Tag: bramastra film

  • ‘ಬ್ರಹ್ಮಾಸ್ತ್ರ’ ಸೀಕ್ವೆಲ್ ರಿಲೀಸ್ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ನಿರ್ದೇಶಕ ಅಯಾನ್ ಮುಖರ್ಜಿ

    ‘ಬ್ರಹ್ಮಾಸ್ತ್ರ’ ಸೀಕ್ವೆಲ್ ರಿಲೀಸ್ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ನಿರ್ದೇಶಕ ಅಯಾನ್ ಮುಖರ್ಜಿ

    ಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ನಟನೆಯ ‘ಬ್ರಹ್ಮಾಸ್ತ್ರʼ ಸಿನಿಮಾ 2022ರಲ್ಲಿ ಸಿನಿಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. Bramastra Film ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ನಿರ್ದೇಶಕ ಅಯಾನ್ ಮುಖರ್ಜಿ (Ayan Mukerji) ಗುಡ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ: Exclusive: ನೀಲಿ ಚಿತ್ರದಲ್ಲಿ ಆಕ್ಟ್‌ ಮಾಡ್ತೀಯಾ ಎಂದು ಕೇಳಿದ್ರಾ ಹರ್ಷ? ಸ್ಪಷ್ಟನೆ ನೀಡಿದ ನಟ

    ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರʼ ಸಿನಿಮಾದಲ್ಲಿ ಆಲಿಯಾ- ರಣ್‌ಬೀರ್ ಲವ್ ಕೆಮಿಸ್ಟ್ರಿ ತೆರೆಯ ಮೇಲೆ ಕಮಾಲ್ ಮಾಡಿತ್ತು. ನಿಜ ಜೀವನದ ಅವರ ಲವ್ ಸ್ಟೋರಿಗೂ ‘ಬ್ರಹ್ಮಾಸ್ತ್ರʼ ಚಿತ್ರ ಕಾರಣವಾಗಿತ್ತು. ರಣ್‌ಬೀರ್ ಈ ಚಿತ್ರ, ಭಾರತದ ಮಾರುಕಟ್ಟೆಯಲ್ಲಿ 257 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಸೀಕ್ವೆಲ್ ಯಾವಾಗ ಬರುತ್ತೆ ಎಂದು ಎದುರು ನೋಡ್ತಿದ್ದ ಫ್ಯಾನ್ಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಅಯಾನ್ ಅಪ್‌ಡೇಟ್ ನೀಡಿದ್ದಾರೆ.

     

    View this post on Instagram

     

    A post shared by Ayan Mukerji (@ayan_mukerji)

    ಡೈರೆಕ್ಟರ್ ಅಯಾನ್ ಮುಖರ್ಜಿ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ‘ಬ್ರಹ್ಮಾಸ್ತ್ರ: ಪಾರ್ಟ್ 2’ ಸಿನಿಮಾ 2026ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ಬ್ರಹ್ಮಾಸ್ತ್ರ: ಪಾರ್ಟ್ 3’ ಚಿತ್ರ 2027ರ ಡಿಸೆಂಬರ್‌ಗೆ ತೆರೆಕಾಣಲಿದೆ. ಅಂದರೆ ಪ್ರೇಕ್ಷಕರು ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಲು 3-4 ವರ್ಷ ಕಾಯಲೇಬೇಕಾಗಿದೆ.

    ರಶ್ಮಿಕಾ ಮಂದಣ್ಣ (Rashmika Mandanna) ಜೊತೆಗಿನ ‘ಅನಿಮಲ್’ (Animal) ಸಿನಿಮಾ ಆಗಸ್ಟ್ 11ಕ್ಕೆ ತೆರೆಗೆ ಬರಲಿದೆ. ಇನ್ನೂ ಮಗಳ ಜೊತೆ ಸಮಯ ಕಳೆಯುವ ದೃಷ್ಟಿಯಿಂದ ರಣ್‌ಬೀರ್ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಇದಾದ ಬಳಿಕ ‘ಬ್ರಹ್ಮಾಸ್ತ್ರʼ ಸೀಕ್ವೆಲ್ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಾರೆ.

  • ಪಿಂಕ್ ಕಲರ್ ಡ್ರೆಸ್‌ನಲ್ಲಿ ಗುಲಾಬಿಯಂತೆ ಮಿಂಚಿದ ಆಲಿಯಾ ಭಟ್

    ಪಿಂಕ್ ಕಲರ್ ಡ್ರೆಸ್‌ನಲ್ಲಿ ಗುಲಾಬಿಯಂತೆ ಮಿಂಚಿದ ಆಲಿಯಾ ಭಟ್

    ಬಾಲಿವುಡ್ ಬ್ಯೂಟಿ ಆಲಿಯಾ ಭಟ್, ಸಿನಿಮಾ ಮತ್ತು ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ `ಬ್ರಹ್ಮಾಸ್ತ್ರʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರುವ ಆಲಿಯಾ ಭಟ್ ಇದೀಗ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ತನ್ನ ಬೇಬಿ ಬಂಪ್ ತೋರಿಸಿದ್ದಾರೆ.

    ಬಿಟೌನ್ ರಾಧೆ ಆಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ನಟನೆಯ `ಬ್ರಹ್ಮಾಸ್ತ್ರʼ ಚಿತ್ರ ರಿಲೀಸ್‌ಗೆ ರೆಡಿಯಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ದಂಪತಿಗಳಿಬ್ಬರು ಬ್ಯುಸಿಯಾಗಿದ್ದಾರೆ. ಸದ್ಯ ಮುಂಬೈನಲ್ಲಿ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ ಪ್ರಚಾರದಲ್ಲಿ ಆಲಿಯಾ ಭಟ್ ಪಿಂಕ್ ಕಲರ್ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತಿ ರಣ್‌ಬೀರ್ ಜತೆ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ.

    ಬೇಬಿ ಬಂಪ್ ಲುಕ್‌ನಲ್ಲಿ ಆಲಿಯಾ ಪ್ರೆಗ್ನೆನ್ಸಿ ಗ್ಲೋ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಪಿಂಕ್ ಕಲರ್ ಟಾಪ್‌ಗೆ ಬ್ಲ್ಯಾಕ್ ಕೋಟ್ ಜತೆಗೆ ಲೆಗ್ಗಿಂಗ್ಸ್ ಹಾಕಿದ್ದಾರೆ. ಇನ್ನು ಚಿತ್ರದ ಟ್ರೈಲರ್, ಪೋಸ್ಟರ್ ಮೂಲಕ ಹವಾ ಎಬ್ಬಿಸಿರುವ `ಬ್ರಹ್ಮಾಸ್ತ್ರʼ ಇದೇ ಸೆಪ್ಟೆಂಬರ್ 9ಕ್ಕೆ ತೆರೆಗೆ ಬರಲಿದೆ.‌ ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

     

     

    View this post on Instagram

     

    A post shared by Viral Bhayani (@viralbhayani)

    ಇನ್ನು ರಣ್‌ಬೀರ್ ಕಪೂರ್ ಮತ್ತು ಆಲಿಯಾ ಪಾಲಿಗೆ ಈ ಚಿತ್ರ ಬಹಳ ವಿಶೇಷವಾಗಿದೆ. ರಣ್‌ಬೀರ್ ಕಪೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ಆಲಿಯಾ ಇಶಾ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • `ಕೆಜಿಎಫ್’ ನಟಿಗೆ ಪಾಕಿಸ್ತಾನ್ ಕಾರ್ಟೂನ್‌ನಂತೆ ಇದ್ದೀರಾ ಎಂದ ಫ್ಯಾನ್ಸ್

    `ಕೆಜಿಎಫ್’ ನಟಿಗೆ ಪಾಕಿಸ್ತಾನ್ ಕಾರ್ಟೂನ್‌ನಂತೆ ಇದ್ದೀರಾ ಎಂದ ಫ್ಯಾನ್ಸ್

    ಬಾಲಿವುಡ್‌ನ ನಿರೀಕ್ಷಿತ ರಣ್‌ಬೀರ್ ಕಪೂರ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿನ ಮೌನಿ ರಾಯ್ ಲುಕ್ ನೋಡಿ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಮೌನಿ ಲುಕ್‌ನ ಟ್ರೋಲ್ ಮಾಡುತ್ತಿದ್ದಾರೆ.

    ಬಾಲಿವುಡ್ ನಟ ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಟೀಸರ್ ರಿಲೀಸ್ ಆಗಿದ್ದೇ ಆಗಿದ್ದು, ಮೌನಿ ರಾಯ್ ಲುಕ್ ಸಖತ್ ಟ್ರೋಲ್ ಆಗಿದೆ. ಕೆಲ ದಿನಗಳ ಹಿಂದೆ ಮೌನಿ ಅವರ ಪ್ಲಾಸ್ಟಿಕ್ ಸರ್ಜರಿ ಲುಕ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಈಗ ಆ ವಿಚಾರವನ್ನೂ ಸೇರಿಸಿ ಮೌನಿ ರಾಯ್ ಅವರಿಗೆ ನಕಾರಾತ್ಮಕ ಕಾಮೆಂಟ್ ಹಾಕಲಾಗುತ್ತಿದೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್

     

    View this post on Instagram

     

    A post shared by mon (@imouniroy)

    ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಸಿನಿಮಾ ಟೀಸರ್ ರಿಲೀಸ್ ಆಗಿದ್ದೇ ಆಗಿದ್ದು, ಮೌನಿ ರಾಯ್ ಲುಕ್ ಸಖತ್ ಟ್ರೋಲ್ ಆಗುತ್ತಿದೆ. ಮೌನಿ ಕೂಡ ಈ ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮೌನಿ ಅವರ ಪ್ಲಾಸ್ಟಿಕ್ ಸರ್ಜರಿ ಲುಕ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಈಗ ಆ ವಿಚಾರವನ್ನೂ ಸೇರಿಸಿ ಮೌನಿ ರಾಯ್ ಅವರಿಗೆ ನಕಾರಾತ್ಮಕ ಕಾಮೆಂಟ್ ಹಾಕಲಾಗುತ್ತಿದೆ.

    `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಮೌನಿ ರಾಯ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಅವರು ಈ ಸಿನಿಮಾದ ಪಾತ್ರದಲ್ಲಿ ಕಾಮಿಕ್ ಬುಕ್‌ನಲ್ಲಿ ಬರುವ ಸಸ್ತಿ ನೋಡಿದ ಹಾಗೆ ಕಾಣುತ್ತಿದ್ದಾರೆ ಜತೆಗೆ ಪಾಕಿಸ್ತಾನದ ಕಾರ್ಟೂನ್‌ನಂತೆ ಇದ್ದೀರಾ ಎಂಬ ನೆಗೆಟಿವ್ ಕಾಮೆಂಟ್‌ಗಳು ಮೌನಿಗೆ ಹರಿದು ಬರುತ್ತಿದೆ.

    ʻಬ್ರಹ್ಮಾಸ್ತ್ರʼ ಸಿನಿಮಾ ಮೂರು ಭಾಗಗಳಾಗಿ ತೆರೆಗೆ ಬರಲಿದೆ. ಮೊದಲ ಭಾಗದ ಕಥೆ ಶಿವನ ಸುತ್ತ ಸುತ್ತಲಿದೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಶಿವ ತ್ರಿಪಾಠಿ ಪಾತ್ರದಲ್ಲಿ ರಣ್‌ಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್‌, ನಾಗಾರ್ಜುನ್‌, ಡಿಂಪಲ್‌ ಕಪಾಡಿಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್ 15ಕ್ಕೆ ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ.