Tag: bread dosa

  • ಫಟಾಫಟ್‌ ಅಂತ ಮಾಡಬಹುದು ಬ್ರೆಡ್ ದೋಸೆ – ಒಮ್ಮೆ ಟ್ರೈ ಮಾಡಿ

    ಫಟಾಫಟ್‌ ಅಂತ ಮಾಡಬಹುದು ಬ್ರೆಡ್ ದೋಸೆ – ಒಮ್ಮೆ ಟ್ರೈ ಮಾಡಿ

    ನಿಮ್ಮ ರುಚಿಗೆಟ್ಟ ನಾಲಿಗೆ ಹೊಸ ನಳಪಾಕವನ್ನು ತಿನ್ನಲು ಬಯಸುತ್ತದೆ. ನಾವಿಂದು ಬ್ರೆಡ್ ನಿಂದ ಬೆಳಗ್ಗಿನ ಉಪಾಹಾರಕ್ಕೆ ದೋಸೆ ಹೇಗೆ ಮಾಡ್ಬೋದು ಅಂತ ಹೇಳಿ ಕೊಡ್ತೀವಿ. ಇದು ನಿಮ್ಮ ಟೈಮ್ ಉಳಿಸುತ್ತೆ, ರುಚಿಯಾಗಿಯೂ ಇರುತ್ತೆ. ಇನ್ನೇಕೆ ತಡ ಬನ್ನಿ ಹಾಗಾದ್ರೆ ಬ್ರೆಡ್ ದೋಸೆ ಮಾಡೋದು ಹೇಗೆ ನೋಡೋಣ.

    ಬೇಕಾಗುವ ಸಾಮಗ್ರಿಗಳು:

    * ಬ್ರೆಡ್ 1 ಕಪ್
    * ರವೆ- 1 ಕಪ್
    * ಅಕ್ಕಿ ಹಿಟ್ಟು-1 ಕಪ್
    * ಮೊಸರು- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಸಕ್ಕರೆ 1 ಕಪ್
    * ಅಡುಗೆ ಸೋಡಾ
    * ಅಡುಗೆ ಎಣ್ಣೆ- 1 ಕಪ್
    * ಅವಲಕ್ಕಿ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಬ್ರೆಡ್ ಕತ್ತರಿಸಿ ಸಣ್ಣ ತುಂಡುಗಳಾಗಿ ಮಾಡಿ.
    * ಅದಕ್ಕೆ ಅಕ್ಕಿ ಹಿಟ್ಟು, ಮೊಸರು, ರವೆ, ಟೀಸ್ಪೂನ್ ಉಪ್ಪು, ಅವಲಕ್ಕಿ, ಸಕ್ಕರೆ ಸೇರಿಸಿ ಈ ಮಿಶ್ರಣಕ್ಕೆ 1 ಕಪ್ ನೀರು ಸೇರಿಸಿ, 20 ನಿಮಿಷಗಳ ಕಾಲ ನೆನೆಯಲು ಬಿಡಿ.

    * 20 ನಿಮಿಷಗಳ ನಂತರ, ಇದನ್ನು ಮಿಕ್ಸಿಗೆ ಹಾಕಿ, ಅಗತ್ಯವಿರುವಂತೆ ನೀರನ್ನು ಸೇರಿಸಿ ರುಬ್ಬಿಕೊಳ್ಳಿ.
    * ಈ ಹಿಟ್ಟನ್ನು ಒಂದು ಬೌಲ್‍ಗೆ ಹಾಕಿ, ಅಡುಗೆ ಸೋಡಾ ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಇದನ್ನೂ ಓದಿ:  ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ

    * ಈಗ ದೋಸೆ ಪ್ಯಾನ್ ಬಿಸಿ ಮಾಡಿ ನೀರು ಚಿಮುಕಿಸಿ, ಟಿಶ್ಯೂ ಪೇಪರ್ ನಿಂದ ಒರೆಸಿ. ದೋಸೆ ಹಿಟ್ಟನ್ನು ಹಾಕಿ, ಸಾಧ್ಯವಾದಷ್ಟು ತೆಳುವಾಗಿ ಹರಡಿಕೊಳ್ಳಿ.
    * ನಂತರ ಎಣ್ಣೆಯನ್ನು ಸ್ವಲ್ಪ ಹಾಕಿ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಲೋ ಫ್ಲೇಮ್‍ನಲ್ಲಿ ಬೇಯಿಸಿದರೆ ದೋಸೆ ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]