Tag: brazil

  • ಕ್ಯಾಟ್‍ವಾಕ್ ಮಾಡುತ್ತಾ ವೇದಿಕೆಯಲ್ಲೇ ಪ್ರಾಣಬಿಟ್ಟ ಮಾಡೆಲ್!

    ಕ್ಯಾಟ್‍ವಾಕ್ ಮಾಡುತ್ತಾ ವೇದಿಕೆಯಲ್ಲೇ ಪ್ರಾಣಬಿಟ್ಟ ಮಾಡೆಲ್!

    ಬ್ರೆಜಿಲ್: ಕ್ಯಾಟ್‍ವಾಕ್ ಮಾಡುತ್ತಾ ರ‌್ಯಾಂಪ್‌ ಚಾಕ್ ವೇದಿಕೆ ಮೇಲೆಯೇ ಕುಸಿದು ಬಿದ್ದು ಮಾಡೆಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೌಪೌಲೊ ಫ್ಯಾಷನ್ ವಿಕ್‍ನಲ್ಲಿ ನಡೆದಿದೆ.

    ಮಾಡೆಲ್ ಟೇಲ್ಸ್ ಸೋರ್ಸ್, ಫ್ಯಾಷನ್ ವಿಕ್ ಅಂತಿಮ ದಿನದಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಕ್ಯಾಟ್‍ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲಿದ್ದ ಕಾರ್ಯಕ್ರಮದ ಆಯೋಜಕರು ಟೇಲ್ಸ್ ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆ ಸಾಗಿಸುವ ಪ್ರಯತ್ನ ನಡೆಸಿದರು. ಆದರೆ ಆಸ್ಪತ್ರೆಗೆ ತಲುಪುವ ವೇಳೆಗೆ ಟೇಲ್ಸ್ ಕೊನೆಯುಸಿರೆಳೆದಿದ್ದರು.

    26 ವರ್ಷದ ಟೇಲ್ಸ್ ವೇದಿಕೆ ಮೇಲೆಯೇ ಸಾವನ್ನಪ್ಪಿದ್ದು ತಮಗೆ ಶಾಕ್ ಆಗಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರತಿಕ್ರಿಯೆ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

  • ಸ್ಪೈಡರ್ ಮ್ಯಾನ್ ವೇಷ ಧರಿಸಿ ಆಫೀಸ್‍ಗೆ ಬಂದ ಉದ್ಯೋಗಿ

    ಸ್ಪೈಡರ್ ಮ್ಯಾನ್ ವೇಷ ಧರಿಸಿ ಆಫೀಸ್‍ಗೆ ಬಂದ ಉದ್ಯೋಗಿ

    ರಿಯೋ ಡಿ ಜನೈರೊ: ಯಾವುದೇ ಒಂದು ಕಂಪನಿ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ನಂತರ ಬೇರೆ ಕಂಪನಿಗೆ ಅಥವಾ ನಿವೃತ್ತಿಯ ವೇಳೆ ಕಡೆಯ ದಿನ ತುಂಬಾ ಉದ್ಯೋಗಿಗಳು ಭಾವುಕರಾಗುತ್ತಾರೆ. ಆದರೆ ಇಲ್ಲೊಬ್ಬ ಬ್ಯಾಂಕ್ ಉದ್ಯೋಗಿ ತನ್ನ ಕೆಲಸದ ಕಡೆ ದಿನ ಸ್ಪೈಡರ್ ಮ್ಯಾನ್ ವೇಷ ಧರಸಿ ಆಫೀಸ್ ಗೆ ಹೋಗಿದ್ದಾರೆ.

    ಈ ಘಟನೆ ಬ್ರೆಜಿಲ್ ನ ಸಾವೋ ಪಾಲೊದಲ್ಲಿ ನಡೆದಿದ್ದು, ಈಗ ಬ್ಯಾಂಕ್ ಉದ್ಯೋಗಿ ಸ್ಪೈಡರ್ ಮ್ಯಾನ್ ವೇಷ ಧರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಉದ್ಯೋಗಿ ತನ್ನ ಕಡೆಯ ಕೆಲಸದ ದಿನ ಜೀವತಾವಧಿಯಲ್ಲಿ ಸದಾ ನೆನಪಿರಬೇಕು ಎಂದು ಈ ರೀತಿಯ ವೇಷದಲ್ಲಿ ಹೋಗಿದ್ದಾನೆ.

    ಉದ್ಯೋಗಿ ಸ್ಪೈಡರ್ ಮ್ಯಾನ್ ವೇಷ ಧರಿಸಿ ಬಂದಿದ್ದು, ದಿನ ಅದೇ ವೇಷದಲ್ಲಿ ತನ್ನ ಕೆಲಸ ಮಾಡಿದ್ದಾನೆ. ಈ ದೃಶ್ಯಗಳನ್ನು ಸಹೋದ್ಯೋಗಿಯೊಬ್ಬರು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಫೋಟೋ ಮತ್ತು ವಿಡಿಯೋದಲ್ಲಿ, ಉದ್ಯೋಗಿ ತನ್ನ ಜಾಗದಲ್ಲಿ ಕುಳಿತು ಅದೇ ವೇಷದಲ್ಲಿ ಕೆಲಸ ಮಾಡುತ್ತಿರುವುದು. ಜೊತೆಗೆ ಕಿವಿಗೆ ಹೆಡ್‍ಫೋನ್ ಹಾಕಿರುವುದು ಮತ್ತು ತನ್ನ ಸಹೋದ್ಯೋಗಿಗೆ ಸಲಹೆ ಕೊಡುತ್ತಿರುವುದನ್ನು ನೋಡಬಹುದಾಗಿದೆ. ಇನ್ನೂ ವಿಡಿಯೋದಲ್ಲಿ ತನ್ನ ಸಹೋದ್ಯೋಗಿಗಳಿಗೆ ಕಡೆದ ದಿನದ ಹಿನ್ನೆಲೆಯಲ್ಲಿ ಸ್ವೀಟ್ ನೀಡುತ್ತಿರುವುದನ್ನು ನೋಡಬಹುದಾಗಿದೆ.

    ಉದ್ಯೋಗಿಯ ಸ್ಪೈಡರ್ ಮ್ಯಾನ್ ವೇಷಧಾರಿಯ ಫೋಟೋವನ್ನು ಸಹೋದ್ಯೋಗಿಗಳು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬ್ರೆಝಿಲ್ ಮನೆಗೆ, ಬೆಲ್ಜಿಯಂ ಸೆಮಿಗೆ

    ಬ್ರೆಝಿಲ್ ಮನೆಗೆ, ಬೆಲ್ಜಿಯಂ ಸೆಮಿಗೆ

    ಮಾಸ್ಕೊ: ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 6ನೇ ಬಾರಿ ಪ್ರಶಸ್ತಿ ಗೆಲ್ಲುವ ಬಲಿಷ್ಠ ಬ್ರೆಝಿಲ್ ತಂಡದ ಕನಸು ನೂಚ್ಚುನೂರಾಗಿದೆ. ಕಝಾನ್ ಅರೆನಾದಲ್ಲಿ ನಡೆದ ನಡೆದ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ 2-1 ಗೋಲುಗಳ ಅಂತರದಲ್ಲಿ ಬ್ರೆಝಿಲ್‍ಗೆ ಆಘಾತವಿಕ್ಕಿದ, ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ ಸೆಮಿಫೈನಲ್ ಪ್ರವೇಶಿಸಿದೆ.

    ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದ 13ನೇ ನಿಮಿಷದಲ್ಲಿ ಫೆರ್ನಾಂಡಿನೊ ನೀಡಿದ ಸೆಲ್ಫ್ ಗೋಲ್ ಬೆಲ್ಜಿಯಂಗೆ ವರವಾಯಿತು. ಬೆಲ್ಜಿಯಂನ ವಿನ್ಸೆಂಟ್ ಕೊಂಪನಿ ಕಾರ್ನರ್‍ನಿಂದ ಕಳುಹಿಸಿದ ಚೆಂಡನ್ನು ಹೆಡ್ ಮಾಡಲು ಜಂಪ್ ಮಾಡಿದ ಫೆರ್ನಾಂಡಿನೋ ತಮ್ಮ ತಂಡದ ಗೋಲು ಬಲೆಯೊಳಗೆ ಚೆಂಡನ್ನು ತಳ್ಳಿ ಬೆಲ್ಜಿಯಂಗೆ ಮುನ್ನಡೆ ತಂದುಕೊಟ್ಟರು. ನಂತರದಲ್ಲೂ ಅಕ್ರಮಣಕಾರಿ ಆಟದ ತಂತ್ರದ ಮೊರೆ ಹೋದ ಬೆಲ್ಜಿಯಂ 31ನೇ ನಿಮಿಷದಲ್ಲಿ ಸ್ಟಾರ್ ಮಿಡ್‍ಫೀಲ್ಡರ್ ಕೆವಿನ್ ಡಿ ಬ್ರೂಯ್ನ್ ಮೂಲಕ ಮತ್ತೊಂದು ಗೋಲು ದಾಖಲಿಸಿ ಬ್ರೆಝಿಲ್‍ಗೆ ಡಬಲ್ ಶಾಕ್ ನೀಡಿತು. ನಾಯಕ ಹಝಾರ್ಡ್ ನೀಡಿದ ಪಾಸ್‍ಅನ್ನು ಡಿ ಬಾಕ್ಸ್‍ನ ಹೊರಭಾಗದಿಂದಲೇ ರಾಕೆಟ್ ವೇಗದಲ್ಲಿ ಗುರು ಮುಟ್ಟಿಸಿದ ಮ್ಯಾಂಚೆಸ್ಟರ್ ಸಿಟಿ ಆಟಗಾರ, ಬೆಲ್ಜಿಯಂ ಅಭಿಮಾನಿಗಳು ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡಿದರು. ಆ ಮೂಲಕ ಮೊದಲಾರ್ಧದಲ್ಲಿ ಬೆಲ್ಜಿಯಂ 2-0 ಅಂತರದ ಮುನ್ನಡೆ ದಾಖಲಿಸಿತ್ತು.

    ಪಂದ್ಯದ ದ್ವಿತೀಯಾರ್ಧದಲ್ಲಿ ನೇಮರ್, ಗೆಬ್ರಿಯಲ್ ಜೀಸಸ್, ಹಾಗೂ ವಿಲ್ಲನ್ ಅವರನ್ನು ಒಳಗೊಂಡ ಬ್ರಝಿಲ್ ಮುನ್ಪಡೆ ಆಟಗಾರರು ಬೆಲ್ಜಿಯಂ ರಕ್ಷಣಾ ಕೋಟೆಯನ್ನು ದಾಟಲು ಸತತ ಪ್ರಯತ್ನ ನಡೆಸಿದರು. 76ನೇ ನಿಮಿಷದಲ್ಲಿ ಕೊಟಿನ್ಹೊ ಪಾಸ್‍ನ್ನು ಹೆಡರ್ ಮೂಲಕ ಗುರು ಮುಟ್ಟಿಸಿದ ರೆನಟೊ ಆಗಸ್ಟೊ, ಬ್ರಝಿಲ್ ಪರ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

    ಬ್ರೆಝಿಲ್‍ಗೆ ತಡೆಗೋಡೆಯಾದ ಕಾಟ್ರೋಯ್: ಬ್ರಝಿಲ್ ವಿರುದ್ಧದ ಮಹತ್ವದ ಪಂದ್ಯ ಗೆಲ್ಲಲು ಬೆಲ್ಜಿಯಂಗೆ ನೆರವಾಗಿದ್ದು ಗೋಲ್‍ಕೀಪರ್ ಕಾಟ್ರೋಯ್ಸ್. ದ್ವಿತೀಯಾರ್ಧದಲ್ಲಿ 17 ಬಾರಿ ಗೋಲು ಬಲೆಯನ್ನು ಗುರಿಯಾಗಿಸಿದ ಬಂದ ಚೆಂಡನ್ನು 16 ಬಾರಿಯೂ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಚೆಲ್ಸಿಯಾ ಗೋಲ್ ಕೀಪರ್ ಬ್ರೆಝಿಲ್‍ನ ಎಲ್ಲಾ ಪ್ರಯತ್ನಗಳಿಗೂ ತಡೆಗೋಡೆಯಾದರು. ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ, ಫ್ರಾನ್ಸ್ ವಿರುದ್ಧ ಸೆಣೆಸಲಿದೆ.

     

  • ಪಿಜ್ಜಾ ವಿತರಿಸಲು ಕುದುರೆ ಏರಿ ಬಂದ ಡೆಲಿವರಿ ಬಾಯಿ- ಫೋಟೋ ವೈರಲ್

    ಪಿಜ್ಜಾ ವಿತರಿಸಲು ಕುದುರೆ ಏರಿ ಬಂದ ಡೆಲಿವರಿ ಬಾಯಿ- ಫೋಟೋ ವೈರಲ್

    ರಿಯೋ ಡಿ ಜನೈರೋ: ಬೆಲೆ ಏರಿಕೆ ಖಂಡಿಸಿ ರೈತರು ತರಕಾರಿ, ಹಾಲು ಗಳನ್ನು ರಸ್ತೆಗೆ ಚೆಲ್ಲುವುದರ ಮೂಲಕ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುವುದು ನಮ್ಮಲ್ಲಿ ಸಾಮಾನ್ಯ. ಆದರೆ ದೂರದ ಬ್ರೆಜಿಲ್ ನಲ್ಲಿ ಪಿಜ್ಜಾ ವಿತರಿಸಲು ಯುವಕನೊಬ್ಬ ಕುದುರೆ ಏರಿ ಬಂದ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿ ವಿಶ್ವದೆಲ್ಲೆಡೆ ಸುದ್ದಿಯಾಗಿದ್ದಾನೆ.

    ಪಿಜ್ಜಾ ಬಾಯ್ ಕುದುರೆ ಏರಿ ಬಂದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ. ಇದನ್ನೂ ಓದಿ: ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

    ಬ್ರೆಜಿಲ್‍ನಲ್ಲಿ ಈಗ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಬ್ರೆಜಿಲ್ ತೈಲ ಕಂಪೆನಿಯ ಸಿಇಓ ಪೆಡ್ರೂ ಎಂಬವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ಆರಂಭವಾಗಿವೆ. ಈ ಎಲ್ಲದರ ನಡುವೆ ಬ್ರೆಜಿಲ್ ಪೆಟ್ರೋಲ್ ಮತ್ತು ಡಿಸೇಲ್ ಸಹ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು ಎನ್ನುವ ಆರೋಪ ಕೇಳಿ ಬಂದಿದೆ.

    ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪಿಜ್ಜಾ ಬಾಯ್ ಕುದುರೆ ಬಳಸಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಕುದುರೆ ಏರಿ ಬಂದು ಮನೆಯೊಂದಕ್ಕೆ ಬಂದಿದ್ದ ಪಿಜ್ಜಾ ಬಾಯ್ ಫೋಟೋವನ್ನು ಸ್ಥಳೀಯರು ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

  • ಹೆಲಿಕಾಪ್ಟರ್ ನಲ್ಲಿ ಮದ್ವೆಗೆ ಬಂದ ವಧು – ಲ್ಯಾಂಡ್ ಆಗಿದ್ದೆ ತಡ ಹೊತ್ತಿ ಉರಿಯಿತು: ವೈರಲ್ ವಿಡಿಯೋ

    ಹೆಲಿಕಾಪ್ಟರ್ ನಲ್ಲಿ ಮದ್ವೆಗೆ ಬಂದ ವಧು – ಲ್ಯಾಂಡ್ ಆಗಿದ್ದೆ ತಡ ಹೊತ್ತಿ ಉರಿಯಿತು: ವೈರಲ್ ವಿಡಿಯೋ

    ರಿಯೋಡಿ ಜನೈರೊ: ಹೆಲಿಕಾಪ್ಟರ್ ಮೂಲಕ ಮದುವೆಗೆ ಆಗಮಿಸಿದ ವಧು ಭಾರೀ ಅನಾಹುತದಿಂದ ಪಾರಾದ ಘಟನೆ ಶನಿವಾರ ಬ್ರೆಜಿಲ್‍ನಲ್ಲಿ ನಡೆದಿದೆ.

    ವಧು ಹೆಲಿಕಾಪ್ಟರ್ ಮೂಲಕ ಬರುತ್ತಿರುವಾಗ ಮದುವೆಮನೆಯ ಆವರಣದಲ್ಲೇ ಹೆಲಿಕಾಪ್ಟರ್ ಕ್ರ್ಯಾಶ್ ಆಗಿದೆ. ಮದುವೆಗೆ ಬಂದಿದ್ದ ಅತಿಥಿಗಳು ಇದನ್ನೂ ನೋಡಿ ಒಂದು ಕ್ಷಣ ದಂಗಾದ ಘಟನೆ ನಡೆಯಿತು.

    ಹೆಲಿಕಾಪ್ಟರ್ ಮದುವೆಮನೆಯ ಆವರಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಅದು ಕ್ರ್ಯಾಶ್ ಆಗಿದ್ದು, ಹೆಲಿಕಾಪ್ಟರ್ ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಈ ಘಟನೆಯಲ್ಲಿ ವಧು ಹಾಗೂ ಪೈಲೆಟ್ ಸೇರಿದಂತೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮೂವರಿಗೆ ಹೆಚ್ಚು ಗಾಯವಾಗಿದ್ದು, ವಧುವಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

    ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ನಿಯಂತ್ರಣ ತಪ್ಪಿ, ಅದು ಕೆಳಗೆ ಬೀಳುತ್ತಿತ್ತು. ಈ ವೇಳೆ ಒಳಗಡೆ ಇದ್ದವರು ಹೊರಗೆ ಬರಲು ಹರಸಾಹಸ ಪಡುತ್ತಿರುವಾಗ ಸಡನ್ ಆಗಿ ಹೆಲಿಕಾಪ್ಟರ್ ಗೆ ಬೆಂಕಿ ಹೊತ್ತಿಕೊಂಡಿತು ಎಂದು ಮದುವೆಗೆ ಬಂದಿದ್ದ ಅತಿಥಿಗಳು ಹೇಳಿದ್ದಾರೆ.

    ಈ ಎಲ್ಲಾ ಘಟನೆ ನಡೆದ ನಂತರ ಮೊದಲೇ ನಿಶ್ಚಯಿಸಿದಂತೆ ವರ ಹಾಗೂ ವಧು ಆ ಮದುವೆ ಮನೆಯಲ್ಲೇ ಮದುವೆಯಾದರು. ಮದುವೆ ಆಗುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಹೆಲಿಕಾಪ್ಟರ್ ಹೊತ್ತಿ ಉರಿಯುತ್ತಿತ್ತು.

    https://twitter.com/AreaDoMarcel/status/992883935800635393?tfw_creator=DailyMirror&tfw_site=DailyMirror&ref_src=twsrc%5Etfw&ref_url=https%3A%2F%2Fwww.mirror.co.uk%2Fnews%2Fworld-news%2Fbride-miraculously-escapes-unscathed-after-12489265

  • ಮಾಲೀಕ ಸತ್ತು 4 ತಿಂಗಳು ಕಳೆದ್ರೂ ಆಸ್ಪತ್ರೆ ಬಿಟ್ಟು ಕದಲುತ್ತಿಲ್ಲ ನಾಯಿ

    ಮಾಲೀಕ ಸತ್ತು 4 ತಿಂಗಳು ಕಳೆದ್ರೂ ಆಸ್ಪತ್ರೆ ಬಿಟ್ಟು ಕದಲುತ್ತಿಲ್ಲ ನಾಯಿ

    ಬ್ರೆಸಿಲಿಯಾ: ನಾಯಿಗಳ ನಿಷ್ಠೆಯ ಬಗ್ಗೆ ಎಷ್ಟು ಹೇಳಿದರೂ ಮುಗಿಯಲ್ಲ. ಮಾಲೀಕನ ಮೇಲೆ ನಾಯಿಗಳು ಎಷ್ಟು ಪ್ರೀತಿ ಇಟ್ಟಿರುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. 4 ತಿಂಗಳ ಹಿಂದೆ ತನ್ನ ಮಾಲೀಕ ಸಾವನ್ನಪ್ಪಿದ ಆಸ್ಪತ್ರೆಯಿಂದ ಹೋಗಲು ನಿರಾಕರಿಸಿ ನಾಯಿಯೊಂದು ಅಲ್ಲೇ ಕಾಲ ಕಳೆಯುತ್ತಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಬ್ರೆಜಿಲ್‍ನ ಬೀದಿಯಲ್ಲಿ ನಾಯಿಯ ಮಾಲೀಕರಾದ ನಿರಾಶ್ರಿತ ವ್ಯಕ್ತಿಯೊಬ್ಬರ ಮೇಲೆ ಕೊಲೆ ಯತ್ನ ನಡೆದಿತ್ತು. ಅವರನ್ನ ಆಸ್ಪತ್ರೆಗೆ ರವಾನಿಸುವಾಗ ನಾಯಿ ಕೂಡ ಆಂಬುಲೆನ್ಸ್ ಹಿಂದೆ ಓಡಿಬಂದಿತ್ತು. ಆದ್ರೆ ವ್ಯಕ್ತಿ ಸಾವನ್ನಪ್ಪಿದರೂ ಕೂಡ ನಾಯಿ ಮಾತ್ರ ಆಸ್ಪತ್ರೆ ಬಿಟ್ಟು ಹೋಗ್ತಿಲ್ಲ.

    ಸೇವಾ ಸಂಸ್ಥೆಯೊಂದು ನಾಯಿಗೆ ಬೇರೆಡೆ ಆಶ್ರಯ ಕಲ್ಪಿಸಲು ಸಾಕಷ್ಟು ಬಾರಿ ಪ್ರಯತ್ನಿಸಿ ವಿಫಲವಾಗಿದೆ. ಹೊಸ ಮಾಲೀಕರ ಮನೆಯಿಂದಲೂ ನಾಯಿ ತಪ್ಪಿಸಿಕೊಂಡು ಬಂದು ತನ್ನ ಯಜಮಾನನಿಗಾಗಿ ಆಸ್ಪತ್ರೆ ಮುಂದೆ ಕಾಯುತ್ತಿದೆ.

    ಇಲ್ಲಿನ ನೋವೋ ಹಾರಿಜಾಂಟೆಯ ಸಾಂಟಾ ಕಾಸಾ ಆಸ್ಪತ್ರೆಯ ಹೊರಗಡೆ ಈ ನಾಯಿ 4 ತಿಂಗಳಿನಿಂದ ಕಾಯುತ್ತಿದೆ. ಸಾಂಟಾ ಕಾಸಾದ ಹಣಕಾಸು ನಿರ್ದೇಶಕರಾದ ಒಸ್ವಾಲ್ಡೋ ಪಲಾಟೋ ಸೊಬ್ರಿನ್ಹೋ ಅವರ ಪ್ರಕಾರ, ನಾಯಿಯ ಮಾಲೀಕರಾದ 59 ವರ್ಷದ ವ್ಯಕ್ತಿಗೆ ಚಾಕು ಇರಿದ ಬಳಿಕ ಅವರ ಜೊತೆಯಲ್ಲೇ ನಾಯಿ ಆಸ್ಪತ್ರೆಗೆ ಬಂದಿದೆ.

    ಈಗ ಅದು ಪ್ರತಿದಿನ ಆಸ್ಪತ್ರೆಯ ಹೊರಗೆ ಕುಳಿತುಕೊಳ್ಳುತ್ತದೆ. ಆಗಾಗ ಊಟ ಮತ್ತು ನೀರಿಗಾಗಿ ಮಾತ್ರ ಅತ್ತಿತ್ತ ಓಡಾಡುತ್ತದೆ. ಆದ್ರೆ ಯಾವಗ್ಲೂ ಕೊನೆಗೆ ಆಸ್ಪತ್ರೆಯ ಬಾಗಿಲ ಮುಂದೆ ಹಾಕಲಾಗಿರುವ ಹೊದಿಕೆ ಮೇಲೆ ಬಂದು ಕೂರುತ್ತದೆ ಎಂದು ಅವರು ಹೇಳಿದ್ದಾರೆ.

    ನಾಯಿಯನ್ನ ನೋಡಿ ಆಸ್ಪತ್ರೆ ಸಿಬ್ಬಂದಿ ಕೂಡ ಮರುಕಪಟ್ಟಿದ್ದಾರೆ. ಅದಕ್ಕಾಗಿ ಊಟ ಕೊಟ್ಟು, ಚಳಿಗೆ ಹೊದಿಕೆಯನ್ನೂ ತಂದು ಹಾಕಿದ್ದಾರೆ. ಈ ನಾಯಿ ತುಂಬಾ ಸಾಧು ಹಾಗೂ ಶಾಂತ ಸ್ವಭಾವದ್ದು ಎಂದು ಒಸ್ವಾಲ್ಡೋ ಹೇಳಿದ್ದಾರೆ.

    ಬೇರೆ ಕಡೆ ಆಶ್ರಯ ಕಲ್ಪಿಸಿದ ನಂತರವೂ ನಾಯಿ ಆಸ್ಪತ್ರೆ ಬಾಗಿಲ ಬಳಿ ಬಂದು ಕಾಯುತ್ತಿದ್ದುದನ್ನು ನೋಡಿ ಸಿಬ್ಬಂದಿಗಳು ಆಶ್ಚರ್ಯಪಟ್ಟಿದ್ದಾರೆ. ಆಸ್ಪತ್ರೆಗೆ ವಾಪಸ್ ಬರಲು ನಾಯಿ 3 ಕಿ.ಮೀ ಓಡಿದೆ. ಕ್ರಿಸ್ಟೀನ್ ಸಾರ್ಡೆಲ್ಲಾ ಎಂಬವರು ನಾಯಿಯ ಈ ನಿಷ್ಠೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರ ಸಮರ್ಪಣಾ ಭಾವ ನೋಡಿ ನನ್ನ ಮನಸ್ಸು ಕರಗಿತು ಎಂದು ಹೇಳಿದ್ದಾರೆ.

    ನಾಯಿ ಆಸ್ಪತ್ರೆಯ ಒಳಗೆ ಇಣುಕಿ ನೋಡುವುದನ್ನ ಕಂಡರೆ ಮಾಲೀಕ ಅದಕ್ಕಾಗಿ ಕಾಯುತ್ತಿದ್ದಾರೆ ಎಂಬಂತೆ ಅನ್ನಿಸುತ್ತದೆ ಎಂದು ಅವರು ಹೇಳಿದ್ದಾರೆ.

  • ವಿಡಿಯೋ: ಅನಕೊಂಡಾಗೆ ಬಲಿಯಾಗ್ತಿದ್ದ ನಾಯಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು

    ವಿಡಿಯೋ: ಅನಕೊಂಡಾಗೆ ಬಲಿಯಾಗ್ತಿದ್ದ ನಾಯಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು

    ಬ್ರೆಜಿಲಿಯಾ: ಅನಕೊಂಡಾ ಹಾವಿಗೆ ಆಹಾರವಾಗಿಬಿಡುತ್ತಿದ್ದ ನಾಯಿಯನ್ನ ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದ್ದು, ಇದರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿಡಿಯೋದ ಆರಂಭದಲ್ಲಿ ನದಿ ತೀರದಲ್ಲಿ ನಾಯಿಯನ್ನ ಸುತ್ತುವರಿದಿದ್ದ ದೈತ್ಯ ಅನಕೊಂಡಾವನ್ನ ಕಾಣಬಹುದು. ನಂತರ ಇಬ್ಬರು ಅಲ್ಲಿಗೆ ಬಂದು ಹಾವಿನ ಬಾಲ ಹಿಡಿದು ನೀರಿನಿಂದ ಹೊರಗೆಳೆದು ಹುಲ್ಲಿಗೆ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೊಬ್ಬ ವ್ಯಕ್ತಿ ಸೇರ್ಪಡೆಗೊಂಡು ಎಲ್ಲರೂ ಸೇರಿ ನಾಯಿಯನ್ನ ಹಾವಿನ ಹಿಡಿತದಿಂದ ಬಿಡಿಸಲು ಯತ್ನಿಸಿದ್ದಾರೆ.

    ಅವರಲ್ಲೊಬ್ಬ ವ್ಯಕ್ತಿ ಕೋಲಿನಿಂದ ಹಾವಿಗೆ ಹೊಡೆದಿದ್ದು, ಎರಡು ಮೂರು ಏಟು ತಿಂದ ಬಳಿಕ ಹಾವಿನ ಹಿಡಿತ ಸಡಿಲವಾಗಿ, ನಾಯಿ ಅದರಿಂದ ಬಿಡಿಸಿಕೊಂಡು ಬಂದು ಹಾವಿನ ಕಡೆ ಬೊಗಳಲು ಶುರು ಮಾಡಿದೆ.

    ಆಂಡ್ರೀವ್ ಬರೋ ಎಂಬವರು ಇದರ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ನಾಯಿ ಜಮೀನಿನಿಂದ ಕಾಣೆಯಾಗಿತ್ತು. ಅದಕ್ಕಾಗಿ ಹುಡುಕಾಟ ನಡೆಸಿದಾಗ ಅನಕೊಂಡಾಗೆ ಆಹಾರವಾಗಿಬಿಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ.

    ನಂತರ ಗ್ರಮಸ್ಥರು ಕೂಡಲೇ ಕಾರ್ಯಪ್ರವೃತ್ತರಾಗಿ ಅನಕೊಂಡಾದಿಂದ ಇನ್ನೇನು ಕೊಲ್ಲಲ್ಪಡುತ್ತಿದ್ದ ನಾಯಿಯ ರಕ್ಷಣೆಗೆ ಮುಂದಾದರು ಎಂದು ತಿಳಿಸಿದ್ದಾರೆ.

    https://www.youtube.com/watch?v=3x7qvzKIc7g

  • ವಿಡಿಯೋ: ಹಿಂಡು ಹಿಂಡಾದ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ರಕ್ಷಿಸಿದ್ದು ಹೀಗೆ

    ವಿಡಿಯೋ: ಹಿಂಡು ಹಿಂಡಾದ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ರಕ್ಷಿಸಿದ್ದು ಹೀಗೆ

    ಬ್ರೆಜಿಲಿಯಾ: ಕೆರೆಯ ಕೆಸರಿನಲ್ಲಿ ರಾಶಿ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ವ್ಯಕ್ತಿಯೋರ್ವ ಬಹಳ ಜಾಗರೂಕತೆಯಿಂದ ರಕ್ಷಣೆ ಮಾಡಿದ ಘಟನೆ ನಡೆದಿದೆ.

    ವ್ಯಕ್ತಿ ಕರುವನ್ನು ರಕ್ಷಣೆ ಮಾಡುತ್ತಿರುವ ದೃಶ್ಯವನ್ನು ಬ್ರೆಜಿಲ್ ನ ವ್ಯಕ್ತಿ ಸೆರೆಹಿಡಿದಿದ್ದಾರೆ. ಈ ಘಟನೆ ಅಕ್ಟೋಬರ್ 24ರಂದು ನಡೆದಿದೆ.

    ಬನಾನಲ್ ದ್ವೀಪ ಎಂಬ ದೊಡ್ಡ ನದಿ ಈಗ ಬರಗಾಲದಿಂದ ನೀರಿಲ್ಲದೆ ಬತ್ತಿ ಹೋಗಿತ್ತು. ಹೀಗಾಗಿ ಮೊಸಳೆಗಳ ಹಿಂಡು ಕೆಸರಿನಲ್ಲಿ ಹೊರಳಾಡುತ್ತಿದ್ದವು. ಇವುಗಳ ಮಧ್ಯೆ ಕರುವೊಂದು ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಮೊಸಳೆಗಳ ಹಿಂಡನ್ನು ಲೆಕ್ಕಿಸದೇ, ಭಯಪಡದೇ ಕರುವಿನ ಕಿವಿಯಲ್ಲಿ ಎಳೆದು ರಕ್ಷಿಸಿದ್ದಾರೆ. ಕಿವಿಯಲ್ಲಿ ಹಿಡಿದು ಎಳೆದಾಗ ನೋವಿನಿಂದ ನರಳಿತ್ತು. ಮೊಸಳೆಗಳಿಂದ ರಕ್ಷಿಸಿದ ತಕ್ಷಣವೇ ಕರು ಅಲ್ಲಿಂದ ಕಾಲ್ಕಿತ್ತಿದೆ.

    ಬಳಿಕ ವ್ಯಕ್ತಿಯ ತಂಡ ಆ ಕೆರೆಯಲ್ಲಿ ಏನೇನಿರಬಹುದೆಮದು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಒಂದು ಕಡೆ ಸತ್ತು ಬಿದ್ದಿರುವ ಮೊಸಳೆಗಳು ಕಾಣಸಿಗುತ್ತವೆ. ಇನ್ನೊಂದೆಡೆ ಹಸುವೊಂದು ಕೆಸರಿನಲ್ಲಿ ಸಿಲುಕಿರುವುದು ಕಂಡಿದೆ. ಅಂತೆಯೇ ಅದನ್ನು ಕೂಡ ಅವರು ಅಪಾಯದಿಂದ ರಕ್ಷಿಸಿದ್ದಾರೆ.

    https://www.youtube.com/watch?v=oFAtu8_QNQ4

  • ವಿಶ್ವದ ಅತೀ ದೊಡ್ಡ ದರೋಡೆ ಯತ್ನ ಠುಸ್- 2 ಸಾವಿರ ಕೋಟಿ ರೂ. ಕದಿಯಲು ಬ್ಯಾಂಕ್‍ಗೆ 4 ತಿಂಗಳು ಸುರಂಗ ಕೊರೆದು ಸಿಕ್ಕಿಬಿದ್ರು

    ವಿಶ್ವದ ಅತೀ ದೊಡ್ಡ ದರೋಡೆ ಯತ್ನ ಠುಸ್- 2 ಸಾವಿರ ಕೋಟಿ ರೂ. ಕದಿಯಲು ಬ್ಯಾಂಕ್‍ಗೆ 4 ತಿಂಗಳು ಸುರಂಗ ಕೊರೆದು ಸಿಕ್ಕಿಬಿದ್ರು

     

    ಸಾವೋ ಪೌಲೋ: ಬ್ಯಾಂಕ್ ಕಳ್ಳತನ ಮಾಡಲು ಸರಿಸುಮಾರು 2 ಸಾವಿರ ಅಡಿ ಸುರಂಗ ಕೊರೆದಿದ್ದ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಇಲ್ಲಿನ ಸಾವೋ ಪೌಲೋನಲ್ಲಿನ ಬ್ಯಾಂಕ್‍ನಲ್ಲಿ ಕಳ್ಳರು ದರೋಡೆಗೆ ಯತ್ನಿಸಿದ್ದರು. ಈ ಗ್ಯಾಂಗ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಸುರಂಗ ಕಾರ್ಯ ಕೊನೆ ಹಂತ ತಲುಪುವ ವೇಳೆಗೆ ಸೆಪ್ಟೆಂಬರ್ 27 ರಂದು ಒಳಗೆ ಹೋಗಲು ನಿರ್ಧರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 16 ಮಂದಿಯನ್ನ ಸೋಮವಾರದಂದು ಬಂಧಿಸಿದ್ದಾರೆ.

    ಬ್ಯಾಂಕೋ ಡೋ ಬ್ರೆಜಿಲ್‍ನ ಶಾಖೆಯೊಂದರಲ್ಲಿ ಕಳ್ಳತನ ಮಾಡಲು ಈ ಗುಂಪು ಸುರಂಗದ ಮೂಲಕ ಎಂಟ್ರಿ ಕೊಡುವ ವೇಳೆಯೇ ಪೊಲೀಸರು ದಾಳಿ ಮಾಡಿದ್ದಾರೆ. ಒಂದು ಬಿಲಿಯನ್ ರಿಯಲ್(ಅಂದಾಜು 2 ಸಾವಿರ ಕೋಟಿ ರೂ.) ಹಣ ಕಳ್ಳತನ ಮಾಡಲು ಯತ್ನಿಸಿದ್ದಾಗಿ ತಂಡ ಹೇಳಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಒಂದು ವೇಳೆ ಈ ದರೋಡೆ ನಡೆದುಬಿಟ್ಟಿದ್ದರೆ ಇದು ವಿಶ್ವದ ಅತ್ಯಂತ ದೊಡ್ಡ ದರೋಡೆಯಾಗುತ್ತಿತ್ತು ಎಂದು ಪೊಲೀಸ್ ಮುಖ್ಯಸ್ಥ ಫಾಬಿಯೋ ಪಿನ್ಹೀರೋ ಲೋಪ್ಸ್ ಇಲ್ಲಿನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಆದ್ರೆ ಈ ಕಳ್ಳರ ಗುಂಪು ಚೇಂಬರ್‍ನ ಗೋಡೆಯವರೆಗೆ ಹೋದರಾದ್ರೂ ಸೇಫ್ ಲಾಕರ್ ತಲುಪಲು ಸಾಧ್ಯವಾಗಿರಲಿಲ್ಲ. ಸುರಂಗ ಕೊರೆಯಲು ಈ ಗುಂಪು ಸುಮಾರು 8.3 ಕೋಟಿ ರೂ ಹಣ ಹೂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆಯಲು ಆರಂಭಿಸಿದ್ದರು. ಸುರಂಗದೊಳಗೆ ಫ್ಯಾನ್, ಲೈಟ್ ದೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳಿದ್ದವು. ಮರದ ತುಂಡುಗಳು ಮತ್ತು ಕಬ್ಬಿಣದ ಬಾರ್‍ಗಳನ್ನ ಸುರಂಗಕ್ಕೆ ಬಳಸಿದ್ದರು. ಇದರಲ್ಲಿ ವಯಸ್ಕ ವ್ಯಕ್ತಿಯೊಬ್ಬ ಎದ್ದುನಿಲ್ಲುವಷ್ಟು ದೊಡ್ಡದಾಗಿತ್ತು.

     

    ಇಲ್ಲಿನ ಚಾಕಾರಾ ಸಾಂಟೋ ಆಂಟೋನಿಯೋದಲ್ಲಿನ ಬಾಡಿಗೆ ಮನೆಯೊಂದರಿಂದ ಸುರಂಗ ಶುರುವಾಗಿತ್ತು. ಈ ಮನೆಯಲ್ಲಿ ಆಹಾರ ಮತ್ತು ಸಲಕರಣೆಗಳನ್ನ ಶೇಖರಣೆ ಮಾಡಲಾಗಿತ್ತು. ಬ್ಯಾಂಕ್ ಕಡೆಗೆ ಹೋಗುವ ರಸ್ತೆಯ ಕೆಳಗೆ ಸುರಂಗ ಮಾರ್ಗವನ್ನ ಕೊರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?v=LmlH2z11uio