Tag: Breach Candy Hospital

  • ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು – ಆಪ್ತರಿಂದ ಮಾಹಿತಿ

    ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು – ಆಪ್ತರಿಂದ ಮಾಹಿತಿ

    ಮುಂಬೈ: ಟಾಟಾ ಸನ್ಸ್ (Tata Sons) ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) (86) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ (Breach Candy Hospital) ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    20ಕ್ಕೂ ಹೆಚ್ಚು ವರ್ಷಗಳಿಂದ ಟಾಟಾ ಸನ್ಸ್ ಕಂಪನಿಯನ್ನು ನಡೆಸಿಕೊಂಡು ಬಂದಿರುವ 86 ವರ್ಷದ ರತನ್ ಟಾಟಾ ಅವರು ಸೋಮವಾರ ತಮ್ಮ ವಯೋಸಹಜ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಇದನ್ನೂ ಓದಿ: ನಿತೀಶ್‌-ರಿಂಕು ಸ್ಫೋಟಕ ಫಿಫ್ಟಿ; ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 86 ರನ್‌ಗಳ ಜಯ

    ಟಾಟಾ ಸಮೂಹದ ಆಪ್ತರೊಬ್ಬರು, ರತನ್ ಟಾಟಾ ಅವರ ಆರೋಗ್ಯ ಪರಿಸ್ಥಿತಿಯ ಕುರಿತು ನೇರ ಮಾಹಿತಿಯನ್ನು ತಿಳಿದು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.

    ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದರು. ವಯೋಸಹಜ ಸಮಸ್ಯೆಗಳಿಂದ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದೇನೆ. ಆಂತಕಗೊಳ್ಳುವ ಅಗತ್ಯವಿಲ್ಲ. ಸಾಮಾನ್ಯ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದೇನೆ. ನನ್ನ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿವೆ. ಆ ಬಗ್ಗೆ ನನಗೆ ಮಾಹಿತಿ ಇದೆ. ನಾನು ಹಿಂದಿನ ಉತ್ಸಾಹದಲ್ಲೇ ಇರುತ್ತೇನೆ. ತಪ್ಪು ಮಾಹಿತಿ ಹರಡದಂತೆ ಮನವಿ ಮಾಡುತ್ತೇನೆ ಎಂದು ರತನ್ ಟಾಟಾ ಸ್ಪಷ್ಟನೆ ನೀಡಿದ್ದರು.

    ಕಂಪನಿಯ ನಿರ್ವಾಹಕರೊಬ್ಬರು ಮಾತನಾಡಿ, ಮೊದಲಿನಂತೆ ಟಾಟಾ ಅವರು ದಿನನಿತ್ಯದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಲ್ಲ. ಆದರೆ ಟಾಟಾ ಸನ್ಸ್ ನಾಯಕತ್ವದಿಂದ ಕೆಲವು ನಿರ್ಧಾರಗಳ ಕುರಿತು ಸಲಹೆ ನೀಡುತ್ತಾರೆ ಎಂದು ತಿಳಿಸಿದರು.

    ಸದ್ಯ ಇದೀಗ ಅವರು ಟಾಟಾ ಟ್ರಸ್ಟ್ನ ಲೋಕೋಪಕಾರಿ ಸಂಸ್ಥೆಯನ್ನು ನಡೆಸುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗಳ ಅರೆಸ್ಟ್

  • ಅವರ ಮುಖದಲ್ಲಿ ನಗು ಇತ್ತು – ರೋಗಿಗಳನ್ನು ಸಮಾನವಾಗಿ ನೋಡಿಕೊಳ್ಳಿ ಎಂದಿದ್ದ ಗಾನ ಕೋಗಿಲೆ

    ಅವರ ಮುಖದಲ್ಲಿ ನಗು ಇತ್ತು – ರೋಗಿಗಳನ್ನು ಸಮಾನವಾಗಿ ನೋಡಿಕೊಳ್ಳಿ ಎಂದಿದ್ದ ಗಾನ ಕೋಗಿಲೆ

    ಮುಂಬೈ: ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮ್ದಾನಿ ಅವರು ದಿವಂಗತ ಲತಾ ಮಂಗೇಶ್ಕರ್‍ರವರು ಕೊನೆಯುಸಿರೆಳೆಯುವ ಸಂದರ್ಭದ ಅಂತಿಮ ಕ್ಷಣಗಳಲ್ಲಿ ‘ಅವರ ಮುಖದಲ್ಲಿ ನಗು ಇತ್ತು’ ಎಂಬುದನ್ನು ಬಹಿರಂಗಪಡಿಸಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಲತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಸಮ್ದಾನಿ, ಲತಾ ಜೀ ಅವರ ಆರೋಗ್ಯ ಹದಗೆಟ್ಟಾಗ ನಾನು ಅವರಿಗೆ ಚಿಕಿತ್ಸೆ ನೀಡುತ್ತಿದ್ದೆ. ಆದರೆ ಅವರ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಆದರೂ ನಾವು ನಮ್ಮ ಪ್ರಯತ್ನವನ್ನು ಮುಂದುವರೆಸಿದ್ದೆವು. ಆದರೆ ಅಂತಿಮವಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು. ಇದನ್ನೂ ಓದಿ: ದಿ.ಲತಾ ಮಂಗೇಶ್ಕರ್‌ಗೆ ಮರಳು ಕಲಾಕೃತಿ ಅರ್ಪಿಸಿದ ಸುದರ್ಶನ್ ಪಟ್ನಾಯಕ್

    ಲತಾ ಮಂಗೇಶ್ಕರ್ ಅವರು ಆಸ್ಪತ್ರೆಗೆ ದಾಖಲಾಗುವ ಮುನ್ನ ನನಗೆ ಒಂದು ಮಾತನ್ನು ಹೇಳಿದ್ದರು. ಯಾವಾಗಲೂ ನಿಮ್ಮ ಆಸ್ಪತ್ರೆಗೆ ಬರುವ ರೋಗಿಗಳೆಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಿ ಎಂದು ಹೇಳುತ್ತಿದ್ದರು. ಅಲ್ಲದೆ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಯಾವಾಗಲೂ ಸಿದ್ಧರಾಗಿರುತ್ತಿದ್ದರು. ಅವರು ಎಂದಿಗೂ ಚಿಕಿತ್ಸೆಗೆ ಹೆದರಿ ಅದರಿಂದ ದೂರವಿರಲಿಲ್ಲ ಎಂದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

    ಲತಾ ಜೀ ಅವರ ಸರಳ ಸ್ವಭಾವದ ಬಗ್ಗೆ ಮಾತನಾಡುತ್ತಾ ಡಾ ಸಮ್ದಾನಿ ಅವರು, ನನ್ನ ಜೀವನದುದ್ದಕ್ಕೂ ನಾನು ಅವರ ನಗುವನ್ನು ನೆನಪಿಟ್ಟುಕೊಂಡಿರುತ್ತೇನೆ. ನಿಧನ ಹೊಂದುವ ಅಂತಿಮ ಕ್ಷಣಗಳಲ್ಲಿಯೂ ಅವರ ಮುಖದಲ್ಲಿ ನಗು ಇತ್ತು. ಕಳೆದ ಕೆಲವು ವರ್ಷಗಳಿಂದ ಅವರ ಆರೋಗ್ಯವು ಸರಿ ಇರಲಿಲ್ಲ. ಆದ್ದರಿಂದ ಅವರು ಯಾರೊಂದಿಗೂ ಹೆಚ್ಚು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

    ನಾನು ಲತಾ ಅವರಿಗೆ ಚಿಕಿತ್ಸೆ ನೀಡುತ್ತಿರುವಾಗಿನಿಂದ ಅವರು ತುಂಬಾ ಕಡಿಮೆ ಮಾತನಾಡುತ್ತಿದ್ದರು. ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ದೇವರ ಯೋಜನೆ ಬೇರೆಯೇ ಇತ್ತು. ಅವರು ನಮ್ಮೆಲ್ಲರನ್ನೂ ಶಾಶ್ವತವಾಗಿಯೇ ಬಿಟ್ಟು ಹೋದರು ಎಂದು ಬೇಸರ ವ್ಯಕ್ತಪಡಿಸಿದರು.

    ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರು ಜನವರಿಯಲ್ಲಿ ಕೋವಿಡ್ -19 ಮತ್ತು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 8 ರಂದು, 92 ವರ್ಷ ವಯಸ್ಸಿನ ಮಂಗೇಶ್ಕರ್ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್‍ನಿಂದ ಚೇತರಿಸಿಕೊಂಡ ನಂತರವೂ, ಶನಿವಾರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾದೇ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಅವರ ಅಂತ್ಯಕ್ರಿಯೆ ನಡೆಸಲಾಯಿತು.

  • ದುಡಿದ ಹಣವನ್ನ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಮುಡಿಪಾಗಿಟ್ಟ ಆಟೋ ಚಾಲಕ

    ದುಡಿದ ಹಣವನ್ನ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಮುಡಿಪಾಗಿಟ್ಟ ಆಟೋ ಚಾಲಕ

    ಮುಂಬೈ: ಗಾಯಕಿ ಲತಾ ಮಂಗೇಶ್ಕರ್ ಅವರ ಚಿಕಿತ್ಸೆಗಾಗಿ ಆಟೋ ಚಾಲಕ ತನ್ನ ಸಂಪಾದನೆಯನ್ನು ನೀಡುವುದಾಗಿ ಹೇಳಿದ್ದಾನೆ.

    ಲತಾ ಮಂಗೇಶ್ಕರ್ ಅವರಿಗೆ ಇತ್ತೀಚೆಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ನಂತರ ಅವರಿಗೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಕಳೆದ 10 ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮುದ್ದು ಮಗಳಿಗೆ ಕನ್ನಡ ಕಲಿಸುತ್ತಿದ್ದಾರೆ ರಾಕಿಂಗ್ ಸ್ಟಾರ್

    Mumbai auto driver gives his earnings for Lata Mangeshkar's treatment in ICU - Trending News News

    ಲತಾ ಮಂಗೇಶ್ಕರ್ ಅವರು ತಮ್ಮ ಮಧುರ ಧ್ವನಿಯ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಆ ಅಭಿಮಾನಿಗಳಲ್ಲಿ ಮುಂಬೈನ ಆಟೋ ಚಾಲಕ ಸತ್ಯವಾನ್ ಗೀತೆ ಸಹ ಒಬ್ಬರು. ಅವರು ತಮ್ಮ ದುಡಿಮೆಯನ್ನೆಲ್ಲ ಲತಾ ಮಂಗೇಶ್ಕರ್ ಅವರ ಚಿಕಿತ್ಸೆಗೆ ನೀಡುವುದಾಗಿ ಹೇಳಿದ್ದಾರೆ.

    ಸತ್ಯವಾನ್ ಗೀತೆ ಅವರು ತಮ್ಮ ರಿಕ್ಷಾವನ್ನು ಲತಾ ಮಂಗೇಶ್ಕರ್ ಅವರು ಹಾಡಿದ ಹಾಡುಗಳಿಂದ ಅಲಂಕರಿಸಿದ್ದಾರೆ. ಆಟೋಗೆ ಲತಾ ಅವರ ದೊಡ್ಡ ಫೋಟೋವನ್ನು ಸಹ ಹಾಕಿಸಿದ್ದಾರೆ. ಇದರ ಜೊತೆಗೆ ಅವರ ಆರೋಗ್ಯದಲ್ಲಿ ಸರಿಯಿಲ್ಲ ಎಂದು ತಿಳಿದ ಕ್ಷಣದಿಂದ ಲತಾ ಮಂಗೇಶ್ಕರ್ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಸತ್ಯವಾನ್ ಗೀತೆ ಪ್ರಾಥಿಸುತ್ತಿದ್ದಾರೆ.

    ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ತಿಳಿದ ನಂತರ, ಹಲವಾರು ಅಭಿಮಾನಿಗಳು, ಚಲನಚಿತ್ರ ಬಂಧುಗಳು ಮತ್ತು ಇತರ ಕ್ಷೇತ್ರದ ಜನರು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದು ಪ್ರಾಥಿಸಿದ್ದಾರೆ. ಇದನ್ನೂ ಓದಿ: ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

    ಗಾಯಕಿಯ ಆರೋಗ್ಯದ ಕುರಿತು ಮಾತನಾಡಿದ ಆರೋಗ್ಯ ಸಚಿವ ರಾಜೇಶ್ ಟೋಪೆ, ಲತಾ ಮಂಗೇಶ್ಕರ್ ಅವರ ಆರೋಗ್ಯ ಸುಧಾರಿಸುತ್ತಿದೆ. ನಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರು ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ನನಗೆ ತಿಳಿಸಿದ್ದಾರೆ ಎಂದಿದ್ದರು.