Tag: Brain eating amoeba

  • PublicTV Explainer: ನೆರೆಯ ಕೇರಳದಲ್ಲಿ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಒಮ್ಮೆ ಬಂದ ವೈರಸ್ ಸಾಯುವುದಿಲ್ಲ ಏಕೆ?

    PublicTV Explainer: ನೆರೆಯ ಕೇರಳದಲ್ಲಿ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಒಮ್ಮೆ ಬಂದ ವೈರಸ್ ಸಾಯುವುದಿಲ್ಲ ಏಕೆ?

    ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್‌ಗಳು (Virus) ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ (China) ಪತ್ತೆಯಾಗಿದ್ದ ನ್ಯುಮೋನಿಯಾ ಮಾದರಿಯ ವೈರಸ್ ವಿಶ್ವವನ್ನೇ ಆತಂಕಕ್ಕೆ ದೂಡಿತ್ತು. ನಿರ್ಲಕ್ಷ್ಯ ವಹಿಸಿದ್ರೆ ಭಾರತಕ್ಕೂ ಇದರಿಂದ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗತಜ್ಞರು ಎಚ್ಚರಿಸಿದ್ದರು. ಅದಕ್ಕಿಂತಲೂ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡಿರುವ ಮೆದುಳು ತಿನ್ನುವ ಅಮೀಬಾ ಸೋಂಕು ಜನರ ನಿದ್ದೆಗೆಡಿಸಿದೆ.

    1962ರಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಭಾರತದಲ್ಲಿ (India) ಮೊದಲು ಕಾಣಿಸಿಕೊಂಡಿದ್ದು, ಹರಿಯಾಣದ ರೋಹ್ಟಕ್‌ನಲ್ಲಿ. ಆದ್ರೆ ಇತ್ತೀಚಿನ ದಿನಗಳಲ್ಲಿ ನದಿ, ತೊರೆಗಳು ಹೆಚ್ಚಾಗಿರುವ ಕೇರಳದಲ್ಲಿ ವೈರಸ್‌ ಕಾಣಿಸಿಕೊಂಡಿದ್ದು, ಇದೇ ವರ್ಷ 19 ಜನರನ್ನ ಬಲಿ ಪಡೆದುಕೊಂಡಿದೆ. ಈ ವರ್ಷ 3 ತಿಂಗಳ ಶಿಶುವಿನಿಂದ 91 ವರ್ಷದ ವರೆಗಿನ ವೃದ್ಧನಲ್ಲಿಯೂ ಸೇರಿ ಒಟ್ಟು 61 ಪ್ರಕರಣಗಳು ವರದಿಯಾಗಿದ್ದು, 19 ಜನರನ್ನ ಬಲಿ ಪಡೆದಿದೆ. ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಸಾವಿನ ಸಂಖ್ಯೆ ಹೆಚ್ಚಳ ಆತಂಕಕ್ಕೆ ಕಾರಣವಾಗಿದ್ದು, ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಕೊಳ, ಕೆರೆ, ತೊರೆಗಳಲ್ಲಿ ಸ್ನಾನ ಮಾಡದಂತೆ ಜನಕ್ಕೆ ಎಚ್ಚರಿಕೆ ನೀಡಿದ್ದು, ತಲೆನೋವು ಕಂಡುಬಂದರೆ ತಕ್ಷಣ ವೈದ್ಯರನ್ನ ಸಂಪರ್ಕಿಸಲು ತಿಳಿಸಲಾಗಿದೆ.

    ಅಷ್ಟಕ್ಕೂ ಈ ಮೆದುಳು ತಿನ್ನುವ ಅಮೀಬಾ (Brain Eating Amoeba) ಎಂದರೇನು? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ? ಇದರ ಮರಣ ಪ್ರಮಾಣ ಎಷ್ಟಿದೆ? ಎಂಬುದಕ್ಕೆಲ್ಲ ಉತ್ತರ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಅದಕ್ಕೂ ಈ ವೈರಸ್‌ಗಳಿಗೆ ಏಕೆ ಸಾವಿಲ್ಲ ಎಂಬುದ್ನ ತಿಳಿಯೋಣ,..

    ಒಮ್ಮೆ ಬಂದ ವೈರಸ್ ಸಾಯುವುದಿಲ್ಲ ಏಕೆ?
    ವೈರಸ್‌ ಅಂದ್ರೆ ಪರಾವಲಂಬಿಯಾಗಿರುವ ಅತ್ಯಂತ ಸೂಕ್ಷ್ಮಾಣು ಜೀವಿ. ಮೆದುಳು ತಿನ್ನುವ ಅಮೀಬಾ ಸೋಂಕು ಕೂಡ ಇತರ ಜೀವಿಗಳಂತೆ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರು ಗುರುತಿಸಿರುವಂತೆ ಸುಮಾರು 1 ಸಾವಿರ ವೈರಸ್‌ಗಳು ಕಂಡುಬಂದಿವೆ. ಆದ್ರೆ ಅದರಲ್ಲಿ ಸಬ್ ವೇರಿಯಂಟ್‌ಗಳು (ರೂಪಾಂತರಿ) ಸಾಕಷ್ಟು ಇವೆ. ಅವುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತವೆ. ಸಾವಿನ ಪ್ರಮಾಣದ ತೀವ್ರತೆ ಎಷ್ಟಿರುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ಹೆಸರುಗಳನ್ನ ಕೊಡುತ್ತಾರೆ. ನಂತರ ಈ ವೈರಸ್ ಬಂದ್ರೆ ಹೊಸದಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳುತ್ತಾರೆ. ಆದರೆ, ಒಂದು ವೈರಸ್ ಬಂದ ನಂತರ ಅವು ಮತ್ತೆ ಸಾಯುವುದಿಲ್ಲ. ಬದುಕುವುದಕ್ಕಾಗಿ ಹೊಸ ಹೊಸ ರೂಪಗಳನ್ನ ಪಡೆದುಕೊಳ್ಳುತ್ತವೆ. ಅವು ಮಾನವನ ಜೀವಕೋಶಗಳ ಮೇಲೆ ಅವಲಂಬಿತವಾಗುತ್ತವೆ. ನಮ್ಮ ಜೀವಕಣಗಳಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾದ್ರೆ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ. ಇಲ್ಲದಿದ್ದರೇ ಪ್ರಾಣಾಪಾಯ ಉಂಟುಮಾಡುತ್ತದೆ ಎನ್ನುತ್ತಾರೆ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಚಾಮರಾಜನಗರ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ.

    ನೆಗ್ಲೇರಿಯಾ ಫೌಲೆರಿ ಅಂದ್ರೇನು?
    ಇನ್ನೂ ಈ ಮೆದುಳು ತಿನ್ನುವ ಅಮೀಬಾ ಬಗ್ಗೆ ನೋಡೋದಾದ್ರೆ ಇದನ್ನ ನೆಗ್ಲೇರಿಯಾ ಫೌಲೆರಿ (Naegleria fowleri) ಎಂಬ ಹೆಸರಿನಿಂದ ಕರೆಯುತ್ತಾರೆ. ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ.

    ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
    ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.

    ರೋಗದ ಲಕ್ಷಣವೇನು?
    ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.

    ಭಾರತದಲ್ಲಿ ಭೀತಿ
    ವರದಿಗಳ ಪ್ರಕಾರ 1962ರಲ್ಲಿ ಕಂಡುಬಂದ ಈ ವೈರಸ್‌ ವಿದೇಶಗಳಲ್ಲೂ ಆತಂಕ ಹುಟ್ಟಿಸಿದೆ. 2015 ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಈ ಅಮೀಬಾ ಹರಿಯಾಣ ರಾಜ್ಯದ ರೋಹ್ಟಕ್‌ ಹಾಗೂ ಝಜ್ಜರ್ ಜಿಲ್ಲೆಯಲ್ಲಿರುವ ನೀರಿನ ಪ್ರದೇಶಗಳಲ್ಲಿ ಕಂಡುಬಂದಿತ್ತು. ಬಳಿಕ ನದಿ, ಕೆರೆ, ತೊರೆಗಳು ಹೆಚ್ಚಾಗಿರುವ ಕೇರಳದಲ್ಲಿ ಕಂಡುಬಂದಿದೆ.

    ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
    * ಅಮೀಬಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಿಗೆ ನೀರಿನ ಮೂಲಗಳಿಂದ ಹರಡುವ ಸಾಧ್ಯತೆಯಿದೆ. ಮೂಗಿನ ಮೂಲಕ ಸೋಂಕು ಮನುಷ್ಯನ ದೇಹ ಪ್ರವೇಶಿಸುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ವರದಿಯಾದ ಪ್ರದೇಶಗಳಲ್ಲಿ ನೀರಿನಲ್ಲಿ ಈಜಾಡದಂತೆ ಸೂಚಿಸಲಾಗುತ್ತದೆ.
    * ಕೊಳ, ಕೆರೆ ಮತ್ತು ನಿಂತಿರುವ ನೀರಿನಲ್ಲಿ ಸ್ನಾನ ಮಾಡಲು, ಈಜಲು ಹೋಗಬೇಡಿ
    * ಶುದ್ಧ ನೀರಿನಲ್ಲಿ ಈಜುವಾಗಲೂ ಮೂಗಿಗೆ ಕ್ಲಿಪ್‌ಗಳನ್ನು ಬಳಸಿ
    * ಬಾವಿ ಮತ್ತು ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಕ್ಲೋರಿನ್ ಬಳಸಿ ಸ್ವಚ್ಛಗೊಳಿಸುವುದು ಉತ್ತಮ
    * ಒಂದೊಮ್ಮೆ ನಿಂತ ನೀರಿನ ಸಂಪರ್ಕಕ್ಕೆ ಬಂದ ನಂತರ ಜ್ವರ ಅಥವಾ ತಲೆನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

    ಚಿಕಿತ್ಸೆ ಏನು?
    ವೈದ್ಯಕೀಯ ಲೋಕ ಬೆಳೆದಂತೆ ವೈರಾಣುಗಳಿಗೆ ಲಸಿಕೆಗಳು, ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಆದ್ರೆ ಈವರೆಗೂ ಯಾವೊಂದು ವೈರಸ್‌ಗಳನ್ನ ಸಂಪೂರ್ಣವಾಗಿ ನಿಯಂತ್ರಣ ಮಾಡುವ ಯಾವುದೇ ಔಷಧವನ್ನೂ ಕಂಡುಹಿಡಿಯಲಾಗಿಲ್ಲ. ಆದಾಗ್ಯೂ ಸದ್ಯ ಜನರನ್ನ ಕಾಡುತ್ತಿರುವ ಮೆದುಳು ತಿನ್ನುವ ಅಮೀಬಾದಿಂದ ಮರಣ ಪ್ರಮಾಣ ಕೊಂಚ ತಡೆಯುವ ಪ್ರಯತ್ನದ ಭಾಗವಾಗಿ ಕೇರಳ ಆರೋಗ್ಯ ಇಲಾಖೆ ಔಷಧವೊಂದನ್ನು ಕಂಡುಕೊಂಡಿದೆ.

    ಕೇರಳದಲ್ಲಿ ಪತ್ತೆಯಾದ 69 ಪ್ರಕರಣಗಳ ಪೈಕಿ 19 ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಗಮನಾರ್ಹವೆಂದ್ರೆ ಬದುಕುಳಿಯುವ ಪ್ರಮಾಣ 24% ನಷ್ಟು ಹೆಚ್ಚಾಗಿದೆ ಅನ್ನೋದು ಸಮಾಧಾನಕರ. ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಚಿಕಿತ್ಸೆ ಭಾಗವಾಗಿ ಮಿಲ್ಟೆಫೋಸಿನ್ ಬಳಸುತ್ತಿರುವುದೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ವೈರಸ್‌ ಅನ್ನು ಕೊಲ್ಲುವಂತೆ ಮಾಡದಿದ್ದರೂ 5-10 ದಿನಗಳಲ್ಲಿ ಸಂಭವಿಸುವ ಮರಣದಿಂದ ಪಾರು ಮಾಡುತ್ತದೆ. ಅದಕ್ಕಾಗಿ ಕೇರಳ ಆರೋಗ್ಯ ಇಲಾಖೆ ಆಂಫೊಟೆರಿಸಿನ್-ಬಿ ಚಿಕಿತ್ಸೆ ಜೊತೆಗೆ ಮಿಲ್ಟೆಫೋಸಿನ್ ಅನ್ನೂ ನೀಡಲಾಗುತ್ತಿದೆ. ಮೂಲತಃ ಕ್ಯಾನ್ಸರ್‌ಗಾಗಿ ಇದನ್ನ ಅಭಿವೃದ್ಧಿಪಡಿಸಲಾಗಿಗಿದೆ. ಆ ಬಳಿಕ ಲೀಶ್ಮೇನಿಯಾಸಿಸ್‌ಗೆ ಮರುಬಳಕೆ ಮಾಡಲಾಯಿತು. ಅಂದ್ರೆ ಪರಾವಲಂಬಿ ಜೀವಿಗಳಿಂದ ಉಂಟಾಗುವ ರೋಗವನ್ನು ತಡೆಯಲು ಮಿಲ್ಟೆಫೋಸಿನ್ ಚಿಕಿತ್ಸೆ ನೀಡಲಾಗುತ್ತದೆ. ಸಂಶೋಧನೆ ವರದಿಗಳನ್ನು ಪಡೆದ ಬಳಿಕ ಕೇರಳ ಈ ಚಿಕಿತ್ಸೆ ನೀಡುತ್ತಾ ಬರುತ್ತಿದೆ.

    ಸದ್ಯ ಮರಣ ಪ್ರಮಾಣ ತಡೆಯಲು ಮುಂದಾಗಿರುವ ಕೇರಳ ಆರೋಗ್ಯ ಇಲಾಖೆಯು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ಸಹಯೋಗದೊಂದಿಗೆ ಪರಿಸರ ಮಾದರಿಗಳನ್ನು ಸಂಗ್ರಹಿಸಿ, ಸೋಂಕಿನ ಮೂಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ.

  • ಮೆದುಳು ತಿನ್ನುವ `ಅಮೀಬಾ’ಕ್ಕೆ ಕೇರಳದಲ್ಲಿ 19 ಬಲಿ – ಮನುಷ್ಯರಿಗೆ ಇದು ಹೇಗೆ ಹರಡುತ್ತೆ?

    ಮೆದುಳು ತಿನ್ನುವ `ಅಮೀಬಾ’ಕ್ಕೆ ಕೇರಳದಲ್ಲಿ 19 ಬಲಿ – ಮನುಷ್ಯರಿಗೆ ಇದು ಹೇಗೆ ಹರಡುತ್ತೆ?

    ತಿರುವನಂತಪುರಂ: ಮೆದುಳು ತಿನ್ನುವ ಅಮೀಬಾ (Brain Eating Amoeba) ಎನ್ನಲಾಗುವ ಸೋಂಕು ಕೋವಿಡ್ ಬಳಿಕ ಜನರಲ್ಲಿ ಭಾರಿ ಆತಂಕ ಮೂಡಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಹೆಸರಿನ ಈ ರೋಗಕ್ಕೆ ದಕ್ಷಿಣ ಕೋರಿಯಾದಲ್ಲಿ ಮೊದಲ ಬಲಿ ವರದಿಯಾಗಿತ್ತು. ಇದೀಗ ನೆರೆಯ ಕೇರಳಕ್ಕೂ ವ್ಯಾಪಿಸಿದ್ದು, ಇದೇ ವರ್ಷ 19 ಮಂದಿ ಬಲಿಯಾಗಿದ್ದಾರೆ.

    ಪ್ರಸಕ್ತ ವರ್ಷದಲ್ಲಿ ಕೇರಳದಲ್ಲಿ 61 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 19 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೆಲವರು ಇತ್ತೀಚೆಗೆ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಫಸ್ಟ್‌ ಟೈಂ EVM ನಲ್ಲಿ ಇನ್ಮುಂದೆ ಅಭ್ಯರ್ಥಿಗಳ ಕಲರ್ ಫೋಟೋ – ಬಿಹಾರ ವಿಧಾನಸಭಾ ಚುನಾವಣೆಯಿಂದಲೇ ಆರಂಭ

    ಮೊದಲಿಗೆ ಕೋಝಿಕ್ಕೋಡ್ ಮತ್ತು ಮಲಪ್ಪುರಂನಂತಹ ಜಿಲ್ಲೆಗಳ ಕ್ಲಸ್ಟರ್‌ ನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಬಳಿಕ ರಾಜ್ಯದ ವಿವಿಧೆಡೆ ವ್ಯಾಪಿಸಿದೆ. ಮೂರು ತಿಂಗಳ ಹಸುಗೂಸಿನಿಂದ 91 ವರ್ಷದ ವೃದ್ಧನವರೆಗೂ ಈ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಕೇರಳ ಈಗ ಗಂಭೀರ ಆರೋಗ್ಯ ಸವಾಲನ್ನು ಎದುರಿಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇದನ್ನೂ ಓದಿ: ಮಗನ ಪ್ರತಿಷ್ಠೆಗೆ ಧಕ್ಕೆ| ವಿಮಾನ ದುರಂತದ ಬಗ್ಗೆ ಮತ್ತೊಂದು ತನಿಖೆ ಮಾಡಿ: ಕ್ಯಾಪ್ಟನ್‌ ತಂದೆ ಒತ್ತಾಯ

    ಹಾಗಿದ್ರೆ ಏನಿದು ಮೆದುಳು ತಿನ್ನುವ ಅಮೀಬಾ? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ? ಎಂಬುದನ್ನ ತಿಳಿಯಬೇಕಿದ್ರೆ ಮುಂದೆ ಓದಿ…

    ನೆಗ್ಲೇರಿಯಾ ಫೌಲೆರಿ ಅಂದ್ರೇನು?
    ವರದಿಗಳ ಪ್ರಕಾರ 1962 ರಿಂದ ಇಲ್ಲಿಯವರೆಗೆ 154 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ. ಇದನ್ನೂ ಓದಿ:ಪ್ರಧಾನಿ ಮೋದಿಗೆ ದೊರಕಿದ 1,300ಕ್ಕೂ ಹೆಚ್ಚು ಉಡುಗೊರೆಗಳ ಇ-ಹರಾಜು 

    ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
    ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.

    ರೋಗದ ಲಕ್ಷಣವೇನು?
    ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.

  • ಮಿದುಳು ತಿನ್ನುವ ಅಮೀಬಾ ಸೋಂಕಿಗೆ ಪಾಕಿಸ್ತಾನದ ವ್ಯಕ್ತಿ ಬಲಿ

    ಮಿದುಳು ತಿನ್ನುವ ಅಮೀಬಾ ಸೋಂಕಿಗೆ ಪಾಕಿಸ್ತಾನದ ವ್ಯಕ್ತಿ ಬಲಿ

    ಇಸ್ಲಾಮಾಬಾದ್: ಮಿದುಳು ತಿನ್ನುವ ಅಮೀಬಾ (ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್) ಸೋಂಕಿಗೆ ಪಾಕಿಸ್ತಾನದ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಆತಂಕ ಮೂಡಿಸಿದೆ. ಪಾಕಿಸ್ತಾನದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ.

    ಮೃತನನ್ನು ಔರಂಗಜೇಬ್ ಎಂದು ಗುರುತಿಸಲಾಗಿದೆ. ಜು.7 ರಂದು ಕ್ವೈದಾಬಾದ್‌ನ ಫಾರ್ಮ್‌ಹೌಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಪಿಕ್ನಿಕ್ ಹೋಗಿದ್ದರು. ಈ ವೇಳೆ ಸ್ವಿಮ್ಮಿಂಗ್‌ ಕೂಡ ಮಾಡಿದ್ದರು. ಅದಾದ ಬಳಿಕ ಸೋಂಕಿಗೆ ತುತ್ತಾಗಿದ್ದಾರೆ. ಔರಂಗಜೇಬ್‌ಗೆ ಮೊದಲು ವಾಕರಿಕೆ ಮತ್ತು ಜ್ವರ ಕಾಣಿಸಿಕೊಂಡಿತ್ತು.

    ಜು.10 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಜುಲೈ 11 ರಂದು ವೈರಸ್ ದೃಢಪಟ್ಟಿತು. ಚಿಕಿತ್ಸೆ ಫಲಿಸದೇ ಸೋಂಕಿಗೆ ಬಲಿಯಾಗಿದ್ದಾರೆ. ಇತರೆ ಎರಡು ಸಾವು ಪ್ರಕರಣಗಳು ಈ ಹಿಂದೆ ಕೋರಂಗಿ ಮತ್ತು ಮಲಿರ್‌ನಲ್ಲಿ ವರದಿಯಾಗಿದ್ದವು.

    ಮುಕ್ತ ಜೀವಂತ ಅಮೀಬಾ ಹೊಂದಿರುವ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಅದು ಜನರಿಗೆ ಸೋಂಕು ತರುತ್ತದೆ. ಈಜುಕೊಳ, ನದಿ, ಸರೋವರಗಳಲ್ಲಿ ಈಜುವಾಗ ಸೋಂಕು ಉಂಟಾಗಬಹುದು. ಅಮೀಬಾ ಮೂಗಿನ ಮೆದುಳಿಗೆ ತಲುಪುತ್ತದೆ. ಅಲ್ಲಿ ಅದು ಮೆದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ.

    ರೋಗಲಕ್ಷಣಗಳು ಪ್ರಾರಂಭವಾದ ನಂತರ ರೋಗವು ವೇಗವಾಗಿ ಉಲ್ಬಣಗೊಳ್ಳುತ್ತದೆ. ಸಾಮಾನ್ಯವಾಗಿ ಐದು ದಿನಗಳಲ್ಲಿ ಸಾವಿಗೆ ಕಾರಣವಾಗುತ್ತದೆ.

  • ಮೆದುಳು ತಿನ್ನುವ ಅಮೀಬಾ ಸೋಂಕು – ಕೇರಳದಲ್ಲಿ 4ನೇ ಪ್ರಕರಣ ಪತ್ತೆ

    ಮೆದುಳು ತಿನ್ನುವ ಅಮೀಬಾ ಸೋಂಕು – ಕೇರಳದಲ್ಲಿ 4ನೇ ಪ್ರಕರಣ ಪತ್ತೆ

    – ಸೋಂಕಿಗೆ ಈವರೆಗೆ ಮೂರು ಮಕ್ಕಳು ಬಲಿ

    ತಿರುವನಂತಪುರಂ: ಕಲುಷಿತ ನೀರಿನಲ್ಲಿ ಕಂಡುಬರುವ ಅಮೀಬಾದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕು ‘ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌’ (ಮೆದುಳು ತಿನ್ನುವ ಅಮೀಬಾ ಸೋಂಕು) ಮತ್ತೊಂದು ಪ್ರಕರಣವು ಕೇರಳದಿಂದ (Kerala) ವರದಿಯಾಗಿದೆ.

    ಉತ್ತರ ಕೇರಳ ಜಿಲ್ಲೆಯ ಪಯ್ಯೋಲಿ ನಿವಾಸಿಯಾದ 14 ವರ್ಷದ ಬಾಲಕ ಈ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಖಾಸಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಮೇ ತಿಂಗಳಿನಿಂದ ವರದಿಯಾದ ಅಪರೂಪದ ಮೆದುಳಿನ ಸೋಂಕಿನ (Brain-Eating Amoeba) ನಾಲ್ಕನೇ ಪ್ರಕರಣ ಇದಾಗಿದ್ದು, ಎಲ್ಲಾ ರೋಗಿಗಳೂ ಮಕ್ಕಳಾಗಿದ್ದಾರೆ. ಅವರಲ್ಲಿ ಮೂವರು ಈಗಾಗಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ ಪ್ರಕರಣ – ಪ್ರಮುಖ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

    ಇತ್ತೀಚಿನ ಪ್ರಕರಣದಲ್ಲಿ, ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಲ್ಲಿ ಒಬ್ಬರು ಜುಲೈ 1 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಸುಧಾರಿಸುತ್ತಿದೆ. ಆಸ್ಪತ್ರೆಯಲ್ಲಿ ಸೋಂಕನ್ನು ತ್ವರಿತವಾಗಿ ಗುರುತಿಸಲಾಗಿದ್ದು, ವಿದೇಶದ ಔಷಧಗಳು ಸೇರಿದಂತೆ ತಕ್ಷಣವೇ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ.

    ಮೆದುಳಿನ ಸೋಂಕಿಗೆ ಮಲಪ್ಪುರಂನ ಐದು ವರ್ಷದ ಬಾಲಕಿ ಮತ್ತು ಕಣ್ಣೂರಿನ 13 ವರ್ಷದ ಬಾಲಕಿ ಕ್ರಮವಾಗಿ ಮೇ 21 ಮತ್ತು ಜೂನ್ 25 ರಂದು ಸಾವನ್ನಪ್ಪಿದರು. ನಂತರ 14 ವರ್ಷದ ಬಾಲಕ ಸೋಂಕಿಗೆ ಬುಧವಾರ ಬಲಿಯಾಗಿದ್ದಾನೆ. ಇದನ್ನೂ ಓದಿ: ಸೂರತ್‌ನಲ್ಲಿ ಕುಸಿದು ಬಿದ್ದ 6 ಅಂತಸ್ತಿನ ಕಟ್ಟಡ – ಮಹಿಳೆ ರಕ್ಷಣೆ, 15 ಮಂದಿಗೆ ಗಾಯ

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಸಭೆ ನಡೆಸಿ, ಸೋಂಕು ಹರಡದಂತೆ ತಡೆಯಲು ಅಶುದ್ಧ ಜಲಮೂಲಗಳಲ್ಲಿ ಸ್ನಾನ ಮಾಡದಂತೆ ಹಲವು ಸಲಹೆಗಳನ್ನು ನೀಡಿದ್ದಾರೆ. ಈಜುಕೊಳಗಳಿಗೆ ಸರಿಯಾದ ಕ್ಲೋರಿನೇಷನ್ ಆಗಿರಬೇಕು. ಮಕ್ಕಳು ಹೆಚ್ಚಾಗಿ ಈ ರೋಗದಿಂದ ಬಳಲುತ್ತಿರುವ ಕಾರಣ ನೀರಿನೊಳಗೆ ಪ್ರವೇಶಿಸುವಾಗ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗಿದೆ.

    ಜಲಮೂಲಗಳನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಈಜು ಮೂಗಿನ ಕ್ಲಿಪ್‌ಗಳನ್ನು ಬಳಸಿ ಎಂದು ಸಲಹೆ ನೀಡಲಾಗಿದೆ. ಮುಕ್ತ-ಜೀವಂತ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾಗಳು ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಸಂಭವಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

  • PublicTV Explainer: ಕೋವಿಡ್ ಬೆನ್ನಲ್ಲೇ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಏನು ಈ ರೋಗ?

    PublicTV Explainer: ಕೋವಿಡ್ ಬೆನ್ನಲ್ಲೇ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಏನು ಈ ರೋಗ?

    ತ್ತೀಚೆಗಷ್ಟೇ ದಕ್ಷಿಣ ಕೊರಿಯಾದಲ್ಲಿ (South Korea) ವ್ಯಕ್ತಿಯೊಬ್ಬರು ವಿಚಿತ್ರ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮೆದುಳು ತಿನ್ನುವ ಅಮೀಬಾ (Brain Eating Amoeba) ಎನ್ನಲಾಗುವ ಈ ಸೋಂಕು ಕೋವಿಡ್ ಹೆಚ್ಚಳದ ಭೀತಿಯ ಬೆನ್ನಲ್ಲೇ ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಹೆಸರಿನ ಈ ರೋಗಕ್ಕೆ ದಕ್ಷಿಣ ಕೋರಿಯಾದಲ್ಲಿ ಮೊದಲ ಬಲಿಯಾಗಿದೆ. ಈ ಮಾರಣಾಂತಿಕ ಸೋಂಕಿನ ಲಕ್ಷಣ ಕಂಡುಬಂದ 10 ದಿನಗಳ ನಂತರ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

    ಏನಿದು ಮೆದುಳು ತಿನ್ನುವ ಅಮೀಬಾ? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ಘಟನೆಯೇನು?
    ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದ ಕೊರಿಯಾದ ವ್ಯಕ್ತಿಗೆ ನೆಗ್ಲೇರಿಯಾ ಫೌಲೆರಿ ಸೋಂಕು ತಗುಲಿತ್ತು. ಕೊರಿಯಾ ಆಗಮಿಸಿದ ದಿನವೇ ಅವರಿಗೆ ತೀವ್ರವಾದ ತಲೆನೋವು ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಂಗಳವಾರ ಅವರು ಮೃತಪಟ್ಟಿದ್ದಾರೆ.

    ನೆಗ್ಲೇರಿಯಾ ಫೌಲೆರಿ ಅಂದ್ರೇನು?
    ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ.

    ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
    ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.

    ರೋಗದ ಲಕ್ಷಣವೇನು?
    ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.

    ಸೋಂಕಿನ ಇತರ ವರದಿಗಳು:
    ವರದಿಗಳ ಪ್ರಕಾರ 1962 ರಿಂದ ಇಲ್ಲಿಯವರೆಗೆ 154 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಅವುಗಳ ಪೈಕಿ ಇಲ್ಲಿಯವರೆಗೆ ಕೇವಲ 4 ಜನರು ಬದುಕುಳಿದಿದ್ದಾರೆ ಎನ್ನಲಾಗಿದೆ. ಅಮೆರಿಕ ಮೂಲದ 22 ವರ್ಷದ ವ್ಯಕ್ತಿ ಈ ಸೋಂಕಿಗೆ ತುತ್ತಾಗಿ ಬದುಕುಳಿದ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ. ಸೆಬಾಸ್ಟಿನ್ ಡಿಲಿಯಾನ್ 16 ವರ್ಷದವನಾಗಿದ್ದಾಗ ಫ್ಲೋರಿಡಾದ ಈಜುಕೊಳದಲ್ಲಿ ಈಜಾಡಿದ ಬಳಿಕ ಅಮೀಬಾ ಸೋಂಕಿಗೆ ಒಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಗುಣಪಡಿಸಲಾಗಿತ್ತು.

    ರೋಗದ ಬಗ್ಗೆ ಸೋಂಕಿತರು ಹೇಳೋದೇನು?
    ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವ ಸೆಬಾಸ್ಟಿನ್, ಸೋಕಿಗೆ ಒಳಗಾದ ಸಂದರ್ಭ ತೀವ್ರವಾದ ತಲೆನೋವು ಕಾಣಿಸಿಕೊಂಡಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ನನ್ನ ತಲೆ ಮೇಲೆ ದೊಡ್ಡ ಕಲ್ಲನ್ನು ಇಟ್ಟು ಒತ್ತಿದಂತೆ ಎನಿಸುತ್ತಿತ್ತು ಎಂದು ತಿಳಿಸಿದ್ದಾರೆ.

    ಚಿಕಿತ್ಸೆ ಏನು?
    ಸೆಬಾಸ್ಟಿನ್ ಅವರನ್ನು ಪರೀಕ್ಷಿಸಿದ ತಕ್ಷಣ ವೈದ್ಯರು ಅದು ಅಮೀಬಾ ಎಂದು ಪತ್ತೆ ಹಚ್ಚಿದ್ದರು. ಈ ಸೋಕಿಗೆ ಇಂಪಾವಿಡೋ ಎಂಬ ಔಷಧಿ ನೀಡಿ ಗುಣಪಡಿಸಲಾಗಿತ್ತು. 72 ಗಂಟೆ ಕೋಮಾದಲ್ಲಿದ್ದ ಸೆಬಾಸ್ಟಿನ್ ಬಳಿಕ ನಿಧಾನವಾಗಿ ಚೇತರಿಸಿಕೊಂಡರು. ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಇದೆಲ್ಲದರ ಬಳಿಕ ಅವರ ಮೆದುಳು ಉಬ್ಬಿಕೊಂಡಿದ್ದು, ತಮ್ಮ ಕೆಲ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಮರೆತಿದ್ದರು. ಬಳಿಕ ಅವರನ್ನು ಪುನರುಜ್ಜೀವನ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ಅವರು ನಡೆಯುವುದು, ಓಡುವುದು, ಬರೆಯುವುದನ್ನು ಮತ್ತೆ ಕಲಿತುಕೊಂಡರು.

    ಭಾರತದಲ್ಲಿ ಭೀತಿ?
    ನೆಗ್ಲೇರಿಯಾ ಫೌಲೆರಿ ಅಮೀಬಾ ಜಗತ್ತಿನ ಎಲ್ಲ ಖಂಡಗಳಲ್ಲಿ ಕಂಡುಬರುತ್ತವೆ ಎನ್ನಲಾಗಿದೆ. 2015 ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಈ ಅಮೀಬಾ ಹರಿಯಾಣ ರಾಜ್ಯದ ರೋಹ್ತಕ್ ಹಾಗೂ ಝಜ್ಜರ್ ಜಿಲ್ಲೆಯಲ್ಲಿರುವ ನೀರಿನ ಪ್ರದೇಶಗಳಲ್ಲಿ ಕಂಡುಬಂದಿದೆ ಎನ್ನಲಾಗಿದೆ.

    ಮುನ್ನೆಚ್ಚರಿಕಾ ಕ್ರಮ:
    ಅಮೀಬಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಿಗೆ ನೀರಿನ ಮೂಲಗಳಿಂದ ಹರಡುವ ಸಾಧ್ಯತೆಯಿದೆ. ಮೂಗಿನ ಮೂಲಕ ಸೋಂಕು ಮನುಷ್ಯನ ದೇಹ ಪ್ರವೇಶಿಸುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ವರದಿಯಾದ ಪ್ರದೇಶಗಳಲ್ಲಿ ನೀರಿನಲ್ಲಿ ಈಜಾಡದಂತೆ ಸೂಚಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]