Tag: Bouncers

  • ಫ್ರೆಂಡ್ಸ್ ಜೊತೆ ಪಾರ್ಟಿಗೆ ಬಂದಿದ್ದ ಮಹಿಳೆ ಬಟ್ಟೆ ಹರಿದು ಬೌನ್ಸರ್ಸ್‍ನಿಂದ ಹಲ್ಲೆ

    ಫ್ರೆಂಡ್ಸ್ ಜೊತೆ ಪಾರ್ಟಿಗೆ ಬಂದಿದ್ದ ಮಹಿಳೆ ಬಟ್ಟೆ ಹರಿದು ಬೌನ್ಸರ್ಸ್‍ನಿಂದ ಹಲ್ಲೆ

    ನವದೆಹಲಿ: ದೆಹಲಿಯ (NewDelhi) ಸೌತ್ ಎಕ್ಸ್‍ಟೆನ್ಶನ್ ಪಾರ್ಟ್-1 (South Extension Part-1) ಏರಿಯಾದಲ್ಲಿರುವ ಕ್ಲಬ್‍ಗೆ (Club) ಪ್ರವೇಶ ನೀಡಲು ನಿರಾಕರಿಸಿ ಖ್ಯಾತೆ ತೆಗೆದ ಬೌನ್ಸರ್‌ಗಳು (Bouncers) ನನ್ನ ಬಟ್ಟೆಯನ್ನು ಹರಿದು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

    ಸೆಪ್ಟೆಂಬರ್ 18 ರಂದು ಬೆಳಗಿನ ಜಾವ 2:14ರ ಸುಮಾರಿಗೆ ಡಾ ಕೋಡ್ ಕ್ಲಬ್‍ನಲ್ಲಿ (Da Code club )ಈ ಘಟನೆ ನಡೆದಿದ್ದು, ಈ ಸಂಬಂಧ ಮಹಿಳೆ ಪೊಲೀಸರಿಗೆ (Police) ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ, ಮಹಿಳೆಯ ಬಟ್ಟೆ ಕಿತ್ತು ಹೋಗಿರುವುದು ಕಂಡು ಬಂದಿದೆ. ನಂತರ ಈ ಬಗ್ಗೆ ವಿಚಾರಣೆ ನಡೆಸಿದಾಗ, ಇಬ್ಬರು ಬೌನ್ಸರ್‌ಗಳು ಹಾಗೂ ಕ್ಲಬ್ ಮ್ಯಾನೇಜರ್ ಬಟ್ಟೆಯನ್ನು ಹರಿದಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಹಣಿ ಬದಲಾವಣೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ!

    ನಂತರ ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲಾರಂಭಿಸಿದ್ದಾರೆ. ಈ ಘಟನೆ ಸಂಬಂಧ ದೂರು ದಾಖಲಿಸಿರುವ ಮಹಿಳೆ, ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಕ್ಲಬ್‍ಗೆ ಬಂದಿದ್ದು, ಈ ವೇಳೆ ಪ್ರವೇಶ್ ನೀಡಲು ನಿರಾಕರಿಸಿ ಬೌನ್ಸರ್‌ಗಳು ಆಕೆಯ ಮೇಲೆ ಹಾಗೂ ಆಕೆಯ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

    ಇದೀಗ ಘಟನೆಗೆ ಸಂಬಂಧಿಸಿದ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕ್ಲಬ್ ಮತ್ತು ಇತರ ಅಕ್ಕಪಕ್ಕದ ಶೋರೂಂಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿನೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

    Live Tv
    [brid partner=56869869 player=32851 video=960834 autoplay=true]