Tag: BPL

  • ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ

    ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ

    ಬೆಂಗಳೂರು: ಎಪಿಎಲ್‌ಗೆ (APL) ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌ (BPL Card) ಭಾಗ್ಯ ಸಿಗಲಿದೆ. ಹೌದು, ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆ ಮಧ್ಯೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಅರ್ಹತೆ ಇದ್ರೂ ಎಪಿಎಲ್‌ಗೆ ಬದಲಾಗಿ ವಂಚಿತರಾದವರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ‌.

    45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರ ಆಹಾರ ಇಲಾಖೆಗೆ ಗಡುವು ಕೊಟ್ಟಿದೆ. ಎಪಿಎಲ್‌ಗೆ ಬದಲಾದವರು ಪೂರಕ ದಾಖಲೆ ಇದ್ದರೆ ಮತ್ತೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಒಂದು ಕಡೆ ಅನರ್ಹ ಬಿಪಿಎಲ್‌ ಕಾರ್ಡ್‌ದಾರರನ್ನು ಪತ್ತೆ ಮಾಡಿ ಎಪಿಎಲ್‌ ಕಾರ್ಡ್‌ ನೀಡಲು ಆಹಾರ ಇಲಾಖೆ ಮುಂದಾಗಿದೆ. ಇನ್ನೊಂದು ಕಡೆ ಅರ್ಹ ಬಿಪಿಎಲ್‌ ಕಾರ್ಡ್‌ದಾರರು ಎಪಿಎಲ್‌ಗೆ ಬದಲಾಗಿದ್ರೆ ಅಂಥವರಿಗೆ ನ್ಯಾಯ ಕೊಡಲು ಮುಂದಾಗಿದೆ. ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ – ಪರಿಶೀಲಿಸಿ ಕ್ರಮಕ್ಕೆ ಸೂಚನೆ: ಪರಮೇಶ್ವರ್

    7,76,206 ಪಡಿತರ ಚೀಟಿಗಳು ರಾಜ್ಯದಲ್ಲಿ ಅನರ್ಹವೆಂದು ಕೇಂದ್ರ ಸರ್ಕಾರ ಗುರುತು ಮಾಡಿದೆ. ಆದರೆ, ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳಿವೆ. ಇಂತಹ ಅನರ್ಹ ಚೀಟಿಗಳನ್ನು ಬಿಪಿಎಲ್‌ ಬದಲಿಗೆ ಎಪಿಎಲ್‌ ಆಗಿ ಪರಿವರ್ತಿಸುವ ಕೆಲಸ ನಡೀತಿದೆ.‌‌ ಇದರ ಮಧ್ಯೆ ಒಂದು ವೇಳೆ ಅರ್ಹರ ಕಾರ್ಡ್‌ ಎಪಿಎಲ್‌ಗೆ ಬದಲಾಗಿದ್ದಲ್ಲಿ ಅಂಥವರಿಗೆ ಬ್ಯಾಕ್ ಟು ಬಿಪಿಎಲ್‌ ಭಾಗ್ಯವೂ ಸಿಗಲಿದೆ. ಇದಕ್ಕಾಗಿ 45 ದಿನದೊಳಗೆ ಅಗತ್ಯ ದಾಖಲೆ ಸಹಿತ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಿ ಅರ್ಹರಿದ್ದಲ್ಲಿ ಅಂಥವರಿಗೆ ಬಿಪಿಎಲ್‌ ಕಾರ್ಡ್‌ ನೀಡಲು ಸರ್ಕಾರ ಸೂಚನೆ ಕೊಟ್ಟಿದೆ.

    ಇದೇ ವೇಳೆ ಬಿಎಪಿಎಲ್‌ಗೆ ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವವರಿಗೂ ಗುಡ್ ನ್ಯೂಸ್ ಇದೆ. ಹೊಸದಾಗಿ ಪಡಿತರ ಚೀಟಿಗೆ ಈಗಾಗಲೇ 2.96 ಲಕ್ಷ ಅರ್ಜಿ ಸಲ್ಲಿಕೆ ಆಗಿವೆ. ಈ ಅರ್ಜಿಗಳ ವಿಲೇವಾರಿ ಮಾಡುವವರೆಗೆ ಬಿಪಿಎಲ್‌ಗೆ ಹೊಸದಾಗಿ ಅರ್ಜಿ ಆಹ್ವಾನಿಸಬಾರದು ಎಂದು ಸರ್ಕಾರ ನಿರ್ದೇಶಿಸಿದೆ. ಸದ್ಯದಲ್ಲೇ ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆಗೂ ಕ್ರಮದ ಭರವಸೆ ಕೊಡಲಾಗಿದೆ. ಇದನ್ನೂ ಓದಿ: ನನ್ನ ಮರ್ಯಾದೆ ಉಳಿಸಿಕೊಳ್ಳಲು ಕೆಲವು ಬೆದರಿಕೆ ಕರೆ ವಿಡಿಯೋ ರಿಲೀಸ್ ಮಾಡಿಲ್ಲ: ಪ್ರಿಯಾಂಕ್ ಖರ್ಗೆ

    ಎಪಿಎಲ್‌ಗೆ ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌ ಭಾಗ್ಯ!
    * ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
    * ಬಿಪಿಎಲ್ ಕಾರ್ಡ್ ವಂಚಿತ ಅರ್ಹರಿಗೆ ಗುಡ್ ನ್ಯೂಸ್!
    * 45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್!
    * ಎಪಿಎಲ್‌ಗೆ ಬದಲಾದವರಿಗೆ ಪೂರಕ ದಾಖಲೆ ಇದ್ದರೆ ಮತ್ತೆ ಬಿಪಿಎಲ್ ಕಾರ್ಡ್
    * ಕೇಂದ್ರದ ಪ್ರಕಾರ ರಾಜ್ಯದಲ್ಲಿ 7,76,206 ಪಡಿತರ ಚೀಟಿಗಳಿವೆ
    * ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳು
    * 45 ದಿನದೊಳಗೆ ಅಗತ್ಯ ದಾಖಲೆ ಸಹಿತ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು
    * ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆ ಪರಿಶೀಲಿಸಿ ಅರ್ಹರಿದ್ದಲ್ಲಿ ಬಿಪಿಎಲ್‌ ಕಾರ್ಡ್
    * ಹೊಸದಾಗಿ ಪಡಿತರ ಚೀಟಿಗೆ ಸಲ್ಲುಸಿರೋ 2.96 ಲಕ್ಷ ಅರ್ಜಿಗಳ ವಿಲೇವಾರಿಗೂ ಕ್ರಮ
    * ಹಳೆಯ ಅರ್ಜಿಗಳ ವಿಲೇವಾರಿವರೆಗೂ ಬಿಪಿಎಲ್‌ಗೆ ಹೊಸಗಿ ಅರ್ಜಿ ಆಹ್ವಾನವಿಲ್ಲ

  • ಬಿಪಿಎಲ್‌ ಕಾರ್ಡ್‌ದಾರರಿಗೆ ದಸರಾ ಶಾಕ್‌ – ನ್ಯಾಯಬೆಲೆ ಅಂಗಡಿಯ ಮುಂದೆ ಕಾರ್ಡ್ ಡಿಲೀಟ್‌ ನೋಟಿಸ್‌!

    ಬಿಪಿಎಲ್‌ ಕಾರ್ಡ್‌ದಾರರಿಗೆ ದಸರಾ ಶಾಕ್‌ – ನ್ಯಾಯಬೆಲೆ ಅಂಗಡಿಯ ಮುಂದೆ ಕಾರ್ಡ್ ಡಿಲೀಟ್‌ ನೋಟಿಸ್‌!

    ಬೆಂಗಳೂರು: ಬಿಪಿಎಲ್‌ ಕಾರ್ಡ್‌ದಾರರಿಗೆ(BPL Card) ಸರ್ಕಾರ ದಸರಾ ಶಾಕ್ ನೀಡಿದೆ. ಉಚಿತವಾಗಿ ಪಡೆಯುತ್ತಿರುವ ಅನ್ನಭಾಗ್ಯ (Annabhagya) ಪಡಿತರ ಪಡಿತರ‌ ಕಾರ್ಡ್ ಪರಿಷ್ಕರಣೆ ಮಾಡಿದೆ.

    ನೆಲಮಂಗಲ (Nelamangala) ತಾಲೂಕಿನಲ್ಲಿ ಸುಮಾರು 4000 ಕ್ಕೂ ಹೆಚ್ಚು ಜನರಿಗೆ ಪಡಿತರ ಕಾರ್ಡ್ ಡಿಲೀಟ್‌ ಮಾಡಲು ಮುಂದಾಗಿದೆ. ಡಿಲೀಟ್‌ ಮಾಡಿದ್ದು ಮಾತ್ರವಲ್ಲದೇ ನ್ಯಾಯಬೆಲೆ ಅಂಗಡಿಯಲ್ಲಿ ಡಿಲೀಟ್‌ ಮಾಡಲಾದ ವ್ಯಕ್ತಿಗಳ ಹೆಸರಿನಲ್ಲಿರುವ ಕಾರ್ಡ್‌ ವಿವರಗಳನ್ನು ನೋಟಿಸ್‌ ಬೋರ್ಡ್‌ನಲ್ಲಿ ಅಂಟಿಸಲಾಗಿದೆ.

    ನೋಟಿಸ್‌ ಬೋರ್ಡ್‌ನಲ್ಲಿ ಕೃಷಿ ಇತ್ಯಾದಿ ಆದಾಯಗಳಿಂದಾಗಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದೆ. ಹೀಗಾಗಿ ನಿಮ್ಮ ಪಡಿತರವನ್ನು ರದ್ದುಗೊಳಿಸಲು ಮುಂದಾಗಿದ್ದೇವೆ. ಈ ಬಾರಿ ಕೊನೆಯ ಬಾರಿಗೆ ಪಡಿತರ ನೀಡಲಾಗುತ್ತದೆ. ಮುಂದಿನ ತಿಂಗಳಿನಿಂದ ಪಡಿತರ ನೀಡಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

    ಪರಿಷ್ಕರಣೆಗೆ ಮುಂದಾಗಿದ್ದು ಯಾಕೆ?
    ರಾಜ್ಯದಲ್ಲಿ ಬಡವರಿಗಿಂತಲೂ ಬಡತನ ರೇಖೆಗಿಂತ ಮೇಲಿದ್ದವರಿಗೆ ಹೆಚ್ಚಿನ ಪ್ರಮಾಣದ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ಅದರಲ್ಲೂ ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆ ಆಗಿತ್ತು. ಜಿಲ್ಲಾವಾರು ಬಡವರ ಸಂಖ್ಯೆಗಿಂತಲೂ ಹತ್ತಾರು ಪಟ್ಟು ಹೆಚ್ಚು ಕಾರ್ಡ್‌ಗಳ ಹಂಚಿಕೆ ಆಗಿದ್ದವು. ಹೀಗಾಗಿ ಗ್ಯಾರಂಟಿ ಜಾರಿ ಮಾಡಿ ಕಂಗೆಟ್ಟಿದ್ದ ಸರ್ಕಾರ ಬಿಪಿಎಲ್‌ ಕಾರ್ಡ್‌ ಪರಿಷ್ಕರಣೆಗೆ ಮುಂದಾಗಿತ್ತು.

    – ಸಾಂದರ್ಭಿಕ ಚಿತ್ರ

    ಯಾವ ಜಿಲ್ಲೆಗಳಲ್ಲಿ ಬಡತನ ಪ್ರಮಾಣ ಶೇ.1 ರಿಂದ 5 ಇದೆಯೋ ಅಲ್ಲೇ 80% ಗಿಂತಲೂ ಅಧಿಕ ಬಿಪಿಎಲ್ ಕಾರ್ಡ್ ಹಂಚಿಕೆ ಆಗಿದ್ದವು. ಅನರ್ಹರ ಬಳಿ ಬಿಪಿಎಲ್ ಕಾರ್ಡ್‌ಗಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ಹೊಡೆತ ಬಿದ್ದಿತ್ತು. ಹೀಗಾಗಿ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಅಭಿಯಾನಕ್ಕೆ ನಿರ್ಧಾರ ಕೈಗೊಂಡಿತ್ತು. ಗ್ಯಾರಂಟಿಗಳ ಪರಿಶೀಲನೆ ನೆಪದಲ್ಲಿ ಪಂಚಾಯಿತಿ ಮಟ್ಟದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನ ನಡೆಸಿತ್ತು.  ಇದನ್ನೂ ಓದಿ: ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ ಗೋಲ್ಮಾಲ್‌ ರೈತರಿಗೆ ಸೇರಬೇಕಿದ್ದ 3.85 ಕೋಟಿ ಮೌಲ್ಯದ ವಿದ್ಯುತ್ ಪರಿಕರಗಳು ಭ್ರಷ್ಟರ ಪಾಲು!

    ಬಿಪಿಎಲ್‌ ಆಪರೇಷನ್‌:
    ಬಿಪಿಎಲ್ ಕಾರ್ಡಿಗೆ (BPL Card) ಕೆಲವೊಂದು ಷರತ್ತು ಹಾಕುವ ಮೂಲಕ ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್‌ ಮಾಡಿಕೊಂಡಿದೆ. ಆಪರೇಷನ್ ಬಿಪಿಎಲ್ ಕಾರ್ಡ್‌ಗೆ (Operation BPL Card) ಸಿಎಂ ಸಿದ್ದರಾಮಯ್ಯ ಸೂಚಿಸಿದ ಬೆನ್ನಲ್ಲೇ ಇಲಾಖೆಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು.

    ಅಕ್ರಮ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಾಲ್ಕು ಬೇರೆ ಇಲಾಖೆಗಳ ಸಹಕಾರ ಪಡೆಯಲಿದೆ ಎಂದು ಹಿಂದೆ ಪಬ್ಲಿಕ್‌ ಟಿವಿ ವರದಿ ಮಾಡಿತ್ತು. ಕಾರ್ಡ್‌ದಾರರ ಹೆಸರಲ್ಲಿ ವಾಹನ ಇವೆಯಾ ಎಂಬುದನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ, ಜಮೀನು ಎಷ್ಟಿದೆ ಎಂಬುದನ್ನು ತಿಳಿಯಲು ಕಂದಾಯ ಇಲಾಖೆ, ತೆರಿಗೆ ಪಾವತಿದಾರರಾ ಎಂಬುದನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆಯ ನೆರವು ಪಡೆದು ಆಪರೇಷನ್‌ಗೆ ಮಾಡಲಿದೆ ಎಂದು ವರದಿಯಾಗಿತ್ತು.

    ಯಾರ ಕಾರ್ಡ್ ರದ್ದಾಗುತ್ತೆ?
    ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ವೈಟ್ ಬೋರ್ಡ್‌ 4 ಚಕ್ರದ ವಾಹನ ಇದ್ದು ಬಿಪಿಎಲ್‌ ಕಾರ್ಡ್‌ ಮಾಡಿಸಿದವರ ಕಾರ್ಡ್‌ ರದ್ದಾಗಲಿದೆ.

    ಬಿಪಿಎಲ್ ಕಾರ್ಡಿಗೆ (BPL Card) ಕೆಲವೊಂದು ಷರತ್ತು ಹಾಕುವ ಮೂಲಕ 25,000 ಕೋಟಿ ರೂ. ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್‌ ಮಾಡಿಕೊಂಡಿದೆ. ಕಳೆದ ಅಕ್ಟೋಬರ್‌ನಲ್ಲೇ ಸರ್ಕಾರ ಆಪರೇಷನ್ ಬಿಪಿಎಲ್ ಕಾರ್ಡ್‌ಗೆ (Operation BPL Card) ಚಾಲನೆ ನೀಡಿತ್ತು.

  • ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್

    ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್

    ಬೆಂಗಳೂರು: ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. 6 ತಿಂಗಳಿಂದ ಅಕ್ಕಿ ಪಡೆಯದೇ ಇದ್ದ 2.76 ಲಕ್ಷ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ.

    ಬಿಪಿಎಲ್ ಕಾರ್ಡ್ ಪರಿಷ್ಕರಣೆ ವೇಳೆ ಆಹಾರ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿತ್ತು. ಬಿಪಿಎಲ್ ಕಾರ್ಡ್ ರದ್ದಾಗಿರೋ ರಾದ್ಧಾಂತದ ಮಧ್ಯೆ ಆರು ತಿಂಗಳಿನಿಂದ 2.76 ಲಕ್ಷ ಮಂದಿ ಅಕ್ಕಿ ತೆಗೆದುಕೊಂಡಿರಲಿಲ್ಲ. ಬೇರೆ ಬೇರೆ ಉದ್ದೇಶಗಳಿಗೆ ಬಿಪಿಎಲ್ ಕಾರ್ಡ್ ಪಡೆದಿದ್ದವರು ಅಕ್ಕಿ ಪಡೆದಿರಲಿಲ್ಲ. ವಿಧ್ಯಾಭ್ಯಾಸ, ಹಾಸ್ಪಿಟಲ್‌ಗೆ ಅಂತಾ ಕಾರ್ಡ್ ಪಡೆದು ಅಕ್ಕಿ ಪಡೆದಿರಲಿಲ್ಲ.

    ಅಕ್ಕಿ ಪಡೆಯದೇ ಇದ್ದ 2.76 ಲಕ್ಷ ಕಾರ್ಡ್ಗಳನ್ನ ಅಮಾನತಿನಲ್ಲಿ ಇಟ್ಟಿದ್ದರು. ಈಗ ಮತ್ತೆ ಪರಿಷ್ಕರಣೆ ಮಾಡಿ 2.76 ಲಕ್ಷ ಕಾರ್ಡ್‌ಗಳಿಗೆ ಅಕ್ಕಿ ನೀಡಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಿನಿಂದ ಅಮಾನತಿನಲ್ಲಿದ್ದ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆಯಾಗಲಿದೆ.

    ಬಿಪಿಎಲ್‌ನಿಂದ ಎಪಿಎಲ್‌ಗೆ ಶಿಫ್ಟ್ ಆಗಿರೋ ಕಾರ್ಡ್‌ಗಳ ಪರಿಷ್ಕರಣೆ ಭರದಿಂದ ಸಾಗಿದೆ. ಪರಿಷ್ಕರಣೆ ವೇಳೆ 6 ತಿಂಗಳಿನಿಂದ ಅಕ್ಕಿ ತೆಗೆದುಕೊಳ್ಳದೇ ಇರುವ ಬಿಪಿಎಲ್ ಕಾರ್ಡ್‌ಗಳ ದುರುಪಯೋಗ ಆಗಬಾರದು ಎಂದು ಅಮಾನತಿನಲ್ಲಿಡಲಾಗಿತ್ತು.

  • PUBLiC TV Impact | – ರದ್ದಾದ ಅರ್ಹ ಬಿಪಿಎಲ್ ಕಾರ್ಡ್ ವಾಪಸ್‌ಗೆ ಸಿಎಂ ಆದೇಶ

    PUBLiC TV Impact | – ರದ್ದಾದ ಅರ್ಹ ಬಿಪಿಎಲ್ ಕಾರ್ಡ್ ವಾಪಸ್‌ಗೆ ಸಿಎಂ ಆದೇಶ

    – ಬಡವರ ಪಡಿತರ ಚೀಟಿ ರದ್ದು ಮಾಡಿದ್ರೆ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ

    ಬೆಂಗಳೂರು: ರೇಷನ್‌ ಕಾರ್ಡ್‌ ರದ್ದು ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರದ್ದಾದ ಅರ್ಹ ಬಿಪಿಎಲ್‌ (BPL) ಕಾರ್ಡ್‌ ವಾಪಸ್‌ಗೆ ಸಿಎಂ ಸಿದ್ದರಾಮಯ್ಯ (Siddaramaiah) ತುರ್ತು ಆದೇಶ ಹೊರಡಿಸಿದ್ದಾರೆ.

    ‘ಪಬ್ಲಿಕ್ ಟಿವಿ’ ನಿರಂತರ ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಈ ಕುರಿತು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಬಿಪಿಎಲ್, ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ: ಕೆ.ಹೆಚ್.ಮುನಿಯಪ್ಪ

    ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಡುನಿಟ್ಡಿನ ಸೂಚನೆ ನೀಡಿದ್ದಾರೆ.

    ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ, ತಕ್ಷಣ ವಾಪಸ್ ನೀಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಇದನ್ನೂ ಓದಿ: ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯದ 127 ಪಿಜಿಗಳಿಗೆ ನೋಟಿಸ್ – 4 ಪಿಜಿಗಳಿಗೆ ದಂಡ

    ಬಡ ಕುಟುಂಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ವರಿಕೆ ನೀಡಿದ್ದಾರೆ.

  • ಏಕಾಏಕಿ 60,000ಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಶಿಫ್ಟ್‌ – ಅರ್ಹ ಫಲಾನುಭವಿಗಳು ಕಣ್ಣೀರು

    ಏಕಾಏಕಿ 60,000ಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಶಿಫ್ಟ್‌ – ಅರ್ಹ ಫಲಾನುಭವಿಗಳು ಕಣ್ಣೀರು

    ಬೆಂಗಳೂರು: ಗ್ಯಾರಂಟಿ ಯೋಜನೆಗಳ ಭಾರದಿಂದ ಕಾಂಗ್ರೆಸ್ ಸರ್ಕಾರ (Congress Government) ಆರ್ಥಿಕವಾಗಿ ಕಂಗೆಟ್ಟಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಷ್ಟು ದಿನ ಶಕ್ತಿ ಯೋಜನೆ, ಗೃಹಲಕ್ಷ್ಮಿ ಗೊಂದಲದಲ್ಲಿ ಮುಳುಗಿದ್ದ ಸರ್ಕಾರ ಇದೀಗ ಬಿಪಿಎಲ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ಏಕಾಏಕಿ 60 ಸಾವಿರಕ್ಕೂ ಹೆಚ್ಚು ಬಿಪಿಎಲ್ (BPL Card) ಪಡಿತರದಾರರನ್ನು ಎಪಿಎಲ್‌ಗೆ (APL Card) ಶಿಫ್ಟ್ ಮಾಡಿದೆ.

    ಈ ಪರಿಷ್ಕರಣೆಯ ವೇಳೆ ಅಧಿಕಾರಿಗಳು ಸರಿಯಾದ ಮಾನದಂಡಗಳನ್ನು ಬಳಸಿಲ್ಲ. ಪರಿಣಾಮ ಅರ್ಹ ಫಲಾನುಭವಿಗಳು ಕೂಡ ಈಗ ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಲ ಪಡೆಯಲು ITR (ಆದಾಯ ತೆರಿಗೆ ರಿಟರ್ನ್ಸ್‌) ಫೈಲ್ ಮಾಡಿದ್ದ ಬಡ ಕಾರ್ಮಿಕರ ಬಿಪಿಎಲ್ ಕಾರ್ಡ್‌ಗಳೂ ರದ್ದಾಗಿದ್ದು, ಅವರು ತಿಂಗಳ ಅಕ್ಕಿ ಸಿಗದೇ ಒದ್ದಾಡ್ತಿದ್ದಾರೆ. ಆರೋಗ್ಯ ಸೌಲಭ್ಯ ಸಿಗದೇ ಪರದಾಡ್ತಿದ್ದಾರೆ. ಇದನ್ನೂ ಓದಿ: ಅರ್ಹರ ರೇಷನ್‌ ಕಾರ್ಡ್‌ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ

    ಬಿಪಿಎಲ್ ಕಾರ್ಡ್ ಶಾಕ್!
    * ಕೇಸ್ ಸ್ಟಡಿ 1 – ರೇಣುಕಾ, ರಾಜಗೋಪಾಲನಗರ, ಬೆಂಗಳೂರು – ಆದಾಯದ ಮೂಲವಿಲ್ಲ – ಐಟಿಆರ್ ಫೈಲ್ ಆರೋಪ

    * ಕೇಸ್ ಸ್ಟಡಿ 2 – ಕಲ್ಪನಾ, ನೆಲಗದರಹಳ್ಳಿ, ಬೆಂಗಳೂರು – ಕುಟುಂಬದ ಆದಾಯ 12,000 – ಐಟಿಆರ್ ಫೈಲ್ ಆರೋಪ

    * ಕೇಸ್ ಸ್ಟಡಿ 3 – ಶೋಭಾ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು – ಪತಿ ಗಾರ್ಮೆಂಟ್ಸ್ ನೌಕರ – ಐಟಿಆರ್ ಫೈಲ್ ಆರೋಪ

    * ಕೇಸ್ ಸ್ಟಡಿ 4 – ಮಹಾಲಕ್ಷ್ಮಮ್ಮ, ಮಲ್ಲರಬಾಣವಾಡಿ-ನೆಲಮಂಗಲ – ವಯೋವೃದ್ಧರು.. ಆರೋಗ್ಯ ಸಮಸ್ಯೆಯಿಂದ ಬಳಲ್ತಿದ್ದಾರೆ – ಕಾರಣವೇ ಗೊತ್ತಿಲ್ಲ

    * ಕೇಸ್ ಸ್ಟಡಿ 5 – ಬೋರಯ್ಯ, ಪಾಲಯ್ಯ, ಚಿತ್ರದುರ್ಗ – 8 ಎಕರೆ ಜಮೀನು ಮಾಲೀಕ – ಆದರೆ, ಇದು ಪಾಳು ಭೂಮಿ (ಇಬ್ಬರು ಮಕ್ಕಳಿಗೆ ಜಮೀನು ರಿಜಿಸ್ಟರ್ ಮಾಡಿಸಲು ಹಣವಿಲ್ಲ)

    * ಕೇಸ್ ಸ್ಟಡಿ 6 – ಅನ್ವರ್‌ಬಿ ಗಿರಗಾಂವ, ವಿಜಯಪುರ – ಬಟ್ಟೆ ಅಂಗಡಿಯಲ್ಲಿ ಮಗನ ಕೆಲಸ – ಜಿಎಸ್‌ಟಿ ಪಾವತಿ ಆರೋಪ

    ವಿಪಕ್ಷಗಳಿಗೆ ಅಸ್ತ್ರವಾದ ರೇಷನ್‌ ಕಾರ್ಡ್‌ ವಿವಾದ:
    ಬಿಪಿಎಲ್ ಕಾರ್ಡ್ ಗೊಂದಲ, ಯಡವಟ್ಟು, ಬಡ ಜನರ ಆಕ್ರೋಶ ಸಹಜವಾಗಿಯೇ ವಿಪಕ್ಷಗಳಿಗೆ ಆಹಾರವಾಗಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಗೊಂದಲ ಜನರ ಬಿಪಿ ಏರಿಸಿದೆ. ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿವೆ. ಆದ್ರೆ, ಸರ್ಕಾರ ಮಾತ್ರ ಕಾರ್ಡ್ ರದ್ದು ಮಾಡ್ತಿಲ್ಲ. ಪರಿಷ್ಕರಣೆ ಮಾಡ್ತಿದ್ದೇವೆ. ಅರ್ಹರಿಗೆ ಮಾತ್ರ ನೀಡುತ್ತೇವೆ ಎಂಬ ಸಮರ್ಥನೆಗೆ ಇಳಿದಿದೆ. ಯಾವುದೇ ಅರ್ಹರ ರೇಷನ್ ಕಾರ್ಡ್ ರದ್ದಾಗಲ್ಲ ಅಂತ ಇಂದೂ ಸಿಎಂ ಸ್ಪಷ್ಟನೆ ಕೊಟ್ರು. ಬಿಪಿಎಲ್‌ಗೆ ಅರ್ಹರಲ್ಲದವರನ್ನು ಎಪಿಎಲ್‌ಗೆ ಹಾಕ್ತೇವೆ ಅಂತಾ ಮುನಿಯಪ್ಪ ಹೇಳಿದ್ರು. ಬಿಜೆಪಿಯವರಿಗೆ ಮಾಡೋಕೆ ಕೆಲಸ ಇಲ್ಲ ಎಂದು ಡಿಸಿಎಂ ಹರಿಹಾಯ್ದರು.  ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ನಮ್ಮ ಗ್ಯಾರಂಟಿಗಳಿಗೂ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೂ ಸಂಬಂಧ ಇಲ್ಲ ಎಂದು ಪರಮೇಶ್ವರ್ ವ್ಯಾಖ್ಯಾನಿಸಿದ್ರು. ಆದ್ರೂ, ಟೀಕೆಗಳು ಮುಂದುವರೆದಿರುವ ಕಾರಣ ಸಂಜೆ ತುರ್ತು ಸಭೆ ನಡೆಸಿದ ಸಿಎಂ, ಬಿಪಿಎಲ್ ಗೊಂದಲ ಬಗೆಹರಿಸಿ.. ಅರ್ಹರ ಕಾರ್ಡ್ ರದ್ದಾಗಿದ್ರೆ ಅದನ್ನು ಸರಿಪಡಿಸಿಕೊಡಿ.. ಬಿಪಿಎಲ್, ಎಪಿಎಲ್ ಯಾವುದೂ ರದ್ದಾಗಲ್ಲ. ವಿಪಕ್ಷಗಳಿಗೆ ಅಂಕಿ ಅಂಶ ಸಮೇತ ಉತ್ತರ ಕೊಡಿ ಎಂದು ಸಚಿವ ಮುನಿಯಪ್ಪಗೆ ಸೂಚನೆ ನೀಡಿದ್ದಾರೆ.  ಇದನ್ನೂ ಓದಿ: ಕರ್ನಾಟಕ ಸೇರಿದಂತೆ 22 ರಾಜ್ಯಗಳಲ್ಲಿ ಇ.ಡಿ ದಾಳಿ – ಕೋಟಿ ಕೋಟಿ ಹಣ ಸೀಜ್

  • ಅರ್ಹರ ರೇಷನ್‌ ಕಾರ್ಡ್‌ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ

    ಅರ್ಹರ ರೇಷನ್‌ ಕಾರ್ಡ್‌ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ

    ಬೆಂಗಳೂರು: ಅರ್ಹರ ಬಿಪಿಎಲ್‌, ಎಪಿಎಲ್‌ ಕಾರ್ಡ್‌ಗಳು ರದ್ದಾಗಿದ್ದರೆ, ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ ಎಂದು ಸಚಿವ ಕೆ.ಹೆಚ್‌. ಮುನಿಯಪ್ಪ (KH Muniyappa) ಹೇಳಿದ್ದಾರೆ.

    ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿಂದು ನಡೆದ ಸಭೆಯಲ್ಲಿ ಸಚಿವ ರಾಜಣ್ಣ, ಪರಮೇಶ್ವರ್, ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಹೆಚ್‌ ಮುನಿಯಪ್ಪ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು. ಉನ್ನತ ಮಟ್ಟದ ಸಭೆಯಲ್ಲಿ ವಕ್ಫ್ ವಿವಾದ, ರೇಷನ್ ಕಾರ್ಡ್ (Ration Card) ವಿವಾದ, ಗ್ಯಾರಂಟಿ ಗದ್ದಲ, ಆಪರೇಷನ್ ಕಮಲ ಆರೋಪ-ಪ್ರತ್ಯಾರೋಪ, ಅಧಿವೇಶನ, ಉಪಚುನಾವಣೆ, ಸಚಿವರ ಹೇಳಿಕೆಗಳ ಕುರಿತು ಚರ್ಚೆ ನಡೆಯಿತು. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕರಿಗೆ ಮಂಪರು ಪರೀಕ್ಷೆ ಮಾಡಿಸಿದ್ರೆ ಸತ್ಯ ಹೊರ ಬರುತ್ತೆ: ಕೋರ್ಟ್‌ಗೆ ಸಿ.ಟಿ ರವಿ ಮನವಿ

    ಸಭೆ ಪ್ರಾರಂಭವಾಗುತ್ತಿದ್ದಂತೆ ರೇಷನ್ ಕಾರ್ಡ್ ಗೊಂದಲದ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚೆ ಶುರು ಮಾಡಿದರು. ಎಪಿಎಲ್‌-ಬಿಪಿಎಲ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಗೊಂದಲ ನಿವಾರಣೆ ಮಾಡುವಂತೆ ಸಚಿವ ಮುನಿಯಪ್ಪಗೆ ಸಿಎಂ ಸೂಚನೆ ನೀಡಿದರು. ಬಿಪಿಎಲ್ ಕಾರ್ಡ್ ರದ್ದಾಗಿದೆ ಅಂತ ವಿಪಕ್ಷಗಳು ವಿವಾದ ಮಾಡ್ತಿವೆ. ಇದಕ್ಕೆ ಅಂಕಿ-ಅಂಶಗಳ ಸಮೇತ ಉತ್ತರ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ನಾವು ಜಾತಿ ಸಮೀಕ್ಷೆ ನಡೆಸುತ್ತೇವೆ, ಅವಕಾಶ ವಂಚಿತರಿಗೆ ಇದರಿಂದ ಲಾಭವಾಗಲಿದೆ: ರಾಹುಲ್ ಗಾಂಧಿ

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಯಾವುದೂ ರದ್ದಾಗಿಲ್ಲ. ಆದಾಯ ತೆರಿಗೆ ಪಾವತಿ ಮಾಡೋರು ಮತ್ತು ಸರ್ಕಾರಿ ನೌಕರರಿಗೆ ಮಾತ್ರ ಕಡಿತ ಮಾಡಿದ್ದೇವೆ. ಬಿಪಿಎಲ್ ಕಾರ್ಡ್‌ಗೆ ಅರ್ಹತೆ ಇಲ್ಲದೇ ಇರೋರನ್ನ ಎಪಿಎಲ್ ಕಾರ್ಡ್‌ಗೆ ಶಿಫ್ಟ್ ಮಾಡ್ತಿದ್ದೇವೆ. ಕಾರ್ಡ್ ರದ್ದು ಮಾಡ್ತಿಲ್ಲ. 11 ಲಕ್ಷ ಕಾರ್ಡ್ ರದ್ದಾಗಿದೆ ಅನ್ನೋದು ಬಿಜೆಪಿ ಸುಳ್ಳಿನ ಆರೋಪ ಅಂತ ಸಿಎಂಗೆ ಮಾಹಿತಿ ನೀಡಿದರು.

    ಇದೇ ವೇಳೆ ಅಧಿಕಾರಿಗಳ ಸಭೆ ಮಾಡಿ ಗೊಂದಲ ನಿವಾರಣೆ ಮಾಡುವಂತೆ ಮುನಿಯಪ್ಪಗೆ ಸಿಎಂ ಮತ್ತೆ ಸೂಚನೆ ನೀಡಿದರು, ಇದಕ್ಕೆ ಪ್ರತಿಕ್ರಿಯಿಸಿ, ಒಂದು ವೇಳೆ ಅರ್ಹರ ಕಾರ್ಡ್ ರದ್ದಾಗಿದ್ದರೆ ಮರು ಅರ್ಜಿ ಹಾಕೋ ವ್ಯವಸ್ಥೆ ಮಾಡ್ತೀವಿ. ಅದು ಯಾವ ರೀತಿ ಮಾಡಬೇಕು ಅಂತ ಅಧಿಕಾರಿಗಳ ಜೊತೆ ಸಭೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿಮಾನ ಪ್ರಯಾಣದಲ್ಲಿ ದಾಖಲೆ – ನ.17 ರಂದು ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ

  • ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!

    ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ (Dengue Cases) ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ (Health Department Guidelines) ಪ್ರಕಟಿಸಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ; ಜು.15 ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನ

    ಕೋವಿಡ್‌ ಸಂದರ್ಭದಲ್ಲಿ ವಾರ್‌ ರೂಮ್‌ ತೆರೆದ ಮಾದರಿಯಲ್ಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಡೆಂಗ್ಯೂ ವಾರ್‌ ರೂಮ್‌ (Dengue War Room) ತೆರೆಯಲು ಸೂಚನೆ ನೀಡಿದೆ. ಇದರೊಂದಿಗೆ ಇನ್ನೂ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದನ್ನೂ ಓದಿ: ಗ್ಯಾರಂಟಿಗೆ 65 ಸಾವಿರ ಕೋಟಿ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ – ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ

    ಮಾರ್ಗಸೂಚಿ ಏನು?
    1. ಒಂದೇ ಸ್ಥಳದಲ್ಲಿ ಎರಡು ಅಥವಾ ಮೂರು ಡೆಂಗ್ಯೂ ಕೇಸ್ ಕಂಡುಬಂದರೆ ಹಾಟ್ ಸ್ಪಾಟ್ ಅಂತ ಪರಿಗಣನೆ
    2. ಹಾಟ್‌ಸ್ಪಾಟ್‌ಗಳಲ್ಲಿ ಲಾರ್ವಾ ನಾಶ ಚಟುವಟಿಕೆಯನ್ನು ತೀವ್ರಗೊಳಿಸುವುದು, ಒಳಾಂಗಣ/ಹೊರಾಂಗಣದಲ್ಲಿ ಲಾರ್ವಾನಾಶಕಗಳ ಬಳಕೆ ಹಾಗೂ ಒಳಾಂಗಣದಲ್ಲಿ ಡೆಂಗ್ಯೂ ನಾಶಕವನ್ನು ಸಿಂಪಡಿಸಿ ಮನೆಯ ಸದಸ್ಯರನ್ನ 30 ನಿಮಿಷಗಳ ಕಾಲ ಮನೆಯಿಂದ ಹೊರಗಡೆ ಇರುವಂತೆ ಸೂಚಿಸುವುದು
    3. ಡೆಂಗ್ಯೂ ಪಾಸಿಟಿವ್ ಆದ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್‌ಗಳನ್ನು ತುರ್ತಾಗಿ ಸಕ್ರೀಯಗೊಳಿಸಬೇಕು.
    4. ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಬಿಪಿಎಲ್‌ ಕುಟುಂಬಗಳಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಣೆ ಖಚಿತಪಡಿಸಿಕೊಳ್ಳುವುದು ಹಾಗೂ ಕೈ, ಕಾಲು – ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳುವಂತೆ ತಿಳಿಸುವುದು.
    5. ಡೆಂಗ್ಯೂ ಪಾಸಿಟಿವ್ ಆದ ವ್ಯಕ್ತಿಯನ್ನ ಜ್ವರ ಕಾಣಿಸಿಕೊಂಡ ದಿನದಿಂದ 14 ದಿನಗಳ ಕಾಲ ಅನುಪಾಲನೆ ಮಾಡುವುದು
    6. ಬೇವಿನ ಎಣ್ಣೆ ಇಲ್ಲದೇ ಹೋದರೆ ಸಿಟ್ರೋನೆಲ್ ಆಯಿಲ್, ಲೆಮನ್ ಗ್ರೇಸ್ ಆಯಿಲ್ ಅಥವಾ ಡೀಟ್ ಆಧಾರಿತ ಕ್ರೀಂ ಆಯಿಲ್‌ಗಳನ್ನ ವಿತರಣೆ ಮಾಡಬೇಕು
    7. ಡೆಂಗ್ಯೂ ಪ್ರಕರಣಗಳ ನಿರ್ವಹಣೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಫತ್ರೆಗಳಲ್ಲಿ 5 ರಿಂದ 10 ಹಾಸಿಗೆಗಳನ್ನು ಮೀಸಲಿಡಬೇಕು.
    8. ಡೆಂಗ್ಯೂ ಜ್ವರ ಪ್ರಕರಣಗಳ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣಾ ಸೌಲಭ್ಯವನ್ನು ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಆರೋಗ್ಯ ಸಂಸ್ಥೆಗಳು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ನೀಡಬೇಕು.
    9. ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಸ್ಟಿಂಗ್‌ ಕಿಟ್‌, ಅಗತ್ಯ ಪ್ರಮಾಣದ ಔಷಧಿ ಹಾಗೂ IV Fluids ಔಷಧ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಬೇಕು. ಜಿಲ್ಲಾವಾರು ಸರ್ಕಾರಿ ಹಾಗೂ ಖಾಸಗಿ ರಕ್ತನಿಧಿಗಳಿಂದ ಪ್ಲೇಟ್‌ಲೆಟ್‌, ಪ್ಲಾಸ್ಮಾ ಹಾಗೂ ಇತರ ಕಾಂಪೊನೆಂಟ್‌ಗಳ ಬಗ್ಗೆ ಪ್ರತಿದಿನ ಮಾಹಿತಿ ನೀಡಬೇಕು.
    10. ಕಡ್ಡಾಯವಾಗಿ ಡೆಂಗ್ಯೂ ಜ್ವರ ನಿರ್ವಹಣೆ ಸಂಬಂಧ ಶಿಷ್ಟಾಚಾರ ಪಾಲನೆ ಮಾಡಬೇಕು.

  • ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ – ಷರತ್ತುಗಳು ಏನಿರಬಹುದು?

    ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ – ಷರತ್ತುಗಳು ಏನಿರಬಹುದು?

    – 200 ಯೂನಿಟ್‍ಗೆ ನೋಂದಣಿ ಕಡ್ಡಾಯ ಸಾಧ್ಯತೆ
    – ಬಸ್ ಪ್ರಯಾಣಕ್ಕೆ ಪಿಂಕ್ ಪಾಸ್ ನಿರೀಕ್ಷೆ

    ಬೆಂಗಳೂರು: ರಾಜ್ಯದಲ್ಲೀಗ ಶುಭ ಶುಕ್ರವಾರದ್ದೇ ಚರ್ಚೆ. ಚುನಾವಣೆ ವೇಳೆ ಕಾಂಗ್ರೆಸ್ ಕೊಟ್ಟ ಮಾತಿನಂತೆ ಗ್ಯಾರಂಟಿಗಳ (Congress Guarantee) ಜಾರಿಗೆ ಆದೇಶ ಹೊರಡಿಸುತ್ತಾ? ಜನತೆಗೆ `ಪಂಚ’ ಕಜ್ಜಾಯ ಕೊಡುತ್ತಾ ಎಂಬ ಕುತೂಹಲ ಹೆಚ್ಚಾಗಿದೆ. ಶುಕ್ರವಾರ ಸಿದ್ದರಾಮಯ್ಯ (Siddaramaiah) ಸರ್ಕಾರದ ಬಹುನಿರೀಕ್ಷಿತ, ಹೈವೋಲ್ಟೇಜ್ ಸಚಿವ ಸಂಪುಟ ಸಭೆ ನಡೆಯಲಿದೆ. ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಕೇವಲ ಕರ್ನಾಟಕ ಮಾತ್ರವಲ್ಲ, ದೇಶದ ರಾಜಕೀಯದಲ್ಲೂ ಕೂಡ ಆಸಕ್ತಿಯನ್ನೇ ಹುಟ್ಟುಹಾಕಿದೆ.

    ಕಾಂಗ್ರೆಸ್ ಕೊಟ್ಟಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಗ್ಯಾರಂಟಿಗಳು ಏಕಕಾಲಕ್ಕೇ ಅನುಷ್ಠಾನಕ್ಕೆ ಬರುತ್ತಾ? ಅಥವಾ ಆರ್ಥಿಕತೆ ಲಭ್ಯತೆಗೆ ಅನುಸಾರ ಜಾರಿಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. 13 ಬಜೆಟ್ ಮಂಡಿಸಿ ಮತ್ತೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿರುವ ಸಿದ್ದರಾಮಯ್ಯ ಆಡಳಿತ ವೈಖರಿಯನ್ನೂ ಓರೆಗಚ್ಚುವ ಸವಾಲು ಎದುರಾಗಿದೆ. ಆದರೆ ಪಬ್ಲಿಕ್ ಟಿವಿಯ ಮೂಲಗಳ ಪ್ರಕಾರ 5 ಗ್ಯಾರಂಟಿಗಳಲ್ಲಿ ಮೊದಲ ಹಂತದಲ್ಲಿ 3 ಗ್ಯಾರಂಟಿಗಳು ಮಾತ್ರ ಜಾರಿಗೆ ಬರುವ ಸಾಧ್ಯತೆಯಿದೆ.

     

    ಉಚಿತ ವಿದ್ಯುತ್ ಗ್ಯಾರಂಟಿ
    200 ಯೂನಿಟ್ ಒಳಗೆ ಮಾಸಿಕ ವಿದ್ಯುತ್ ಬಳಕೆ ಉಚಿತವಾಗಿದ್ದರೂ ಬಿಲ್ ಮೊತ್ತ ಪಾವತಿಸುವುದು ಕಡ್ಡಾಯ. ಯೋಜನೆಯ ಫಲಾನುಭವಿಯಾಗಲು ನೋಂದಣಿ ಕಡ್ಡಾಯವಾಗಲಿದ್ದು ಫಲಾನುಭವಿಗಳ ಖಾತೆಗೆ ಹಣ ನೇರ ವರ್ಗಾವಣೆಯಾಗುವ (DBT) ಸಾಧ್ಯತೆಯಿದೆ. ಇದನ್ನೂ ಓದಿ: ಮೇ ತಿಂಗಳಿನಲ್ಲಿ 1.57 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

    ಬಾಡಿಗೆದಾರರಾಗಿದ್ದರೆ ಬೆಸ್ಕಾಂ ಕಚೇರಿಗೆ ಬಂದು ಆಧಾರ್ ಜೊತೆಗೆ ಅಕೌಂಟ್ ಮಾಹಿತಿ ಕೊಡಬೇಕು. ಯೋಜನೆಯಡಿ 2.14 ಕೋಟಿ ಫಲಾನುಭವಿಗಳಿಗೆ ಲಾಭ ಸಿಗುವ ಸಾಧ್ಯತೆ ಇದ್ದು ಒಟ್ಟು 12,038 ಕೋಟಿ ರೂ. ವಾರ್ಷಿಕ ವೆಚ್ಚವಾಗುವ ಸಾಧ್ಯತೆಯಿದೆ. ಈ ಯೋಜನೆ ಜೂನ್‍ನಿಂದಲೇ ಜಾರಿಯಾಗುವ ನಿರೀಕ್ಷೆಯಿದೆ.

    ಮಹಿಳೆಯರಿಗೆ ಉಚಿತ ಸಾರಿಗೆ
    ಉಚಿತ ಪ್ರಯಾಣಕ್ಕೆ ಇಂತಿಷ್ಟು ಕಿ.ಮೀ. ಮಿತಿ ಹೇರಬಹುದು. ಮಹಿಳೆಯರಿಗೆ ಪಿಂಕ್ ಬಸ್ ಪಾಸ್ ವಿತರಣೆ ಸಾಧ್ಯತೆಯಿದ್ದು ಎಸಿ ಹೊರತಾದ ಬಸ್‍ಗಳಲ್ಲಿ ಮಾತ್ರ ಸಂಚಾರಕ್ಕೆ ಅವಕಾಶವಿರಲಿದೆ. ಉಚಿತ ಬಸ್‍ಗಳ ಪ್ರತ್ಯೇಕಿಸಿ ಆಪರೇಷನ್ ಮಾಡುವ ಆಲೋಚನೆ ಬಂದಿದೆ ಎನ್ನಲಾಗುತ್ತಿದೆ. ನಿಗದಿತ ಗುರುತಿನ ಚೀಟಿ ಮೂಲಕ ರಾಜ್ಯದ ಮಹಿಳಾ ಪ್ರಯಾಣಿಕರನ್ನ ಗುರುತಿಸಲು ಸರ್ಕಾರ ಮುಂದಾಗಿದೆ. ಸರ್ಕಾರಿ ಉದ್ಯೋಗ ಸೇರಿದಂತೆ ನಿಗದಿತ ಉದ್ಯೋಗಿಗಳನ್ನು ಹೊರಗಿಡುವ ಸಾಧ್ಯತೆಯಿದೆ.

    ಈ ಯೋಜನೆಯಿಂದ 3.5 ಕೋಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭಾಗ್ಯ ಸಿಗಲಿದ್ದು ವಾರ್ಷಿಕ 3,600 ಕೋಟಿ ರೂ. ಒಟ್ಟು ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಜೂನ್‍ನಿಂದಲೇ ಜಾರಿಯಾಗುವ ಸಾಧ್ಯತೆಯಿದೆ.

     

    10 ಕೆಜಿ ಉಚಿತ ಅಕ್ಕಿ
    ಬಿಪಿಎಲ್ ಕಾರ್ಡ್‌ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ವಾರ್ಷಿಕ 8-10 ಸಾವಿರ ಕೋಟಿ ರೂ ವೆಚ್ಚವಾಗುವ ಸಾಧ್ಯತೆಯಿದೆ. ಹಳೆಯ ಮಾನದಂಡಗಳನ್ನೇ ಪರಿಷ್ಕರಿಸಿ ಜೂನ್‌ನಿಂದಲೇ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ. 1.27 ಕೋಟಿ ಬಿಪಿಎಲ್ ಕಾರ್ಡ್‌ ಬಳಕೆದಾರರಿಗೆ ಈ ಯೋಜನೆಯ ಲಾಭ ಸಿಗಬಹುದು ಎಂದು ಅಂದಾಜಿಸಲಾಗಿದೆ.

  • BPL ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ – ಸರ್ಕಾರ ಆದೇಶ

    BPL ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ – ಸರ್ಕಾರ ಆದೇಶ

    ಬೆಂಗಳೂರು: ಬಿಪಿಎಲ್‌ ಪಡಿತರದಾರರಿಗೆ (BPL Card) ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಫಲಾನುಭವಿಗಳಿಗೆ ಈವರೆಗೆ ವಿತರಿಸುತ್ತಿದ್ದ 5 ಕೆಜಿ ಜೊತೆಗೆ 1 ಕೆಜಿ ಹೆಚ್ಚುವರಿಯಾಗಿ ಅಕ್ಕಿ (Ration) ವಿತರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್‌) ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಈಗ 1 ಕೆಜಿ ಹೆಚ್ಚುವರಿ ಸೇರಿದಂತೆ ಒಟ್ಟು 6 ಕೆಜಿ ಅಕ್ಕಿ ವಿತರಿಸಲಾಗುವುದು. ಜನವರಿ 1ರಿಂದಲೇ ಈ ಆದೇಶ ಜಾರಿಗೊಂಡಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಲಾರಿ ಟೈರ್‌ ಸ್ಫೋಟಿಸಿ ಚಾಲಕ ಸ್ಥಳದಲ್ಲೇ ಸಾವು

    ರಾಜ್ಯದಲ್ಲಿರುವ ಆದ್ಯತಾ ಪಡಿತರ ಚೀತಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 1 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರ ಆದೇಶಿಸಿದೆ.

    ಚುನಾವಣೆ ಸಮೀಪದಲ್ಲಿರುವ ಹೊತ್ತಿನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು‌ ಸಮಾವೇಶವೊಂದರಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಡಿತರದಾರರಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ಸದ್ಯ ನೀಡುತ್ತಿರುವ ಪಡಿತರ ಜೊತೆಗೆ 1 ಕೆಜಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ತಂದ ವ್ಯಕ್ತಿ!

    Live Tv
    [brid partner=56869869 player=32851 video=960834 autoplay=true]

  • BPL ಕಾರ್ಡ್‌ ಹೊಂದಿರುವ ಎಸ್‌ಸಿ, ಎಸ್‌ಟಿಗಳಿಗೆ ಗೃಹ ಬಳಕೆಗೆ 75 ಯುನಿಟ್‌ ಉಚಿತ ವಿದ್ಯುತ್ – ಆದೇಶ ಹಿಂಪಡೆದ ಸರ್ಕಾರ

    BPL ಕಾರ್ಡ್‌ ಹೊಂದಿರುವ ಎಸ್‌ಸಿ, ಎಸ್‌ಟಿಗಳಿಗೆ ಗೃಹ ಬಳಕೆಗೆ 75 ಯುನಿಟ್‌ ಉಚಿತ ವಿದ್ಯುತ್ – ಆದೇಶ ಹಿಂಪಡೆದ ಸರ್ಕಾರ

    ಬೆಂಗಳೂರು: ಬಿಪಿಎಲ್‌ ಕಾರ್ಡ್‌ ಹೊಂದಿರುವ ಎಸ್‌ಸಿ, ಎಸ್‌ಟಿ ಕುಟುಂಬಗಳ ಗೃಹ ಬಳಕೆಗೆ ಮಾಸಿಕ 75 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಸಂಬಂಧ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

    ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಹಿಂಪಡೆದಿದೆ. ಆದರೆ ಯಾವ ಕಾರಣಕ್ಕೆ ಆದೇಶ ವಾಪಸ್‌ ಪಡೆಯಲಾಗಿದೆ ಎಂಬ ಬಗ್ಗೆ ಸ್ಪಷ್ಟ ಕಾರಣ ನೀಡಿಲ್ಲ. ಇದನ್ನೂ ಓದಿ: 2A ಮೀಸಲಾತಿ ಹೋರಾಟಕ್ಕೆ ಬೆಂಬಲ – ಲಿಂಗಾಯತ ಶಾಸಕರು ಸಿಎಂ ಮೇಲೆ ಒತ್ತಡ ತರ್ತೀವಿ ಎಂದ ಕತ್ತಿ

    ಗೃಹ ಬಳಕೆಗೆ 75 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಬಗ್ಗೆ ಆಗಸ್ಟ್ 28 ರಂದು ಇಂಧನ ಇಲಾಖೆ ಆದೇಶ ಹೊರಡಿಸಿತ್ತು. SC, ST ಕುಟುಂಬಗಳಿಗೆ ಮೊದಲ 75 ಯುನಿಟ್ ವಿದ್ಯುತ್ ಉಚಿತ ಒದಗಿಸಲಾಗುವುದು ಎಂದು ಘೋಷಣೆಯಲ್ಲಿ ತಿಳಿಸಿತ್ತು.

    ಆದರೆ ಆದೇಶ ಹೊರಡಿಸಿ 10 ದಿನಗಳಲ್ಲಿ ಸರ್ಕಾರ ಆದೇಶವನ್ನು ವಾಪಸ್‌ ಪಡೆದುಕೊಂಡಿದೆ. ಇದನ್ನೂ ಓದಿ: ಡಿಸಿಪಿ ಕಾರಿನ ಮೇಲೆ ಬಿತ್ತು ಬೃಹತ್‌ ಕೊಂಬೆ

    Live Tv
    [brid partner=56869869 player=32851 video=960834 autoplay=true]