Tag: Bouncer bike

  • ಬಸ್, ಸೇತುವೆ ಮಧ್ಯೆ ಬೌನ್ಸ್ ಬೈಕ್ ಸರ್ಕಸ್..!

    ಬಸ್, ಸೇತುವೆ ಮಧ್ಯೆ ಬೌನ್ಸ್ ಬೈಕ್ ಸರ್ಕಸ್..!

    ಬೆಂಗಳೂರು: ಬೌನ್ಸ್ ಬೈಕ್‍ಗಳ ಬಳಕೆಗಿಂತ ದುರುಪಯೋಗಗಳೇ ಹೆಚ್ಚಾಗುತ್ತಿದೆ. ಬೌನ್ಸ್ ಬೈಕ್‍ಗಳನ್ನ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುವುದು, ಬೈಕ್‍ಗಳ ಹೆಲ್ಮೆಟ್, ಟಯರ್ ಕಳ್ಳತನ ನೋಡಿಯುತ್ತಲೇ ಇರುತ್ತದೆ. ಆದರೆ ಸುಮಾರು 14 ವರ್ಷದ ಬಾಲಕ ಬೌನ್ಸ್ ಬೈಕ್ ಅನ್ನು ರಸ್ತೆ ಮಧ್ಯೆದಲ್ಲಿ ಅಡ್ಡಾದಿಡ್ಡಿ ಚಲಾಯಿಸಿದ್ದಾನೆ.

    ನಗರದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಗರದ ರಾಜರಾಜೇಶ್ವರಿ ನಗರದಿಂದ ಮೆಜೆಸ್ಟಿಕ್‍ಗೆ ಕೆಎ 1, ಎಫ್ 9567 ನಂಬರ್ ನ 225 ಸಿ ಬಸ್ ತೆರಳುತಿತ್ತು. ಈ ವೇಳೆ ಸುಮಾರು 14 ವರ್ಷದ ಬಾಲಕ ಬೌನ್ಸ್ ಕಂಪನಿಗೆ ಸೇರಿದ ಕೆಎ-51, ಎಇ-5357 ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದ. ಅಷ್ಟೇ ಅಲ್ಲದೆ ಸೇತುವೆ ಮೇಲೆ ಹೋಗುತ್ತಿದ್ದ ಬಸ್ ಓವರ್ ಟೇಕ್ ಮಾಡಲು ಮುಂದಾಗಿದ್ದ. ಒಂದು ಕಡೆ ಸೇತುವೆ ಗೋಡೆ ಮತ್ತೊಂದು ಕಡೆ ಬಿಎಂಟಿಸಿ ಬಸ್‍ಗಳ ಮಧ್ಯೆ ಇದ್ದ ಎರಡು ಅಡಿಯಷ್ಟು ಜಾಗದಲ್ಲಿ ಸವಾರ ಬೈಕ್ ನುಗ್ಗಿಸಿದ್ದಾನೆ.

    ಫಜೀತಿಗೆ ಸಿಕ್ಕಿದ್ದ ಸವಾರನನ್ನು ಗಮನಿಸಿದ ಬಿಎಂಟಿಸಿ ಚಾಲಕ ಕೂಡಲೇ ಎಚ್ಚೆತ್ತು ಬಸ್ ನಿಲ್ಲಿಸಿದ್ದಾನೆ. ಆದರೆ ಬಾಲಕ ಮಾತ್ರ ಅಲ್ಲೇ ನಿಂತು ಮುಂದೆ ಹೋಗಲು ಸಾಧ್ಯವಾಗದೆ ಸರ್ಕಸ್ ಮಾಡುತ್ತಾ, ಹೊಗುತ್ತೇ ಮುಂದೆ ಹೋಗ್ರಿ ಅಂತ ಬಸ್ ಚಾಲಕನಿಗೆ ಹೇಳಿದ್ದಾನೆ. ನಂತರ ಬಿಎಂಟಿಸಿ ಚಾಲಕ ನಿಧಾನಕ್ಕೆ ಬಸ್ಸನ್ನು ಮುಂದಕ್ಕೆ ಚಾಲನೆ ಮಾಡಿದ್ದಾರೆ. ಬಸ್ ಮುಂದಕ್ಕೆ ಹೋಗುತ್ತಿದ್ದಂತೆಯೇ ಬಾಲಕ ಓವರ್ ಸ್ಪೀಡ್‍ನಲ್ಲಿ ಹೆಲ್ಮೇಟ್ ಇಲ್ಲದೆ ಬೈಕ್‍ನಲ್ಲಿ ಹೋಗಿದ್ದಾನೆ.

    ಈ ಘಟನೆಯು ಅಪ್ರಾಪ್ತರ ಕೈಗೆ ಆ್ಯಪ್ ಆಧಾರಿತ ಬೈಕ್‍ಗಳು ಸಲಿಸಾಗಿ ಸಿಗುತ್ತಿವೆ ಎಂಬುದನ್ನು ಸಾಬಿತುಪಡಿಸುತ್ತಿದೆ. ಈ ಬಗ್ಗೆ ಸಂಚಾರ ಪೊಲೀಸರು ಹಾಗೂ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.