Tag: bowring hospital

  • ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    – ಡಿಕೆಶಿ ವಿರುದ್ಧ ಆಕ್ರೋಶ ಹೊರ ಹಾಕಿದ ದಿವ್ಯಾಂಶಿ ತಾಯಿ ಅಶ್ವಿನಿ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stadium Stampede) ಮೃತಪಟ್ಟಿದ್ದ ದಿವ್ಯಾಂಶಿ ತಾಯಿ ಅಶ್ವಿನಿ ಇಂದು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮರಣೋತ್ತರ ಪರೀಕ್ಷೆ  ವೇಳೆ ಮಗಳ ಮೃತದೇಹದಿಂದ ಕಿವಿಯೋಲೆ (Earrings) ಕಳುವಾಗಿದೆ ಎಂದು ದೂರು ನೀಡಿದ್ದಾರೆ.

    ದೂರು ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತಾಯಿ ಅಶ್ವಿನಿ, ಮರಣೋತ್ತರ ಪರೀಕ್ಷೆಯ ಬಳಿಕ ಮಗಳ ಕಿವಿಯೋಲೆ ನಾಪತ್ತೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆಯ (Bowring Hospital) ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.

    ದಿವ್ಯಾಂಶಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಓಲೆಯ ಮೇಲೆ ಆಕೆಗೆ ತುಂಬಾ ಅಟ್ಯಾಚ್ಮೆಂಟ್ ಇತ್ತು. ಹಾಗಾಗಿ ಅದು ನನಗೆ ಬೇಕು ಅಂಥ ಕೇಳಿದ್ದೇನೆ ಎಂದರು. ಇದನ್ನೂ ಓದಿ: ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? ದಿವ್ಯಾಂಶಿ ತಾಯಿ ಪ್ರಶ್ನೆ

     

    ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿ ಓಲೆ ಬಿಚ್ಚಿರಲಿಲ್ಲ. ಹಾಗಾಗಿ ಅದು ನನಗೆ ಬೇಕು ಎಂದು ಕೇಳಿದ್ದೇನೆ. ಆಸ್ಪತ್ರೆಯಿಂದ ಯಾರು ಸರಿಯಾಗಿ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

    ಡಿಕೆಶಿ ವಿರುದ್ಧ ಆಕ್ರೋಶ
    ದಿವ್ಯಾಂಶಿ ಕಿವಿಯೋಲೆ ಕಳವು ವಿಚಾರಕ್ಕೆ ದೂರು ನೀಡಿದ ನಂತರ ತಾಯಿ ಅಶ್ವಿನಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಬಳಿಕ ಶವಾಗಾರದ ಬಳಿ ದಿವ್ಯಾಂಶಿ ಅಜ್ಜಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಅಜ್ಜಿ ಜೊತೆ ಮಾತನಾಡುವ ಫೋಟೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಡಿಸಿಎಂ ತಮ್ಮ ಅಧಿಕೃತ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ಶವಾಗಾರದ ಬಳಿ ಕುಳಿತುಕೊಂಡು ಟ್ರೀಟ್ಮೆಂಟ್ ಬಗ್ಗೆ ಮಾತಾಡ್ತಾರೆ. ಶವಾಗಾರದಲ್ಲಿ ಏನ್ ಟ್ರೀಟ್ಮೆಂಟ್ ಕೊಡುತ್ತಾರೆ ಎಂದು ಪ್ರಶ್ನಿಸಿದರು.

  • ಸೂರಜ್ ರೇವಣ್ಣಗೆ ಇಂದೂ ಮೆಡಿಕಲ್ ಟೆಸ್ಟ್ – ಲಿಂಗತ್ವ ಪರೀಕ್ಷೆ ಸಾಧ್ಯತೆ!

    ಸೂರಜ್ ರೇವಣ್ಣಗೆ ಇಂದೂ ಮೆಡಿಕಲ್ ಟೆಸ್ಟ್ – ಲಿಂಗತ್ವ ಪರೀಕ್ಷೆ ಸಾಧ್ಯತೆ!

    ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಅವರನ್ನು ಮಂಗಳವಾರ ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.

    ನಗರದ ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital) ಯೂರಾಲಜಿಸ್ಟ್, ಫೊರೆನ್ಸಿಕ್ ತಜ್ಷರು ಮತ್ತು ಪಿಜಿಷಿಯನ್ ವೈದ್ಯರಿಂದ ವಿವಿಧ ಮಾದರಿಯ ವೈದ್ಯಕೀಯ ಪರೀಕ್ಷೆಗಳನ್ನು (Medical Test) ನಡೆಸಲಿದ್ದಾರೆ. ಇದೇ ವೇಳೆ ಸಂತ್ರಸ್ತನಿಗೆ ಮನೋ ವೈದ್ಯರಿಂದ ಎಗ್ಸಾಮಿನೇಷನ್ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಸೂರಜ್ ರೇವಣ್ಣಗೆ ಯಾವ ರೀತಿ ಮೆಡಿಕಲ್ ಟೆಸ್ಟ್ ಆಗಲಿದೆ ?

    • ಕೂದಲು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ
    • ಲಿಂಗತ್ವ ಪರೀಕ್ಷೆ ಸಾಧ್ಯತೆ
    • ಅಸಹಜ ಲೈಂಗಿಕ ಕ್ರಿಯೆಗೆ ಸಮರ್ಥನ ಅಥವಾ ಈ ರೀತಿಯ ಅ ಸಹಜ ಲೈಂಗಿಕ ಕ್ರಿಯೆ ಇದೇ ಮೊದಲ ಅಂತಾ ಪರೀಕ್ಷೆ ಮಾಡ್ತಾರೆ
    • ಕಿಡ್ನಿ ಮತ್ತು ವೃಷಣಗಳ ಪರೀಕ್ಷೆಯೂ ಸಾಧ್ಯತೆ
    • ಲೈಂಗಿಕ ಸಮರ್ಥತೆ ಬಗ್ಗೆ ಪರೀಕ್ಷೆ
    • ಫೊರೆನ್ಸಿಕ್‌ ಫಾರೆನ್ಸಿಕ್ ತಙ್ಞರಿಂದ ಕೂದಲು, ಬಟ್ಟೆ ಮತ್ತು ಕೆಲವೊಂದು ವಸ್ತುಗಳನ್ನ ಪರೀಕ್ಷೆಗೆ ಒಳಪಡಿಸ್ತಾರೆ
    • ಡಿಎನ್‌ಎ ಟೆಸ್ಟ್ ಕೂಡ ಮಾಡಲಿದ್ದಾರೆ
    • ಡಿಎನ್‌ಎ ಸೇರಿದಂತೆ 8 ಬಗೆಯ ಮೆಡಿಕಲ್ ಟೆಸ್ಟ್ ಮಾಡುವ ಸಾಧ್ಯತೆ

    ಸೂರಜ್ ಮೊಬೈಲ್ ಸೀಜ್:
    ಸದ್ಯ ಹೊಳೆನರಸೀಪುರ ಪೊಲೀಸರಿಂದ ಕೇಸ್ ದಾಖಲೆ ಪಡೆದು ತನಿಖೆ ಆರಂಭಿಸಿರುವ ಸಿಐಡಿ ತಂಡ ಆರೋಪಿ ಮೊಬೈಲ್ ಸೀಜ್ ಮಾಡಿದೆ. ಸೂರಜ್ ಹಾಗೂ ಸಂತ್ರಸ್ತನ ನಡುವೆ ನಡೆದಿರುವ ಚಾಟಿಂಗ್ ಹಾಗೂ ಫೋನ್ ಸಂಭಾಷಣೆ ಮಾಹಿತಿ ಕಲೆಹಾಕಿದ್ದು, ತನಿಖೆ ಮುಂದುವರಿಸಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.

  • ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಸಂತ್ರಸ್ತನಿಗಿಂದು ಬೆಂಗ್ಳೂರಲ್ಲಿ ಮೆಡಿಕಲ್‌ ಟೆಸ್ಟ್‌!

    ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಸಂತ್ರಸ್ತನಿಗಿಂದು ಬೆಂಗ್ಳೂರಲ್ಲಿ ಮೆಡಿಕಲ್‌ ಟೆಸ್ಟ್‌!

    ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ (Suraj Revanna) ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೂರು ದಾಖಲಿಸಿರುವ ಸಂತ್ರಸ್ತ ಯುವಕನಿಗೆ ಭಾನುವಾರ (ಇಂದು) ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ (Bowring Hospital) ವೈದ್ಯಕೀಯ ಪರೀಕ್ಷೆ ನಡೆಯಲಿದೆ.

    ಶನಿವಾರ ತಡರಾತ್ರಿಯೇ ಸಂತ್ರಸ್ತನನ್ನು ಹಾಸನದಿಂದ ಬೌರಿಂಗ್‌ ಆಸ್ಪತ್ರೆಗೆ ಕರೆತಂದಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ವೈದ್ಯಕೀಯ ಪರೀಕ್ಷೆಗೆ (Medical Test) ನಿರಾಕರಿಸಿದ ಹಿನ್ನೆಲೆ ಸಂತ್ರಸ್ತನ ಮನವಿ ಮೇರೆಗೆ ಬೆಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಹೊಳೆನರಸೀಪುರ ಪೊಲೀಸರು ತಡರಾತ್ರಿ 2 ಗಂಟೆಗೆ ಸಂತ್ರಸ್ತ ಯುವಕನನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ.

    ಸದ್ಯಕ್ಕೆ ಕೌನ್ಸೆಲಿಂಗ್‌ ಮುಗಿಸಿರುವ ಕರ್ತವ್ಯ ನಿರತ ವೈದ್ಯರು, ಮುಂದಿನ ಪರೀಕ್ಷೆಗಳಿಗೆ ಹಿರಿಯ ವೈದ್ಯರ ಆಗಮನಕ್ಕೆ ಕಾಯುತ್ತಿದ್ದಾರೆ. ಭಾನುವಾರ (ಇಂದು) ಬೆಳಗ್ಗೆ 10 ಗಂಟೆ ನಂತರ ವೈದ್ಯಕೀಯ ಪರೀಕ್ಷೆಯ ಬೆಳವಣಿಗೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದ ದರ್ಶನ್‌ – ʻದಾಸʼನ ಜೈಲು ದಿನಚರಿ ಹೇಗಿದೆ?

    ಸಂತ್ರಸ್ತ ಲೈಂಗಿಕ ಕ್ರಿಯೆಗೆ ಸಮರ್ಥನಾಗಿದ್ದಾನಾ ಅನ್ನೋ ಪರೀಕ್ಷೆ ಇದಾಗಿದೆ. ಸದ್ಯ ಸಂತ್ರಸ್ತನಿಗೆ ರಕ್ತದೊತ್ತಡ, ಶುಗರ್, ಇಸಿಜಿ, ದೇಹದ ಮೇಲೆ ಕಚ್ಚಿರುವ ಕಲೆಗಳ ಬಗ್ಗೆ ತಪಾಸಣೆ ನಡೆಸಲಾಗಿದೆ. ಹಿರಿಯ ವೈದ್ಯರ ಸಮ್ಮುಖದಲ್ಲಿ ಲೈಂಗಿಕ ಕ್ರಿಯೆ ಸಾಮರ್ಥ್ಯ ಪರೀಕ್ಷೆ ನಡೆಲಿದೆ. ಹೊಳೆನರಸೀಪುರ ಪೊಲೀಸರು ಸ್ಥಳದಲ್ಲಿ ಇದ್ದಾರೆ ಎಂದು ಬೌರಿಂಗ್‌ ಆಸ್ಪತ್ರೆ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ. ಇದನ್ನೂ ಓದಿ: Breaking: ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ

    ರೇವಣ್ಣ ವಿರುದ್ಧ ಕೇಸ್‌:
    ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಕೇಸ್‌ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್‌ಪಿಗೂ ದೂರಿನ ಪ್ರತಿಯನ್ನು ಇ-ಮೇಲ್ ಮಾಡಿದ್ದ. ಮೇಲ್ ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

    ಸೂರಜ್‌ ಲಾಕ್‌ ಆಗಿದ್ದು ಹೇಗೆ?
    ಶನಿವಾರ ರಾತ್ರಿ ತನ್ನ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ ಸಂತ್ರನ ವಿರುದ್ಧ ಪ್ರತಿದೂರು ನೀಡಲು ಸಂಜೆ 6 ಗಂಟೆ ವೇಳೆಗೆ ಹಾಸನದ ಸೆನ್‌ ಪೊಲೀಸ್‌ ಠಾಣೆಗೆ ತೆರಳಿದ್ದರು. ಅಲ್ಲಿಯೇ ಅವರನ್ನು ಬಂಧಿಸಿದ್ದ ಪೊಲೀಸರು ರಾತ್ರಿ ಸುಮಾರು 11:30ರ ವರೆಗೂ ವಿಚಾರಣೆ ನಡೆಸಿದ್ದರು. ಬಳಿಕ ಸೂರಜ್‌ ಜೊತೆಗೆ ನಿಗೂಢ ಸ್ಥಳಕ್ಕೆ ತೆರಳಿದ್ದ ಪೊಲೀಸರು ತಡರಾತ್ರಿ 1:30ರ ವರೆಗೂ ವಿಚಾರಣೆ ಮುಂದುವರಿಸಿದ್ದರು. ಪ್ರಕರಣದ ತನಿಖಾಧಿಕಾರಿ ಆಗಿರುವ ಸಕಲೇಶಪುರ ಡಿವೈಎಸ್‌ಪಿ ಪ್ರಮೋದ್‌ ಕುಮಾರ್‌ ಅವರು ಸೂರಜ್‌ ರೇವಣ್ಣ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

  • ಅರೆಸ್ಟ್‌ ಬಳಿಕ SIT ಕಚೇರಿಗೆ ಪ್ರಜ್ವಲ್‌ ರೇವಣ್ಣ; ಏರ್‌ಪೋರ್ಟ್‌ನಲ್ಲಿ ಏನೆಲ್ಲಾ ಬೆಳವಣಿಗೆ ಆಯ್ತು? – ಮುಂದೇನು ಕ್ರಮ?

    ಅರೆಸ್ಟ್‌ ಬಳಿಕ SIT ಕಚೇರಿಗೆ ಪ್ರಜ್ವಲ್‌ ರೇವಣ್ಣ; ಏರ್‌ಪೋರ್ಟ್‌ನಲ್ಲಿ ಏನೆಲ್ಲಾ ಬೆಳವಣಿಗೆ ಆಯ್ತು? – ಮುಂದೇನು ಕ್ರಮ?

    – ಶುಕ್ರವಾರ ಬೆಳಗ್ಗಿನ ಜಾವ ಮೆಡಿಕಲ್‌ ಟೆಸ್ಟ್‌ ಸಾಧ್ಯತೆ

    ಬೆಂಗಳೂರು: 35 ದಿನಗಳ ಬಳಿಕ ಬೆಂಗಳೂರಿಗೆ ಬಂದಿಳಿದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನ ಎಸ್‌ಐಟಿ ಅಧಿಕಾರಿಗಳು ಏರ್‌ಪೋರ್ಟ್‌ನಲ್ಲೇ ಬಂಧಿಸಿ, ಎಸ್‌ಐಟಿ ಕಚೇರಿಗೆ ಕರೆದೊಯ್ದಿದ್ದಾರೆ. ಪ್ರಜ್ವಲ್‌ ಅವರನ್ನು ಅರೆಸ್ಟ್‌ ಮಾಡಿದ ಬಳಿಕ ಏನೆಲ್ಲಾ ಬೆಳವಣಿಗೆ ಆಯ್ತು? ಮುಂದಿನ ಕ್ರಮಗಳೇನು ಎಂಬ ಪಿನ್‌ ಟು ಪಿನ್‌ ಡಿಟೇಲ್ಸ್‌ ಇಲ್ಲಿದೆ…

    * ಶುಕ್ರವಾರ ಮಧ್ಯರಾತ್ರಿ 12:35ರ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್‌ ರೇವಣ್ಣ ಅವರಿದ್ದ ಲುಫ್ತಾನ್ಸಾ ಏರ್‌ಲೈನ್ಸ್‌ನ (Lufthansa Airlines) DLH 764 A-359 ವಿಮಾನ ಲ್ಯಾಂಡಿಗ್‌ ಆಯಿತು. ಇದನ್ನೂ ಓದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಧ್ಯರಾತ್ರಿ ಏರ್‌ಪೋರ್ಟ್‌ನಲ್ಲೇ ಅರೆಸ್ಟ್!

    * ವಿಮಾನ ಲ್ಯಾಂಡಿಂಗ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಸಿಐಎಸ್‌ಎಫ್‌ ಸಿಬ್ಬಂದಿ ವಿಮಾನದ್ವಾರದಲ್ಲೇ ಸುತ್ತುವರಿದು ಪ್ರಜ್ವಲ್‌ ಅವರನ್ನ ವಶಕ್ಕೆ ಪಡೆಯಲು ಮುಂದಾದರು. ವಿಮಾನ ನಿಲ್ದಾಣದಲ್ಲಿ ಮಿಗ್ರೇಷನ್‌ ಅಧಿಕಾರಿಗಳು ಇಮಿಗ್ರೇಷನ್‌ ಪ್ರಕ್ರಿಯೆ (ಲಗೇಜ್‌ ಪರಿಶೀಲಿಸಿ, ಭಾರತಕ್ಕೆ ಮರಳಿರುವುದಾಗಿ ಸ್ಟ್ಯಾಂಪ್‌ ಹಾಕಿದ್ದಾರೆ) ಪೂರ್ಣಗೊಳಿಸುತ್ತಿದ್ದಂತೆ ಎಸ್‌ಐಟಿಗೆ ಹಸ್ತಾಂತರಿಸಿದ್ದಾರೆ.

    * ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿ ಕರೆದೊಯ್ದಿದ್ದಾರೆ. ಇದನ್ನೂ ಓದಿ: 35 ದಿನಗಳ ಬಳಿಕ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್!

    * ಮಾಧ್ಯಮದವರ ಕಣ್ತಪ್ಪಿಸಲು ಮಾರ್ಗ ಬದಲಿಸಿದ್ದ ಎಸ್‌ಐಟಿ ಅಧಿಕಾರಿಗಳು ಮಧ್ಯರಾತ್ರಿ 2 ಗಂಟೆ ವೇಳೆಗೆ ಎಸ್‌ಐಟಿ ಕಚೇರಿಗೆ ಕರೆತಂದಿದ್ದಾರೆ.

    * ಪ್ರಜ್ವಲ್‌ ರೇವಣ್ಣ ಅವರು ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಕಂಡುಬಂದಿದ್ದಾರೆ. ಹಾಗಾಗಿ ಎಸ್‌ಐಟಿ ಕಚೇರಿಗೆ ಕರೆದೊಯ್ಯಲಾಗಿದೆ. ಶುಕ್ರವಾರ ಬೆಳಗ್ಗಿನ ಜಾವ ಅವರನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗುತ್ತದೆ. ವೈದ್ಯಕೀಯ ಪರೀಕ್ಷೆ ನಂತರ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಸ್‌ಐಟಿ ಮೂಲಗಳು ತಿಳಿಸಿವೆ.

  • ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಧ್ಯರಾತ್ರಿ ಏರ್‌ಪೋರ್ಟ್‌ನಲ್ಲೇ ಅರೆಸ್ಟ್!

    ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಧ್ಯರಾತ್ರಿ ಏರ್‌ಪೋರ್ಟ್‌ನಲ್ಲೇ ಅರೆಸ್ಟ್!

    ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಕರಣ ನಡೆದ 35 ದಿನಗಳ ಬಳಿಕ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದಾರೆ.

    ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಏಪ್ರಿಲ್ 27ರಂದು ಜರ್ಮನಿಗೆ ಹಾರಿದ್ದ ಪ್ರಜ್ವಲ್ ಜರ್ಮನಿಯ ಮ್ಯೂನಿಕ್‌ನಿಂದ ಬಂದ ಲುಫ್ತಾನ್ಸಾ ಏರ್‌ಲೈನ್ಸ್‌ನ (lufthansa airlines) DLH 764 A-359 ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆದರು. ಶುಕ್ರವಾರ ಮಧ್ಯರಾತ್ರಿ 12:35ರ ವೇಳೆಗೆ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯಿತು. ವಿಮಾನ ಲ್ಯಾಂಡಿಂಗ್‌ ಆಗುತ್ತಿದ್ದಂತೆ ವಿಮಾನ ಸುತ್ತುವರಿದ ಸಿಐಎಸ್‌ಎಫ್‌ ಸಿಬ್ಬಂದಿ, ಪ್ರಜ್ವಲ್‌ ಅವರನ್ನ ಬಂಧಿಸಿ ಕರೆದೊಯ್ದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್‌ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಅವರನ್ನ ಎಸ್‌ಐಟಿಗೆ ಹಸ್ತಾಂತರಿಸಲಿದ್ದಾರೆ.

    ಭಾರೀ ಭದ್ರತೆ:
    ಪ್ರಜ್ವಲ್ ಆಗಮನದ ವೇಳೆ ಹೆಚ್ಚು ಜನ ಸೇರುವ ಸಾಧ್ಯತೆಯಿದ್ದ ಕಾರಣ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ಪೊಲೀಸರು ಅಲರ್ಟ್ ಆಗಿದ್ದರು. ಪ್ರಜ್ವಲ್ ಬಂಧನ ಮಾಡಿ ಕರೆದುಕೊಂಡು ಹೋಗುವ ವೇಳೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಏರ್‌ಪೋರ್ಟ್ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಸೂಚಿಸಲಾಗಿತ್ತು, ಜನಸಂದಣಿ ಸೇರದಂತೆ ಎಚ್ಚರಿಕೆ ವಹಿಸಲಾಗಿತ್ತು. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರು ಭೇಟಿ ನೀಡಿದ್ದು, ಪ್ರಜ್ವಲ್ ಕರೆದೊಯ್ಯುವ ಮಾರ್ಗವನ್ನು ಪರಿಶೀಲನೆ ನಡೆಸಿದ್ದರು.

    ಮ್ಯೂನಿಕ್ ವಿಮಾನ ನಿಲ್ದಾಣದ ವಲಸೆ ವಿಭಾಗ ಬೆಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗಕ್ಕೆ ಮೊದಲೇ ಪ್ರಯಾಣಿಕರ ಪಟ್ಟಿ ಕಳುಹಿಸಿತ್ತು. ಈ ಪಟ್ಟಿಯಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಇರುವುದನ್ನು ಎಸ್‌ಐಟಿ ಖಚಿತ ಪಡಿಸಿತ್ತು. ಲುಫ್ತನ್ಸಾ ವಿಮಾನದಲ್ಲಿ 3 ಲಕ್ಷ ರೂ. ಖರ್ಚು ಮಾಡಿ ಬಿಸಿನೆಸ್ ದರ್ಜೆಯ ಟಿಕೆಟ್ ಖರೀದಿಸಿ ಪ್ರಜ್ವಲ್ ಮ್ಯೂನಿಕ್‌ನಿಂದ ಹೊರಟಿದ್ದರು. ಒಟ್ಟು 23 ಬಿಸಿನೆಸ್ ದರ್ಜೆಯ ಟಿಕೆಟ್ ಪೈಕಿ 8 ಮಂದಿ ಮಾತ್ರ ಪ್ರಜ್ವಲ್ ಅವರಿದ್ದ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಪ್ರಜ್ವಲ್ ರೇವಣ್ಣ ಒಬ್ಬಂಟಿಯಾಗಿ ವಿಂಡೋ ಸೀಟ್‌ನಲ್ಲಿ ಕುಳಿತಿದ್ದರು.

    ಪ್ರಕರಣ ಬೆಳಕಿಗೆ ಬಂದಿದ್ದು ಯಾವಾಗ?
    ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೋಗಳನ್ನೊಳಗೊಂಡ ಏಪ್ರಿಲ್‌ 23ರಂದು ಬೆಳಕಿಗೆ ಬಂದಿತ್ತು. ಈ ಬಗ್ಗೆ ದೂರುಗಳು ಕೇಳಿಬರುತ್ತಿದ್ದಂತೆ ಎಸ್‌ಐಟಿ ರಚನೆಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಅಶ್ಲೀಲ ವೀಡಿಯೋ ಪ್ರಕರಣ ಹೊರಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪೆನ್‌ಡ್ರೈವ್ ಪ್ರಕರಣ ಸಂಬಧ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಈ ಬೆಳವಣಿಗೆಯ ನಂತರ, ಮೇ 1 ರಂದು ಪ್ರಜ್ವಲ್ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೇಳಿದ್ದರು. ಬಳಿಕ ಯಾರೊಟ್ಟಿಗೂ ಸಂಪರ್ಕದಲ್ಲಿಲ್ಲದೇ ನಾಪತ್ತೆಯಾಗಿದ್ದ ಪ್ರಜ್ವಲ್ ಇದೇ ಮೇ 27ರಂದು ಅಜ್ಞಾತ ಸ್ಥಳದಿಂದ ವೀಡಿಯೋವೊಂದನ್ನ ಬಿಡುಗಡೆ ಮಾಡಿದ್ದರು.

    ವೀಡಿಯೋದಲ್ಲಿ ಪ್ರಜ್ವಲ್ ಹೇಳಿದ್ದೇನು?
    ವಿದೇಶಕ್ಕೆ ಹೋಗುವ ಬಗ್ಗೆ ಮೊದಲೇ ಪ್ಲಾನ್ ಆಗಿತ್ತು. ವಿದೇಶಕ್ಕೆ ಹೋಗುವಾಗ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ನಾನು ವಿದೇಶದಲ್ಲಿದ್ದಾಗ ಯೂಟ್ಯೂಬ್ ನ್ಯೂಸ್ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ಕಂಡುಬAದಿದೆ. ಇದಾದ ನಂತರ ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಎಸ್‌ಐಟಿ ನೋಟಿಸ್ ನೀಡಿದ ವಿಚಾರ ಗೊತ್ತಾಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ನನ್ನ ಮೇಲೆ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

  • ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆಗೆ ವಕ್ಫ್ ಮಹಿಳಾ ಪರಿಷತ್ತಿನಿಂದ 5 ಲಕ್ಷ ಸಹಾಯಧನ

    ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆಗೆ ವಕ್ಫ್ ಮಹಿಳಾ ಪರಿಷತ್ತಿನಿಂದ 5 ಲಕ್ಷ ಸಹಾಯಧನ

    ಬೆಂಗಳೂರು: ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಬಡ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ರಿಜಿಡ್ ನೆಪ್ರೋಸ್ಕೋಪ್ ಖರೀದಿಸಲು ಕರ್ನಾಟಕ ಸ್ಟೇಟ್ ವಕ್ಫ್ ಫೌಂಡೇಷನ್ ಫಾರ್ ವುಮೆನ್ ಡೆವಲಪ್‌ಮೆಂಟ್ ವತಿಯಿಂದ 5 ಲಕ್ಷ ರೂ. ಸಹಾಯಧನದ ಚೆಕ್ ಅನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಸ್ತಾಂತರಿಸಿದರು. ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    ಶನಿವಾರ ವಿಕಾಸಸೌಧದಲ್ಲಿ ಚೆಕ್ ಅನ್ನು ಹಸ್ತಾಂತರಿಸಿ ಮಾತನಾಡಿದ ಸಚಿವೆ, ಕರ್ನಾಟಕ ಸ್ಟೇಟ್ ವಕ್ಫ್ ಫೌಂಡೇಷನ್ ಫಾರ್ ವುಮೆನ್ ಡೆವಲಪ್‌ಮೆಂಟ್ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಚಿಕಿತ್ಸೆಗಾಗುವ ಖರ್ಚನ್ನು ಭರಿಸಲಾಗುತ್ತಿದೆ. ಶಿವಾಜಿನಗರದಲ್ಲಿರುವ ಸರ್ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸಿಟ್ಯೂಟ್ ಸಂಸ್ಥೆಯ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಮತ್ತು ಬಡ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಈ ಸಂಸ್ಥೆಯ ಮನವಿಯಂತೆ ರಿಜಿಡ್ ನೆಪ್ರೋಸ್ಕೋಪ್(Rigid Neproscope) ಉಪಕರಣ ಖರೀದಿಸಲು 5 ಲಕ್ಷ ರೂ. ಸಹಾಯಧನವನ್ನು ನೀಡಲಾಗಿದೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ದೊರೆಯಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಸ್ಥಳ ಪರಿಶೀಲನೆ ಮಾಡಿದ ಸಿಎಂ

    ಬೌರಿಂಗ್ ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಕಾಂತ್, ಡಾ. ಅಭಿಜಿತ್, ಡಾ. ಜಹೀರ್ ಮತ್ತು ಆಹಾರ ತಜ್ಞರಾದ ಮೇಘಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    Live Tv

  • ಸೌಂದರ್ಯ ಸಾವು ನಿಜಕ್ಕೂ ಶಾಕ್ ನೀಡಿದೆ: ಸಹ ವೈದ್ಯರು

    ಸೌಂದರ್ಯ ಸಾವು ನಿಜಕ್ಕೂ ಶಾಕ್ ನೀಡಿದೆ: ಸಹ ವೈದ್ಯರು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದು, ಸೌಂದರ್ಯ ನೋಡಲು ಆಸ್ಪತ್ರೆಯ ಸಹ ವೈದ್ಯರು ಶಾಕ್ ಆಗಿದ್ದಾರೆ.

    ಬಿಎಸ್‍ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ತಮ್ಮ ಅಪಾಟ್‍ಮೆಂಟ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೌರಿಂಗ್‍ನಲ್ಲಿ ಜನರಲ್ ಸರ್ಜನ್ ಆಗಿದ್ದ ಸೌಂದರ್ಯ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಬೌರಿಂಗ್ ಆಸ್ಪತ್ರೆಯ ಸಹ ವೈದ್ಯರ ದಂಡು ಜಮಾಯಿಸುತ್ತಿದ್ದಾರೆ. ಇದನ್ನೂ ಓದಿ: ಅತ್ತಿಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!

    ಈ ಕುರಿತಂತೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಸಹವೈದ್ಯರೊಬ್ಬರು, ಆಕೆ ಇಲ್ಲಿ ಕಾರ್ಯನಿರ್ವಹಿಸುವಾಗ ಯಾವುದೇ ರೀತಿಯಿಂದಲೂ ಆಕೆಗೆ ಡಿಪ್ರೆಷನ್ ಸಮಸ್ಯೆ ಇರಲಿಲ್ಲ. ಆಕೆ ಓರ್ವ ಉತ್ತಮ ವೈದ್ಯೆ. ಈ ಹಿಂದೆ ಅವರ ಅಜ್ಜ ಸಿಎಂ ಆಗಿದ್ದಾಗಲೂ ತಾನೊಬ್ಬ ಸಿಎಂ ಮೊಮ್ಮಗಳು ಎಂಬ ಅಹಂ ಎಂದೂ ಕೂಡ ಇರಲಿಲ್ಲ. ಇದಕ್ಕಿದಂತೆ ಆಕೆಗೆ ಡಿಪ್ರೆಷನ್ ಆಗಿದ್ದು ಹೇಗೋ ಏನೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

    ಡೆಲಿವರಿ ಸಮಯದಲ್ಲಿ ಕೂಡ ಸೌಂದರ್ಯ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಆಕೆಯ ಸಾವು ನಿಜಕ್ಕೂ ಶಾಕಿಂಗ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಸೌಂದರ್ಯ ನೋಡಲು ಬೌರಿಂಗ್ ಆಸ್ಪತ್ರೆಯ ಸಹ ವೈದ್ಯರು ದೌಡು ಮಾರ್ಚರಿಯ ಬಳಿ ಆಗಮಿಸುತ್ತಿದ್ದಾರೆ.

  • ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಸತ್ಯಜಿತ್ (72) ನಿಧನರಾಗಿದ್ದಾರೆ.

    ಸಾಮಾನ್ಯ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸತ್ಯಜಿತ್ ಅವರು ಕೆಲವು ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಲನಚಿತ್ರರಂಗ ಕಂಬನಿ ಮಿಡಿದಿದೆ. ಇದನ್ನೂ ಓದಿ: ಸ್ಟಾರ್ ನಟರೆಲ್ಲ ಕೈಬಿಟ್ರು: ಚಿಕಿತ್ಸೆಗೆ ಬಾಗಲಕೋಟೆಗೆ ಬಂದು ನೋವು ತೋಡಿಕೊಂಡ ಸತ್ಯಜಿತ್

    ಹಲವು ಜನಪ್ರಿಯ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಸತ್ಯಜಿತ್ ನಟಿಸಿದ್ದಾರೆ. ಅಲ್ಲದೇ ಕೆಲ ದಿನಗಳ ಹಿಂದೆ ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ಕಳೆದುಕೊಂಡಿದ್ದರು. ಇದನ್ನೂ ಓದಿ: ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣ

    ಬಹುಬೇಡಿಕೆಯ ಪೋಷಕ ನಟರಾಗಿದ್ದ ಸತ್ಯಜಿತ್, ಇವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. 650ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಸತ್ಯಜಿತ್ ಅವರು ಒಂದು ಕಾಲದಲ್ಲಿ ಬಹುಬೇಡಿಕೆ ಪೋಷಕ ನಟರಾಗಿ ಗುರುತಿಸಿಕೊಂಡಿದ್ದರು. ನೆಗೆಟಿವ್ ಪಾತ್ರ ಕೊಟ್ಟರೂ, ಅಷ್ಟೇ ಖಡಕ್ ಆಗಿ ಅಭಿನಯಿಸಿದ್ದರು.

    ಪುಟ್ನಂಜ (1995), ಶಿವ ಮೆಚ್ಚಿದ ಕಣ್ಣಪ್ಪ (1988), ಚೈತ್ರಾದ ಪ್ರೇಮಾಂಜಲಿ ( 1992), ಆಪ್ತಮಿತ್ರ (2004) ಇವು ಸತ್ಯಜಿತ್ ಅವರು ನಟಿಸಿದ ಪ್ರಮುಖ ಚಲನ ಚಿತ್ರಗಳಾಗಿದೆ. ಅರುಣ ರಾಗ, ಅಂತಿಮ ತೀರ್ಪು, ರಣರಂಗ, ನಮ್ಮೂರ ರಾಜ, ನ್ಯಾಯಕ್ಕಾಗಿ ನಾನು, ಯುದ್ಧಕಾಂಡ, ಇಂದ್ರಜಿತ್, ನಮ್ಮೂರ ಹಮ್ಮೀರ, ಪೊಲೀಸ್ ಲಾಕಪ್, ಮನೆದೇವ್ರು, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಸರ್ಕಲ್ ಇನ್ಸ್‌ಪೆಕ್ಟರ್‌, ಪಟೇಲ, ದುರ್ಗದ ಹುಲಿ, ಅಪ್ಪು, ಧಮ್, ಅಭಿ, ಅರಸು, ಇಂದ್ರ, ಭಾಗ್ಯದ ಬಳೇಗಾರ, ಕಲ್ಪನಾ, ಗಾಡ್ ಫಾದರ್, ಲಕ್ಕಿ, ಉಪ್ಪಿ 2, ಮಾಣಿಕ್ಯ, ರನ್ನ, ರಣವಿಕ್ರಮ, ಮೈತ್ರಿ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ. ಇದನ್ನೂ ಓದಿ: ಹುಟ್ಟಿದಾಗಲೇ ಮಗಳು ಸತ್ತೋಗಿದ್ರೆ ಚೆನ್ನಾಗಿತ್ತು ಅನ್ನಿಸುತ್ತಿದೆ: ಸತ್ಯಜಿತ್

  • ಗೋಡೆಗಳಲ್ಲಿ ಬಿರುಕು, ಪೈಪ್ ಸೋರಿಕೆ – ಬೌರಿಂಗ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಜೀವಭಯ

    ಗೋಡೆಗಳಲ್ಲಿ ಬಿರುಕು, ಪೈಪ್ ಸೋರಿಕೆ – ಬೌರಿಂಗ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಜೀವಭಯ

    ಬೆಂಗಳೂರು: ಮಂತ್ರಿ ಮಾಲ್ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಈ ಅವಘಡದ ನೆನಪು ಮಾಸುವ ಮುನ್ನವೇ ಪ್ರತಿಷ್ಠಿತ ಬೌರಿಂಗ್ ಆಸ್ಪತ್ರೆ ಕುಸಿಯಲು ತಯಾರಾಗಿ ನಿಂತಂತಿದೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಒದಗಿಸೋ ಬೌರಿಂಗ್ ಆಸ್ಪತ್ರೆ ಈಗ ಜನರ ಪ್ರಾಣ ನುಂಗಲು ರೆಡಿಯಾಗಿದೆ.

    2006ರಲ್ಲಿ ಉದ್ಘಾಟನೆಗೊಂಡ ಬೌರಿಂಗ್ ಆಸ್ಪತ್ರೆಗೆ ದಿನನಿತ್ಯ ನೂರಾರು ಜನ ಚಿಕಿತ್ಸೆಗಾಗಿ ಹೋಗ್ತಾರೆ. ಯಾವುದೇ ಅಪಘಾತಗಳಾದ್ರೂ ಕೂಡ ಇದೇ ಆಸ್ಪತ್ರೆಗೆ ಮೊದಲು ಕರೆತರಲಾಗುತ್ತೆ. ಆದ್ರೆ ಇದೀಗ ರೋಗಿಗಳು ಬೌರಿಂಗ್ ಆಸ್ಪತ್ರೆಗೆ ಬರಲು ಭಯಬೀಳುವಂತಾಗಿದೆ. ಇದಕ್ಕೆ ಕಾರಣ ಆಸ್ಪತ್ರೆ ಪೂರ್ತಿ ಬಿರುಕು ಬಿಟ್ಟಿರೋದು.

    ಸಿಲಿಕಾನ್ ಸಿಟಿ ಮಾತ್ರವಲ್ಲ ಬೇರೆ ಊರುಗಳಿಂದ ಕೂಡ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರ್ತಾರೆ. ಆದ್ರೆ ಆಸ್ಪತ್ರೆ ಗೋಡೆಗಳು ಮಾತ್ರ ಪೂರ್ತಿ ಬಿರುಕು ಬಿಟ್ಟಿದ್ದು ಜೀವ ಭಯದಿಂದ ಓಡಾಡುವಂತಾಗಿದೆ. ಅದ್ರಲ್ಲೂ ತುರ್ತು ಚಿಕಿತ್ಸೆ ಹಾಗೂ ಮಕ್ಕಳ ವಾರ್ಡ್ ಇದಾಗಿದ್ದು, ರೋಗಿಗಳು ಇನ್ನೂ ಭಯ ಬೀಳುವಂತಾಗಿದೆ. ಬಡರೋಗಿಗಳ ಆಸ್ಪತ್ರೆಗೆ ಫಿಲ್ಟರ್ ಮರಳು ಬಳಸಲಾಗಿದೆ. ಹೀಗಾಗಿ ಗೋಡೆಗಳಿ ಬಿರುಕು ಬಿಟ್ಟಿದೆ ಎಂದು ಸ್ಥಳೀಯರಾದ ಬಸವರಾಜ್ ಆರೋಪಿಸಿದ್ದಾರೆ.

    ಒಂದೆಡೆ ಗೋಡೆ ಬಿರುಕು ಬಿಟ್ಟಿದ್ರೆ, ಇನ್ನೊಂದೆಡೆ ನೀರಿನ ಪೂರೈಕೆಗೆ ಅಳವಡಿಸಿರುವ ಪೈಪ್ ಸೋರಿಕೆಯಾಗ್ತಿದೆ. ಹೀಗಾಗಿ ಮೇಲಿನ ಅಂತಸ್ತಿಂದ ಕೆಳ ಮಹಡಿವರೆಗೂ ನೀರಿನ ಸೋರಿಕೆಯಾಗ್ತಿದ್ದು, ಗೋಡೆ ಇನ್ನಷ್ಟು ಬಿರುಕು ಬಿಡ್ತಿದೆ. ಈ ಬಗ್ಗೆ ಆಸ್ಪತ್ರೆಯ ಡಿನ್ ಡಾ. ಮಂಜುನಾಥ್‍ನ ಕೇಳಿದ್ರೆ, ಆ ರೀತಿ ಏನು ಇಲ್ಲ. ನನ್ನ ಗಮನಕ್ಕೆ ಅದು ಬಂದಿಲ್ಲ. ಅಲ್ಲಿ ನೀರಿನ ಪೈಪ್‍ಗಳು ಒಡೆದಿದೆ. ಅದನ್ನ ಸರಿ ಪಡಿಸೋ ಕೆಲಸ ಮಾಡ್ತಿದ್ದೇವೆ. ಅದ್ರಿಂದ ಗೋಡೆ ಬಿರುಕು ಬಿಟ್ಟಿರಬಹುದು. ಎಲ್ಲವನ್ನ ಸರಿಮಾಡ್ತಿವಿ ಅಂತ ಪ್ರತಿಕ್ರಿಯಿಸಿದ್ದಾರೆ.