Tag: Bread Bonda

  • ಗರಂ ಗರಂ ಬ್ರೆಡ್ ಬೋಂಡ ಮಾಡಿ ಸವಿಯಿರಿ

    ಗರಂ ಗರಂ ಬ್ರೆಡ್ ಬೋಂಡ ಮಾಡಿ ಸವಿಯಿರಿ

    ಕ್ಕಳಿಗೆ ಬೇಕಾದ ಪೌಷ್ಠಿಕಾಂಶ ಹಾಗೂ ರುಚಿ, ಎರಡನ್ನೂ ಗಮನದಲ್ಲಿಟ್ಟುಕೊಂಡು ತಿಂಡಿಯನ್ನು ಮಾಡಿಕೊಡಬೇಕಾಗುತ್ತದೆ. ಸೊಪ್ಪು, ತರಕಾರಿ, ಕಾಳು ಮುಂತಾದವು ಮಕ್ಕಳಿಗೆ ಕೊಡಬೇಕಾದ ಆಹಾರದಲ್ಲಿ ಇರಲೇ ಬೇಕಾದ ಕೆಲವು ಪದಾರ್ಥಗಳು. ಕಾಳುಗಳಲ್ಲಿ ಪ್ರೋಟೀನ್ ಅಂಶ ಬಹಳ ಹೇರಳವಾಗಿರುತ್ತದೆ ಮತ್ತು ಮಕ್ಕಳ ಬೆಳವಣಿಗೆಗೆ ಅತ್ಯಾವಶ್ಯಕವೂ ಆಗಿರುತ್ತದೆ.

    ಕಾಬುಲ್ ಚನ್ನಾ ಕಾಳನ್ನು ಬಳಸಿ ಒಂದು ಬಗೆಯ ತಿಂಡಿಯನ್ನು ಮಾಡುವುದು ಹೇಗೆ ಎಂದು ನೋಡೋಣ. ಈ ರೆಸಿಪಿ ಮಕ್ಕಳಿಗೆ ಮಾತ್ರವಲ್ಲದೇ ಮನೆಗೆ ಬರುವ ಅತಿಥಿಗಳಿಗೂ ಮಾಡಿಕೊಟ್ಟು ಸತ್ಕರಿಸಬಹುದು. ಸಂಜೆ ಸಮಯದಲ್ಲಿ ಚಹಾದೊಡನೆಯೂ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    * ಕಾಬುಲ್ ಕಡ್ಲೆ : 1 ಕಪ್ (ಮೊದಲೇ 8 ತಾಸುಗಳ ಕಾಲ ನೆನೆಸಿಟ್ಟು ನಂತರ ಬೇಯಿಸಬೇಕು)
    * ಬ್ರೆಡ್ – 1ಕಪ್
    * ಹಸಿ ಮೆಣಸಿನಕಾಯಿ- 2
    * ಮ್ಯಾಂಗೋ ಪೌಡರ್ – ಅರ್ಧ ಚಮಚ
    * ಗರಂ ಮಸಾಲಾ- ಅರ್ಧ ಚಮಚ
    * ಅಚ್ಚ ಖಾರದ ಪುಡಿ – ಕಾಲು ಚಮಚ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಜೀರಿಗೆ ಪುಡಿ- ಕಾಲು ಚಮಚ
    * ಹಾಲು – 1 ಕಪ್
    * ಅಡುಗೆ ಎಣ್ಣೆ – 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಆಲೂಗಡ್ಡೆ- 2
    * ಜೀರಿಗೆ- 2 ಚಮಚ
    * ದನಿಯಾ ಪೌಡರ್ ಇದನ್ನೂ ಓದಿ:  ವೀಕೆಂಡ್‍ನಲ್ಲಿ ಮಾಡಿ ಸವಿಯಿರಿ ಮಶ್ರೂಮ್ ಮಂಚೂರಿ


    ಮಾಡುವ ವಿಧಾನ:
    * ಕಾಬುಲ್ ಕಡಲೆಯನ್ನು 8 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಕುಕ್ಕರ್‌ನಲ್ಲಿ ಇಟ್ಟು ಬೇಯಿಸಬೇಕು. ಬೇಯಿಸಿದ ಕಡಲೆ, ಜೀರಿಗೆ, ದನಿಯಾ ಪೌಡರ್ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದನ್ನು ಒಂದು ಬೌಲ್‍ಗೆ ಹಾಕಿಕೊಳ್ಳಬೇಕು.

    * ಬ್ರೆಡ್ ತೆಗೆದು ಹಾಲಿನಲ್ಲಿ ಅದ್ದಿ ಹಿಂಡಿ ತೆಗೆದು ಬೌಲ್‍ಗೆ ಹಾಕಬೇಕು. ಇದನ್ನೂ ಓದಿ:  ಬಾಯಲ್ಲಿ ನಿರೂರಿಸುವಂತಹ ಬಾದಾಮ್ ಪುರಿಯನ್ನು ನೀವೂ ಟ್ರೈ ಮಾಡಿ

    * ನಂತರದ ರುಬ್ಬಿದ ಕಾಬೂಲ್ ಮಿಶ್ರಣ, ಆಲೂಗಡ್ಡೆಯನ್ನು ಹಾಕಬೇಕು. ನಂತರ ಮೊದಲೇ ತಯಾರು ಮಾಡಿಟ್ಟುಕೊಂಡ ಹೆಚ್ಚಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅಚ್ಚ ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ , ಮ್ಯಾಂಗೋ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಾಲಿನಲ್ಲಿ ಅದ್ದಿಗೆತೆದ ಬ್ರೆಡ್ ಎಲ್ಲವನ್ನು ಬೌಲ್‍ಗೆ ಹಾಕಿ, ನೀರಿಲ್ಲದೇ ಕಲಿಸಿಕೊಳ್ಳಬೇಕು.

     

    *ನಂತರ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾದ ನಂತರ, ಮೊದಲೇ ಬೌಲ್‍ನಲ್ಲಿ ಕಲಿಸಿಟ್ಟುಕೊಂಡ ಮಿಶ್ರಣವನ್ನು ಆಂಬೊಡೆ ಆಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ.