Tag: Brain Stroke

  • ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ನಿಧನ

    ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ನಿಧನ

    ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (83) (Acharya Satyendra Das) ಅವರು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆಯಲ್ಲಿ (SGPGI) ಬುಧವಾರ ನಿಧನರಾಗಿದ್ದಾರೆ.

    ಪಾರ್ಶ್ವವಾಯುವಿನಿಂದ (Brain Stroke) ಬಳಲುತ್ತಿದ್ದ 83 ವರ್ಷದ ಸತ್ಯೇಂದ್ರ ದಾಸ್‌ ಅವರನ್ನು ಫೆಬ್ರುವರಿ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

    1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ ಸತ್ಯೇಂದ್ರ ದಾಸ್ ಅವರು ರಾಮ ಮಂದಿರದ ಅರ್ಚಕರಾಗಿದ್ದರು. ಇದನ್ನೂ ಓದಿ: 2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ – ಕಾರಣ ಏನು ಗೊತ್ತಾ?

    ‘ನಿರ್ವಾಣಿ’ ಅಖಾಡದಿಂದ ಬಂದ ಸತ್ಯೇಂದ್ರ ದಾಸ್‌ ಅವರು ಅಯೋಧ್ಯೆಯ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದರು. ಅಯೋಧ್ಯೆ ಮತ್ತು ರಾಮ ಮಂದಿರದ ಬೆಳವಣಿಗೆಗಳ ಬಗ್ಗೆ ಮಾಹಿತಿಯುಳ್ಳವರಾಗಿದ್ದರು.

    ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್‌ನಲ್ಲಿ ರಾಮ ಲಲ್ಲಾ ವಿಗ್ರಹವನ್ನು ಇಟ್ಟುಕೊಂಡು ಸತ್ಯೇಂದ್ರ ದಾಸ್ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ನಿಮಿಷಾಂಭ ದೇವಸ್ಥಾನದಲ್ಲಿ ಮಾಘ ಹುಣ್ಣಿಮೆ ಸಂಭ್ರಮ – ಕಾವೇರಿ ನದಿಯಲ್ಲಿ ಪುಣ್ಯಸ್ನಾನ

  • ಕರ್ತವ್ಯದ ವೇಳೆ ಅರಣ್ಯ ಇಲಾಖೆ ನೌಕರ ಬ್ರೈನ್‍ಸ್ಟ್ರೋಕ್‍ಗೆ ಬಲಿ

    ಕರ್ತವ್ಯದ ವೇಳೆ ಅರಣ್ಯ ಇಲಾಖೆ ನೌಕರ ಬ್ರೈನ್‍ಸ್ಟ್ರೋಕ್‍ಗೆ ಬಲಿ

    ಚಾಮರಾಜನಗರ: ಬ್ರೈನ್‍ಸ್ಟ್ರೋಕ್‍ನಿಂದ (Brain Stroke) ಅರಣ್ಯ ಇಲಾಖೆ (Forest Department) ಹೊರಗುತ್ತಿಗೆ ನೌಕರ ಸಾವನ್ನಪ್ಪಿದ ಘಟನೆ ಬಂಡೀಪುರದ ಮದ್ದೂರು ವಲಯದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಗೋಪಾಲಪುರದ ಮಹೇಶ್ ಎಂದು ಗುರುತಿಸಲಾಗಿದೆ. ಅವರು ಕಳೆದ 28 ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದರು. ಮದ್ದೂರು ಕಳ್ಳಬೇಟೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬ್ರೈನ್‍ಸ್ಟ್ರೋಕ್ ಆಗಿದೆ. ತಕ್ಷಣ ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    ಮೃತ ನೌಕರನ ಕುಟುಂಬಕ್ಕೆ ಅರಣ್ಯ ಇಲಾಖೆ ನಿಯಮಾನುಸಾರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಮದ್ದೂರು ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಮೃತನ ಕುಟುಂಬಸ್ಥರು ಕೆಲ ಕಾಲ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

  • 8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ

    8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ

    ಮಡಿಕೇರಿ: ಕಳೆದ 15 ವರ್ಷಗಳಿಂದ ತನ್ನ ಮನೆಯಲ್ಲೇ ಸಾವಿರಾರು ಮಕ್ಕಳಿಗೆ ಶಿಕ್ಷಣ (Education) ನೀಡುತ್ತಿದ್ದ ಶಿಕ್ಷಕಿಯೊಬ್ಬರು (Teacher), ದಸರಾ (Dasara) ರಜೆ ಕಳೆಯಲು ಬೆಂಗಳೂರಿನಲ್ಲಿರುವ (Bengaluru) ತನ್ನ ಮಗಳ ಮನೆಗೆ ತೆರಳಿದ್ದ ವೇಳೆ ಮೆದುಳು ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಆದರೆ ಸಾಯುವಾಗಲೂ ಎಂಟು ಜನರಿಗೆ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಕಣ್ಣು, ಕಿಡ್ನಿ, ಹೃದಯ (Heart), ಲೀವರ್ ದಾನ ಮಾಡುವ ಮೂಲಕ ಮಡಿಕೇರಿ (Madikeri) ನಿವಾಸಿ ಹಾಗೂ ಶಿಕ್ಷಕರೂ ಆದ ಪಂದ್ಯಂಡ ಆಶಾ (53) ಸಾವಿನಲ್ಲೂ ಸಾರ್ಥಕತೆ ಮೆರೆದ್ದಾರೆ. ಇದನ್ನೂ ಓದಿ: ಅತ್ತ ಭಾರತ್ ಜೋಡೋ ಪಾದಯಾತ್ರೆ- ಇತ್ತ ಕಾಂಗ್ರೆಸ್ ಚೋಡೋ ಯಾತ್ರೆ

    ಕಳೆದ ಶನಿವಾರ ಬೆಂಗಳೂರಿನಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದ ಆಶಾ, ಅವರು ಮೆದುಳು ಪಾರ್ಶ್ವವಾಯುವಿಗೆ (Brain Stroke) ತುತ್ತಾಗಿದ್ದರು. ತಕ್ಷಣವೇ ಅವರನ್ನು ನಾರಾಯಣ ಹೃದಯಾಲಯ (Narayana hrudayalaya) ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಶಿಕ್ಷಕಿ ಆಶಾ ಅವರ ಪತಿ ಹಾಗೂ ಮಕ್ಕಳು ಅಂಗಾಂಗ ದಾನಕ್ಕೆ ಒಪ್ಪಿ ಸಹಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿ ಆಶಾ ಅವರು, ಕಳೆದ 15 ವರ್ಷದಿಂದ ತಮ್ಮ ಮನೆಯಲ್ಲೇ ಬೇಬಿ ಸಿಟ್ಟಿಂಗ್ ನಡೆಸುತ್ತಿದ್ದರು. ಮಕ್ಕಳೆಂದರೆ ಇವರಿಗೆ ಅಚ್ಚುಮೆಚ್ಚು. ಹಾಗಾಗಿ ಮಕ್ಕಳ ಹೆಸರಿನಲ್ಲೇ ಅಂಗಾಂಗ ದಾನ ಮಾಡಿ ಬದುಕಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಶಿಕಿ ನಟ ರಾಹುಲ್ ರಾಯ್‍ಗೆ ಬ್ರೇನ್ ಸ್ಟ್ರೋಕ್

    ಆಶಿಕಿ ನಟ ರಾಹುಲ್ ರಾಯ್‍ಗೆ ಬ್ರೇನ್ ಸ್ಟ್ರೋಕ್

    ಮುಂಬೈ: ಶೂಟಿಂಗ್ ವೇಳೆ ಆಶಿಕಿ ನಟ ರಾಹುಲ್ ರಾಯ್‍ಗೆ ಬ್ರೇನ್ ಸ್ಟ್ರೋಕ್ ಆಗಿ ಮಾತನಾಡುವ ಸಾಮರ್ಥ್ಯ ವನ್ನು ಕಳೆದುಕೊಂಡಿದ್ದಾರೆ.

    ಆಶಿಕಿ ಖ್ಯಾತಿಯ ನಟ ರಾಹುಲ್ ರಾಯ್ ಶೂಟಿಂಗ್ ಸಮಯದಲ್ಲಿ ಬ್ರೇನ್ ಸ್ಟ್ರೋಕ್ ಆಗಿದ್ದು, ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಅವರು ನಟಿಸುತ್ತಿರುವ 2021ರ ಬಹುನೀರಿಕ್ಷೆಯ ಹೊಸ ಸಿನಿಮಾ ಎಲ್‍ಎಸಿ-ಲಿವ್ ದ ಬ್ಯಾಟಲ್ ಸಿನಿಮಾದ ಶೂಟಿಂಗ್ ವೇಳೆ ಬ್ರೇನ್ ಸ್ಟ್ರೋಕ್ ಸಂಭವಿಸಿದೆ.

    ಕಾರ್ಗಿಲ್‍ನಲ್ಲಿ ಸಿನಿಮಾ ಚಿತ್ರೀಕರಣ ನಡೆಸುತ್ತಿತ್ತು. ಈ ವೇಳೆ ತುಂಬಾ ಚಳಿ ಹಾಗೂ ಹಿಮದ ವಾತಾವರಣ ಇದ್ದ ಕಾರಣ ರಾಹುಲ್ ಬ್ರೇನ್ ಸ್ಟ್ರೋಕ್ ಆಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚಿತ್ರತಂಡ ರಾಹುಲ್ ಅವರನ್ನು  ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ದುರ್ಘಟನೆ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಶ್ರೀನಗರದಿಂದ ಮುಂಬೈಗೆ ಬಂದು ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಮುಂಬೈನ ನಾನಾವತಿ ಆಸ್ಪತ್ರೆಗ ದಾಖಲಿಸಲಾಗಿದೆ. ರಾಹುಲ್(52)ವರ್ಷವಾಗಿರುವುದರಿಂದ ಕೋವಿಡ್ 19 ಪರೀಕ್ಷೆ ಮಾಡಲಾಗಿತ್ತು. ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ರಾಹುಲ್ ಸಹೋದರ ರೋಮಿನ್ ಸೇನ್ ಹೇಳಿದ್ದಾರೆ.

    ರಾಹುಲ್ ಸದ್ಯಕ್ಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1990ರ ಹಿಟ್ ಸಿನಿಮಾ ಆಶಿಕಿ ಮೂಲಕ ಬಾಲಿವುಡ್ ಚಿತ್ರರಂರಕ್ಕೆ ಪಾದಾರ್ಪಣೆ ಮಾಡಿದ ರಾಹುಲ್ ರಾಯ್ ಬಹುಬೇಡಿಕೆಯ ನಟನಾಗಿ ಮಿಂಚಿದ್ದಾರೆ. ಮೊದಲ ಸಿನಿಮಾವೇ ಇವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಹೊಸ ಸಿನಿಮಾದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದೆ.