Tag: boycott

  • ನಾಮಿನೇಷನ್ ಲಿಸ್ಟ್ ನಲ್ಲಿ ಇಲ್ಲ ‘ದಿ ಕಾಶ್ಮೀರ್ ಫೈಲ್ಸ್’ : ಬಾಯ್ಕಾಟ್ ಆಸ್ಕರ್ ಎಂದ ಫ್ಯಾನ್ಸ್

    ನಾಮಿನೇಷನ್ ಲಿಸ್ಟ್ ನಲ್ಲಿ ಇಲ್ಲ ‘ದಿ ಕಾಶ್ಮೀರ್ ಫೈಲ್ಸ್’ : ಬಾಯ್ಕಾಟ್ ಆಸ್ಕರ್ ಎಂದ ಫ್ಯಾನ್ಸ್

    ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ನಡೆದ ಆಸ್ಕರ್ ಪ್ರಶಸ್ತಿಯ ನಾಮ ನಿರ್ದೇಶನ ಘೋಷಣೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಸಂಜೆ 7 ಗಂಟೆಯ ಹೊತ್ತಿಗೆ ಈ ಪ್ರಕ್ರಿಯೆ ನಡೆದಿದ್ದು ಭಾರತದ ಹಲವು ಸಿನಿಮಾಗಳ ನಾಮಿನೇಷನ್ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳಲಿವೆ ಎಂದು ನಿರೀಕ್ಷಿಸಲಾಗಿತ್ತು. ಅದರಲ್ಲೂ ದಿ ಕಾಶ್ಮೀರ್ ಫೈಲ್ ನಾಮ ನಿರ್ದೇಶನ ಪಟ್ಟಿಯಲ್ಲಿ ಇರಲಿದೆ ಎಂದೇ ನಂಬಲಾಗಿತ್ತು. ನಂಬಿಕೆ ಹುಸಿಯಾಗಿದೆ.

    ಈ ಬಾರಿಯ ಆಸ್ಕರ್ ಪ್ರಶಸ್ತಿಗಾಗಿ ಕನ್ನಡದ ಸಿನಿಮಾಗಳಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ, ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರಗಳು ಕೂಡ ಇದ್ದವು. ಜೊತೆಗೆ ತೆಲುಗು ಸಿನಿಮಾ ರಂಗದಿಂದ ಆರ್.ಆರ್.ಆರ್, ತಮಿಳಿನಿಂದ ಇರುವಿನ್ ನಿಲಳ್ ಹಾಗೂ ರಾಕೆಟ್ರಿ ದಿ ನಂಭಿ ಎಫೆಕ್ಟ್ ಚಿತ್ರಗಳು ಸ್ಪರ್ಧೆ ಮಾಡುತ್ತಿವೆ. ಹಿಂದಿಯಿಂದ ಗಂಗೂಬಾಯಿ ಕಾಠಿಯಾವಾಡಿ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳಿವೆ. ಗುಜರಾತಿನಿಂದ ಛೆಲ್ಲೋ ಶೋ, ಚಿತ್ರವೊಂದನ್ನು ಕಳುಹಿಸಲಾಗಿದೆ. ಮಿ ವಸಂತ್ ರಾವ್, ದಿ ನೆಕ್ಸ್ಸಟ್ ಮಾರ್ನಿಂಗ್, ತುಜೆ ಸಾಥಿ ಕಹಿ ಸೇರಿದಂತೆ ಭಾರತದಿಂದಲೇ ಹಲವು ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು. ಆದರೆ, ಈ ಸಿನಿಮಾಗಳ ಪೈಕಿ ಕೇವಲ ಮೂರು ಚಿತ್ರಗಳು ನಾಮಿನೇಷನ್ ಪಟ್ಟಿಯಲ್ಲಿವೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಮತ್ತು ಆಲ್ ದಟ್ ಬ್ರೀಥ್ಸ್, ದಿ ಎಲಿಫೆಂಟ್ ವಿಸ್ಪರ್ಸ್‍ ಕಿರುಚಿತ್ರಗಳು ನಾಮ ನಿರ್ದೇಶನಗೊಂಡಿವೆ. ಆದರೆ, ದಿ ಕಾಶ್ಮೀರ್ ಫೈಲ್ಸ್ ಇಲ್ಲ ಎನ್ನುವ ಕಾರಣಕ್ಕಾಗಿ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಆಸ್ಕರ್ ಹ್ಯಾಶ್ ಟ್ಯಾಗ್ ಮೂಲಕ ಬಹಿಷ್ಕರಿಸಿ ಎಂದು ಅಭಿಮಾನ ನಡೆಸಿದ್ದಾರೆ. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

    ಈ ಬಾರಿಯ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು.  ಮುನ್ನೂರು ಸಿನಿಮಾಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ನಾಮಿನೇಷನ್ ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಆಸ್ಕರ್ ಪ್ರಶಸ್ತಿಗಾಗಿ ಆಯ್ಕೆ ನಡೆಯುತ್ತದೆ. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಮಾರ್ಚ್ 12ರಂದು ಘೋಷಿಸಲಾಗುವುದು. ಇಂದು ಕೇವಲ ನಾಮ ನಿರ್ದೇಶನಗೊಂಡ ಸಿನಿಮಾಗಳನ್ನು ಮಾತ್ರ ಘೋಷಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಚಿತ್ರ ತಂಡಕ್ಕೆ ಶಾಕ್ : ಆನ್ ಲೈನ್ ನಲ್ಲಿ ಸಿನಿಮಾ ಲೀಕ್

    ‘ಪಠಾಣ್’ ಚಿತ್ರ ತಂಡಕ್ಕೆ ಶಾಕ್ : ಆನ್ ಲೈನ್ ನಲ್ಲಿ ಸಿನಿಮಾ ಲೀಕ್

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಬಾಯ್ಕಾಟ್ (Boycott) ನಡುವೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಪೈರಸಿ (Piracy) ಚಿತ್ರತಂಡಕ್ಕೆ ಶಾಕ್ ನೀಡಿದೆ. ಸಿನಿಮಾ ರಿಲೀಸ್ ಗೂ ಮೊದಲೇ ಹಲವು ವೆಬ್ ಸೈಟ್ ಗಳಲ್ಲಿ ಸಿನಿಮಾವನ್ನು ಲೀಕ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆಯೂ ಕೂಡ ಪಠಾಣ್ ಸಿನಿಮಾದ ಟ್ರೈಲರ್ ಕೂಡ ಒಂದು ದಿನ ಮುಂಚೆಯೇ ಲೀಕ್ ಆಗಿತ್ತು.

    ಹಿಂದೂ ಧರ್ಮಕ್ಕೆ ಸಿನಿಮಾ ತಂಡ ಅವಮಾನ ಮಾಡಿದೆ ಎನ್ನುವ ಕಾರಣಕ್ಕಾಗಿ ಕೆಲವರು ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಂಚು ಮಾಡಿ ಸಿನಿಮಾವನ್ನು ಸೋಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಹಣದಾಹಿ ಕೆಲ ವೆಬ್ ಸೈಟ್ ಗಳು ಸಿನಿಮಾ ರಿಲೀಸ್ ದಿನವೇ ಇಡೀ ಚಿತ್ರವನ್ನು ಲೀಕ್ ಮಾಡಿವೆ. ಹಾಗಾಗಿ ಚಿತ್ರತಂಡಕ್ಕೆ ಆತಂಕ ಎದುರಾಗಿದೆ. ಇದನ್ನೂ ಓದಿ: Oscars 2023: `ಆರ್‌ಆರ್‌ಆರ್’ ಸಿನಿಮಾದ `ನಾಟು ನಾಟು’ ಸಾಂಗ್ ನಾಮಿನೇಟ್

    ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಸ್ವತಃ ಶಾರುಖ್ ಖಾನ್ ಅವರೇ ತಿಳಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ ನೀಡಿದಕ್ಕೆ ಅವರು ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಆದರೆ, ಹಲವು ಅಡೆತಡೆಗಳನ್ನು ಅವರು ಎದುರಿಸುವುದು ಅನಿವಾರ್ಯವಾಗಿದೆ. ಕೆಲ ರಾಜ್ಯಗಳಲ್ಲಂತೂ ವಿಪರೀತ ತೊಂದರೆ ಮಾಡಲಾಗುತ್ತಿದೆ. ಥಿಯೇಟರ್ ಗೆ ನುಗ್ಗಿ ಪ್ರದರ್ಶನವನ್ನು ನಿಲ್ಲಿಸಲಾಗುತ್ತಿದೆ.

    ಈ ಪ್ರತಿಭಟನೆ ಕರ್ನಾಟಕದಲ್ಲೂ ನಡೆದಿದೆ. ಬೆಳಗಾವಿ ಸೇರಿದಂತೆ ಹಲವು ಕಡೆ ಚಿತ್ರಪ್ರದರ್ಶನ ನಿಲ್ಲಿಸುವಂತೆ ಥಿಯೇಟರ್ ಗೆ ಮುತ್ತಿಗೆ ಹಾಕುವಂತಹ ಕೆಲಸಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಸಿನಿಮಾಗಳಿಗೆ ತೊಂದರೆ ಮಾಡಬಾರದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದರೂ, ಜನರು ಮಾತ್ರ ಪ್ರತಿಭಟನೆಯನ್ನು ಕೈ ಬಿಟ್ಟಿಲ್ಲ. ಹಲವು ಕಡೆ ಮತ್ತೆ ಬಾಯ್ಕಾಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಧಾನಿ ಮೋದಿಗೆ ನಿರ್ದೇಶಕ ಅನುರಾಗ್ ಕಶ್ಯಪ್ ಟಾಂಗ್ : ವಿವೇಕ್ ಅಗ್ನಿಹೋತ್ರಿ ತಿರುಗೇಟು

    ಪ್ರಧಾನಿ ಮೋದಿಗೆ ನಿರ್ದೇಶಕ ಅನುರಾಗ್ ಕಶ್ಯಪ್ ಟಾಂಗ್ : ವಿವೇಕ್ ಅಗ್ನಿಹೋತ್ರಿ ತಿರುಗೇಟು

    ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಪ್ರಧಾನಿ ನರೇಂದ್ರ ಮೋದಿ ಆಡಿದ್ದ ಮಾತುಗಳಿಗೆ ತಮ್ಮದೇ ಆದ ರೀತಿಯಲ್ಲಿ ಟಾಂಗ್ ನೀಡಿದ್ದರು. ಸಿನಿಮಾದವರನ್ನು ಟೀಕಿಸಬೇಡಿ ಎಂದು ಮೋದಿ ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದರು. ಈ ಮಾತುಗಳನ್ನು ಪ್ರಧಾನಿ ಅವರು ನಾಲ್ಕು ವರ್ಷಗಳ ಹಿಂದೆಯೇ ಹೇಳಬೇಕಿತ್ತು ಎಂದು ಟಾಂಗ್ ಕೊಟ್ಟಿದ್ದರು. ಅನುರಾಗ್ ಮಾತಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ. ‘ಆಡಿಯನ್ಸ್ ಈಗ ಮಾಬ್ ಕ್ರಿಯೇಟ್ ಆಗಿದೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ ಎನ್ನಲಾದ ಮಾತಿಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತಿರುಗೇಟು ನೀಡಿದ್ದಾರೆ. ಚುನಾವಣೆ ವೇಳೆಗಾದರೂ ಅವರು ಮಾತನಾಡಿದ್ದಾರಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿಗಳು ಪದೇ ಪದೇ ಈ ಮಾತುಗಳನ್ನು ಹೇಳುವ ಮೂಲಕ ಕಾರ್ಯಕರ್ತರನ್ನು ಸದಾ ಜಾಗೃತರಾಗಿ ಇಡಬೇಕು ಎಂದೂ ಅವರು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಾಲಯ್ಯ ಮುಂದೆ ಅಬ್ಬರಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಬಗ್ಗೆ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ವಿಪರೀತ ಎನ್ನುವಂತೆ ಟೀಕೆ ಮಾಡುತ್ತಿದ್ದಾರೆ. ಅದರಲ್ಲೂ ಪಠಾಣ್, ಬ್ರಹ್ಮಾಸ್ತ್ರ ಸಿನಿಮಾಗಳಿಗೆ ಬಾಯ್ಕಾಟ್ ಅಭಿಯಾನ ಮಾಡುವ ಮೂಲಕ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಹಲವು ದಿನಗಳಿಂದ ಈ ರೀತಿಯ ಪ್ರತಿಭಟನೆಗಳು ಸಿನಿಮಾ ರಂಗದಲ್ಲಿ ಕಾಮನ್ ಎನ್ನುವಂತಾಗಿದೆ. ಹಾಗಾಗಿ ನರೇಂದ್ರ ಮೋದಿ ಅವರು, ಯಾವುದೇ ಸಿನಿಮಾದ ಸಹವಾಸಕ್ಕೆ ಹೋಗದೇ, ಅದರ ಬಗ್ಗೆ ಮಾತನಾಡದೇ ದೂರ ಉಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

    ಈ ಸಲಹೆಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅನುರಾಗ್ ಕಶ್ಯಪ್, ‘ಮೋದಿ ಅವರು ಈ ಮಾತುಗಳನ್ನು ನಾಲ್ಕು ವರ್ಷಗಳ ಹಿಂದೆಯೇ ಹೇಳಬೇಕಿತ್ತು. ಈಗ ಎಲ್ಲವೂ ಕೈ ಮೀರಿ ಹೋಗಿದೆ. ಅವರ ಮಾತುಗಳನ್ನು ಯಾರೂ ಕೇಳುವುದಿಲ್ಲ ಎನ್ನುವಂತಹ ವಾತಾವರಣ ಉಂಟಾಗಿದೆ. ಅವರ ಹೇಳಿಕೆ ಯಾವುದೇ ಪರಿಣಾಮವನ್ನು ಉಂಟು ಮಾಡದು’ ಎಂದು ಅನುರಾಗ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿನಿಮಾ ವಿವಾದದ ಬಗ್ಗೆ ಪ್ರಧಾನಿ ಮೋದಿ ಮಾತು : ನಿರ್ದೇಶಕ ಅನುರಾಗ್ ಕಶ್ಯಪ್ ಭಿನ್ನರಾಗ

    ಸಿನಿಮಾ ವಿವಾದದ ಬಗ್ಗೆ ಪ್ರಧಾನಿ ಮೋದಿ ಮಾತು : ನಿರ್ದೇಶಕ ಅನುರಾಗ್ ಕಶ್ಯಪ್ ಭಿನ್ನರಾಗ

    ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ ಎನ್ನಲಾದ ಮಾತಿಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ತಿರುಗೇಟು ನೀಡಿದ್ದಾರೆ. ಚುನಾವಣೆ ವೇಳೆಗಾದರೂ ಅವರು ಮಾತನಾಡಿದ್ದಾರಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿಗಳು ಪದೇ ಪದೇ ಈ ಮಾತುಗಳನ್ನು ಹೇಳುವ ಮೂಲಕ ಕಾರ್ಯಕರ್ತರನ್ನು ಸದಾ ಜಾಗೃತರಾಗಿ ಇಡಬೇಕು ಎಂದೂ ಅವರು ಹೇಳಿಕೆ ನೀಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಬಗ್ಗೆ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ವಿಪರೀತ ಎನ್ನುವಂತೆ ಟೀಕೆ ಮಾಡುತ್ತಿದ್ದಾರೆ. ಅದರಲ್ಲೂ ಪಠಾಣ್, ಬ್ರಹ್ಮಾಸ್ತ್ರ ಸಿನಿಮಾಗಳಿಗೆ ಬಾಯ್ಕಾಟ್ (Boycott) ಅಭಿಯಾನ ಮಾಡುವ ಮೂಲಕ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಹಲವು ದಿನಗಳಿಂದ ಈ ರೀತಿಯ ಪ್ರತಿಭಟನೆಗಳು ಸಿನಿಮಾ ರಂಗದಲ್ಲಿ ಕಾಮನ್ ಎನ್ನುವಂತಾಗಿದೆ. ಹಾಗಾಗಿ ನರೇಂದ್ರ ಮೋದಿ ಅವರು, ಯಾವುದೇ ಸಿನಿಮಾದ ಸಹವಾಸಕ್ಕೆ ಹೋಗದೇ, ಅದರ ಬಗ್ಗೆ ಮಾತನಾಡದೇ ದೂರ ಉಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?

    ಈ ಸಲಹೆಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅನುರಾಗ್ ಕಶ್ಯಪ್, ‘ಮೋದಿ ಅವರು ಈ ಮಾತುಗಳನ್ನು ನಾಲ್ಕು ವರ್ಷಗಳ ಹಿಂದೆಯೇ ಹೇಳಬೇಕಿತ್ತು. ಈಗ ಎಲ್ಲವೂ ಕೈ ಮೀರಿ ಹೋಗಿದೆ. ಅವರ ಮಾತುಗಳನ್ನು ಯಾರೂ ಕೇಳುವುದಿಲ್ಲ ಎನ್ನುವಂತಹ ವಾತಾವರಣ ಉಂಟಾಗಿದೆ. ಅವರ ಹೇಳಿಕೆ ಯಾವುದೇ ಪರಿಣಾಮವನ್ನು ಉಂಟು ಮಾಡದು’ ಎಂದು ಅನುರಾಗ್ ಮಾತನಾಡಿದ್ದಾರೆ.

    ಪಠಾಣ್ ಸಿನಿಮಾಗೆ ಸಂಬಂಧಿಸಿದಂತೆ ಕನ್ನಡದ ನಟ, ಹೋರಾಟಗಾರ ಚೇತನ್ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾವ ಬಣ್ಣವೂ ಯಾವುದರ ಸಂಕೇತ ಆಗಬಾರದು ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ಕೇಸರಿ ಹಿಂದೂಗಳ ಸಂಕೇತವಲ್ಲ. ಹಿಂದೂಗಳ ಬಣ್ಣ ಆಗಬಾರದು. ಕೇಸರಿ ಬಣ್ಣ ತ್ಯಾಗದ ಸಂಕೇತ. ಅದು ಭಾರತದ ರಾಷ್ಟ್ರ ಧ್ವಜದಲ್ಲೂ ಇದೆ. ಹಸಿರು ಬಣ್ಣ ಕೂಡ ಅಷ್ಟೇ, ಅದು ಕೂಡ ಯಾರದೋ ಬಣ್ಣವಲ್ಲ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಷ್ಟೇ’ ಎಂದು ಪ್ರತಿಕ್ರಿಯಿಸಿದ್ದಾರೆ.

    ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರು. ಆ ಹಾಡಿನ ಸಾಹಿತ್ಯದಲ್ಲೂ ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಕೂಡ ಹಾಡಿನಲ್ಲಿಯ ಕೆಲವು ಚಿತ್ರಿಕೆಗಳಿಗೆ ಕತ್ತರಿ ಹಾಕುವಂತೆ ಹೇಳಿತ್ತು. ಕೆಲವು ಕಡೆ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಥಿಯೇಟರ್ ಗೂ ಮುತ್ತಿಗೆ ಹಾಕಲಾಯಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಡೀ ದೇಶವೇ ಬಾಲಿವುಡ್ ಪರ ನಿಲ್ಲಬೇಕಿದೆ : ನಟ ಕಿಶೋರ್

    ಇಡೀ ದೇಶವೇ ಬಾಲಿವುಡ್ ಪರ ನಿಲ್ಲಬೇಕಿದೆ : ನಟ ಕಿಶೋರ್

    ನ್ನಡದ ಹೆಸರಾಂತ ನಟ ಕಿಶೋರ್ ದಿನಕ್ಕೊಂದು ಆಡುತ್ತಿರುವ ಮಾತುಗಳು ಭಾರತೀಯ ಸಿನಿಮಾ ರಂಗದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತಿವೆ. ಕಾಂತಾರ ಸಿನಿಮಾದಿಂದ ಶುರುವಾದ ಅವರ ಮಾತುಗಳು, ಕೆಜಿಎಫ್ 2 ಅನ್ನೂ ಸೇರಿಸಿಕೊಂಡವು. ಇದೀಗ ಬಾಲಿವುಡ್ ನಲ್ಲಿ ನಡೆಯುತ್ತಿರುವ ಬಾಯ್ಕಾಟ್ ಕುರಿತಾಗಿಯೂ ಅವರು ಬರೆದುಕೊಂಡಿದ್ದಾರೆ. ಬಾಲಿವುಡ್ ಅನ್ನು ನಾವು ರಕ್ಷಿಸಬೇಕು. ಇಡೀ ದೇಶವೇ ಬಾಲಿವುಡ್ ಪರ ನಿಲ್ಲಬೇಕು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ನಾನಾ ಕಾರಣಗಳಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಲಿವುಡ್ ಅನ್ನು ತೆಗಳುವ ವಾತಾವರಣ ಭಾರತದಲ್ಲಿ ಉಂಟಾಗಿದೆ. ಅನೇಕ ಸಿನಿಮಾಗಳು ಬಾಯ್ಕಾಟ್ ಬಿಸಿಗೆ ಬೆಂದು ಹೋದವು. ಅನೇಕ ಕಲಾವಿದರು ವೈಯಕ್ತಿಕ ನಿಂದನೆಗೆ ಗುರಿಯಾದರು. ಹಲವಾರು ನಿರ್ದೇಶಕರು ಹಾಗೂ ತಂತ್ರಜ್ಞರು ಕೂಡ ನಿಂದನೆಗೆ ಒಳಗಾದರು. ಅದರಲ್ಲೂ ಶಾರುಖ್ ಖಾನ್, ಸಲ್ಮಾನ್ ಖಾನ್ ರೀತಿಯ ಖಾನ್ ಖಾಂದಾನ್ ಗಳನ್ನೂ ಒಟ್ಟಾಗಿಸಿ ಸೇರಿಸಿ ಮಂಗಳಾರತಿ ಮಾಡಲಾಯಿತು. ಈ ಕಡೆ ದೀಪಿಕಾ ಪಡುಕೋಣೆ, ಕಂಗನಾ ರಣಾವತ್ ಕೂಡ ಬೈಯಿಸಿಕೊಳ್ಳುವುದನ್ನು ಬಿಡಲಿಲ್ಲ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಇದೆಲ್ಲವನ್ನೂ ಕಂಡಿರುವ ಕಿಶೋರ್, ಇನ್ಸ್ಟಾದಲ್ಲಿ ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ಬರಹದಲ್ಲಿ ‘ಇಡೀ ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್ ನ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು, ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ನ ಪರವಾಗಿ ನಿಲ್ಲುವ ಕಾಲ ಬಂದಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಒಂದು ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ. ಇಷ್ಟಾದರೂ ಚಿತ್ರರಂಗದವರು ಮಾತನಾಡದೇ ಕೂತಿರುವ ಹೆದರಿಕೆಯ ವಾತಾವರಣ ಸೃಷ್ಟಿಯಾಗಿರುವುದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಇದು ಸಮಾಜವನ್ನು ವಿಷಪೂರಿತಗೊಳಿಸುವ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಇದನ್ನು ತಡೆಯಬೇಕಿದೆ, ಶಿಕ್ಷಿಸಬೇಕಾಗಿದೆ. ದ್ವೇಷದ ಈ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ವ್ಯಾಪಿಸುವ ಮುನ್ನ’ ಎಂದು ಹೇಳಿದ್ದಾರೆ.

    ಕಿಶೋರ್ ಅವರ ಈ ಮಾತುಗಳು ಮತ್ತೆ ಪರ ವಿರೋಧಕ್ಕೆ ದಾರಿ ಮಾಡಿಕೊಟ್ಟಿವೆ. ಕಾಂತಾರ ಸಿನಿಮಾದ ಮೂಢನಂಬಿಕೆ, ಜಗತ್ತೆ ಹೆಮ್ಮೆಪಟ್ಟು ನೋಡಿದ ಕೆಜಿಎಫ್ 2 ನೋಡಲ್ಲ ಎನ್ನುವವರಿಗೆ ಬಾಲಿವುಡ್ ಮೇಲೆ ಅದೇಕೆ ಅಷ್ಟೊಂದು ಪ್ರೀತಿ? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಕಿಶೋರ್ ಒಳ್ಳೆಯ ಪ್ರಶ್ನೆಯನ್ನೂ ಎತ್ತಿದ್ದಾರೆ ಎಂದು ಹೊಗಳಿದವರು ಇದ್ದಾರೆ. ಬಾಯ್ಕಾಟ್ ಟ್ರೆಂಡ್ ನ ಕಾವು ಹೆಚ್ಚಾದ ದಿನದಲ್ಲಿ ಕಿಶೋರ್ ಬರೆದಿರುವ ಪೋಸ್ಟ್ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೀಪಿಕಾಗೆ ಬೈಕಾಟ್ ಬಿಸಿ: ತುಕ್ಡೆ ಗ್ಯಾಂಗ್ ಜೊತೆ ಕಾಣಿಸಿಕೊಂಡಿದ್ದ ನಟಿ ಎಂಬ ಆರೋಪ

    ದೀಪಿಕಾಗೆ ಬೈಕಾಟ್ ಬಿಸಿ: ತುಕ್ಡೆ ಗ್ಯಾಂಗ್ ಜೊತೆ ಕಾಣಿಸಿಕೊಂಡಿದ್ದ ನಟಿ ಎಂಬ ಆರೋಪ

    ಠಾಣ್ ಸಿನಿಮಾ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡ ಪರಿ ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ಕೇಸರಿ ಬಿಕಿನಿಯಲ್ಲಿ ದೀಪಿಕಾ ಕುಣಿದಿದ್ದಾರೆ ಎನ್ನುವುದು ಮತ್ತು ಅದು ಶಾರುಖ್ ಖಾನ್ ನಟನೆಯ ಚಿತ್ರ ಎನ್ನುವ ಕಾರಣಕ್ಕಾಗಿ ವಿವಾದ ಎದ್ದಿದೆ. ಇದರ ಬೆನ್ನಲ್ಲೆ ಪಠಾಣ್ ಸಿನಿಮಾವನ್ನು ಬೈಕಾಟ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಒತ್ತಾಯ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ದೀಪಿಕಾರ ಹಳೆ ಫೋಟೋವೊಂದನ್ನು ವೈರಲ್ ಮಾಡುತ್ತಿದ್ದು ಅದನ್ನೂ ಸೇರಿಸಿ ಸಿನಿಮಾ ಬೈಕಾಟ್ ಮಾಡಿ ಎಂದು ಹೇಳಲಾಗುತ್ತಿದೆ.

    ಈ ಹಿಂದೆ 2020ರಲ್ಲಿ ಜೆಎನ್ ಯೂ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು. ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ತುಕ್ಡೆ ಗ್ಯಾಂಗ್ ಜೊತೆ ದೀಪಿಕಾ ಸೇರಿದ್ದಾರೆ ಎಂದು ಕಾರಣವನ್ನಿಟ್ಟುಕೊಂಡು ಪ್ರತಿಭಟನೆ ಮಾಡಲಾಯಿತು. ಆ ಫೋಟೋವನ್ನು ಪಠಾಣ್ ಜೊತೆ ಸೇರಿಸಿ ಈ ಸಿನಿಮಾವನ್ನು ಬೈಕಾಟ್ ಮಾಡಿ ಎಂದು ಹೊಸ ಹೋರಾಟ ಶುರು ಮಾಡಿದ್ದಾರೆ.

    ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಹಾಡು ಮೂರು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ಈ ಹಾಡನ್ನು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆದರೆ, ಈ ಹಾಡಿನಲ್ಲಿ ದೀಪಿಕಾ ಹಾಕಿರುವ ಡ್ರೆಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇಸರಿಯ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಈ ಹಾಡಿನ ಸಾಲಿಗೆ ಹಾಕಿರುವ ಡ್ರೆಸ್ ಗೂ ಹೊಂದಾಣಿಕೆ ಮಾಡಿಕೊಂಡು ನೆಟ್ಟಿಗರು ಗರಂ ಆಗಿದ್ದಾರೆ. ಈ ಕಾರಣದಿಂದಾಗಿ ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡುತ್ತಿದ್ದಾರೆ.

    ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡುಡುಗೆ ತೊಟ್ಟಿದ್ದಾರೆ. ‘ಬೇಷರಂ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಅಂತಾನೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಬೈಕಾಟ್ ಪಠಾಣ್ ಟ್ರೆಂಡ್ ಹೆಚ್ಚಿದೆ. ಇದನ್ನೂ ಓದಿ: ದೀಪಿಕಾ ದಾಸ್ ವರ್ತನೆಗೆ ಕಿಡಿಕಾರಿದ ರೂಪೇಶ್ ರಾಜಣ್ಣ

    ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ. ಶಾರುಖ್ ಈ ಸಿನಿಮಾದಲ್ಲಿ ಮತ್ತೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಬಿಕಿನಿಗೆ ನೆಟ್ಟಿಗರು ಗರಂ: ಬೈಕಾಟ್ ಪಠಾಣ್ ಟ್ರೆಂಡ್

    ಕೇಸರಿ ಬಿಕಿನಿಗೆ ನೆಟ್ಟಿಗರು ಗರಂ: ಬೈಕಾಟ್ ಪಠಾಣ್ ಟ್ರೆಂಡ್

    ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಹಾಡು ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ಈ ಹಾಡನ್ನು ಹದಿನೈದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆದರೆ, ಈ ಹಾಡಿನಲ್ಲಿ ದೀಪಿಕಾ ಹಾಕಿರುವ ಡ್ರೆಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇಸರಿಯ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಈ ಹಾಡಿನ ಸಾಲಿಗೆ ಹಾಕಿರುವ ಡ್ರೆಸ್ ಗೂ ಹೊಂದಾಣಿಕೆ ಮಾಡಿಕೊಂಡು ನೆಟ್ಟಿಗರು ಗರಂ ಆಗಿದ್ದಾರೆ. ಈ ಕಾರಣದಿಂದಾಗಿ ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡುತ್ತಿದ್ದಾರೆ.

    ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡುಡುಗೆ ತೊಟ್ಟಿದ್ದಾರೆ. ‘ಬೇಷರಂ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಅಂತಾನೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಬೈಕಾಟ್ ಪಠಾಣ್ ಟ್ರೆಂಡ್ ಹೆಚ್ಚಿದೆ.

    ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ. ಶಾರುಖ್ ಈ ಸಿನಿಮಾದಲ್ಲಿ ಮತ್ತೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    ಹಾಡು ರಿಲೀಸ್ ಆಗುತ್ತಿರುವ ವಿಷಯವನ್ನು ಸ್ವತಃ ಶಾರುಖ್ ಖಾನ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಈ ಹಾಡನ್ನು ನೋಡಲು ತಾವೂ ಕೂಡ ಕಾತರದಿಂದ ಕಾಯುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರು. ಅಲ್ಲದೇ ಅಭಿಮಾನಿಗಳು ಕೂಡ  ಅಷ್ಟೇ ಕುತೂಹಲದಿಂದಲೇ ಹಾಡಿಗಾಗಿ ಕಾದಿದ್ದರು. ಬಿಡುಗಡೆಯಾದ ಹಾಡಿಗೆ ಅಭಿಮಾನಿಗಳು ಕೂಡ ಜೈಕಾರ ಹಾಕಿದ್ದಾರೆ.

    ಇದು ಶಾರುಖ್ ಖಾನ್ ವೃತ್ತಿ ಜೀವನದ ಮಹತ್ವದ ಸಿನಿಮಾ ಎನ್ನಲಾಗುತ್ತಿದ್ದು, ಸತತ ಸೋಲಿನ ಬಳಿಕೆ ಬಾಲಿವುಡ್ ಗೆ ಈ ಸಿನಿಮಾ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಕಾಂಬಿನೇಷನ್ ಇರುವುದರಿಂದ ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇಂದು ಬಿಡುಗಡೆ ಆಗಿರುವ ಹಾಡು ಅಂಥದ್ದೊಂದು ಭರವಸೆಯನ್ನೂ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬೈಕಾಟ್’ ಅನ್ನುವವರು ನಿಜವಾದ ಪ್ರೇಕ್ಷಕರಲ್ಲ: ಸೈಫ್ ಅಲಿ ಖಾನ್ ಆರೋಪ

    ‘ಬೈಕಾಟ್’ ಅನ್ನುವವರು ನಿಜವಾದ ಪ್ರೇಕ್ಷಕರಲ್ಲ: ಸೈಫ್ ಅಲಿ ಖಾನ್ ಆರೋಪ

    ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಬೈಕಾಟ್ ಬಿಸಿಗೆ ಬಾಲಿವುಡ್ ಬೆದರಿ ಬೆಂಡಾಗಿದೆ. ಲಾಲ್ ಸಿಂಗ್ ಚಡ್ಡಾ, ಬ್ರಹ್ಮಾಸ್ತ್ರ, ವಿಕ್ರಮ್ ವೇದಾ ಸೇರಿದಂತೆ ಹಲವು ಚಿತ್ರಗಳು ಬೈಕಾಟ್ ಹೊಡೆತಕ್ಕೆ ತತ್ತರಿಸಿ ಹೋದವು. ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗುವುದಷ್ಟೇ ಅಲ್ಲ, ಬಾಲಿವುಡ್ ಯುಗವೇ ಮುಗಿಯಿತು ಎನ್ನುವಷ್ಟರ ಮಟ್ಟಿಗೆ ಬಳಲಿದವು. ಆಯಾ ಕಾಲಕ್ಕೆ ಬೈಕಾಟ್ ಬಗ್ಗೆ ನಟರು ಕಾಮೆಂಟ್ ಮಾಡಿದರೂ, ನಟ ಸೈಫ್ ಅಲಿಖಾನ್ ಅಷ್ಟು ನೇರವಾಗಿ ಯಾರೂ ಮಾತನಾಡಿರಲಿಲ್ಲ.

    ಬಾಲಿವುಡ್ ನಟ ಸೈಫ್ ಅಲಿಖಾನ್ ಇದೀಗ ಬೈಕಾಟ್ ಬಗ್ಗೆ ಮಾತನಾಡಿದ್ದು, ಬೈಕಾಟ್ ಮಾಡುವವರು ನಿಜವಾದ ಪ್ರೇಕ್ಷಕರೇ ಅಲ್ಲ ಎಂದು ಆರೋಪಿಸಿದ್ದಾರೆ. ನಿಜವಾದ ಸಿನಿ ಪ್ರೇಕ್ಷಕರು ಚಿತ್ರಗಳನ್ನು ನೋಡುತ್ತಾರೆ. ಜಾತಿ, ಧರ್ಮ ಎನ್ನುವುದಿಲ್ಲ. ಆದರೆ, ಇಲ್ಲಿ ಕೆಲವರು ವಿನಾಕಾರಣ ಸಿನಿಮಾ ರಂಗದ ಮೇಲೆ ಹಿಡಿತ ಸಾಧಿಸಲು ಹೊರಟಂತಿದೆ. ಅದೇ ಬೈಕಾಟ್ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:`ಕಾಂತಾರ’ ಚಿತ್ರದ ಹಾಡಿಗೆ ಧ್ವನಿಯಾದ ಜರ್ಮನ್ ಅಂಧ ಗಾಯಕಿ

    ಈ ಕುರಿತು ಕೆಲವು ಸಲಹೆಗಳನ್ನೂ ನೀಡಿರುವ ಸೈಫ್, ಬೈಕಾಟ್ ಅನ್ನು ಸಣ್ಣದರಲ್ಲಿ ಇರುವಾಗಲೇ ಹತ್ತಿಕ್ಕಬೇಕಿತ್ತು. ಅದನ್ನು ಇಷ್ಟೊಂದು ದೊಡ್ಡದಾಗಿ ಬೆಳೆಯಲು ಬಿಡಬಾರದು. ಬೈಕಾಟ್ ಬಿಸಿಯಿಂದ ತಪ್ಪಿಸಿಕೊಳ್ಳಲು ಬಾಲಿವುಡ್ ಒಂದಾಗಬೇಕು. ಇಡೀ ಬಾಲಿವುಡ್ ಒಂದಾದರೆ, ಎಂತಹ ಶಕ್ತಿಯನ್ನಾದರೂ ಎದುರಿಸೋಕೆ ಬರುತ್ತದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ರಂಗ ತೊರೆದ ಆಮೀರ್ ಖಾನ್?: ಚಾಂಪಿಯನ್ ಸಿನಿಮಾದಿಂದ ಹೊರ ಬಂದ ನಟ

    ಸಿನಿಮಾ ರಂಗ ತೊರೆದ ಆಮೀರ್ ಖಾನ್?: ಚಾಂಪಿಯನ್ ಸಿನಿಮಾದಿಂದ ಹೊರ ಬಂದ ನಟ

    ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಾವು ಇನ್ಮುಂದೆ ಸಿನಿಮಾದಲ್ಲಿ ನಟಿಸುವುದಿಲ್ಲ. ಕೆಲ ದಿನಗಳ ಕಾಲ ಸಿನಿಮಾ ರಂಗದಿಂದ ದೂರ ಇರುತ್ತೇನೆ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು ಬಾಲಿವುಡ್ ನಟ ಆಮೀರ್ ಖಾನ್. ನಾನಾ ಕಾರಣಗಳಿಂದಾಗಿ ನಾನು ದೂರ ಉಳಿಯಲೇಬೇಕಿದೆ ಎಂದು ಅವರು ಮಾತನಾಡಿದ್ದರು. ಹೇಳಿದ ಮಾತಿಗೆ ಬದ್ಧನಾಗಿದ್ದಾರೆ ಆಮೀರ್ ಖಾನ್. ಅಂದುಕೊಂಡಂತೆ ಆಗಿದ್ದರೆ ಅವರು ಚಾಂಪಿಯನ್ ರೀಮೇಕ್ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಆ ಸಿನಿಮಾದಿಂದ ಆಮೀರ್ ಹೊರ ಬಂದಿದ್ದಾರೆ.

    ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲು ಆಮೀರ್ ಖಾನ್ ಅವರನ್ನು ಭಾರೀ ನಿದ್ದೆಗೆಡಿಸಿದೆಯಂತೆ. ಈ ಸಿನಿಮಾದ ಬಗ್ಗೆ ಅವರಿಗೆ ಅಪಾರ ನಂಬಿಕೆಯಿತ್ತು. ಈ ಸಿನಿಮಾ ಅದ್ಭುತ ಯಶಸ್ಸು ಗಳಿಸುತ್ತದೆ ಎಂದೇ ನಂಬಲಾಗಿತ್ತು. ಬಾಕ್ಸ್ ಆಫೀಸು ತುಂಬುವುದರ ಜೊತೆಗೆ ವಿಮರ್ಶಕರು ಕೂಡ ಮೆಚ್ಚಿ ಮಾತನಾಡುತ್ತಾರೆ ಎಂದು ಆಮೀರ್ ಬಲವಾಗಿ ನಂಬಿದ್ದರು. ಆದರೆ ಆ ನಂಬಿಕೆ ಸುಳ್ಳಾಯಿತು. ಅಂದುಕೊಂಡಷ್ಟು ಸಿನಿಮಾ ಗೆಲ್ಲಲಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಕಮಾಯಿ ಮಾಡಲಿಲ್ಲ. ಹಾಗಾಗಿ ಆಮೀರ್ ಅವರಿಗೆ ಹಿನ್ನೆಡೆ ಆಯಿತು. ಇದನ್ನೂ ಓದಿ:ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ

    ಸಿನಿಮಾ ರಿಲೀಸ್ ಗೂ ಮುನ್ನ ಟ್ರೇಲರ್ ಭಾರೀ ಸದ್ದು ಮಾಡಿತ್ತು. ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿಯೇ ಈ ಸಿನಿಮಾದ ಬಗ್ಗೆ ಸಿನಿ ಪಂಡಿತರು ಕೂಡ ತಮ್ಮದೇ ಆದ ರೀತಿಯಲ್ಲಿ ಲೆಕ್ಕಾಚಾರ ಹಾಕಿದ್ದರು. ದಾಖಲೆಯ ರೀತಿಯಲ್ಲಿ ಈ ಸಿನಿಮಾ ಹಣ ಮಾಡುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಬಾಯ್ಕಾಟ್ ಈ ಸಿನಿಮಾವನ್ನು ಮಕಾಡೆ ಮಲಗಿಸಿತು. ಜನರನ್ನು ಥಿಯೇಟರ್ ಗೆ ಕರೆದುಕೊಂಡು ಬರುವಲ್ಲಿ ತೊಂದರೆ ಮಾಡಿತು.

    ಲಾಲ್ ಸಿಂಗ್ ಚಡ್ಡಾ ಸೋಲು, ಆಮೀರ್ ಅವರಿಗೆ ನೋವು ತಂದಿದೆ. ಇಂಥದ್ದೊಂದು ಸಿನಿಮಾ ಮಾಡಿದಾಗ ಜನ ಸ್ವೀಕರಿಸಲಿಲ್ಲ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡಿದ್ದಾಗಿದೆ. ಈ ಎಲ್ಲ ಕಾರಣದಿಂದಾಗಿ ಆಮೀರ್ ಖಾನ್ ಸ್ವಲ್ಪ ದಿನ ಸಿನಿಮಾ ರಂಗದಿಂದಲೇ ದೂರ ಉಳಿಯುವಂತಹ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನಟನೆಯಿಂದಲೇ ದೂರ ಸರಿಯುವುದಾಗಿ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರಂತೆ. ಈ ನಿರ್ಧಾರ ಆಮೀರ್ ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಹಲಾಲ್ ಮುಕ್ತ ದೀಪಾವಳಿ ಅಭಿಯಾನ – ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್‌ಗೆ ಬಾಯ್ಕಾಟ್

    ಹಲಾಲ್ ಮುಕ್ತ ದೀಪಾವಳಿ ಅಭಿಯಾನ – ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್‌ಗೆ ಬಾಯ್ಕಾಟ್

    ಹುಬ್ಬಳಿ: ಹಿಂದೂಪರ ಸಂಘಟನೆಗಳು ಹಲಾಲ್ (Halal) ಮುಕ್ತ ದೀಪಾವಳಿಗೆ ಕರೆ ನೀಡಿರುವ ಬೆನ್ನಲ್ಲೇ ಈಗ ಹುಬ್ಬಳ್ಳಿಯಲ್ಲಿ (Hubballi) ಬಾಯ್ಕಾಟ್ (Boycott) ಮೆಕ್ಡೊನಾಲ್ಡ್ (McDonald’s), ಕೆಎಫ್‌ಸಿ (KFC), ಪಿಜ್ಜಾ ಹಟ್ (Pizza Hut) ಅಭಿಯಾನ ಕೂಡಾ ಆರಂಭಗೊಂಡಿದೆ.

    ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್ ಕಂಪನಿಗಳು ತಮ್ಮ ಉತ್ಪನ್ನಗಳು ಶೇ.100 ರಷ್ಟು ಹಲಾಲ್ ಅಂತ ಘೋಷಣೆ ಮಾಡಿದ್ದವು. ಇದರಿಂದಾಗಿ ಕೆಂಡಾಮಂಡಲವಾಗಿರುವ ಹಿಂದೂ ಜನಜಾಗೃತಿ ಸಮಿತಿ ಈ ಕಂಪನಿಯ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿವೆ. ಇದನ್ನೂ ಓದಿ: ಕಿತ್ತೂರು ಉತ್ಸವ ಆಮಂತ್ರಣ ಪತ್ರಿಕೆಯಲ್ಲಿ ರಾಯಣ್ಣನ ಭಾವಚಿತ್ರ ಮಾಯ- ಅಭಿಮಾನಿಗಳು ಗರಂ

    ಈ ಬಗ್ಗೆ ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು, ಹಲಾಲ್ ಹಠಾವ್ ದೇಶ ಬಚಾವೋ ಎಂದು ಘೋಷಣೆ ಕೂಗಿದ್ದಾರೆ. ಹಲಾಲ್ ವಸ್ತುಗಳ ಬಹಿಷ್ಕಾರ ಹಾಕಿ ಎಂದು ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಫೋನ್‌ಕಾಲ್ ಮೂಲಕ ವಿಚಾರಣೆ ನಡೆಸಿದ ಸುಪ್ರೀಂ

    Live Tv
    [brid partner=56869869 player=32851 video=960834 autoplay=true]