Tag: brazil

  • ಬ್ರೆಜಿಲ್‌ನಲ್ಲಿ ಡ್ರಗ್ಸ್‌ ಗ್ಯಾಂಗ್‌ ವಿರುದ್ಧ ಸಮರ – 64 ಜನರ ಹತ್ಯೆ

    ಬ್ರೆಜಿಲ್‌ನಲ್ಲಿ ಡ್ರಗ್ಸ್‌ ಗ್ಯಾಂಗ್‌ ವಿರುದ್ಧ ಸಮರ – 64 ಜನರ ಹತ್ಯೆ

    ರಿಯೊ ಡಿ ಜನೈರೊ: ಬ್ರೆಜಿಲ್‌ನ ರಿಯೋ (Rio) ನಗರದಲ್ಲಿ ಕಂಡು ಕೇಳರಿಯದ ಹಿಂಸಾತ್ಮಕ ಮಾದಕವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ (Anti Gang Operation) ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 64 ಜನರು ಸಾವನ್ನಪ್ಪಿದ್ದಾರೆ.

    ಮುಂಬರುವ COP30 ಹವಾಮಾನ ಶೃಂಗಸಭೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಗರವು ಆಯೋಜಿಸುವ ಕೆಲವೇ ದಿನಗಳ ಮೊದಲು ಈ ಮಹತ್ವದ ಕಾರ್ಯಾಚರಣೆ ನಡೆದಿದೆ. ಕಾಂಪ್ಲೆಕ್ಸೊ ಡೊ ಅಲೆಮೊ ಮತ್ತು ಪೆನ್ಹಾ ಫಾವೆಲಾ ಸಂಕೀರ್ಣಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.

    ನಾವು ಮಾದಕವಸ್ತು-ಭಯೋತ್ಪಾದನೆಯನ್ನು ಎದುರಿಸುವಲ್ಲಿ ದೃಢವಾಗಿ ನಿಂತಿದ್ದೇವೆ ರಿಯೊ ಗವರ್ನರ್ ಕ್ಲಾಡಿಯೊ ಕ್ಯಾಸ್ಟ್ರೋ ಹೇಳಿದ್ದಾರೆ. 2,500 ಭದ್ರತಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ದಾಳಿಯ ವೇಳೆ ಗ್ಯಾಂಗ್‌ ಸದಸ್ಯರು ಭದ್ರತಾ ಸಿಬ್ಬಂದಿಗೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದರಿಂದ ಸಾವು ನೋವು ಹೆಚ್ಚಾಗಿದೆ. ಕಾರ್ಯಾಚರಣೆಯ ಬಳಿಕ ಅರಣ್ಯ ಪ್ರದೇಶಕ್ಕೆ ಶಸ್ತ್ರಸಜ್ಜಿತ ವ್ಯಕ್ತಿಗಳು ಪಲಾಯನ ಮಾಡಿದ್ದಾರೆ.  ಇದನ್ನೂ ಓದಿ:  ಹಮಾಸ್‌ ಕಳ್ಳಾಟಕ್ಕೆ ಇಸ್ರೇಲ್‌ ಕೆಂಡ – ಗಾಜಾ ಮೇಲೆ ಮತ್ತೆ ದಾಳಿ, 30 ಬಲಿ

    ಒಂದು ವರ್ಷದ ಸುದೀರ್ಘ ತನಿಖೆಯ ಬಳಿಕ ಈ ದಾಳಿ ನಡೆಸಲಾಗಿದೆ ಎಂದು ರಿಯೋ ಆಡಳಿತ ಹೇಳಿದೆ. ಲಿಬರಲ್ ಪಕ್ಷದ ಗವರ್ನರ್ ಆಗಿರುವ ಕ್ಯಾಸ್ಟ್ರೋ, ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡ ಸಿಲ್ವಾ ಅವರ ಸರ್ಕಾರ ಸ್ಥಳೀಯ ಅಪರಾಧಗಳನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ದೂರಿದರು.

    ರಿಯೊ ದಶಕಗಳಿಂದ ಗ್ಯಾಂಗ್‌ಗಳ ಅಡ್ಡೆಯಾಗಿದೆ. ಮಾರ್ಚ್ 2005 ರಲ್ಲಿ ರಿಯೊದ ಬೈಕ್ಸಾಡಾ ಫ್ಲುಮಿನೆನ್ಸ್ ಪ್ರದೇಶದಲ್ಲಿ ಸುಮಾರು 29 ಜನರ ಹತ್ಯೆ ಮಾಡಲಾಗಿತ್ತು. ಮೇ 2021 ರಲ್ಲಿ ಜಕರೆಜಿನ್ಹೋ ಫಾವೆಲಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 28 ಜನರು ಸಾವನ್ನಪ್ಪಿದ್ದರು.

  • ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಗೌರವ

    ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಗೌರವ

    ಬ್ರೆಸಿಲಿಯಾ: ಬ್ರೆಜಿಲ್ (Brazil) ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ `ಗ್ರ‍್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಬ್ರೆಸಿಲಿಯಾದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ಪ್ರದಾನ ಮಾಡಿದರು. ಇದನ್ನೂ ಓದಿ: ಗುಜರಾತ್‌| ಮಧ್ಯದಲ್ಲೇ ಕುಸಿದ ಸೇತುವೆ – 5 ವಾಹನಗಳು ನದಿಗೆ, ಮೂವರು ಬಲಿ

    ಭಾರತ ಮತ್ತು ಬ್ರೆಜಿಲ್ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಬ್ರಿಕ್ಸ್, ಜಿ-20 ಮತ್ತು ಯುಎನ್‌ನಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿಯವರ ಕೊಡುಗೆಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ. ಮೋದಿ ಅವರು ಮೇ 2014ರಲ್ಲಿ ಪ್ರಧಾನಿಯಾದ ನಂತರ ವಿವಿಧ ದೇಶಗಳಿಂದ ಸಿಕ್ಕ 26ನೇ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ. ಇದನ್ನೂ ಓದಿ: 77 ಲಕ್ಷ ವಂಚನೆ – ಆಲಿಯಾ ಭಟ್‌ ಮಾಜಿ ಆಪ್ತ ಕಾರ್ಯದರ್ಶಿ ಬೆಂಗಳೂರಿನಲ್ಲಿ ಅರೆಸ್ಟ್‌

    ಈ ಗೌರವ ಪಡೆದ ನಂತರ ಮಾತನಾಡಿದ ಪ್ರಧಾನಿ ಮೋದಿ ಅವರು, ಅಧ್ಯಕ್ಷ ಲುಲಾ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಂದು ನನಗೆ ಮಾತ್ರವಲ್ಲ, 140 ಕೋಟಿ ಭಾರತೀಯರಿಗೂ ಹೆಮ್ಮೆಯ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಏಕೆಂದರೆ ನನಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಗಿದೆ. ನಾನು ಬ್ರೆಜಿಲ್ ಸರ್ಕಾರ ಮತ್ತು ಬ್ರೆಜಿಲ್ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

  • ಘಾನಾದಿಂದ ಬ್ರೆಜಿಲ್‌ವರೆಗೆ – ಆಪರೇಷನ್ ಸಿಂಧೂರ, ಗ್ಲೋಬಲ್ ಸೌತ್ ಸಂಬಂಧಕ್ಕೆ ಮೋದಿ ಒತ್ತು

    ಘಾನಾದಿಂದ ಬ್ರೆಜಿಲ್‌ವರೆಗೆ – ಆಪರೇಷನ್ ಸಿಂಧೂರ, ಗ್ಲೋಬಲ್ ಸೌತ್ ಸಂಬಂಧಕ್ಕೆ ಮೋದಿ ಒತ್ತು

    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಜು.2 ರಿಂದ 9ರವರೆಗೆ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.

    ಗ್ಲೋಬಲ್ ಸೌತ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. `ಆಪರೇಷನ್ ಸಿಂಧೂರ’ (Operation Sindoor) ಮೂಲಕ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಜಾಗತಿಕವಾಗಿ ಮಂಡಿಸುವುದು ಮತ್ತು ರಾಜತಾಂತ್ರಿಕ ಸಹಕಾರವನ್ನು ಉತ್ತೇಜಿಸುವುದಾಗಿದೆ. ಈ ಭೇಟಿಯು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: ಸಾರ್ವಕಾಲಿಕ ದಾಖಲೆಯತ್ತ ತೆಂಗಿನಕಾಯಿ ದರ – ಕೆಜಿಗೆ ಬರೋಬ್ಬರಿ 70-80 ರೂ.

    ಘಾನಾ:
    ನಾಳೆ ವಿದೇಶ ಪ್ರವಾಸ ಕೈಗೊಳ್ಳಲಿರುವ ಮೋದಿ ಮೊದಲು ಘಾನಾ ದೇಶಕ್ಕೆ ಭೇಟಿ ನೀಡಲಿದ್ದಾರೆ. ಕಳೆದ 30 ವರ್ಷಗಳಲ್ಲಿ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ಜುಲೈ 2-3ರಂದು ನಡೆಯುವ ಈ ಭೇಟಿಯಲ್ಲಿ ಘಾನಾದ ರಾಷ್ಟ್ರಪತಿ ಜಾನ್ ಡ್ರಮಾನಿ ಮಹಾಮಾರೊಡನೆ ಮಾತುಕತೆ ನಡೆಸಲಿದ್ದಾರೆ. ಆರ್ಥಿಕ ಸಹಕಾರ, ಲಸಿಕೆ ಉತ್ಪಾದನಾ ಕೇಂದ್ರ ಸ್ಥಾಪನೆ, ಡಿಜಿಟಲ್ ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಮುಖ್ಯ ಗುರಿಯಾಗಿದೆ. ಭಾರತ ಮತ್ತು ಘಾನಾದ ದ್ವಿಪಕ್ಷೀಯ ವ್ಯಾಪಾರವು 3 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಭಾರತವು ಘಾನಾದಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರವಾಗಿದೆ. ಈ ವೇಳೆ ಮೋದಿಯವರು ಘಾನಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಟ್ರಿನಿಡಾಡ್ ಮತ್ತು ಟೊಬಾಗೊ
    ಜುಲೈ 3-4ರಂದು ಮೋದಿ ಟ್ರಿನಿಡಾಡ್ ಮತ್ತು ಟೊಬಾಗೊ ದೇಶಕ್ಕೆ ಭೇಟಿ ನೀಡಲಿದ್ದಾರೆ, 1999ರ ನಂತರ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ಈ ವರ್ಷ ಭಾರತೀಯ ವಲಸಿಗರು ಈ ದೇಶಕ್ಕೆ ಆಗಮಿಸಿದ 180ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಭೇಟಿಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಟ್ರಿನಿಡಾಡ್‌ನ ರಾಷ್ಟ್ರಪತಿ ಕ್ರಿಸ್ಟಿನ್ ಕಾಂಗಲೂ ಮತ್ತು ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸ್ಸೇಸರ್ ಇಬ್ಬರೂ ಭಾರತೀಯ ಮೂಲದವರಾಗಿದ್ದಾರೆ. ಇದು ಈ ಭೇಟಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಮೋದಿಯವರು ಟ್ರಿನಿಡಾಡ್ ಸಂಸತ್ತಿನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಒಪ್ಪಂದವನ್ನು ಮಾಡಿಕೊಳ್ಳಲಾಗುವುದು.

    ಅರ್ಜೆಂಟೀನಾ
    ಜುಲೈ 4-5ರಂದು, ಮೋದಿಯವರು ಅರ್ಜೆಂಟೀನಾಕ್ಕೆ ಭೇಟಿ ನೀಡಿ ರಾಷ್ಟ್ರಪತಿ ಜೇವಿಯರ್ ಮಿಲೇ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 57 ವರ್ಷಗಳಲ್ಲಿ ಭಾರತದ ಪ್ರಧಾನ ಮಂತ್ರಿಯ ಮೊದಲ ಭೇಟಿ ಇದಾಗಿದೆ. ರಕ್ಷಣಾ ಸಹಕಾರ, ಕೃಷಿ, ಗಣಿಗಾರಿಕೆ, ಶೆಲ್ ಗ್ಯಾಸ್ ಮತ್ತು ನವೀಕರಣ ಶಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಗುರಿಯಾಗಿದೆ. ಅರ್ಜೆಂಟೀನಾದಲ್ಲಿ ಭಾರತದ ಗಣಿಗಾರಿಕೆ ಕಂಪನಿಯಾದ KABIL ಲಿಥಿಯಂ ಮತ್ತು ತಾಮ್ರದಂತಹ ಅಪರೂಪದ ಖನಿಜಗಳ ಶೋಧನೆಗೆ ಒಪ್ಪಂದವನ್ನು ಮಾಡಿಕೊಂಡಿದೆ.

    ಬ್ರೆಜಿಲ್:
    ಜುಲೈ 5-8 ರಂದು, ಮೋದಿಯವರು ಬ್ರೆಜಿಲ್‌ಗೆ ಭೇಟಿ ನೀಡಿ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಶೃಂಗಸಭೆಯು ಜಾಗತಿಕ ಆಡಳಿತ ಸುಧಾರಣೆ, ಶಾಂತಿ, ಎಐ ನಿಯಂತ್ರಣ, ಹವಾಮಾನ ಬದಲಾವಣೆ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ. ಭಾರತವು 2026ರಲ್ಲಿ ಬ್ರಿಕ್ಸ್‌ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಬ್ರೆಜಿಲ್‌ನ ರಾಷ್ಟ್ರಪತಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ರಕ್ಷಣಾ ಉತ್ಪಾದನೆ, ಸಮುದ್ರ ಗಸ್ತು ಹಡಗುಗಳು, ಮತ್ತು ಆಕಾಶ್ ಕ್ಷಿಪಣಿ ವ್ಯವಸ್ಥೆಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸಲಾಗುವುದು. `ಆಪರೇಷನ್ ಸಿಂಧೂರ’ದಲ್ಲಿ ಬಳಸಲಾದ ಭಾರತದ ರಕ್ಷಣಾ ತಂತ್ರಜ್ಞಾನದ ಬಗ್ಗೆ ಬ್ರೆಜಿಲ್ ಆಸಕ್ತಿಯನ್ನು ತೋರಿದೆ.ಇದನ್ನೂ ಓದಿ: ರಾಜ್ಯದಲ್ಲಿ ಐದೂವರೆ ವರ್ಷದಲ್ಲಿ 82 ಹುಲಿಗಳ ಸಾವು; ಸಮಗ್ರ ವರದಿ ಕೇಳಿದ ಅರಣ್ಯ ಸಚಿವ

    ನಮೀಬಿಯಾ:
    ಭೇಟಿಯ ಕೊನೆಯ ತಾಣವಾದ ನಮೀಬಿಯಾಕ್ಕೆ ಜುಲೈ 9 ರಂದು ಮೋದಿಯವರು ಭೇಟಿ ನೀಡಲಿದ್ದಾರೆ. 27 ವರ್ಷಗಳಲ್ಲಿ ಭಾರತದ ಪ್ರಧಾನಮಂತ್ರಿಯ ಮೊದಲ ಭೇಟಿ ಇದಾಗಿದೆ. ನಮೀಬಿಯಾದ ರಾಷ್ಟ್ರಪತಿ ನೆಟುಂಬೊ ನಾಂಡಿ-ನ್ಡೈತ್ವಾಹ್ ಜೊತೆ ಮಾತುಕತೆ ನಡೆಸಲಾಗುವುದು ಮತ್ತು ಯುಪಿಐ ವ್ಯವಸ್ಥೆಯನ್ನು ಜಾರಿಗೆ ತರಲು ಒಪ್ಪಂದವನ್ನು ಮಾಡಿಕೊಳ್ಳಲಾಗುವುದು. ಮೋದಿಯವರು ನಮೀಬಿಯಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಡಿಕೋಲನೈಸೇಶನ್ ಐಕಾನ್ ಸ್ಯಾಮ್ ನುಜೋಮಗೆ ಗೌರವ ಸಲ್ಲಿಸಲಿದ್ದಾರೆ.

    ಭಯೋತ್ಪಾದನೆಯ ವಿರುದ್ಧ ಜಾಗತಿಕ ನಿಲುವು
    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7ರಂದು ಪಾಕಿಸ್ತಾನದಲ್ಲಿನ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ಯಾಚರಣೆಯೇ `ಆಪರೇಷನ್ ಸಿಂಧೂರ’. ಈ ಭೇಟಿಯು ಪ್ರಮುಖವಾಗಿ ಈ ಕಾರ್ಯಾಚರಣೆಗೆ ಸಂಬಂಧಿಸಿದೆ. ಇದು ಭಯೋತ್ಪಾದನೆಯ ವಿರುದ್ಧ ಭಾರತದ ಜಾಗತಿಕ ಕರೆಗೆ ಬೆಂಬಲವನ್ನು ಕೋರಲಿದೆ.

    ಗ್ಲೋಬಲ್ ಸೌತ್‌ನೊಂದಿಗೆ ಭಾರತದ ರಾಜತಾಂತ್ರಿಕತೆ
    ಈ ಐದು ರಾಷ್ಟ್ರಗಳ ಭೇಟಿಯು ಗ್ಲೋಬಲ್ ಸೌತ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸುವ ಒಂದು ಕಾರ್ಯತಂತ್ರದ ಹೆಜ್ಜೆಯಾಗಿದೆ. ರಕ್ಷಣಾ ಸಹಕಾರ, ಡಿಜಿಟಲ್ ಮೂಲಸೌಕರ್ಯ, ಕೃಷಿ, ಮತ್ತು ಶಕ್ತಿಯಂತಹ ಕ್ಷೇತ್ರಗಳಲ್ಲಿ ಭಾರತವು ತನ್ನ ಪಾಲುದಾರಿಕೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.ಇದನ್ನೂ ಓದಿ: ಎಷ್ಟೇ ದುಡ್ಡು ಕೊಟ್ರೂ `ಆ’ ಕೆಲಸ ಮಾಡಲ್ಲವೆಂದ ರಶ್ಮಿಕಾ!

  • 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ ಬಲೂನ್‌ನಲ್ಲಿ ಬೆಂಕಿ ಅವಘಡ; 8 ಮಂದಿ ದುರ್ಮರಣ

    21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ ಬಲೂನ್‌ನಲ್ಲಿ ಬೆಂಕಿ ಅವಘಡ; 8 ಮಂದಿ ದುರ್ಮರಣ

    ಬ್ರೆಜಿಲಿಯಾ: 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಾಟ್‌ ಏರ್‌ ಬಲೂನ್‌ ಪತನಗೊಂಡಿದ್ದು, 8 ಮಂದಿ ಸಾವಿಗೀಡಾಗಿರುವ ಘಟನೆ ಬ್ರೆಜಿಲ್‌ನ ದಕ್ಷಿಣ ರಾಜ್ಯವಾದ ಸಾಂತಾ ಕ್ಯಾಟರಿನಾದಲ್ಲಿ ನಡೆದಿದೆ.

    ಬೆಳಗಿನ ಜಾವ ಹಾರಾಟದ ಸಮಯದಲ್ಲಿ ಪ್ರವಾಸೋದ್ಯಮ ಬಲೂನ್ ಬೆಂಕಿಗೆ ಆಹುತಿಯಾಗಿ, ಪ್ರಿಯಾ ಗ್ರಾಂಡೆ ನಗರದಲ್ಲಿ ಅಪಘಾತಕ್ಕೀಡಾಯಿತು ಎಂದು ರಾಜ್ಯ ಅಗ್ನಿಶಾಮಕ ಇಲಾಖೆ ತಿಳಿಸಿದೆ.

    ಬದುಕುಳಿದ ಹದಿಮೂರು ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳ ಮಾಹಿತಿ ನೀಡಿದೆ.

  • ಎಂಜಿನ್ ವೈಫಲ್ಯ – ಬ್ರೆಜಿಲ್‌ನಲ್ಲಿ ನೇರವಾಗಿ ರಸ್ತೆಗೆ ಲ್ಯಾಂಡ್ ಆದ ವಿಮಾನ

    ಎಂಜಿನ್ ವೈಫಲ್ಯ – ಬ್ರೆಜಿಲ್‌ನಲ್ಲಿ ನೇರವಾಗಿ ರಸ್ತೆಗೆ ಲ್ಯಾಂಡ್ ಆದ ವಿಮಾನ

    ಬ್ರೆಜಿಲ್: ವಿಮಾನವೊಂದು ಎಂಜಿನ್ ವೈಫ್ಯಲ್ಯದಿಂದ ನೇರವಾಗಿ ರಸ್ತೆಗೆ ಲ್ಯಾಂಡ್ ಆಗಿರುವ ಘಟನೆ ಬ್ರೆಜಿಲ್‌ನ (Brazil) ಸಾಂತಾ ಕ್ಯಾಟರಿನಾದಲ್ಲಿ (Santa Catarina) ನಡೆದಿದೆ.

    ಗೌರಮಿರಿಮ್‌ನಲ್ಲಿರುವ ವಿಮಾನ ನಿಲ್ದಾಣದಿಂದ ಟೇಕ್ ಆಫ್ (Take Off) ಆದ ವಿಮಾನವು ಸ್ಪಲ್ಪ ದೂರ ಹಾರುತ್ತಿದ್ದಂತೆ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ತುರ್ತು ಕ್ರಮವಾಗಿ ಪೈಲಟ್ ಗುರುವದ ಬಿಆರ್-1010 ಹೆದ್ದಾರಿ ಮೇಲೆ ಲ್ಯಾಂಡ್ ಮಾಡಿದ್ದಾರೆ. ಇದನ್ನೂ ಓದಿ: ಒಮನ್‌ನಲ್ಲಿ ವಿಜಯ್, ರಶ್ಮಿಕಾ ಸುತ್ತಾಟ- ಬೀಚ್‌ ಫೋಟೋದಿಂದ ಸಿಕ್ಕಿಬಿದ್ದ ಜೋಡಿ

    ಸಿಂಗಲ್ ಎಂಜಿನ್ ಹೊಂದಿರುವ ಪೆಲಿಕನ್ 500ಬಿಆರ್ ವಿಮಾನದಲ್ಲಿ ಕಾಣಿಸಿಕೊಂಡ ಎಂಜಿನ್ ವೈಫಲ್ಯದಿಂದ ತುರ್ತು ಲ್ಯಾಂಡ್ ಮಾಡಲಾಯಿತು. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ 97 ಕೋಟಿ ರೂ. ಅಕ್ರಮ – ಇ.ಡಿಯಿಂದ ಅಧಿಕೃತ ಮಾಹಿತಿ

    ವಿಮಾನ ತುರ್ತು ಭೂಸ್ಪರ್ಶ ಮಾಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ.

  • ಆಂಧ್ರದ ಓಂಗೋಲ್ ತಳಿಯ ಹಸು ಬ್ರೆಜಿಲ್‌ನಲ್ಲಿ 41 ಕೋಟಿಗೆ ಹರಾಜು!

    ಆಂಧ್ರದ ಓಂಗೋಲ್ ತಳಿಯ ಹಸು ಬ್ರೆಜಿಲ್‌ನಲ್ಲಿ 41 ಕೋಟಿಗೆ ಹರಾಜು!

    ಅಮರಾವತಿ: ಆಂಧ್ರಪ್ರದೇಶದ ಓಂಗೋಲ್ ತಳಿಯ ಹಸು, ಬ್ರೆಜಿಲ್‌ನಲ್ಲಿ 41 ಕೋಟಿಗೆ ಹರಾಜಾಗಿದೆ. ಇದೀಗ ಈ ಹಸುವನ್ನು ಜಗತ್ತಿನ ದುಬಾರಿ ಹಸು ಎಂದು ಹೇಳಲಾಗುತ್ತಿದೆ.

    ಆಂಧ್ರಪ್ರದೇಶದಲ್ಲಿ ಓಂಗೋಲ್ ತಳಿಯ ಹಸುಗಳನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ ಇದೀಗ ಬ್ರೆಜಿಲ್‌ನಲ್ಲಿ 41 ಕೋಟಿಗೆ ಈ ಹಸು ಹರಾಜಾಗಿರುವುದು ಇತಿಹಾಸವನ್ನೇ ಸೃಷ್ಟಿಸಿದೆ.

    ಓಂಗೋಲ್ ತಳಿಯ ಹಸುವಿಗೆ ಬ್ರೆಜಿಲ್‌ನಲ್ಲಿ ವಿಯೆಟ್ನಾ-19 ಎಂಬ ಹೆಸರಿದೆ. ಬ್ರೆಜಿಲ್‌ನಲ್ಲಿ 4.82 ಮಿಲಿಯನ್ (41 ಕೋಟಿ)ಗೆ ಹಸು ಹರಾಜು ಆಗಿರುವುದು ಅಚ್ಚರಿ ಮೂಡಿಸಿದೆ. ಈ ಮಾರಾಟವು ಜಪಾನ್‌ನ ಪ್ರಸಿದ್ಧ ವಾಗ್ಯು ಮತ್ತು ಭಾರತದ ಬ್ರಾಹ್ಮಣ ತಳಿಗಳನ್ನೂ ಹಿಂದಿಕ್ಕಿದೆ.

    ಈ ತಳಿಗಳನ್ನು ಪ್ರತಿವರ್ಷವು ಹರಾಜು ಮಾಡಲಾಗುತ್ತಿತ್ತು. 2023ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ವಿಯೆಟ್ನಾ-19 ತಳಿಯ ಹಸುವನ್ನು 37 ಕೋಟಿಗೆ ಮಾರಾಟವಾಗಿತ್ತು.

    ಓಂಗೋಲ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಳಿಯಾಗಿದೆ. ಓಂಗೋಲ್ ತಳಿಯು ವಿಶಿಷ್ಟ ಅನುವಂಶೀಯ ಲಕ್ಷಣ ಹಾಗೂ ಶಕ್ತಿ, ಶಾಖ ನಿರೋಧಕತೆ ಹಾಗೂ ಸ್ನಾಯುಗಳ ರಚನೆಗೆ ಹೆಚ್ಚು ಹೆಸರುವಾಸಿಯಾಗಿದೆ. ಬ್ರೆಜಲ್‌ನಲ್ಲಿ ಈ ತಳಿಯ ಹಸುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ.

  • ಇಬ್ಬರು ಪುರುಷರೊಟ್ಟಿಗೆ ಸೆಕ್ಸ್‌ – ಶೂಟಿಂಗ್‌ ಮಾಡುವಾಗಲೇ ಹೋಟೆಲ್‌ ಬಾಲ್ಕನಿಯಿಂದ ಬಿದ್ದು ನೀಲಿ ತಾರೆ ಸಾವು

    ಇಬ್ಬರು ಪುರುಷರೊಟ್ಟಿಗೆ ಸೆಕ್ಸ್‌ – ಶೂಟಿಂಗ್‌ ಮಾಡುವಾಗಲೇ ಹೋಟೆಲ್‌ ಬಾಲ್ಕನಿಯಿಂದ ಬಿದ್ದು ನೀಲಿ ತಾರೆ ಸಾವು

    ಬ್ರೆಜಿಲಿಯಾ: ತನ್ನ ಅಭಿಮಾನಿಗಳಿಗಾಗಿ ಇಬ್ಬರು ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವ ವೀಡಿಯೋ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲೇ ಪೋರ್ನ್‌ ಸ್ಟಾರ್‌ ಅನ್ನಾ ಬೀಟ್ರಿಜ್ ಪೆರೇರಾ ಅಲ್ವೆಸ್ (Anna Beatriz Pereira Alves) ಹೋಟೆಲ್‌ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬ್ರೆಜಿಲ್‌ನಲ್ಲಿ (Brazil) ನಡೆದಿದೆ.

    ಓನ್ಲಿ ಫ್ಯಾನ್ಸ್‌ಗಾಗಿ ಅನ್ನಾ ಬೀಟ್ರಿಜ್ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಮೂವರ ಸೆಕ್ಸ್‌ ವೀಡಿಯೋ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

    ಪ್ರಾಥಮಿಕ ಮೂಲಗಳ ಪ್ರಕಾರ, ಆಕೆ ವಿಡಿಯೋ ಚಿತ್ರೀಕರಣ ಮುಗಿಸಿದ ಬಳಿಕ ಸಾವನ್ನಪ್ಪಿದ್ದಾಳೆ ಎನ್ನಲಾಗಿದ್ದು, ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ. ಈ ಸಂಬಂಧ ಬ್ರೆಜಿಲ್‌ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.

    ಆಕೆಯೊಂದಿಗೆ ವೀಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಪುರುಷರನ್ನು ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಅಲ್ಲದೇ ಆಕೆಯ ಓನ್ಲಿ ಫ್ಯಾನ್ಸ್‌ ಖಾತೆಯನ್ನೂ ಪೊಲೀಸರು ಪರಿಶೀಲಿಸಿದ್ದಾರೆ. ನೀಲಿ ತಾರೆಯ ಸಾವಿಗೆ ಇಬ್ಬರು ಗೆಳೆಯರು ಸಂತಾಪ ಸೂಚಿಸಿದ್ದಾರೆ.

  • ಅಮೆರಿಕದಲ್ಲಿನ ವಲಸಿಗರ ಕೈಗೆ ಕೋಳ – ಟ್ರಂಪ್ ಆದೇಶದ ವಿರುದ್ಧ ಸಿಡಿದೆದ್ದ ಸಿಖ್ಖರು

    ಅಮೆರಿಕದಲ್ಲಿನ ವಲಸಿಗರ ಕೈಗೆ ಕೋಳ – ಟ್ರಂಪ್ ಆದೇಶದ ವಿರುದ್ಧ ಸಿಡಿದೆದ್ದ ಸಿಖ್ಖರು

    ವಾಷಿಂಗ್ಟನ್‌: ಟ್ರಂಪ್ ಸರ್ಕಾರ ಅಕ್ರಮ ವಲಸಿಗರು ವಿಚಾರದಲ್ಲಿ ಕಠಿಣ ನಿಯಮ ಅನುಸರಿಸ್ತಿದೆ. ಅಮೆರಿಕಾದಲ್ಲಿರುವ ಅಕ್ರಮ ವಲಸಿಗರನ್ನು ವಿಶೇಷ ವಿಮಾನಗಳಲ್ಲಿ ಅವರ ಸ್ವದೇಶಗಳಿಗೆ ಕಳಿಸ್ತಿದೆ. ಇದಕ್ಕೆ ಕೆಲವು ದೇಶಗಳಿಂದ ವಿರೋಧ ವ್ಯಕ್ತವಾಗ್ತಿದೆ.ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿಗೆ `ಹೈ’ ರಿಲೀಫ್ – ಕೋರ್ಟ್‌ನಲ್ಲಿ ವಾದ ಪ್ರತಿವಾದ ಏನಿತ್ತು?

    ತಮ್ಮ ಪೌರರ ಕೈಗೆ ಕೋಳ ತೊಡಿಸಿ ವಾಪಸ್ ಕರೆತರುತ್ತಿರುವುದನ್ನು ಬ್ರೆಜಿಲ್ ಖಂಡಿಸಿದೆ. ಇನ್ನೂ ಕೊಲಂಬಿಯಾ ಸಹ ಮೊದಲಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಲಸಿಗರನ್ನು ಕರೆತರುವ ಅಮೆರಿಕಾ ವಿಮಾನಗಳನ್ನು ನಮ್ಮ ದೇಶಕ್ಕೆ ಬಿಟ್ಟುಕೊಳ್ಳಲ್ಲ ಎಂದಿತ್ತು. ಗೌರವದಿಂದ ಕಳಿಸಿಕೊಟ್ಟರೆ ಮಾತ್ರ ಒಪ್ಪುತ್ತೇವೆ ಎಂದಿತ್ತು.

    ಇದಕ್ಕೆ ಗರಂ ಆದ ಟ್ರಂಪ್, ಕೊಲಂಬಿಯಾ ಉತ್ಪನ್ನಗಳ ಮೇಲೆ ಶೇಕಡಾ 50 ಸುಂಕ ಹೆಚ್ಚಿಸುವ ಘೋಷಣೆ ಮಾಡಿದ್ದರು. ಅಲ್ಲದೇ, ಕೊಲಂಬಿಯಾ ಅಧಿಕಾರಿಗಳ ವೀಸಾ ರದ್ದು ಮಾಡುವ ಬೆದರಿಕೆ ಹಾಕಿದ್ದರು. ಈ ಬೆನ್ನಲ್ಲೇ ಕೊಲಂಬಿಯಾ ಅಧ್ಯಕ್ಷರು ಉಲ್ಟಾ ಹೊಡೆದರು. ಸ್ವದೇಶಕ್ಕೆ ವಾಪಸ್ ಆಗುವ ಅಕ್ರಮ ವಲಸಿಗರನ್ನು ಬಿಟ್ಟುಕೊಳ್ಳುವುದಾಗಿ ತಿಳಿಸಿದರು. ತಕ್ಷಣವೇ ಟ್ರಂಪ್ ಸಹ ತಮ್ಮ ಘೋಷಣೆಯನ್ನು ಹಿಂಪಡೆದರು. ಈ ಮಧ್ಯೆ, ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸರು ನ್ಯೂಯಾರ್ಕ್, ನ್ಯೂಜೆರ್ಸಿಯ ಗುರುದ್ವಾರಗಳಿಗೆ ನುಗ್ಗಿದ್ದಾರೆ. ಇದಕ್ಕೆ ಸಿಖ್ಖರಿಂದ ಭಾರೀ ವಿರೋಧ ವ್ಯಕ್ತವಾಗ್ತಿದೆ.ಇದನ್ನೂ ಓದಿ: ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ರೈತರಿಗೆ ಸಂಕಷ್ಟ – ಮಾ.31ರ ವರೆಗೆ ಮಾತ್ರ ಕಾಲುವೆಗೆ ನೀರು ಸಾಧ್ಯತೆ

     

     

  • Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

    Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

    – ಕ್ರಿಸ್ಮಸ್‌ ಆಚರಣೆಗೆ ತೆರಳುತ್ತಿದ್ದ ಕುಟುಂಬ ಮಸಣಕ್ಕೆ

    ಬ್ರೆಸಿಲಿಯಾ: ಬ್ರೆಜಿಲ್‌ನ (Brazil) ಪ್ರವಾಸಿ ನಗರವಾದ ಗ್ರಾಮಡೊದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 10 ಮಂದಿ ಪ್ರಯಾಣಿಕರೂ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಬ್ರೆಜಿಲ್‌ನ ಸಿವಿಲ್ ಡಿಫೆನ್ಸ್ ಏಜೆನ್ಸಿಯ ಪ್ರಕಾರ, ವಿಮಾನವು ಮನೆಯೊಂದರ ಚಿಮಣಿಗೆ ತಾಕಿದೆ, ನಂತರ ಕಟ್ಟಡದ 2ನೇ ಮಹಡಿಗೆ ಅಪ್ಪಳಿಸಿದೆ. ಬಳಿಕ ಗ್ರಾಮಡೋದ ಕೆಲ ಮಳಿಗೆಗಳಿಗೂ ಅಪ್ಪಳಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಣಕಾಸಿನ ವಂಚನೆ ತಡೆಗೆ ಆರ್‌ಬಿಐ ಅಭಿವೃದ್ಧಿಪಡಿಸಲಿದೆ AI ತಂತ್ರಜ್ಞಾನ! ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

    ಸಾವೊ ಪಾಲೊ ರಾಜ್ಯಕ್ಕೆ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಬ್ರೆಜಿಲ್‌ನ ಉದ್ಯಮಿ ಲೂಯಿಸ್ ಕ್ಲೌಡಿಯೊ ಗಲೇಜಿ ಅವರು ವಿಮಾನವನ್ನ ಪೈಲಟ್ ಮಾಡಿದ್ದಾರೆ. 61 ವರ್ಷದ ಉದ್ಯಮಿ ತನ್ನ ಪತ್ನಿ, ಮೂವರು ಹೆಣ್ಣುಮಕ್ಕಳು, ಕುಟುಂಬದ ಇತರ ಸದಸ್ಯರು ಹಾಗೂ ತನ್ನ ಕಂಪನಿಯ ಸಹೋದ್ಯೋಗಿಗಳು ಸೇರಿ 10 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಎಲ್ಲಾ 10 ಮಂದಿ ಮೃತಪಟ್ಟಿದ್ದಾರೆ. ಇನ್ನೂ ವಿಮಾನ ಅಪ್ಪಳಿಸಿ ಗಾಯಗೊಂಡಿರುವ ಸುಮಾರು 15 ಮಂದಿಯನ್ನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    ಮೂಲಗಳ ಪ್ರಕಾರ, ಅಪಘಾತಕ್ಕೀಡಾದ ಉದ್ಯಮಿ ಕುಟುಂಬಸ್ಥರು ಕ್ರಿಸ್ಮಸ್‌ ಆಚರಣೆಗಾಗಿ ಪ್ರವಾಸಿ ನಗರಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಪರ್ವತ ಪ್ರದೇಶದಲ್ಲಿರುವ ಗ್ರಾಮಡೊ ಸೆರಾ ಗೌಚಾ ಗ್ರಾಮವು ಪ್ರವಾಸಿಗರ ಆಕರ್ಷಣಿಯ ಸ್ಥಳ ಎಂದೇ ಜನಪ್ರಿಯವಾಗಿದೆ. 19ನೇ ಶತಮಾನದಲ್ಲಿ ಜರ್ಮನ್‌ ಮತ್ತು ಇಟಾಲಿಯನ್‌ ವಲಸಿಗರಿಂದ ಈ ಪ್ರದೇಶವಾಗಿ ನಿರ್ಮಾಣವಾಯಿತು ಎನ್ನಲಾಗಿದೆ. ಈಗಲೂ ಕ್ರಿಸ್ಮಸ್‌ ದಿನಗಳಲ್ಲಿ ಇಲ್ಲಿಹೆ ಯಾರೂ ಊಹಿಸದಷ್ಟು ಪ್ರವಾಸಿಗರು ಪ್ರವಾಸ ಕೈಗೊಳ್ಳುತ್ತಾರೆ.

    ಬ್ರೆಜಿಲ್ ಮಿನಾಸ್ ಗೆರೈಸ್‌ (Minas Gerais) ರಾಜ್ಯದ ಫೆರ್ನಾವೊ ಡಯಾಸ್ ರಾಷ್ಟ್ರೀಯ ಹೆದ್ದಾರಿಯ (Fernao Dias National Highway) ಲಾಜಿನ್ಹಾ ಪಟ್ಟಣದ ಬಳಿ ಕಳೆದ ಒಂದು ದಿನದ ಹಿಂದೆಯಷ್ಟೇ ಬಸ್ ಟೈರ್ ಸ್ಫೋಟಗೊಂಡು 37 ಮಂದಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಇದಾದ ಮರುದಿನವೇ ಮತ್ತೊಂದು ದುರಂತ ಸಂಭವಿಸಿದೆ. ಇದನ್ನೂ ಓದಿ: ತಮಿಳುನಾಡು ಅರಣ್ಯ ಪ್ರದೇಶದಿಂದ ರಾಜ್ಯಕ್ಕೆ ಕಾಡಾನೆಗಳು ಎಂಟ್ರಿ – ರೈತರು, ಕಾಫಿ ಬೆಳೆಗಾರರು ಹೈರಾಣು

  • ಬ್ರೆಜಿಲ್ | ಬಸ್ ಟೈರ್ ಸ್ಫೋಟಗೊಂಡು ಟ್ರಕ್‌ಗೆ ಡಿಕ್ಕಿ – 37 ಮಂದಿ ಬಲಿ

    ಬ್ರೆಜಿಲ್ | ಬಸ್ ಟೈರ್ ಸ್ಫೋಟಗೊಂಡು ಟ್ರಕ್‌ಗೆ ಡಿಕ್ಕಿ – 37 ಮಂದಿ ಬಲಿ

    ಬ್ರೆಸಿಲಿಯಾ: ಬಸ್ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, 37 ಮಂದಿ ಬಲಿ ಸಾವನ್ನಪ್ಪಿರುವ ಘಟನೆ ಬ್ರೆಜಿಲ್ (Brazil) ಮಿನಾಸ್ ಗೆರೈಸ್‌  (Minas Gerais) ರಾಜ್ಯದ ಫೆರ್ನಾವೊ ಡಯಾಸ್ ರಾಷ್ಟ್ರೀಯ ಹೆದ್ದಾರಿಯ (Fernao Dias National Highway) ಲಾಜಿನ್ಹಾ ಪಟ್ಟಣದ ಬಳಿ ನಡೆದಿದೆ.

    ಶನಿವಾರ (ಡಿ.21) ಬೆಳಿಗ್ಗೆ ಈ ಘಟನೆ ನಡೆದಿದೆ. ಸಾವ್ ಪಾಲೊದಿಂದ 45 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಟಿಯೊಫಿಲೊ ಒಟೊನಿ ನಗರದ ಬಳಿ ಅಪಘಾತಕ್ಕೀಡಾಗಿದೆ. 37 ಜನರು ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಒಟೋನಿಯ ಟಿಯೋಫಿಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ತ್ರಾಸಿ ಬೀಚ್‌ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ – ರೈಡರ್ ಕಣ್ಮರೆ

    ಘಟನಾ ಸ್ಥಳಕ್ಕೆ ಮಿನಾಸ್ ಗೆರೈಸ್ ಅಗ್ನಿಶಾಮಕ ಇಲಾಖೆ ದೌಡಾಯಿಸಿದ್ದು, ಕ್ರೇನ್ ಮೂಲಕ ಅವಶೇಷಗಳನ್ನು ಹೊರತೆಗೆದಿದ್ದಾರೆ. ಜೊತೆಗೆ ಇದೇ ವೇಳೆ ಮೂವರು ಪ್ರಯಾಣಿಕರಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಬಸ್ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ಅಪಘಾತದಲ್ಲಿ ಹೊತ್ತಿಕೊಂಡ ಬೆಂಕಿಯಿಂದಾಗಿ ದೇಹಗಳು ಛಿದ್ರಗೊಂಡ ಪರಿಣಾಮ ನಿಖರವಾಗಿ ಮೃತದೇಹಗಳ ಸಂಖ್ಯೆ ನಿರ್ದಿಷ್ಟಪಡಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: Maharashtra | ನೂತನ ಸಚಿವರಿಗೆ ಖಾತೆ ಹಂಚಿಕೆ, ಗೃಹಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌!