Tag: brazil

  • ಪರಿಸರ ನಿಯಮ ಉಲ್ಲಂಘಿಸಿದ್ದಕ್ಕೆ ಫುಟ್‌ಬಾಲ್‌ ತಾರೆ ನೇಮರ್‌ಗೆ 27 ಕೋಟಿ ರೂ. ದಂಡ

    ಪರಿಸರ ನಿಯಮ ಉಲ್ಲಂಘಿಸಿದ್ದಕ್ಕೆ ಫುಟ್‌ಬಾಲ್‌ ತಾರೆ ನೇಮರ್‌ಗೆ 27 ಕೋಟಿ ರೂ. ದಂಡ

    ಬ್ರಸಿಲ್ಲ: ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಫುಟ್‌ಬಾಲ್‌ ತಾರೆ (Brazilian football star) ನೇಮರ್‌ಗೆ (Neymar) ಬರೋಬ್ಬರಿ 27 ಕೋಟಿ ರೂ. (3.3 ಮಿಲಿಯನ್‌ ಅಮೆರಿಕನ್‌ ಡಾಲರ್)‌ ದಂಡ ವಿಧಿಸಲಾಗಿದೆ.

    ದಂಡ ವಿಧಿಸಿರುವ ಬಗ್ಗೆ ಮಾಹಿತಿ ನೀಡಿರುವ ಬ್ರೆಜಿಲ್‌ ಅಧಿಕಾರಿಗಳು, ನೇಮರ್‌ ಅವರು ದಕ್ಷಿಣ ಬ್ರೆಜಿಲ್‌ನ (Brazil) ಕರಾವಳಿ ಪ್ರದೇಶದ ರಿಯೊ ಡಿ ಜನೈರೊದ ಹೊರವಲಯದಲ್ಲಿ ಐಷರಾಮಿ ಮನೆ ನಿರ್ಮಿಸಿದ್ದಾರೆ. ಅದಕ್ಕಾಗಿ ಶುದ್ಧ ನೀರಿನ ಮೂಲಗಳ ಬಳಕೆ, ಬಂಡೆ ಮತ್ತು ಮರಳು ಬಳಕೆ ವೇಳೆ ಪರಿಸರ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: India Women’s Squad: ಭಾರತ Vs ಬಾಂಗ್ಲಾದೇಶ ಟಿ20, ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟ

    ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣದ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬ ಸಿಟಿ ಕೌನ್ಸಿಲ್‌ ದೂರಿನಲ್ಲಿ ತಿಳಿಸಿದೆ.

    ಅನುಮತಿಯಿಲ್ಲದೆ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿರುವುದು, ನದಿ ನೀರನ್ನು ಬಳಸಿರುವುದು, ಸಸ್ಯವರ್ಗದ ಬೆಳವಣಿಗೆಗೆ ಅಡ್ಡಿಪಡಿಸಿರುವುದು ಸೇರಿದಂತೆ ಹಲವು ಅಪರಾಧಗಳನ್ನು ನೇಮರ್‌ ಮೇಲೆ ಹೊರಿಸಲಾಗಿದೆ. ಇದನ್ನೂ ಓದಿ: ಸಚಿನ್ LBW ತೀರ್ಪು ನೆನಪಿಸಿಕೊಂಡ ಅಜ್ಮಲ್

    ಬ್ರೆಜಿಲ್ ಫುಟ್‌ಬಾಲ್‌ ತಾರೆ ತಮ್ಮ ಬಲ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಿಂದ ಅವರು ಫುಟ್ಬಾಲ್ ಪಂದ್ಯಗಳಲ್ಲಿ ಆಡಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ರೆಜಿಲ್‌ ಚುನಾವಣೆಯಲ್ಲಿ ಸೋಲು – ಅಧಿಕಾರಕ್ಕೆ ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ

    ಬ್ರೆಜಿಲ್‌ ಚುನಾವಣೆಯಲ್ಲಿ ಸೋಲು – ಅಧಿಕಾರಕ್ಕೆ ಸಂಸತ್‌ ಭವನಕ್ಕೆ ನುಗ್ಗಿ ದಾಂಧಲೆ

    ಬ್ರೆಸಿಲಿಯಾ: ಬ್ರೆಜಿಲ್‍ನಲ್ಲಿ (Brazil) ಭಾರೀ ಹೈಡ್ರಾಮಾ ನಡೆದಿದ್ದು ಚುನಾವಣೆಯಲ್ಲಿ ಸೋತ ಮಾಜಿ ಅಧ್ಯಕ್ಷ ಜೈರ್ ಬೋಲ್ಸನೇರೋ (Bolsonaro) ಬೆಂಬಲಿಗರು ಅಧಿಕಾರಕ್ಕಾಗಿ ಆ ದೇಶದ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ (Election) ಅಧ್ಯಕ್ಷ ಬೋಲ್ಸನೇರೋ ಸೋಲನ್ನು ಅಂಗೀಕರಿಸಲು ನಿರಾಕರಿಸಿದ ಅವರ ಸಾವಿರಾರು ಬೆಂಬಲಿಗರು, ರಾಜಧಾನಿ ಬ್ರೆಸಿಲಿಯಾದ ಪ್ರಮುಖ ಭವನಗಳನ್ನು ಆಕ್ರಮಿಸಿದ್ದಾರೆ. ಭದ್ರತಾ ವಲಯವನ್ನು ಬೇಧಿಸಿ ಸುಪ್ರೀಂಕೋರ್ಟ್, ಸಂಸತ್ ಭವನವಾದ ನ್ಯಾಷನಲ್ ಕಾಂಗ್ರೆಸ್, ಅಧ್ಯಕ್ಷರ ಭವನಗಳಿಗೆ ನುಗ್ಗಿದ್ದಾರೆ.

    ಕೈಗೆ ಸಿಕ್ಕಿದ್ದನ್ನು ಧ್ವಂಸ ಮಾಡಿ, ದಾಂಧಲೆ ನಡೆಸಿದ್ದಾರೆ. ಭದ್ರತಾ ಪಡೆಗಳು, ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬೋಲ್ಸನೇರೋಗೆ ಮರಳಿ ಅಧಿಕಾರ ಕೊಡಬೇಕು. ಇಲ್ಲವಾದರೆ ಲೂಲಾ ಡಿಸಿಲ್ವಾರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಕ್ರೋಶಿತರರು ಬೇಡಿಕೆ ಇಟ್ಟಿದ್ದಾರೆ.

    ಬೋಲ್ಸನೇರೋ ಬೆಂಬಲಿಗರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಹೆಲಿಕಾಪ್ಟರ್ ಮೂಲಕ ಟಿಯರ್ ಗ್ಯಾಸ್ ಪ್ರಯೋಗಿಸಿವೆ. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಹರಸಾಹಸ ಮಾಡುತ್ತಿವೆ. ಈವರೆಗೂ 500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲೆ ಬಿಟ್ಟು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಮೆರಿಕದ ಜಡ್ಜ್

    ಘಟನೆಗೆ ಲೂಲಾ ಡಿಸಿಲ್ವಾ ಗರಂ ಆಗಿದ್ದು, ಅವರು ಮಾಡುತ್ತಿರುವ ಹಾನಿಯನ್ನು ಸಹಿಸಲು ಸಾಧ್ಯವಿಲ್ಲ. ನಿರ್ದಾಕ್ಷಿಣ್ಯವಾಗಿ ಅವರನ್ನು ಹತ್ತಿಕ್ಕಬೇಕು ಎಂದು ಆದೇಶಿಸಿದ್ದಾರೆ. ಅಲ್ಲಿನ ಒಂದೊಂದು ದೃಶ್ಯವೂ 2021ರ ಜನವರಿ 21ರಂದು ಅಮೆರಿಕದ ಸಂಸತ್ ಭವನದಲ್ಲಿ ನಡೆದ ಸಂಘರ್ಷವನ್ನು ನೆನಪಿಸುವಂತಿವೆ. ಆದರೆ ಬೋಲ್ಸನೇರೋ ಮಾತ್ರ ಇದಕ್ಕೂ ನನಗೂ ಸಂಬಂಧವೇ ಇಲ್ಲ ಅಂತಿದ್ದಾರೆ. ಪರಿಸ್ಥಿತಿ ಇನ್ನೂ ತಹಬದಿಗೆ ಬಂದಿಲ್ಲ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇದೆ.

    ನಾಯಕರ ಖಂಡನೆ:
    ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿ ವಿಶ್ವಸಮುದಾಯ ಈ ಘಟನೆಯನ್ನು ಖಂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಂದೆಗೆ ಕೊಟ್ಟ ಮಾತಿನಂತೆ ಕಪ್ ಗೆದ್ದು ತಂದ – ದಂತಕತೆಯಾಗಿ ಮರೆಯಾದ ಡ್ರಿಬ್ಲಿಂಗ್ ಗೋಲ್ ಜಾದೂಗಾರ ಪೀಲೆ

    ತಂದೆಗೆ ಕೊಟ್ಟ ಮಾತಿನಂತೆ ಕಪ್ ಗೆದ್ದು ತಂದ – ದಂತಕತೆಯಾಗಿ ಮರೆಯಾದ ಡ್ರಿಬ್ಲಿಂಗ್ ಗೋಲ್ ಜಾದೂಗಾರ ಪೀಲೆ

    ಬೆಂಗಳೂರು: ಅಪ್ಪ ಅಳಬೇಡ. ನಿಮಗಾಗಿ ಫಿಫಾ ವಿಶ್ವಕಪ್ ಗೆದ್ದು ತರುವೆ ಎಂದು ಹತ್ತು ವರ್ಷದ ಬಾಲಕನೊಬ್ಬ ತಂದೆಗೆ ಸಮಾಧಾನ ಹೇಳಿದ್ದ. ಆ ನಂತರದ 8 ವರ್ಷದಲ್ಲೇ ಆ ಹುಡುಗ ಹೇಳಿದ್ದ ಮಾತನ್ನು ಮಾಡಿ ತೋರಿಸಿದ್ದ. ಫಿಫಾ ವಿಶ್ವಕಪ್ ಎತ್ತಿ ಹಿಡಿದು ತಂದೆಯ ಮುಂದೆ ನಿಂತಿದ್ದ. ಇದ್ಯಾವುದೋ ಸಿನಿಮಾ ಅಲ್ಲ. ಫುಟ್‍ಬಾಲ್ ದಂತಕತೆ ದಿವಂಗತ ಪೀಲೆಯ ಜೀವನದಲ್ಲಿ ನಡೆದ ಘಟನೆ.

    ಆಗ ಪೀಲೆ ವಯಸ್ಸು ಕೇವಲ 17. ದೇಶಕ್ಕಾಗಿ ಮೂರು ಬಾರಿ ವಿಶ್ವಕಪ್ ಗೆದ್ದುಕೊಟ್ಟು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದ ಕಾಲ್ಚೆಂಡಿನ ಮಾಂತ್ರಿಕ ಪೀಲೆ ಇನ್ನಿಲ್ಲ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 82 ವರ್ಷದ ಪೀಲೆ ಸಾವೋಪೌಲೋದ ಆಲ್ಬರ್ಟ್ ಐನ್‍ಸ್ಟಿನ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಪೀಲೆ ಸಾವಿನಿಂದ ಬ್ರೆಜಿಲ್ ಮಾತ್ರವಲ್ಲ ಇಡೀ ಫುಟ್‍ಬಾಲ್ ಜಗತ್ತು ಈಗ ಶೋಕಸಾಗರದಲ್ಲಿ ಮುಳುಗಿದೆ. ಜಗತ್ತಿನ ಗಣ್ಯರೆಲ್ಲಾ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. ಪೀಲೆಯ ಮಾಜಿ ಕ್ಲಬ್ ಸ್ಯಾಂಟೋಸ್ ಅಂತ್ಯಕ್ರಿಯೆಯ ವಿವರಗಳನ್ನು ನೀಡಿದೆ. ಸೋಮವಾರ ಬೆಳಗ್ಗೆ ಪೀಲೆ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಕ್ಲಬ್ ಎಸ್ಟೋಡಿಯಾಗೆ ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಂಗಳವಾರ ಪೀಲೆ ಕುಟುಂಬದ ಖಾಸಗಿ ಸಮಾಧಿ ಸ್ಥಳಕ್ಕೆ ಸ್ಯಾಂಟೋಸ್ ಬೀದಿಯಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಮೂವರು ಪತ್ನಿಯರು ಆರು ಮಕ್ಕಳನ್ನು ಪೀಲೆ ಅಗಲಿದ್ದಾರೆ. ಇದನ್ನೂ ಓದಿ: ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ

    ಒಮ್ಮೆ ಬ್ರೆಜಿಲ್ ಕ್ರೀಡಾ ಮಂತ್ರಿಯಾಗಿಯೂ ಪೀಲೆ ಕೆಲಸ ಮಾಡಿದ್ರು. ಪೀಲೆಯ ನಿಜನಾಮ ಎಡ್ಸನ್ ಅರೆಂಟೆಸ್ ಡೋ ನಾಸಿಮೆಂಟೋ. ಆ ಬಳಿಕ ಕಾಲ್ಚೆಂಡು ಮಾಂತ್ರಿಕನಾಗಿ ಪೀಲೆ ಎಂದು ಗುರುತಿಸಿಕೊಂಡು ತನ್ನ 17ನೇ ವಯಸ್ಸಿಗೆ ಗ್ಲೋಬಲ್ ಸ್ಟಾರ್ ಆಗಿದ್ರು. 1958ರಲ್ಲಿ ಬ್ರೆಜಿಲ್ ಫಿಫಾ ವಿಶ್ವಕಪ್ ಗೆಲ್ಲೋದ್ರಲ್ಲಿ ಪೀಲೆ ಪಾತ್ರ ಪ್ರಮುಖವಾದುದು. ಫುಟ್‍ಬಾಲ್‍ನಲ್ಲಿ ಮೂರು ವಿಶ್ವಕಪ್ ವಿಜಯಗಳಲ್ಲಿ ಭಾಗಿದಾರನಾದ ಏಕೈಕ ಆಟಗಾರ ಪೀಲೆ. 1958, 1962, 1970ರ ವಿಶ್ವಕಪ್ ಗೆಲುವಿನಲ್ಲಿ ಪೀಲೆಯದ್ದೇ ಪ್ರಮುಖ ಪಾತ್ರ. ತಮ್ಮ ಮಂತ್ರಮುಗ್ಧವಾದ ಆಟದ ಮೂಲಕ ಎರಡು ದಶಕಗಳ ಕಾಲ ಫುಟ್‌ಬಾಲ್‌ ಪ್ರೇಮಿಗಳನ್ನು ರಂಜಿಸಿದ್ದ ಪೀಲೆ, ಕಾಲ್ಚೆಂಡು ಲೋಕದ ದಂತಕತೆಯಾಗಿ ಉಳಿದ್ರು. ಫಾರ್ವರ್ಡ್, ಅಟ್ಯಾಕಿಂಗ್ ಮಿಡ್‍ಫೀಲ್ಡರ್ ಆಗಿ ಮೈದಾನದಲ್ಲಿ ಪೀಲೆ ಮಾಡಿದ ವಿನ್ಯಾಸಗಳು ಅಸಾಧಾರಣ. ಮಿಂಚಿನ ವೇಗದಲ್ಲಿ ಚೆಂಡನ್ನು ಗೋಲ್‍ಪೋಸ್ಟ್‌ಗೆ ತಳ್ಳೋದ್ರಲ್ಲಿ ಪೀಲೆಯದ್ದು ಎತ್ತಿದ ಕೈ. ಎದುರಿಗೆ ಪ್ರತ್ಯರ್ಥಿ ತಂಡದ ಎಷ್ಟೇ ಆಟಗಾರರು ಇರಲಿ, ಲೀಲಾಜಾಲವಾಗಿ ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ ಗೋಲ್‍ಪೋಸ್ಟ್‌ಗೆ ಕೊಂಡೊಯ್ಯದ್ರಲ್ಲಿ ಪೀಲೆಗೆ ಯಾರು ಸಾಟಿಯೇ ಇರಲಿಲ್ಲ. ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಕಾರಿನ ಗಾಜು ಹೊಡೆದು ಹೊರಬಂದ ಪಂತ್ – ಕಾರಿನಲ್ಲಿದ್ದ ಹಣ ದೋಚಿದ ಕಳ್ಳರು

    1970ರ ವಿಶ್ವಕಪ್‍ನಲ್ಲಿ ರೋಮೆನಿಯಾ ವಿರುದ್ಧ 25 ಅಡಿ ದೂರದಿಂದ ಪೀಲೆ ಫ್ರೀಕಿಕ್ ಮಾಡಿ, ಡಿಫೆಂಡರ್‌ಗಳ ಮಧ್ಯದಿಂದ ಗೋಲ್‍ಪೋಸ್ಟ್‌ಗೆ ಕಾಲ್ಚೆಂಡು ನುಗ್ಗಿಸಿದ ಪರಿ ಅಮೋಘ. 1958ರ ವಿಶ್ವಕಪ್ ಫೈನಲ್‍ನಲ್ಲಿ ಸ್ವೀಡನ್ ಗೋಲಿಯನ್ನು ವಂಚಿಸಿ ಗೋಲ್ ಪೋಸ್ಟ್‌ಗೆ ಚೆಂಡನ್ನು ಪೀಲೆ ಹಾಕಿದ್ದನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಗೋಲ್‍ಗಳು ಅದೆಷ್ಟೋ ಇವೆ. 1971ರಲ್ಲಿ ಯುಗೋಸ್ಲೋವಿಯಾ ವಿರುದ್ಧ ಪೀಲೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ರು. ವಿಶ್ವಕಪ್‍ನ 14 ಪಂದ್ಯದಲ್ಲಿ 12 ಗೋಲ್ ಗಳಿಸಿದ್ರು. ಒಟ್ಟು 1,363 ಪಂದ್ಯಗಳಲ್ಲಿ 1,281 ಗೋಲ್‍ಗಳನ್ನು ಪೀಲೆ ಸಿಡಿಸಿದ್ದರು. ಅಂದ್ರೆ ಸರಾಸರಿ ಪಂದ್ಯವೊಂದ್ರಲ್ಲಿ 0.93 ಗೋಲ್. ಇದು ಮೆಸ್ಸಿ, ರೊನಾಲ್ಡೊಗಿಂತಲೂ ಹೆಚ್ಚು. ಅಧಿಕೃತವಾಗಿ ಆಡಿದ 831 ಪಂದ್ಯಗಳಲ್ಲಿ 767 ಗೋಲ್ ಗಳಿಸಿದ್ರು. ಮೆಸ್ಸಿ, ರೊನಾಲ್ಡೊ ಇಷ್ಟು ಗೋಲ್ ಹೊಡೆಯಲು ಸಾವಿರ ಪಂದ್ಯಗಳು ಬೇಕಾದ್ವು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    ಬ್ರೆಸಿಲಿಯಾ: ಕ್ಯಾನ್ಸರ್ ಕಾಯಿಲೆ, ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಫುಟ್ಬಾಲ್ ದಂತಕತೆ (Football Legendary), ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರೆಜಿಲ್‌ನ (Brazil) ಪೀಲೆ (82) (Pele) ನಿಧನರಾಗಿದ್ದಾರೆ.

    ಮೂರು ಬಾರಿ ಫಿಫಾ ವಿಶ್ವಕಪ್ (FIFA World Cup) ವಿಜೇತ ಪೀಲೆ ಅವರು, ನ.29ರಂದು ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಇತ್ತೀಚೆಗೆ ಅವರಿಗೆ ಕೋವಿಡ್-19 (Covid) ಸೋಂಕು ತಗಲಿತ್ತು. ಇದನ್ನೂ ಓದಿ: ರಣಜಿಯಲ್ಲಿ ಬ್ಯಾಟಿಂಗ್ ಅಬ್ಬರ- ಮನೀಷ್ ದ್ವಿಶತಕ ಮಿಂಚಿಂಗ್, ಸೂರ್ಯನಿಗೆ ಶತಕ ಮಿಸ್ಸಿಂಗ್

    ತನ್ನ 16ನೇ ವಯಸ್ಸಿನಲ್ಲಿ ಬ್ರೆಜಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದ ಪೀಲೆ 1958, 1962 ಹಾಗೂ 1970ರಲ್ಲಿ ಬ್ರೆಜಿಲ್ ಫಿಫಾ ವಿಶ್ವಕಪ್ (FIFA World Cup) ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿದ್ದಾರೆ. ಬ್ರೆಜಿಲ್ ಪರ 95 ಪಂದ್ಯಗಳಲ್ಲಿ ಅತಿಹೆಚ್ಚು 77 ಗೋಲುಗಳನ್ನು ಗಳಿಸಿರುವ ಸಾಧನೆ ಮಾಡಿದ್ದರು. ಆದ್ರೆ ಇತ್ತೀಚಿನ ವಿಶ್ವಕಪ್ ಟೂರ್ನಿಯಲ್ಲಿ ನೇಮ 124 ಪಂದ್ಯಗಳಲ್ಲಿ 77 ಗೋಲುಗಳನ್ನು ಬಾರಿಸುವ ಮೂಲಕ ಸಾಧನೆ ಸಮಬಲ ಸಾಧಿಸಿದ್ದಾರೆ.

    2021ರ ಸೆಪ್ಟೆಂಬರ್‌ನಲ್ಲಿ ಪೀಲೆ ಅವರಿಗೆ ಶ‌ಸ್ತ್ರಚಿಕಿತ್ಸೆ ಮಾಡಿ ದೊಡ್ಡ ಕರುಳಿನ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲಾಗಿತ್ತು. ಆದರೆ ಇತ್ತೀಚೆಗೆ ಅವರು ಕೋವಿಡ್‌ಗೆ ತುತ್ತಾಗಿದ್ದರಿಂದ ಮತ್ತೆ ಕ್ಯಾನ್ಸರ್ ಸಮಸ್ಯೆ ಕೂಡ ಮರುಕಳಿಸಿತ್ತು. ಮೂರು ಬಾರಿ ಮದುವೆಯಾಗಿರುವ ಪೀಲೆ ಅವರಿಗೆ 7 ಮಕ್ಕಳಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    Live Tv
    [brid partner=56869869 player=32851 video=960834 autoplay=true]

  • ಬ್ರೆಜಿಲ್‍ನ ಎರಡು ಶಾಲೆಗಳಲ್ಲಿ ಶೂಟೌಟ್‌ – ಟೀಚರ್ ಸೇರಿ 3 ಸಾವು, 13 ಮಂದಿಗೆ ಗಾಯ

    ಬ್ರೆಜಿಲ್‍ನ ಎರಡು ಶಾಲೆಗಳಲ್ಲಿ ಶೂಟೌಟ್‌ – ಟೀಚರ್ ಸೇರಿ 3 ಸಾವು, 13 ಮಂದಿಗೆ ಗಾಯ

    ಬ್ರೆಸಿಲಿಯಾ: ಹಳೆಯ ವಿದ್ಯಾರ್ಥಿಯೋರ್ವ ತಾನು ಈ ಹಿಂದೆ ಕಲಿತಿದ್ದ 2 ಶಾಲೆಗೆ (Schools) ಶಸ್ತ್ರಧಾರಿಯಾಗಿ ಬಂದು ಶೂಟೌಟ್‌ (Shootout) ನಡೆಸಿ ಮೂವರನ್ನು ಕೊಂದು 13 ಜನರನ್ನು ಗಾಯಗೊಳಿಸಿರುವ ಘಟನೆ ಸೌತ್‍ಈಸ್ಟರ್ನ್ ಬ್ರೆಜಿಲ್‍ನಲ್ಲಿ (Brazil)  ನಡೆದಿದೆ.

    ಬ್ರೆಜಿಲ್‍ನ ಎಸ್ಪಿರಿಟೊ ಸ್ಯಾಂಟೋ ರಾಜ್ಯದ ಅರಾಕ್ರೂಜ್ ಪಟ್ಟಣದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೂಟೌಟ್‌ ನಡೆದಿದೆ. ಈ ಹಿಂದೆ ಅದೇ ಶಾಲೆಯಲ್ಲಿ ಕಲಿತಿದ್ದ ವಿದ್ಯಾರ್ಥಿಯೋರ್ವ ಸೆಮಿಆಟೋಮ್ಯಾಟಿಕ್ ಗನ್ (Gun) ಹಿಡಿದು ಬುಲೆಟ್ ಪ್ರೂಪ್ ಜಾಕೆಟ್ ಧರಿಸಿ ಶಾಲೆಗೆ ಪ್ರವೇಶಿಸಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ 2 ಟೀಚರ್ (Teacher) ಮತ್ತು ಓರ್ವ ವಿದ್ಯಾರ್ಥಿ (Student) ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕುಕ್ಕೆಯ ಬಳಿಕ ಬೆಂಗಳೂರಿಗೆ ತಟ್ಟಿದ ಧರ್ಮ ದಂಗಲ್

    ಘಟನೆ ನಡೆದು ನಾಲ್ಕು ಘಂಟೆಗಳ ಬಳಿಕ 16 ವರ್ಷದ ಶೂಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಬಾಲಕ ಶೂಟೌಟ್‌ ನಡೆಸಿದ ಶಾಲೆಯಲ್ಲಿ ಈ ಹಿಂದೆ ವಿದ್ಯಾರ್ಥಿಯಾಗಿದ್ದ ಈತನ ತಂದೆ ಸೈನ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮನೆಯಲ್ಲಿದ್ದ ಗನ್ ಅನ್ನು ಕೃತ್ಯಕ್ಕೆ ಬಳಸಿದ್ದಾನೆ. ಇದನ್ನೂ ಓದಿ: ಈಗಲೂ ಮೋದಿ ನಂ.1 ಜನಪ್ರಿಯ ನಾಯಕ

    https://twitter.com/Jiyan2023/status/1596186082592559106

    ಶಾಲೆಯಲ್ಲಿ ಬ್ರೇಕ್ ಟೈಮ್ ನೋಡಿಕೊಂಡು ಆರೋಪಿ ದಾಳಿ ನಡೆಸಿದ್ದಾನೆ. ಗಾಯಗೊಂಡ 13 ಜನರ ಪೈಕಿ ಸಿಬ್ಬಂದಿ ಹಾಗೂ ಇಬ್ಬರು ಮಕ್ಕಳು ಸೇರಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ರೆಜಿಲ್‌ಗೆ ಆಘಾತ – ಮುಂದಿನ ಪಂದ್ಯಗಳಲ್ಲಿ ಆಡಲ್ಲ ನೇಮರ್

    ಬ್ರೆಜಿಲ್‌ಗೆ ಆಘಾತ – ಮುಂದಿನ ಪಂದ್ಯಗಳಲ್ಲಿ ಆಡಲ್ಲ ನೇಮರ್

    ಕತಾರ್: ಬ್ರೆಜಿಲ್‌ (Brazil) ಫುಟ್‍ಬಾಲ್ ತಂಡದ ನಾಯಕ ನೇಮರ್ (Neymar) ಗಾಯದಿಂದಾಗಿ ಫಿಫಾ ವಿಶ್ವಕಪ್‍ನ ಮುಂದಿನ ಗ್ರೂಪ್‌ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

    ನಿನ್ನೆ ಸರ್ಬಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ನೇಮರ್ ತಮ್ಮ ಮೊದಲ ಪಂದ್ಯದಲ್ಲೇ ಗಾಯಾಳುವಾಗಿ ಹೊರ ನಡೆಯಬೇಕಾಯಿತು. ಸರ್ಬಿಯಾ ವಿರುದ್ಧ ಉತ್ತಮವಾಗಿಯೇ ಆಡುತ್ತಿದ್ದ ನೇಮರ್‌ಗೆ 80ನೇ ನಿಮಿಷದ ವೇಳೆ ಪಾದದ ನೋವು (Ankle Injury) ಕಾಣಿಸಿಕೊಂಡಿತು. ಬಳಿಕ ಪಂದ್ಯದಿಂದ ಹೊರ ನಡೆದರು. ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಗೆಲುವು – ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್ ಘೋಷಿಸಿದ ಸರ್ಕಾರ

    ಪಂದ್ಯದ ಕೊನೆಯ 10 ನಿಮಿಷ ಬಾಕಿ ಇರುವಂತೆ ನೇಮರ್ ಮೈದಾನದಿಂದ ಹೊರ ನಡೆದರೂ, ಬ್ರೆಜಿಲ್‌ 2-0 ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿತು. ಈ ಉತ್ಸಾಹದಲ್ಲಿದ್ದ ಬ್ರೆಜಿಲ್‌ಗೆ ಇದೀಗ ನೇಮರ್ ಗ್ರೂಪ್ ಹಂತದ ಪಂದ್ಯದಿಂದ ಹೊರನಡೆದಿರುವ ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಬಡಿದಿದೆ.

    ನೇಮರ್ ಪಂದ್ಯದ ಬಳಿಕ ತಂಡದ ಹೋಟೆಲ್‍ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಹಾಗಾಗಿ ಗ್ರೂಪ್ ಹಂತದ ಮುಂದಿನ 2 ಪಂದ್ಯಗಳಿಂದ ನೇಮರ್ ಹೊರಗುಳಿಯಲಿದ್ದು, ನ. 28 ರಂದು ಸ್ವಿಜರ್ಲ್ಯಾಂಡ್ ವಿರುದ್ಧ ಮತ್ತು ಡಿ.3 ರಂದು ಕ್ಯಾಮರೂನ್ ವಿರುದ್ಧದ ಪಂದ್ಯದಿಂದ ಹೊರನಡೆದಿದ್ದಾರೆ. ಬಳಿಕ ನಡೆಯಲಿರುವ ನಾಕೌಟ್ ಪಂದ್ಯಗಳಿಗೆ ಫಿಟ್ ಆಗಿ ಮರಳುವ ಸಾಧ್ಯತೆ ಇದೆ. ಇದನ್ನೂ ಓದಿ: ಲ್ಯಾಥಮ್‌ ಭರ್ಜರಿ ಶತಕ – ಕೀವಿಸ್‌ ಗೆ 7 ವಿಕೆಟ್‌ಗಳ ಜಯ

    ನೇಮರ್ ಬ್ರೆಜಿಲ್‌ನ ಸ್ಟಾರ್ ಆಟಗಾರನಾಗಿದ್ದು, ಈ ಹಿಂದೆ 2013 ಕಾನ್ಫೆಡರೇಶನ್ ಕಪ್ ಮತ್ತು 2016 ರಿಯೊ ಡಿ ಜನೈರೊ ಗೇಮ್ಸ್‌ನಲ್ಲಿ ಬ್ರೆಜಿಲ್‌ ಚಿನ್ನದ ಪದಕ ಗೆಲ್ಲುವಲ್ಲಿ ನೇಮರ್ ಮಹತ್ವದ ಪಾತ್ರವಹಿಸಿದ್ದರು. ಬ್ರೆಜಿಲ್‌ ತಂಡದ ನಾಯಕನಾಗಿರುವ ನೇಮರ್ ಮೇಲೆ ತಂಡ ಅವಲಂಬಿತವಾಗಿದ್ದು, ಅವರ ಹೊರಗುಳಿಯುವುದರಿಂದ ತಂಡಕ್ಕೆ ಹಿನ್ನಡೆ ಉಂಟಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಅವಳಿ’ ಅಪ್ಪ, ಜವಳಿ ಮಕ್ಕಳು – 8 ತಿಂಗಳ ನಂತ್ರ 19ರ ಯುವತಿಯ ರಹಸ್ಯ ಬಯಲು

    ‘ಅವಳಿ’ ಅಪ್ಪ, ಜವಳಿ ಮಕ್ಕಳು – 8 ತಿಂಗಳ ನಂತ್ರ 19ರ ಯುವತಿಯ ರಹಸ್ಯ ಬಯಲು

    ಬ್ರೆಸಿಲಿಯಾ: ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ 19 ವರ್ಷದ ಯುವತಿಯೊಬ್ಬಳು ಇಬ್ಬರಿಂದಲೂ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ತಿಳಿಸಿದ್ದಾಳೆ.

    ಎರಡು ಮಗುವಿನ ತಂದೆ ಯಾರೆಂದು ಪತ್ತೆಹಚ್ಚಲು ಮುಂದಾದ ಯುವತಿ ಡಿಎನ್‍ಎ ಟೆಸ್ಟ್ ರಿಪೋರ್ಟ್ ಶಾಕ್ ಆಗಿದ್ದಾಳೆ. ತನ್ನ ಇಬ್ಬರು ಮಕ್ಕಳು ವಿಭಿನ್ನ ವ್ಯಕ್ತಿಗಳಿಂದ ಜನಿಸಿರುವ ವಿಚಾರ ತಿಳಿದುಬಂದಿದ್ದು, ಈ ರೀತಿ ಆಗುತ್ತದೆ ಅಂತ ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಯುವತಿ ಹೇಳಿದ್ದಾಳೆ.

    ಈ ಕುರಿತಂತೆ ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ತುಲಿಯೊ ಜಾರ್ಜ್ ಫ್ರಾಂಕೊ ಅವರು ಪ್ರತಿಕ್ರಿಯಿಸಿ, ಈ ರೀತಿಯ ಪ್ರಕರಣಗಳು ಬಹಳ ಅಪರೂಪ. 10 ಲಕ್ಷದಲ್ಲಿ ಒಂದು ಪ್ರಕರಣ ಇಂತಹ ರೀತಿ ಇರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೇ ಹೆಟೆರೊಪರೆಂಟಲ್ ಸೂಪರ್‍ಫೆಕಂಡೇಶನ್ ಪ್ರಪಂಚದಾದ್ಯಂತ ಕೇವಲ 20 ಪ್ರಕರಣಗಳಿವೆ. ವಿವಿಧ ವ್ಯಕ್ತಿಗಳ ಅವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡುವ ಅತ್ಯಂತ ಅಪರೂಪದ ವಿದ್ಯಮಾನವಾಗಿದೆ ಎಂದು ಹೇಳಿದ್ದಾರೆ.

    ಋತುಚಕ್ರದ ಸಮಯದಲ್ಲಿ ಬಿಡುಗಡೆಯಾದ ಎರಡನೇ ಅಂಡಾಣುವು ಪ್ರತ್ಯೇಕ ಲೈಂಗಿಕ ಸಂಭೋಗದಲ್ಲಿ ಬೇರೆ ಪುರುಷರ ವೀರ್ಯ ಕೋಶಗಳಿಂದ ಹೆಚ್ಚುವರಿಯಾಗಿ ಫಲವತ್ತಾದಾಗ ಇದು ಸಂಭವಿಸುತ್ತದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವಿವರಿಸುತ್ತದೆ. ಇದನ್ನೂ ಓದಿ: ವೆಬ್ ಸರಣಿ ರೂಪದಲ್ಲಿ ಬರಲಿದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ

    ಒಂದೇ ತಾಯಿಯಿಂದ ಎರಡು ಮೊಟ್ಟೆಗಳನ್ನು ವಿಭಿನ್ನ ಪುರುಷರು ಫಲವತ್ತಾಗಿಸಿದಾಗ ಇದು ಸಂಭವಿಸಬಹುದು. ಶಿಶುಗಳು ತಾಯಿಯ ಆನುವಂಶಿಕ ವಸ್ತುಗಳನ್ನು ಹಂಚಿಕೊಳ್ಳುತ್ತವೆ, ಆದರೆ ಅವು ವಿಭಿನ್ನ ಜರಾಯುಗಳಲ್ಲಿ ಬೆಳೆಯುತ್ತವೆ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ‘ತಾಂಟ್ರೆ ನೀ ಬಾ ತಾಂಟ್’ ಖ್ಯಾತಿಯ ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ

    ಈ ವಿಚಾರವಾಗಿ ಪರತಿಕ್ರಿಯಿಸಿದ ಯುವತಿ ತನ್ನ ಇಬ್ಬರೂ ಮಕ್ಕಳಿಗೆ ಹೋಲಿಕೆ ಇರಲಿಲ್ಲ. 8 ತಿಂಗಳ ಬಳಿಕ ತಂದೆ ಯಾರಿರಬಹುದು ಎಂಬುವುದರ ಬಗ್ಗೆ ಅನುಮಾನ ಮೂಡಲು ಆರಂಭವಾಯಿತು. ಹೀಗಾಗಿ ಎಂಟು ತಿಂಗಳ ಶಿಶುಗಳನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶದಲ್ಲಿ ಒಂದು ಮಗು ಮಾತ್ರ ತಂದೆಯ ಹೋಲಿಕೆಯನ್ನು ಹೊಂದಿದೆ. ಅನುಮಾನದಿಂದ ಮತ್ತೆ ಪರೀಕ್ಷಿಸಿದಾಗಲೂ ಇದೇ ಫಲಿತಾಂಶ ಬಂದಿದೆ. ಈ ವೇಳೆ ಯುವತಿ ಒಂದೇ ದಿನ ಇಬ್ಬರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ ವಿಚಾರ ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ಬ್ರೆಸಿಲಿಯಾ: 3 ದಿನದಲ್ಲಿ ಮುಗಿಯಬೇಕಿದ್ದ ಮೀನುಗಾರಿಕೆ ಈ ರೀತಿ ಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಆ ವ್ಯಕ್ತಿಗೆ ತಿಳಿದಿರಲಿಲ್ಲವೇನೋ. ಈಜು ಬರದ ಬ್ರೆಜಿಲ್‌ನ ವ್ಯಕ್ತಿ ಅಟ್ಲಾಂಟಿಕ್ ಮಹಾಸಾಗರದಲ್ಲಿ 11 ದಿನಗಳ ಕಾಲ ಕೇವಲ ಒಂದು ತೇಲುವ ಫ್ರೀಜರ್ ಮೂಲಕ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಕೊನೆಗೂ ಆತನನ್ನು ಬೇರೊಂದು ಮೀನುಗಾರರ ಗುಂಪು ರಕ್ಷಿಸಿದೆ.

    11 ದಿನ ಸಮುದ್ರದಲ್ಲಿ ಈ ರೀತಿಯ ಕಷ್ಟದಲ್ಲೂ ಬದುಕಿ ಬಂದ ವ್ಯಕ್ತಿ ರೊಮಾಲ್ಡೋ ಮ್ಯಾಸೆಡೊ ರಾಡ್ರಿಗಸ್ ಈ ಬಗ್ಗೆ ಮಾಧ್ಯಮದವರೊಂದಿಗೆ ವಿವರಿಸುತ್ತಾ, ನಾನು ಆಗಸ್ಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದೆ. ಮೀನುಗಾರಿಕೆಯ ಮಧ್ಯದಲ್ಲಿ ನಾನಿದ್ದ ದೋಣಿ ಸಮುದ್ರದಲ್ಲಿ ಮುಳುಗಲಾರಂಭಿಸಿತ್ತು. ಆದರೂ ನಾನು ನನ್ನ ಆತ್ಮವನ್ನು ಮುಳುಗಲು ಬಿಡಲಿಲ್ಲ. ಅದರಂತೆಯೇ ದೇವರು ನನಗೆ ಒಂದು ಅವಕಾಶ ಕೊಟ್ಟ ಎಂದು ಹೇಳಿದರು.

    ನನ್ನ ದೋಣಿ ಮುಳುಗಲಾರಂಭಿಸಿದರೂ ಅದರಲ್ಲಿದ್ದ ತೇಲುವ ಫ್ರೀಜರ್ ಮುಳುಗುತ್ತಿರಲಿಲ್ಲ. ಒಂದು ಬಾರಿ ನನಗೆ ದೇವರೇ ಅದನ್ನು ವರವಾಗಿ ನೀಡಿದ್ದ ಎನಿಸಿತು. ನಾನು ಫ್ರೀಜರ್‌ನಲ್ಲಿದ್ದ 11 ದಿನ ಹಲವು ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಒಂದು ಬಾರಿ ಫ್ರೀಜರ್‌ನಲ್ಲೂ ನೀರು ಹೊಕ್ಕಿತ್ತು. ಅದನ್ನು ನಾನು ತನ್ನ ಕೈಯಿಂದಲೇ ತೆಗೆದು ಹೊರ ಹಾಕಿದ್ದೆ. ಇನ್ನೊಂದು ಬಾರಿ ದೊಡ್ಡ ದೊಡ್ಡ ಶಾರ್ಕ್ ಮೀನುಗಳು ನನ್ನನ್ನು ಸುತ್ತುವರಿದಿದ್ದವು. ಆದರೂ ನಾನು ನನ್ನ ಕುಟುಂಬದವರನ್ನು ನೆನೆಸಿಕೊಂಡು, ಆ ಪರಿಸ್ಥಿತಿಯನ್ನು ಎದುರಿಸಿದೆ. ಅನ್ನ, ನೀರಿಲ್ಲದಿದ್ದರೂ 11 ದಿನ ನಾನು ಜೀವಂತವಾಗಿದ್ದೆ ಎಂದು ವಿವರಿಸಿದ್ದಾರೆ.

    11 ದಿನಗಳ ಸಾವು ಬದುಕಿನ ಹೋರಾಟದ ಬಳಿಕ ಕೊನೆಗೂ ನಾನಿದ್ದ ಸ್ಥಳಕ್ಕೆ ಒಂದು ದೋಣಿ ಬಂದೇ ಬಿಟ್ಟಿತು. ಆ ದೋಣಿಯಲ್ಲಿದ್ದವರು ಫ್ರೀಜರ್‌ನಲ್ಲಿ ಯಾರೂ ಇಲ್ಲ ಎಂದು ಊಹಿಸುವುದು ಬೇಡವೆಂದು ನಾನು ನನ್ನ ಕೈ, ಕಾಲುಗಳನ್ನು ಮೇಲೆತ್ತಿ, ಸಹಾಯಕ್ಕಾಗಿ ಕರೆದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು

    ಕೊನೆಗೂ ತನ್ನ ಜೀವವನ್ನು ಉಳಿಸಿಕೊಂಡ ರಾಡ್ರಿಗಸ್‌ನನ್ನು ಆ ದೋಣಿಯಲ್ಲಿದ್ದವರು ಸುರಿನಾಮ್ ದೇಶದ ದಡಕ್ಕೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಆತನ ಬಳಿ ಯಾವುದೇ ವಲಸೆಯ ದಾಖಲೆಗಳಿಲ್ಲದಿದ್ದರಿಂದ ಅಲ್ಲಿನ ಪೊಲೀಸರು ಬಳಿಕ ಆತನನ್ನು 2 ವಾರಗಳ ಕಾಲ ವಶಕ್ಕೆ ಪಡೆದಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • ಅಮೆಜಾನ್ ಕಾಡಿನಲ್ಲಿ 26 ವರ್ಷ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ವ್ಯಕ್ತಿ ಸಾವು

    ಅಮೆಜಾನ್ ಕಾಡಿನಲ್ಲಿ 26 ವರ್ಷ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ವ್ಯಕ್ತಿ ಸಾವು

    ಬ್ರೆಸಿಲಿಯಾ: ಬ್ರೆಜಿಲ್‌ನ ದಟ್ಟ ಅಮೆಜಾನ್ ಕಾಡಿನಲ್ಲಿ 26 ವರ್ಷಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದ ಬುಡಕಟ್ಟು ಜನಾಂಗವೊಂದರ ಕಟ್ಟ ಕಡೆಯ ವ್ಯಕ್ತಿ ಸಾವನ್ನಪ್ಪಿದ್ದಾನೆ.

    ವಿಶ್ವದ ಏಕಾಂಗಿ ಮನುಷ್ಯ ಎಂದು ಕರೆಯಲಾಗುತ್ತಿದ್ದ ವ್ಯಕ್ತಿ, ಕಾಡಿನಲ್ಲಿ ಪ್ರಾಣಿಗಳನ್ನು ಹಿಡಿಯಲು ದೊಡ್ಡ ದೊಡ್ಡ ಗುಂಡಿಗಳನ್ನು ತೋಡುತ್ತಿದ್ದ. ಇದಕ್ಕಾಗಿ ಆತನನ್ನು ಮ್ಯಾನ್ ಆಫ್ ದಿ ಹೋಲ್ ಎಂದೂ ಕರೆಯಲಾಗುತ್ತಿತ್ತು. ಈತ ತನ್ನ ಗುಡಿಸಲಿನಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ. ತನ್ನ 60ರ ವಯಸ್ಸಿನಲ್ಲಿ ಸ್ವಾಭಾವಿಕವಾಗಿಯೇ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.

    ಈ ಬುಡಕಟ್ಟು ವ್ಯಕ್ತಿಯ ಹೆಸರು, ಭಾಷೆ ಎಲ್ಲವೂ ಭಿನ್ನವಾಗಿದ್ದು, ಆತನ ಬಳಿ ಮನುಷ್ಯರು ಸುಳಿದಾಡಿದರೆ ಆತ ಅಲ್ಲಿಂದ ಓಡಿ ಹೋಗುತ್ತಿದ್ದ. ಆತನನ್ನು ಹಲವು ಬಾರಿ ಕಾಡಿನಿಂದ ಬಿಡಿಸಿ ನಗರಕ್ಕೆ ಕರೆದುಕೊಂಡು ಬರಲು ಪ್ರಯತ್ನಿಸಲಾಗಿದ್ದು, ವಿಫಲವಾಗಿತ್ತು. ಬಳಿಕ ಆತನನ್ನು ಸ್ವತಂತ್ರನಾಗಿ ಇರಲು ಬಿಡಲಾಗಿತ್ತು. ಇದನ್ನೂ ಓದಿ: ಇರಾಕ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಗುಂಡಿನ ದಾಳಿಗೆ 23 ಮಂದಿ ಸಾವು, 300 ಜನರಿಗೆ ಗಾಯ

    ವರದಿಗಳ ಪ್ರಕಾರ ಈ ವ್ಯಕ್ತಿಯ ಜನಾಂಗದ ಬಹುಪಾಲು ಜನರು 1970 ರಿಂದ 1980ರ ವೇಳೆ ಸಾವನ್ನಪ್ಪಿದ್ದರು. ಬಳಿಕ ಉಳಿದುಕೊಂಡಿದ್ದ 6 ಸದಸ್ಯರ ಕುಟುಂಬ 1995ರಲ್ಲಿ ಅಕ್ರಮ ಗಣಿಗಾರರ ದಾಳಿಗೆ ಬಲಿಯಾಗಿದ್ದರು. ಆ ದಾಳಿಯಲ್ಲಿ ಉಳಿದುಕೊಡ ಏಕೈಕ ವ್ಯಕ್ತಿ ಈತನಾಗಿದ್ದ. ಇದನ್ನೂ ಓದಿ: ಡ್ರಗ್ಸ್ ಖರೀದಿಗೆ ಫೇಕ್ ಐಡಿ ಬಳಸುತ್ತಿದ್ದ ಮೈಕಲ್ ಜಾಕ್ಸನ್

    ಈ ಬುಡಕಟ್ಟು ವ್ಯಕ್ತಿಯ ನಿಧನಕ್ಕೆ ಬುಡಕಟ್ಟು ಜನರ ಬಗ್ಗೆ ಅಧ್ಯಯನ ಮಾಡುವ ಸರ್ವೈವಲ್ ಇಂಟರ್‌ನ್ಯಾಷನಲ್ ಸಂಸ್ಥೆ ಕಂಬನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]

  • ಚೀನಾ ಭಾರತದೊಂದಿಗಿನ ಗಡಿ ಒಪ್ಪಂದವನ್ನು ಕಡೆಗಣಿಸಿದೆ: ಜೈಶಂಕರ್ ಬೇಸರ

    ಚೀನಾ ಭಾರತದೊಂದಿಗಿನ ಗಡಿ ಒಪ್ಪಂದವನ್ನು ಕಡೆಗಣಿಸಿದೆ: ಜೈಶಂಕರ್ ಬೇಸರ

    ಬ್ರೆಸಿಲಿಯಾ: ಚೀನಾ ಭಾರತದೊಂದಿಗಿನ ಗಡಿ ಒಪ್ಪಂದವನ್ನು ಕಡೆಗಣಿಸಿದೆ. ಗಲ್ವಾನ್ ಕಣಿವೆಯ ಬಿಕ್ಕಟ್ಟಿನಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದರು.

    ಬ್ರೆಜಿಲ್‌ನ ಸಾವೋ ಪಾಲೋದಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೈಶಂಕರ್ ಈ ವೇಳೆ ಮಾತನಾಡಿ, ನಾವು 1990ರ ದಶಕದಿಂದ ಚೀನಾದೊಂದಿಗೆ ಗಡಿ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಪಡೆಗಳನ್ನು ನಿಯೋಜಿಸುವುದನ್ನು ನಿಷೇಧಿಸುವ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ ಅವರು ಆ ಒಪ್ಪಂದವನ್ನು ನಿರ್ಲಕ್ಷಿಸಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ತಿಳಿಸಿದರು.

    ಭಾರತ-ಚೀನಾ ನಡುವಿನ ಗಡಿ ಪರಿಸ್ಥಿತಿ ಕುರಿತು ಮಾತನಾಡಿದ ಜೈಶಂಕರ್, ಸಂಬಂಧಗಳು ಏಕಮುಖವಾಗಿರಬಾರದು. ಸಂಬಂಧಗಳನ್ನು ಉಳಿಸಿಕೊಳ್ಳಲು ಪರಸ್ಪರ ಗೌರವ ಇರುವುದು ಮುಖ್ಯ. ಅವರು ನಮ್ಮ ನೆರೆಹೊರೆಯವರು. ಪ್ರತಿಯೊಬ್ಬರೂ ನೆರೆಹೊರೆಯವರೊಂದಿಗೆ ಬೆರೆಯಲು ಬಯಸುತ್ತಾರೆ. ಅದು ವೈಯಕ್ತಿಕ ಜೀವನ, ದೇಶಗಳ ನಡುವೆಯೂ ಅನ್ವಯಿಸುತ್ತದೆ ಎಂದರು. ಇದನ್ನೂ ಓದಿ: ಆಜಾನ್ ವಿರುದ್ಧ ಮತ್ತೆ ಸಮರ – 23ರಂದು ರಾಜ್ಯಾದ್ಯಂತ ಹೋರಾಟಕ್ಕೆ ಶ್ರೀರಾಮಸೇನೆ ಕರೆ

    ಭಾರತದ ಗಡಿ ಪ್ರದೇಶದಲ್ಲಿ ಚೀನಾ ಸೇನೆ ಒಪ್ಪಂದಗಳನ್ನು ಉಲ್ಲಂಘಿಸಿರುವ ಬಗ್ಗೆ ಭಾರತ ಹಾಗೂ ಚೀನಾ 2020ರ ಏಪ್ರಿಲ್-ಮೇ ತಿಂಗಳಿನಲ್ಲಿ ವಾಗ್ವಾದ ನಡೆಸಿದೆ. ಇದರ ಬೆನ್ನಲ್ಲೇ 2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತದ ಸೇನೆಯೊಂದಿಗೆ ಚೀನಾ ಹಿಂಸಾತ್ಮಕ ಘರ್ಷಣೆ ನಡೆಸಿದ್ದು, ಇದರಿಂದ ಪರಿಸ್ಥಿತಿ ಹದಗೆಟ್ಟಿದೆ.

    ಜೈಶಂಕರ್ ಅವರು 3 ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿದ್ದು, ಇಂದು ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಭಾರತೀಯ ಸಮುದಾಯವನ್ನು ಭೇಟಿ ಮಾಡಿದರು. ಜೈಶಂಕರ್ ಪರಾಗ್ವೆ ಮತ್ತು ಅರ್ಜೆಂಟೀನಾಗೂ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: 23 ಏಮ್ಸ್‌ಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ಸ್ಥಳೀಯ ನಾಯಕರ ಹೆಸರಿಡಿ – ಕೇಂದ್ರಕ್ಕೆ ಪ್ರಸ್ತಾವ

    Live Tv
    [brid partner=56869869 player=32851 video=960834 autoplay=true]