ನವದೆಹಲಿ: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದ ಬ್ರಹ್ಮೋಸ್ ಕ್ಷಿಪಣಿ (BrahMos Supersonic Cruise Missile) ಬದ್ಧವೈರಿಯ ನಿದ್ದೆಗೆಡಿಸಿತ್ತು. ಇದೀಗ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ ಶೀಘ್ರದಲ್ಲೇ ದುಪ್ಪಟ್ಟಾಗಲಿದೆ.
ಇದ್ರ ಜೊತೆಗೆ 200 ಕಿಮೀ ದೂರ ಕ್ರಮಿಸಿ ಟಾರ್ಗೆಟ್ ಹೊಡೆಯಬಲ್ಲ ಏರ್ ಟು ಏರ್ `ಅಸ್ತ್ರ’ ಕ್ಷಿಪಣಿಯೂ ಇನ್ನೊಂದು ವರ್ಷದಲ್ಲಿ ನಿಯೋಜನೆಗೆ ಸಿದ್ಧ ಇರಲಿವೆ. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಬ್ರಹ್ಮೋಸ್ ವೇಗವನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿಯ ನಿಖರ ದಾಳಿಗಳು ಜಗತ್ತನ್ನು ಬೆರಗುಗೊಳಿಸಿವೆ. ಹಲವಾರು ದೇಶಗಳು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿವೆ. ಇದನ್ನೂ ಓದಿ: ಪಂಜಾಬ್ ಮಾಜಿ ಡಿಜಿಪಿ, ಪತ್ನಿ ಮಾಜಿ ಸಚಿವೆ ವಿರುದ್ಧ ಪುತ್ರನನ್ನೇ ಹತ್ಯೆಗೈದ ಕೇಸ್
ಸದ್ಯದ ಬ್ರಹ್ಮೋಸ್ ವಿಶೇಷತೆ ಏನು?
* ಈಗಿರುವ ಬ್ರಹ್ಮೋಸ್ ಮಿಸೈಲ್ 450 ಕಿಮೀ ಶ್ರೇಣಿ ಹೊಂದಿದೆ.
* 4,000 ಕಿ.ಮೀ. ವೇಗದಲ್ಲಿ ಸಾಗಿ ವೈರಿಗಳನ್ನು ಉಡಾಯಿಸಬಲ್ಲದು.
* ಇದೀಗ ಈ ಕ್ಷಿಪಣಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ.
* ಹೊಸ ಕ್ಷಿಪಣಿ ದೂರ ಕ್ರಮಿಸುವ ಸಾಮರ್ಥ್ಯ 800 ಕಿ.ಮೀ.ಗೆ ಹೆಚ್ಚಿದೆ.
* ಬ್ರಹ್ಮೋಸ್‌ನ ರಾಮ್‌ಜೆಟ್ ಎಂಜಿನ್‌ನಲ್ಲಿ ಮಾರ್ಪಾಡು.
* ನ್ಯಾವಿಗೇಶನ್ ಸಿಸ್ಟಂಗಳ ಸಂಯೋಜನೆ ಬಗ್ಗೆ ಪರೀಕ್ಷೆ.
* ಇದು ಯಶಸ್ವಿಯಾದಲ್ಲಿ ಮತ್ತಷ್ಟು ಪ್ರಖರ ಅಸ್ತ್ರವಾಗಲಿದೆ.
* ನೌಕಾಪಡೆಯ ಅಗತ್ಯಕ್ಕೆ ಬೇಕಾಗದಂತೆ ಅಪ್‌ಗ್ರೇಡ್ ಸಾಧ್ಯತೆ.
ಪಣಜಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಗೋವಾ ಕರಾವಳಿಯಲ್ಲಿ (Goa Coast) ಭಾರತೀಯ ನೌಕಾಪಡೆಯೊಂದಿಗೆ ದೀಪಾವಳಿ ಆಚರಿಸಿದರು. ಗೋವಾದ ಕಾರವಾರ ಕರಾವಳಿಯಲ್ಲಿರುವ ಐಎನ್ಎಸ್ ವಿಕ್ರಾಂತ್‌ಗೆ ಭೇಟಿ ನೀಡಿದ ಅವರು ನೌಕಾಪಡೆ ಸೇನಾ ಸಿಬ್ಬಂದಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ್ರು. ಈ ವೇಳೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಐಎನ್‌ಎಸ್ ವಿಕ್ರಾಂತ್ ಹಾಗೂ ಬ್ರಹ್ಮೋಸ್ (BrahMos), ಆಕಾಶ್ ಕ್ಷಿಪಣಿಗಳ ಸಾಮರ್ಥ್ಯವನ್ನು ಕೊಂಡಾಡಿದರು.
ಇಂದು ಅದ್ಭುತ ದಿನ, ಈ ದೃಶ್ಯ ಅವಿಸ್ಮರಣೀಯ. ಈ ದಿನ ನನ್ನ ಬಳಿ ಒಂದು ಕಡೆ ಸಾಗರವಿದೆ, ಮತ್ತೊಂದೆಡೆ ಭಾರತ ಮಾತೆಯ ವೀರ ಸೈನಿಕರ ಬಲವಿದೆ. ಇನ್ನೊಂದೆಡೆ ಅನಂತ ದಿಗಂತ, ಅನಂತ ಆಕಾಶ ಹಾಗೂ ಅನಂತ ಶಕ್ತಿಯ ಸಂಕೇತವಾದ ಐಎನ್ಎಸ್ ವಿಕ್ರಾಂತ್ (INS Vikrant) ಇದೆ. ಸಾಗರ ನೀರಿನ ಮೇಲೆ ಹೊಳೆಯುವ ಸೂರ್ಯನ ಕಿರಣಗಳು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ನೌಕಾಪಡೆಯ ಎಲ್ಲಾ ವೀರ ಸೈನಿಕರೊಂದಿಗೆ ಪವಿತ್ರ ಹಬ್ಬ ದೀಪಾವಳಿ (Deepavali Festival) ಆಚರಿಸುತ್ತಿರುವುದು ನನ್ನ ಅದೃಷ್ಟ. ಐಎನ್ಎಸ್ ವಿಕ್ರಾಂತ್ ಸ್ವಾವಲಂಬಿ ಭಾರತದ ಸಂಕೇತ, ನಾನು ನಮ್ಮ ಸಶಸ್ತ್ರ ಪಡೆಗಳಿಗೆ ವಿಶೇಷವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದ್ರೆ ಈ ಮೂರು ಪಡೆಗಳ ಪ್ರಚಂಡ ಸಮನ್ವಯವು ಪಾಕಿಸ್ತಾನವನ್ನು (Pakistan) ಆಪರೇಷನ್ ಸಿಂಧೂರದಲ್ಲಿ ಶರಣಾಗುವಂತೆ ಮಾಡಿತು. ಬ್ರಹ್ಮೋಸ್ ಆಕಾಶ್ ನಂತರ ಕ್ಷಿಪಣಿಗಳು ಆಪರೇಷನ್ ಸಿಂಧೂರದಲ್ಲಿ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿವೆ. ಹೀಗಿ ಇಂದು ಪ್ರಪಂಚದಾದ್ಯಂತ ಹಲವಾರು ದೇಶಗಳು ಈಗ ಬ್ರಹ್ಮೋಸ್ ಕ್ಷಿಪಣಿ ಖರೀದಿಸಲು ಆಸಕ್ತಿ ತೋರಿವೆ ಎಂದು ಮೋದಿ ಹೇಳಿದರು.
Will always cherish the cultural programme on board INS Vikrant last evening. The naval personnel are truly creative and versatile. They penned a song ‘Kasam Sindoor Ki’ which will remain etched in my memory. pic.twitter.com/3S6bruQAkT
ನಾನು ಮಿಲಿಟರಿ ಉಪಕರಣಗಳ ಶಕ್ತಿಯನ್ನು ನೋಡುತ್ತಿದ್ದೆ, ಈ ಬೃಹತ್ ಹಡಗುಗಳು, ಗಾಳಿಗಿಂತಲೂ ವೇಗವಾಗಿ ಹಾರುವ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಅವು ತಮ್ಮಲ್ಲಿಯೇ ಪ್ರಭಾವಶಾಲಿಯಾಗಿವೆ. ಇದರ ಜೊತೆಗೆ ಅವುಗಳನ್ನು ನಿರ್ವಹಿಸುವವರ ಶೌರ್ಯ ಸಾಹಸ, ಅವುಗಳನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡುತ್ತವೆ. ಉದಾಹರಣೆಗೆ ಈ ಹಡಗುಗಳು ಕಬ್ಬಿಣದಿಂದಲೇ ಮಾಡಿರಬಹುದು ಆದ್ರೆ, ನೀವು ಹತ್ತಿದಾಗ ಅವು ಜೀವಂತ ಹಾಗೂ ಉಸಿರಾಟ ಇರುವ ಶಕ್ತಿಶಾಲಿ ಅಸ್ತ್ರಗಳಾಗಿ ಬದಲಾಗುತ್ತವೆ ಎಂದು ಸೈನಿಕರನ್ನ ಶೌರ್ಯವನ್ನು ಹಾಡಿಹೊಗಳಿದರು.
Highlights from INS Vikrant, including the Air Power Demo, a vibrant cultural programme and more… pic.twitter.com/Br943m0oCC
2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಅವರು ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. 2014ರಲ್ಲಿ ಲಡಾಖ್‌ನಲ್ಲಿರುವ ಸಿಯಾಚಿನ್ ಹಿಮನದಿಗೆ ಭೇಟಿ ನೀಡಿದ್ದರು. 2015 ರಲ್ಲಿ, ಅವರು 1965ರ ಭಾರತ-ಪಾಕಿಸ್ತಾನ ಯುದ್ಧದ ವೀರರಿಗೆ ಗೌರವ ಸಲ್ಲಿಸಲು ಪಂಜಾಬ್‌ನ ಅಮೃತಸರದಲ್ಲಿರುವ ಡೋಗ್ರೈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. 2016 ರಲ್ಲಿ, ದೀಪಾವಳಿಯಂದು ಹಿಮಾಚಲ ಪ್ರದೇಶದ ಭಾರತ-ಚೀನಾ ಗಡಿಯ ಬಳಿ ಗಡಿ ಭದ್ರತಾ ಪಡೆ ಮತ್ತು ಸೇನಾ ಸಿಬ್ಬಂದಿಯನ್ನು ಭೇಟಿ ಮಾಡಿದರು. 2017ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯದಲ್ಲಿ ಭದ್ರತಾ ಪಡೆಗಳನ್ನು ಭೇಟಿ ಮಾಡಿದರು. 2018 ರಲ್ಲಿ, ಪ್ರಧಾನಿಯವರು ಉತ್ತರಾಖಂಡದ ಹರ್ಷಿಲ್‌ನಲ್ಲಿ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಕಳೆದರು. 2019 ರಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೈನಿಕರನ್ನು ಭೇಟಿ ಮಾಡಿದರು.
2020ರಲ್ಲಿ, ಪ್ರಧಾನ ಮಂತ್ರಿಗಳು ರಾಜಸ್ಥಾನದ ಜೈಸಲ್ಮೇರ್‌ನ ಲೋಂಗೆವಾಲಾದಲ್ಲಿದ್ದರು. 2021 ರಲ್ಲಿ, ಪ್ರಧಾನ ಮಂತ್ರಿಗಳು ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. 2022 ರಲ್ಲಿ, ಪ್ರಧಾನ ಮಂತ್ರಿ ಮೋದಿ ಹುತಾತ್ಮರಿಗೆ ಗೌರವ ಸಲ್ಲಿಸಲು ಕಾರ್ಗಿಲ್‌ಗೆ ಭೇಟಿ ನೀಡಿದರು. 2023 ಮತ್ತು 2024 ರಲ್ಲಿ, ಅವರು ಹಿಮಾಚಲ ಪ್ರದೇಶದ ಲೆಪ್ಚಾ ಮತ್ತು ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.
ಲಕ್ನೋ: ಪಾಕಿಸ್ತಾನದ ಪ್ರತಿಯೊಂದು ಭೂಪ್ರದೇಶವೂ ಈಗ ನಮ್ಮ ಬ್ರಹ್ಮೋಸ್‌ನ ವ್ಯಾಪ್ತಿಯಲ್ಲಿದೆ. `ಆಪರೇಷನ್ ಸಿಂಧೂರ’ (Operation Sindoor) ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಮೂಲಕ ಭಾರತ ತನ್ನ ಶತ್ರುಗಳನ್ನು ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು.
ಉತ್ತರ ಪ್ರದೇಶದ (Uttara Pradesh) ಲಕ್ನೋದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಗೆ ಹಸಿರು ನಿಶಾನೆ ನೀಡಿದರು. ಬಳಿಕ ಮಾತನಾಡಿದ ಅವರು, `ಆಪರೇಷನ್ ಸಿಂಧೂರ’ ಇದು ಕೇವಲ `ಟ್ರೇಲರ್’ ಮಾತ್ರ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಪಾಕ್‌ನಲ್ಲಿರುವ ಆಫ್ಘನ್ನರಿಗೆ ದೇಶ ತೊರೆಯುವಂತೆ ರಕ್ಷಣಾ ಸಚಿವ ಖವಾಜಾ ವಾರ್ನಿಂಗ್
ಆಪರೇಷನ್ ಸಿಂಧೂರ ಗೆಲುವು ಒಂದು ಸಣ್ಣ ಘಟನೆಯಲ್ಲ. ಗೆಲುವು ನಮಗೆ ಅಭ್ಯಾಸವಾಗಿದೆ, ನಮ್ಮ ವಿರೋಧಿಗಳು ಬ್ರಹ್ಮೋಸ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ, ಬದಲಾಗಿ ಭಾರತದ ಬೆಳೆಯುತ್ತಿರುವ ಸ್ಥಳೀಯ ಸಾಮರ್ಥ್ಯಗಳ ಸಂಕೇತವಾಗಿದೆ. ವೇಗ, ನಿಖರತೆ ಮತ್ತು ಶಕ್ತಿಯ ಈ ಸಂಯೋಜನೆಯು ಬ್ರಹ್ಮೋಸ್ ಅನ್ನು ವಿಶ್ವದ ಅತ್ಯುತ್ತಮ ಕ್ಷಿಪಣಿಗಳಲ್ಲಿ ಒಂದನ್ನಾಗಿ ಮಾಡುತ್ತಿದೆ. ಬ್ರಹ್ಮೋಸ್ ಭಾರತೀಯ ಸಶಸ್ತ್ರ ಪಡೆಗಳ ಬೆನ್ನೆಲುಬಾಗಿ ಮಾರ್ಪಟ್ಟಿದೆ. ಭಾರತ ತನ್ನ ಭದ್ರತಾ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.
अब भारत ब्रह्मोस जैसी मिसाइल के माध्यम से न केवल अपनी सुरक्षा को बल्कि अपने मित्र देशों की सुरक्षा की आवश्यकताओं की पूर्ति करने में सक्षम है।
माननीय रक्षा मंत्री श्री @rajnathsingh जी के साथ आज ब्रह्मोस एयरोस्पेस लखनऊ इकाई में उत्पादित ब्रह्मोस मिसाइलों के प्रथम बैच के फ्लैग-ऑफ… pic.twitter.com/H0pBwsRKzq
ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ಭಾರತವು ಈಗ ತನ್ನ ಭದ್ರತಾ ಅಗತ್ಯಗಳನ್ನು ಮಾತ್ರವಲ್ಲದೆ ಪ್ರಪಂಚದಾದ್ಯಂತದ ತನ್ನ ಸ್ನೇಹಪರ ರಾಷ್ಟ್ರಗಳ ಭದ್ರತಾ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಲಕ್ನೋದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಗೆ ಚಾಲನೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಪ್ರತಿಜ್ಞೆಯನ್ನು ಈಡೇರಿಸುವ ಅದೃಷ್ಟಶಾಲಿ ನಾನು. ಇದು ಆತ್ಮನಿರ್ಭರದ ಅಡಿಪಾಯ ಎಂದರು.ಇದನ್ನೂ ಓದಿ: ಪಂಜಾಬ್ | ಗರೀಬ್ ರಥ ಎಕ್ಸ್‌ಪ್ರೆಸ್ ರೈಲು ಬೋಗಿಗೆ ಬೆಂಕಿ – ಧಗಧಗಿಸಿದ ಜ್ವಾಲೆ; ಪ್ರಯಾಣಿಕರು ಸೇಫ್
– ಅಂತಿಮ ಆದೇಶ ಬಂದಿದ್ದರೆ ಪಾಕಿಸ್ತಾನದ ಪೋರ್ಟ್‌ಗಳು ಮಿಸೈಲ್ ದಾಳಿಗೆ ಭಸ್ಮವಾಗುತ್ತಿದ್ದವು
ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಪಟ್ಟ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಆಪರೇಷನ್ ಸಿಂಧೂರ (Operation Sindoor) ವೇಳೆ ಪಾಕಿಸ್ತಾನದ ವಿರುದ್ಧ ನೌಕಾದಳದಿಂದ (Indian Navy ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು. ಆದರೆ, ದಾಳಿಗೆ ಅಂತಿಮ ಆದೇಶ ಬರಲಿಲ್ಲ. ಬಂದಿದ್ದರೆ ಪಾಕ್ ಬಂದರುಗಳು, ಅಲ್ಲಿದ್ದ ನೌಕೆಗಳು ಧ್ವಂಸವಾಗುತ್ತಿತ್ತು ನೌಕಾಪಡೆಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಉತ್ತರ ಅರಬ್ಬೀ ಸಮುದ್ರದಲ್ಲಿ ಮಿಗ್-29 ಎಂಕೆ ಫೈಟರ್‌ಜೆಟ್‌ಗಳನ್ನು (Fighter Jets) ಹೊತ್ತು ಐಎನ್‌ಎಸ್ ವಿಕ್ರಾಂತ್ ಸಜ್ಜಾಗಿತ್ತು (ಹಾಟ್-ಸ್ಟ್ಯಾಂಡ್‌ಬೈನಲ್ಲಿ). ಒಂದೊಮ್ಮೆ ದಾಳಿಗೆ ಸಿಗ್ನಲ್ ಸಿಕ್ಕಿದ್ದಲ್ಲಿ ದಕ್ಷಿಣ ಪಾಕಿಸ್ತಾನದ ಬಂದರುಗಳು (Pakistan Port) ಭಸ್ಮ ಆಗ್ತಿತ್ತು ಅಂತ ಹೇಳಲಾಗಿದೆ. ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್
ಹೌದು. ಪಾಕಿಸ್ತಾನದ ಕರಾಚಿ ಬಂದರಿನಲ್ಲಿರುವ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಹಾಗೂ ಭೂಸೇನೆ ಸೇರಿದಂತೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು. ಬ್ರಹ್ಮೋಸ್ ಕ್ಷಿಪಣಿ ಮತ್ತು ಜಲಾಂತರ್ಗಾಮಿ ನೌಕೆಗಳಿಂದ ದಾಳಿ ಮಾಡಲು ನಿರ್ಧರಿಸಲಾಗಿತ್ತು. ಇವು ಭಾರತದ ರಷ್ಯಾ ನಿರ್ಮಿತ ಕಿಲೋ ವರ್ಗದ ಜಲಾಂತರ್ಗಾಮಿ ನೌಕೆಗಳೊಂದಿಗೆ ಸಂಯೋಜಿಸಲ್ಪಟ್ಟ ಕ್ಲಬ್ ಸರಣಿಯವು ಎಂದು ನಂಬಲಾಗಿದೆ. ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಎರಡೂ ಹಡಗು ವಿರೋಧಿ ಮತ್ತು ಭೂ-ದಾಳಿ ಕ್ಷಿಪಣಿಗಳನ್ನು ಉಡಾಯಿಸುವ ಸ್ಥಿತಿಯಲ್ಲಿದ್ದವು. ಆದ್ರೆ ಅಂತಿಮ ಆದೇಶ ಬರಲೇ ಇಲ್ಲ. ಬಂದಿದ್ದರೆ ಪಾಕಿಸ್ತಾನದ ಪೋರ್ಟ್‌ಗಳು ಮಿಸೈಲ್ ದಾಳಿಗೆ ಭಸ್ಮವಾಗುತ್ತಿದ್ದವು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’
ಉತ್ತರ ಅರಬ್ಬೀ ಸಮುದ್ರದಲ್ಲಿ ನಿಯೋಜನೆಯಾಗಿದ್ದ ಐಎನ್‌ಎಸ್ ವಿಕ್ರಾಂತ್ ನೌಕೆ ಹೊತ್ತಿದ್ದ ಮಿಕ್ 29K ಯುದ್ಧ ವಿಮಾನವು ಪಾಕಿಸ್ತಾನದ ದಕ್ಷಿಣ ಕರಾವಳಿ ವಾಯುಪ್ರದೇಶದ ಪ್ರಾಬಲ್ಯವನ್ನು ಖಚಿತಪಡಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಯುದ್ಧಗಳು ಕೊನೆಗೊಂಡ ಕೆಲ ದಿನಗಳ ನಂತರ ATR-72 ಟರ್ಬೊ-ಪ್ರಾಪ್ ವಿಮಾನದ ಆವೃತ್ತಿ RAS-72 ಸೀ ಈಗಲ್ ಅನ್ನು INS ವಿಕ್ರಾಂತ್ ಟ್ರ್ಯಾಕ್ ಮಾಡಿತು. ಇದು ಕಡಲ ತೀರದ ಕಣ್ಗಾವಲು ವಿಮಾನವಾಗಿದೆ. ಅದಕ್ಕಾಗಿ ಪಾಕ್ ನೌಕಾಪಡೆಯ ವಿಮಾನದಿಂದ ಕೆಲ ಮೀಟರ್‌ಗಳ ಅಂತರದಷ್ಟು ದೂರದಲ್ಲಿ ಮಿಗ್-29ಕೆ ವಿಮಾನವನ್ನು ಕಣ್ಗಾವಲಿಗೆ ಇರಿಸಲಾಗಿತ್ತು. ಈ ಮೂಲಕ ಪಾಕ್ ನೌಕಾಪಡೆಯ ವಿಮಾನವನ್ನು ಹಿಮ್ಮೆಟ್ಟಿಸುವಲ್ಲಿ ನೌಕಾಪಡೆ ಯಶಸ್ವಿಯಾಯಿತು. ಇದನ್ನೂ ಓದಿ: ಹನಿಮೂನ್ ಮರ್ಡರ್‌ನಂತೆಯೇ ಆಂಧ್ರದಲ್ಲೂ ಮರ್ಡರ್ – ಮೇಘಾಲಯ ಹತ್ಯೆ ವಿಚಾರದ ಬಗ್ಗೆಯೂ ಮಾತಾಡಿದ್ರಂತೆ ಆರೋಪಿಗಳು
ಇನ್ನೂ, ಭಾರತದ ಜೊತೆ ಶೀಘ್ರವೇ ಅತಿದೊಡ್ಡ ವ್ಯಾಪಾರ ಒಪ್ಪಂದ ನಡೆಯಲಿದೆ ಅಂತ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇನ್ನು, ಟ್ಯಾಕ್ಸ್ ವಾರ್ ಬಳಿಕ ಚೀನಾ ಜೊತೆ ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇನ್ನು, ಇರಾನ್ ಜೊತೆ ಮತ್ತೆ ಮಾತುಕತೆಗೆ ಟ್ರಂಪ್ ಮುಂದಾಗಿದ್ದಾರೆ. ನಾಗರಿಕ ಪರಮಾಣು ಇಂಧನದಲ್ಲಿ 30 ಬಿಲಿಯನ್ ಡಾಲರ್ ಹೂಡಿಕೆ, ಫಂಡ್ ರಿಲೀಸ್, ನಿರ್ಬಂಧ ವಾಪಸ್ ಬಗ್ಗೆ ಮಾತುಕತೆ ನಡೆಸೋಣ ಅಂತ ಇರಾನ್‌ಗೆ ಅಮೆರಿಕ ಆಹ್ವಾನ ಕೊಟ್ಟಿದೆ. ಇರಾನ್-ಇಸ್ರೇಲ್‌ನಿಂದ ಈವರೆಗೂ 4,415 ಭಾರತೀಯರು ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ‘ಆಪರೇಷನ್ ಸಿಂಧು’ ಕಾರ್ಯಾಚರಣೆ ಮೂಲಕ ಇರಾನ್‌ನಿಂದ 3,597, ಇಸ್ರೇಲ್‌ನಿಂದ 818 ಮಂದಿಯನ್ನು ಕರೆತರಲಾಗಿದೆ ವಿದೇಶಾಂಗ ಇಲಾಖೆ ಹೇಳಿದೆ. ಇದಕ್ಕಾಗಿ 19 ವಿಶೇಷ ವಿಮಾನಗಳು, ವಾಯುಪಡೆಯ 3 ವಿಮಾನಗಳನ್ನು ಬಳಕೆ ಮಾಡಲಾಗಿದೆ. ಈ ಮಧ್ಯೆ, ಇರಾನ್ ಸುಪ್ರೀಂಲೀಡರ್ ಖಮೇನಿ ಹತ್ಯೆಗೆ ತುಂಬಾ ಹುಡುಕಾಟ ನಡೆಸಿದ್ದೆವು. ಆದರೆ, ಆತ ಅಜ್ಞಾತವಾಸಿಯಾಗಿಬಿಟ್ಟ. ನಮ್ಮ ಕಣ್ಣಿಗೆ ಬಿದ್ದಿದ್ದರೆ ಆತನನ್ನು ಕಗ್ಗೊಲೆ ಮಾಡುತ್ತಿದ್ದೆವು ಅಂತ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಹೇಳಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!
– 1998 ರಲ್ಲಿ ಭಾರತ – ರಷ್ಯಾ ಜಂಟಿ ಹೂಡಿಕೆಯಲ್ಲಿ ಕಂಪನಿ ಆರಂಭ – ಪಾಕ್ ಉಗ್ರರ ನೆಲೆಗಳ ಮೇಲೆ ನಿಖರ ದಾಳಿ
ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಬಳಿಕ ಭಾರತ (India) ಮತ್ತು ರಷ್ಯಾ (Russia) ಜಂಟಿಯಾಗಿ ಉತ್ಪಾದನೆ ಮಾಡಿದ ಬ್ರಹ್ಮೋಸ್ ಕ್ಷಿಪಣಿ (BrahMos Missile) ಖರೀದಿಗೆ ಹಲವು ದೇಶಗಳು ಈಗ ಆಸಕ್ತಿ ತೋರಿಸಿವೆ.
ಹಲವು ದೇಶಗಳು ಕ್ಷಿಪಣಿ ಖರೀದಿಗೆ ಆಸಕ್ತಿ ತೋರಿಸಲು ಕಾರಣವೂ ಇದೆ. ಬ್ರಹ್ಮೋಸ್ ಚೀನಾದ HQ-9 ವಾಯು ರಕ್ಷಣಾ ವ್ಯವಸ್ಥೆಗೂ ಕಾಣದಂತೆ ಪಾಕ್ ಒಳಗಡೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಕಡಿಮೆ ಬೆಲೆಯಲ್ಲಿ ನಿಖರ ದಾಳಿ ನಡೆಸಿದ್ದಕ್ಕೆ ಈಗ ಸುಮಾರು 18 ದೇಶಗಳು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಆಸಕ್ತಿ ತೋರಿಸಿವೆ.
250 ಮಿಲಿಯನ್ ಡಾಲರ್ (ಇಂದಿನ ಮೌಲ್ಯದಲ್ಲಿ ಹೇಳುವುದಾದರೆ 2,135 ಕೋಟಿ ರೂ.) ಹೂಡಿಕೆಯೊಂದಿಗೆ 1998ರಲ್ಲಿ ಬ್ರಹ್ಮೋಸ್ ಕ್ಷಿಪಣಿ ತಯಾರಿಸುವ ಕಂಪನಿ ಆರಂಭವಾಯಿತು. ಬ್ರಹ್ಮೋಸ್ ಕ್ಷಿಪಣಿಯ ಅಭಿವೃದ್ಧಿಯ ವೆಚ್ಚ ಅಧಿಕೃತವಾಗಿ ಎಲ್ಲಿಯೂ ಪ್ರಕಟವಾಗಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಬ್ರಹ್ಮೋಸ್ ಉತ್ಪಾದನಾ ಘಟಕವನ್ನು ಅಭಿವೃದ್ಧಿಪಡಿಸಲು 300 ಕೋಟಿ ರೂ.ವೆಚ್ಚ ಆಗಲಿದ್ದು ಪ್ರತಿ ಕ್ಷಿಪಣಿಗೆ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 34 ಕೋಟಿ ರೂ. ವೆಚ್ಚವಾಗುತ್ತದೆ ಎಂದು ವರದಿಯಾಗಿದೆ.
ವೇಗ ಎಷ್ಟು?
ಎಷ್ಟು ವೇಗದಲ್ಲಿ ಹೋಗುತ್ತದೆ ಅಂದರೆ ಮ್ಯಾಕ್ 2.8 ರಿಂದ ಮ್ಯಾಕ್ 3.5 ವೇಗದಲ್ಲಿ ಸಂಚರಿಸುತ್ತದೆ. ಕ್ಷಿಪಣಿಗಳು ಶಬ್ದದ ವೇಗಕ್ಕಿಂತಲೂ ವೇಗವಾಗಿ ಹೋಗುವುದರಿಂದ ಅದರ ವೇಗವನ್ನು ಅಳೆಯಲು ಮ್ಯಾಕ್ ಸಂಖ್ಯೆಗಳನ್ನು ಬಳಸಲಾಗುತ್ತದೆ. ಶಬ್ಧದ ವೇಗ ಗಂಟೆಗೆ 1,234 ಕಿ.ಮೀ. ಅಂದರೆ ಬ್ರಹ್ಮೋಸ್ ಕ್ಷಿಪಣಿ ಗಂಟೆಗೆ 3,455 ಕಿ.ಮೀಗಿಂತಲೂ ಹೆಚ್ಚು ವೇಗದಲ್ಲಿ ಸಂಚರಿಸಿ ನೆಲೆಗಳನ್ನು ಧ್ವಂಸ ಮಾಡುತ್ತದೆ. ಇದನ್ನೂ ಓದಿ: ಪಾಕ್ ವಿರುದ್ಧ ‘ಬ್ರಹ್ಮೋಸ್’ ಪರಾಕ್ರಮ – ಬ್ರಹ್ಮೋಸ್ ಕ್ಷಿಪಣಿಗಾಗಿ 18 ರಾಷ್ಟ್ರಗಳಿಂದ ಬೇಡಿಕೆ
ಬ್ರಹ್ಮೋಸ್ ಅಭಿವೃದ್ಧಿಯಾಗಿದ್ದು ಹೇಗೆ?
ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ (India) ಶಾಂತಿ ಮಂತ್ರವನ್ನು ಅನುಸರಿಸಿದರೂ ಪಾಕಿಸ್ತಾನ ಮತ್ತು ಚೀನಾದ (China) ಮಧ್ಯೆ ಯುದ್ಧ ನಡೆಸಬೇಕಾಯಿತು. 1947, 1965, 1971 ರಲ್ಲಿ ಪಾಕಿಸ್ತಾನದ ಜೊತೆ 1962 ರಲ್ಲಿ ಚೀನಾದ ಜೊತೆ ಯುದ್ಧ ಮಾಡಬೇಕಾಯಿತು. ಪಾಕಿಸ್ತಾನ ಜೊತೆಗಿನ ಮೂರು ಯುದ್ಧದಲ್ಲಿ ಭಾರತ ಗೆದ್ದರೆ ಚೀನಾದ ವಿರುದ್ಧ ಭಾರತ ಸೋತಿತ್ತು. ಗಡಿಯಲ್ಲಿರುವ ಈ ದೇಶಗಳ ಕಿರಿಕಿರಿ ಜಾಸ್ತಿ ಆಗುತ್ತಿದ್ದಂತೆ ಭಾರತ ಸರ್ಕಾರ ರಕ್ಷಣೆಗೆ ಹೆಚ್ಚು ಒತ್ತು ನೀಡಲು ಆರಂಭಿಸಿತು. ಅಷ್ಟೇ ಅಲ್ಲದೇ ಸ್ವಂತ ಕ್ಷಿಪಣಿ ಅಭಿವೃದ್ಧಿ ಪಡಿಸಲು ಮುಂದಾಯಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ ಡಿಆರ್‌ಡಿಒ ವಿಜ್ಞಾನಿಗಳು 1989ರಲ್ಲಿ ಅಗ್ನಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು. ಈ ಸಂದರ್ಭದಲ್ಲಿ ಧ್ವನಿಗಿಂತ ವೇಗವಾಗಿ ಸಂಚರಿಸುವ ಸೂಪರ್ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲು ಭಾರತ ಮುಂದಾಯಿತು. ಆದರೆ ಅದಕ್ಕೆ ಬೇಕಾದ ತಂತ್ರಜ್ಞಾನ ಭಾರತದ ಬಳಿ ಇರಲಿಲ್ಲ.
ಅಣುಬಾಂಬ್ ಪರೀಕ್ಷೆ ಮಾಡಿದ ಬಳಿಕ ಅಮೆರಿಕ ಭಾರತದ ಮೇಲೆ ಹಲವು ದಿಗ್ಭಂಧನ ವಿಧಿಸಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾದ ಸಂಬಂಧ ಚೆನ್ನಾಗಿತ್ತು. ಕೊನೆಗೆ ಭಾರತ ಮತ್ತು ರಷ್ಯಾದ ಜಂಟಿ ಹೂಡಿಕೆಯಲ್ಲಿ ಬ್ರಹ್ಮೋಸ್ ಕಂಪನಿ 1998ರಲ್ಲಿ ಸ್ಥಾಪನೆಯಾಯಿತು.
ಕ್ಷಿಪಣಿ ಮನುಷ್ಯ ಅಬ್ಧುಲ್ ಕಲಾಂ ಮತ್ತು ರಷ್ಯಾದ ರಕ್ಷಣಾ ಸಚಿವ ಮಿಖಾಲಿವೋ ಫೆಬ್ರವರಿ 12 ರಂದು ಮಾಸ್ಕೋದಲ್ಲಿ ಸಹಿ ಹಾಕಿದರು. ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPOM ನಡುವಿನ ಜಂಟಿ ಉದ್ಯಮವಾಗಿದೆ. ʼಬ್ರಹ್ಮಪುತ್ರʼ ಮತ್ತು ರಷ್ಯಾದ ʼಮಾಸ್ಕೋವಾʼ ನದಿಗಳನ್ನು ಪ್ರತಿನಿಧಿಸಲು ಈ ಕ್ಷಿಪಣಿಗೆ ಬ್ರಹ್ಮೋಸ್ ಎಂದು ಹೆಸರನ್ನು ಇಡಲಾಯಿತು. 250 ಮಿಲಿಯನ್ ಡಾಲರ್ ಹೂಡಿಕೆಯ ಕಂಪನಿಯಲ್ಲಿ ಭಾರತದ ಪಾಲು 50.5% ಇದ್ದರೆ ರಷ್ಯಾದ ಪಾಲು 49.5% ಇದೆ.
ಬ್ರಹ್ಮೋಸ್ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ. ಇದನ್ನೂ ಓದಿ: ಪಾಕ್, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!
ಕ್ರೂಸ್ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ.
ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಈ ಕಾರಣಕ್ಕೆ ಬ್ರಹ್ಮೋಸ್ ಚೀನಾದ ವಾಯು ರಕ್ಷಣಾ ವ್ಯವಸ್ಥೆಗೂ ಸಿಗದಂತೆ ಯಶಸ್ವಿಯಾಗಿ ಒಳನಗ್ಗಿ ನೆಲೆಗಳನ್ನು ಧ್ವಂಸಗೊಳಿಸಿತ್ತು.
ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು 2001ರ ಜೂನ್ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ. 300 ಕೆಜಿ ಸಿಡಿತಲೆಯನ್ನು ಹೊತ್ತುಕೊಂಡು 300 ಕಿ.ಮೀ ದೂರದವರೆಗಿನ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ.
ನವದೆಹಲಿ: ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಭಾರತದ (India) ವಿರುದ್ಧ ದಾಳಿ ನಡೆಸಿದ ಪಾಕಿಸ್ತಾನದ (Pakistan) ಮೇಲೆ 15 ಬ್ರಹ್ಮೋಸ್ ಕ್ಷಿಪಣಿಯನ್ನು (Brahmos Missile) ಹಾರಿಸಿ 11 ವಾಯುನೆಲೆಗಳನ್ನು ಧ್ವಂಸ ಮಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ.
ಮೇ 9 ರ ರಾತ್ರಿ ಭಾರತದ ನಗರಗಳನ್ನು ಗುರಿಯಾಗಿಸಿ ಪಾಕ್‌ನಿಂದ ದಾಳಿ ಆರಂಭವಾಗುತ್ತಿದ್ದಂತೆ ನಮ್ಮ ಪಡೆಗಳು ಅವುಗಳನ್ನು ನಿಷ್ಕ್ರಿಯಗಳಿಸಿತ್ತು. ಈ ಸಂದರ್ಭದಲ್ಲಿ ಪ್ರತಿ ದಾಳಿ ನಡೆಸುವ ಮೊದಲು ಭಾರತ ಪೈಲಟ್ ರಹಿತ ಡಮ್ಮಿ ಏರ್‌ಕ್ರಾಫ್ಟ್ (Dummy Aircraft) ಅನ್ನು ಹಾರಿಸಿತ್ತು. ಈ ಡಮ್ಮಿ ಏರ್‌ಕ್ರಾಫ್ಟ್ ಹೊಡೆದು ಹಾಕಲು ಪಾಕ್ ರೇಡಾರ್ ಮತ್ತು ಏರ್ ಡಿಫೆನ್ಸ್ ಸಿಸ್ಟಂ (Air Defence System) ಸಕ್ರಿಯಗೊಳಿಸಿತ್ತು. ರೇಡಾರ್ ಮತ್ತು ಏರ್ ಡಿಫೆನ್ಸ್ ಸಿಸ್ಟಂ ಎಲ್ಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಭಾರತ ಇಸ್ರೇಲ್ ನಿರ್ಮಿಸಿದ್ದ ಹರೋಪ್ಸ್ ಮತ್ತು ಕ್ಷಿಪಣಿಗಳ ಹಾರಿಸಿ ಅವುಗಳನ್ನು ನಿಷ್ಕ್ರಿಯಗೊಳಿಸಿತು ಎಂದು ಮೂಲಗಳನ್ನು ಆಧಾರಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಪಾಕ್ ರೇಡಾರ್ ಜಾಲವನ್ನು ನಿಷ್ಕ್ರಿಯಗೊಳಿಸಿದ ನಂತರ ಭಾರತೀಯ ವಾಯು ಸೇನೆ ಸ್ಕಾಲ್ಪ್, ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಿ ಭಯಂಕರ ದಾಳಿ ನಡೆಸಿತು. ಮುಖ್ಯವಾಗಿ ಭಾರತ ಪಶ್ಚಿಮ ವಾಯು ಕಮಾಂಡ್ ಮತ್ತು ನೈಋತ್ಯ ವಾಯು ಕಮಾಂಡ್‌ನಿಂದ ದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ವಾಯು-ಉಡಾವಣಾ ಕ್ರೂಸ್ ಕ್ಷಿಪಣಿಗಳು ಮತ್ತು ಮಾನವರಹಿತ ಯುದ್ಧ ವಿಮಾನಗಳನ್ನು ಬಳಸಿಕೊಂಡು ದಾಳಿ ನಡೆಸಿತು. ಈ ದಾಳಿಯನ್ನು ರಷ್ಯಾದ S-400, MRSAM ಮತ್ತು ಆಕಾಶ್ ವಾಯು ರಕ್ಷಣಾ ಕ್ಷಿಪಣಿ ಘಟಕಗಳು ಮತ್ತು ಇತರ ಹಳೆಯ ವ್ಯವಸ್ಥೆಗಳನ್ನು ಬಳಸಿ ವಿಫಲಗೊಳಿಸಲಾಯಿತು. ಇದನ್ನೂ ಓದಿ: ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್!
ದಾಳಿ ವೇಳೆ 15 ಬ್ರಹ್ಮೋಸ್ ಕ್ಷಿಪಣಿಯನ್ನು (Brahmos Missile) ಬಳಕೆ ಮಾಡಿದ್ದು ವಾಯುಸೇನೆಗೆ ಭಾರೀ ಬಲ ಬಂತು. ಒಂದು ದೇಶದ ವಿರುದ್ಧದ ಕಾದಾಟದಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಕೆ ಮಾಡಿದ್ದು ಇದೇ ಮೊದಲು. ಬ್ರಹ್ಮೋಸ್ ರನ್‌ವೇ, ಯುದ್ಧ ವಿಮಾನಗಳು ತಂಗಿದ್ದ ಜಾಗ ಇತ್ಯಾದಿಗಳ ಮೇಲೆ ದಾಳಿ ಮಾಡಿದ್ದರಿಂದ ಪಾಕ್‌ನ ಜಂಘಾಬಲವೇ ನಡುಗಿ ಹೋಯಿತು. ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ಕಳೆದುಕೊಂಡ ಬೆನ್ನಲ್ಲೇ ರಾತ್ರಿಯೇ ಪಾಕ್ ತನ್ನ ವಿಮಾನಗಳನ್ನು ಹಿಂಭಾಗಕ್ಕೆ ಸ್ಥಳಾಂತರ ಮಾಡಿತು ಎಂದು ಮೂಲಗಳು ಹೇಳಿವೆ.
ಚೀನಿ HQ-9 ವಾಯು ರಕ್ಷಣಾ ವ್ಯವಸ್ಥೆ
ಬ್ರಹ್ಮೋಸ್ ಪಾಕ್‌ನ ಪ್ರಮುಖ 12 ವಾಯು ನೆಲೆಗಳ ಪೈಕಿ 11ರ ಮೇಲೆ ದಾಳಿ ನಡೆಸಿ ಮೂಲ ಸೌಕರ್ಯಗಳನ್ನೇ ಧ್ವಂಸ ಮಾಡಿತ್ತು. ಬ್ರಹ್ಮೋಸ್ ದಾಳಿಯ ತೀವ್ರತೆಗೆ ಪಾಕಿಸ್ತಾನ ಮತ್ತೆ ಪ್ರತಿದಾಳಿ ನಡೆಸುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಕೊನೆಗೆ ಪಾಕ್ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ತುರ್ತಾಗಿ ಭಾರತದ ಡಿಜಿಎಂಒಗೆ ಕರೆ ಮಾಡಿ ಯುದ್ಧ ವಿರಾಮ ಘೋಷಿಸುವಂತೆ ಮನವಿ ಮಾಡಿದರು. ಒಂದು ವೇಳೆ ದಾಳಿ ಮುಂದುವರಿಯುತ್ತಿದ್ದರೆ ಪಾಕಿಸ್ತಾನದ ಯುಎವಿಗಳು ಮತ್ತು ಸಿಂಧ್ ಪ್ರಾಂತ್ಯದಲ್ಲಿ ನಿಲ್ಲಿಸಿದ್ದ ವಿಮಾನಗಳು ಭಾರೀ ಪ್ರಮಾಣದಲ್ಲಿ ಹಾಳಾಗುವ ಸಾಧ್ಯತೆ ಇತ್ತು.
– ಪಾಕಿಸ್ತಾನ ನೆಟ್ಟಗಾಗದ ನಾಯಿ ಬಾಲ ಇದ್ದಂತೆ; ತಿವಿದ ಸಿಎಂ
ಲಕ್ನೋ: ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಯ (BrahMos Missile) ಶಕ್ತಿ ಸಾಮರ್ಥ್ಯ ಸ್ಪಷ್ಟವಾಗಿತ್ತು. ಈ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಪಾತ್ರ ದೊಡ್ಡದಿದೆ. ಈ ಬಗ್ಗೆ ಯಾರಿಗಾದ್ರೂ ಅನುಮಾನ ಇದ್ದರೆ, ಪಾಕಿಸ್ತಾನವನ್ನ ಕೇಳಿ ಅಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ.
लगभग ₹30,000 करोड़ का निवेश उत्तर प्रदेश के अंदर डिफेंस सेक्टर में होने जा रहा है… pic.twitter.com/tEdHQ3BAgl
ಮುಂದೆ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯವನ್ನು ಯುದ್ಧ ಕೃತ್ಯವೆಂದೇ ಪರಿಗಣಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಭಯೋತ್ಪಾದನೆಯನ್ನ ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಇಂತಹ ಸಮಸ್ಯೆಗಳನ್ನ ಪರಿಹರಿಸಲಾಗುವುದಿಲ್ಲ. ಆದ್ದರಿಂದ ಮೋದಿಯವರ ನಾಯಕತ್ವದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ಹೋರಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್
ಏನಿದು ಆಪರೇಷನ್ ಸಿಂಧೂರ?
ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಕಣಿವೆಯಲ್ಲಿ ಸೈನಿಕರ ಸೋಗಿನಲ್ಲಿ ಬಂದ ನಾಲ್ವರು ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿದ್ದ ಭಾರತ ಮೇ 7ರ ರಾತ್ರಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK)ದ ಮೇಲೆ ʻಆಪರೇಷನ್ ಸಿಂಧೂರʼ ಹೆಸರಿನಡಿ ದಾಳಿ ನಡೆಸಿತ್ತು. ಈ ವೇಳೆ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಗಳ ಪ್ರಧಾನ ಕಚೇರಿ ಸೇರಿದಂತೆ 9 ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು.
– ಇನ್ನೊಂದೇ ವರ್ಷದಲ್ಲಿ ನೆಕ್ಸ್ಟ್ ಜನರೇಷನ್ ʻಬ್ರಹ್ಮೋಸ್ʼ ಮಿಸೈಲ್ ಸಿದ್ಧ
ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಂಡಿರುವ ಹೊತ್ತಿನಲ್ಲೇ ಭಾರತ ರಕ್ಷಣಾ ವಲಯದ ಸಾಮರ್ಥ್ಯ ಬಲಪಡಿಸುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆಯನ್ನಿಟ್ಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಂದು ಉತ್ತರ ಪ್ರದೇಶದ ಲಕ್ನೋದಲ್ಲಿರುವ ಡಿಫೆನ್ಸ್ ಕಾರಿಡಾರ್‌ನಲ್ಲಿ ನಿರ್ಮಿಸಲಾಗಿರುವ ʻಬ್ರಹ್ಮೋಸ್ʼ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು (BrahMos Production Unit) ವರ್ಚುವಲ್ ಮೂಲಕ ಉದ್ಘಾಟಿಸಿದರು.
आज जिस ब्रह्मोस फैसिलिटी का उद्घाटन हम कर रहे हैं, इस फैसिलिटी की शुरुआत से ही लगभग 500 Direct और 1000 Indirect रोजगार सृजित होंगे, यह भी कहीं न कहीं उस इकोसिस्टम के कारण ही संभव हो पाया है, जो श्री योगी आदित्यनाथ जी ने यहां डेवलप किया है: माननीय रक्षा मंत्री श्री @rajnathsingh… pic.twitter.com/ThHlQJb0pA
ರಕ್ಷಣಾ ವಲಯದ ಸಾಮರ್ಥ್ಯ ಹೆಚ್ಚಿಸಲು ನಿರ್ಮಿಸಲಾಗಿರುವ ಈ ಘಟಕವು ವಾರ್ಷಿಕವಾಗಿ 80 ರಿಂದ 100 ಕ್ಷಿಪಣಿಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ʻಬ್ರಹ್ಮೋಸ್’ (BrahMos) ವಿಶ್ವದ ಅತ್ಯಂತ ವೇಗದ ಮತ್ತು ವಿನಾಶಕಾರಿ ಕ್ಷಿಪಣಿಗಳಲ್ಲಿ ಒಂದಾಗಿದೆ ಎಂಬುದೇ ವಿಶೇಷ. ಹಾಗಾಗಿ ಕ್ಷಿಪಣಿ ಉತ್ಪಾದನಾ ಘಟಕವು ಉತ್ತರ ಪ್ರದೇಶದ ರಕ್ಷಣಾ ವಲಯಕ್ಕೆ ಮಾತ್ರವಲ್ಲದೇ, ಇಡೀ ಭಾರತದ ರಕ್ಷಣಾ ವಲಯಕ್ಕೆ ಬಲ ತುಂಬಲಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ
आज जो ब्रह्मोस फैसिलिटी शुरू हो रही है, मैं समझता हूं, वह यूपी डिफेंस कॉरिडोर का गौरव होगा। यह सिर्फ उत्तर प्रदेश का ही नहीं, बल्कि देश का सबसे बड़ा ब्रह्मोस Integration and Testing Facility Center है।
2018ರ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ರಕ್ಷಣಾ ಕೈಗಾರಿಕಾ ಕಾರಿಡಾರ್ ಉಪಕ್ರಮದ ಭಾಗವಾಗಿ ಉತ್ಪಾದನಾ ಘಟಕವನ್ನು ಘೋಷಿಸಲಾಯಿತು. ಇದಕ್ಕೆ 2021 ರಲ್ಲಿ ಅಡಿಪಾಯ ಹಾಕಲಾಗಿತ್ತು. ಇದು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ ಸರ್ಕಾರಿ ಸಂಸ್ಥೆ NPO ಮಶಿನೋಸ್ಟ್ರೋನಿನ್ಯಾ ನಡುವಿನ ಜಂಟಿ ಉದ್ಯಮವಾಗಿದೆ. ಇದರಲ್ಲಿ ಭಾರತದ ಪಾಲು ಶೇ.50.5 ಮತ್ತು ರಷ್ಯಾದ ಪಾಲು ಶೇ.49.5 ರಷ್ಟಿದೆ ಎಂದು ವರದಿಗಳು ತಿಳಿಸಿವೆ.
लगभग ₹30,000 करोड़ का निवेश उत्तर प्रदेश के अंदर डिफेंस सेक्टर में होने जा रहा है… pic.twitter.com/tEdHQ3BAgl
ಈ ಘಟಕವನ್ನು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಯುಪಿ ರಾಜ್ಯ ಸರ್ಕಾರವು ಲಕ್ನೋದಲ್ಲಿ 80 ಹೆಕ್ಟೇರ್ ಭೂಮಿಯನ್ನು ಉಚಿತವಾಗಿ ನೀಡಿದೆ. ಸುಮಾರು 3 ವರ್ಷಗಳ ದಾಖಲೆ ಸಮಯದ ಬಳಿಕ ಘಟಕ ನಿರ್ಮಾಣ ಪೂರ್ಣಗೊಂಡಿದ್ದು, ರಾಜ್ಯದ ಮೊದಲ ಹೈಟೆಕ್ ರಕ್ಷಣಾ ಉತ್ಪಾದನಾ ಕೇಂದ್ರ ಇದಾಗಲಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್
ಈ ಘಟಕದಲ್ಲಿ ಬ್ರಹ್ಮೋಸ್ ಕ್ಷಿಪಣಿ ಜೊತೆಗೆ ಇತರ ರಕ್ಷಣಾ ಉತ್ಪನ್ನಗಳು ಹಾಗೂ ಏರೋಸ್ಪೇಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಸುಮಾರು 500 ಮುಖ್ಯ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದು, ಸಾವಿರಾರು ಮಂದಿ ಸಹ ಸಿಬ್ಬಂದಿಗಳೂ ಸಹ ಇರಲಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್
1 ವರ್ಷದಲ್ಲಿ ನೆಕ್ಸ್ಟ್ ಜನರೇಷನ್ ಮಿಸೈಲ್ ಸಿದ್ಧ:
ಸದ್ಯಕ್ಕೆ ವಾರ್ಷಿಕವಾಗಿ 80 ರಿಂದ 100 ಬ್ರಹ್ಮೋಸ್ ಮಿಸೈಲ್ ತಯಾರಿಸುವ ಗುರಿಯನ್ನು ಘಟಕ ಹಾಕಿಕೊಂಡಿದೆ. ಜೊತೆಗೆ ಇನ್ನೊಂದು ವರ್ಷದಲ್ಲಿ ಮುಂದಿನ ತಲೆಮಾರಿನ ಕ್ಷಿಪಣಿ ಸಿದ್ಧಪಡಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿ 2,900 ಕೆಜಿ ತೂಗುತ್ತದೆ. ಆದ್ರೆ ಮುಂದಿನ ಪೀಳಿಗೆಯ ಬ್ರಹ್ಮೋಸ್ ಕ್ಷಿಪಣಿ 1,290 ಕೆಜಿ ತೂಕ ಹೊಂದಿರಲಿದ್ದು, ದಾಳಿಯ ವ್ಯಾಪ್ತಿಯು 300 ಕಿಮೀ ಗಿಂತಲೂ ಹೆಚ್ಚಿರಲಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: Ceasefire | ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯುವಂತೆ ಕಾಂಗ್ರೆಸ್ ಆಗ್ರಹ
ಪಾಕ್‌ಗೆ ನಡುಕ ಶುರುವಾಗಿದ್ದೇಕೆ?
2022ರ ಮಾರ್ಚ್ 9ರ ಸಂಜೆಯ ವೇಳೆ ಹರಿಯಾಣದ ಸಿರ್ಸಾದಿಂದ ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸದೇ ಇದ್ದರೂ ಈ ಕ್ಷಿಪಣಿಯನ್ನು ತಡೆಯಲು ಪಾಕಿಸ್ತಾನದಿಂದ ಸಾಧ್ಯವಾಗಿರಲಿಲ್ಲ. ಇದೀಗ ಯುದ್ಧದ ಛಾಯೆ ಕವಿದಿರುವ ಹೊತ್ತಿನಲ್ಲೇ ಭಾರತ ಬ್ರಹ್ಮೋಸ್ ಕ್ಷಿಪಣಿ ಘಟಕ ಉದ್ಘಾಟಿಸುತ್ತಿರುವುದು ಪಾಕ್‌ಗೆ ನಡುಕ ಉಂಟಾಗುವಂತೆ ಮಾಡಿದೆ. ಇದನ್ನೂ ಓದಿ: ಪಾಕ್‌ನ ಶೆಲ್ ತುಣುಕು ಅಮ್ಮನ ಮುಖವನ್ನೇ ಸೀಳಿತು – ʻಪಬ್ಲಿಕ್ ಟಿವಿʼ ಬಳಿ ಬಾರಾಮುಲ್ಲಾ ಜನರ ಅಳಲು
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತದ ನೌಕಾಸೇನೆ (Indian Navy) ಬ್ರಹ್ಮೋಸ್ ಕ್ಷಿಪಣಿಯನ್ನು ಯುದ್ಧನೌಕೆಯಿಂದ ಹಾರಿಸಿದೆ.
ಯುದ್ಧ ನೌಕೆಯಿಂದ ಹಾರಿಸಿ Anytime, Anywhere ಎಂದು ಭಾರತೀಯ ನೌಕಾಸೇನೆ ಪೋಸ್ಟ್ ಮಾಡಿದೆ.
ಪೋಸ್ಟ್‌ನಲ್ಲಿ ಏನಿದೆ?
ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಅನೇಕ ಹಡಗು ವಿರೋಧಿ ಗುಂಡಿನ ದಾಳಿಗಳನ್ನು ನಡೆಸಿದೆ. ನೌಕಾಪಡೆಯು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಹೇಳಿದೆ.
ಸಮುದ್ರದ ಮಧ್ಯದಲ್ಲಿರುವ ಯುದ್ಧನೌಕೆಯಿಂದ ಬ್ರಹ್ಮೋಸ್ (BrahMos) ಮತ್ತು ಮೇಲ್ಮೈ ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನು ನೌಕಾಪಡೆಯು ಹಂಚಿಕೊಂಡಿದೆ.
ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದೆ. ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ಮಾಡುತ್ತಿದ್ದರೆ ಇನ್ನೊಂದು ಕಡೆ ಭಾರತ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ.
ಬ್ರಹ್ಮೋಸ್ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ. ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮೋದಿ
ಕ್ರೂಸ್ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಕ್ರೂಸ್ ಕ್ಷಿಪಣಿಯ ವರ್ಗಕ್ಕೆ ಸೇರುವ ಬ್ರಹ್ಮೋಸ್ 800 ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.
ಈ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.
ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು 2001ರ ಜೂನ್ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ.
ಪಾಕಿಸ್ತಾನಕ್ಕೆ ಹಾರಿತ್ತು ಬ್ರಹ್ಮೋಸ್
ಈ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನಕ್ಕೂ ಹಾರಿತ್ತು. 2022ರ ಮಾರ್ಚ್ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು,ನೋವು ಸಂಭವಿಸಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಅಭಿನವ್ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.
ಮುಂಬೈ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ (ISI) ಪರ ಬೇಹುಗಾರಿಕೆ ನಡೆಸಿದ್ದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‍ನ (BrahMos Aerospace) ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್‍ಗೆ (Nishant Agarwal) ನಾಗ್ಪುರ ಜಿಲ್ಲಾ ನ್ಯಾಯಾಲಯ (Nagpur district court) ಜೀವಾವಧಿ ಶಿಕ್ಷೆ (Life Imprisonment) ಹಾಗೂ 3,000 ರೂ. ದಂಡ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ.ದೇಶಪಾಂಡೆ ಅವರಿದ್ದ ಪೀಠ ನಿಶಾಂತ್ ಅಗರ್ವಾಲ್‍ನನ್ನು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನಿಶಾಂತ್ ಅಗರ್ವಾಲ್ ಅಪರಾದ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 66 (ಎಫ್) ಮತ್ತು ಅಧಿಕೃತ ರಹಸ್ಯ ಕಾಯ್ದೆಯ (ಒಎಸ್‍ಎ) ವಿವಿಧ ಸೆಕ್ಷನ್‍ಗಳು ಹಾಗೂ ಕ್ರಿಮಿನಲ್ ಪ್ರೊಸೀಜರ್ ಕೋಡ್‍ನ ಸೆಕ್ಷನ್ 235ರ ಅಡಿಯಲ್ಲಿ ಅಗರ್ವಾಲ್‍ನನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದನ್ನೂ ಓದಿ: ದೆಹಲಿ ಮದ್ಯ ಹಗರಣ – ಬಿಆರ್‌ಎಸ್ ನಾಯಕಿ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ
ನಿಶಾಂತ್ ಅಗರ್ವಾಲ್, ನಾಗ್ಪುರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್‍ನ ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದ. ಆತನ ವಿರುದ್ಧ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ನ (ಐಎಸ್‍ಐ) ತಾಂತ್ರಿಕ ಮಾಹಿತಿಯನ್ನು ಸೋರಿಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಬಳಿಕ ಆತನನ್ನು 2018 ರಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಮಿಲಿಟರಿ ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿತ್ತು.