Tag: boys

  • ಹೆಚ್ಚು ಹುಡುಗರೊಂದಿಗೆ ಮಾತಾಡ್ತಾಳೆ ಅಂತ ಮಗಳನ್ನೇ ಕೊಂದ ಪೋಷಕರು

    ಹೆಚ್ಚು ಹುಡುಗರೊಂದಿಗೆ ಮಾತಾಡ್ತಾಳೆ ಅಂತ ಮಗಳನ್ನೇ ಕೊಂದ ಪೋಷಕರು

    ಲಕ್ನೋ: ತಮ್ಮ ಮಗಳು ಹಲವಾರು ಹುಡುಗರೊಂದಿಗೆ ಮಾತನಾಡುತ್ತಾಳೆ ಮತ್ತು ಅಸಭ್ಯವಾಗಿ ವರ್ತಿಸುತ್ತಾಳೆ ಎಂದು ಕೋಪಗೊಂಡ ಪೋಷಕರು ಆಕೆಯನ್ನು ಕಾಲುವೆಗೆ ತಳ್ಳಿ ಹತ್ಯೆಗೈದಿರುವ ಘಟನೆ ಮೀರತ್‍ನಲ್ಲಿ ನಡೆದಿದೆ.

    crime

    ಈ ಕುರಿತಂತೆ ವಿಚಾರಣೆ ವೇಳೆ ತಮ್ಮ ಮಗಳು “ಹಲವು ಹುಡುಗರೊಂದಿಗೆ ಮಾತನಾಡುತ್ತಿದ್ದಳು ಮತ್ತು ಅಸಭ್ಯ ಸನ್ನೆಗಳನ್ನು ಮಾಡುತ್ತಿದ್ದಳು. ಇದರಿಂದಾಗಿ ಕೋಪಗೊಂಡು ಆಕೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದೇವೆ ಎಂದು ದಂಪತಿ ಪೊಲೀಸರ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾಮಳೆಗೆ ನಲುಗಿದ ರಾಜ್ಯ ರಾಜಧಾನಿ- 100ಕ್ಕೂ ಹೆಚ್ಚು ಮನೆಗೆ ನುಗ್ಗಿದ ನೀರು, ಕೆರೆಯಂತಾದ ರಸ್ತೆಗಳು

    ಐದನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಬಬ್ಲೂ ಮತ್ತು ಆತನ ಪತ್ನಿ ರೂಬಿ ಸೆಪ್ಟೆಂಬರ್ 1 ರಂದು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಈ ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಪೋಷಕರೇ ಆರೋಪಿಗಳು ಎಂದು ತಿಳಿದುಬಂದಿದ್ದು ಇದೀಗ ಅವರನ್ನು ಬಂಧಿಸಿದ್ದಾರೆ. ತಮ್ಮ ಮಗಳನ್ನು ಕಾಲುವೆಗೆ ತಳ್ಳಿರುವುದಾಗಿ ದಂಪತಿ ತಪ್ಪೊಪ್ಪಿಕೊಂಡ ಹಿನ್ನೆಲೆ ಸದ್ಯ ಬಾಲಕಿಯ ಶವವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಲ್ ಟಿಕೆಟ್ ಸಿಗದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಕಾಲೇಜು ವಿದ್ಯಾರ್ಥಿನಿ

    Live Tv
    [brid partner=56869869 player=32851 video=960834 autoplay=true]

  • 30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ

    30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ

    ಚಿಕ್ಕಬಳ್ಳಾಪುರ: ಧಾರಾಕಾರ ಮಳೆಯಿಂದ 30 ವರ್ಷಗಳ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೇಗಂಡ್ಲು ಗ್ರಾಮದ ಕೆರೆ ಕೋಡಿ ಹರಿದಿದ್ದು, ನೋಡಲು ಹೋದ ಮೂವರು ಬಾಲಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

    ಸಂಜೆ ಶಾಲೆ ಮುಗಿದ ಮೇಲೆ ಕೆರೆ ನೋಡಲು ಹೋದ ಬಾಲಕರು ಕೆರೆಯಲ್ಲಿ ಈಜಾಡಲು ಹೋಗಿದ್ದು, ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೋಡೇಗಂಡ್ಲು ಗ್ರಾಮದ ವೆಂಕಟೇಶ್-ಗಾಯತ್ರಿ ದಂಪತಿ ಅವಳಿ ಮಕ್ಕಳಾದ ರಾಮ(10) – ಲಕ್ಷ್ಮಣ(10) ಹಾಗೂ ಮುನಿರಾಜು-ಗೌತಮಿ ದಂಪತಿ ಪ್ರಜ್ವಲ್(09) ಮೃತ ದುರ್ದೈವಿಗಳು. ಇದನ್ನೂ ಓದಿ:  ಇನ್ಮುಂದೆ ಶಾಲೆಗಳ ಮುಂದೆ ಮಾರುವಂತಿಲ್ಲ ಐಸ್‌ಕ್ರೀಮ್, ಚಾಟ್ ಫುಡ್ – ಇಲ್ಲಿದೆ ವಿವರ 

    ಮೂವರು ಬಾಲಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರ ಮೇಲುಗೈ – ಗ್ರಾಮೀಣ ಮಕ್ಕಳು ಟಾಪ್

    ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರ ಮೇಲುಗೈ – ಗ್ರಾಮೀಣ ಮಕ್ಕಳು ಟಾಪ್

    ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಶೇ.61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಿಯುಸಿ ಬೋರ್ಡ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶ ಪ್ರಕಟ ಮಾಡಿದರು.

    2020ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಫಲಿತಾಂಶದಲ್ಲಿ ಉತ್ತೀರ್ಣ ಪ್ರಮಾಣ 0.08ರಷ್ಟು ಏರಿಕೆಯಾಗಿದೆ. ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಟಾಪರ್ಸ್ ಯಾರ‍್ಯಾರು ಗೊತ್ತಾ?

    ಕೋವಿಡ್ ಭೀತಿಯ ನಡುವೆಯು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಯಿತು. ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,83,563 ವಿದ್ಯಾರ್ಥಿಗಳ ಪೈಕಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 48.71ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ಶೇ. 64.97ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 72.53ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    2020ರಲ್ಲಿ ನಗರ ಭಾಗದಲ್ಲಿನ ಕಾಲೇಜ್‍ಗಳ ಫಲಿತಾಂಶ ಉತ್ತಮವಾಗಿತ್ತು. ಈ ಬಾರಿ ಗ್ರಾಮಾಂತರ ಪ್ರದೇಶಗಳ ಕಾಲೇಜ್‍ಗಳ ಫಲಿತಾಂಶ ಉತ್ತಮವಾಗಿದೆ. ರಾಜ್ಯದ 56 ಕಾಲೇಜ್‍ಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 91,106 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 2,14,115, ದ್ವಿತೀಯ ದರ್ಜೆ 68,444 ಹಾಗೂ 49,301 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

    ಹಿಂದಿನ ವರ್ಷಗಳಂತೆ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿಯು ಉತ್ತೀರ್ಣ ಪ್ರಮಾಣ ಉತ್ತಮವಾಗಿದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನ ಹಾಗೂ ವಿಜಯಪುರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ರಾಯಚೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಕ್ರಮವಾಗಿ ಕೊನೆಯ ಮೂರು ಸ್ಥಾನದಲ್ಲಿವೆ. ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳ ಫಲಿತಾಂಶ ಸುಧಾರಣೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಅಂಗನವಾಡಿ ಶಿಕ್ಷಕಿಯಾಗಿ ದಲಿತೆ ನೇಮಕವಾಗಿದ್ದಕ್ಕೆ ಮಕ್ಕಳನ್ನು ಕಳುಹಿಸದ ಮೇಲ್ಜಾತಿ ಪಾಲಕರು!

    ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಯನ್ನು ಪಡೆಯಲು ಇಂದಿನಿಂದಲೇ ಅವಕಾಶ ಕಲ್ಪಿಸಲಾಗಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಫಲಿತಾಂಶಕ್ಕೆ ಕಾಯದೇ, ಪೂರಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದರು. ಜೂನ್ ತಿಂಗಳಾಂತ್ಯಕ್ಕೆ ಪೂರಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯಲಿವೆ.

    ಪರೀಕ್ಷೆಯನ್ನು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಚಿವರು ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದರು. ಫಲಿತಾಂಶದಲ್ಲಿ ಹಿನ್ನೆಡೆಯಾದವರು ನಿರಾಶರಾಗಬಾರದು. ಈ ಪರೀಕ್ಷೆಯೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು. ಪರೀಕ್ಷೆ ಹಾಗೂ ಫಲಿತಾಂಶ ನಮ್ಮ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರಿಸಬೇಕು ಎಂದು ಸಚಿವರು ಕಿವಿ ಮಾತು ಹೇಳಿದರು.

    Live Tv

  • ಇಂಗ್ಲಿಷ್ ಓದಲು ಕಷ್ಟ – ಬಾಲಕ ಆತ್ಮಹತ್ಯೆಗೆ ಯತ್ನ

    ಇಂಗ್ಲಿಷ್ ಓದಲು ಕಷ್ಟ – ಬಾಲಕ ಆತ್ಮಹತ್ಯೆಗೆ ಯತ್ನ

    ತುಮಕೂರು: ಇಂಗ್ಲಿಷ್ ಓದಲು ಕಷ್ಟವಾಗುತ್ತದೆ ಎಂದು ಬಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಊರ್ಡಿಗೆರೆಯಲ್ಲಿ ನಡೆದಿದೆ.

    ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಂಗ್ಲಿಷ್ ಓದಲು ಕಷ್ಟವಾಗುತ್ತದೆ ಎಂದು ಹೆದರಿ ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿ ಹಠ ಮಾಡಿದ್ದನು. ಬಾಲಕನ ಮನವೊಲಿಸಿದ್ದ ಪೋಷಕರು ಶಾಲೆಗೆ ಕಳುಹಿಸಿದ್ದರು. ಆದರೆ ಧೃತಿಗೆಟ್ಟ ಬಾಲಕ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಶಾಲೆಗೆ ಹೋಗುವುದಿಲ್ಲ ಎಂದು ಕ್ರಿಮಿನಾಶಕ ಸೇವಿಸಿ ಅಸ್ವಸ್ಥನಾಗಿ ಮನೆಯಲ್ಲಿಯೇ ಬಾಲಕ ಕುಸಿದು ಬಿದ್ದಿದ್ದನು. ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

    ತುಮಕೂರು ನಗರದ ಕೋತಿ ತೋಪು ಮೂಲದ ಸೋಮಶೇಖರ್, ಜಯಮ್ಮ ದಂಪತಿಯ ಮಗ ಇವನಾಗಿದ್ದು, ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿರುವ ಸೋಮಶೇಖರ್ ದಂಪತಿ ಮಗನ ಕೃತ್ಯದಿಂದ ಕಂಗಲಾಗಿದ್ದಾರೆ. ಕೂಲಿ ಕೆಲಸ ನಿಮಿತ್ತ ಊರ್ಡಿಗೆರೆ ಗ್ರಾಮಕ್ಕೆ ದಂಪತಿ ವಲಸೆ ಬಂದಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತಕ್ಕೆ 5ರ ಮಗು ಬಲಿ – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ತುಮಕೂರಿನ ಕೋತಿತೋಪು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದ ಬಾಲಕನಿಗೆ 7ನೇ ತರಗತಿಗೆ ಊರ್ಡಿಗೆರೆಯಲ್ಲಿ ಶಾಲೆಗೆ ಸೇರಿಸಲಾಗಿತ್ತು. ಮೇ 16ನೇ ತಾರೀಖಿನಿಂದ ಶಾಲೆ ಶುರುವಾಗಿದ್ದು, ಬಾಲಕ ಒಂದೆರಡು ದಿನ ಶಾಲೆಗೆ ಸರಿಯಾಗಿ ಹೋಗಿದ್ದನು. ಬಳಿಕ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದ್ದಾನೆ. ಇದೀಗ ಈ ವಿಚಾರ ತಿಳಿಯುತ್ತಿದ್ದಂತೆ ಬಿಇಒ ಹನುಮನಾಯಕ್ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.

  • ನನ್ನ ಶಿಕ್ಷಣಕ್ಕೆ ಸಹಾಯ ಮಾಡಿ – ಸಿಎಂ ನಿತೀಶ್ ಕುಮಾರ್‌ಗೆ ಸಾರ್ವಜನಿಕವಾಗಿ ಬಾಲಕನ ಮನವಿ

    ನನ್ನ ಶಿಕ್ಷಣಕ್ಕೆ ಸಹಾಯ ಮಾಡಿ – ಸಿಎಂ ನಿತೀಶ್ ಕುಮಾರ್‌ಗೆ ಸಾರ್ವಜನಿಕವಾಗಿ ಬಾಲಕನ ಮನವಿ

    ಪಾಟ್ನಾ: 11 ವರ್ಷದ ಬಾಲಕನೋರ್ವ ತನ್ನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಾರ್ವಜನಿಕವಾಗಿ ಮನವಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

    ನಿತೀಶ್ ಕುಮಾರ್ ಅವರು ತಮ್ಮ ಪತ್ನಿ ಮಂಜು ಸಿನ್ಹಾ ಅವರ ಪುಣ್ಯತಿಥಿಗೆಂದು ಕಲ್ಯಾಣ್ ಬಿಗಾಹಕ್ಕೆ ಬಂದಿದ್ದರು. ಜೊತೆಗೆ ಉದ್ಯಾನವನದಲ್ಲಿದ್ದ ತಮ್ಮ ತಂದೆ ಕವಿರಾಜ್ ರಾಮ್ಲಖಾನ್ ಸಿಂಗ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬ್ಯಾರಿಕೇಡ್‍ನ ಹಾದಿಯಲ್ಲಿ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದರು. ಈ ವೇಳೆ ಅನೇಕ ಮಂದಿ ತಮ್ಮ ಸಮಸ್ಯೆಗಳನ್ನು ಸಿಎಂ ಬಳಿ ಹೇಳಿಕೊಳ್ಳುತ್ತಿದ್ದಾಗ ಅವರ ಮನವಿಗಳನ್ನು ಸಿಎಂ ಸ್ವೀಕರಿಸುತ್ತಿದ್ದರು. ಈ ಮಧ್ಯೆ ಎಲ್ಲರನ್ನು ನೋಡುತ್ತಾ ಅಲ್ಲಿಯೇ ನಿಂತಿದ್ದ ಬಾಲಕನನ್ನು ನಿತೀಶ್ ಕುಮಾರ್ ಅವರು ಕರೆದಿದ್ದಾರೆ.

    ನಂತರ ಸೋನು ಕುಮಾರ್(ಬಾಲಕ) ಸರ್.. ನನ್ನ ಶಿಕ್ಷಣಕ್ಕೆ ನಿಮ್ಮ ಬೆಂಬಲ ಬೇಕು. ನನ್ನ ತಂದೆ ನನಗೆ ಸಹಾಯ ಮಾಡುವುದಿಲ್ಲ ಎಂದು ಕಣ್ಣೀರು ಹಾಕಿದ್ದಾನೆ. ಬಳಿಕ ಮುಖ್ಯಮಂತ್ರಿಗಳು ತಮ್ಮ ಜೊತೆಗಿದ್ದ ಅಧಿಕಾರಿಗಳಿಗೆ ಬಾಲಕನ ಸಮಸ್ಯೆಯನ್ನು ಆಲಿಸಿ ಆತನ ಕೋರಿಕೆಯನ್ನು ಈಡೇರಿಸುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ:  ಪ್ರಾಣ ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗು ರಕ್ಷಿಸಿದ – ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

    ನಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ. ಉತ್ತಮ ರೀತಿಯಲ್ಲಿ ಬೋಧನೆ ಮಾಡಲಾಗುತ್ತಿಲ್ಲ. ನನ್ನ ಗಣಿತ ಶಿಕ್ಷಕರಿಗೆ ಲೆಕ್ಕವನ್ನು ಹೇಳಿಕೊಡಲು ಬರುವುದಿಲ್ಲ ಮತ್ತು ಇಂಗ್ಲಿಷ್ ಕೂಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಬಾಲಕ ಜಿಲ್ಲಾಧಿಕಾರಿ, ಡೆಪ್ಯುಟಿ ಡೆವಲಪ್‍ಮೆಂಟ್ ಕಮಿಷನರ್ ವೈಭವ್ ಶ್ರೀವಾಸ್ತವ್ ತಿಳಿಸಿದ್ದಾನೆ.

    ನಾನು ಸಿವಿಲ್ ಸರ್ವೀಸ್‍ಗೆ ಸೇರಬೇಕೆಂಬ ಆಸೆಯನ್ನು ಹೊಂದಿದ್ದೇನೆ, ಆದರೆ ಕಳಪೆ ಶಿಕ್ಷಣ ಮತ್ತು ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಇರುವುದರಿಂದ ಓದಲು ಆಗುತ್ತಿಲ್ಲ. ನನ್ನ ತಂದೆ ಡೈರಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಆದರೆ ನನ್ನ ಶಿಕ್ಷಣದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಲ್ಲದೇ ಅವರು ಸಂಪಾದಿಸಿದರೂ, ಮದ್ಯ ಸೇವಿಸುವ ಮೂಲಕ ಹಣವನ್ನೆಲ್ಲಾ ಹಾಳು ಮಾಡುತ್ತಾರೆ ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ಸಿದ್ದು, ಡಿಕೆಶಿ ಇಬ್ಬರಿಗೂ ಮುಸ್ಲಿಮರೇ ಬೇಕು: ಪ್ರತಾಪ್ ಸಿಂಹ 

    ಬಿಹಾರದಲ್ಲಿನ ಪ್ರಾಥಮಿಕ ಶಿಕ್ಷಣ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವ್ಯಾಪಕವಾಗಿ ಟೀಕಿಸಿದ್ದು, ಬಾಲಕನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಕಾಮೆಂಟ್ ಮಾಡುತ್ತಿದ್ದಾರೆ.

  • ಜಾತಿ ನಿಂದನೆಗೈದು ಅಪ್ರಾಪ್ತನನ್ನು ಬೆಂಕಿಗೆ ತಳ್ಳಿದ ವಿದ್ಯಾರ್ಥಿಗಳು!

    ಜಾತಿ ನಿಂದನೆಗೈದು ಅಪ್ರಾಪ್ತನನ್ನು ಬೆಂಕಿಗೆ ತಳ್ಳಿದ ವಿದ್ಯಾರ್ಥಿಗಳು!

    ಚೆನ್ನೈ: ಬಾಲಕನೊಬ್ಬನ ಮೇಲೆ ಮೂವರು ವಿದ್ಯಾರ್ಥಿಗಳು ಜಾತಿ ನಿಂದನೆಗೈದು ಬೆಂಕಿಗೆ ತಳ್ಳಿ ಗಾಯಗೊಳಿಸಿದ ಘಟನೆ ವಿಲುಪುರಂ ಜಿಲ್ಲೆಯ ತಿಂಡಿವನಂ ಪಟ್ಟಣದ ಕಟ್ಟುಚಿವಿರಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ 4.30ರ ಸುಮಾರಿಗೆ ಬಾಲಕ ತನ್ನ ಅಜ್ಜಿಯನ್ನು ಭೇಟಿ ಮಾಡಲು ಮನೆಯಿಂದ ಹೊರಟಿದ್ದನು. ಈ ವೇಳೆ ದಾಳಿಕೋರರು ಅವನಿಗೆ ಜಾತಿ ನಿಂದನೆಗೈದು ಮನ ಬಂದತೆ ಥಳಿಸಿ ಬೆಂಕಿಗೆ ತಳ್ಳಿದ್ದಾರೆ. ಹೀಗಾಗಿ ಬಾಲಕನ ಬೆನ್ನು, ಎದೆ, ಭುಜದ ಮೇಲೆ ಸುಟ್ಟ ಗಾಯಗಳಾಗಿದ್ದು, ಮನೆಗೆ ಹಿಂದಿರುಗಿದಾಗ ಆತನ ಪೋಷಕರು ಆಘಾತಕ್ಕೊಳಗಾಗಿದ್ದರು. ಏನಾಯಿತು ಎಂದು ಕೇಳಿದಾಗ, ಬೆಂಕಿ ಹೊತ್ತಿಕೊಂಡಿದ್ದ ಪೊದೆಗೆ ಜಾರಿ ಬಿದ್ದೆ ಎಂದು ಬಾಲಕ ಪೋಷಕರ ಮುಂದೆ ಸುಳ್ಳು ಹೇಳಿದ್ದಾನೆ. ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಬಾಲಕನು ಈ ಹಿಂದೆ ತನ್ನ ಶಾಲೆಯಲ್ಲಿ ಒಂದೆರಡು ಮೇಲ್ಜಾತಿಯ ವಿದ್ಯಾರ್ಥಿಗಳು ತನ್ನನ್ನು ಬೆದರಿಸುತ್ತಿದ್ದಾರೆ. ಜಾತಿ ನಿಂದನೆಗೈಯುತ್ತಿದ್ದಾರೆ ಎಂದು ಆರೋಪಿಸಿದ್ದನು. ಆ ದಿನ ಅವನು ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಹುಡುಗರು ಅವನನ್ನು ಪೊದೆಯ ಬೆಂಕಿಗೆ ತಳ್ಳಿದ್ದಾರೆ. ಈ ವೇಳೆ ಬಾಲಕನು ಹತ್ತಿರದ ಟ್ಯಾಂಕ್‍ಗೆ ಹಾರಿ ಬದುಕುಳಿದಿದ್ದಾನೆ. ಇದನ್ನೂ ಓದಿ: ಕೋವಿಡ್ ವಾರಿಯರ್ ಆಗಿ ಕೆಲಸ ಮಾಡಿದ್ದ ಆಟೋ ಚಾಲಕನ ಮೇಲೆ ರೇಪ್ ಆರೋಪ

    ಬಾಲಕನನ್ನು ಚಿಕಿತ್ಸೆಗಾಗಿ ತಿಂಡಿವನಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತನ ಹೇಳಿಕೆಯನ್ನು ತೆಗೆದುಕೊಂಡ ನಂತರ ತಮಿಳುನಾಡಿನ ಪೊಲೀಸರು ಬಾಲಾಪರಾಧಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

  • ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಪಲ್ಟಿ – ಇಬ್ಬರು ಬಾಲಕರ ದುರ್ಮರಣ

    ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಪಲ್ಟಿ – ಇಬ್ಬರು ಬಾಲಕರ ದುರ್ಮರಣ

    ಚಾಮರಾಜನಗರ: ಸಾವು ಹೇಗೆ ಬರಲಿದೆ ಎಂಬುದು ಊಹೆಗೂ ನಿಲುಕದ್ದು ಎಂಬುದಕ್ಕೆ ಇಂದು ಚಾಮರಾಜನಗರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಪಲ್ಟಿಯಾಗಿ ಇಬ್ಬರು ಬಾಲಕರು ದುರಂತ ಅಂತ್ಯ ಕಂಡಿದ್ದಾರೆ.

    ಉತ್ತರಪ್ರದೇಶ ಮೂಲದ ಅತುಲ್(17), ಮಯೂರ್(17) ಮೃತ ದುರ್ದೈವಿಗಳು. ಜೀವನೋಪಯಕ್ಕಾಗಿ ಬಟ್ಟೆ ವ್ಯಾಪಾರ ಮಾಡಲು ಬಂದಿದ್ದ ಇವರಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಬ್ಬು ತುಂಬಿದ ಲಾರಿ ಆ ರಸ್ತೆಯಲ್ಲಿಯೇ ಹೋಗುತ್ತಿತ್ತು. ಆದರೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಲಾರಿ ಉರುಳಿ ಬಾಲಕರ ಮೇಲೆ ಪಲ್ಟಿಯಾಗಿದೆ. ಪರಿಣಾಮ ಬಾಲಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಶಾಲಾ ಪಠ್ಯಕ್ರಮಗಳಲ್ಲಿ ‘ಸೈಬರ್ ಸುರಕ್ಷತೆ’ ಅಧ್ಯಯನ ಅಳವಡಿಕೆ 

    ಅವೈಜ್ಞಾನಿಕ ರಸ್ತೆ ಜೊತೆಗೆ ಚಾಲಕನ ಅತಿವೇಗವೇ ಘಟನೆಗೆ ಕಾರಣ ಎನ್ನಲಾಗಿದ್ದು, ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಕಬ್ಬು ರಸ್ತೆಯಲ್ಲೆಲ್ಲಾ ಚೆಲ್ಲಾಡಿ ಸಂಚಾರವೂ ಅಸ್ತವ್ಯಸ್ತವಾಗಿತ್ತು. ಅಪಘಾತ ನಡೆಯುತ್ತಿದ್ದಂತೆ ಜನರು ಮುತ್ತಿಕೊಂಡಿದ್ದರಿಂದ ಕಾರ್ಯಾಚರಣೆ ನಡೆಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

  • YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

    YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

    ಹೈದರಾಬಾದ್: ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‌ಪಿ) ಬ್ಯಾನರ್‌ಗಳನ್ನು ಹಾನಿಗೊಳಿಸಿದ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಪಲ್ನಾಡು ಪ್ರದೇಶದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಆಡಳಿತ ನಡೆಸುತ್ತಿರುವ ವೈಎಸ್‍ಆರ್‌ಪಿ ಪೋಸ್ಟರ್‌ಗಳನ್ನು ಹರಿದು ಹಾಕಿದರ ಕುರಿತಂತೆ ವಿಚಾರಣೆ ನಡೆಸಲು ಪೊಲೀಸರು ಅಪ್ರಾಪ್ತ ಬಾಲಕರನ್ನು ಠಾಣೆಗೆ ಕರೆದೊಯ್ದು ಸಂಜೆಯವರೆಗೂ ನೆಲದ ಮೇಲೆ ಕುರಿಸಿಕೊಂಡಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆ ಆಗಬೇಕು ಅಂತ ಪ್ರಶಾಂತ್ ಕಿಶೋರ್ ಬಯಸಿದ್ರು

    cm jagan mohan reddy

    ಈ ಕುರಿತಂತೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‍ಪಿ) ಜಯರಾಮ್ ಪ್ರಸಾದ್, ಕಟ್ಟಿದ್ದ ವೈಎಸ್‍ಆರ್‌ಪಿ ಪೋಸ್ಟರ್‌ಗಳಿಗೆ ಹಾನಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಚಾರಣೆ ನಡೆಸಲು ನಾವು ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಠಾಣೆಗೆ ಕರೆದಿದ್ದೇವೆ ಎಂದು ತಿಳಿಸಿದ್ದಾರೆ.

    ವೈಎಸ್‍ಆರ್ ಸದಸ್ಯರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗ್ರಾಮದ 10ರಿಂದ 15 ವರ್ಷದೊಳಗಿನ ಕೆಲವು ಮಕ್ಕಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿ ಒಂದು ದಿನದ ಬಳಿಕ ಪೊಲೀಸರು ಮಕ್ಕಳನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಹೆಚ್ಚು ಗಮನಹರಿಸಬೇಕು: ರಾಹುಲ್ ಸಲಹೆ

    ಈ ವಿಚಾರ ಹಬ್ಬುತ್ತಿದ್ದಂತೆಯೇ ತೆಲುಗು ದೇಶಂ ಪಕ್ಷ (ಟಿಡಿಪಿ) ಅಪ್ರಾಪ್ತ ಮಕ್ಕಳಿಗೆ ಕಿರುಕುಳ ನೀಡಿದ ವೈಸಿಪಿ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

  • 11 ವರ್ಷದ ಬಾಲಕಿ ಮೇಲೆ 6 ಮಂದಿ ಅಪ್ರಾಪ್ತ ಬಾಲಕರಿಂದ ಅತ್ಯಾಚಾರ

    11 ವರ್ಷದ ಬಾಲಕಿ ಮೇಲೆ 6 ಮಂದಿ ಅಪ್ರಾಪ್ತ ಬಾಲಕರಿಂದ ಅತ್ಯಾಚಾರ

    ರಾಂಚಿ: 11 ವರ್ಷದ ಬಾಲಕಿ ಮೇಲೆ ಆರು ಮಂದಿ ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿರುವ ಘಟನೆ ಮಂಗಳವಾರ ರಾತ್ರಿ ಜಾರ್ಖಂಡ್‍ನ ಖುಂಟಿ ಜಿಲ್ಲೆಯಲ್ಲಿ ನಡೆದಿದೆ.

    ಇದೀಗ 10 ರಿಂದ 15 ವರ್ಷದೊಳಗಿನ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆ ಸಮಾರಂಭಕ್ಕೆಂದು ಬಾಲಕಿ ಪಕ್ಕದ ಹಳ್ಳಿಗೆ ಹೋಗಿದ್ದಳು. ಒಂದು ನೃತ್ಯ ಕಾರ್ಯಕ್ರಮದ ವೇಳೆ ಬಾಲಕಿ ಬಾಲಕರೊಂದಿಗೆ ಜಗಳವಾಡಿದ್ದಾಳೆ. ಇದನ್ನೂ ಓದಿ: ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

    crime

    ಮಧ್ಯರಾತ್ರಿ ಹೊತ್ತಿಗೆ ಆಕೆ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಮನೆಗೆ ಹಿಂದಿರುಗುತ್ತಿದ್ದಾಗ, ಅವಳನ್ನು ಹಿಂಬಾಲಿಸಿಕೊಂಡು ಬಂದ ಹುಡುಗರು ಆಕೆಯನ್ನು ತಡೆದು ಏಕಾಂಗಿ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಸ್ಥಳದಿಂದ ತಪ್ಪಿಸಿಕೊಂಡ ಬಾಲಕಿ ಮತ್ತು ಆಕೆಯ ಇಬ್ಬರು ಸ್ನೇಹಿತರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಲಕಿಯನ್ನು ಹುಡುಕುತ್ತಾ ಬಂದ ಪೋಷಕರನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದಾರೆ.

    crime

    ಆರಂಭದಲ್ಲಿ ಸಮಾಜಕ್ಕೆ ಹೆದರಿ ಈ ಕುರಿತಂತೆ ಪ್ರಕರಣ ದಾಖಲಿಸಲು ಬಾಲಕಿಯ ಕುಟುಂಬಸ್ಥರು ಹಿಂದೇಟು ಹಾಕಿದರು. ಆದರೆ ಗುರುವಾರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ಇದೀಗ ಪೊಲೀಸರು ಈ ಕುರಿತಂತೆ ತನಿಖೆ ನಡೆಸುತ್ತಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಗಲಭೆಯನ್ನು ನಿಯಂತ್ರಿಸುವಲ್ಲಿ ಅಮಿತ್ ಶಾ ಸಂಪೂರ್ಣ ವಿಫಲ: ಶರದ್ ಪವಾರ್

    ಕೊನೆಗೆ ಗುರುವಾರ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರು ಆರೋಪಿಗಳನ್ನು ಬಂಧಿಸಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

  • ರೈಲಲ್ಲಿ ಊರಿಗೆ ಹೊರಟ್ಟಿದ್ದ ಪಬ್‌ಜಿ ಪಾರ್ಟ್ನರ್‌ಗಾಗಿ ಹುಸಿ ಬಾಂಬ್‌ ಕರೆ ಮಾಡಿದ ಬಾಲಕ

    ರೈಲಲ್ಲಿ ಊರಿಗೆ ಹೊರಟ್ಟಿದ್ದ ಪಬ್‌ಜಿ ಪಾರ್ಟ್ನರ್‌ಗಾಗಿ ಹುಸಿ ಬಾಂಬ್‌ ಕರೆ ಮಾಡಿದ ಬಾಲಕ

    ಬೆಂಗಳೂರು: ರೈಲಲ್ಲಿ ಊರಿಗೆ ಹೊರಟ್ಟಿದ್ದ ಪಬ್‌ಜಿ ಪಾರ್ಟ್ನರ್‌ಗಾಗಿ ಬಾಲಕನೊಬ್ಬ ಹುಸಿ ಬಾಂಬ್‌ ಕರೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    12 ವರ್ಷದ ಬಾಲಕನ ಸ್ನೇಹಿತ ಯಲಹಂಕದಿಂದ ಕಾಚಿಗುಡ  ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಆದರೆ ಸ್ನೇಹಿತ ಹೋದರೆ ತನಗೆ ಪಬ್ ಜಿ ಪಾರ್ಟ್ನರ್‌ ಇರುವುದಿಲ್ಲವೆಂದು ರೈಲ್ವೇ ಸಹಯವಾಣಿಗೆ ಕರೆ ಮಾಡಿ, ರೈಲಿನಲ್ಲಿ ಬಾಂಬ್ ಇರೋದಾಗಿ ಸುಳ್ಳು ಹೇಳಿದ್ದಾನೆ. ಇದರಿಂದ ಪೊಲೀಸರು ಬಾಂಬ್‍ಗಾಗಿ ಸುಮಾರು 90 ನಿಮಿಷಗಳ ಕಾಲ  ರೈಲಿನ ಪೂರ್ತಿ ಹುಡುಕಾಡಿದ್ದಾರೆ. ಕೊನೆಗೆ ಇದು ಹುಸಿ ಕರೆ ಎಂಬುದು ಸ್ಪಷ್ಟವಾಗಿದೆ. ಇದನ್ನೂ ಓದಿ: ರಾಜ್ ಠಾಕ್ರೆ ಮನೆಗೆ ಭೇಟಿ ನೀಡಿದ ನಿತಿನ್ ಗಡ್ಕರಿ – ಉದ್ದೇಶವೇನು?

    ನಟಡೆದಿದ್ದೇನು?
    ಮಾರ್ಚ್ 30ರಂದು ಬಾಲಕ ತನ್ನ ಸ್ನೇಹಿತ ರೈಲಿನಲ್ಲಿ ಹೋದರೆ ಪಬ್‌ಜಿ ಪಾರ್ಟ್ನರ್‌ ಇರುವುದಿಲ್ಲವೆಂದು ಯಲಹಂಕ ರೈಲ್ವೇ ಸಹಯವಾಣಿಗೆ ಹುಸಿ ಕರೆ ಮಾಡಿದ್ದಾನೆ. ಈ ಕರೆಯಲ್ಲಿ ಬಾಲಕ ಯಲಹಂಕದಿಂದ ಕಾಚಿಗುಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಇರೋದಾಗಿ ಹೇಳಿದ್ದಾನೆ.

    ಈ ಒಂದು ಸುಳ್ಳು ಕರೆಯಿಂದ 90 ನಿಮಿಷಗಳ ಕಾಲ ರೈಲಿನಲ್ಲಿ ಪೊಲೀಸರು ಬಾಂಬ್‍ಗಾಗಿ ತಡಕಾಡಿದ್ದಾರೆ. ಒಂದುವರೆ ಎರಡು ಗಂಟೆ ರೈಲು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಆದರೆ ಎಷ್ಟೇ ತಡಕಾಡಿದ್ರು ಮಾಹಿತಿ ಸಿಗದ ಹಿನ್ನಲೆ ಇದೊಂದು ಹುಸಿ ಕರೆ ಎಂದು ಪೊಲೀಸರಿಗೆ ಖಾತರಿಯಾಗುತ್ತೆ. ಹುಸಿ ಕರೆಯ ಬೆನ್ನು ಹತ್ತಿದ ಪೊಲೀಸರಿಗೆ ಬಾಗಲೂರು ವಿನಾಯಕ ನಗರದಿಂದ ಕರೆ ಬಂದಿರುವುದು ತಿಳಿದುಬರುತ್ತೆ. ಈ ಹಿನ್ನೆಲೆ ಪೊಲೀಸರು ಪರಿಶೀಲನೆ ಮಾಡಿದಾಗ ಬಾಲಕನೊಬ್ಬ ಕರೆ ಮಾಡಿರೊದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು

    ಬಾಲಕನ್ನ ವಿಚಾರಿಸಿದಾಗ ಪಬ್ ಜಿ ಕಥೆ ಹೇಳಿದ್ದಾನೆ. ಅಪ್ರಾಪ್ತ ಬಾಲಕನಾದ್ದರಿಂದ ಪ್ರಕರಣ ದಾಖಲಿಸದೇ ಪೋಷಕರನ್ನ ಕರೆದು ಬುದ್ದಿ ಹೇಳಿ ಕಳಿಸಿಕೊಟ್ಟಿದ್ದಾರೆ.