Tag: branded slippers

  • ಬ್ರಾಂಡೆಡ್ ಚಪ್ಪಲಿ, ಶೂ ಮೇಲೆ ಕಳ್ಳರ ಕಣ್ಣು

    ಬ್ರಾಂಡೆಡ್ ಚಪ್ಪಲಿ, ಶೂ ಮೇಲೆ ಕಳ್ಳರ ಕಣ್ಣು

    ಬೆಂಗಳೂರು: ಇಷ್ಟು ದಿನ ಮನೆಯ ಹೊರಗಡೆ ನಿಲ್ಲಿಸಿದ್ದ ದುಬಾರಿ ಕಾರು ಬೈಕ್’ಗಳನ್ನು ಕಡಿಯುತ್ತಿದ್ದ ಕಳ್ಳರ ಕಣ್ಣು ಇದೀಗ ಬ್ರಾಂಡೆಡ್ ಚಪ್ಪಲಿ ಶೂ ಮೇಲೆ ಬಿದ್ದಿದೆ.

    ಇತ್ತೀಚೆಗೆ ಕಳ್ಳರು ಅಪಾರ್ಟ್ ಮೆಂಟ್’ಗಳಿಗೆ ಲಗ್ಗೆ ಇಟ್ಟು ಬ್ರಾಂಡೆಡ್ ಚಪ್ಪಲಿ ಶೂ ಗಳನ್ನು ಕಡಿಯುತ್ತಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಅನಂತನಗರದ ಅಪಾರ್ಟ್ ಮೆಂಟ್ ನಲ್ಲಿ ಬ್ರಾಂಡೆಡ್ ಶೂ ಮತ್ತು ಚಪ್ಪಲಿಗಳ ಕಳ್ಳತನ ನಡೆದಿದೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಜನವರಿ 6ರಂದು ಹೆಬ್ಬಗೋಡಿ ಅನಂತನಗರದ ಸನ್ನಿಧಿ ಅಪಾರ್ಟ್ ಮೆಂಟ್ ಗೆ ಬಂದ ನಾಲ್ವರು ಕಳ್ಳರು ಮೂಟೆಗಟ್ಟಲೇ ಚಪ್ಪಲಿ ಶೂಗಳನ್ನು ಕದ್ದಿದ್ದಾರೆ. ಕಳ್ಳರು ತಮ್ಮ ಗುರುತು ಪತ್ತೆಯಾಗದಿರಲೆಂದು ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನ ಎಸಗಿದ್ದಾರೆ. ರಾತ್ರಿ 1 ಗಂಟೆ ಅಪಾರ್ಟ್ ಮೆಂಟಗಳ ಮನೆಯ ಮುಂದೆ ಬಿಟ್ಟಿರುವ ಬ್ರಾಂಡೆಡ್ ಶೂ, ಚಪ್ಪಲಿಗಳನ್ನು ಮೂಟೆ ಕಟ್ಟಿ ಹೊತ್ತೊಯ್ದಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.