Tag: Boundary

  • ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು

    ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು

    ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ ಬಾರಿಸಿದ ಬೌಂಡರಿ ಶಾಟ್ ಒಂದು ಗಮನ ಸೆಳೆಯುತ್ತಿದೆ.

    ಪಂತ್ ಹೊಡಿಬಡಿ ದಾಂಡಿಗ. ಕ್ರೀಸ್‌ಗೆ ಬಂದ ನಂತರ ಅಬ್ಬರ ಬ್ಯಾಟಿಂಗ್ ಮೂಲಕ ರನ್ ಹೆಚ್ಚಿಸುವ ಆಕ್ರಮಣ ಶೈಲಿಯ ಆಟಕ್ಕೆ ಪಂತ್ ಫೇಮಸ್. ವಿಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 61 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್‌ಗೆ ಆಗಮಿಸಿದ ಪಂತ್ ಆರಂಭದಿಂದಲೇ ಅಬ್ಬರದಾಟ ಆರಂಭಿಸಿದರು. ವಿಂಡೀಸ್ ಬೌಲರ್‌ಗಳಿಗೆ ಬೌಂಡರಿಗಳ ರುಚಿ ತೋರಿಸುತ್ತ ಸಾಗಿದ ಪಂತ್, ಮೆಕಾಯ್ ಎಸೆದ ಎಸೆತ ಒಂದಕ್ಕೆ ಎಕ್ಸ್ಟ್ರ ಕವರ್ ಶಾಟ್ ಬೌಂಡರಿ ಪ್ರೇಕ್ಷಕರ ಮನಗೆದ್ದಿತ್ತು. ಪಂತ್ ಒಂದು ಕಾಲೆತ್ತಿ ಒಂಟಿ ಕಾಲಿನಲ್ಲಿ ನಿಂತು ಬೌಂಡರಿ ಬಾರಿಸಿದ ಭಂಗಿ ಕಂಡು ಪ್ರೇಕ್ಷಕರು ಬೆರಗಾದರು. ಇತ್ತ ನೆಟ್ಟಿಗರು ಇದು ಯಾವ್ ಶಾಟ್ ಗುರು, ಬ್ಯಾಟಿಂಗ್‍ನಲ್ಲಿ ಯೋಗ ಮಾಡಿದ ಪಂತ್ ಹೀಗೆ ಬಗೆ ಬಗೆಯ ಕಾಮೆಂಟ್ ಮೂಲಕ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್‌ – ಭಾರತಕ್ಕೆ ಸರಣಿ ಜಯ

    https://twitter.com/__memeheist__/status/1556123248256897024

    ಇತ್ತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‍ಗಳಿಸಿತು. 192 ರನ್‍ಗಳ ಗುರಿಯನ್ನು ಪಡೆದ ವಿಂಡೀಸ್ 19.1 ಓವರ್‌ಗಳಲ್ಲಿ 132 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಂಡೀಸ್ ವಿರುದ್ಧ 59 ರನ್‍ಗಳ ಜಯ ಸಾಧಿಸಿ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: CWG 2022: ಚಿನ್ನಕ್ಕೆ ಮುತ್ತಿಟ್ಟ ರವಿ ಕುಮಾರ್ ದಹಿಯಾ, ವಿನೇಶ್ ಫೋಗಟ್ – ಪೂಜಾ ಗೆಹ್ಲೋಟ್‍ಗೆ ಕಂಚು

    Live Tv
    [brid partner=56869869 player=32851 video=960834 autoplay=true]

  • ಆರ್‌ಸಿಬಿ ವಿರುದ್ಧ 1 ಬೌಂಡರಿ, 5 ಸಿಕ್ಸರ್ – ಟಿ-20 ಇತಿಹಾಸದಲ್ಲೇ ಗೇಲ್ ಹೊಸ ದಾಖಲೆ

    ಆರ್‌ಸಿಬಿ ವಿರುದ್ಧ 1 ಬೌಂಡರಿ, 5 ಸಿಕ್ಸರ್ – ಟಿ-20 ಇತಿಹಾಸದಲ್ಲೇ ಗೇಲ್ ಹೊಸ ದಾಖಲೆ

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಐದು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದ ಪಂಜಾಬ್ ತಂಡದ ದೈತ್ಯ ಆಟಗಾರ ಗೇಲ್, ಟಿ-20 ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

    ನಿನ್ನೆ ಶಾರ್ಜಾ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಪಂದ್ಯದಲ್ಲಿ ಪಂಜಾಬ್ ತಂಡ 8 ವಿಕೆಟ್‍ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಮತ್ತು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಪಂಜಾಬ್ ತಂಡ ಐಪಿಎಲ್-2020ಯಲ್ಲಿ ಎರಡನೇ ಗೆಲುವು ಸಾಧಿಸಿದೆ.

    ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಗೇಲ್, 45 ಎಸೆತದಲ್ಲಿ ಒಂದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ಸಮೇತ 53 ರನ್ ಸಿಡಿಸಿ ಪಂದ್ಯದ ಕೊನೆಯ ಓವರಿನಲ್ಲಿ ರನೌಟ್ ಆದರು. ಆದರೆ ಒಂದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ನೊಂದಿಗೆ ಟಿ-20 ಇತಿಹಾದಲ್ಲೇ ಫೋರ್ ಮತ್ತು ಸಿಕ್ಸ್ ಮೂಲಕ 10 ಸಾವಿರ ರನ್ ಮೂಲಕ ಏಕೈಕ ಬ್ಯಾಟ್ಸ್ ಮ್ಯಾನ್ ಎಂಬ ಹೊಸ ದಾಖಲೆ ಬರೆದಿದ್ದಾರೆ.

    ಗೇಲ್ ಟಿ-20 ಮಾದರಿಯ ಆಟಕ್ಕೆ ಹೇಳಿ ಮಾಡಿಸಿದಂತ ಬ್ಯಾಟ್ಸ್‍ಮ್ಯಾನ್ ಆಗಿದ್ದಾರೆ. ಈ ಹೊಡಿಬಡಿ ಆಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಅವರು, ತಮ್ಮ ವೃತ್ತಿಜೀವನದಲ್ಲಿ ಅಂತಾರಾಷ್ಟ್ರೀಯ ಮತ್ತು ಇತರ ಲೀಗ್‍ಗಳಿಂದ ಬರೋಬ್ಬರಿ 397 ಟಿ-20 ಇನ್ನಿಂಗ್ಸ್ ಗನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 1,027 ಬೌಂಡರಿಗಳು ಮತ್ತು 983 ಸಿಕ್ಸರ್ ಗಳನ್ನು ಭಾರಿಸಿದ್ದಾರೆ. ಈ ಮೂಲಕ ಟಿ-20ಯಲ್ಲಿ 13,349 ರನ್‍ಗಳಿಸಿದ್ದಾರೆ. ಇದರಲ್ಲಿ 10,006 ರನ್ ಸಿಕ್ಸ್ ಮತ್ತು ಫೋರ್ ಗಳಿಂದ ಬಂದಿವೆ.

    ಜೊತೆಗೆ ಐಪಿಎಲ್‍ನಲ್ಲೂ ಕೂಡ ಗೇಲ್ ಅವರು ಹಲವಾರು ದಾಖಲೆ ಮಾಡಿದ್ದಾರೆ. 125 ಐಪಿಎಲ್ ಪಂದ್ಯಗಳಿಂದ 4,537 ರನ್ ಗಳಿಸಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ 9ನೇ ಸ್ಥಾನದಲ್ಲಿದ್ದಾರೆ. 41.13 ಸರಾಸರಿಯಲ್ಲಿ 6 ಶತಕ ಮತ್ತು 29 ಅರ್ಧಶತಕ ಭಾರಿಸಿದ್ದಾರೆ. ಐಪಿಎಲ್‍ನಲ್ಲಿ 331 ಸಿಕ್ಸರ್ ಭಾರಿಸಿ ಅತೀ ಹೆಚ್ಚು ಸಿಕ್ಸರ್ ಭಾರಿಸಿ ಆಟಗಾರ ಎನಿಸಿಕೊಂಡಿದ್ದಾರೆ. 6 ಶತಕ ಸಿಡಿಸಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ 175 ರನ್ ಹೊಡೆದು ಅತಿ ಹೆಚ್ಚು ವೈಯಕ್ತಿಕ ರನ್ ಸ್ಕೋರರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

  • ಅನಿಲ್ ಕುಂಬ್ಳೆ ನೇತೃತ್ವದಲ್ಲಿ ‘ಬೌಂಡರಿ ಕೌಂಟ್’ ವಿವಾದಕ್ಕೆ ಬ್ರೇಕ್ ಬೀಳುತ್ತಾ?

    ಅನಿಲ್ ಕುಂಬ್ಳೆ ನೇತೃತ್ವದಲ್ಲಿ ‘ಬೌಂಡರಿ ಕೌಂಟ್’ ವಿವಾದಕ್ಕೆ ಬ್ರೇಕ್ ಬೀಳುತ್ತಾ?

    ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ವಿವಾದಾತ್ಮಕ ‘ಬೌಂಡರಿ ಕೌಟ್’ ಸೇರಿದಂತೆ ಇತರೇ ಕ್ರಿಕೆಟ್ ನಿಯಮಗಳ ಬಗ್ಗೆ ಚರ್ಚೆ ನಡೆಸಲಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೌಂಡರಿಗಳ ಆಧಾರದಲ್ಲಿ ಇಂಗ್ಲೆಂಡ್ ನ್ಯೂಜಿಲೆಂಡ್ ಗೆಲುವು ಪಡೆದಿತ್ತು. ಆ ಬಳಿಕ ಐಸಿಸಿ ನಿಯಮಗಳ ಕುರಿತು ಹಲವರು ಕಿಡಿಕಾರಿದ್ದರು.

    ಸೂಪರ್ ಓವರಿನಲ್ಲಿ ಟೈ ಆದ ಸಂದರ್ಭದಲ್ಲಿ ಯಾವ ತಂಡ ಹೆಚ್ಚು ಬೌಂಡರಿ ಸಿಡಿಸಿದೆ ಎಂಬ ಆಧಾರದ ಮೇಲೆ ಗೆಲುವುವನ್ನು ನಿರ್ಧರಿಸಲಾಗುತ್ತದೆ. ಈ ಬಗ್ಗೆ ಕ್ರಿಕೆಟ್ ವಿಶ್ಲೇಷಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಣಾಮ ಐಸಿಸಿ ಈ ಬಗ್ಗೆ ಸಮೀಕ್ಷಾ ಸಮಾವೇಶವನ್ನು ನಡೆಸಲು ತೀರ್ಮಾನಿಸಿದೆ. ಇದರ ಭಾಗವಾಗಿಯೇ ಕುಂಬ್ಳೆ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿದೆ. ಈ ಕಮಿಟಿ ಸಭೆ ನಡೆಸಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದೆ.

    ಕುಂಬ್ಳೆ ನೇತೃತ್ವದ ಸಭೆ ಮುಂದಿನ ವರ್ಷ ನಡೆಯಲಿದೆ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ ಸ್ಪಷ್ಟಪಡಿಸಿದ್ದಾರೆ. ಪಂದ್ಯ ಟೈ ಆದರೆ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಣಹಿಸುವ ಪದ್ಧತಿಯನ್ನ 2009 ರಿಂದ ಅನುಸರಿಸುತ್ತಿದ್ದೆವೆ. ಸೂಪರ್ ಓವರ್ ನಲ್ಲೂ ಟೈ ಆದರೆ ಬೌಂಡರಿಗಳ ಆಧಾರದ ಮೇಲೆ ಗೆಲುವು ತೀರ್ಮಾನಿಸಲಾಗುತ್ತದೆ. ಇದೇ ವಿಶ್ವಕಪ ಫೈನಲ್ ಪಂದ್ಯದಲ್ಲೂ ನಡೆದಿದೆ. ವಿಶ್ವದ ಎಲ್ಲಾ ಟಿ20 ಕ್ರಿಕೆಟ್ ಟೂರ್ನಿಗಳಲ್ಲೂ ಇದನ್ನೇ ಅನುಸರಿಸಲಾಗುತ್ತಿದೆ. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಂದೇ ರೀತಿಯ ನಿಯಮಗಳು ಇರಬೇಕಾಗಿದ್ದು, ಈ ಬಗ್ಗೆ ಗೊಂದಲಗಳು ಇದ್ದರೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ತೀರ್ಮಾನಿಸಲಿದೆ ಎಂದು ವಿವರಿಸಿದ್ದಾರೆ. ಅನಿಲ್ ಕುಂಬ್ಳೆ ನೇತೃತ್ವ ಸಮಿತಿ ಯಾವ ತೀರ್ಮಾನ ಕೈಗೊಳ್ಳಿಲಿದೆ ಎಂಬುವುದನ್ನು ಕಾದು ನೋಡಬೇಕಿದೆ.