Tag: boycott China

  • ಈ ವರ್ಷ ಮೇಡ್‌ ಇನ್‌ ಇಂಡಿಯಾ ರಾಖಿ – ಚೀನಾಗೆ 4 ಸಾವಿರ ಕೋಟಿ ನಷ್ಟ

    ಈ ವರ್ಷ ಮೇಡ್‌ ಇನ್‌ ಇಂಡಿಯಾ ರಾಖಿ – ಚೀನಾಗೆ 4 ಸಾವಿರ ಕೋಟಿ ನಷ್ಟ

    ನವದೆಹಲಿ: ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಆಂದೋಲನ ಯಶಸ್ವಿಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ವರ್ಷ ಮೇಡ್‌ ಇನ್‌ ಇಂಡಿಯಾ ರಾಖಿಯಿಂದಾಗಿ ಚೀನಾಗೆ 4 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ.

    ಗಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆಯ ಬಳಿಕ ಭಾರತ ಒಂದೊಂದೆ ನಿರ್ಧಾರದ ಕೈಗೊಳ್ಳುವ ಮೂಲಕ ಚೀನಾಗೆ ಶಾಕ್‌ ನೀಡುತ್ತಿದ್ದು, ಈ ಬಾರಿ ಭಾರೀ ಪ್ರಮಾಣದಲ್ಲಿ ಸ್ಬದೇಶಿ ರಾಖಿಗಳು ತಯಾರಾಗಿವೆ. ಇದನ್ನೂ ಓದಿ: ಬಾಂಧವ್ಯದ ಹಬ್ಬವೇ ರಕ್ಷಾ ಬಂಧನ – ಹಬ್ಬದ ವಿಶೇಷತೆ ಏನು?

    ಪ್ರತಿ ವರ್ಷ ವರ್ತಕರು ರಕ್ಷಾ ಬಂಧನದಂದು ಚೀನಾದಿಂದ ಆಮದು ಮಾಡಿಕೊಡ ರಾಖಿಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಜೂ.10 ರಂದು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ರಾಖಿ ಹಬ್ಬವನ್ನು ಹಿಂದೂಸ್ಥಾನಿ ರಾಖಿ ಎಂದು ಆಚರಣೆ ಮಾಡಬೇಕೆಂದು ಕರೆ ನೀಡಿತ್ತು.

    ಈ ಕರೆಯ ಹಿನ್ನೆಲೆಯಲ್ಲಿ ದೇಶಿಯ ರಾಖಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಸಿಎಐಟಿ ಸಹಕಾರದಿಂದ ದೇಶಾದ್ಯಂತ ಭಾರತೀಯ ವಸ್ತುಗಳನ್ನು ಬಳಸಿಕೊಂಡು ಅಂಗನವಾಡಿ, ಮನೆಗಳಲ್ಲಿರುವ ಮಹಿಳೆಯರು 1 ಕೋಟಿ ರಾಖಿಗಳನ್ನು ತಯಾರಿಸಿದ್ದಾರೆ.

    ಸಿಎಐಟಿಯ ರಾಷ್ಟ್ರೀಯ ಅಧ್ಯಕ್ಷ ಬಿಸಿ ಭಾರ್ತಿಯಾ ಪ್ರತಿಕ್ರಿಯಿಸಿ, ಈ ವರ್ಷ ಒಂದೇ ಒಂದು ರಾಖಿಯನ್ನೂ ಚೀನಾದಿಂದ ಈ ಬಾರಿ ಆಮದು ಮಾಡಿಕೊಂಡಿಲ್ಲ. ಪ್ರತಿ ವರ್ಷ 6 ಸಾವಿರ ಕೋಟಿ ರೂ. ಮೌಲ್ಯದ 50 ಕೋಟಿ ರಾಖಿಗಳು ಮಾರಾಟವಾಗುತ್ತಿತ್ತು. ಇವುಗಳ ಪೈಕಿ 4 ಸಾವಿರ ಕೋಟಿ ಮೌಲ್ಯದ ಚೀನಾ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

    ಸಿಎಐಟಿಯ ನೀಡಿದ ಮೊದಲ ಕರೆ ಯಶಸ್ವಿಯಾದ ನಂತರ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಮುಂದಿನ ಭಾಗವಾಗಿ ಆಗಸ್ಟ್‌ 9 ರಂದು ದೇಶಾದ್ಯಂತ ಇರುವ ಟ್ರೇಡರ್ ಗಳು ಚೀನಾ ಕ್ವಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಲಿದ್ದೇವೆ ಎಂದು ಬಿಸಿ ಭಾರ್ತಿಯಾ ತಿಳಿಸಿದ್ದಾರೆ.