Tag: Bradman

  • ಸಚಿನ್ ಬಳಿಕ ಆಸೀಸ್ ಬ್ರಾಡ್ಮನ್ ಮ್ಯೂಸಿಯಂನಿಂದ ಕೊಹ್ಲಿಗೆ ವಿಶೇಷ ಗೌರವ

    ಸಚಿನ್ ಬಳಿಕ ಆಸೀಸ್ ಬ್ರಾಡ್ಮನ್ ಮ್ಯೂಸಿಯಂನಿಂದ ಕೊಹ್ಲಿಗೆ ವಿಶೇಷ ಗೌರವ

    ಸಿಡ್ನಿ: ಆಸೀಸ್ ತಂಡದ ಮಾಜಿ ಆಟಗಾರ ಬ್ರಾಡ್ಮನ್ ಅವರ ನೆನಪಿಗಾಗಿ ನಿರ್ಮಾಣವಾಗಿರುವ ಮ್ಯೂಸಿಯಂನಲ್ಲಿ ಸಚಿನ್ ಪಕ್ಕ ಕೊಹ್ಲಿ ಸ್ಥಾನ ಪಡೆದಿದ್ದಾರೆ.

    ಬ್ರಾಡ್ಮನ್ ಕ್ರಿಕೆಟ್ ನೀಡಿದ ಕೊಡುಗೆಯನ್ನು ತಿಳಿಸಲು ಅವರ ಹೆಸರಿನಲ್ಲಿ ಮ್ಯೂಸಿಯಂ ನಿರ್ಮಿಸಲಾಗಿದೆ. ಇಲ್ಲಿ ಅವರ ಕ್ರಿಕೆಟ್ ಸಾಧನೆಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಈ ಮ್ಯೂಸಿಯಂನಲ್ಲಿ ಈಗಾಗಲೇ ಸಚಿನ್ ಭಾವಚಿತ್ರವನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಸದ್ಯ ಈ ಸಾಲಿಗೆ ಕೊಹ್ಲಿ ಕೂಡ ಸೇರಿದ್ದು ಕೊಹ್ಲಿ ಅವರ ಜರ್ಸಿಗೂ ಕೂಡ ಸಚಿನ್ ಪಕ್ಕದಲ್ಲೇ ಸ್ಥಾನ ಕಲ್ಪಿಸಲಾಗಿದೆ.

    ಈ ಕುರಿತು ಮ್ಯೂಸಿಯಂ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಕೊಹ್ಲಿ ಅವರ ಜೆರ್ಸಿಗೆ ವಿಶೇಷ ಸ್ಥಳ ನೀಡಲಾಗಿದೆ. ಸಚಿನ್ ಅವರ ಭಾವಚಿತ್ರದ ಪಕ್ಕವೇ ಸ್ಥಳ ನಿಗದಿ ಮಾಡಲಾಗಿದೆ. ಮ್ಯೂಸಿಯಂ ಪ್ರವೇಶ ಮಾಡುತ್ತಿದಂತೆ ಇಬ್ಬರು ಆಟಗಾರರು ಪ್ರೇರಣೆ ನೀಡುತ್ತಾರೆ. ಭಾರತದ ಕ್ರಿಕೆಟ್ ಆಧಾರಗಳಂತೆ ಕಾಣುತ್ತಾರೆ ಎಂದು ತಿಳಿಸಿದೆ.

    2014-15 ರಲ್ಲಿ ಆಸೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ವೇಳೆ ಅವರು ಧರಿಸಿದ್ದ ಟೀ ಶರ್ಟ್ ಇದಾಗಿದ್ದು, ಸದ್ಯ ಸಚಿನ್ ಅವರ ಪಕ್ಕದಲ್ಲೇ ಕೊಹ್ಲಿ ಅವರಿಗೂ ಸ್ಥಾನ ನೀಡಲಾಗಿದೆ. ಈ ಮ್ಯೂಸಿಯಂನಲ್ಲಿ ಖ್ಯಾತ ಕ್ರಿಕೆಟಿಗರ ವಸ್ತುಗಳನ್ನು ಮಾತ್ರ ಇಡಲಾಗಿದ್ದು, ಭಾರತದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಅವರ ಸಾಧನೆಯ ನೆನಪುಗಳ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮ್ಯೂಸಿಯಂ ಪ್ರವೇಶದ್ವಾರದಲ್ಲಯೇ ಸಚಿನ್ ಅವರ ಭಾವಚಿತ್ರ ಇಡಲಾಗಿದ್ದು, ಸದ್ಯ ಅವರ ಬಳಿ ಕೊಹ್ಲಿ ಜರ್ಸಿ ಇರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv