Tag: bread vada

  • ಉಳಿದ ಬ್ರೆಡ್‌ನಿಂದ ಮಾಡಿ ರುಚಿಕರ ವಡೆ

    ಉಳಿದ ಬ್ರೆಡ್‌ನಿಂದ ಮಾಡಿ ರುಚಿಕರ ವಡೆ

    ಪ್ರತಿ ಬಾರಿ ಮನೆಗೆ ಬ್ರೆಡ್ ತಂದಾಗ ಅದರಲ್ಲಿ ಕೆಲ ತುಂಡುಗಳು ಉಳಿದು ಹೋಗೋದು ಸರ್ವೇ ಸಾಮಾನ್ಯ. ಯಾವಾಗಲೂ ಸ್ಯಾಂಡ್‌ವಿಚ್ ತಿನ್ನೋದು ಬೋರ್ ಅಂತ ಎನಿಸಬಹುದು. ಹಾಗಿದ್ರೆ ಈಗ ಉಳಿದುಹೋಗಿರೋ ಬ್ರೆಡ್ ಅನ್ನು ಏನು ಮಾಡೋದು? ಹಾಳಾಗೋಕೂ ಮುನ್ನ ಬ್ರೆಡ್ ಅನ್ನು ಸುಮ್ನೆ ಎಸೆಯೋಕೆ ಯಾರಿಂದ್ಲೂ ಮನಸು ಬರಲ್ಲ. ಹಾಗಿದ್ರೆ ಉಳಿದು ಹೋಗಿರೋ ಬ್ರೆಡ್‌ನಿಂದ ಈ ರೆಸಿಪಿಯನ್ನು ನೀವು ಟ್ರೈ ಮಾಡ್ಬೋದು. ಉಳಿದುಹೋದ ಬ್ರೆಡ್‌ನಿಂದ ಈ ರುಚಿಕರ ವಡೆ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ರವೆ – 3 ಟೀಸ್ಪೂನ್
    ಮೊಸರು – 1 ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
    ಕತ್ತರಿಸಿದ ಕರಿಬೇವಿನ ಎಲೆ – ಕೆಲವು
    ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
    ಜೀರಿಗೆ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
    ಬ್ರೆಡ್ – 4 ಸ್ಲೈಸ್
    ಅಕ್ಕಿ ಹಿಟ್ಟು – 100 ಗ್ರಾಂ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್ ತೆಗೆದುಕೊಂಡು, ಅದರಲ್ಲಿ ಬ್ರೆಡ್‌ಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಹಾಕಿ.
    * ಅದಕ್ಕೆ ರವೆ, ಮೊಸರು, ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವಿನ ಎಲೆ, ಕೊತ್ತಂಬರಿ ಸೊಪ್ಪು, ಚಿಲ್ಲಿ ಫ್ಲೇಕ್ಸ್, ಜೀರಿಗೆ ಮತ್ತು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ನಿಮ್ಮ ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಂಡು, ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ತೆಗೆದುಕೊಂಡು, ಚಪ್ಪಟೆಯಾಗಿ ವಡೆಯ ಆಕಾರ ನೀಡಿ.
    * ಈಗ ಒಂದೊಂದೇ ವಡೆಗಳನ್ನು ಬಿಸಿ ಎಣ್ಣೆಯಲ್ಲಿ ಬಿಟ್ಟು ಡೀಪ್ ಫ್ರೈ ಮಾಡಿ.
    * ವಡೆಯ ಎರಡೂ ಬದಿಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಅದನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಇದೀಗ ಗರಿಗರಿಯಾದ ಬ್ರೆಡ್ ವಡೆ ತಯಾರಾಗಿದ್ದು, ಇದನ್ನು ಪುದೀನಾ ಚಟ್ನಿ ಅಥವಾ ಸಾಸ್ ಜೊತೆ ಬಿಸಿಬಿಸಿಯಾಗಿ ಸವಿಯಿರಿ.

  • ಸಂಜೆ ತಿಂಡಿಗೆ ಮಾಡಿ ಬ್ರೆಡ್ ವಡೆ

    ಸಂಜೆ ತಿಂಡಿಗೆ ಮಾಡಿ ಬ್ರೆಡ್ ವಡೆ

    ಮುಂಗಾರಿನ ಮಳೆ ಶುರುವಾಗಿದೆ ಚಳಿಗೆ ಬಿಸಿಯಾಗಿ ತಿನಿಸುಗಳು ಬೇಕು ಎಂದು ನಾಲಿಗೆ ಬಯಸುತ್ತದೆ. ಹೀಗಾಗಿ ನೀವು ಇಂದು ಬಿಸಿಯಾದ ರುಚಿಯಾದ ಬ್ರೆಡ್ ವಡೆ ಮಾಡಿ ಸವಿಯಿರಿ..

    ಬೇಕಾಗುವ ಸಾಮಗ್ರಿಗಳು:
    * ಬ್ರೆಡ್
    * ಮೊಸರು- 2 ಕಪ್
    * ದನಿಯಾ ಪುಡಿ- 1 ಟೀ ಸ್ಪೂನ್
    * ಹಸಿಮೆಣಸಿನಕಾಯಿ- 4
    * ಹುಣಸೆಹಣ್ಣು
    * ಸಕ್ಕರೆ- 2 ಟೀ ಸ್ಪೂನ್
    * ಜೀರಿಗೆ- 2 ಟೀ ಸ್ಪೂನ್
    * ಖಾರದ ಪುಡಿ- 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    *  ಆಲೂಗಡ್ಡೆ- 2
    * ಅಡುಗೆ ಎಣ್ಣೆ- 2 ಕಪ್
    * ಒಣದ್ರಾಕ್ಷಿ
    * ಕೊತ್ತಂಬರಿ

    ಮಾಡುವ ವಿಧಾನ:
    * ಬ್ರೆಡ್ ಸ್ಲೈಸ್‍ಗಳನ್ನು ತೆಗೆದುಕೊಂಡು ಅದರ ಅಂಚುಗಳನ್ನು ಕತ್ತರಿಸಿಕೊಂಡಿರಬೇಕು.

    * ಒಂದು ಬಟ್ಟಲಲ್ಲಿ ಬೇಯಿಸಿಕೊಂಡ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಹುಳಿ ಪುಡಿ, ಒಣದ್ರಾಕ್ಷಿ, ಜೀರಿಗೆ ಪುಡಿ ಮತ್ತು ಉಪ್ಪು, ಮೊಸರು, ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಬೇಕು.

    * ಮೊದಲೆ ಸಿದ್ಧಪಡಿಸಿಕೊಂಡ ಬ್ರೆಡ್ ಸ್ಲೈಸ್ ತೆಗೆದುಕೊಂಡು ಅದರ ಮೇಲೆ ಮೊಸರನ್ನು ಲೇಪಿಸಿ. ಬಳಿಕ ಆಲೂಗಡ್ಡೆಯ ಮಿಶ್ರಣದ ಉಂಡೆಯನ್ನು ಇಟ್ಟು ಬ್ರೆಡ್ ಅನ್ನು ಉಂಡೆಯ ಸುತ್ತ ಮುಚ್ಚುವಂತೆ ಸುತ್ತಿಕೊಳ್ಳಬೇಕು.

    * ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ ಬ್ರೆಡ್ ಉಂಡೆಯನ್ನು ಇಟ್ಟು ಚೆನ್ನಾಗಿ ಫ್ರೈ ಮಾಡಬೇಕು.

    * ನಂತರ ಬೇಯಿಸಿದ ವಡೆಗೆ ಮೊಸರು, ಕೊತ್ತಂಬರಿ, ಹುಣಸೆಹಣ್ಣು, ಜೀರಿಗೆ, ಮೆಣಸಿನಪುಡಿ ಹಾಕಿ ಸಿದ್ಧಪಡಿಸಿದರೆ. ರುಚಿತಯಾದ ಬ್ರೆಡ್ ವಡೆ ಸವಿಯಲು ಸಿದ್ಧವಾಗುತ್ತದೆ.