Tag: br patel

  • ಸರ್ಕಾರಕ್ಕೆ ಮುಜುಗರವಾದ ಬೆನ್ನಲ್ಲೇ ಬಿಆರ್‌ ಪಾಟೀಲ್‌ಗೆ ಸಿಎಂ ಬುಲಾವ್‌

    ಸರ್ಕಾರಕ್ಕೆ ಮುಜುಗರವಾದ ಬೆನ್ನಲ್ಲೇ ಬಿಆರ್‌ ಪಾಟೀಲ್‌ಗೆ ಸಿಎಂ ಬುಲಾವ್‌

    ಕಲಬುರಗಿ: ವಸತಿ ಇಲಾಖೆಯಲ್ಲಿನ ಲಂಚದ (Housing Department Corruption) ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಈಗ ಶಾಸಕ ಬಿಆರ್ ಪಾಟೀಲ್ (BR Patel) ಅವರಿಗೆ ಬುಲಾವ್‌ ನೀಡಿದ್ದಾರೆ.

    ಪಕ್ಷಕ್ಕೆ ಮುಜುಗರವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬಿ.ಆರ್.ಪಾಟೀಲ್‌ಗೆ ಖುದ್ದು ಫೋನ್ ಮಾಡಿ ಜೂ.25ರ ಸಂಜೆ ಬೆಂಗಳೂರಿನಲ್ಲಿ (Bengaluru) ಭೇಟಿಯಾಗುವಂತೆ ಸೂಚಿಸಿದ್ದಾರೆ.
    ಇದನ್ನೂ ಓದಿ: ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅಕ್ರಮ – ಶಾಸಕ ಬಿಆರ್ ಪಾಟೀಲ್ ಮತ್ತೊಂದು ಬಾಂಬ್

     

    ಕಳೆದ ವರ್ಷ ವಾಲ್ಮೀಕಿ (Valmiki Scam) ನಿಗಮದ ಹಗರಣ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಮುಜುಗರ ಕೂಡ ಉಂಟು ಮಾಡಿತ್ತು. ಈಗ ಬಿ.ಆರ್.ಪಾಟೀಲ್, ತಮ್ಮ ಸರ್ಕಾರದಲ್ಲಿನ ಭ್ರಷ್ಟಾಚಾರ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡಿ ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇದನ್ನೂ ಓದಿ: ಲೇಡಿ ಕಿಲ್ಲರ್‌ನಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    ವಸತಿ ಇಲಾಖೆ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದ ಬಿ.ಆರ್ ಪಾಟೀಲ್ ಇದೀಗ ಮೈನಾರಿಟಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನ ಬಿಚ್ಚಿಟ್ಟಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಇನ್ನಿಲ್ಲ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಸಿದೆ.

  • ಸಿಎಂ ಸಂಧಾನ ಯಶಸ್ವಿ – ಅಧಿವೇಶನಕ್ಕೆ ಹೋಗ್ತೀನಿ, ಗ್ಯಾರಂಟಿಯಿಂದ ಅನುದಾನ ಸಿಗುತ್ತಿಲ್ಲ ಎಂದ ಬಿಆರ್‌ ಪಾಟೀಲ್‌

    ಸಿಎಂ ಸಂಧಾನ ಯಶಸ್ವಿ – ಅಧಿವೇಶನಕ್ಕೆ ಹೋಗ್ತೀನಿ, ಗ್ಯಾರಂಟಿಯಿಂದ ಅನುದಾನ ಸಿಗುತ್ತಿಲ್ಲ ಎಂದ ಬಿಆರ್‌ ಪಾಟೀಲ್‌

    ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆಳಂದ ಶಾಸಕ ಬಿಆರ್‌ ಪಾಟೀಲ್‌ (BR Patel) ಅವರ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಸಭೆ ನಡೆಸಿ ಸಿಟ್ಟನ್ನು ಶಮನ ಮಾಡಿದ್ದಾರೆ.

    ರೇಸ್ ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಬಿಆರ್‌ ಪಾಟೀಲ್‌ ಜೊತೆ ಸಿಎಂ ಸಭೆ ನಡೆಸಿ ಮಾತುಕತೆ ನಡೆಸಿದರು. ಈ ಮಾತುಕತೆಯ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್ ಹಾಗು ನಜೀರ್ ಅಹ್ಮದ್ ಸಾಥ್ ನೀಡಿದ್ದರು.  ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ – ಸಿಎಂಗೆ ಪತ್ರ ಬರೆದ ಬಿಆರ್‌ ಪಾಟೀಲ್‌

     

    ಸಭೆಯ ಬಳಿಕ ಮಾತನಾಡಿದ ಬಿಆರ್‌ ಪಾಟೀಲ್‌, ಸಿಎಂ ಕರೆ ಮಾಡಿ ಬರಲು ಹೇಳಿದ್ದರು. ಮುಕ್ಕಾಲು ಗಂಟೆ ಮಾತನಾಡಿ ಎಲ್ಲಾ ಸಮಸ್ಯೆ ಬಗೆಹರಿಸಿದ್ದಾರೆ. ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಡಿಕೆಗೆ ತಾತ್ಕಾಲಿಕ ರಿಲೀಫ್‌ – ಸರ್ಕಾರ, ಸಿಬಿಐ ವಾದ ಏನಿತ್ತು? ಹೈಕೋರ್ಟ್‌ ಹೇಳಿದ್ದು ಏನು? ಡಿಕೆ ಕೇಸ್‌ ಮುಂದೇನು? – ಕೋರ್ಟ್‌ ಕಲಾಪದ ಪೂರ್ಣ ವರದಿ ಓದಿ

    ಅನುದಾನ ವಿಚಾರವಾಗಿ ನನಗೆ ಅಸಮಾಧಾನ ಇಲ್ಲ. ಗ್ಯಾರಂಟಿ (Congress Guarantee) ಕೊಟ್ಟ ಕಾರಣ ಅನುದಾನ ಸಿಗುತ್ತಿಲ್ಲ ಎನ್ನುವುದು ನನಗೂ ಗೊತ್ತಿದೆ. ಪಂಚ ರಾಜ್ಯಗಳ ಚುನಾವಣೆ ಇದ್ದ ಕಾರಣ ಸುಮ್ಮನಿದ್ದೆ. ಈಗ ಈ ವಿಚಾರ ಎತ್ತಿದ್ದೇನೆ ಎಂದು ತಿಳಿಸಿದರು.

    ನೀವ್ಯಾಕೆ ಆ ಜಾಗವನ್ನು ಕೆಆರ್‌ಐಡಿಎಲ್‌ ಕೊಟ್ಟಿದ್ದು ಅಂತ ಕೃಷ್ಣಬೈರೇಗೌಡರು ನನಗೆ ಒಬ್ಬರಿಗೆ ಅಷ್ಟೇ ಅಲ್ಲ ಎಲ್ಲಾ ಶಾಸಕರಿಗೆ ಸವಾಲು ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ಜೊತೆ ಯಾವುದೇ ಮನಸ್ತಾಪ ಇಲ್ಲ. ತಂದೆಗೆ ಕೊಟ್ಟ ಗೌರವ ಪ್ರಿಯಾಂಕ್ ನನಗೆ ಕೊಡುತ್ತಾರೆ. ಕೃಷ್ಣ ಬೈರೇಗೌಡ ಜೊತೆಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ – ಸಿಎಂಗೆ ಪತ್ರ ಬರೆದ ಬಿಆರ್‌ ಪಾಟೀಲ್‌

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ – ಸಿಎಂಗೆ ಪತ್ರ ಬರೆದ ಬಿಆರ್‌ ಪಾಟೀಲ್‌

    ಬೆಂಗಳೂರು/ಕಲಬುರಗಿ: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಎಲ್ಲವೂ ಸರಿಯಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಪೂರಕವಾಗಿ ಹಿರಿಯ ನಾಯಕ ಆಳಂದ ಕ್ಷೇತ್ರದ ಶಾಸಕ ಬಿಆರ್ ಪಾಟೀಲ್ (BR Patel) ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರ ಬರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ (Resignation) ನೀಡುವ ಸುಳಿವು ನೀಡಿದ್ದಾರೆ.

    ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಪತ್ರ ಬರೆದಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

    ಪತ್ರದಲ್ಲಿ ಏನಿದೆ?
    2013ರಲ್ಲಿ ಕಾಮಗಾರಿಗಳನ್ನು ನಾನು ಕೆಆರ್‌ಐಡಿಎಲ್‌ಗೆ (KRIDL)ನೀಡಿದ್ದೆ. ಆದರೆ ಕಾರಣಾಂತರಗಳಿಂದ ಅವು ಪೂರ್ಣವಾಗಿಲ್ಲ. ಈ ಬಗ್ಗೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದಾಗ ನನ್ನನ್ನೇ ಅನುಮಾನದಿಂದ ನೋಡಲಾಯಿತು. ಸಚಿವ ಪ್ರಿಯಾಂಕ್ ಖರ್ಗೆ ಅನುಪಸ್ಥಿತಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಮಾತನಾಡಿದರು. ಇದನ್ನೂ ಓದಿ: 3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲಾ: ಸಿ.ಟಿ ರವಿ

    ಕೆಆರ್‌ಐಡಿಎಲ್ ಕಡೆಯಿಂದ ನಾನು ಹಣ ಪಡೆದು ಭೂಸೇನೆಗೆ ಕಾಮಗಾರಿ ಕೊಟ್ಟಿದ್ದೇನೆ ಎನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟರು. ಅದಾದ ಮೇಲೂ ಪ್ರಿಯಾಂಕ್ ಖರ್ಗೆ ಕಾಮಗಾರಿಗಳ ಕುರಿತು ಸಭೆ ನಡೆಸಲಿಲ್ಲ. ಇಂಥ ಆರೋಪ ಹೊತ್ತು ನಾನು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ನಾನು ಆರೋಪ ಒಪ್ಪಿಕೊಂಡಂತೆ ಆಗುತ್ತದೆ. ಹೀಗಾಗಿ ನನ್ನ ಮೇಲೆ ಬಂದ ಆರೋಪದ ಬಗ್ಗೆ ತನಿಖೆ ನಡೆಸಿ. ಸತ್ಯಾಸತ್ಯತೆ ಹೊರ ಬರಲು ತನಿಖೆಗೆ ಆದೇಶ ನೀಡಿ. ಆರೋಪ ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಬಿಆರ್ ಪಾಟೀಲ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

    ಇಂತಹ ಯಾವ ಪತ್ರವೂ ನನಗೆ ಬಂದಿಲ್ಲ. ಬಂದಿದ್ದರೆ ನೋಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ. ಆದರೆ ಇದು ನಕಲಿ ಪತ್ರವಲ್ಲ, ಅಸಲಿ ಪತ್ರ ಎಂದು ಹೇಳಲಾಗುತ್ತಿದೆ.

     

  • 2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

    2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

    ಕಲಬುರಗಿ: ಕಲಬುರಗಿ (kalaburagi) ಜಿಲ್ಲೆಯ 9 ವಿಧಾನಸಭೆ ಮತಕ್ಷೇತ್ರಗಳಿದ್ದು ಅದರಲ್ಲಿ ಆಳಂದ ವಿಧಾನಸಭಾ ಕ್ಷೇತ್ರ ಮಾತ್ರ ಬಹಳ ವಿಶೇಷವಾಗಿ ಗುರುತಿಸಲ್ಪುಡುತ್ತಿದೆ. ಕಳೆದ ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಸತತ ಎರಡು ಬಾರಿ ಯಾವೊಬ್ಬ ವ್ಯಕ್ತಿಯೂ ಆಯ್ಕೆಯಾಗಿಲ್ಲ.

    ಈ ಕ್ಷೇತ್ರದಲ್ಲಿ 1999ರಿಂದ ಇಲ್ಲಿಯವರೆಗೆ ಸುಭಾಶ್ ಗುತ್ತೇದಾರ್ ಹಾಗೂ ಬಿ.ಆರ್.ಪಾಟೀಲ್ ಇಬ್ಬರ ನಡುವೆ ನೇರಾ ನೇರ ಹಣಾಹಣಿಯಿದ್ದು ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮಹತ್ವ ಜಾಸ್ತಿಯಾಗಿದೆ. ಹೀಗಾಗಿ ಈ ಇಬ್ಬರು ನಾಯಕರು ಯಾವ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಆ ಎರಡು ಪಕ್ಷಗಳ‌ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.

    1999 ರಲ್ಲಿ ಜನತಾದಳ(ಎಸ್) (Janata Dal) ಸುಭಾಶ್ ಗುತ್ತೇದಾರ್‌ (Subhash Guttedar) ಸ್ಪರ್ಧಿಸಿದರೆ ಇತ್ತ ಲೋಕಶಕ್ತಿಯಿಂದ ಬಿ.ಆರ್.ಪಾಟೀಲ್ (B.R Patel) ಸ್ಪರ್ಧಿಸಿದ್ದರು. ಆಗ 2 ಸಾವಿರ ಮತಗಳ ಆಸುಪಾಸಿನಲ್ಲಿ ಸುಭಾಶ್ ಗುತ್ತೇದಾರ್‌ ಜಯಗಳಿಸಿದ್ದರು. ನಂತರ 2004ರಲ್ಲಿ ಬಿ.ಆರ್.ಪಾಟಿಲ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದರೆ ಸುಭಾಶ್ ಗುತ್ತೇದಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.‌ ಆಗ ಕೈ ಅಭ್ಯರ್ಥಿ ವಿರುದ್ಧ 17 ಸಾವಿರ ಮತಗಳ ಅಂತರದಿಂದ ಬಿ.ಆರ್.ಪಾಟೀಲ್ ಜಯಗಳಿಸಿದ್ದರು. ಇದನ್ನೂ ಓದಿ: ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

    2008ರಲ್ಲಿ ಜೆಡಿಎಸ್ ನಿಂದ ಸುಭಾಶ್ ಗುತ್ತೇದಾರ್ ಸ್ಪರ್ಧೆ ಮಾಡಿದರೆ ಬಿ.ಆರ್.ಪಾಟೀಲ್‌ ಕಾಂಗ್ರೆಸ್ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಬಿ.ಆರ್.ಪಾಟೀಲ್ ವಿರುದ್ಧ ಸುಭಾಶ್ ಗುತ್ತೇದಾರ್‌ ಅವರು 4 ಸಾವಿರ ಮತಗಳಿಂದ ಜಯಗಳಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಕೆಜೆಪಿಯಿಂದ ಬಿ.ಆರ್.ಪಾಟೀಲ್ ಸ್ಪರ್ಧಿಸಿದರೆ ಜೆಡಿಎಸ್ ನಿಂದ ಸುಭಾಶ್ ಗುತ್ತೇದಾರ್‌ ಸ್ಪರ್ಧೆ ಮಾಡಿದ್ದರು. ಆಗ ಗುತ್ತೇದಾರ್‌ ವಿರುದ್ಧ ಬಿ.ಆರ್.ಪಾಟೀಲ್ ಅವರು 17 ಸಾವಿರ ಮತಗಳ‌ ಅಂತರದಿಂದ ಜಯಗಳಿಸಿದ್ದರು.

    2018ರಲ್ಲಿ ಕಾಂಗ್ರೆಸ್‌ನಿಂದ (Congress) ಬಿ.ಆರ್.ಪಾಟೀಲ್ ಹಾಗೂ ಬಿಜೆಪಿಯಿಂದ (BJP) ಸುಭಾಶ್ ಗುತ್ತೇದಾರ್ ಇಬ್ಬರು ಮತ್ತೆ ಸ್ಪರ್ಧಿಸಿದ್ದಾಗ ಕೇವಲ 697 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುಭಾಶ್ ಗುತ್ತೇದಾರ್‌ ಜಯಗಳಿಸಿದ್ದರು.

    ಈ ಮೂಲಕ ಕಳೆದ ಎರಡು ದಶಕಗಳಿಂದ ಈ ಇಬ್ಬರು ರಾಜಕೀಯ ಬದ್ದ ವೈರಿಗಳ ಹೋರಾಟದಲ್ಲಿ ಮತದಾರ ಪ್ರಭು ಮಾತ್ರ ಸತತ ಎರಡನೇ ಬಾರಿಗೆ ಗೆಲ್ಲಿಸಿರುವ ಉದಾಹರಣೆಯೆ ಇಲ್ಲ. ಹೀಗಾಗಿ 2023ರಲ್ಲಿ ಇದೇ ಇತಿಹಾಸ ಮುಂದುವರಿಯುತ್ತಾ? ಅಥವಾ ಇದಕ್ಕೆ ಸುಭಾಶ್ ಗುತ್ತೇದಾರ ಬ್ರೇಕ್ ಹಾಕಿ ಎರಡನೇ ಬಾರಿ ಜಯಗಳಿಸುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಭಾರತದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲಾರೆ: ವರುಣ್ ಗಾಂಧಿ

  • ಶಾಸಕ ಬಿಆರ್ ಪಾಟೀಲ್ ಉದ್ಧಟತನ: ಎಂಎಲ್‍ಎ ಸಾಹೇಬ್ರೆ ಇದೇನಾ ನಿಮ್ಮ ಸಂಸ್ಕಾರ?

    ಶಾಸಕ ಬಿಆರ್ ಪಾಟೀಲ್ ಉದ್ಧಟತನ: ಎಂಎಲ್‍ಎ ಸಾಹೇಬ್ರೆ ಇದೇನಾ ನಿಮ್ಮ ಸಂಸ್ಕಾರ?

    ಕಲಬುರಗಿ: ಜನಪ್ರತಿನಿಧಿಗಳಾಗಿದ್ದವರು ನಾವೇನ್ ಮಾಡ್ತಿದ್ದೇವೆ ಅನ್ನೋದನ್ನೇ ಮರೆತು ಬಿಡ್ತಾರೆ. ಅಧಿಕಾರದ ಮದ ಅವರ ಬಾಯಿಂದ ಏನ್ ಬೇಕಾದ್ರೂ ಮಾತಾಡಿಸಿ ಬಿಡುತ್ತೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

    ತಮ್ಮ ಮಾಜಿ ಆಪ್ತ ಸಹಾಯಕ ದೇವೇಂದ್ರ ಬಿರಾದಾರ್ ಕಾಮದಾಟದ ವರದಿ ಪ್ರಸಾರ ಮಾಡಿದ್ದಕ್ಕೆ ಆಳಂದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಕೆಂಡದಂತಾ ಕೋಪ ಮಾಡಿಕೊಂಡು ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ರೆಡ್ಡಿಗೆ ಕರೆ ಮಾಡಿ ಸಿಕ್ಕಾಪಟ್ಟೆ ರೇಗಾಡಿದ್ದಾರೆ.

    ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ನಿಂದಿಸಿದ್ರು. ನಿಮ್ಮ ಟಿವಿಯಲ್ಲಿ ಏನ್ ಸುದ್ದಿ ಹಾಕಿದ್ದೀರಾ. ನಿಮ್ಮ ಆಫೀಸಿಗೆ ಬರ್ತೀನಿ ಇರಿ ಅಂತಾ ಬೆದರಿಸಿದ್ರು. ಶಾಸಕರ ಈ ಧಮ್ಕಿ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ಸುದ್ದಿ ಪ್ರಸಾರ ಮಾಡಿತ್ತು. ನಂತರ ಫೋನ್‍ಗೆ ಬಂದ ಸನ್ಮಾನ್ಯ ಪಾಟೀಲ್ರು ಸಂಜೆ 6 ಗಂಟೆಗೆ ನಾನೇ ಕಲಬುರಗಿಯ ನಿಮ್ಮ ಕಚೇರಿಗೆ ಬರ್ತೇನೆ ಅಂದ್ರು.

    ಕೊನೆಗೆ 1 ಗಂಟೆ ತಡವಾಗಿ ಕಚೇರಿಗೆ ಬಂದ ಶಾಸಕರು ಯಥಾ ಪ್ರಕಾರ ತಮ್ಮ ನಿಂದನಾತ್ಮಕ ಹೇಳಿಕೆಯನ್ನ ಸಮರ್ಥಿಸಿಕೊಂಡ್ರು. ನಾನು ಮನುಷ್ಯ ನಾನು ಉಪ್ಪು ತಿನ್ತೇನೆ. ನನ್ನ ಮಾನನಷ್ಟ ಮಾಡಿ ಟಿಆರ್‍ಪಿಗಾಗಿ ಹೀಗೆಲ್ಲಾ ಮಾಡ್ತೀರಾ ಅಂತ ಹೇಳಿ 10 ನಿಮಿಷವೂ ನಿಲ್ಲದೆ ಅಲ್ಲಿಂದ ನಡೆದೇ ಬಿಟ್ಟರು.

    ಆದ್ರೆ, ನಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಹಾಗಾಗಿ, ನಮ್ಮ ಪ್ರತಿನಿಧಿ ಅವರ ಬೆನ್ನತ್ತಿ ಹೋದರೂ ಸಹ ಪಾಟೀಲರು ಕ್ಷಮೆಯನ್ನೂ ಕೇಳಲಿಲ್ಲ. ಬದಲಿಗೆ ತಮ್ಮ ನಿಲುವಿಗೆ ಅಂಟಿಕೊಂಡ್ರು.

    ನಮ್ಮ ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ಜೊತೆ ಫೋನಿನಲ್ಲಿ ಮಾತನಾಡುವಾಗ,”ನಾನೇನು ನಿಮ್ಮ ಹೆಂಡ್ತಿ ಹಾಗೂ ಅವರ ಹೆಂಡ್ತಿಯನ್ನು ಗುತ್ತಿಗೆ ತೊಗೊಂಡಿದ್ದೀನಾ? ಬೆಳಗ್ಗೆ ಏನು ನ್ಯೂಸ್ ಮಾಡಿದಿಯಾ? ಒಂದು ಗಂಟೆಯಲ್ಲಿ ನಾನು ಆಫೀಸಿಗೆ ಬರ್ತಿನಿ. ನೀನಿರಬೇಕು ಬಂದು ನೋಡ್ತಿನಿ” ಎಂದು ಅವಾಜ್ ಹಾಕಿದ್ದರು.

    ಈ ವೇಳೆ ನಮ್ಮ ಪ್ರತಿನಿಧಿ ನನ್ನ ಹತ್ತಿರ ನೀವು ಶಿಫಾರಸ್ಸು ಮಾಡಿರುವ ಲೆಟರ್ ಇದೆ. ಬೇಕಾದರೆ ನಾನು ನಿಮಗೆ ಬೇಕಾದ್ರೆ ವಾಟ್ಸಪ್ ಮಾಡುತ್ತೇನೆ ಎಂದು ಹೇಳಿದ್ದಕೆ ಅವಾಚ್ಯ ಶಬ್ಧಗಳಿಂದ ಮಾತನಾಡುವ ಮೂಲಕ ತಮ್ಮ ನೈತಿಕ ಮಟ್ಟವನ್ನು ರಾಜ್ಯದ ಜನತೆಗೆ ತೋರಿಸಿದ್ದಾರೆ.

    ನಮ್ಮ ಕಚೇರಿಗೆ ಬಂದ ಶಾಸಕ ಬಿ.ಆರ್.ಪಾಟೀಲ್ ಏನು ಸಮರ್ಥನೆ ನೀಡಿದ್ರು? ಅದಕ್ಕೂ ಮೊದಲು ವರದಿಗಾರನಿಗೆ ಹೇಗೆ ಬೆದರಿಕೆ ಹಾಕಿದ್ರು ಎನ್ನುವುದಕ್ಕೆ ಇಲ್ಲಿ ವಿಡಿಯೋವನ್ನು ನೀಡಲಾಗಿದ್ದು, ನೀವು ವೀಕ್ಷಿಸಬಹುದು.

    ಇದನ್ನೂ ಓದಿ:  ಕಲಬುರಗಿ: ಕಾಮದಾಟಕ್ಕೆ ಪ್ರಿಯಕರನನ್ನ ಶಾಲೆಗೆ ಕರೆಸಿದ ಶಿಕ್ಷಕಿ!