Tag: boys

  • ಫಿಟ್ನೆಸ್‍ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್

    ಫಿಟ್ನೆಸ್‍ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್

    ಮುಂಬೈ: ಜೋಗೇಶ್ವರಿ-ವಿಕ್ರೋಲಿ ಸಂಪರ್ಕ ರಸ್ತೆಯಲ್ಲಿ(ಜೆವಿಎಲ್‍ಆರ್) 12 ವರ್ಷದ ಬಾಲಕ ತನ್ನ ತಂದೆ ಜೊತೆ ಸೈಕ್ಲಿಂಗ್‍ಗೆ ಹೋಗುತ್ತಿದ್ದನು. ಆದರೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಬಾಲಕ ಮೃತಪಟ್ಟಿದ್ದಾನೆ.

    ಭಾನುವಾರ 7ನೇ ತರಗತಿಯ ವಿದ್ಯಾರ್ಥಿ ಅಕ್ಷ್ ಮಾಲು, ಕಾರು ಉತ್ಪಾದನಾ ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ತಂದೆ ಮಧುರೇಂದ್ರ ಮಾಲು(42) ಮತ್ತು ಇತರ ಕೆಲವು ಸೈಕ್ಲಿಸ್ಟ್‍ಗಳೊಂದಿಗೆ ಸೈಕ್ಲಿಂಗ್‍ಗಾಗಿ ಹೋಗಿದ್ದನು. ಈ ವೇಳೆ ಜೆವಿಎಲ್‍ಆರ್ ರಸ್ತೆಯಲ್ಲಿ ಇವರು ಸೈಕ್ಲಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಅಕ್ಷ್ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಚಾಲಕ ಟ್ರಕ್‍ನನ್ನು ವೇಗವಾಗಿ ಓಡಿಸಿಕೊಂಡು ಹೋಗಿದ್ದಾನೆ. ಆದರೆ ಸೋಮವಾರ ಎಂಐಡಿಸಿ ಪೊಲೀಸರು ಜೋಗೇಶ್ವರಿ(ಪೂರ್ವ)ಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 99 ವರ್ಷದ ವೃದ್ಧೆಯನ್ನೂ ಬಿಡದ ಪಾಪಿ – ಹಿಡನ್ ಕ್ಯಾಮೆರಾದಲ್ಲಿ ಕ್ರೌರ್ಯ ಸೆರೆ!

    ಡಿಸಿಪಿ ಮಹೇಶ್ವರ್ ರೆಡ್ಡಿ ಈ ಕುರಿತು ಪ್ರತಿಕ್ರಿಯಿಸಿದ್ದು, ಹುಡುಗನು ತನ್ನ ತಂದೆ ಮತ್ತು ಸ್ನೇಹಿತರಾದ ಅಲೋಕ್, ಮಿತೇಶ್ ಅವರನ್ನೊಳಗೊಂಡ ಸೈಕ್ಲಿಸ್ಟ್‍ಗಳ ಗುಂಪಿನೊಂದಿಗೆ ಸವಾರಿ ಮಾಡುತ್ತಿದ್ದನು. ಅವರು ಪೊವೈ ತಲುಪಿದಾಗ ವೇಗದಿಂದ ಬಂದ ಟ್ರಕ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನ ತಲೆಗೆ ತೀವ್ರ ಗಾಯವಾಗಿದೆ. ತಕ್ಷಣ ಬಾಲಕನ ತಂದೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆದ 36 ಗಂಟೆಗಳ ಒಳಗೆ ಟ್ರಕ್ ಚಾಲಕನನ್ನು ಬಂಧಿಸಲಾಯಿತು ಎಂದು ಹೇಳಿದರು.

    ಫಿಟ್ನೆಸ್‍ಗಾಗಿ ಸೈಕ್ಲಿಂಗ್!
    ಮಧುರೇಂದ್ರ ಅವರಿಗೆ ಇಬ್ಬರು ಗಂಡುಮಕ್ಕಳು ಇದ್ದಾರೆ. ಅವರಲ್ಲಿ ಅಕ್ಷ್ ದೊಡ್ಡವನಾಗಿದ್ದನು. ಮಧುರೇಂದ್ರ ಅವರು ಸಾಹಸ ಕ್ರೀಡೆ ಮತ್ತು ಫಿಟ್ನೆಸ್ ಚಟುವಟಿಕೆಗಳಲ್ಲಿ ಯಾವಾಗಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಮಧುರೇಂದ್ರ ಅವರು ವಿಕೇಂಡ್ ಮತ್ತು ರಜಾದಿನಗಳಲ್ಲಿ ಮಗನೊಂದಿಗೆ ಸೈಕ್ಲಿಂಗ್‍ಗೆ ಹೋಗುತ್ತಿರುತ್ತಾರೆ. ಅದೇ ಭಾನುವಾರವೂ ಹೋಗಿದ್ದು, ಈ ದುರದೃಷ್ಟಕರ ಘಟನೆ ನಡೆದಿದೆ. ಘಟನೆ ನಡೆದಾಗ ಮಧುರೇಂದ್ರ ಸಹ ಮಗನಿಂದ ಸ್ವಲ್ಪ ದೂರದಲ್ಲೇ ಇದ್ದು, ತಂದೆಯ ಎದುರೆ ಮಗ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    For How Long Should You Do Cycling For Weight Loss? Expert Reveals Important Do's And Don'ts Of Cycling

    ನನ್ನ ಮಗನ ಬೈಸಿಕಲ್ ಡಿಕ್ಕಿ ಹೊಡೆದ ನಂತರ ಟ್ರಕ್ ವೇಗವಾಗಿ ಓಡಿಸಲಾಯಿತು. ನಾನು ನನ್ನ ಮಗನನ್ನು ಆಸ್ಪತ್ರೆಗೆ ಸೇರಿಸಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವನು ಸಾವನ್ನಪ್ಪಿದ್ದಾನೆ ಎಂದು ಮಧುರೇಂದ್ರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿನ 16 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ!

    ಎಂಐಡಿಸಿ ಪೊಲೀಸ್ ಹಿರಿಯ ಇನ್ಸ್‍ಪೆಕ್ಟರ್ ಸತೀಶ್ ಗಾಯಕ್ವಾಡ್ ಈ ಕುರಿತು ಮಾತನಾಡಿದ್ದು, ಟ್ರಕ್ ಚಾಲಕ ಘಟನೆ ನೋಡಿ ತನಗೆ ಹೊಡೆಯಬಹುದೆಂಬ ಭಯದಿಂದ ಟ್ರಕ್‍ನನ್ನು ವೇಗವಾಗಿ ಓಡಿಸಿದ್ದಾನೆ. ಆದರೆ ಟ್ರಕ್‍ನನ್ನು ಸಿಸಿಟಿವಿ ಫೂಟೇಜ್ ಸಹಾಯದಿಂದ ಗುರುತಿಸಿದ್ದೆವು ಎಂದು ವಿವರಿಸಿದರು.

    ಟ್ರಕ್ ಬಗ್ಗೆ ಮಾಹಿತಿ ತಿಳಿದುಕೊಂಡು ಆರೋಪಿ ಚಾಲಕ ಪ್ರೇಮಲಾಲ್ ವರ್ಮಾ(40)ನನ್ನು ಬಂಧಿಸಲಾಗಿದೆ. ಆತ ಅಪರಾಧವನ್ನು ಒಪ್ಪಿಕೊಂಡಿದ್ದು, ಐಪಿಸಿ ಸೆಕ್ಷನ್ 304(ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮೋಟಾರು ವಾಹನ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಆರೋಪಿಯನ್ನು ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.

  • ಕಳ್ಳತನ ಆರೋಪದಡಿ ಬಂಧನ – ಮನನೊಂದು 17ರ ಬಾಲಕ ಜೈಲಿನಲ್ಲೇ ಆತ್ಮಹತ್ಯೆ

    ಚಂಡೀಗಢ: ಕಳ್ಳತನ ಆರೋಪದಡಿ ಬಂಧನಕ್ಕೊಳಗಾಗಿದ್ದ 17 ವರ್ಷದ ಬಾಲಕ ಮನನೊಂದು ಜೈಲಿನೊಳಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಫತೇಹಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಫತೇಹಾಬಾದ್‍ನ ಭಾಟಿಯಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿನೋದ್ ಕುಮಾರ್, ಜನವರಿ 11ರಂದು ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದರು. ಆದರೆ ಮರುದಿನ ಹಿಂದಿರುಗಿ ನೋಡಿದಾಗ ಮನೆಯ ಬೀಗ ಹೊಡೆದು 3,000 ರೂಪಾಯಿ ಕಳ್ಳತನವಾಗಿರುವುದು ಕಂಡುಬಂತು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ನೆರೆಹೊರೆಯವರನ್ನು ವಿಚಾರಿಸಿದಾಗ ಬಾಲಕನ ಮೇಲೆ ಆರೋಪ ಕೇಳಿ ಬಂದಿದೆ. ಪೊಲೀಸರು ಐಪಿಸಿ ಸೆಕ್ಷನ್ 457 ಮತ್ತು 380ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಾಲ ವಸೂಲಿಗಾಗಿ ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿದ ಆಸಾಮಿ

    ನಂತರ ಬಾಲಕನನ್ನು ಫತೇಹಾಬಾದ್‍ನಿಂದ ಬೋರ್ಸೆಲ್ ಜೈಲಿಗೆ ಗುರುವಾರ ಕರೆದೊಯ್ಯಲಾಗಿತ್ತು. ಕೊರೊನಾ ಕಾರಣಾಂತರದಿಂದ ಪ್ರತ್ಯೇಕ ಕೊಠಡಿಯಲ್ಲಿ ಬಾಲಕ ಇದ್ದನು. ಶನಿವಾರ ಜೈಲು ಸಿಬ್ಬಂದಿ ಬಾಲಕನಿಗೆ ಊಟ ನೀಡಲು ಹೋದ ವೇಳೆ ಬಾಲಕ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದೀಗ ಬಾಲಕನ ತಾಯಿ ಸುಮನ್ ಅಲಿಯಾಸ್ ಸೋನು ಮತ್ತು ಸಹೋದರಿ ಮೋನು, ಫತೇಹಾಬಾದ್ ಪೊಲೀಸರು ಬಾಲಕನಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ.

    ಬಾಲಕನಿಗೆ ಪೊಲೀಸರು ನಿರ್ದಯವಾಗಿ ಥಳಿಸಿದ್ದರಿಂದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಜೈಲಿನಲ್ಲಿ ಭದ್ರತಾ ವ್ಯವಸ್ಥೆಯ ಕೊರತೆ ಇದ್ದು, 2019ರಲ್ಲಿ 20 ಮಂದಿ ಬಂಧಿತ ಆರೋಪಿಗಳು ಪರಾರಿಯಾಗಿದ್ದರು. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್

  • ಹುಡುಗರಿಗಾಗಿ ಡ್ರೆಸ್ಸಿಂಗ್ ಹ್ಯಾಕ್ – ಟೈಲರ್ ಬಳಿ ಹೋಗದೇ ಫಿಟ್ಟಿಂಗ್ ಮಾಡಿಕೊಳ್ಳಿ

    ಹುಡುಗರಿಗಾಗಿ ಡ್ರೆಸ್ಸಿಂಗ್ ಹ್ಯಾಕ್ – ಟೈಲರ್ ಬಳಿ ಹೋಗದೇ ಫಿಟ್ಟಿಂಗ್ ಮಾಡಿಕೊಳ್ಳಿ

    ನೀವು ಈಗಷ್ಟೆ ಬಟ್ಟೆ ಖರೀದಿ ಮಾಡಿದ್ದೀರಾ? ನಿಮ್ಮ ಹೊಸ ಬಟ್ಟೆ ನಿಮ್ಮ ಸೈಜ್‌ಗೆ ಹೊಂದಿಕೊಳ್ಳುತ್ತಿಲ್ಲವೆ? ಅಥವಾ ನಿಮ್ಮ ಹಳೆ ಬಟ್ಟೆಗಳೇ ಕೊನೆ ಕ್ಷಣದಲ್ಲಿ ಕೈ ಕೊಡುತ್ತಿದೆಯೆ? ಇಂತಹ ಸನ್ನಿವೇಶದಲ್ಲಿ ನಿಮ್ಮ ಬಳಿ ಟೈಲರ್ ಬಳಿ ಹೋಗುವಷ್ಟು ಸಮಯ ಇಲ್ಲವಾದಲ್ಲಿ ಇಲ್ಲಿರುವ ಕೆಲವು ಡ್ರೆಸ್ಸಿಂಗ್ ಹ್ಯಾಕ್‌ಗಳು ಕೊನೇ ಕ್ಷಣದಲ್ಲಿ ಖಂಡಿತವಾಗಿಯೂ ನಿಮ್ಮ ಸಹಾಯಕ್ಕೆ ಬರುತ್ತದೆ.

    ಪ್ಯಾಂಟ್ ಲೆಂತ್ ಹ್ಯಾಕ್:
    ನಿಮ್ಮಪ್ಯಾಂಟ್ ಆಂಕಲ್ ಗಿಂತ ಉದ್ದ ವಾಗಿದ್ದರೆ ಅದು ಖಂಡಿತವಾಗಿಯೂ ನಿಮಗೆ ಅಂದವಾಗಿ ತೋರುವುದಿಲ್ಲ. ನಿಮ್ಮ ಹೊಸ ಪ್ಯಾಂಟ್ ಅರ್ಜೆಂಟ್ ಆಗಿ ಆಲ್ಟರ್ ಆಗಬೇಕಿದ್ದರೆ ಹೀಗೆ ಮಾಡಿ.

    ನಿಮಗೆ ಈ ಹ್ಯಾಕ್‌ನಲ್ಲಿ ಅಗತ್ಯ ಬೀಳುವುದು ಕೇವಲ ಎರಡು ರಬ್ಬರ್ ಬ್ಯಾಂಡ್‌ಗಳು. ನೀವು ಪ್ಯಾಂಟ್ ಧರಿಸಿರುವಾಗಲೇ ಆಂಕಲ್‌ನ ಕೊನೆಯಲ್ಲಿ ರಬ್ಬರ್ ಬ್ಯಾಂಡ್ ಅನ್ನು ಪ್ಯಾಂಟ್‌ಗೆ ಬಂಧಿಸಿ. ಹೆಚ್ಚಿಗೆ ಉದ್ದದ ಭಾಗವನ್ನು ಮಡಿಕೆಯಾಗಿ ಒಳ ಭಾಗದೆಡೆ ಮಡಚಿ. ರಬ್ಬರ್ ಬ್ಯಾಂಡ್ ಹೊರ ಭಾಗದಲ್ಲಿ ತೋರುವಂತಿರಬಾರದು. ಎರಡೂ ಕಾಲುಗಳ ಲೆಂತ್ ಅನ್ನು ಮಡಚಿದರೆ ಆಯ್ತು. ನಿಮ್ಮ ಪ್ಯಾಂಟ್‌ಅನ್ನು ಪರ್ಫೆಕ್ಟ್ ಆಗಿ ಆಂಕಲ್ ಲೆಂತ್‌ನಲ್ಲಿ ಈ ರೀತಿಯಾಗಿ ನಿಲ್ಲಿಸಬಹುದು. ಇದನ್ನೂ ಓದಿ: ಮಹಿಳೆಯರು ಚಳಿಗಾಲದಲ್ಲಿ ಧರಿಸಬಹುದಾದ 5 ಸ್ಟೈಲಿಶ್ ಕ್ಯಾಪ್‍ಗಳು

    ಓವರ್ ಸೈಸ್ ಶರ್ಟ್ ಅನ್ನು ಪರ್ಫೆಕ್ಟ್ ಫಿಟ್ ಮಾಡಿ:
    ಇತ್ತೀಚೆಗೆ ಓವರ್ ಸೈಸ್ ಟಿ-ಶಟ್‌ಗಳ ಟ್ರೆಂಡ್ ನಡೆಯುತ್ತಿದ್ದರೂ ಪರ್ಫೆಕ್ಟ್ ಫಿಟ್‌ಗಳ ಫ್ಯಾಶನ್ ಎಂದಿಗೂ ಹಳೆಯದಾಗುವುದಿಲ್ಲ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ಓವರ್ ಸೈಸ್ ಶರ್ಟ್ಅನ್ನು ಪರ್ಫೆಕ್ಟ್ ಫಿಟ್ ಮಾಡಲು ಒಂದು ಒಳ್ಳೆಯ ಉಪಾಯ ಅದರ ಸ್ಲೀವ್ಸ್ ಅನ್ನು ಚಿಕ್ಕದಾಗಿ ಮಾಡುವುದು. ನಿಮ್ಮ ಶರ್ಟ್‌ನ ಸ್ಲೀವ್ಸ್ ಉದ್ದವಾಗಿದ್ದರೆ ಅದನ್ನು ಮಡಿಕೆಗಳಾಗಿ ಹೊರಭಾಗದಲ್ಲೇ ಮಡಚಿ. ಅದು ಸರಿಯಾಗಿ ಕೂರುತ್ತಿಲ್ಲ ಎಂಬ ಸಮಸ್ಯೆ ಎದುರಾದರೆ, ಮಡಿಕೆಯಾಗಿ ಮಡಚಿದ ರೀತಿಯಲ್ಲೇ ಒಂದೆರಡು ಬಾರಿ ಐರನ್ ಮಾಡಿ. ಈಗ ನಿಮ್ಮ ಶರ್ಟ್ ಪರ್ಫೆಕ್ಟ್ ಫಿಟ್ ಇಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಸಣ್ಣದಾಗಿ ಕಾಣಿಸುತ್ತದೆ.

    ಲೂಸ್ ಜೀನ್ಸ್ ಟೈಟ್ ಮಾಡುವ ಹ್ಯಾಕ್:
    ನಿಮ್ಮ ಜೀನ್ಸ್ ಲೂಸ್ ಆಗಿದ್ದರೆ, ನಿಮ್ಮ ಸೊಂಟದಲ್ಲಿ ಅದು ಕೂರುತ್ತಿಲ್ಲವೆಂದಾದರೆ ಹೀಗೆ ಮಾಡಿ. ಜೀನ್ಸ್‌ ವೆಸ್ಟ್ ಬಟನ್  ಹಿಂದಿನ ಬೆಲ್ಟ್ ಲೂಪ್‌ಗೆ ಸಿಕ್ಕಿಸಿ ನಂತರ ಹುಕ್ ಹೋಲ್‌ಗೆ ಬಂಧಿಸಿ. ಈಗ ಲೂಸ್ ಪ್ಯಾಂಟ್ ಟೈಟ್ ಆಗಿರುತ್ತದೆ. ಆದರೆ ಅದರ ಲುಕ್ ಹಾಳಾಯ್ತು ಎಂದು ನಿಮಗೆ ಎನಿಸಿದರೆ ಔಟ್ ಶರ್ಟ್ ಮಾಡಿ. ಇದರಿಂದ ನೀವು ಹ್ಯಾಕ್ ಬಳಸಿರುವ ಸಂಗತಿ ಯಾರಿಗೂ ತಿಳಿಯುವುದಿಲ್ಲ. ಇದನ್ನೂ ಓದಿ: ಯೋಗ ಸಂದೇಶದ ಮೂಲಕ ಹೊಸ ವರ್ಷ ಬರಮಾಡಿಕೊಂಡ ವಿದ್ಯಾರ್ಥಿಗಳು

    ಟೈಟ್ ಜೀನ್ಸ್ ಪರ್ಫೆಕ್ಟ್ ಫಿಟ್ ಮಾಡಿ:
    ನಿಮ್ಮ ಜೀನ್ಸ್ ಟೈಟ್ ಆಗಿದ್ದರೆ, ಪ್ಯಾಂಟ್‌ನ ಬಕ್ಕಲ್ ಹೋಲ್‌ಗೆ ಸಿಕ್ಕಿಸಲು ಕಷ್ಟವಾಗುತ್ತಿದ್ದರೆ, ಒಂದು ರಬ್ಬರ್ ಬ್ಯಾಂಡ್ ತೆಗೆದುಕೊಂಡು ಹೋಲ್‌ಗೆ ಗಂಟು ಹಾಕಿ ನಂತರ ಬಟನ್‌ಗೆ ಸಿಕ್ಕಿಸಿ. ರಬ್ಬರ್ ಬ್ಯಾಂಡ್ ಕಾಣಿಸದಂತೆ ನಂತರದಲ್ಲಿ ನೀವು ಬೆಲ್ಟ್ ಬಳಸಬಹುದು.

    ಕಾಲರ್‌ಅನ್ನು ಪರ್ಫೆಕ್ಟ್ ಆಗಿ ಕೂರಿಸಿ:
    ಶರ್ಟ್ ಅಥವಾ ಪೋಲೋ ಟಿ-ಶರ್ಟ್‌ನ ಕಾಲರ್ ಸರಿಯಾಗಿಕೂರದೇ ಇರುವುದು ಪ್ರತಿ ಹುಡುಗರೂ ಎದುರಿಸುವ ಒಂದು ಸಾಮಾನ್ಯ ಸಮಸ್ಯೆ. ಈ ಸಂದರ್ಭದಲ್ಲಿ ನೀವು ಡಬಲ್ ಸೈಡ್ ಸ್ಟಿಕ್ಕಿ ಟೇಪ್ ಬಳಸಿ ಅದನ್ನು ಸರಿಯಾಗಿ ಕೂರುವಂತೆ ಮಾಡಬಹುದು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?

    ಒಂದು ವೇಳೆ ನಿಮ್ಮ ಬಳಿ ಡಬಲ್ ಸೈಡ್ ಟೇಪ್ ಇಲ್ಲವೆಂದರೆ, ಅದನ್ನು ಖರೀದಿಸುವ ಸಮಯವೂ ನಿಮ್ಮಲ್ಲಿ ಇಲ್ಲ ಎಂದಾದರೆ, ಒಂದು ಉಪಾಯವಿದೆ. ಶರ್ಟ್‌ನ ಎಲ್ಲಾ ಬಟನ್‌ಗಳನ್ನೂ ಬಂಧಿಸಿ (ಬಟನ್ ಅಪ್ ಮಾಡಿ). ನಿಮ್ಮ ಕಾಲರ್ ತನ್ನಷ್ಟಕೆ ನೀಟ್‌ಆಗಿ ಕೂರುತ್ತದೆ.

  • ಗೇಮ್ ಆಡುತ್ತಾ ಹಳಿ ಮೇಲೆ ಕುಳಿತ ಬಾಲಕರ ಮೇಲೆ ಹರಿದ ರೈಲು

    ಗೇಮ್ ಆಡುತ್ತಾ ಹಳಿ ಮೇಲೆ ಕುಳಿತ ಬಾಲಕರ ಮೇಲೆ ಹರಿದ ರೈಲು

    ಲಕ್ನೋ: ರೈಲ್ವೆ ಹಳಿ ಮೇಲೆ ಗೇಮ್ ಆಡುತ್ತಾ ಕುಳಿತ್ತಿದ್ದ ಬಾಲಕರ ಮೇಲೆ ಮಧಯರಾ- ಕಸ್‍ಗಂಜ್ ರೈಲು ಹರಿದು ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.

    ಗೌರವ್ ಮತ್ತು ಕಪಿಲ್ ಕುಮಾರ್ ಮೃತರಾಗಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಈ ಗೇಮ್‍ನ ಚಟಕ್ಕೆ ಬಿದ್ದಿರುವ ಹಲವಾರು ಯುವಕರು ತಮ್ಮ ಪ್ರಾಣವನ್ನೇ ಕಳೆಡದುಕೊಳ್ಳುತ್ತಿದ್ದಾರೆ. ಹಳಿಯ ಮೇಲೆ ಪಬ್‍ಜಿ ಗೇಮ್ ಆಡುತ್ತಾ ಕುಳಿತ ಬಾಲಕರ ಮೇಲೆ ರೈಲು ಹರಿದು ಇಬ್ಬರು ಸಾವನ್ನಪ್ಪಿದ್ದಾರೆ.

    ಭಾರತದಲ್ಲಿ ನಿಷೇಧಿತ ಪಬ್-ಜಿ ಗೇಮ್ ಆಡುತ್ತಾ ಇಬ್ಬರು ಬಾಲಕರು ರೈಲು ಹಳಿ ಮೇಲೆ ಕುಳಿತಿದ್ದರು. ಈ ವೇಳೆ ಆಗಮಿಸಿದ ಗೂಡ್ಸ್ ಟ್ರೈನ್ ಇಬ್ಬರ ಮೇಲೆ ಹರಿದಿದ್ದು ಬಾಲಕರು ಸಾವನ್ನಪ್ಪಿದ್ದಾರೆ. ಯುವಕರು ಮೊಬೈಲ್‍ಗಳನ್ನು ಪರಿಶೀಲನೆ ನಡೆಸಿದಾಗ ಮೊಬೈಲ್‍ಗಳ್ಲಿ ಪಬ್-ಜಿ ಗೇಮ್ ಆಡುತ್ತಿದ್ದಾಗಿ ಕಂಡು ಬಂದಿದೆ ಎಂದು ಜಮನಾಪುರ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ನಾಯಕರಿಗೆ ಕೈ ಮುಗಿದ ಜೂನಿಯರ್ ಎನ್‍ಟಿಆರ್

    ಗೌರವ್ ಮತ್ತು ಕಪಿಲ್ ಕುಮಾರ್ ಪಬ್-ಜಿ ಗೇಮ್‍ಗೆ ಅಡಿಕ್ಟ್ ಆಗಿರುವ ಕುರಿತಯ ಯಾವುದೇ ಮಾಹಿತಿಯಿರಲಿಲ್ಲ ಎಂದು ಫೋಷಕರು ಹೇಳಿದ್ದಾರೆ. ದೇಶದಲ್ಲಿ ಈ ಗೇಮ್‍ನ್ನು ಕೇಂದ್ರ ಸರ್ಕಾರ ನಷೇಧಿದೆ ಆದರೂ ಹಲವರು ಅನಧಿಕೃತ ವೆಬ್‍ಸೈಟ್‍ಗಳ ಮೂಲಕವಾಗಿ  ಡೌನ್‍ಲೋಡ್ ಮಾಡಿಕೊಂಡು ಆಡುತ್ತಿದ್ದಾರೆ. ಇದನ್ನೂ ಓದಿ:  ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

  • ಬಾಲಕಿಯರಿಗೆ ಶಾಲೆ ತೆರೆಯುವವರೆಗೂ ನಾವು ಹೋಗಲ್ಲ – ಅಫ್ಘಾನ್ ಬಾಲಕರ ಪಟ್ಟು

    ಬಾಲಕಿಯರಿಗೆ ಶಾಲೆ ತೆರೆಯುವವರೆಗೂ ನಾವು ಹೋಗಲ್ಲ – ಅಫ್ಘಾನ್ ಬಾಲಕರ ಪಟ್ಟು

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಾಲಕಿಯರಿಗೆ ಶಾಲೆ ತೆರೆಯುವವರೆಗೂ ನಾವು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕರು ಪಟ್ಟು ಹಿಡಿದು ಮನೆಯಲ್ಲಿಯೇ ಇದ್ದಾರೆ.

    Afghanistan school

    ಈ ಬಗ್ಗೆ ಮಾತನಾಡಿದ 12ನೇ ತರಗತಿ ವಿದ್ಯಾರ್ಥಿಯೊಬ್ಬರು, ಮಹಿಳೆಯರು ಸಮಾಜದಲ್ಲಿ ಅರ್ಧದಷ್ಟಿದ್ದಾರೆ. ಬಾಲಕಿಯರಿಗೆ ಕೂಡ ಶಾಲೆಗಳು ತೆರೆಯುವವರೆಗೂ ನಾವು ಶಾಲೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

    ಬಾಲಕಿಯರು ಬೆಳಗ್ಗೆ ಮತ್ತು ಬಾಲಕರು ಮಧ್ಯಾಹ್ನ ಓದಬೇಕು. ಅಲ್ಲದೇ ಅಧ್ಯಾಪಕರು ಹುಡುಗರಿಗೆ ಮತ್ತು ಮಹಿಳಾ ಅಧ್ಯಾಪಕಿಯರು ಹುಡುಗಿಯರಿಗೆ ಪಾಠಮಾಡಬೇಕು ಎಂದು ಅಫ್ಘಾನಿಸ್ತಾನದ ಶಿಕ್ಷಣ ಸಚಿವಾಲಯ ಪ್ರಕಟಿಸಿದೆ. ಓದುವುದರಲ್ಲಿ ಆಸಕ್ತಿ ಕಡಿಮೆ ಇರುವ ಹುಡುಗಿಯರಿಗೆ ಶಾಲೆಯನ್ನು ತೆರೆಯಬೇಕೆ ಎಂಬುವುದರ ಬಗ್ಗೆ ಇನ್ನೂ ಚರ್ಚೆ ನಡೆಸಲಾಗುತ್ತಿದೆ ಎಂದು ಕಾಬೂಲ್‍ನ ಖಾಸಗಿ ಶಾಲೆಯ ಕೆಲವು ಶಿಕ್ಷಕರು ಹೇಳಿದ್ದಾರೆ.

    ಹೆಣ್ಣು ಮಕ್ಕಳಿಗೆ ನೀಡುವ ಶಿಕ್ಷಣವು ಒಂದು ಪೀಳಿಗೆಯನ್ನು ಸರಿಪಡಿಸುತ್ತದೆ. ಗಂಡು ಮಕ್ಕಳಿಗೆ ನೀಡುವ ಶಿಕ್ಷಣವು ಕುಟುಂಬದ ಮೇಲೆ ಪರಿಣಾಮ ಬೀರುಬಹುದು. ಆದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಅದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಹೆಣ್ಣು ಮಕ್ಕಳು ಶಿಕ್ಷಣವನ್ನು ಪುನಾರಂಭಿಸಲು ಮತ್ತು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುವ ವಿಷಯದ ಬಗ್ಗೆ ನಾವು ಸೂಕ್ಷ್ಮವಾಗಿ ಆಲೋಚಿಸುತ್ತಿದ್ದೇವೆ ಎಂದು ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಹಾರದ ಸಿಎಂ ಮುಂದಿನ ಪ್ರಧಾನಿ ಆಗ್ಬೇಕು: ಜಮಾ ಖಾನ್

    ತಾಲಿಬಾನ್ ಸರ್ಕಾರ ಇತ್ತೀಚೆಗಷ್ಟೇ ಪ್ರೌಢ ಶಾಲೆಗಳನ್ನು ಹುಡುಗರಿಗೆ ತೆರೆಯಲು ಅನುಮತಿ ನೀಡಿದ್ದು, ಅವರಿಗೆ ಅಧ್ಯಾಪಕರು ಪಾಠ ಮಾಡಬೇಕೆಂದು ಸೂಚಿಸಿತ್ತು. ಶನಿವಾರದಿಂದ 7-12ನೇ ತರಗತಿವರೆಗೂ ಬಾಲಕರಿಗೆ ತರಗತಿಗಳನ್ನು ಪುನರಾಂಭಿಸಲು ಘೋಷಿಸಿದ ಶಿಕ್ಷಣ ಸಚಿವಾಲಯವು ಪ್ರಕಟಣೆಯಲ್ಲಿ ಬಾಲಕಿಯರಿಗೆ ಹಾಗೂ ಮಹಿಳಾ ಶಿಕ್ಷಕರ ಬಗ್ಗೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ.

  • ಫಾಲ್ಸ್‌ಗೆ ಬಿದ್ದು ಇಬ್ಬರು ಯುವಕರು ಸಾವು – ಶವ ಎತ್ತಿದ ಪಿಎಸ್‍ಐ

    ಫಾಲ್ಸ್‌ಗೆ ಬಿದ್ದು ಇಬ್ಬರು ಯುವಕರು ಸಾವು – ಶವ ಎತ್ತಿದ ಪಿಎಸ್‍ಐ

    ಮಂಡ್ಯ: ವೀಕೆಂಡ್ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಇಬ್ಬರು ಯುವಕರು ಫಾಲ್ಸ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಫಾಲ್ಸ್ ಬಳಿ ನಡೆದಿದೆ.

    ಬೆಂಗಳೂರಿನಿಂದ ಶಾಮ್‍ವೆಲ್(21), ಸಿಬಿಲ್(21) ಎಂಬ ಇಬ್ಬರು ಸ್ನೇಹಿತರು ಬೈಕ್‍ನಲ್ಲಿ ಪ್ರವಾಸಕ್ಕೆಂದು ಗಾಣಾಳು ಫಾಲ್ಸ್‌ಗೆ ಬಂದಿದ್ದಾರೆ. ಈ ವೇಳೆ ಇವರು ಕಾಲು ಜಾರಿ ಫಾಲ್ಸ್‌ನಿಂದ ಕೆಳಗೆ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಂದು ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿಗೆ ಬಂದಾಗ ಈ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಬಳಿಕ ಯುವಕರ ಶವವನ್ನು ನೀರಿನಿಂದ ಮೇಲೆ ಎತ್ತಲು ಯಾರೂ ಇಲ್ಲದ ಕಾರಣ ಸಬ್ ಇನ್ಸ್‌ಪೆಕ್ಟರ್‌ ಮಾರುತಿ ತಮ್ಮಣ್ಣನವರ್ ಯೂನಿಫಾರ್ಮ್ ಬಿಚ್ಚಿ ನೀರಿಗೆ ಧುಮುಕಿ ನೀರಿನಲ್ಲಿ ಇದ್ದ ಶವವನ್ನು ಮೇಲಕ್ಕೆತ್ತಿದ್ದಾರೆ. ಇದನ್ನೂ ಓದಿ: ಮದುವೆ ಆಗಲು ಒಪ್ಪದ ಪ್ರಿಯಕರನಿಗೆ ಪ್ರೇಯಸಿಯಿಂದ ಬಿತ್ತು ಗೂಸಾ

    ಘಟನೆ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಹಲಗೂರು ಪೊಲೀಸರು ಸ್ಥಳಕ್ಕೆ ಬಂದು ಶವಗಳನ್ನು ತೆಗೆದು ಸಾವನ್ನಪ್ಪಿರುವವರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಇಬ್ಬರು ಯುವಕರು ಬೆಂಗಳೂರಿನ ಎಂಎಸ್ ಪಾಳ್ಯದವರು ಎಂದು ಗುರುತಿಸಲಾಗಿದೆ. ಸದ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐವರು ಆತ್ಮಹತ್ಯೆ ಪ್ರಕರಣ- ಶಂಕರ್ ಮನೆಯಲ್ಲಿ 15 ಲಕ್ಷ ನಗದು, ಎರಡು ಕೆಜಿಯಷ್ಟು ಚಿನ್ನಾಭರಣ ಪತ್ತೆ

  • ಮುಳುಗುತ್ತಿದ್ದ ಬಾಲಕನ ರಕ್ಷಿಸಿ, ನದಿಯಲ್ಲಿ ಕೊಚ್ಚಿ ಹೋದ ಯುವಕ

    ಮುಳುಗುತ್ತಿದ್ದ ಬಾಲಕನ ರಕ್ಷಿಸಿ, ನದಿಯಲ್ಲಿ ಕೊಚ್ಚಿ ಹೋದ ಯುವಕ

    ಚಿಕ್ಕೋಡಿ/ಬೆಳಗಾವಿ: ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ ಮಾಡಲು ಹೋಗಿ ನೀರಲ್ಲಿ ಮುಳುಗಿ ಯುವಕ ಕಣ್ಮರೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.

    ನೋಡ ನೋಡುತ್ತಿದ್ದಂತೆ ನೀರಲ್ಲಿ ಕೊಚ್ಚಿ ಹೋದ ಯುವಕನನ್ನು ಹುಕ್ಕೇರಿ ಪಟ್ಟಣದ ಶರೀಫ್ ಖಾನಜಾದೆ(34) ಎಂದು ಗುರುತಿಸಲಾಗಿದೆ. ಸ್ನಾನ ಮಾಡಲು ಬಂದಿದ್ದ 10 ವರ್ಷದ ಬಾಲಕ ಆಯತಪ್ಪಿ ನದಿಗೆ ಬಿದ್ದಿದ್ದ. ಇದನ್ನು ಕಂಡ ಯುವಕ ಬಾಲಕನನ್ನು ರಕ್ಷಣೆ ಮಾಡಲು ಹೋಗಿದ್ದು, ಈ ವೇಳೆ ನೀರಲ್ಲಿ ಕೊಚ್ಚಿ ಹೋಗಿದ್ದಾನೆ.

    10 ವರ್ಷದ ಬಾಲಕನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಶರೀಫ್ ಬಾಲಕನ ರಕ್ಷಣೆ ಮಾಡಿದ್ದು, ಬಳಿಕ ಶರೀಫ್ ನದಿಯಲ್ಲಿ ಕಣ್ಮರೆಯಾಗಿದ್ದಾನೆ. ಕಾಪಾಡಲು ಹೋದ ಶರೀಫ್ ನನ್ನು ಉಳಿಸಲು ಸ್ಥಳೀಯ ಯುವಕರು ಹರಸಾಹಸ ಪಟ್ಟರು. ಆದರೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಶರೀಫ್ ಹುಡುಕಾಟಕ್ಕಾಗಿ ಎನ್‍ಡಿಆರ್‍ಎಫ್ ತಂಡ ಹರಸಾಹಸ ಪಡುತ್ತಿದೆ.

    ಸ್ಥಳಕ್ಕೆ ಅಂಕಲಿ ಪೋಲೀಸರು ಹಾಗೂ ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶರೀಫ್ ಹುಡುಕಾಟಕ್ಕಾಗಿ ಇನ್ನೂ ಪ್ರಯತ್ನ ಮುಂದುವರಿದಿದೆ.

  • ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವು

    ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವು

    ಹಾವೇರಿ: ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ನವನಗರ ಬಡಾವಣೆಯಲ್ಲಿ ನಡೆದಿದೆ.

    ಮೃತ ಬಾಲಕನ್ನು ಚರಣ್ ವಿಭೂತಿ(2) ಎಂದು ಗುರುತಿಸಲಾಗಿದೆ. ಚರಣ್ ಮತ್ತು ಕೆಲ ಪುಟ್ಟ ಮಕ್ಕಳು ಪ್ರತಿನಿತ್ಯ ಆಟವಾಡುವಂತೆ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿದ್ದ ತೆರೆದ ನೀರಿನ ಟ್ಯಾಂಕಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಲಾಂಗ್‍ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ ಅರೆಸ್ಟ್

    ಈ ದುರ್ಘಟನೆಯಿಂದ ಬಾಲಕ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೆರೆಗೆ ಬಿದ್ದು ಇಬ್ಬರು ಬಾಲಕರ ಧಾರುಣ ಸಾವು

    ಕೆರೆಗೆ ಬಿದ್ದು ಇಬ್ಬರು ಬಾಲಕರ ಧಾರುಣ ಸಾವು

    ಹಾವೇರಿ: ಎತ್ತುಗಳ ಮೈತೊಳೆಯಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಅಭಿಷೇಕ್ ಬಸನಗೌಡ ಹಂಡೋರಿ (14) ಮತ್ತು ಹರೀಶ್ ಬಸವರಾಜ್ ಬಾಳಿಕಾಯಿ (14) ಮೃತಪಟ್ಟ ಇಬ್ಬರು ದುರ್ದೈವಿ ಬಾಲಕರು. ಇಬ್ಬರು ಗ್ರಾಮದ ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ಎತ್ತುಗಳ ಮೈತೊಳೆಯಲು ಹೊಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಇದ್ದ ಪರಿಣಾಮ ನೀರಿನಿಂದ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು

    ಇಬ್ಬರು ಬಾಲಕರ ಮೃತ ದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಚರಣೆ ನಡೆಸಿ ಹೊರ ತೆಗೆದಿದ್ದಾರೆ. ಮೃತ ಬಾಲಕರ ಮನೆಯಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಇಂಡಿಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ಚಿಕ್ಕಮಗಳೂರಿನ 3ರ ಬಾಲಕ

    ಇಂಡಿಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ಚಿಕ್ಕಮಗಳೂರಿನ 3ರ ಬಾಲಕ

    ಚಿಕ್ಕಮಗಳೂರು: ತಾಲೂಕಿನ ಗೌಡನಹಳ್ಳಿಯ ಮೂರು ವರ್ಷದ ಬಾಲಕ ಎಸ್.ಭುವನ್ 2021ರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿ ದಾಖಲೆ ಬರೆದಿದ್ದಾನೆ.

    ತಾಲೂಕಿನ ಗೌಡನಹಳ್ಳಿ ಗ್ರಾಮದ ಶಿವ ಹಾಗೂ ದೀಪಿಕಾ ದಂಪತಿಯ ಮಗ ಎಸ್.ಭುವನ್ ಚಿಕ್ಕ ವಯಸ್ಸಿನಲ್ಲೇ ಕನ್ನಡ, ಹಿಂದಿ ಇಂಗ್ಲಿಷ್‍ನಲ್ಲಿ 1 ರಿಂದ 20ರ ವರೆಗಿನ ನಂಬರ್, 1 ಮತ್ತು 2ರ ಟೇಬಲ್ಸ್, ತಿಂಗಳು, ಕನ್ನಡ ಕಾಗುಣಿತ, ಇಂಗ್ಲಿಷ್ ವರ್ಣಮಾಲೆ, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು, ಐತಿಹಾಸಿಕ ಸ್ಥಳಗಳು, ರಾಷ್ಟ್ರಧ್ವಜದ ಚಿಹ್ನೆಗಳು ಹಾಗೂ ಕನ್ನಡ, ಇಂಗ್ಲೀಷ್ ಭಾಷಾಂತರ ಸೇರಿದಂತೆ ಅನೇಕ ವಿಷಯಗಳ ಜ್ಞಾನವನ್ನು ಹೊಂದಿದ್ದಾನೆ. ಕಿರಿಯ ವಯಸ್ಸಿನಲ್ಲೇ ಈತನ ಈ ಜ್ಞಾಪಕ ಶಕ್ತಿಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯಲ್ಲಿ ಈತನ ಹೆಸರು ಸೇರ್ಪಡೆಗೊಂಡಿದೆ.

    ಬಾಲಕ ಭುವನ್ ತಂದೆ ಹಾಲು ವ್ಯಾಪಾರಿಯಾಗಿದ್ದು, ತಾಯಿ ಗೃಹಿಣಿ. ಇಬ್ಬರೂ ಪಿಯುಸಿಯಲ್ಲಿ ಫೇಲಾಗಿದ್ದಾರೆ. ಆದರೆ ಚಿಕ್ಕಂದಿನಿಂದಲೇ ಮಗನ ಓದಿನ ಮೇಲೆ ಇಬ್ಬರೂ ವಿಶೇಷ ಗಮನ ಹರಿಸಿದ್ದರು. ಆತನಿಗೆ ಊಟ ಮಾಡಿಸುವಾಗ, ಆಟ ಆಡಿಸುವಾಗ, ಆತನ ಮೂಡ್ ಚೆನ್ನಾಗಿದ್ದು, ಹೇಳಿದ ಮಾತನ್ನೆಲ್ಲ ಗ್ರಹಿಸುವಾಗ ಅವನಿಗೆ ಹೇಳಿದ ಎಲ್ಲ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಇಂದು ಈ ಸಾಧನೆಗೈದಿದ್ದಾನೆ.

    ಹೆತ್ತವರು ಇಡೀ ದಿನದಲ್ಲಿ ಈ ರೀತಿ ಒಂದು ಗಂಟೆ ಕಾಲ ಆತನಿಗೆ ಎಲ್ಲ ವಿಷಯಗಳನ್ನ ಹೇಳಿದ್ದಾರೆ. ಅದನ್ನೆಲ್ಲಾ ನೆನಪಿನಲ್ಲಿ ಇಟ್ಟುಕೊಂಡಿದ್ದಾನೆ. ಎಳೆ ಬಾಲಕನ ಈ ಸಾಧನೆಯನ್ನು ಜಿಲ್ಲೆಯ ಜನ ಕೂಡ ಪ್ರಶಂಸಿದ್ದಾರೆ.