Tag: boycott

  • ಬಾಯ್ಕಾಟ್ ನಡುವೆಯೂ 100 ಕೋಟಿ ಕ್ಲಬ್ ಸೇರಿದ ‘ಲಾಲ್ ಸಿಂಗ್ ಚಡ್ಡಾ’

    ಬಾಯ್ಕಾಟ್ ನಡುವೆಯೂ 100 ಕೋಟಿ ಕ್ಲಬ್ ಸೇರಿದ ‘ಲಾಲ್ ಸಿಂಗ್ ಚಡ್ಡಾ’

    ಬಾಲಿವುಡ್ ನಟ ಆಮೀರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ ಲಾಲ್ ಸಿಂಗ್ ಚಡ್ಡಾ, ಕೊನೆಗೂ 100 ಕೋಟಿ ಕ್ಲಬ್ ಸೇರುವ ಮೂಲಕ ನಿಟ್ಟುಸಿರು ಬಿಟ್ಟಿದೆ. ಆಮೀರ್ ನಟನೆಯ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇದು ಕಡಿಮೆ ಬಾಕ್ಸ್ ಆಫೀಸ್ ರಿಪೋರ್ಟ್ ಎಂದು ಹೇಳಲಾಗಿದ್ದು, ಬಾಯ್ಕಾಟ್ ನಡುವೆಯೇ ಅದು ನೂರು ಕೋಟಿ ಕ್ಲಬ್ ಸೇರಿದ್ದು ಸಾಧನೆ ಎನ್ನಲಾಗುತ್ತಿದೆ.

    ಸಿನಿಮಾ ಬಿಡುಗಡೆ ಮುನ್ನವೇ ಬಾಯ್ಕಾಟ್ ಅಭಿಯಾನ ಶುರು ಮಾಡಿದ್ದರು ಹಿಂದೂಪರ ಸಂಘಟನೆಯ ಕಾರ್ಯಕರ್ತರು. ದೇಶದ ಪರವಾಗಿ ಮಾತನಾಡದ ಆಮೀರ್ ಖಾನ್ ಸಿನಿಮಾವನ್ನು ನೋಡಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರು ಮಾಡಿದ್ದರು. ದೇಶದಲ್ಲಿ ನೆಮ್ಮದಿಯಾಗಿ ಬದುಕುವುದಕ್ಕೆ ಆಗುವುದಿಲ್ಲ ಎಂದು ಆಮೀರ್ ಖಾನ್ ಹೇಳಿದ್ದರಿಂದ, ಸಿನಿಮಾ ಸೋಲಿಸಿ ಅವರನ್ನು ದೇಶದಿಂದ ಓಡಿ ಹೋಗುವಂತೆ ಮಾಡಿ ಎಂದು ಹಲವರು ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!

    ಬಾಯ್ಕಾಟ್ ಬಿಸಿ ಜೋರಾಗುತ್ತಿದ್ದಂತೆಯೇ ಅದನ್ನು ತಿಳಿಗೊಳಿಸುವಂತಹ ಪ್ರಯತ್ನವನ್ನೂ ಆಮೀರ್ ಮಾಡಿದ್ದರು. ತಮಗೆ ದೇಶದ ಮೇಲೆ ಅಪಾರ ಗೌರವ ಇದೆ ಎಂದು ಹೇಳಿದ್ದರು. ಈ ಬಾಯ್ಕಾಟ್ ಬಿಟ್ಟು ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಆದರೆ, ನೋಡುಗರು ಆ ಮನವಿಯನ್ನು ಪುರಸ್ಕರಿಸಲೇ ಇಲ್ಲ. ಹಾಗಾಗಿ ಸಿನಿಮಾ ಶುರುವಿನಿಂದಲೇ ಬಾಕ್ಸ್ ಆಫೀಸಿನಲ್ಲಿ ಕುಂಟುತ್ತಲೇ ಸಾಗಿತ್ತು. ಇದೀಗ ನೂರು ಕೋಟಿ ಕ್ಲಬ್ ಸೇರುವ ಮೂಲಕ ಆಮೀರ್ ಗೌರವ ಉಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ‘ಲೈಗರ್’ ಚಿತ್ರಕ್ಕೂ ಬಾಯ್ಕಾಟ್ ಬಿಸಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್

    ವಿಜಯ್ ದೇವರಕೊಂಡ ‘ಲೈಗರ್’ ಚಿತ್ರಕ್ಕೂ ಬಾಯ್ಕಾಟ್ ಬಿಸಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್

    ವಾರವಷ್ಟೇ ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ನ ಲೈಗರ್ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಿನಿಮಾ ಬಿಡುಗಡೆಗೂ ಮುನ್ನ ಈ ಚಿತ್ರವನ್ನು ಯಾರೂ ನೋಡದಂತೆ ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಈಗಾಗಲೇ ಟ್ವಿಟರ್ ನಲ್ಲಿ ಬಾಯ್ಕಾಟ್ ಲೈಗರ್ ಟ್ರೆಂಡ್ ಕೂಡ ಆಗಿದೆ.

    ಆಮೀರ್ ಖಾನ್, ಅಕ್ಷಯ್ ಕುಮಾರ್, ಅನುರಾಗ್ ಕಶ್ಯಪ್ ಅವರ ಸಿನಿಮಾಗಳನ್ನು ಕ್ರಮವಾಗಿ ಬಾಯ್ಕಾಟ್ ಮಾಡಿಕೊಂಡೇ ಬಂದಿರುವ ನೆಟ್ಟಿಗರು ಈ ಬಾರಿ ಲೈಗರ್ ಸಿನಿಮಾದ ಹಿಂದೆ ಬಿದ್ದಿದ್ದಾರೆ. ಕಾರಣ ವಿಜಯ್ ದೇವರಕೊಂಡ ಮತ್ತು ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಕರಣ್ ಜೋಹಾರ್ ಎಂದು ಹೇಳಲಾಗುತ್ತಿದೆ. ದಕ್ಷಿಣದ ಸಿನಿಮಾಗಳನ್ನು ಕರಣ್ ಜೋಹಾರ್ ಬೆಳೆಯಲು ಬಿಡುತ್ತಿರಲಿಲ್ಲ. ಹಾಗಾಗಿ ಅವರ ಪ್ರೊಡಕ್ಷನ್ ಹೌಸ್ ನಿಂದ ಬಂದಿರುವ ಲೈಗರ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಿದೆ ಎನ್ನುತ್ತಾರೆ ಹಲವರ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಅಲ್ಲದೇ ವಿಜಯ್ ದೇವರಕೊಂಡ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಮಾತನಾಡುತ್ತಾ, ಅದು ಕೇವಲ ಆಮೀರ್ ಖಾನ್ ಅವರ ಸಿನಿಮಾವಲ್ಲ. ಆ ಸಿನಿಮಾ ನಿರ್ಮಾಣದ ಹಿಂದೆ 250ಕ್ಕೂ ಹೆಚ್ಚು ಜನರ ಶ್ರಮವಿರುತ್ತದೆ. ಹಾಗಾಗಿ ಬಾಯ್ಕಾಟ್ ಮಾಡಬೇಡಿ ಎಂದು ಆಮೀರ್ ಪರವಾಗಿ ಮಾತನಾಡಿದ್ದರಂತೆ. ಈ ವಿಷಯವಾಗಿಯೂ ಲೈಗರ್ ಸಿನಿಮಾ ಬಾಯ್ಕಾಟ್ ಸಂಕಟವನ್ನು ಅನುಭವಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಸಿನಿಮಾ ಬಾಯ್ಕಾಟ್: ಪ್ರೇಕ್ಷಕರನ್ನು ಬೆದರಿಸುತ್ತಿದ್ದಾರಂತೆ ನಟ ಅರ್ಜುನ್ ಕಪೂರ್

    ಹಿಂದಿ ಸಿನಿಮಾ ಬಾಯ್ಕಾಟ್: ಪ್ರೇಕ್ಷಕರನ್ನು ಬೆದರಿಸುತ್ತಿದ್ದಾರಂತೆ ನಟ ಅರ್ಜುನ್ ಕಪೂರ್

    ಬಾಲಿವುಡ್ ಸಿನಿಮಾಗಳ, ಅದರಲ್ಲೂ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಡ ಹಾಕಿದವರ ಮೇಲೆ ನಟ ಅರ್ಜುನ್ ಕಪೂರ್ ಗರಂ ಆಗಿದ್ದರು. ಇಂತಹ ಶಕ್ತಿಗಳನ್ನು ಬೆಳೆಯಲು ಬಿಡಬಾರದು, ಬೆಳೆಯುತ್ತಿರುವಾಗಲೇ ಕಿತ್ತು ಬೀಸಾಕಬೇಕು ಎಂದು ಹೇಳಿದ್ದರು. ಅರ್ಜುನ್ ಕಪೂರ್ ಈ ಹೇಳಿಕೆ ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಹಾಗಾಗಿ ಬಿಜೆಪಿ ಮುಖಂಡರು ಅರ್ಜುನ್ ಮಾತಿಗೆ ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

    ಬಿ.ಜೆ.ಪಿ ಮುಖಂಡ, ಮಧ್ಯ ಪ್ರದೇಶದ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಮಾತನಾಡಿ, ಬಾಲಿವುಡ್ ನಟ ಅರ್ಜುನ್ ಕಪೂರ್ ಪ್ರೇಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಭಯ ಹುಟ್ಟಿಸುತ್ತಿದ್ದಾರೆ. ಯಾವ ಕಾರಣಕ್ಕೆ ಸಿನಿಮಾಗಳನ್ನು ಬಾಯ್ಕಾಟ್ ಮಾಡಲಾಗುತ್ತಿದೆ ಎನ್ನುವುದನ್ನು ಅರ್ಜುನ್ ಅರಿಯಲಿ ಎಂದು ಅವರು ಹೇಳಿಕೆ ನೀಡಿದ್ದಾರೆ. ಯಾವುದೇ ರೀತಿಯಲ್ಲಿ ನೀವು ಹೆದರಿಸಿದರೂ, ಪ್ರೇಕ್ಷಕರು ಹೆದರುತ್ತಾರೆ ಎಂಬ ತಪ್ಪು ಕಲ್ಪನೆ ಇದ್ದರೆ ಕೈ ಬಿಡಿ ಎಂದಿದ್ದಾರೆ ಮಿಶ್ರಾ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕೆಂದು ಹಲವರು ಕರೆ ನೀಡಿದ್ದಾರೆ. ಅದರಲ್ಲೂ ಹಿಂದೂ ವಿರೋಧಿ ನಟ, ನಟಿಯರ ಹಾಗೂ ನಿರ್ದೇಶಕರ ಚಿತ್ರಗಳನ್ನು ನೋಡಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿರುವ ಕುರಿತು ಅರ್ಜುನ್ ಕಪೂರ್ ಬೇಸರ ವ್ಯಕ್ತ ಪಡಿಸಿದ್ದರು. ಇಂತಹ ಶಕ್ತಿಗಳನ್ನು ತಡೆಯಬೇಕು ಎಂದು ಅವರು ಕರೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    ಬಾಲಿವುಡ್ ಸಿನಿಮಾಗಳ ಬಗ್ಗೆ, ಅದರಲ್ಲೂ ಖಾನ್ ಕುಟುಂಬದ ಸಿನಿಮಾಗಳ ಬಗ್ಗೆ ವಿಪರೀತ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ. ಆಮೀರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟಿಗೆ ಬಲಿಯಾಗಿದೆ. ಅಲ್ಲದೇ, ಇನ್ನೂ ಹಲವು ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಎದ್ದಿದೆ. ಇದರ ಬೆನ್ನಲ್ಲೆ ನಟ ಅರ್ಜುನ್ ಕಪೂರ್ ಈ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

    ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕರೀನಾ ಕಪೂರ್ ಕೂಡ ನಾಯಕಿಯಾಗಿ ನಟಿಸಿದ್ದಾರೆ. ಹೀಗಾಗಿ ಕರೀನಾ ಬೆನ್ನಿಗೆ ನಿಂತಿರುವ ಅರ್ಜುನ್ ಕಪೂರ್, ಬಾಯ್ಕಾಟ್ ಟ್ರೆಂಡ್ ಯಾರಿಗೂ ಒಳ್ಳೆಯದಲ್ಲ. ಇದರಿಂದ ಅದೆಷ್ಟು ಕುಟುಂಬಗಳ ನಾಶವಾಗುತ್ತವೆ ಎನ್ನುವ ಅರಿವು ಹೋರಾಟ ಮಾಡುತ್ತಿರುವವರಿಗೆ ಇಲ್ಲ. ಅಲ್ಲದೇ, ಇಂತಿಷ್ಟೇ ಜನರನ್ನೇ ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ಚಿಗುರಿನಲ್ಲೇ ಚಿವುಟ ಬೇಕು ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.  ಇದನ್ನೂ ಓದಿ:ಶಿವಣ್ಣ -ಪ್ರಭುದೇವ ಹೊಸ ಪ್ರಾಜೆಕ್ಟ್‌ಗೆ ಈ ನಾಯಕಿಯರು ಫಿಕ್ಸ್

    ಆಮೀರ್ ಖಾನ್ ಸಿನಿಮಾ ಅಷ್ಟೇ ಅಲ್ಲ, ಇನ್ನೂ ಹಲವು ಸಿನಿಮಾಗಳಿಗೆ ಬಾಯ್ಕಾಟ್ ಬಿಸಿ ತಾಗಿದೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರಕ್ಕೂ ಬಾಯ್ಕಾಟ್ ಹೇಳಲಾಗಿತ್ತು. ಶಾರುಖ್ ಖಾನ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂಬ ಕೂಗು ಎದ್ದಿದೆ. ಹೀಗೆ ಆದರೆ, ಬಾಲಿವುಡ್ ಸಿನಿಮಾಗಳು ಸೋಲಿನಲ್ಲೇ ಸಾವನ್ನಪ್ಪಬೇಕಾಗುತ್ತವೆ. ಹಾಗಾಗಿ ಇದರ ವಿರುದ್ಧ ದೊಡ್ಡ ಮಟ್ಟದಲ್ಲೇ ಧ್ವನಿ ಎತ್ತಬೇಕು ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಾಲ್ ಸಿಂಗ್ ಚಡ್ಡಾ: ಸ್ಪೆಷಲ್ ಮನವಿ ಮಾಡಿದ ಕರೀನಾ ಕಪೂರ್

    ಲಾಲ್ ಸಿಂಗ್ ಚಡ್ಡಾ: ಸ್ಪೆಷಲ್ ಮನವಿ ಮಾಡಿದ ಕರೀನಾ ಕಪೂರ್

    ಮೀರ್ ಖಾನ್ ಮತ್ತು ಕರೀನಾ ಕಪೂರ್ ಕಾಂಬಿನೇಷನ್ ನ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗಿ ಮೂರ್ನಾಲ್ಕು ದಿನಗಳು ಕಳೆದಿವೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಬಾಯ್ಕಾಟ್ ಬಿಸಿ ಎದುರಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಟ್ರೆಂಡ್ ವೈರಲ್ ಆಗಿದ್ದರಿಂದ ಚಿತ್ರ ರಿಲೀಸ್ ಆದ ನಂತರವೂ ಸಾವಿರಾರು ಸ್ಕ್ರೀನ್ ಗಳಲ್ಲಿ ಪ್ರದರ್ಶನ ರದ್ದು ಮಾಡಲಾಗಿತ್ತು. ಆಮೀರ್ ಖಾನ್ ವೃತ್ತಿ ಜೀವನದ ಅತ್ಯಂತ ಕಳೆ ಪ್ರದರ್ಶನ ಕಂಡ ಸಿನಿಮಾ ಇದಾಗಿದೆ ಎನ್ನಲಾಗುತ್ತಿದೆ.

    ಬಾಯ್ಕಾಟ್ ಕೂಗು ಜೋರಾಗುತ್ತಿದ್ದಂತೆಯೇ ಸ್ವತಃ ಆಮೀರ್ ಖಾನ್ ಅಖಾಡಕ್ಕೆ ಇಳಿದರು. ಬಾಯ್ಕಾಟಿಗೆ ಕಾರಣವಾಗಿದ್ದ ವಿಷಯದ ಕುರಿತು ಮಾತನಾಡಿ, ಕ್ಷಮೆ ಕೂಡ ಕೇಳಿದರು. ತಮಗೆ ದೇಶದ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು. ಆಮೀರ್ ಏನೇ ಹೇಳಿದರೂ, ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಹಿಂದೂಪರ ಕಾರ್ಯಕರ್ತರು ಘೋಷಿಸಿ ಆಗಿತ್ತು. ಅದರಿಂದ ಸಿನಿಮಾಗೆ ತೊಂದರೆಯ ಆಯಿತು.

    ಇದೀಗ ಈ ಕುರಿತಂತೆ ಕರೀನಾ ಕಪೂರ್ ಅಭಿಮಾನಿಗಳಿಗೆ ಮತ್ತು ಹಿಂದೂಪರ ಕಾರ್ಯಕರ್ತರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಸಿನಿಮಾ ಬಾಯ್ಕಾಟ್ ಮಾಡುವುದರಿಂದ ಹಲವರಿಗೆ ತೊಂದರೆ ಆಗಲಿದೆ. 250ಕ್ಕೂ ಹೆಚ್ಚು ಜನರು ಈ ಸಿನಿಮಾಗಾಗಿ ಕೆಲಸ ಮಾಡಿದ್ದೇವೆ. ಬರೋಬ್ಬರಿ ಎರಡು ವರ್ಷಗಳ ಕಾಲ ಶ್ರಮ ಹಾಕಿದ್ದೇವೆ. ಈ ಕಾರಣಕ್ಕಾಗಿ ಬಾಯ್ಕಾಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ಒಂದು ಕಡೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟ್ ಬೆಂಕಿಗೆ ಇಂಚಿಂಚು ಸುಡುತ್ತಿದ್ದರೆ, ಇತ್ತ ಕಡೆ ಇದೇ ಕಾರಣಕ್ಕಾಗಿ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರಕ್ಕೂ ಬಹಿಷ್ಕಾರದ ಬಿಸಿ ತಾಗಿಕೆ. ಈಗಾಗಿ ಎರಡೂ ಸಿನಿಮಾಗಳ ಬಾಕ್ಸ್ ಆಫೀಸ್ ರಿಪೋರ್ಟ್ ಅಷ್ಟಕಷ್ಟೇ ಇದೆ. ರಕ್ಷಾ ಬಂಧನಕ್ಕಿಂತಲೂ ಲಾಲ್ ಸಿಂಗ್ ಚಡ್ಡಾ ಕಲೆಕ್ಷನ್ ಓಕೆ ಎನ್ನುವಂತಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಲ್ಲಿ ಶುರುವಾಗಿದೆ ಬೈಕಾಟ್ ಆಂದೋಲನ : ಕಂಗನಾ ಟಾರ್ಗೆಟ್

    ಬಾಲಿವುಡ್ ನಲ್ಲಿ ಶುರುವಾಗಿದೆ ಬೈಕಾಟ್ ಆಂದೋಲನ : ಕಂಗನಾ ಟಾರ್ಗೆಟ್

    ಬಿಟೌನ್ ನಲ್ಲಿ ಎರಡು ಮೆಗಾ ಬಜೆಟ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಮುಂದಿನ ವಾರ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗುತ್ತಿದ್ದರೆ, ಇದರ ಬೆನ್ನಿಂದೆಯೇ ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯ ರಕ್ಷಾ ಬಂಧನ್ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಈ ಎರಡೂ ಚಿತ್ರಗಳಿಗೂ ಬೈಕಾಟ್ ಬೇನೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಟ್ರೆಂಡ್ ಕ್ರಿಯೇಟ್ ಆಗಿದೆ.

    ಆಮೀರ್ ಖಾನ್ ಎರಡ್ಮೂರು ವರ್ಷಗಳ ಹಿಂದೆ ದೇಶದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಮತ್ತು ಪಿಕೆ ಸಿನಿಮಾದಲ್ಲಿ ಹಿಂದೂ ದೇವರಿಗೆ ಅಗೌರವ ತೋರಿದ್ದಾರೆ ಎನ್ನುವ ಕಾರಣಕ್ಕಾಗಿ ಲಾಲ್ ಸಿಂಗ್ ಚಡ್ಡಾವನ್ನು ಹಿಂದೂಗಳು ನೋಡಬಾರದು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಅದಕ್ಕೆ ಧ್ವನಿಗೂಡಿಸಿದ್ದಾರೆ. ಈ ಕುರಿತು ಸ್ವತಃ ಆಮೀರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಭಾರತವನ್ನು ಪ್ರೀತಿಸುವಂತವನು ಎಂದು ಹೇಳುವ ಮೂಲಕ ಸಮಾಧಾನಿಸಿದ್ದಾರೆ. ಇದನ್ನೂ ಓದಿ:ಪತಿ ಪಾದದ ಬಳಿ ಕೂತು ಪೂಜಿಸಿದಕ್ಕೆ ಟ್ರೋಲ್ ಆದ ನಟಿ ಪ್ರಣಿತಾ

    ಇತ್ತ ದೇಶಪರ, ದೇಶಭಕ್ತಿ ಸಾರುವಂತಹ ಅನೇಕ ಚಿತ್ರಗಳನ್ನು ಮಾಡಿರುವ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನಕ್ಕೆ ಕಥೆ ಬರೆದವರು ಕೂಡ ಹಿಂದೂಗಳಿಗೆ ಅವಹೇಳನ ಮಾಡುವಂತಹ ಟ್ವಿಟ್ ಗಳನ್ನು ಮಾಡಿದ್ದರು ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನೂ ಬೈಕಾಟ್ ಮಾಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇದಕ್ಕೆ ಕಂಗನಾ ರಣಾವತ್ ಕೂಡ ಧ್ವನಿ ಎತ್ತಬೇಕು ಎಂದು ಒತ್ತಡ ಹೇರಿದ್ದಾರೆ. ಇದಕ್ಕೂ ಉತ್ತರ ನೀಡಿದ ಕಂಗನಾ, ದೇಶ ಮತ್ತು ಹಿಂದೂಗಳ ಪರ ಯಾರೇ ಅಗೌರವ ತೋರಿದರೂ, ಅಂತಹ ಸಿನಿಮಾಗಳನ್ನು ಒಪ್ಪಬೇಡಿ ಎಂದು ಟ್ವಿಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಇದು ಆಮೀರ್ ಖಾನ್ ಮಾಡಿರುವ ಸಂಚು ಎಂದು ಆರೋಪಿಸಿದ ಕಂಗನಾ

    ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಇದು ಆಮೀರ್ ಖಾನ್ ಮಾಡಿರುವ ಸಂಚು ಎಂದು ಆರೋಪಿಸಿದ ಕಂಗನಾ

    ಮ್ಮ ಸಿನಿಮಾಗೆ ಪ್ರಚಾರ ಸಿಗಲಿ ಎಂದು, ಸಿನಿಮಾ ರಿಲೀಸ್ ಗೂ ಮುನ್ನ ನೆಗೆಟಿವ್ ಸುದ್ದಿ ಹರಡಲಿ ಎಂದು ಸ್ವತಃ ಆಮೀರ್ ಖಾನ್ ಅವರೇ ಈ ರೀತಿ ಸಂಚು ಮಾಡಿದ್ದಾರೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ. ಈ ವರ್ಷ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಗೆದ್ದಿರುವುದು ಕೇವಲ ಮೂರೇ ಮೂರು ಸಿನಿಮಾಗಳು. ಈ ಭಯ ಇರುವುದರಿಂದಲೇ ಆಮೀರ್ ಖಾನ್ ನೆಗೆಟಿವ್ ಪಬ್ಲಿಸಿಟಿ ಮಾಡುತ್ತಿದ್ದಾರೆ ಎಂದಿದ್ದಾರೆ ಕಂಗನಾ.

    ಲಾಲ್ ಸಿಂಗ್ ಚಡ್ಡಾ ಸಿನಿಮಾ ಇದೊಂದು ರೀಮೇಕ್ ಚಿತ್ರ. ಈ ಕುರಿತೂ ಕಂಗನಾ ಲೇವಡಿ ಮಾಡಿದ್ದು, ಬಾಲಿವುಡ್ ನಲ್ಲಿ ರೀಮೇಕ್ ಸಿನಿಮಾಗಳು ವರ್ಕ್ ಆಗುವುದಿಲ್ಲ. ಈ ನೆಲದ ಕಥೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಮಾಡಲಿ. ಹಿಂದೂ ದೇವರನ್ನು ಹೀಯಾಳಿಸಿ ಮಾಡಿದ ಪಿಕೆ ಚಿತ್ರವೇ ಸೂಪರ್ ಹಿಟ್ ಸಿನಿಮಾ ಎನ್ನುವಂತೆ ಬಿಂಬಿಸಲಾಗುತ್ತಿದೆ. ಅದರಿಂದ ಆಚೆ ಬಂದು ಈ ಸಮಾಜಕ್ಕೆ ಉತ್ತಮ ಸಿನಿಮಾ ಕೊಟ್ಟೆ ಎನ್ನುವ ಸಮಾಧಾನ ಅವರಿಗೆ ಬರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಪಾತ್ರದಲ್ಲಿ ಕಂಗನಾ ರಣಾವತ್

    ಗಂಗೂಬಾಯಿ ಕಾಥಿಯಾವಾಡಿ, ದಿ ಕಾಶ್ಮೀರ್ ಫೈಲ್ಸ್, ಭೂಲ್ ಭುಲಯ್ಯ ಸಿನಿಮಾಗಳನ್ನು ಹೆಸರಿಸಿರುವ ಕಂಗನಾ, ಈ ಚಿತ್ರಗಳಷ್ಟೇ ಬಾಲಿವುಡ್ ನಲ್ಲಿ ಗೆದ್ದಿವೆ. ದಿ ಕಾಶ್ಮೀರ್ ಫೈಲ್ಸ್ ಸತ್ಯದ ಅನಾವರಣಕ್ಕೆ ಸಾಕ್ಷಿ ಆಯಿತು. ಇನ್ನೊಂದು ಸಿನಿಮಾ ನೈಜ ಕಥೆಯನ್ನು ಆಧರಿಸಿತ್ತು. ಮತ್ತೊಂದು ಕಾಮಿಡಿ. ಕಾಮಿಡಿ ಸಿನಿಮಾವಾಗಿದ್ದರೂ, ಅಲ್ಲಿ ಯಾರ ಮನಸ್ಸಿಗೂ ನೋವನ್ನುಂಟು ಮಾಡುವಂತಹ ಕಥೆ ಇರಲಿಲ್ಲವೆಂದು ಆಮೀರ್ ಖಾನ್ ಅವರನ್ನು ಕಾಲೆಳೆದಿದ್ದಾರೆ ಕಂಗನಾ.

    Live Tv
    [brid partner=56869869 player=32851 video=960834 autoplay=true]

  • ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಕ್ಯಾರೆ ಅನಬಾರದು ಎಂದು ಟಾಂಗ್ ಕೊಟ್ಟ ನಟಿ ಕರಿಷ್ಮಾ

    ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಕ್ಯಾರೆ ಅನಬಾರದು ಎಂದು ಟಾಂಗ್ ಕೊಟ್ಟ ನಟಿ ಕರಿಷ್ಮಾ

    ದೇ ತಿಂಗಳು ಬಾಲಿವುಡ್  ಖ್ಯಾತ ನಟ ಆಮೀರ್ ಖಾನ್ ನಟನೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಆಮೀರ್ ಖಾನ್ ಈ ಹಿಂದೆ ಆಡಿದ ಮಾತುಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರವನ್ನು ಬೈಕಾಟ್ ಮಾಡಬೇಕು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.

    ಈ ಕುರಿತಂತೆ ಸ್ವತಃ ಆಮೀರ್ ಖಾನ್ ಮೊನ್ನೆಯಷ್ಟೇ ಮಾತನಾಡಿದ್ದು, ನಾನು ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ. ದೇಶ ವಿರೋಧಿ ಮಾತುಗಳನ್ನು ಆಡಿಲ್ಲ. ಆದರೂ, ನನ್ನ ಮೇಲೆ ದೇಶದ್ರೋಹದ ಮಾತುಗಳನ್ನು ಆಡಲಾಗುತ್ತಿದೆ. ಇದನ್ನೇ ನೆನಪಾಗಿಟ್ಟುಕೊಂಡು ಸಿನಿಮಾವನ್ನು ಬೈಕಾಟ್ ಮಾಡಬೇಕೆಂದು ಹೇಳಲಾಗುತ್ತಿದೆ. ಇದು ಸರಿಯಾದದ್ದು ಅಲ್ಲ. ಆ ರೀತಿ ಟ್ರೆಂಡ್ ಮಾಡಬೇಡಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ:‘ಗಾಳಿಪಟ 2’ ಟ್ರೇಲರ್ ಮೂಲಕ ಮತ್ತೊಮ್ಮೆ ಗೆದ್ದ ಯೋಗರಾಜ್ ಭಟ್

    ಈ ಬೈಕಾಟ್ ಕುರಿತಂತೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಕರಿಷ್ಮಾ, ವಿರೋಧಿಗಳಿಗೆ ಸಖತ್ ಚಾಟಿ ಬೀಸಿದ್ದು, ಬೈಕಾಟ್ ವಿಚಾರದಲ್ಲಿ ಕ್ಯಾರೆ ಅನಬಾರದು ಅಂದಿದ್ದಾರೆ. ಈ ಸಿನಿಮಾವನ್ನು ನೋಡಿ, ಆನಂತರ ಮಾತನಾಡಿ ಎಂದೂ ಅವರು ತಿಳಿಸಿದ್ದಾರೆ. ಕೆಲವರು ಮಾತ್ರ ಈ ರೀತಿ ಆಡುತ್ತಿದ್ದಾರೆ. ಉಳಿದವರು ಬೆಂಬಲಿಸಿದ್ದಾರೆ. ಹಾಗಾಗಿ ಬೈಕಾಟ್ ಅನ್ನುವವರನ್ನು ಗಣನೆಗೆ ತಗೆದುಕೊಳ್ಳಬೇಡಿ ಎಂದು ಆಮೀರ್ ಗೆ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

    ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

    ಮೀರ್ ಖಾನ್ ನಟಿಸಿ, ನಿರ್ಮಾಣ ಮಾಡಿರುವ ‘ಲಾಲ್ ಸಿಂಗ್ ಚಡ್ಡ’ ಸಿನಿಮಾ ಇದೇ ಆಗಸ್ಟ್ 11 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ಬಿಡುಗಡೆಗೆ ಭರ್ಜರಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ಒಂದು ಕಡೆ ಆಮೀರ್ ಖಾನ್ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದರೆ, ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಬೈಕಾಟ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಅಭಿಮಾನಿಯಾನ ಶುರು ಮಾಡಿದ್ದಾರೆ.

    ಹಲವು ವರ್ಷಗಳ ಹಿಂದೆ  ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಇರಲು ನನ್ನ ಪತ್ನಿಗೂ ನನಗೂ ಕಷ್ಟವಾಗುತ್ತಿದೆ. ದೇಶ ತೊರೆಯುವಂತಹ ವಾತಾವರಣ ಉಂಟಾಗುತ್ತಿದೆ ಎಂದು ಬಹಿರಂಗವಾಗಿ ನುಡಿದಿದ್ದರು. ಆಗ ಆಮೀರ್ ಖಾನ್ ಮೇಲೆ ಅನೇಕರು ಮುಗಿಬಿದ್ದಿದ್ದರು. ಈಗಲೇ ನೀವು ದೇಶ ತೊರೆಯಬಹುದು ಎಂದು ಕಾಮೆಂಟ್ ಮಾಡಿದ್ದರು. ಈಗ ಅದನ್ನೇ ಇಟ್ಟುಕೊಂಡು ಬೈಕಾಟ್ ಅಭಿಯಾನ ಶುರು ಮಾಡಿದ್ದಾರೆ ಹಲವರು. ಹಾಗಾಗಿಯೇ ಈ ಕುರಿತು ಆಮೀರ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹುಲಿ ಜೊತೆ `777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ

    ನನ್ನನ್ನು ದೇಶವಿರೋಧಿ ಎನ್ನುವಂತೆ ಬಿಂಬಿಸಲಾಗುತ್ತಿದೆ. ನಾನು ಅಪ್ಪಟ ದೇಶಾಭಿಮಾನಿ. ನನಗೆ ದೇಶದ ಬಗ್ಗೆ ಹೆಮ್ಮೆಯಿದೆ. ಆದರೆ, ಯಾರೋ ಅದನ್ನು ನೆಗೆಟಿವ್ ಆಗಿ ಬಿಂಬಿಸುತ್ತಿದ್ದಾರೆ. ದಯವಿಟ್ಟು ಸಿನಿಮಾವನ್ನು ಬಹಿಷ್ಕರಿಸುವ ಮಾತುಗಳನ್ನು ಆಡಬೇಡಿ. ಎಲ್ಲರೂ ಬಂದು ಸಿನಿಮಾ ನೋಡಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಆಮೀರ್ ಕಾಮೆಂಟ್ ಮಾಡಿದ್ದಾರೆ. ದೇಶ ಪ್ರೇಮದ ಬಗ್ಗೆ ಅನುಮಾನ ವ್ಯಕ್ತ ಪಡಿಸಬೇಡಿ. ನನಗೂ ದೇಶದ ಬಗ್ಗೆ ಅಪಾರ ಅಭಿಮಾನವಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ಕ್ಷಿಣದ ಖ್ಯಾತತಾರೆ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಕಾಂಬಿನೇಷನ್ ನ ತೆಲುಗು ಸಿನಿಮಾ ‘ವಿರಾಟ ಪರ್ವಂ’ ಇಂದು ಬಿಡುಗಡೆ ಆಗಿದೆ. ಇದೊಂದು ನಕ್ಸಲ್ ಹಿನ್ನೆಲೆಯಾಗಿಟ್ಟುಕೊಂಡು ಮಾಡಿರುವ ಸಿನಿಮಾ. ನಕ್ಸಲ್ ಹೋರಾಟದಲ್ಲಿ ಭಾಗಿಯಾದ ಇಬ್ಬರು ಪ್ರೇಮಿಗಳ ಕಥನ ಮತ್ತು ಶೋಷಿತ ಸಮಾಜಕ್ಕಾಗಿ ಅವರು ಮಾಡುವ ತ್ಯಾಗವನ್ನು ತೋರಿಸುವ ಚಿತ್ರ ಇದಾಗಿದ್ದು, ಈ ಸಿನಿಮಾವನ್ನು ಬೈಕಾಟ್ ಮಾಡುವುದಾಗಿ ಹಿಂದೂಪರ ಸಂಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿವೆ.

    ಈ ಸಿನಿಮಾ ಬೈಕಾಟ್ ಮಾಡುವುದಕ್ಕೆ ಕಾರಣ, ಸಿನಿಮಾದ ಕಂಟೆಂಟ್ ಅಲ್ಲ. ಬದಲಿಗೆ ಈ ಚಿತ್ರದಲ್ಲಿ ನಟಿಸಿದ ನಾಯಕಿ ಸಾಯಿ ಪಲ್ಲವಿ ಅವರ ಹೇಳಿಕೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ಮಾತನಾಡುತ್ತಾ, ‘ಕಾಶ್ಮೀರದಲ್ಲಿ ನಡೆದ ಪಂಡಿತರ ನರಮೇಧ ಮತ್ತು ಲಾಕ್‌ಡೌನ್‌ ವೇಳೆಯಲ್ಲಿ ಗೋವನ್ನು ತಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಜೈ ಶ್ರೀರಾಮ್ ಎಂದು ಕೂಗುತ್ತಾ ಮಾಡಿದ ಹತ್ಯೆ ಎರಡೂ ಒಂದೇ. ಧರ್ಮದ ಹೆಸರಿನಲ್ಲಿ ಮಾಡುವ ಹತ್ಯೆಯನ್ನು ಸಹಿಸಿಕೊಳ್ಳಬಾರದು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಸಿನಿಮಾ ಬೈಕಾಟ್‌ಗೆ ಕಾರಣವಾಗಿದೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇವರ ಮಾತಿಗೆ ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv