Tag: brazil

  • ಟಾನ್ಸಿಲ್ ಸರ್ಜರಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬ್ರೆಜಿಲ್‌ ಮಾಜಿ ಸುಂದರಿ

    ಟಾನ್ಸಿಲ್ ಸರ್ಜರಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬ್ರೆಜಿಲ್‌ ಮಾಜಿ ಸುಂದರಿ

    ಬ್ರೆಸಿಲಿಯಾ: ಬ್ರೆಜಿಲ್‍ನ ಮಾಜಿ ಸುಂದರಿ ಗ್ಲೇಸಿ ಕೊರಿಯಾ ಟಾನ್ಸಿಲ್ ಸರ್ಜರಿ ಮಾಡಲು ಹೋಗಿ 27 ವರ್ಷದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ.

    ಕೊರಿಯಾ ಅವರು ಮಾಡೆಲ್, ಬ್ಯೂಟಿಷಿಯನ್ ಕೂಡ ಆಗಿದ್ದರು. ಕೊರಿಯಾ ಅವರು 2018ರ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಕಿರೀಟ ಪಡೆದುಕೊಂಡಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಈಕೆ ಕಳೆದ 2 ತಿಂಗಳುಗಳಿಂದ ಕೋಮಾದಲ್ಲಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಖಾಸಗಿ ಕ್ಲಿನಿಕ್‍ನಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ: ಮದುವೆ ಸಂಭ್ರಮಾಚರಣೆಯಲ್ಲಿ ವರನಿಂದ ಸ್ನೇಹಿತನ ಹತ್ಯೆ

    ಕೊರೊಯಾ ಅವರು ಟಾನ್ಸಿಲ್ ಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕೆಲವು ದಿನಗಳ ನಂತರ ಆಕೆಗೆ ಭಾರೀ ರಕ್ತಸ್ರಾವವಾಗಿತ್ತು. ಅಲ್ಲದೆ ಏಪ್ರಿಲ್ 4 ರಂದು ಹೃದಯಾಘಾತ ಸಂಭವಿಸಿತು. ಆ ಬಳಿಕದಿಂದ ಗ್ಲೇಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇದೀಗ ಅವರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಇನ್ ಸ್ಟಾಗ್ರಾಮ್ ನಲ್ಲಿ 56,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ರಿಯೊ ಡಿ ಜನೈರೊದಿಂದ ಈಶಾನ್ಯಕ್ಕೆ 120 ಮೈಲಿ ದೂರದಲ್ಲಿರುವ ಬ್ರೆಜಿಲ್‍ನ ಅಟ್ಲಾಂಟಿಕ್ ಕರಾವಳಿಯಲ್ಲಿರುವ ಮಕೇ ಎಂಬ ನಗರದಲ್ಲಿ ಈಕೆ ಜನಿಸಿದ್ದಾರೆ. ಇದನ್ನೂ ಓದಿ: ಭಾರತದ ಸೈನಿಕರೊಂದಿಗೆ ದುರ್ವರ್ತನೆ – ಚೀನಾ ತರಾಟೆಗೆ ತೆಗೆದುಕೊಂಡ ಆಸ್ಟ್ರೇಲಿಯಾ

    Live Tv

  • ಈಕೆಯ ಸಾಧನೆಗೆ ಶ್ರವಣದೋಷವೂ ಅಡ್ಡಿಯಾಗಿಲ್ಲ – ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟ ಯುವತಿ

    ಈಕೆಯ ಸಾಧನೆಗೆ ಶ್ರವಣದೋಷವೂ ಅಡ್ಡಿಯಾಗಿಲ್ಲ – ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟ ಯುವತಿ

    ಧಾರವಾಡ/ಬ್ರೆಜಿಲ್: ಯುವತಿಯೊಬ್ಬಳು ಕಿವಿ ಕೇಳಿಸದಿದ್ರೂ ಬ್ರೆಜಿಲ್‍ನ ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟಿದ್ದಾಳೆ.

    ಸಾಧನೆ ಮಾಡಿದ ಯುವತಿ ಹೆಸರು ನಿಧಿ ಸುಲಾಖೆ. ಧಾರವಾಡದ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಮಾಡುತ್ತಿರುವ ನಿಧಿಗೆ ಶ್ರವಣದೋಷವಿದೆ. ಈ ಸಮಸ್ಯೆ ಇವಳ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬ್ರೆಜಿಲ್‍ನಲ್ಲಿ ನಡೆದ ಟೆಕ್ವಾಂಡೋದಲ್ಲಿ ಈಗ ಈಕೆ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿದ್ದಾಳೆ.

    ಅಲ್ಲದೇ ನಿಧಿಗೆ ‘ನನಗೆ ಕಿವಿ ಕೇಳಿಸಲ್ಲ’ ಎಂಬ ಭಾವನೆ ಸಹ ಇಲ್ಲ. ಸಾಧನೆ ಮಾಡಬೇಕು ಎಂಬ ಛಲ ಮಾತ್ರ ಇವಳಲ್ಲಿದೆ. ಧಾರವಾಡ ದಾನೇಶ್ವರಿನಗರದ ನಿಧಿ ಹುಟ್ಟಿದಾಗಿನಿಂದ ಶ್ರವಣದೋಷದ ಸಮಸ್ಯೆ ಎದುರಿಸುತ್ತಿದ್ದಾಳೆ. ಇವರ ಪೋಷಕರಿಗೆ ಈ ಮಗು ಬಗ್ಗೆ ಸಾಕಷ್ಟು ಜನ ಬೇರೆ ರೀತಿ ಮಾತನಾಡಿದ್ರು, ತಂದೆಗೆ ಮಾತ್ರ ಮಗಳನ್ನು ಸಾಧಕಿ ಮಾಡಬೇಕು ಎಂಬ ಛಲವಿತ್ತು.

    ನಿಧಿ ಅಥ್ಲೆಟಿಕ್ಸ್‌ನಲ್ಲಿ ಮುಂದೆ ಬರಬೇಕು ಎಂದು ಕೋಚಿಂಗ್ ಕೊಡಿಸಿದ್ದಾರೆ. ಅದೇ ರೀತಿ ಆಕೆ 100 ಹಾಗೂ 200 ಮೀಟರ್ ಓಟದಲ್ಲಿ ಮೆಡಲ್ ಸಹ ತಂದಿದ್ದಳು. ಅಲ್ಲದೇ ಜಾವೆಲಿನ್ ಥ್ರೋನಲ್ಲಿ ಕೂಡಾ ಎತ್ತಿದ ಕೈ. ನಿಧಿ ತಂದೆ ಆಕೆಯ ಸುರಕ್ಷತೆಯನ್ನು ಆಕೆಯೇ ನೋಡಿಕೊಳ್ಳಬೇಕು ಎಂದು ಟೆಕ್ವಾಂಡೋಗೆ ಸೇರಿಸಿದರು. ಕಳೆದ ತಿಂಗಳು ಬ್ರೆಜಿಲ್‍ನಲ್ಲಿ ಶ್ರವಣದೋಷ ಉಳ್ಳವರ ಒಲಂಪಿಕ್ ಇತ್ತು.

    ನಿಧಿ 67 ಕಿಲೋ ವಿಭಾಗದಲ್ಲಿ ಭಾಗವಹಿಸಿದ್ದು, ಭಾರತವನ್ನು ಪ್ರತಿನಿಧಿಸಿದ್ದಳು. ಈ ಮೂಲಕ ನಾಲ್ಕನೇ ಸ್ಥಾನ ಗಿಟ್ಟಿಸಿದ್ದಾಳೆ. ಅಲ್ಲದೇ ಇತ್ತೀಚೆಗೆ ಬ್ರೇಜಿಲ್‍ನಲ್ಲಿ ಮಾರ್ಷಲ್ ಆರ್ಟನ ಟೆಕ್ವಾಂಡೋದಲ್ಲಿ ನಿಧಿ ಭಾರತಕ್ಕೆ ನಾಲ್ಕನೇ ಸ್ಥಾನ ತಂದು ಕೊಟ್ಟಿದ್ದಾಳೆ. ಮೊದಲ ಸ್ಥಾನದಲ್ಲಿ ಟರ್ಕಿ, ಮೆಕ್ಸೊಕೋ ಎರಡನೇ ಸ್ಥಾನದಲ್ಲಿದೆ. ಒಟ್ಟು 70 ರಾಷ್ಟ್ರ ಈ ಕ್ರೀಡೆಯಲ್ಲಿ ಭಾಗವಹಿಸಿದ್ದವು. ಇದನ್ನೂ ಓದಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್ 

    ಈ ಸಾಧನೆಗೆ ಸರ್ಕಾರಿ ಕಾಲೇಜ್ ಕೂಡಾ ಹೆಮ್ಮೆಪಟ್ಟಿದೆ. ಅಲ್ಲದೇ ಈ ಹಿಂದೆ ನಿಧಿ ಮಾಡಿದ ಎಲ್ಲ ಸಾಧನೆಗಳನ್ನ ಕೂಡಾ ಇವರ ಗಮನಕ್ಕೆ ಇತ್ತು. ಇದೇ ಕ್ರೀಡಾ ಕೋಟಾದಲ್ಲಿ ನಿಧಿ ಸರ್ಕಾರಿ ಕಾಲೇಜ್ ಪ್ರವೇಶ ಕೂಡಾ ಪಡೆದಿದ್ದಾಳೆ. ಇವಳಿಗೆ ಸರ್ಕಾರದಿಂದ ಸಹಾಯ ಸಿಕ್ಕರೆ, ಆಕೆ ಉಚಿತ ಕೋಚಿಂಗ್ ಪಡೆದು ಇನ್ನೂ ದೊಡ್ಡ ಸಾಧನೆ ಮಾಡಬಲ್ಲಳು ಎಂಬುದು ಕೂಡಾ ಇಲ್ಲಿಯ ಶಿಕ್ಷಕಿಯರ ಆಶಯವಾಗಿದೆ.

    ಒಟ್ಟಿನಲ್ಲಿ ತಂದೆ ಕನಸನ್ನು ನನಸು ಮಾಡಲು ನಿಧಿಗೆ ಯಾವುದೇ ಶ್ರವಣದೋಷದ ಅಡ್ಡಿ ಬಂದಿಲ್ಲ. ಅಲ್ಲದೇ ಇಡೀ ಜಗತ್ತಿಗೆ ನಿಧಿ ನಮ್ಮ ಭಾರತ ಏನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ನಿಧಿ ಈ ಸಾಧನೆ ಮಾಡಿ ಬಂದ ಮೇಲೆ ಪ್ರಧಾನಿ ಮೋದಿ ಕೂಡಾ ಶ್ಲಾಘಿಸಿದ್ದಾರೆ. ಇವರ ಜೊತೆ ಮೋದಿ ಫೋಟೋ ತೆಗೆಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

  • ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

    ವಿಮಾನ ನಿಲ್ದಾಣದಲ್ಲಿನ ಡಿಸ್ಪ್ಲೆ ಹ್ಯಾಕ್- ಅಶ್ಲೀಲ ವೀಡಿಯೋ ಪ್ರಸಾರ

    ಬ್ರೆಸಿಲಿಯಾ: ಬ್ರೆಜಿಲ್‍ನ ರಿಯೊ ಡಿ ಜನೈರೊದಲ್ಲಿನ ವಿಮಾನ ನಿಲ್ದಾಣದ ಎಲೆಕ್ಟ್ರಾನಿಕ್ ಡಿಸ್ಪ್ಲೆ ಹ್ಯಾಕ್ ಮಾಡಿ, ಅದರಲ್ಲಿ ಅಶ್ಲೀಲ ವೀಡಿಯೋ ಪ್ರದರ್ಶನವಾದ ಘಟನೆ ನಡೆದಿದೆ.

    ಬ್ರೆಜಿಲ್‍ನ ಏರ್‌ಪೋರ್ಟ್ ಆಪರೇಟರ್, ಇನ್ಫ್ರಾರೋ, ಮಾನಿಟರ್‌ಗಳನ್ನು ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿತ್ತು. ಇದು ಜಾಹೀರಾತು ಪರದೆಗಳಾಗಿವೆ. ಜಾಹಿರಾತುಗಳ ಜೊತೆಗೆ ವಿಮಾನದ ಮಾಹಿತಿ ಪ್ರಕಟವಾಗುತ್ತಿತ್ತು. ಆದರೆ ಮಾಹಿತಿಯ ಬದಲಿಗೆ ಅಶ್ಲೀಲ ವೀಡಿಯೋ ಪ್ರಸಾರಗೊಂಡಿದೆ.

    ಘಟನೆಗೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡಿದೆ ಮತ್ತು ಫೆಡರಲ್ ಪೊಲೀಸರಲ್ಲಿ ಪ್ರಕರಣ ದಾಖಲಿಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಳಿಕ ಹ್ಯಾಕ್ ಆಗಿದ್ದ ಡಿಸ್ಪ್ಲೆಗಳನ್ನು ಆಫ್ ಮಾಡಿಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಜನರು ಮಕ್ಕಳೊಂದಿಗೆ ಪ್ರಯಾಣಿಸುವಾಗ ಮುಜುಗರವನ್ನು ಉಂಟುಮಾಡುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರೀತಿಗೆ ಪ್ರೀತಿ ಹರಿಸುವವರು ಹಿಂದೂಗಳು, ಪ್ರೀತಿಗೆ ರಕ್ತ ಹರಿಸುವವರು ಮುಸ್ಲಿಂ ಗೂಂಡಾಗಳು: ಶಿವಚಾರ್ಯ ಸ್ವಾಮೀಜಿ

  • 9 ಮಂದಿ ಮದುವೆಯಾದ ಮಾಡೆಲ್, ಒಬ್ಬಳಿಗೆ ಡಿವೋರ್ಸ್, ಮತ್ತಿಬ್ಬರನ್ನು ಮದುವೆಯಾಗುವ ಬಯಕೆ

    9 ಮಂದಿ ಮದುವೆಯಾದ ಮಾಡೆಲ್, ಒಬ್ಬಳಿಗೆ ಡಿವೋರ್ಸ್, ಮತ್ತಿಬ್ಬರನ್ನು ಮದುವೆಯಾಗುವ ಬಯಕೆ

    ಬ್ರೆಸಿಲಿಯಾ: ಬ್ರೆಜಿಲ್‍ನ ಮಾಡೆಲ್‍ವೊಬ್ಬ 9 ಮಂದಿ ಯುವತಿಯರನ್ನು ಮದುವೆಯಾಗಿದ್ದನು. ಇದೀಗ ಅವರ ಪತ್ನಿಯಲ್ಲಿ ಒಬ್ಬರು ಡಿವೋರ್ಸ್ ಕೊಡಲು ಮುಂದಾಗಿದ್ದಾರೆ.

    ಬ್ರೆಜಿಲ್‍ನ ಈ ಮಾಡೆಲ್ ಹೆಸರು ಆರ್ಥರ್ ಒ ಉರ್ಸೋ. 9 ಯುವತಿಯರನ್ನು ಏಕಕಾಲದಲ್ಲಿ ಮದುವೆಯಾಗಿದ್ದನು. ಹಾಗೇ, ಇನ್ನೊಬ್ಬಳನ್ನು ವಿವಾಹವಾಗುವ ಮೂಲಕ 10 ಹೆಂಡಿರ ಮುದ್ದಿನ ಗಂಡನಾಗಬೇಕು ಎಂಬ ಕನಸನ್ನೂ ಹೊಂದಿದ್ದರು. ಆದರೆ ಇವರ ಪತ್ನಿಯರಲ್ಲಿ ಒಬ್ಬರಾದ ಅಗಾಥಾ ಉರ್ಸೋರನ್ನು ಬಿಟ್ಟು ಹೊರಟಿದ್ದಾರೆ.

    ಬ್ರೆಜಿಲ್‍ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇಲ್ಲದೆ ಇದ್ದರೂ ಕೂಡ, ತಾನು ಬಹುಪತ್ನಿತ್ವವನ್ನೇ ಇಷ್ಟಪಡುತ್ತೇನೆ. ಏಕಪತ್ನಿತ್ವದ ವಿರುದ್ಧ ಪ್ರತಿಭಟಿಸುತ್ತೇನೆ. 10 ಪತ್ನಿಯರನ್ನು ಹೊಂದುವ ನನ್ನ ಕನಸನ್ನು ನನಸು ಮಾಡಿಕೊಳ್ಳದೆ ಬಿಡುವುದಿಲ್ಲ. ಆಕೆಯ ನಿರ್ಧಾರದಿಂದ ಬೇಸರಗೊಂಡಿದ್ದೇನೆ. ಈ ಬಗ್ಗೆ ನೋವಾದರೂ ಡಿವೋರ್ಸ್‍ಗೆ ಸಮ್ಮತಿ ನೀಡುವುದಾಗಿ ಉರ್ಸೋ ಹೇಳಿಕೊಂಡಿದ್ದಾರೆ.

    ನಾನು ಅವಳಿಗೊಬ್ಬಳಿಗೇ ಮಾತ್ರ ಸೇರಿದವನಾಗಿರಬೇಕು ಎಂದು ನನ್ನ ಪತ್ನಿ ಬಯಸುತ್ತಾಳೆ. ಏಕಪತ್ನಿತ್ವ ಅನುಸರಿಸಬೇಕು ಎಂಬುದು ಆಕೆ ಬಯಕೆ. ಆದರೆ ನಾನಿದಕ್ಕೆ ಒಪ್ಪುವುದಿಲ್ಲ. ನಾನು 9 ಪತ್ನಿಯರೊಂದಿಗೆ ಇರಲು ಇಷ್ಟಪಡುತ್ತೇನೆ. ಎಲ್ಲವನ್ನೂ ಹಂಚಿಕೊಳ್ಳಲೇಬೇಕು. ಆಕೆಗೆ ಡಿವೋರ್ಸ್ ಕೊಡುವ ಬಗ್ಗೆ ಬೇಸರವಿದೆ. ಹಾಗಂತ ವಿಚ್ಛೇದನ ನೀಡದೆ ಇರುವುದಿಲ್ಲ. ಆದರೆ ಹೀಗೆ ದಾಂಪತ್ಯ ಜೀವನ ನಡೆಸುವುದರಿಂದ ನಾನು ಏಕಪತ್ನಿತ್ವದ ಸುಖದಿಂದ ವಂಚಿತಳಾಗುತ್ತಿದ್ದೇನೆ ಎಂದು ಆಕೆ ಹೇಳಿದ್ದು ಕೇಳಿ ನನಗೆ ಅಚ್ಚರಿಯಾಯಿತು. ಶೀಘ್ರದಲ್ಲೇ ಇನ್ನಿಬ್ಬರು ಮದುವೆಯಾಗುತ್ತೇನೆ ಎಂದೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

    ಒಬ್ಬಳ ನಿರ್ಧಾರಕ್ಕೆ ಉರ್ಸೋ ಉಳಿದ 8 ಪತ್ನಿಯರು ವಿರೋಧ ವ್ಯಕ್ತಪಡಿಸಿರೆ. ಆಕೆ ಕೇವಲ ಒಂದು ಪ್ರಯೋಗಕ್ಕಾಗಿ ಉರ್ಸೋನನ್ನು ವಿವಾಹವಾಗಿದ್ದಾಳೆ ಬಿಟ್ಟರೆ, ಆಕೆಗೆ ನಿಜಕ್ಕೂ ಉರ್ಸೋ ಮೇಲೆ ಪ್ರೀತಿಯಿಲ್ಲ ಎನ್ನುತ್ತಿದ್ದಾರೆ.

     

  • ಕಾರಿನ ಬಿಡಿ ಭಾಗಗಳಿಂದ ಹೆಲಿಕಾಪ್ಟರ್ ರೆಡಿ – ವೀಡಿಯೋ ವೈರಲ್

    ಕಾರಿನ ಬಿಡಿ ಭಾಗಗಳಿಂದ ಹೆಲಿಕಾಪ್ಟರ್ ರೆಡಿ – ವೀಡಿಯೋ ವೈರಲ್

    ರಿಯೋ ಡಿ ಜನೈರೋ: ಕಾರಿನ ಸ್ಕ್ರ್ಯಾಪ್ ಭಾಗಗಳಿಂದ ಯುವಕನೊಬ್ಬ ಹೆಲಿಕಾಪ್ಟರ್ ರೆಡಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

    ಬ್ರೆಜಿಲ್‍ನ ಯುವಕ ರಿಯೊ ಗ್ರಾಂಡೆ ಡೊ ನಾರ್ಟೆನ ಕಾರಿನ ಸ್ಕ್ರ್ಯಾಪ್ ಭಾಗಗಳನ್ನು ಉಪಯೋಗಿಸಿಕೊಂಡು ಒಂದು ಹೆಲಿಕಾಪ್ಟರ್ ತಯಾರಿಸಿದ್ದಾನೆ. ಅದು ಅಲ್ಲದೇ ಈ ಹೆಲಿಕಾಪ್ಟರ್ ಹಾರಾಡುವುದನ್ನು ತೋರಿಸಲು ರಸ್ತೆ ಮಧ್ಯೆ ಟೆಸ್ಟ್ ಮಾಡಿದ್ದು, ಯಶಸ್ವಿಯಾಗಿದೆ. ದೃಶ್ಯವನ್ನು ಸ್ಥಳಿಯರು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

    ಈ ವೀಡಿಯೋ ನೋಡಿದ ನೆಟ್ಟಿಗರು ಯುವಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸೆಯ ಕಮೆಂಟ್ ಮಾಡುತ್ತಿದ್ದಾರೆ. ಪ್ರಸ್ತುತ ಈ ವೀಡಿಯೋ ವಿಶ್ವದಾದ್ಯಂತ ವೈರಲ್ ಆಗಿದೆ.

    ಬ್ರೆಜಿಲ್‍ನಲ್ಲಿ ಈ ವೀಡಿಯೋವನ್ನು ಚಿತ್ರೀಕರಿಸಲಾಗಿದ್ದು, ಹೆಲಿಕಾಪ್ಟರ್ ನಿರ್ಮಾಣದಲ್ಲಿ ಮೋಟಾರು ಸೈಕಲ್‍ಗಳು, ಟ್ರಕ್‍ಗಳು, ಕಾರುಗಳು ಮತ್ತು ಬೈಸಿಕಲ್‍ಗಳ ಭಾಗಗಳನ್ನು ಬಳಸಲಾಗಿದೆ. ವೋಕ್ಸ್‍ವ್ಯಾಗನ್ ಬೀಟಲ್‍ನ ಎಂಜಿನ್‍ನಿಂದ ಇದನ್ನು ಚಲಾಯಿಸಬಹುದು.

    ವೀಡಿಯೋದಲ್ಲಿ, ಜೊವೊ ಡಯಾಸ್ ನಗರದ ನಿವಾಸಿ ಜೆನೆಸಿಸ್ ಗೋಮ್ಸ್ ಅವರು ಹೆಲಿಪ್ಯಾಡ್ ಆಗಿ ರಸ್ತೆಯನ್ನು ಬಳಸಿಕೊಂಡಿದ್ದು, ಹೆಲಿಕಾಪ್ಟರ್ ಅನ್ನು ಸ್ವಲ್ಪ ದೂರಕ್ಕೆ ತೆಗೆದುಕೊಂಡು ಹೋಗಿ ನಂತರ, ಅದನ್ನು ಹಾರಿಸುತ್ತಾರೆ. ಇದನ್ನು ನೋಡಿದ ಅಲ್ಲಿನ ಜನರು ದಂಗುಬಡಿದಂತೆ ನಿಂತುಕೊಳ್ಳುತ್ತಾರೆ.

    ಯಾರಿದು?
    ಗೋಮ್ಸ್ ಬಾಲ್ಯದಿಂದಲೂ ವಾಯುಯಾನದಲ್ಲಿ ಆಸಕ್ತಿ ಹೊಂದಿದ್ದು, ಯಾವಾಗಲೂ ಹೆಲಿಕಾಪ್ಟರ್ ಸವಾರಿ ಮಾಡಲು ಬಯಸುತ್ತಿರುತ್ತಾರೆ. ಆದರೆ ಅವರಿಗೆ ಅವಕಾಶ ಸಿಗದಿದ್ದಾಗ, ತಮ್ಮದೇ ಆದ ಹೆಲಿಕಾಪ್ಟರ್ ನಿರ್ಮಿಸಲು ನಿರ್ಧರಿಸುತ್ತಾರೆ. ಈ ವೀಡಿಯೋದಲ್ಲಿರುವ ಹೆಲಿಕಾಪ್ಟರ್ ತನ್ನ ಸ್ನೇಹಿತನದು ಎಂದು ಗೋಮ್ಸ್ ನಂತರ ದೃಢಪಡಿಸಿದ್ದು, ಮುಂದೆ ನಾನೇ ನನ್ನ ವೈಯಕ್ತಿಕ ಹೆಲಿಕಾಪ್ಟರ್ ಅನ್ನು ನಿರ್ಮಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ

    ನನ್ನ ಸ್ನೇಹಿತನ ಬಳಿ ಗೈರೊಸ್ಕೋಪ್ ಇತ್ತು. ಇದು ಮೊದಲ ಬಾರಿಗೆ ನಾವು ಜೋವೊ ಡಯಾಸ್ ನಗರದ ಮೇಲೆ ಎತ್ತರಕ್ಕೆ ಹಾರಿದೆವು. ಇದು ನಿಜವಾಗಿಯೂ ಚೆನ್ನಾಗಿತ್ತು. ಎಲ್ಲ ಸ್ಕ್ರ್ಯಾಪ್ ವಸ್ತುಗಳನ್ನು ಖರೀದಿಸಿ ಈ ಹೆಲಿಕಾಪ್ಟರ್ ಅನ್ನು ನಿರ್ಮಿಸಲಾಗಿತ್ತು ಎಂದು ತಿಳಿಸಿದರು.

  • ಪತಿಯನ್ನು ಕೊಂದು ಸೂಟ್‍ಕೇಸ್‍ನಲ್ಲಿ ಸಾಗಿಸಿದಳು

    ಪತಿಯನ್ನು ಕೊಂದು ಸೂಟ್‍ಕೇಸ್‍ನಲ್ಲಿ ಸಾಗಿಸಿದಳು

    – ಬೇರೆ ಹೆಣ್ಣಿನ ಸಂಬಂಧ ಹೊಂದಿದ್ದ ಪತಿ

    ಬ್ರೆಸಿಲಿಯಾ: ತನ್ನ ಗಂಡನನ್ನೇ ಕೊಂದು ಮೃತ ದೇಹವನ್ನು ಸೂಟ್‍ಕೇಸ್‍ನಲ್ಲಿರಿಸಿ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಮಾರ್ಕೋಸ್ ಮಟ್ಸುನಾಗಾ ಮೃತನಾಗಿದ್ದಾನೆ. ಎಲೀಟ್ ಮುಟ್ಸುನಾಗಾ ಪತಿಯನ್ನು ಕೊಲೆ ಮಾಡಿದ್ದಾಳೆ. ಮಹಿಳೆ ತನ್ನ ಪತಿಯ ಮೇಲಿನ ಸಿಟ್ಟು ತೀರಿಸಲು ಕೊಲೆ ಮಾಡಿದ್ದಾಳೆ. ನಂತರ ಸೂಟ್‍ಕೇಸ್‍ನಲ್ಲಿ ಪತಿಯ ತುಂಡಾದ ದೇಹವನ್ನು ಸಾಗಿಸುತ್ತಿರುವಾಗ ಪೊಲೀಸರಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಇದನ್ನೂ ಓದಿ: ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

    ಎಲೀಟ್ ಮುಟ್ಸುನಾಗಾ ಮನೆಯವರ ಹಾಗೂ ತನ್ನ ಇಚ್ಛೆಯಂತೆ ಮಾರ್ಕೋಸ್‍ನನ್ನು ಮದುವೆಯಾಗುತ್ತಾಳೆ. ಗಂಡ ಬೇರೊಬ್ಬ ಯುವತಿ ಜೊತೆಗೆ ಸಂಬಂಧದಲ್ಲಿದ್ದನು. ಈ ವಿಚಾರವಾಗಿ ನೊಂದ ಎಲೀಟ್ ತನ್ನ ಪತಿಯನ್ನೇ ಮುಗಿಸಲು ಪ್ಲಾನ್ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

    ಎಲೀಟ್ ಮುಟ್ಸುನಾಗಾ ತನ್ನ ಬಾಲ್ಯ ಜೀವನವನ್ನು ಕಷ್ಟದಿಂದ ಕಳೆದವಳಾಗಿದ್ದಳು. ಮಲೆತಂದೆಯ ಮನೆಯಲ್ಲಿ ಬೆಳೆದ ಆಕೆಗೆ ಶಾಲೆಯ ಫೀಸ್ ಕಟ್ಟಲು ಹಣವಿರಲಿಲ್ಲ. ಕೊನೆಗೆ ಲೈಂಗಿಕ ವ್ಯವಹಾರ ನಡೆಸಲು ಮುದಾಗುತ್ತಾಳೆ. ಈ ಮೂಲಕ ಹಣ ಸಂಪಾದಿಸಿ ಶಾಲೆ ಫೀಸ್ ಕಟ್ಟುತ್ತಾಳೆ. ಈ ವೇಳೆ ಜಪಾನ್ ಮೂಲದ ಉದ್ಯಮಿ ಮಾರ್ಕೋಸ್ ಮುಟ್ಸುನಾಗಾರನ್ನು ಭೇಟಿಯಾಗುತ್ತಾಳೆ. ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತದೆ, ಆದರೆ ಆತನಿಗೆ ಅದಾಗಲೇ ಒಂದು ಮದುವೆಯಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎಲೀಟ್ ಜೊತೆ ನೆಲೆಸುತ್ತಾನೆ. ಇಬ್ಬರು ಒಟ್ಟಿಗೆ ಜೀವನ ನಡೆಸಲು ಆರಂಭಿಸುತ್ತಾರೆ. ಇದರ ನಡುವೆ ಮಗುವೊಂದಕ್ಕೆ ಜನ್ಮ ನೀಡುತ್ತಾಳೆ. ಆದರೆ ಈತ ಮತ್ತೊಂದು ಹೆಣ್ಣಿನ ಸಂಬಂಧವನ್ನು ಬೆಳೆಸುತ್ತಾನೆ. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಇದನ್ನೂ ಓದಿ:  ಸರಳ ದಸರಾ – ಅರಮನೆಗೆ ಬಂದ ಜಂಬೂಸವಾರಿ

    ಒಂದು ದಿನ ರೂಮಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಗಂಡನಿಗೆ ಶೂಟ್ ಮಾಡುತ್ತಾಳೆ. ಸತ್ತ ಗಂಡನ ಶವನನ್ನು ಮನೆಯಿಂದ ಹೊರ ಹಾಕಲು ತುಂಡು ತುಂಡಾಗಿ ಕತ್ತರಿಸುತ್ತಾಳೆ. ನಂತರ 3 ಸೂಟ್‍ಕೇಸ್‍ನಲ್ಲಿ ತುಂಬಿಸಿ ಬೇರೆ ಕಡೆಗೆ ಸಾಗಿಸುತ್ತಿರುತ್ತಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಅನುಮಾನಗೊಂಡು ಪೊಲೀಸರು ವಿಚಾರಿಸಿದಾಗ ಸೂಟ್‍ಕೇಸ್‍ನಲ್ಲಿ ಶವ ಇರುವುದು ಪತ್ತೆಯಾಗಿದೆ.

  • ಪತಿಯ ಮರ್ಮಾಂಗ ಕತ್ತರಿಸಿ, ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದ್ಳು!

    ಪತಿಯ ಮರ್ಮಾಂಗ ಕತ್ತರಿಸಿ, ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದ್ಳು!

    – ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿ

    ಬ್ರಸಿಲ್ಲಾ: 33 ವರ್ಷದ ಮಹಿಳೆಯ ಪತಿಯ ಮರ್ಮಾಂಗ ಕತ್ತರಿಸಿ ಅದನ್ನ ಬೇಯಿಸಿದ ಆಘಾತಕಾರಿ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.

    ಡಯಾನೆ ಕ್ರಿಸ್ಟಿನಾ ಪತಿಯನ್ನು ಕೊಲೆಗೈದ ಮಹಿಳೆ. ಸದ್ಯ ಪೊಲೀಸರು ಕ್ರಿಸ್ಟಿನಾಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಪತಿ ಆಂಡ್ರೆ ಜೊತೆ ಕ್ರಿಸ್ಟಿನಾ ಬ್ರೆಜಿಲ್ ನ ಸಾವೋ ಗೋನ್ಕಲೋದಲ್ಲಿ ವಾಸವಾಗಿದ್ದಳು. ಇಬ್ಬರ ಮಧ್ಯೆ ಸದಾ ಗಲಾಟೆ ನಡೆಯುತ್ತಿತ್ತು ಎಂದು ವರದಿಯಾಗಿದೆ.

    ಪೊಲೀಸರು ಕೊಲೆಯ ವಿಷಯ ತಿಳಿದ ಕ್ರಿಸ್ಟಿನಾ ಮನೆಗೆ ತೆರಳಿದಾಗ ಭಯಾನಕ ದೃಶ್ಯ ಕಾಣಿಸಿದೆ. ಆಂಡ್ರೆ ಮರ್ಮಾಂಗ ಕತ್ತರಿಸಿ, ಪ್ಯಾನ್ ನಲ್ಲಿ ಹಾಕಿ ಫ್ರೈ ಮಾಡಲಾಗಿತ್ತು. ದಂಪತಿ 10 ವರ್ಷಗಳಿಂದ ಜೊತೆಯಾಗಿದ್ದು, ಎರಡು ವರ್ಷಗಳಿಂದ ಪ್ರತ್ಯೇಕವಾಗಿರಲು ಆರಂಭಿಸಿದ್ದರು. ಆದ್ರೆ ಕೆಲ ದಿನಗಳ ಹಿಂದೆ ಮತ್ತೆ ಇಬ್ಬರು ಜೊತೆಯಾಗಿರಲು ಆರಂಭಿಸಿದ್ದರು.

    ಈ ನಡುವೆ ಇಬ್ಬರ ನಡುವೆ ವಿಚ್ಛೇದನ ಕುರಿತು ಜಗಳ ಆರಂಭಗೊಂಡಿದೆ. ಬೆಳಗಿನ ಜಾವ 4 ಗಂಟೆಗೆ ಅಡುಗೆ ಮನೆಯಿಂದ ಚಾಕು ತಂದು ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದಾಳೆ. ದಂಪತಿ ಜೊತೆಯಾಗಿ ಪಿಜ್ಜಾ ಶಾಪ್ ನಡೆಸುತ್ತಿದ್ದು, 8 ವರ್ಷದ ಮಗ ಮತ್ತು 5 ವರ್ಷದ ಮಗಳಿದ್ದಾಳೆ.

    ಆಂಡ್ರೆಗೆ ಪತ್ನಿಯಿಂದ ಪ್ರತ್ಯೇಕವಾಗಲು ಇಷ್ಟವಿರಲಿಲ್ಲ. ಕ್ರಿಸ್ಟಿನಾ ದೂರ ಆಗಿದ್ದರಿಂದ ಮಾನಸಿಕ ಒತ್ತಡದಲ್ಲಿದ್ದನು. ಒಂದು ವೇಳೆ ದೂರವಾದ್ರೆ ಬೇರೆ ಯಾರ ಜೊತೆಯೂ ನೀನು ಇರುವಂತಿಲ್ಲ ಎಂದು ಕ್ರಿಸ್ಟಿನಾಗೆ ಷರತ್ತು ವಿಧಿಸಿದ್ದನು. ಅದೇ ರೀತಿ ಪತ್ನಿಗೆ ಹಲವು ಕೊಲೆ ಬೆದರಿಕೆ ಸಹ ಹಾಕಿದ್ದನು. ಕ್ರಿಸ್ಟಿನಾ ತನ್ನ ರಕ್ಷಣೆಗಾಗಿ ಕೊಲೆ ಮಾಡಿದ್ದಾಳೆ. ಪತಿಯನ್ನ ಕೊಲೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ತಾವಾಗಿಯೇ ಪೊಲೀಸರಿಗೆ ಶರಣಾಗಿದ್ದು, ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎಂದು ಕ್ರಿಸ್ಟಿನಾ ಪರ ವಕೀಲ ಹೇಳಿದ್ದಾರೆ.

  • ಕೊರೊನಾ ನಿಯಮ ಉಲ್ಲಂಘಿಸಿದ ಬ್ರೆಜಿಲ್ ಅಧ್ಯಕ್ಷರಿಗೆ ದಂಡ ಪ್ರಯೋಗ

    ಕೊರೊನಾ ನಿಯಮ ಉಲ್ಲಂಘಿಸಿದ ಬ್ರೆಜಿಲ್ ಅಧ್ಯಕ್ಷರಿಗೆ ದಂಡ ಪ್ರಯೋಗ

    ಬ್ರೆಜಿಲ್: ವಿವಿಧ ದೇಶಗಳಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸುತ್ತಿದೆ. ಈ ನಡುವೆ ಪ್ರತಿಯೊಂದು ದೇಶವು ಕೂಡ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸುತ್ತಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ಧ ದಂಡ ಪ್ರಯೋಗ ಚಾಲ್ತಿಯಲ್ಲಿದೆ. ಇದೀಗ ಮಾಸ್ಕ್ ಧರಿಸದೆ ಬ್ರೆಜಿಲ್ ಅಧ್ಯಕ್ಷರೇ ದಂಡ ಕಟ್ಟುವಂತಹ ಸ್ಥಿತಿ ಬಂದಿದೆ.

    ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಮರ್ನಾಹೋದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಆರೋಗ್ಯ ಇಲಾಖೆ ಕೊರೊನಾ ನಿಯಮ ಉಲ್ಲಂಘಿಸಿದ ದೇಶದ ಅಧ್ಯಕ್ಷರಿಗೆ ದಂಡ ಪ್ರಯೋಗ ಮಾಡಿ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಪ್ರತಿಪಾದಿಸಿದೆ.

    ಜೈರ್ ಬೊಲ್ಸನಾರೋ ಅವರಿಗೆ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲು 15ದಿನ ಕಾಲಾವಕಾಶ ಕಲ್ಪಿಸಲಾಗಿದ್ದು, ಬಳಿಕ ದಂಡ ಎಷ್ಟು ಕಟ್ಟಬೇಕು ಎನ್ನುವುದನ್ನು ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಯಾಗಿದೆ.

  • ಬ್ರೆಜಿಲ್, ಇಂಗ್ಲೆಂಡ್, ಭಾರತದ ರೂಪಾಂತರಿ ವೈರಸ್‍ಗೆ ಕೊವ್ಯಾಕ್ಸಿನ್ ಪರಿಣಾಮಕಾರಿ

    ಬ್ರೆಜಿಲ್, ಇಂಗ್ಲೆಂಡ್, ಭಾರತದ ರೂಪಾಂತರಿ ವೈರಸ್‍ಗೆ ಕೊವ್ಯಾಕ್ಸಿನ್ ಪರಿಣಾಮಕಾರಿ

    ನವದೆಹಲಿ: ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಬ್ರೆಜಿಲ್, ಇಂಗ್ಲೆಂಡ್, ಭಾರತದ ರೂಪಾಂತರಿ ಕೊರೋನಾ ವೈರಸ್‍ಗೂ ಪರಿಣಾಮಕಾರಿ ಎಂದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನದಲ್ಲಿ ದೃಢಪಟ್ಟಿದೆ.

    ನ್ಯಾಷನಲ್ ಇನ್‍ಸ್ಟುಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಐಸಿಎಂಆರ್ ಈ ಅಧ್ಯಯನ ನಡೆಸಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿದ ಡಬಲ್ ವೈರಸ್ (ಬಿ.1.617) ಕೊರೊನಾ ರೂಪಾಂತರಿ ಮೇಲೂ ಕೊವ್ಯಾಕ್ಸಿನ್ ಪರಿಣಾಮಕಾರಿ ಎಂದು ಅಧ್ಯಯನದಿಂದ ದೃಢಪಟ್ಟಿತ್ತು.

    ದೇಶಿ ಲಸಿಕೆ ಕೊವ್ಯಾಕ್ಸಿನ್ ಶೇ.81ರಷ್ಟು ಪರಿಣಾಮಕಾರಿ ಎಂದು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಈ ಹಿಂದೆ ತಿಳಿಸಿತ್ತು. ಒಟ್ಟು 25,800 ಸ್ವಯಂ ಸೇವಕರ ಮೇಲೆ ಪ್ರಯೋಗ ಮಾಡಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಜೊತೆ ನಡೆಸಿದ ಅತ್ಯಂತ ದೊಡ್ಡ ಪ್ರಯೋಗ ಎಂಬುದಾಗಿ ಹೇಳಿತ್ತು.

    ಭಾರತ್ ಬಯೋಟೆಕ್ ಕಂಪನಿ ಮೂಗಿನ ಮೂಲಕ ಲಸಿಕೆಯ (ಇಂಟ್ರಾನಾಸಲ್ ವ್ಯಾಕ್ಸಿನ್) ಮೊದಲ ಕ್ಲಿನಿಕಲ್ ಪ್ರಯೋಗ ಆರಂಭಿಸಿದೆ.

    ಇಂಟ್ರಾನಾಸಲ್ ವ್ಯಾಕ್ಸಿನ್ ಪ್ರಯೋಗ ಯಶಸ್ವಿಯಾದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಇದು ಗೇಮ್ ಚೇಂಜರ್ ಆಗಲಿದೆ. ಬಹುತೇಕ ಲಸಿಕೆಗಳನ್ನು ಸ್ನಾಯುಗಳ ಮೂಲಕ ನೀಡಲಾಗುತ್ತದೆ. ಈಗ ನೀಡಲಾಗುತ್ತಿರುವ ಕೊರೊನಾ ಲಸಿಕೆಯನ್ನು ಸೂಜಿಯ ಮೂಲಕ ದೇಹಕ್ಕೆ ಕಳುಹಿಸಲಾಗುತ್ತದೆ. ಆದರೆ ಈ ಲಸಿಕೆಯನ್ನು ಮೂಗಿನ ಹೊಳ್ಳೆಗಳ ಒಳಗಡೆ ಸಿಂಪಡಿಸಲಾಗುತ್ತದೆ. ಹೀಗಾಗಿ ಇದರಲ್ಲಿ ಸೂಜಿಯ ಬಳಕೆಯ ಅಗತ್ಯವೇ ಇರುವುದಿಲ್ಲ.

  • ಕೊರೊನಾ ಎಫೆಕ್ಟ್ – ಕ್ರಿಸ್‍ಮಸ್ ಆಚರಣೆಗೆ ಸರ್ಕಾರದ ಹೊಸ ರೂಲ್ಸ್

    ಕೊರೊನಾ ಎಫೆಕ್ಟ್ – ಕ್ರಿಸ್‍ಮಸ್ ಆಚರಣೆಗೆ ಸರ್ಕಾರದ ಹೊಸ ರೂಲ್ಸ್

    – ಅತಿಥಿಗಳು ಮನೆಯೊಳಗೆ ಬರುವಂತಿಲ್ಲ

    ಬ್ರಸೆಲ್: ಅತಿಥಿಗಳು ಕ್ರಿಸ್‍ಮಸ್ ಆಚರಣೆಗೆ ಮನೆಗೆ ಬರಬಹುದು. ಆದರೆ ಬಾತ್ ರೂಮ್ ಬಳಸೋಕೆ ಒಬ್ಬರಿಗೆ ಮಾತ್ರ ಅವಕಾಶ ಎಂದು ಬ್ರೆಸೆಲ್ಸ್ ಸರ್ಕಾರ ಹೊಸ ರೂಲ್ಸ್ ಮಾಡಿದೆ.

    ಬೆಲ್ಜಿಯಂನಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಲಾಕ್‍ಡೌನ್ ಜಾರಿಗೊಳಿಸಿದೆ. ಈ ಸಮಯದಲ್ಲಿ ಕ್ರಿಸ್‍ಮಸ್ ಬಂದಿರುವುದರಿಂದ ಹಬ್ಬದ ಆಚರಣೆಗೆ ಅನುಮತಿ ನೀಡಿ ಸರ್ಕಾರ ಇಂತಹ ವಿಚಿತ್ರ ರೂಲ್ಸ್‍ವೊಂದನ್ನು ಹಾಕಿದೆ.

    ಕ್ರಿಸ್‍ಮಸ್ ಆಚರಣೆಗೆ ಬಂದಿರುವ ಅತಿಥಿಗಳು ಯಾರು ಮನೆ ಒಳಗೂ ಬರುವಂತಿಲ್ಲ. ಮನೆಯ ಹೊರಗೆ ಪಾರ್ಟಿ ಮಾಡಬೇಕು. ಪಾರ್ಟಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಬಂದಿರುವ ಅತಿಥಿಗಳಲ್ಲಿ ಒಬ್ಬರಿಗೆ ಮಾತ್ರ ಮನೆ ಒಳಗೆ ಹೋಗಲು ಅವಕಾಶ ಇರುತ್ತದೆ. ಆ ಒಬ್ಬ ಅತಿಥಿಗೆ ಮಾತ್ರ ಮನೆಯ ಬಾತ್‍ರೂಮ್ ಬಳಸಲು ಅವಕಾಶ ಇರುತ್ತದೆ ಎಂದು ವಿಚಿತ್ರ ನಿಯಮವನ್ನು ಹಾಕುವ ಮೂಲಕವಾಗಿ ಹಬ್ಬದ ಸೆಲೆಬ್ರೆಷನ್‍ಗೆ ಅನುಮತಿ ನೀಡಿದೆ.

    ಕ್ರಿಸ್‍ಮಸ್ ಆಚರಣೆಗೆ ಅಗತ್ಯ ಇರುವ ಸರಕು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಜನರು ಗುಂಪು ಸೇರುವಂತಿಲ್ಲ.ನೆವೆಂಬರ್ ನಿಂದ ಎರಡನೇ ಹಂತದ ಲಾಕ್‍ಡೌನ್ ಜಾರಿಯಾಗಿದೆ ಇದು ಫೆಬ್ರವರಿವರೆಗೂ ಜಾರಿಯಲ್ಲಿರಲಿದೆ ಎಂದು ಬ್ರಸೆಲ್‍ನ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.