Tag: Bramhanda Guruji

  • ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಲೀಲಾವತಿ: ಬ್ರಹ್ಮಾಂಡ ಗುರೂಜಿ

    ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಲೀಲಾವತಿ: ಬ್ರಹ್ಮಾಂಡ ಗುರೂಜಿ

    ಬೆಂಗಳೂರು: ಆ ಕಾಲದಲ್ಲಿ ಲೀಲಾವತಿ (Leelavathi) ಅವರು ನಟ ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಹೇಳಿದರು.

    ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಡಾ.ರಾಜ್‌ಕುಮಾರ್‌, ಉದಯಕುಮಾರ್‌ ಅವರಿಂದ ಹಿಡಿದು ಅನೇಕರಿಗೆ ಮದ್ರಾಸ್‌ ಮೂಲಕೇಂದ್ರವಾಗಿತ್ತು. ಮಹಾಬಲಿಪುರದಲ್ಲಿ 10 ಎಕರೆ ಜಾಗ ತೆಗೆದುಕೊ ಅಂತಾ ಆಗ ರಜನಿಕಾಂತ್‌ (Rajinikanth) ಅವರಿಗೆ ಲೀಲಾವತಿ ಅಮ್ಮನವರು ಹೇಳಿದ್ದರು. ಆಗ ನಾವು ಅಲ್ಲೇ ಇದ್ದೆವು. ದ್ವಾರಕೀಶ್‌ ಚಿತ್ರ ಶೂಟಿಂಗ್‌ ನಡೆಯುತ್ತಿತ್ತು. ಆಗ ರಜನಿಕಾಂತ್‌ ನನ್ನ ಹತ್ತಿರ ದುಡ್ಡಿಲ್ಲ ಎಂದಾಗ, ಸ್ವತಃ ತಾವೇ ದುಡ್ಡುಕೊಟ್ಟು ರಜನಿಕಾಂತ್‌ಗೆ ಜಮೀನು ಖರೀದಿಸಿಕೊಟ್ಟಿದ್ದರು. ನಂತರ ಲೀಲಾವತಿ ಅವರಿಗೆ ರಜನಿಕಾಂತ್‌ ಹಣ ವಾಪಸ್‌ ಮಾಡಿದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಮೂರು ದಿನಗಳ ಹಿಂದಷ್ಟೇ ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್ ಪಡೆದಿದ್ದರು ಲೀಲಾವತಿ

    ಆ ಕಾಲದಲ್ಲಿ ಒಬ್ಬ ಮನುಷ್ಯ ನಮ್ಮವನು ಬೆಳೆಯುತ್ತಿದ್ದಾನೆ ಎಂದಾಗ ಸ್ಫೂರ್ತಿ ತುಂಬುವ ಕೆಲವನ್ನು ಒಬ್ಬ ಹೆಂಗಸಾಗಿ (ಲೀಲಾವತಿ) ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಕೋಟ್ಯಂತರ ಹಣ ಗಳಿಸುವ ಪುರುಷ ಕಲಾವಿದರು, ಪೋಷಕ ಕಲಾವಿದರಿಗೆ ಸಹಾಯ ಮಾಡಬಹುದು. ಇವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದರೆ ಬಹಳ ಕಷ್ಟ ಎಂದರು.

    ಲೀಲಾವತಿ ಅವರು ಹಳೇ ಪೋಷಕ ನಟರು, ಸಹಕಲಾವಿದರು, ಹಾಸ್ಯ ನಟರಿಗೆ ಸಹಾಯ ಆಗಲಿ ಅಂತ ಪಿಂಚಣಿ ರೂಪದಲ್ಲಿ ಹಣ ಕೊಡುತ್ತಿದ್ದರು. ತಮಿಳುನಾಡಿನಲ್ಲಿ 30 ಮಂದಿ ಹಳೆ ಕಲಾವಿದರಿಗೆ ಊಟಕ್ಕೂ ಗತಿ ಇರಲಿಲ್ಲ. ಅವರಿಗೆ ಆಶ್ರಯವಾಗಿದ್ದವರು ಲೀಲಾವತಿ ಅವರು. ಆ ಮಹಿಳೆ ತನಗೆ ಇಲ್ಲದಿದ್ದರೂ ಪರವಾಗಿಲ್ಲ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು. ಇದನ್ನೂ ಓದಿ: ಲೀಲಾವತಿ ಮಗನಾಗಿ ನಟಿಸಿದ್ದೇ ನನ್ನ ಭಾಗ್ಯ: ದ್ವಾರಕೀಶ್

    ಕಲಾವಿದರ ಸಂಘದಲ್ಲಿ ಎಷ್ಟೋ ಜನಕ್ಕೆ ದಾರಿದೀಪ, ಸ್ಪೂರ್ತಿಯಾಗಿ ಹಣ ಕೊಟ್ಟಿರುವವರು ಲೀಲಾವತಿ ಅಮ್ಮ. ಲೀಲಾವತಿ ಅವರ ಹೆಸರಿನಲ್ಲಿ ಒಂದು ಸ್ಮಾರಕ ಕಟ್ಟಬೇಕು ಎಂದು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ಸ್ಮಾರಕ ಕಟ್ಟಿದರೆ ಸರ್ಕಾರದ ಗಂಟೇನು ಹೋಗುವುದಿಲ್ಲ ಎಂದು ಒತ್ತಾಯಿಸಿದರು.

  • ಮೋದಿಗೆ ಗಂಡಾಂತರ ಕಾದಿದೆಯಂತೆ, ಎಚ್.ಡಿ.ಕೆ ಕಿಂಗ್ ಮೇಕರ್ ಆಗ್ತಾರಂತೆ: ಬ್ರಹ್ಮಾಂಡ ಗುರೂಜಿ ಭವಿಷ್ಯ

    ಮೋದಿಗೆ ಗಂಡಾಂತರ ಕಾದಿದೆಯಂತೆ, ಎಚ್.ಡಿ.ಕೆ ಕಿಂಗ್ ಮೇಕರ್ ಆಗ್ತಾರಂತೆ: ಬ್ರಹ್ಮಾಂಡ ಗುರೂಜಿ ಭವಿಷ್ಯ

    ಹಾಸನ: ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ. ದೇವರ ಮೊರೆಯಿಂದ ಪರಿಹಾರ ಕಂಡುಕೊಳ್ಳದೇ ಹೋದ್ರೆ ಮೃತ್ಯು ಕೂಡ ಎದುರಾಗಬಹುದು ಎಂದು ಹಾಸನದಲ್ಲಿ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.

    ಹಾಸನಾಂಬೆ ದೇವಾಲಯದಲ್ಲಿ ಇಂದು ಮಾತನಾಡಿದ ಬ್ರಹ್ಮಾಂಡ ಗುರೂಜಿ, ಮೋದಿ ಅವರದ್ದು ವೃಶ್ಚಿಕ ರಾಶಿ. ಅದರಲ್ಲಿನ ದೋಷ ಇದಕ್ಕೆ ಕಾರಣ ಎಂದಿದ್ದಾರೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್‍ಡಿಕೆ ಕಿಂಗ್ ಮೇಕರ್ ಆಗಲಿದ್ದಾರೆ. ಅವರ ಮೇಲೆ ಉತ್ತರ ಕರ್ನಾಟಕ ಜನ ನಂಬಿಕೆ ಇಟ್ಟಿದ್ದಾರೆ. ಆದರೆ ಅವರು ತಂದೆ ಮಾತು ಕೇಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಮತ್ತೊಮ್ಮೆ ಸಿಎಂ ಆಗೋ ಯೋಗ ಅವರಿಗಿದೆ. ಸಿಎಂ ಸಿದ್ದರಾಮಯ್ಯ ಈವರೆಗೆ ಮಾಡಿರುವ ತಪ್ಪು ಸರಿಪಡಿಸಿಕೊಳ್ಳಬೇಕು. ಅವರ ಸುತ್ತಮುತ್ತ ಕೆಲವು ಕಚಡಾ ಮಂತ್ರಿಗಳಿದ್ದಾರೆ ಅಂದ್ರು.

    ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಇಂದು ತೆರೆಯಲಾಗುತ್ತದೆ. ಆಧಿದೇವತೆ ಹಾಸನಾಂಬೆ ದರ್ಶನಾರಂಭಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಿಂದೂ ಪಂಚಾಂಗದ ಆಶ್ವೀಜ ಮಾಸದ ಹುಣ್ಣಿಮೆ ನಂತರದ ಮೊದಲ ಗುರುವಾರ ಬಾಗಿಲು ತೆಗೆಯುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಅದೇ ರೀತಿ ಮೈಸೂರು ತಳವಾರ ವಂಶಸ್ತ ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆಗೆಯಲಾಗುವುದು.

    ಇಂದು ಮಧ್ಯಾಹ್ನ 12:30ಕ್ಕೆ ಅರ್ಧ ನಕ್ಷತ್ರ ಸಮಯದಲ್ಲಿ ಗರ್ಭ ಗುಡಿ ಬಾಗಿಲು ತೆಗೆಯಲು ಸಕಲ ಸಿದ್ಧತೆ ಮಾಡಲಾಗಿದೆ. ಕನಿಷ್ಟ 9 ದಿನ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಪಂಚಾಗದ ಪ್ರಕಾರ ಇಂದಿನಿಂದ ಬಲಿ ಪಾಡ್ಯಮಿಯ ಮಾರನೇ ದಿನದವರೆಗೆ ದರ್ಶನ ಭಾಗ್ಯ ಲಭಿಸಲಿದ್ದು, ಲಕ್ಷಾಂತರ ಮಂದಿ ದರ್ಶನ ಪಡೆಯುವ ನಿರೀಕ್ಷೆ ಇದೆ. ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಇರುವುದಿಲ್ಲ. ಈ ಬಾರಿ ಕೇವಲ 8 ದಿನವಷ್ಟೇ ದರ್ಶನಕ್ಕೆ ಅವಕಾಶವಿದ್ದು, 24 ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಇಂದು ಬಾಗಿಲು ತೆಗೆದ ನಂತರ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ಕಾರ್ಯಗಳು ನೆರವೇರಲಿದ್ದು, ನಾಳೆ ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬೆಯ ಸಾರ್ವಜನಿಕ ದರ್ಶನ ಲಭ್ಯವಾಗಲಿದೆ.