Tag: boycott

  • ದೀಪಾವಳಿ ಹಬ್ಬಕ್ಕೂ ಮುನ್ನ ಧರ್ಮದ ಕಿಚ್ಚು – ಹಲಾಲ್‌ ಉತ್ಪನ್ನ ಬಹಿಷ್ಕಾರಕ್ಕೆ ಕರೆ

    ದೀಪಾವಳಿ ಹಬ್ಬಕ್ಕೂ ಮುನ್ನ ಧರ್ಮದ ಕಿಚ್ಚು – ಹಲಾಲ್‌ ಉತ್ಪನ್ನ ಬಹಿಷ್ಕಾರಕ್ಕೆ ಕರೆ

    ಬೆಂಗಳೂರು: ದೀಪಾವಳಿ(Deepavali) ಹಬ್ಬಕ್ಕೂ ಧರ್ಮದ ಕಿಚ್ಚು ಹೊತ್ತಿಕೊಂಡಿದೆ. ದೀಪಾವಳಿ ಹಬ್ಬಕ್ಕೆ ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನ(Halal Products) ಬಹಿಷ್ಕರಿಸಿ ಎಂದು ಹಿಂದೂ ಸಂಘಟನೆಗಳು(Hindu Organisations)  ಕರೆ ಕೊಟ್ಟಿವೆ.

    ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಮಹಾ ಸಭೆ ನಡೆಸಿರುವ ಹಿಂದೂ ಸಂಘಟನೆಗಳು ಪ್ರತಿ ಜಿಲ್ಲೆಗಳಲ್ಲೂ ಅಭಿಯಾನ ನಡೆಸಲು ಮುಂದಾಗಿವೆ. ಇದನ್ನೂ ಓದಿ: ಮತ್ತೆ ಶುರುವಾಯಿತು ಚಾಮರಾಜಪೇಟೆ ಮೈದಾನ ಫೈಟ್ – ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟು

    ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನು ಖರೀದಿಸದಂತೆ, ಕರಪತ್ರಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತೇವೆ. ನಮ್ಮ ಅಭಿಯಾನ ರಾಜ್ಯಾದ್ಯಾಂತ ನಡೆಯಲಿದೆ ಎಂದು ಹಿಂದೂ ಜನ ಜಾಗೃತಿ ವೇದಿಕೆಯ ಮೋಹನ್ ಗೌಡ ಹೇಳಿದ್ದಾರೆ.

    ಹಬ್ಬಕ್ಕೂ ಮುನ್ನವೇ ಮುಸ್ಲಿಮರ ಅಂಗಡಿಗಳಲ್ಲಿ ಹಲಾಲ್ ಮಾಂಸ ಖರೀದಿಸಬೇಡಿ. ಉತ್ಪನ್ನಗಳನ್ನೂ ಬಹಿಷ್ಕರಿಸಿ ಎಂಬ ಅಭಿಯಾನ ಶುರುವಾಗಿರುವುದು ಧರ್ಮದ ಕಿಡಿ ಹೆಚ್ಚಾಗುವಂತೆ ಮಾಡಿದೆ. ಹಿಂದೂಪರ ಸಂಘಟನೆಗಳ ಅಭಿಯಾನಗಳಿಗೆ ಕೆಲ ಮುಸ್ಲಿಂ ಮುಖಂಡರುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ

    ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ

    ನವದೆಹಲಿ: ಬಿಜೆಪಿ (MP) ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ (Parvesh Sahib Singh Verma) ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿದ್ದು, ಸಮುದಾಯದ ಹೆಸರು ಉಲ್ಲೇಖಿಸದೇ `ಪೂರ್ಣ ಬಹಿಷ್ಕಾರ’ಕ್ಕೆ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

    ಸಾರ್ವಜನಿಕ ಕಾರ್ಯಮವೊಂದರಲ್ಲಿ ಮಾತನಾಡಿದ ವರ್ಮಾ, ಅವರು ಕೈಗಾಡಿಗಳನ್ನು ತೆರೆಯುತ್ತಾರೆ, ಅಂತಹವರಿಂದ ನೀವು ತರಕಾರಿ ಖರೀದಿಸುವ ಅಗತ್ಯವಿಲ್ಲ. ಮೀನು (Fish), ಮಾಂಸದ (Meat Shops) ಅಂಗಡಿಗಳನ್ನು ತೆರೆಯುತ್ತಾರೆ. ಪರವಾನಗಿ ಹೊಂದಿಲ್ಲದಿದ್ದರೆ ಪುರಸಭೆ ಅವುಗಳನ್ನ ಬಂದ್ ಮಾಡಿಸಬೇಕು. ನೀವು ಅಂತಹವರನ್ನು ಸರಿಪಡಿಸಬೇಕು ಅಂದುಕೊಂಡಿದ್ದರೆ ಅದು ಪೂರ್ಣ ಬಹಿಷ್ಕಾರದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ನಾವು ಅವರನ್ನು ಬಹಿಷ್ಕರಿಸುತ್ತೇವೆ, ಅವರ ಬಳಿ ನಾವು ಏನನ್ನೂ ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಮುಸ್ಲಿಂ ಸಮುದಾಯದ (Muslim Community) ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದ್ದಾರೆ.

    ಈ ನಡುವೆ ಕೆಲ ಬಿಜೆಪಿ ಶಾಸಕರು ನಮ್ಮ ಸುಂದರ ದೆಹಲಿ ಹಂದಿಗಳ ನಗರವಾಗಿ ಮಾರ್ಪಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ವರ್ಮಾ, ಯಾವುದೇ ಧರ್ಮದ ಸಮುದಾಯವನ್ನು ಉಲ್ಲೇಖಿಸಿಲ್ಲ ಎಂಬುದಾಗಿ ಹೇಳಿದ್ದಾರೆ. ‌ಇದನ್ನೂ ಓದಿ: ಫಿಲ್ಮ್ ಫೇರ್: ಆ್ಯಕ್ಟ್ 1978 ಚಿತ್ರಕ್ಕೆ ನಾಲ್ಕು ಪ್ರಶಸ್ತಿ, ಅತ್ಯುತ್ತಮ ನಟ ಧನಂಜಯ್, ನಟಿ ಯಜ್ಞಾ

    ಈ ವೀಡಿಯೋವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi), ಬಿಜೆಪಿ ಮುಸ್ಲಿಮರ ವಿರುದ್ಧ ಯುದ್ಧ ಸಾರಿದೆ. ಆಡಳಿತ ಪಕ್ಷದ ಸಂಸದರೊಬ್ಬರು ರಾಜಧಾನಿಯಲ್ಲಿ ರಾಜಾರೋಷವಾಗಿ ಹೀಗೆ ಮಾತನಾಡಿದ್ದಾರೆ. ಆದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ (AmitShah) ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮೌನ ವಹಿಸಿದ್ದಾರೆ. ಹೀಗಾದರೆ ಸಂವಿಧಾನದ ಮೌಲ್ಯ ಏನಿದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

    ಈ ಬೆನ್ನಲ್ಲೇ ವರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ವಕ್ತಾರ ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಇನ್ನೂ ಯಾವುದೇ ದೂರುಗಳು ಬಂದಿಲ್ಲ. ಆದಾಗ್ಯೂ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಪರಿಶೀಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಯ್ಕಾಟ್ ನಡುವೆಯೂ ಗೆದ್ದು ಬೀಗಿದ ‘ಬ್ರಹ್ಮಾಸ್ತ್ರ’: ಬಾಲಿವುಡ್ ಗೆ ಜೀವ ತಂದ ರಣಬೀರ್ ಕಪೂರ್

    ಬಾಯ್ಕಾಟ್ ನಡುವೆಯೂ ಗೆದ್ದು ಬೀಗಿದ ‘ಬ್ರಹ್ಮಾಸ್ತ್ರ’: ಬಾಲಿವುಡ್ ಗೆ ಜೀವ ತಂದ ರಣಬೀರ್ ಕಪೂರ್

    ಣಬೀರ್ ಕಪೂರ್ ಮೇಲಿನ ಕೋಪದಿಂದಾಗಿ ಹಿಂದೂಪರ ಸಂಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್ ಬ್ರಹ್ಮಾಸ್ತ್ರ’ (Boycott) ಹೋರಾಟ ಶುರು ಮಾಡಿದ್ದರು. ರಣಬೀರ್ ಕಪೂರ್ ಗೋಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಅಸಂಖ್ಯಾತ ಹಿಂದೂಗಳ ಭಾವನೆಯನ್ನು ಕೆರಳಿಸಿದ್ದಾರೆ. ಹಾಗಾಗಿ ಬ್ರಹ್ಮಾಸ್ತ್ರ (Brahmastra) ಸಿನಿಮಾ ನೋಡಬೇಡಿ ಎಂದು ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಮಾಡಿದ್ದರು. ಅಲ್ಲದೇ, ರಣಬೀರ್ ಕಪೂರ್ ಅವರನ್ನು ದೇವಸ್ಥಾನದ ಒಳಗೂ ಬಿಟ್ಟುಕೊಳ್ಳಲಿಲ್ಲ. ಬ್ರಹ್ಮಾಸ್ತ್ರ ನೋಡದಿರುವಂತೆ ಏನೇ ತಡೆದರೂ, ಕೊನೆಗೂ ಸಿನಿಮಾ ಗೆದ್ದಿದೆ.

    ಬ್ರಹ್ಮಾಸ್ತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 75 ಕೋಟಿ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಏನೇ ನೆಗೆಟಿವ್ ಪ್ರಚಾರ ಮಾಡಿದರೂ, ಸಿನಿಮಾ ಚೆನ್ನಾಗಿದ್ದ ಕಾರಣಕ್ಕಾಗಿ ಜನರು ಮುಗಿಬಿದ್ದು ನೋಡುತ್ತಿದ್ದಾರೆ ಎಂದು ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಹಣದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ (Bollywood) ಸಿನಿಮಾವೊಂದು ಈ ಪ್ರಮಾಣದಲ್ಲಿ ದುಡ್ಡು ಮಾಡದೇ ಇರುವ ಕಾರಣಕ್ಕಾಗಿ ಬ್ರಹ್ಮಾಸ್ತ್ರ ಒಂದು ರೀತಿಯಲ್ಲಿ ಬಾಲಿವುಡ್ ಗೆ ಟಾನಿಕ್ ಅಂತಾಗಿದೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ ಕಾಂಬಿನೇಷನ್‍ನ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ದಕ್ಷಿಣದಲ್ಲಿ ಸ್ವತಃ ರಾಜಮೌಳಿ (Rajamouli) ಮತ್ತು ಜ್ಯೂನಿಯರ್ ಎನ್‍.ಟಿ.ಆರ್ ಮುಂದೆ ನಿಂತುಕೊಂಡು ಸಿನಿಮಾ ರಿಲೀಸ್ ಮಾಡಿಸಿದ್ದಾರೆ. ಈ ಚಿತ್ರಕ್ಕಾಗಿ ದೊಡ್ಡ ಪ್ರಮಾಣದ ಇವೆಂಟ್ ಕೂಡ ಹೈದರಾಬಾದ್‍ನಲ್ಲಿ ನಡೆಯೋದಿತ್ತು. ಪೊಲೀಸರು ಭದ್ರತೆ ನೀಡಲು ನಿರಾಕರಿಸಿದ ಕಾರಣದಿಂದಾಗಿ ಇವೆಂಟ್ ನಡೆಯಲಿಲ್ಲ. ಆದರೂ, ಸಿನಿಮಾ ಚೆನ್ನಾಗಿಯೇ ಓಪನಿಂಗ್ ಪಡೆದುಕೊಂಡಿದೆ. ಎರಡೇ ದಿನದಲ್ಲಿ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಲಿದೆ ಎಂದು ಅಂದಾಜಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಈಗಲೂ ನಾನು ಗೋಮಾಂಸ ತಿನ್ನುತ್ತೇನೆ’ ಎಂದಿರುವ ದಿ ಕಾಶ್ಮೀರ್ ಫೈಲ್ಸ್  ನಿರ್ದೇಶಕನ ವಿಡಿಯೋ ವೈರಲ್

    ‘ಈಗಲೂ ನಾನು ಗೋಮಾಂಸ ತಿನ್ನುತ್ತೇನೆ’ ಎಂದಿರುವ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ವಿಡಿಯೋ ವೈರಲ್

    ಗೋಮಾಂಸ (Beef) ತಿನ್ನುವ ವಿಚಾರವಾಗಿ ಬ್ರಹ್ಮಾಸ್ತ್ರ (Brahmastra) ಸಿನಿಮಾದ ನಟ ರಣಬೀರ್ ಕಪೂರ್ ಅವರನ್ನು ದೇವಸ್ಥಾನದ ಒಳಗೆ ಬಿಡಲಿಲ್ಲ ಎನ್ನುವ ವಿಚಾರ ಸಖತ್ ಸದ್ದು ಮಾಡಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಲು ಹೊರಟಿದ್ದ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ಅವರನ್ನು ದೇವಸ್ಥಾನದ ಒಳಗೆ ಹೋಗದಂತೆ ಭಜರಂಗ ದಳದ ಕಾರ್ಯಕರ್ತರು ತಡೆದಿದ್ದರು. ಅಲ್ಲದೇ, ಬ್ರಹ್ಮಾಸ್ತ್ರ ಸಿನಿಮಾ ಬಾಯ್ಕಾಟ್ (Boycott) ಅಭಿಯಾನ ಕೂಡ ಆರಂಭಿಸಿದ್ದಾರೆ. ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    ರಣಬೀರ್ ಕಪೂರ್ ಈ ಹಿಂದೆ ಹೇಳಿದ್ದ ವಿಡಿಯೋದಲ್ಲಿ ಗೋಮಾಂಸ ತಿನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಅದನ್ನೇ ಇಟ್ಟುಕೊಂಡು ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದ್ದವು. ಇದೀಗ ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files)  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri). ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ‘ನಾನು ಈ ಹಿಂದೇನೂ ಗೋಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ’ ಎಂದು ಹೇಳಿರುವ ಮಾತಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದಾ ಹಿಂದೂಪರ ಯೋಚನೆ ಮಾಡುವ ವಿವೇಕ್ ಬಗ್ಗೆ ಭಜರಂಗ ದಳ ಯಾಕೆ ಸುಮ್ಮನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

    ಗೋಮಾಂಸ ತಿನ್ನುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಸಿನಿಮಾಗಳನ್ನು ಬಹಿಷ್ಕರಿಸಬೇಕು ಮತ್ತು ಅವರನ್ನೂ ಯಾವುದೇ ದೇವಸ್ಥಾನದ ಒಳಗೆ ಬಿಡಕೂಡದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ರಣಬೀರ್ ಪರ ನಿಂತಿದ್ದ ಸಾಕಷ್ಟು ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಕೇವಲ ರಣಬೀರ್ ಗಷ್ಟೇ ಈ ಬಿಸಿ ತಾಗಬಾರದು, ವಿವೇಕ್ ಅಗ್ನಿಹೋತ್ರಿ ಮೇಲೂ ಕ್ರಮ ಆಗಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    kashmir

    ಸೋಷಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ವಿಡಿಯೋ ವೈರಲ್ ಆಗುತ್ತಿದ್ದರೂ, ಆ ಕುರಿತು ವಿವೇಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಹಿಂದೂಪರ ಸಂಘಟನೆಗಳ ಸದಸ್ಯರ ಹಾಗೂ ರಣಬೀರ್ ಕಪೂರ್ ಅಭಿಮಾನಿಗಳ ಮಧ್ಯೆ ಕಾಮೆಂಟ್ ಗಳ ಯುದ್ಧವೇ ಶುರುವಾಗಿದೆ. ಪರ ವಿರೋಧದ ಸಾಕಷ್ಟು ಸಂದೇಶಗಳು ಬರುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಸೀಸನ್ 9: ಕಾಫಿನಾಡು ಚಂದು ಇರದೇ ಇದ್ದರೆ ‘ಬಾಯ್ಕಾಟ್ ಬಿಗ್ ಬಾಸ್’ ಎಂದ ಫ್ಯಾನ್ಸ್

    ಬಿಗ್ ಬಾಸ್ ಸೀಸನ್ 9: ಕಾಫಿನಾಡು ಚಂದು ಇರದೇ ಇದ್ದರೆ ‘ಬಾಯ್ಕಾಟ್ ಬಿಗ್ ಬಾಸ್’ ಎಂದ ಫ್ಯಾನ್ಸ್

    ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಇನ್ನೇನು ಮುಕ್ತಾಯದ ಹಂತಕ್ಕೆ ತಲುಪಿದೆ. ಒಂದೂವರೆ ವಾರ ಕಳೆದರೆ ಓಟಿಟಿ ಮೊಲಸ ಸೀಸನ್ ಮುಕ್ತಾಯವಾಗಲಿದೆ. ಇದರ ಬೆನ್ನೆಲ್ಲೆ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ (Bigg Boss) ಸರಣಿ ಶುರುವಾಗಲಿದ್ದು, ಈಗಾಗಲೇ ವಾಹಿನಿಯು ಪ್ರೊಮೋ ಕೂಡ ರಿಲೀಸ್ ಮಾಡಿದೆ. ಹಾಗಾಗಿ ಆದಷ್ಟು ಬೇಗ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಲಿದೆ.

    ಓಟಿಟಿಯಲ್ಲಿ ಬಿಗ್ ಬಾಸ್ ಶುರುವಾಗುತ್ತಿದೆ ಎನ್ನುವಾಗಲೇ ಕಾಫಿ ನಾಡು ಚಂದು (Coffee Nadu Chandu) ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಅಸಂಖ್ಯಾತ ಕನ್ನಡಿಗರು ಬಯಸಿದ್ದರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹದ ಬರಹಗಳನ್ನೂ ಪ್ರಕಟಿಸಿದ್ದರು. ಬಿಗ್ ಬಾಸ್ ಮನೆಗೆ ಹೋಗುವ ಎಲ್ಲ ಅರ್ಹತೆಗಳೂ ಕಾಫಿನಾಡು ಚಂದುಗೆ ಇವೆ. ಹಾಗಾಗಿ ಅವರನ್ನು ಕಳುಹಿಸಿ ಎಂದೂ ಒತ್ತಾಯಿಸಿದರು. ಆದರೆ, ಕೊನೆಗೂ ಚಂದು ಮನೆಯಾಚೆ ಉಳಿದ. ಇದನ್ನೂ ಓದಿ:ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ

    ಈಗ ಬಿಗ್ ಬಾಸ್ ಸೀಸನ್ 9 ‍ಪ್ರೊಮೊ ಪ್ರಸಾರ ಕಾಣುತ್ತಿದ್ದಂತೆಯೇ ಮತ್ತೆ ಕಾಫಿ ನಾಡು ಚಂದು ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತದೆ. ಈ ಬಾರಿಯಾದರೂ ಚಂದು ಮನೆಗೆ ಹೋಗಬೇಕು ಎನ್ನುವುದು ಕೆಲವರು ಆಗ್ರಹ. ಈ ಬಾರಿ ಏನಾದರೂ ತಪ್ಪಿದರೆ ಬಾಯ್ಕಾಟ್ (Boycott) ಬಿಗ್ ಬಾಸ್ ಈ ರೀತಿ ಹೇಳಬೇಕಾಗುತ್ತದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾಫಿನಾಡು ಚಂದು ಇರಲೇಬೇಕು ಎಂದು ಒತ್ತಾಯಿಸಿದ್ದಾರೆ.

    ಹ್ಯಾಪಿ ಬರ್ತಡೇ ಹಾಡು ಹೇಳುವ ಮೂಲಕ ಫೇಮಸ್ ಆಗಿರುವ ಚಂದು, ತನ್ನದೇ ಆದ ಸಾಹಿತ್ಯದಿಂದ ಹಲವು ಗೀತೆಗಳನ್ನು ರಚಿಸಿ, ವಿಚಿತ್ರವಾಗಿ ಹಾಡುತ್ತಾನೆ. ಅದರಲ್ಲೂ ‘ನಾನು ಪುನೀತ್ (Puneeth Rajkumar) ಅಣ್ಣ ಮತ್ತು ಶಿವಣ್ಣನ (Shivrajkumar) ಅಭಿಮಾನಿ’ ಎಂದು ಹೇಳುತ್ತಾ ಮಾತು ಆರಂಭಿಸುತ್ತಾನೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಚಂದುಗೆ ಅಕ್ಷಾಂತರ ಫಾಲೋವರ್ಸ್ ಇದ್ದಾರೆ. ಹೀಗಾಗಿ ಬಾಯ್ಕಾಟ್ ಭಯವನ್ನು ಹುಟ್ಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಗೋಮಾಂಸ ನನಗಿಷ್ಟ’ ಎಂದು ಹೇಳಿದ್ದ ರಣಬೀರ್ ಕಪೂರ್ ಸಿನಿಮಾಗೆ ಎದುರಾಯ್ತು ಸಂಕಷ್ಟ

    ‘ಗೋಮಾಂಸ ನನಗಿಷ್ಟ’ ಎಂದು ಹೇಳಿದ್ದ ರಣಬೀರ್ ಕಪೂರ್ ಸಿನಿಮಾಗೆ ಎದುರಾಯ್ತು ಸಂಕಷ್ಟ

    ಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾ ಥಿಯೇಟರ್ ಗೆ ಬರಲು ಸಿದ್ಧತೆ ಮಾಡಿಕೊಂಡಿದೆ. ಆಲಿಯಾ ಭಟ್ ಗರ್ಭಿಣಿ ಆಗಿದ್ದರೂ, ಸಿನಿಮಾದ ಪ್ರಚಾರಕ್ಕಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದಾರೆ. ರಣಬೀರ್ ಕೂಡ ನಾನಾ ರಾಜ್ಯಗಳ ಪ್ರವಾಸ ಮಾಡಿ, ಈ ಚಿತ್ರದ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಸಮಯದಲ್ಲಿ ಹಲವು ವರ್ಷಗಳಿ ಹಿಂದೆ ಸಂದರ್ಶನದಲ್ಲಿ ಹೇಳಿದ್ದ ಹೇಳಿ ಬ್ರಹ್ಮಾಸ್ತ್ರ ಸಿನಿಮಾಗೆ ಸಂಕಷ್ಟ ತಂದಿದೆ.

    ತಮ್ಮದು ಮಾಂಸಪ್ರಿಯ ಕುಟುಂಬ. ಗೋಮಾಂಸ ಸೇರಿದಂತೆ ನಾನಾ ರೀತಿಯ ನಾನ್ ವೆಜ್ ತಿನ್ನುತ್ತೇವೆ. ಅದರಲ್ಲೂ ನನಗೆ ಗೋಮಾಂಸ ಅಂದರೆ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಈ ಮಾತೇ ಅವರಿಗೆ ಮುಳುವಾಗಿದೆ. ಗೋವನ್ನು ದೇವರೆಂದು ಪೂಜಿಸುವವರು ಈ ಮಾತನ್ನು ಕೇಳಲು ಸಿದ್ಧರಿಲ್ಲ. ಹಾಗಾಗಿ ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಇದು ಹತ್ತು ವರ್ಷಗಳ ಹಿಂದಿನ ವಿಡಿಯೋವಾಗಿದ್ದರೂ, ಆಗಿನ್ನೂ ಗೋಮಾಂಸ ನಿಷೇಧ ಇಲ್ಲದೇ ಇದ್ದರೂ ಈಗ ಆ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ. ಹಿಂದೂ ವಿರೋಧಿಗಳ ಸಿನಿಮಾವನ್ನು ನೋಡಬೇಡಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಈ ಹಿಂದೆ ಆಲಿಯಾ ಭಟ್ ಆಡಿದ ಮಾತುಗಳು ಕೂಡ ಬೆಂಕಿಯಲ್ಲಿ ತುಪ್ಪು ಸುರಿದಂತಾಗಿವೆ. ಒಟ್ಟಿನಲ್ಲಿ ಬ್ರಹ್ಮಾಸ್ತ್ರ ಸಿನಿಮಾಗೆ ಎಲ್ಲ ಕಡೆಯಿಂದಲೂ ವಿಘ್ನ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅನಕೊಂಡ ಅಂತ ಬೈದ ಥಿಯೇಟರ್ ಮಾಲೀಕನನ್ನು ಭೇಟಿ ಮಾಡಿದ ವಿಜಯ್ ದೇವರಕೊಂಡ

    ಅನಕೊಂಡ ಅಂತ ಬೈದ ಥಿಯೇಟರ್ ಮಾಲೀಕನನ್ನು ಭೇಟಿ ಮಾಡಿದ ವಿಜಯ್ ದೇವರಕೊಂಡ

    ಮುಂಬೈನ ಸುಪ್ರಸಿದ್ಧ ಮರಾಠ ಮಂದಿರ್ ಥಿಯೇಟರ್ ಮಾಲೀಕ ಮನೋಜ್ ದೇಸಾಯಿ ಎರಡು ದಿನಗಳ ಹಿಂದೆಯಷ್ಟೇ ವಿಜಯ್ ದೇವರಕೊಂಡ ಅವರನ್ನು ಹಿಗ್ಗಾಮುಗ್ಗ ಬೈದಿದ್ದರು. ಲೈಗರ್ ಸಿನಿಮಾದಲ್ಲಿ ನಟಿಸಿರುವ ಆ ವಿಜಯ್ ದೇವರಕೊಂಡ ಎನ್ನುವ ನಟ, ದೇವರಕೊಂಡ ಅಲ್ಲ, ಅನಕೊಂಡ ಎಂದು ಜರಿದಿದ್ದರು. ಮನೋಜ್ ದೇಸಾಯಿ ಆಡಿದ ಮಾತುಗಳ ವಿಡಿಯೋ ಸಖತ್ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ವಿಜಯ್ ಮುಬೈಗೆ ತೆರಳಿ, ಮನೋಜ್ ದೇಸಾಯಿ ಅವರನ್ನು ಭೇಟಿ ಮಾಡಿದ್ದಾರೆ.

    ವಿಜಯ್ ದೇವರಕೊಂಡ ಮೊದಲ ಸಿನಿಮಾದಲ್ಲೇ ಅಹಂಕಾರ ತೋರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಮನೋಜ್ ದೇಸಾಯಿ ಹಿಗ್ಗಾಮುಗ್ಗ ಝಾಡಿಸಿದ್ದರು. ‘ನಮ್ಮ ಸಿನಿಮಾವನ್ನು ಯಾರು ತಡೆಯುತ್ತಾರೋ ನೋಡೋಣ’ ಎನ್ನುವ ಮಾತುಗಳನ್ನು ಬಾಯ್ಕಾಟ್ ಸೇರಿದಂತೆ ತಮ್ಮ ಸಿನಿಮಾವನ್ನು ವಿರೋಧಿಸುವವರಿಗೆ ವಿಜಯ್ ದೇವರಕೊಂಡ ಈ ಮಾತುಗಳನ್ನು ಆಡಿದ್ದರು. ಇದಕ್ಕೆ ಮನೋಜ್ ವಿರೋಧ ವ್ಯಕ್ತ ಪಡಿಸಿದ್ದರು. ಇದನ್ನೂ ಓದಿ:ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್

    ಲೈಗರ್ ಸಿನಿಮಾ ವಿಚಾರದಲ್ಲಿ ವಿಜಯ್ ದೇವರಕೊಂಡ ಅತಿರೇಕವಾಗಿ ಮಾತನಾಡುತ್ತಿದ್ದಾರೆ ಎಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದೆ. ಓಟಿಟಿ ಹಕ್ಕುಗಳು 200 ಕೋಟಿಗೆ ಸೇಲ್ ಆದಾಗ, ನಾವು ಥಿಯೇಟರ್ ನಲ್ಲಿ ಇದಕ್ಕಿಂತ ಹೆಚ್ಚಿನ ಹಣವನ್ನು ಮಾಡುತ್ತೇವೆ ಎಂದು ನಿರಾಕರಿಸಿದ ಪೋಸ್ಟ್ ವೊಂದನ್ನು ವಿಜಯ್ ಮಾಡಿದ್ದರು. ಅದು ಕೂಡ ಇದೀಗ ಟ್ರೋಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಯ್ಕಾಟ್ ‘ಬ್ರಹ್ಮಾಸ್ತ್ರ’: ಗಲಿಬಿಲಿಗೊಂಡ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್

    ಬಾಯ್ಕಾಟ್ ‘ಬ್ರಹ್ಮಾಸ್ತ್ರ’: ಗಲಿಬಿಲಿಗೊಂಡ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್

    ಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾ ಇನ್ನಷ್ಟೇ ಬಿಡುಗಡೆ ಆಗಬೇಕು. ಬಿಡುಗಡೆಗೂ ಮುನ್ನ ಸಂಭ್ರಮಿಸಬೇಕಿದ್ದ ಈ ಜೋಡಿ ಬಾಯ್ಕಾಟ್ ಅಸ್ತ್ರಕ್ಕೆ ಭಯದಿಂದ ಬಳಲುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಹಿಂದೂ ದೇವರುಗಳಿಗೆ ರಣಬೀರ್ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಆಮೇಲೆ ಸಿನಿಮಾ ನಿರ್ದೇಶಕರು ಅದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದರು.

    ಮೊನ್ನೆಯಷ್ಟೇ ಬಾಯ್ಕಾಟ್ ಕುರಿತಂತೆ ಆಲಿಯಾ ಭಟ್ ಆಡಿದ ಮಾತುಗಳು ಕೂಡ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದವು. ಬಾಯ್ಕಾಟ್ ಮಾಡುವವರ ವಿರುದ್ಧ ಗುಡುಗಿದ್ದ ಆಲಿಯಾ, ನನ್ನ ಸಿನಿಮಾ ನೋಡದೇ ಇದ್ದರೆ ಬಿಡಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಬಲವಂತವಾಗಿ ನೋಡಿ ಅಂತ ಹೇಳುತ್ತಿರುವವರು ಯಾರು ಎಂದು ಕೇಳಿದ್ದರು. ಇದನ್ನೂ ಓದಿ:ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾ

    ranbir alia

    ಟ್ರೈಲರ್ ನಲ್ಲಿ ಮಾಡಿದ ಅವಮಾನ ಮತ್ತು ಆಲಿಯಾ ಭಟ್ ಆಡಿದ ಮಾತುಗಳು ಸಿನಿಮಾ ಬಿಡುಗಡೆಗೆ ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ ಬಾಯ್ಕಾಟ್ ಎನ್ನುವವರ ಮನಸ್ಸನ್ನು ತಿಳಿಗೊಳಿಸುವ ಪ್ರಯತ್ನಕ್ಕೂ ಈ ಜೋಡಿ ಮುಂದಾಗಿದೆ ಎನ್ನಲಾಗುತ್ತಿದೆ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ಬ್ರಹ್ಮಾಸ್ತ್ರ ಬಾಯ್ಕಾಟ್ ಟ್ರೆಂಡ್ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಲಾಲ್ ಸಿಂಗ್ ಚಡ್ಡಾ ಎಫೆಕ್ಟ್ : ಆಮೀರ್ ಖಾನ್ ಸಿನಿಮಾಗಳಿಂದ ದೂರ ಸರಿಯುತ್ತಿರುವ ನಿರ್ಮಾಪಕರು

    ಲಾಲ್ ಸಿಂಗ್ ಚಡ್ಡಾ ಎಫೆಕ್ಟ್ : ಆಮೀರ್ ಖಾನ್ ಸಿನಿಮಾಗಳಿಂದ ದೂರ ಸರಿಯುತ್ತಿರುವ ನಿರ್ಮಾಪಕರು

    ಬಾಲಿವುಡ್ ಸಿನಿಮಾ ರಂಗದಲ್ಲಿ ಬಾಯ್ಕಾಟ್ ವಿಚಾರ ಬಿಟೌನ್ ಸ್ಟಾರ್ ನಟರನ್ನು ನಿದ್ದೆಗೆಡಿಸುತ್ತಿದೆ. ಅಮಿತಾಭ್ ಬಚ್ಚನ್ ಅಂತಹ ದಿಗ್ಗಜ ನಟರೇ ಈ ವಿಚಾರದಲ್ಲಿ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಮೊನ್ನೆಯಷ್ಟೇ ಇಂತಹ ವಿಷಯಗಳಲ್ಲಿ ಏನು ಮಾತಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಬಾಯ್ಕಾಟ್ ಬಾಲಿವುಡ್ ಮಂದಿಯನ್ನು ಕಾಡುತ್ತಿದೆ.

    ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್, ತಾಪ್ಸಿ ಪನ್ನು ನಟನೆಯ ಸಿನಿಮಾ, ಇದೀಗ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಚಿತ್ರಕ್ಕೂ ಬಾಯ್ಕಾಟ್ ಭೂತ ಕಾಡಿದೆ. ಅದರಲ್ಲೂ ಹೆಚ್ಚು ತೊಂದರೆ ಮಾಡಿದ್ದ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಎನ್ನುವುದು ಬಾಲಿವುಡ್ ಲೆಕ್ಕಾಚಾರ. ಬಾಕ್ಸ್ ಆಫೀಸಿನಲ್ಲಿ ಸೋಲು ಮಾತ್ರವಲ್ಲ, ಅವರ ಮುಂದಿನ ಚಿತ್ರಗಳಿಗೆ ತೊಂದರೆ ಎದುರಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಆಮೀರ್ ಖಾನ್ ಅವರು ಈಗಾಗಲೇ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ಬಾಯ್ಕಾಟ್ ಗೆ ಭಯಪಟ್ಟುಕೊಂಡಿರುವ ನಿರ್ಮಾಪಕರು ಒಬ್ಬೊಬ್ಬರೇ ಒಪ್ಪಿಕೊಂಡ ಸಿನಿಮಾಗಳಿಂದ ದೂರ ಸರಿಯುತ್ತಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಆಮೀರ್ ಹೊಸ ಸಿನಿಮಾ ಘೋಷಣೆ ಆಗಬೇಕಿತ್ತು. ಆದರೆ, ಬಾಯ್ಕಾಟ್ ನಿಂದಾಗಿ ಮುಂದೂಡಲಾಗಿದೆ ಎನ್ನುವು ನಯಾ ಸಮಾಚಾರ.

    Live Tv
    [brid partner=56869869 player=32851 video=960834 autoplay=true]

  • ಬಾಯ್ಕಾಟ್ ಅಂದೋರಿಗೆ ನನ್ನ ನೋಡ್ಬೇಡಿ ಎಂದ ಬಾಲಿವುಡ್ ನಟಿ ಆಲಿಯಾ ಭಟ್

    ಬಾಯ್ಕಾಟ್ ಅಂದೋರಿಗೆ ನನ್ನ ನೋಡ್ಬೇಡಿ ಎಂದ ಬಾಲಿವುಡ್ ನಟಿ ಆಲಿಯಾ ಭಟ್

    ಣವೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಮುಂದಿನ ತಿಂಗಳು ಸೆ.9ಕ್ಕೆ ದೇಶದಾದ್ಯಂತ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಇಂತಹ ವೇಳೆಯಲ್ಲಿ ಆಲಿಯಾ ಭಟ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಾಯ್ಕಾಟ್ ಬಂಧನಕ್ಕೆ ಸಿಲುಕಿದ್ದಾರೆ.

    ಬಾಲಿವುಡ್ ಸಿನಿಮಾ ರಂಗದಲ್ಲಿ ಬಾಯ್ಕಾಟ್ ಚಳವಳಿ ಜೋರಾಗಿದೆ. ರಿಲೀಸ್ ಆಗುತ್ತಿರುವ ಒಂದೊಂದೆ ಸಿನಿಮಾಗಳು ಸೋಲುತ್ತಿದ್ದು, ಇದಕ್ಕೆ ಬಾಯ್ಕಾಟ್ ಕಾರಣ ಎಂದು ಬಿಂಬಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಬ್ರಹ್ಮಾಸ್ತ್ರ ಚಿತ್ರವು ಬಿಡುಗಡೆ ಆಗುತ್ತಿದ್ದು, ಈ ಸಮಯದಲ್ಲಿ ನಟಿ ಆಲಿಯಾ ಭಟ್ ನೀಡಿರುವ ಹೇಳಿಕೆ ಆ ಚಿತ್ರಕ್ಕೆ ಮುಳುವಾಗುತ್ತಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಬಾಯ್ಕಾಟ್ ಎಂದು ಹೇಳುವವರು ನನ್ನ ಸಿನಿಮಾಗಳನ್ನು ನೋಡುವ ಅಗತ್ಯವಿಲ್ಲ, ನೋಡಬೇಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ ಆಲಿಯಾ. ಈ ಮಾತೇ ಬಾಯ್ಕಾಟ್ ಮಾಡುವವರನ್ನು ರೊಚ್ಚಿಗೆಬ್ಬಿಸಿದೆ. ಆಲಿಯಾ ಅವರೇ ತಮ್ಮ ಸಿನಿಮಾವನ್ನು ನೋಡಬೇಡಿ ಎಂದು ಹೇಳಿದ್ದರಿಂದ, ಬ್ರಹ್ಮಾಸ್ತ್ರ ಸಿನಿಮಾವನ್ನು ನೋಡಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡು‍ತ್ತಿದ್ದಾರೆ. ಈ ಹಿಂದೆ ಕರೀನಾ ಕಪೂರ್ ಕೂಡ ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಚಾರದಲ್ಲಿ ಇಂಥದ್ದೇ ಮಾತುಗಳನ್ನು ಆಡಿದ್ದರು. ಕೊನೆಗೂ ಆ ಸಿನಿಮಾ ಬಾಯ್ಕಾಟ್ ಗೆ ಬೆಂಡಾಗಬೇಕಾಯಿತು.

    Live Tv
    [brid partner=56869869 player=32851 video=960834 autoplay=true]