Tag: Bramavara

  • ಆರೋಗ್ಯವಾಗಿದ್ದ ಯುವತಿ ಕುಳಿತಲ್ಲೇ ಕುಸಿದುಬಿದ್ದು ಸಾವು

    ಆರೋಗ್ಯವಾಗಿದ್ದ ಯುವತಿ ಕುಳಿತಲ್ಲೇ ಕುಸಿದುಬಿದ್ದು ಸಾವು

    ಉಡುಪಿ: ಧಾರ್ಮಿಕ ಸಮಾರಂಭಕ್ಕೆ ಆಗಮಿಸಿದ್ದ ಯುವತಿ (Young Woman) ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಸಂಬಂಧಿಕರ ರೋಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿ ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ (23) ಕುಸಿದು ಬಿದ್ದಿದ್ದಾರೆ.

    ಜೋಸ್ನಾ ಬ್ರಹ್ಮಾವರ ತಾಲೂಕು, ಕೊಳಲಗಿರಿಯ ಸಮೀಪದ ಹಾವಂಜೆಯ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ರಾತ್ರಿ ಸುಮಾರು 8:30ಕ್ಕೆ ಯುವತಿ ಕುಳಿತಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣ ಯುವತಿಯನ್ನು ಆಕೆಯ ಸಂಬಂಧಿಕರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಜೋಸ್ನಾ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದೊಡ್ಡರಸಿನಕೆರೆಯಲ್ಲಿ ಅಂಬರೀಶ್ 4ನೇ ವರ್ಷದ ಸ್ಮರಣೆ – ಸಮಾಧಿಗೆ ಪೂಜೆ ಸಲ್ಲಿಸಿದ ಸಂಸದೆ ಸುಮಲತಾ

    ಘಟನೆಯ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ್ಯೋಸ್ನಾಗೆ ಯಾವುದೇ ಅನಾರೋಗ್ಯದ ಸಮಸ್ಯೆ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೊರೊನಾ ನಂತರ ಆರೋಗ್ಯವಂತರೂ ದಿಢೀರ್ ಎಂದು ಕುಸಿದು ಬಿದ್ದು ಮೃತಪಡುತ್ತಿರುವ ಘಟನೆಗಳು ದೇಶಾದ್ಯಂತ ದಾಖಲಾಗುತ್ತಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ಶಾರೀಕ್ ಅಲ್ಲ ಘಜನಿಯಿಂದ ಟಿಪ್ಪುವರೆಗಿನ ಎಲ್ಲರೂ ದೇವಸ್ಥಾನದ ಮೇಲೆ ದಾಳಿ ಮಾಡ್ಕೊಂಡೇ ಬಂದಿದ್ದಾರೆ: ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಯಕ್ಷಗಾನ ಕಲಾವಿದನ ಮೇಲೆ ದೈವದ ಆವಾಹನೆ

    ಯಕ್ಷಗಾನ ಕಲಾವಿದನ ಮೇಲೆ ದೈವದ ಆವಾಹನೆ

    – ದೈವ ದೃಷ್ಟಿ ಯಕ್ಷಗಾನದ ವೇಳೆ ಅಚಾತುರ್ಯ

    ಉಡುಪಿ: ಯಕ್ಷಗಾನ ವೇಷಧಾರಿ ಮೇಲೆ ದೈವದ ಆವಾಹನೆಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ. ಹಟ್ಟಿಯಂಗಡಿ ಯಕ್ಷಗಾನ ಮೇಳದ ಕಲಾವಿದ ಧೂಮಾವತಿ ಅವರು ದೈವದ ವೇಷ ಧರಿಸಿದ್ದ ಸಂದರ್ಭದಲ್ಲಿ ದೈವದ ಆವಾಹನೆಯಾಗಿದೆ.

    ರಂಗಸ್ಥಳ ಪ್ರವೇಶಕ್ಕೂ ಮುನ್ನ ಪ್ರೇಕ್ಷಕರ ನಡುವೆಯಿಂದ ಕೆಲ ಪಾತ್ರಧಾರಿಗಳನ್ನು ಕರೆತರಲಾಗುತ್ತದೆ. ಹಾಗೆಯೇ ಪಾತ್ರಧಾರಿ ರಾಜೇಶ್ ಆಚಾರ್ಯ ದೈವದ ವೇಷ ಧರಿಸಿದ್ದರು. ಈ ಸಂದರ್ಭ ಅವರ ಮೈಮೇಲೆ ಆವೇಶ ಬಂದಿದೆ. ಪಂಜು ಹಿಡಿದು ವಿಚಿತ್ರವಾಗಿ ವರ್ತಿಸಿದ ಕಲಾವಿದ ನೆಲಕ್ಕೆ ಬಿದ್ದಿದ್ದಾರೆ.

    ಬ್ರಹ್ಮಾವರ ಅಯ್ಯಪ್ಪ ಮಂದಿರದಲ್ಲಿ ಶಬರಿಮಲೆ ಯಾತ್ರೆಗೆ ಹೊರಡುವ ಮುನ್ನ ಯಕ್ಷಗಾನ ಪ್ರದರ್ಶನ ಮತ್ತು ಅನ್ನಸಂತರ್ಪಣೆ ಇರುತ್ತದೆ. ಈ ಬಾರಿ ದೈವ ದೃಷ್ಟಿ ಎಂಬ ಯಕ್ಷಗಾನ ಪ್ರಸಂಗವನ್ನು ತಂಡ ಆಡಿಸಿದ ವೇಳೆ ಘಟನೆ ನಡೆದಿದೆ. ಅಯ್ಯಪ್ಪ ಸೇವಾ ಸಮಿತಿಯ ಗುರು ಸ್ವಾಮಿ ಕೂಡಲೇ ಆಗಮಿಸಿ ಪ್ರಸಾದ ಹಾಕಿದ ನಂತರ ಪಾತ್ರಧಾರಿ ಶಾಂತವಾಗಿದ್ದಾರೆ. ಯಕ್ಷಗಾನ ಪ್ರಸಂಗ ಮುಂದುವರಿದಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಲಾವಿದ ರಾಜೇಶ್ ಆಚಾರ್ಯ, ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಕೆಲವು ಕ್ಷಣಗಳ ನಂತರ ಸಹಜ ಸ್ಥಿತಿಗೆ ಬಂದಿದ್ದೇನೆ ಎಂದು ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಬ್ರಹ್ಮಾವರದಲ್ಲಿ ವಂಡಾರು ದೇವರ ಕಂಬಳ ಸಂಪನ್ನ

    ಬ್ರಹ್ಮಾವರದಲ್ಲಿ ವಂಡಾರು ದೇವರ ಕಂಬಳ ಸಂಪನ್ನ

    ಉಡುಪಿ: ಕರಾವಳಿಯ ಓಟದ ಜಿದ್ದಿನ ಕಂಬಳ ಆರಂಭಕ್ಕೂ ಮುನ್ನ ದೇವರ ಕಂಬಳ ಶುರುವಾಗಿದೆ. ಉಡುಪಿ ಜಿಲ್ಲೆಯ ಪ್ರಸಿದ್ಧ ಕಂಬಳಗಳಲ್ಲಿ ಒಂದಾದ ಯಡ್ತಾಡಿ ಕಂಬಳವು ಭರ್ಜರಿ ಕೋಣಗಳ ಓಟದ ನಡುವೆ ನಡೆಯಿತು.

    ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಬರುವ ಯಡ್ತಾಡಿ ಕಂಬಳವು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿರುವ ಕಂಬಳವಾಗಿದೆ. ವಂಡಾರು ಕಂಬಳವೆಂದೇ ಇದು ಪ್ರಸಿದ್ಧಿ. ಕೆಲವು ವರ್ಷಗಳ ಹಿಂದೆ ಪೇಟಾ ಹೋರಾಟದ ಹಿನ್ನೆಲೆಯಲ್ಲಿ ಕಂಬಳಕ್ಕೆ ನಿಷೇಧ ಹೇರಿದ್ದರಿಂದ ಯಡ್ತಾಡಿ ಕಂಬಳವು ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿತ್ತು.

    ಸ್ಥಳೀಯ ಕಂಬಳ ಆಸಕ್ತ ಹರೀಶ್ ಶೆಟ್ಟಿ ಮಾತನಾಡಿ, ಓಟದ ಕಂಬಳ ಆರಂಭಕ್ಕೆ ಮುನ್ನ ದೇವರ ಕಂಬಳ ನಡೆಯುತ್ತಿತ್ತು. ನಮ್ಮಲ್ಲಿ ಸಾಂಪ್ರದಾಯಿಕ ಆಚರಣೆ ಮಾತ್ರ ಇದೆ. ಸ್ಪರ್ಧಾ ಕಂಬಳ ಇಲ್ಲ. ಹಾಗಾಗಿ ಜಿಲ್ಲೆಯ ಹೊರ ಜಿಲ್ಲೆಯ ಕೋಣಗಳು ಬರುತ್ತವೆ ಎಂದು ಹೇಳಿದರು.

    ಈ ಬಾರಿ ಕಂಬಳಕ್ಕೆ ಯಾವುದೇ ಅಡೆತಡೆಗಳು ಇರಲಿಲ್ಲದ ಹಿನ್ನೆಲೆಯಲ್ಲಿ ಕಂಬಳವು ಸಾಂಗವಾಗಿ ನಡೆದಿದೆ. ವಿಶೇಷವಾಗಿ ಮುಂಜಾನೆ ಧಾರ್ಮಿಕ ವಿಧಿಗಳ ಬಳಿಕ ಕೋಣಗಳನ್ನು ಕಂಬಳ ಗದ್ದೆಗೆ ಇಳಿಸಲಾಯಿತು. ಹರಕೆಗಾಗಿ ಆಗಮಿಸಿದ್ದ ಕೋಣಗಳನ್ನು ಕಂಬಳ ಗದ್ದೆಗೆ ಇಳಿಸಿ ಹರಕೆ ತೀರಿಸಲಾಯಿತು.