Tag: Boxer

  • ಕಿಕ್ ಬಾಕ್ಸರ್ ಆಗ್ಬೇಕೆಂಬ ಆಸೆ ಹೊತ್ತ ತಂಗಿಯರ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ ಅಣ್ಣ

    ಕಿಕ್ ಬಾಕ್ಸರ್ ಆಗ್ಬೇಕೆಂಬ ಆಸೆ ಹೊತ್ತ ತಂಗಿಯರ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ ಅಣ್ಣ

    ಬಾಗಲಕೋಟೆ: ಅವರಿಬ್ಬರೂ ಪ್ರತಿಭಾವಂತ ಯುವತಿಯರು, ಅವರಿಗೆ ಇರಲಿಕ್ಕೆ ಒಂದು ಸ್ವಂತ ಮನೆಯೂ ಇಲ್ಲ. ಸದ್ಯ ಅಜ್ಜಿಯ ಮನೆಯಲ್ಲೇ ವಾಸಿಸ್ತಿರೋ ಆ ಯುವತಿಯರು, ಫೇಮಸ್ ಕಿಕ್ ಬಾಕ್ಸರ್ ಆಗಬೇಕು, ನಂತ್ರ ಒಳ್ಳೆಯ ಕೆಲಸ ಹಿಡಿದು ತಮ್ಮ ಬದುಕಿಗಾಗಿ ಜೀವನ ಸವೆಸುತ್ತಿರೋ ಅಣ್ಣ, ಅಜ್ಜಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಹೊಂದಿದ್ದಾರೆ. ಆದ್ರೆ ಸದ್ಯ ಆ ಯುವತಿಯರ ಸಾಧನೆಗೆ ಬಡತನ ಮುಳುವಾಗಿದೆ. ತಂಗಿಯರ ಓದಿಗಾಗಿ ಕಲಿಕೆ ಬಿಟ್ಟ ಅಣ್ಣ, ಕೂಲಿ ಮಾಡ್ತಾ ಇಬ್ಬರು ತಂಗಿಯರಿಗೆ ಶಿಕ್ಷಣ ಕೊಡಿಸುತ್ತಾ ಸ್ವಾಭಿಮಾನದ ಜೀವನ ಸಾಗಿಸ್ತಿದ್ದಾರೆ. ತಂಗಿಯರ ಮುಂದಿನ ಶಿಕ್ಷಣಕ್ಕೆ ಕೊಡುವಷ್ಟು ಅಣ್ಣನ ಬಳಿ ದುಡ್ಡಿಲ್ಲ. ತಂಗಿಯರಿಬ್ಬರ ಶಿಕ್ಷಣಕ್ಕಾಗಿ ಅಣ್ಣ ಸಹಾಯ ಬೇಡ್ತಿದ್ದಾರೆ.

    ಸಾಧನೆಯ ಕನಸ್ಸುಗಳನ್ನೇ ಹೊತ್ತ ಸೋದರಿಯರಿಬ್ಬರ ಶಿಕ್ಷಣಕ್ಕಾಗಿ ಅಣ್ಣ ಕಲಿಕೆ ಬಿಟ್ಟು ಕೂಲಿ ಮಾಡಲು ಮುಂದಾಗಿದ್ದಾರೆ. ಎಳೆಯ ವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡು ಅಣ್ಣ-ತಂಗಿಯರು ಅಜ್ಜಿಯ ಮನೆಯಲ್ಲೇ ವಾಸಿಸುತ್ತಿದ್ದಾರೆ. ಅಂದಹಾಗೆ ಸಾಧನೆಯ ಮೆಡಲ್ ಹಾಗೂ ಸರ್ಟಿಫೀಕೆಟ್ ಹಿಡಿದ ಈ ಸೋದರಿಯರ ಹೆಸರು ಶಿಲ್ಪಾ ಹಾಗೂ ಲಕ್ಷ್ಮಿ. ಇವರ ಸಾಧನೆಯ ಹಿಂದಿರುವ ಶಕ್ತಿಯೇ ಅಣ್ಣ ವಿಠ್ಠಲ್ ಹಣಮರ್. ಈ ಮೂವರು ಒಡಹುಟ್ಟಿದ್ದ ಅಣ್ಣ, ತಂಗಿಯರು. ಸದ್ಯ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದ ಅಜ್ಜಿ ಮಲ್ಲಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ.

    ಹತ್ತು ವರ್ಷದ ಹಿಂದೆ ವಿಠ್ಠಲ್ ಹನಮರ್ ತಂದೆ ತಾಯಿ ತೀರಿ ಹೋದ್ರು. ಆಗ ಸಂಸಾರದ ನೊಗ ಹೊತ್ತ ವಿಠ್ಠಲ್, ಸೆಕೆಂಡ್ ಪಿಯುಸಿಯಲ್ಲಿ ತನ್ನ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು, ತಮ್ಮ ತಂಗಿಯರಾದ ಶಿಲ್ಪಾ ಹಾಗೂ ಲಕ್ಷ್ಮಿಗೆ ಶಿಕ್ಷಣ ಕೊಡಿಸಲು, ಕೂಲಿ ಕೆಲ್ಸಕ್ಕೆ ಇಳಿದ್ರು. ಸ್ವಂತ ಮನೆಯೂ ಇಲ್ಲದ ಈ ಬಡಪಾಯಿಗಳಿಗೆ ಅಜ್ಜಿಯ ಮನೆಯೇ ಜೀವನಾಧಾರ. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ಶಿಲ್ಪಾ ಹಾಗೂ ಲಕ್ಷ್ಮಿ, ಕಿಕ್ ಬಾಕ್ಸಿಂಗ್‍ನಲ್ಲಿ ರಾಜ್ಯ ಮಟ್ಟದಲ್ಲಿ ಸಾಕಷ್ಟು ಮೆಡಲ್ ಗಳಿಸಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಆದ್ರೆ ಇದೀಗ ತಂಗಿಯರ ಮುಂದಿನ ಶಿಕ್ಷಣಕ್ಕೆ ಅಣ್ಣನ ಬಳಿ ದುಡ್ಡಿಲ್ಲ.

    ಹೌದು. ಒಂದು ಕಡೆ ಬೆಂಬಿಡದೇ ಕಾಡ್ತಿರೋ ಬಡತನ, ಮತ್ತೊಂದೆಡೆ ಫೇಮಸ್ ಕಿಕ್ ಬಾಕ್ಸರ್ ಆಗಬೇಕು ನಂತ್ರ ಒಳ್ಳೆಯ ಕೆಲಸ ಹಿಡಿಯಬೇಕೆಂಬ ಕನಸು ಹೊಂದಿರುವ ತಂಗಿಯರ ಸಾಧನೆಗೆ ಹೆಗಲಾಗಬೇಕೆಂಬ ಮಹಾದಾಸೆ ಹೊಂದಿರುವ ವಿಠ್ಠಲ್, ಮದುವೆಯಾಗದೇ ಕೂಲಿ ಮಾಡಿ ಜೀವ ಸಾಗಿಸ್ತಿದ್ದಾರೆ. ಕಲಾ ವಿಭಾದ ಮೂರನೇಯ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ಶಿಲ್ಪಾ ಹಾಗೂ ಲಕ್ಷ್ಮಿ ಮುಂದೆ ಬಿಪಿಎಡ್ಡ್ ಮಾಡಿ, ದೈಹಿಕ ಶಿಕ್ಷಕಿಯರಾಗಬೇಕು ಅಥವಾ ಯಾವುದಾದರೂ ಒಳ್ಳೆಯ ಕೆಲಸ ಹಿಡಿದು, ಅಣ್ಣ ಹಾಗೂ ಅಜ್ಜಿಯನ್ನ ಚೆನ್ನಾಗಿ ನೋಡಿಕೊಳ್ಬೇಕೆಂಬ ಬೆಟ್ಟದಷ್ಟು ಆಸೆ ಹೊಂದಿದ್ದಾರೆ.

    ಆದ್ರೆ ಅಣ್ಣ ವಿಠ್ಠಲ್ ಹನಮರ್ ಬಳಿ ದುಡ್ಡಿಲ್ಲ. ಹಾಗಾಗಿ ತಂಗಿಯರಿಬ್ಬರ ಮುಂದಿನ ವಿದ್ಯಾಭ್ಯಾಕ್ಕಾಗಿ ಸಹಾಯ ಮಾಡಿ ಎಂದು ಗೋಗರೆಯುತ್ತಿದ್ದಾರೆ. ಇತ್ತ ಅಜ್ಜಿ ಇರೋವರೆಗೂ ಅವರ ಮನೆಯಲ್ಲಿದ್ದೇವೆ. ಒಂದು ವೇಳೆ ಅಜ್ಜಿ ತೀರಿ ಹೋದ್ರೆ ನಾವು ಅನಾಥರಾಗುತ್ತೇವೆ. ಹಾಗಾಗಿ ಸರ್ಕಾರ ಅಥವಾ ಸಂಘ ಸಂಸ್ಥೆಯವರು ಸಹಾಯದಿಂದ ನಮಗೆ ಒಂದು ಆಶ್ರಯ ಮನೆಯನ್ನು ಒದಗಿಸಿ ಎಂದು ಮನವಿ ಮಾಡಿಕೊಳ್ತಿದ್ದಾರೆ. ಇನ್ನು ಇದೇ ತಿಂಗಳು 20ರಂದು ಶಿವಮೊಗ್ಗಾದಲ್ಲಿ ನಡೆಯೋ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಶಿಲ್ಪಾ ಹಾಗೂ ಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿ ಅಂತ ಊರಿನ ಜನ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಸಾಧನೆಯ ಕನಸುಗಳನ್ನೇ ಹೊತ್ತ ಸೋದರಿಯರು, ಈ ಸೋದರಿಯರಿಬ್ಬರ ಸಾಧನೆಗೆ ಹೆಗಲಾಬೇಕೆಂಬ ಅಣ್ಣ. ಒಟ್ಟಿನಲ್ಲಿ ಈ ಮಾದರಿ ಅಣ್ಣ ತಂಗಿಯರ ಸ್ಥಿತಿಗೆ ಯಾರಾದ್ರೂ ತಕ್ಕಮಟ್ಟಿನ ಸಹಾಯಹಸ್ತ ಚಾಚಲಿ ಅನ್ನೋದು ನಮ್ಮ ಮನವಿ.

    https://www.youtube.com/watch?v=IrNmFWFRj5M

  • ಯಾವಾಗ ಮದುವೆಯಾಗ್ತೀರ ಎಂದು ಕೇಳೀದ್ದಕ್ಕೆ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ

    ಯಾವಾಗ ಮದುವೆಯಾಗ್ತೀರ ಎಂದು ಕೇಳೀದ್ದಕ್ಕೆ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ

    ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

    ಗುರುವಾರದಂದು ದೆಹಲಿಯಲ್ಲಿ ನಡೆದ 112ನೇ ವಾರ್ಷಿಕ ಅಧಿವೇಶನ ಹಾಗೂ ಪಿಹೆಚ್‍ಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಹುಲ್ ಗಾಂಧಿಗೆ ಬಾಕ್ಸರ್ ವಿಜೇಂದರ್ ಸಿಂಗ್ ಎರಡು ಪ್ರಶ್ನೆಗಳನ್ನು ಕೇಳಿದ್ರು. ಮೊದಲನೆಯದ್ದು, ರಾಹುಲ್ ಗಾಂಧಿ ಯಾವಾಗ ಮದುವೆಯಾಗುತ್ತೀರಿ ಅಂತಾದ್ರೆ ಇನ್ನೊಂದು ನೀವು ಪ್ರಧಾನಿಯಾದ್ರೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡ್ತೀರಿ ಅಂತ ಕೇಳಿದ್ರು.

    ಮೊದಲು ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ಹಿಂದೇಟು ಹಾಕಿದ ರಾಹುಲ್, ಇದು ಹಳೇ ಪ್ರಶ್ನೆ. ಆಗಾಗ ಬರುತ್ತಲೇ ಇರುತ್ತೆ ಅಂದ್ರು. ಆದ್ರೆ ವಿಜೇಂದರ್ ಸಿಂಗ್ ಉತ್ತರಕ್ಕಾಗಿ ಒತ್ತಾಯಿಸಿದ್ರು. ಅಲ್ಲದೇ ನಾನು ಮತ್ತು ನನ್ನ ಪತ್ನಿ ನಿಮ್ಮ ಮದುವೆಯ ಬಗ್ಗೆ ಸದಾ ಮಾತನಾಡುತ್ತಿರುತ್ತೇವೆ ಅಂತೆಲ್ಲಾ ಹೇಳಿದ್ರು. ಈ ವೇಳೆ ರಾಹುಲ್ ಗೆ ಉತ್ತರಿಸದೆ ಬೇರೆ ದಾರಿಯೇ ಇರಲಿಲ್ಲ.

    ಕೊನೆಗೆ `ನಾನು ವಿಧಿಯ ಮೇಲೆ ನಂಬಿಕೆ ಇಟ್ಟವನು. ನನ್ನ ಮದುವೆ ಯಾವಾಗ ಆಗಬೇಕೆಂದಿದಿಯೋ ಅಂದೇ ಆಗುತ್ತೆ’ ಅಂತ ಉತ್ತರಿಸಿದ್ರು.

    ಕ್ರೀಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ತಾನು ಜಪಾನಿ ಮಾರ್ಷಲ್ ಆಟ್ರ್ಸ್ ಐಕಿಡೋನಲ್ಲಿ ಬ್ಲಾಕ್ ಬೆಲ್ಟ್ ಎಂದು ಹೇಳಿದ್ರು. ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲೂ ಮಾತನಾಡಿಲ್ಲ. ಸಾಮಾನ್ಯವಾಗಿ ದಿನಕ್ಕೆ ಒಂದು ಗಂಟೆ ಕ್ರೀಡೆಯಲ್ಲಿ ಪಾಲ್ಗೊಳ್ತೀನಿ. ಇತ್ತೀಚೆಗೆ ಕೆಲವು ತಿಂಗಳಿನಿಂದ ಸಾಧ್ಯವಾಗಿಲ್ಲ ಅಂದ್ರು.

    ನಂತರ ವಿಜೇಂದರ್, ಅದರ ವಿಡಿಯೋ ಅಪ್ಲೋಡ್ ಮಾಡಿದ್ರೆ ಜನರಿಗೆ ಸ್ಫೂರ್ತಿ ಸಿಗಬಹುದು ಎಂದು ಕೇಳಿದಾಗ ರಾಹುಲ್ ವಿಡಿಯೋ ಹಂಚಿಕೊಳ್ಳಲು ಒಪ್ಪಿಕೊಂಡ್ರು.

  • ಅಂಪೈರ್‍ ಗೆ ಕಿಕ್ ಕೊಟ್ಟ ಬಾಕ್ಸರ್- ವಿಡಿಯೋ ವೈರಲ್

    ಅಂಪೈರ್‍ ಗೆ ಕಿಕ್ ಕೊಟ್ಟ ಬಾಕ್ಸರ್- ವಿಡಿಯೋ ವೈರಲ್

    ಬರ್ಲಿನ್: ಬಾಕ್ಸಿಂಗ್ ರಿಂಗ್‍ನಲ್ಲಿ ಕೇವಲ ಎದುರಾಳಿಗಳು ಮಾತ್ರ ಹೊಡೆತ ತಿನ್ನುವುದಿಲ್ಲ, ಆಟಗಾರರ ಕೋಪಕ್ಕೆ ಕೆಲವೊಮ್ಮೆ ಅಂಪೈರ್ ಸಹ ತುತ್ತಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಂತೆ ಆಸ್ಟ್ರೀಯಾ ಎಂಎಂಎ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬಾಕ್ಸರ್ ಒಬ್ಬ ಅಂಪೈರ್ ಅವರಿಗೆ ಕಿಕ್ ನೀಡಿದ್ದಾರೆ.

    ಬಾಕ್ಸಿಂಗ್ ಮೈನ್ ಇವೆಂಟ್ ಪಂದ್ಯದಲ್ಲಿ ಜರ್ಮನಿಯ ನಿಹಾದ್ ನಾಸುಪೊವಿಕ್ ತನ್ನ ಎದುರಾಳಿ ವಿಲಿಯಂ ಓಟ್‍ನನ್ನು ತಮ್ಮ ಆಮೋಘ ನೆಕ್ ಚೋಕ್ ತಂತ್ರದ ಮೂಲಕ ಕೆಳಕ್ಕೆ ಉರುಳಿಸಿದ್ದರು. ಎದುರಾಳಿಯ ತಂತ್ರಕ್ಕೆ ಸಿಲುಕಿದ ವಿಲಿಯಂ ಟ್ಯಾಪ್ ಮಾಡುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡರು. ಆದರೆ ಸರಿಯಾದ ಸಮಯಕ್ಕೆ ಮಧ್ಯ ಪ್ರವೇಶಿಸದ ಅಂಪೈರ್ ವಿರುದ್ಧ ಕೋಪಗೊಂಡ ವಿಲಿಯಂ ಮರುಕ್ಷಣದಲ್ಲಿ ಅಂಪೈರ್‍ಗೆ ಕಿಕ್ ನೀಡಿದ್ದಾರೆ.

    ಈ ದೃಶ್ಯವಾಳಿಗಳನ್ನು ಬಾಕ್ಸಿಂಗ್ ಮ್ಯಾಚ್ ಸಂಸ್ಥೆಯ ಅಧಿಕೃತ ಪೇಜ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಯಾರು ಅನುಕರಿಸಬೇಡಿ’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

    ಆಟಗಾರನ ವಿರುದ್ಧ ಹೆಚ್ಚಿನ ಕಮೆಂಟ್‍ಗಳು ವ್ಯಕ್ತವಾಗಿದ್ದು. ಆಟಗಾರನ ವಿರುದ್ಧ ಕೋಡ್ ಆಫ್ ಕಂಡಕ್ಟ್ ನಿಯಮದಡಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಲಾಗುತ್ತಿದೆ.