Tag: Bowl

  • ಡಿಯುಗೆ ಅರೆ..ಅರೆ.. ಮುದ್ದು ಗಿಳಿ ಎಂದ ಅರವಿಂದ್

    ಡಿಯುಗೆ ಅರೆ..ಅರೆ.. ಮುದ್ದು ಗಿಳಿ ಎಂದ ಅರವಿಂದ್

    ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್‌ನಿಂದ ಜೋಡಿಗಳಾಗಿ ಅಭಿಮಾನಿಗಳ ಮನ ಕದ್ದಿರುವ ಅರವಿಂದ್ ಮತ್ತು ದಿವ್ಯಾ ಉರುಡುಗ ಈಗ ಡ್ಯುಯೆಟ್ ಡ್ಯಾನ್ಸ್ ಮಾಡಿ ಮನೆ ಮಂದಿಯನ್ನು ರಂಜಿಸಿದ್ದಾರೆ.

    ಬಿಗ್‍ಬಾಸ್ ಕಳೆದ  ಇನ್ನಿಂಗ್ಸ್‌ನಲ್ಲಿ ಮನೆಯಲ್ಲಿದ್ದ ಕಾಫಿ ಕಪ್ ಹೊಡೆದು ಹಾಕಿದ ಸ್ಪರ್ಧಿಗಳಿಗೆ ಬಿಗ್‍ಬಾಸ್ ಚಿಕ್ಕ ಕಪ್‍ವೊಂದನ್ನು ಕಳುಹಿಸಿ ತಮ್ಮ ಮುಂದಿನ ಆದೇಶದವರೆಗೂ ಅದೇ ಕಪ್‍ನಲ್ಲಿ ಕಾಫಿ ಹಾಗೂ ನೀರು ಕುಡಿಯಲು ಆದೇಶಿಸುತ್ತಿದ್ದರು.

    ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮನೆಯ ಬಾಲ್ ಒಡೆದು ಹಾಕಿದ್ದ ದಿವ್ಯಾ ಉರುಡುಗಗೆ ಬಿಗ್‍ಬಾಸ್ ವಿಭಿನ್ನವಾದ ಶಿಕ್ಷೆ ನೀಡಿದ್ದಾರೆ. ಹೌದು, ಕಿಚನ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿವ್ಯಾ ಉರುಡುಗ ಬೌಲ್ ಒಡೆದು ಹಾಕಿದ್ದರು. ನಂತರ ಕೈ ಜಾರಿ ಮಿಸ್ ಆಗಿ ಬಾವ್ಲ್ ಕೆಳಗೆ ಬಿದ್ದು ಒಡೆದು ಹೋಯಿತು, ಕ್ಷಮಿಸಿ ಪ್ಲೀಸ್ ಯಾವುದೇ ಶಿಕ್ಷೆ ನೀಡಬೇಡಿ ಎಂದು ಮನವಿ ಮಾಡಿದ್ದರು.

    ಮನೆಯ ಪ್ರಾಪರ್ಟಿ ಹೊಡೆದು ಹಾಕಿದ್ದರಿಂದ ದಿವ್ಯಾ ಉರುಡುಗಗೆ ಶಿಕ್ಷೆಯಾಗಿ ಬಿಗ್‍ಬಾಸ್ ರಾತ್ರಿ ನೀವು ಅರವಿಂದ್ ಜೊತೆ ಒಂದು ಹಾಡಿಗೆ ನೃತ್ಯ ಮಾಡಬೇಕು ಎಂದು ಸೂಚಿಸಿದ್ದರು. ಈ ವೇಳೆ ದಿವ್ಯಾ ಉರುಡುಗ ಅರವಿಂದ್ ಡ್ಯಾನ್ಸ್ ಮಾಡುತ್ತೀರಾ ತಾನೇ ಎಂದು ಕೇಳತ್ತಾರೆ. ಆಗ ಅರವಿಂದ್ ಇದೊಂದು ಬಾಕಿ ಇತ್ತು ಎನ್ನುತ್ತಾ ನಕ್ಕು ಸಮ್ಮತಿ ಸೂಚಿಸಿದ್ದರು.

    ನಂತರ ಅದರಂತೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ, ಅರವಿಂದ್ ಹಾಗೂ ದಿವ್ಯಾ ಉರುಡುಗ ಸೀತಾ ರಾಮ ಕಲ್ಯಾಣ ಸಿನಿಮಾದ, ಅರೆ.. ಅರೆ.. ಮುದ್ದು ಗಿಣಿ.. ಹಾಡಿಗೆ ನೃತ್ಯ ಮಾಡಿದ್ದಾರೆ. ಹಾಡಿನ ಕೊನೆಯಲ್ಲಿ ಅರವಿಂದ್ ದಿವ್ಯಾ ಉರುಡುಗರನ್ನು ಎತ್ತಿಕೊಳ್ಳುತ್ತಾರೆ ಈ ವೇಳೆ ಮನೆಮಂದಿಯೆಲ್ಲಾ ಜೋರಾಗಿ ಕಿರುಚುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.

    ಹಾಡು ಮುಕ್ತಾಯಗೊಂಡ ನಂತರ ಎಲ್ಲರೂ ಊಟ ಮಾಡಿಕೊಂಡು ತಾಂಬುಲಾ ತೆಗೆದುಕೊಂಡು ಹೋಗಿ ಎಂದು ಸ್ಪರ್ಧಿಗಳು ಅರವಿಂದ್, ದಿವ್ಯಾ ಉರುಡುಗ ಕಾಲೆಳೆದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅರವಿಂದ್‍ಗೆ ನೀರು ಕುಡಿಸೋದು ದಿವ್ಯಾ

  • ಚಮಚದಿಂದ ಕಪ್‍ಗೆ ನೀರು ತುಂಬಿಸಿದ ನಿಧಿ ಸುಬ್ಬಯ್ಯ!

    ಚಮಚದಿಂದ ಕಪ್‍ಗೆ ನೀರು ತುಂಬಿಸಿದ ನಿಧಿ ಸುಬ್ಬಯ್ಯ!

    ಕಳೆದ ವಾರ ಬಿಗ್‍ಬಾಸ್ ಮನೆಯ ಸದಸ್ಯರಿಗೆ ಚಂಡೇಶ್ವರ ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದರು. ಅದರಂತೆ ಬಜರ್ ಆದ ತಕ್ಷಣ ಪ್ಲಾಸ್ಮದಲ್ಲಿ ಬರುವ ಹೆಸರಿನ ಒಬ್ಬ ಸದಸ್ಯ ಗಾರ್ಡನ್ ಏರಿಯಾಗೆ ಹೋಗಿ, ಪೈಪ್‍ಲೈನ್‍ನಲ್ಲಿ ಬರುವ ಚೆಂಡನ್ನು ಹಿಡಿಯಬೇಕಿತ್ತು. ಆ ಚೆಂಡಿನಲ್ಲಿ ಒಂದು ಲಕ್ಷುರಿ ಐಟಂ ಹೆಸರಿದ್ದು, ಚೆಂಡನ್ನು ಸದಸ್ಯ ಹಿಡಿದರೆ ಅದರಲ್ಲಿರುವ ಐಟಂ ಮನೆಗೆ ದೊರೆಯುತ್ತದೆ. ಇಲ್ಲದಿದ್ದರೆ ಮನೆಯ ಸದಸ್ಯರು ಆ ಐಟಂನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದರು.

    ಅದರಂತೆ ಒಂದು ವಾರದಿಂದ ಬಜರ್ ಆಗಿದ ತಕ್ಷಣ ಮನೆಯ ಸದಸ್ಯರು ಚೆಂಡನ್ನು ಹಿಡಿಯಲು ಹಲವಾರು ಸರ್ಕಸ್ ನಡೆಸುತ್ತಿದ್ದಾರೆ. ಈ ವಾರ ಕೆಲವು ಸದಸ್ಯರು ಚೆಂಡನ್ನು ಹಿಡಿದಿದ್ದಾರೆ. ಇನ್ನೂ ಕೆಲವರು ಚೆಂಡನ್ನು ಹಿಡಿಯುವಲ್ಲಿ ವಿಫಲರಾಗಿ ಲಕ್ಷುರಿ ಐಟಂ ಕಳೆದುಕೊಂಡಿದ್ದಾರೆ. ಅಂತೆಯೇ ನಿಧಿಸುಬ್ಬಯ್ಯ ಹೆಸರು ಪ್ಲಾಸ್ಮದಲ್ಲಿ ಬರುತ್ತದೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಿಧಿ ವೇಗವಾಗಿ ಗಾರ್ಡನ್ ಏರಿಯಾಗೆ ಓಡಿ ಹೋಗುತ್ತಾರೆ. ಎಷ್ಟೇ ವೇಗವಾಗಿ ಓಡಿದ್ರೂ ನಿಧಿ ಚೆಂಡನ್ನು ಹಿಡಿಯುವಲ್ಲಿ ವಿಫಲರಾಗುತ್ತಾರೆ.

    ಹೀಗಾಗಿ ಬಿಗ್‍ಬಾಸ್ ನಿಧಿಗೆ ವಿಭಿನ್ನವಾದ ಶಿಕ್ಷೆಯನ್ನು ನೀಡಿದ್ದಾರೆ. ಹೌದು ಚೆಂಡನ್ನು ಹಿಡಿಯುವಲ್ಲಿ ವಿಫಲವಾದ ನಿಧಿಗೆ, ಬಿಗ್‍ಬಾಸ್ ಚಮಚವನ್ನು ಬಳಸಿ ಸ್ವೀಮಿಂಗ್ ಪೂಲ್‍ನಲ್ಲಿರುವ ನೀರನ್ನು ಕಪ್ ನಲ್ಲಿರುವ ಕಪ್ಪು ಗುರುತಿನವರೆಗೂ ತುಂಬಿಸುವಂತೆ ಶಿಕ್ಷೆ ನೀಡಿದ್ದರು. ಅದರಂತೆ ಚಮಚ ಹಿಡಿದು ಸ್ವೀಮಿಂಗ್ ಪೂಲ್‍ನಲ್ಲಿರುವ ನೀರನ್ನು ಕಪ್‍ಗೆ ತುಂಬಿಸಲು ನಿಧಿ, ನಿಂತುಕೊಂಡು, ಕುಳಿತುಕೊಂಡು ಹರಸಹಾಸ ಪಡುತ್ತಿರುತ್ತಾರೆ.

    ಈ ವೇಳೆ ಮನೆಯ ಸದಸ್ಯರು ನಿಧಿಗೆ ಪ್ರೋತ್ಸಾಹಿಸುತ್ತಿದ್ದರೆ, ಮಂಜು ಮಾತ್ರ ನೀನು ನೀರು ತುಂಬಿಸಿದ ತಕ್ಷಣ ಮತ್ತೊಮ್ಮೆ ನಿನ್ನ ಹೆಸರು ಬರಬೇಕು. ಮತ್ತೆ ಚೆಂಡು ಹಿಡಿಯಲಾಗದೇ ಅಯ್ಯಯ್ಯೋ ಮತ್ತೆ ನೀರು ತಂಬಿಸಬೇಕಲ್ಲ ಎಂದು ಹೇಳಬೇಕು. ವಾರ ಪೂರ್ತಿ ಇದೇ ಟಾಸ್ಕ್ ನೀಡಬೇಕು. ಹಾಗೇನಾದರೂ ಮಾಡಿದರೆ ನಾನು ಬಹಳ ಖುಷಿ ಪಡುತ್ತೇನೆ ಎಂದು ಹಾಸ್ಯ ಮಾಡುತ್ತಾರೆ.

    ಒಟ್ಟಾರೆಯಾಗಿ ಈ ಟಾಸ್ಕ್ ನೋಡಲು ಸುಲಭವಾಗಿ ಕಂಡರು, ಅದು ಬಹಳ ಕಷ್ಟ ಎಂದು ಹೇಳಬಹುದು.