ನೀರು ಸೇರಿಸಿ ಕುದಿಸಿ ಸೋಸಿಕೊಳ್ಳಿ. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    * ನಂತರ ಬೆಲ್ಲದ ನೀರಿನ ಮಿಶ್ರಣಕ್ಕೆ ಒಣ ಕೊಬ್ಬರಿಯನ್ನು ಸೇರಿಸಿ. ಗಟ್ಟಿಯಾಗುತ್ತಾ ಬಂದಾಗ ತುಪ್ಪವನ್ನು ಚಿಟಿಕೆ ಉಪ್ಪನ್ನು ಸೇರಿಸಿ. ಲವಂಗ, ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
    * ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ತಯಾರಿಸಿ ಕೊಂಡ ಪೊಂಗಲ್‍ಗೆ ಮಿಶ್ರಣ ಮಾಡಿ. ರುಚಿಯಾದ ಗೋಧಿ ನುಚ್ಚಿನ ಸಿಹಿ ಪೊಂಗಲ್ ತಯಾರಿಸಿ ಸವಿಯಲು ಸಿದ್ಧವಾಗುತ್ತದೆ.

  • ಮಕ್ಕಳಿಗೆ ಇಷ್ಟವಾಗುವ ಬಾಳೆಹಣ್ಣಿನ ದೋಸೆ ಮಾಡಿ ಸವಿಯಿರಿ

    ಮಕ್ಕಳಿಗೆ ಇಷ್ಟವಾಗುವ ಬಾಳೆಹಣ್ಣಿನ ದೋಸೆ ಮಾಡಿ ಸವಿಯಿರಿ

    ರಾಗಿ, ಗೋಧಿ ಎಂದು ವಿಧ ವಿಧವಾದ ದೋಸೆ ಮಾಡುವ ನಾವು ಬಾಳೆಹಣ್ಣಿನ ದೋಸೆ ಮಾಡಬಹುದು. ಹಾಗೆಯೇ ಬಾಳೆಹಣ್ಣಿನ ದೋಸೆಯ ಬಗ್ಗೆ ಗೊತ್ತಾ? ಹೌದು, ಬಾಳೆಹಣ್ಣಿನ್ನು ಬಳಸಿ ನೀವು ರುಚಿ ರುಚಿಯಾದ ದೋಸೆ ಮಾಡಬಹುದು. ನೀವು ಮಕ್ಕಳಿಗೆ ಇಷ್ಟವಾಗುವ ಸಿಹಿಯಾದ ಈ ದೋಸೆಯನ್ನು ಮಾಡಲು ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಬಾಳೆಹಣ್ಣು- 8
    * ಗೋಧಿ ಹಿಟ್ಟು- 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಬೆಲ್ಲ – ಸ್ವಲ್ಪ
    * ತುಪ್ಪ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಬಾಳೆಹಣ್ಣನ್ನು ತೆಗೆದುಕೊಂಡು ಚನ್ನಾಗಿ ಕಿವುಚಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
    * ಬಾಳೆ ಹಣ್ಣಿನ ಪೇಸ್ಟ್‍ಗೆ ಸ್ವಲ್ಪ ಗೋಧಿ ಹಿಟ್ಟು ಹಾಗೂ ಸ್ವಲ್ಪ ನೀರನ್ನು ಹಾಕುತ್ತಾ ಕಲಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚನ್ನಾಗಿ ಕಲಸಿದ ನಂತರ ಈ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
    * ಗೋಧಿ ದೋಸೆಯ ಹಿಟ್ಟು ಸಿದ್ದವಾಗಿದೆ. ಈಗ ಒಂದು ಕಾವಲಿ ತೆಗೆದುಕೊಂಡು ಕಾಯಲು ಇಡಿ. ಅದಕ್ಕೆ ಮೇಲೆ ತುಪ್ಪ ಸವರಿ ದೋಸೆ ಆಕಾರದಲ್ಲಿ ಈ ಮಿಶ್ರಣವನ್ನು ಹಾಕಿದರೆ ರುಚಿಯಾದ ಬಾಳೆಹಣ್ಣಿನ ದೋಸೆ ಸವಿಯಲು ಸಿದ್ಧವಾಗುತ್ತದೆ.