ಬ್ರೆಸಿಲಿಯಾ: ವಿವಾಹ ನಿಗದಿಯಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿತ್ತು. ಆದರೆ ಕೆಲ ಎಡವಟ್ಟುಗಳಿಂದ ಸಂಬಂಧ ಕಡಿತವಾಗುತ್ತದೆ. ಇದರಿಂದ ತೀವ್ರ ಬೇಸರವಾದ ಹುಡುಗ ಕನ್ನಡಿಯ ಪ್ರತಿಬಿಂಬದೊಂದಿಗೆ ತನ್ನನ್ನು ತಾನೇ ವಿವಾಹವಾಗಿ ವಿಚಿತ್ರ ಖುಷಿಪಟ್ಟಿದ್ದಾರೆ. ಅಲ್ಲದೆ ಇಂದು ನಾನು ಬೇಸರದಿಂದ ಇರಬೇಕಾದ ದಿನ. ಆದರೆ ತುಂಬಾ ಖುಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಬ್ರೆಜಿಲ್‍ನ ಇಟಾಕೆರ್ ನ ಬಾಹಿಯಾದಲ್ಲಿ ಘಟನೆ ನಡೆದಿದ್ದು, ವ್ಯಕ್ತಿ ತನ್ನನ್ನು ತಾನೇ ವಿವಾಹವಾಗಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾನೆ. ಈ ಫೋಟೋಗಳು ಇದೀಗ ಸಖತ್ ವೈರಲ್ ಆಗಿವೆ. ಡಿಯಾಗೋ ರಾಬೆಲೊ ಹಾಗೂ ಮಿಟರ್ ಬ್ಯಾನೊ ಕಳೆದ ನವೆಂಬರ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಈ ವರ್ಷ ಅಕ್ಟೋಬರ್‍ನಲ್ಲಿ ವಿವಾಹವಾಗಲು ದಿನಾಂಕವನ್ನೂ ನಿಗದಿ ಮಾಡಲಾಗಿತ್ತು. ಆದರೆ ಇಬ್ಬರ ಮಧ್ಯೆ ವಿಪರೀತ ಜಗಳವಾಗಿದ್ದರಿಂದ ವಿವಾಹ ಮುರಿದು ಬಿದ್ದಿತ್ತು.
ಇದರಿಂದ ಡಿಯಾಗೋ ವಿಚಲಿತನಾಗಿದ್ದ. ವಿವಾಹವನ್ನು ನಿಲ್ಲಿಸಲೂ ಆತನಿಗೆ ಮನಸ್ಸಿರಲಿಲ್ಲ. ಅಲ್ಲದೆ ಮಿಟರ್ ಳನ್ನು ಕರೆ ತರುವ ಪ್ರಯತ್ನವನ್ನು ಸಹ ಮಾಡಲಿಲ್ಲ. ಬದಲಿಗೆ ತನ್ನನ್ನು ತಾನೇ ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಅಕ್ಟೋಬರ್ 16ರಂದು ಇಟಾಕೆರ್ ನ ಬಾಹಿಯಾದ ರೆಸಾರ್ಟ್‍ನಲ್ಲಿ ವಿವಾಹವಾಗಿದ್ದಾನೆ. ಅಲ್ಲದೆ ಈ ವಿವಾಹದಲ್ಲಿ 40ಕ್ಕೂ ಹೆಚ್ಚು ಸಂಬಂಧಿಕರು, ಸ್ನೇಹಿತರು ಆಗಮಿಸಿ ಡಿಯಾಗೋ ಜೊತೆ ಸಂಭ್ರಮಿಸಿದ್ದಾನೆ.
ಡಿಯಾಗೋ ಕನ್ನಡಿಯ ಮುಂದೆ ನಿಂತು ತನ್ನನ್ನು ತಾನೇ ವಿವಾಹವಾಗಿದ್ದು, ಈ ವೇಳೆ ಮಾತನಾಡಿದ್ದಾನೆ. ನಾನು ತಿಂಗಳುಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿದ್ದು, ನನ್ನನ್ನು ನಾನೇ ಪ್ರೋತ್ಸಾಹಿಸಿಕೊಂಡು ಹಾಗೂ ಪ್ರೀತಿಸಿಕೊಂಡು ವಿವಾಹ ಸಮಾರಂಭವನ್ನು ಏರ್ಪಡಿಸಿದ್ದೇನೆ. ಸುಮಾರು 40-50 ಜನ ಅತಿಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾನೆ. ವಿವಾಹ ಸಮಾರಂಭದಲ್ಲಿ ಮಿಟರ್ ಸಂಬಂಧಿಕರು, ಸ್ನೇಹಿತರು ಭಾಗವಹಿಸಿರಲಿಲ್ಲ.
ವಿವಾಹದ ಮೇಲೆ ನನ್ನ ಸಂತೋಷ ಅವಲಂಬಿತವಾಗಿಲ್ಲ. ಇತರರಂತೆ ನಾನೂ ಯಾವುದೇ ಹುಡುಗಿಯನ್ನು ವಿವಾಹವಾಗಿ, ಮಕ್ಕಳನ್ನೂ ಮಾಡಬಹುದಿತ್ತು ಆದರೆ ನನ್ನ ಸಂತೋಷ ಅದರ ಮೇಲೆ ಅವಲಂಬಿತವಾಗಿಲ್ಲ. ನಾನು ಈ ರೀತಿ ವಿವಾಹವಾಗಿ ಇತರರಿಗೆ ಸಂದೇಶ ರವಾನಿಸುತ್ತಿದ್ದೇನೆ. ನಾನೊಬ್ಬ ಸಂತ್ರಸ್ತನಾಗಿ ಈ ವಿವಾಹವಾಗುತ್ತಿಲ್ಲ. ವಿವಾಹವಾದರೆ ಮಾತ್ರ ಸಂತೋಷವಾಗಿರುತ್ತೇವೆ ಎಂದು ನಾನು ನಂಬಿಲ್ಲ. ನಾನು ಬೇರೆ ಯಾವ ಹುಡುಗಿಯನ್ನು ಬೇಕಾದರೂ ವಿವಾಹವಾಗಬಹುದಿತ್ತು. ಮಕ್ಕಳನ್ನು ಮಾಡಬಹುದಿತ್ತು. ಆದರೆ ನನ್ನ ಸಂತೋಷ ಅದರ ಮೇಲೆ ಅವಲಂಬಿತವಾಗಿಲ್ಲ ಎಂದು ಹೇಳಿದ್ದಾನೆ. ಈ ಮೂಲಕ ತನ್ನ ಸೋಲೋ ವಿವಾಹವನ್ನು ಸಮರ್ಥಿಸಿಕೊಂಡಿದ್ದಾನೆ.
























