Tag: Bounce

  • ಹೆಲ್ಮೆಟ್ ಆಯ್ತು, ಈಗ ಬೌನ್ಸ್ ವಾಹನದಿಂದ ಕದಿಯುತ್ತಿದ್ದಾರೆ ಪೆಟ್ರೋಲ್

    ಹೆಲ್ಮೆಟ್ ಆಯ್ತು, ಈಗ ಬೌನ್ಸ್ ವಾಹನದಿಂದ ಕದಿಯುತ್ತಿದ್ದಾರೆ ಪೆಟ್ರೋಲ್

    ಬೆಂಗಳೂರು: ಹೆಲ್ಮೆಟ್ ಕಳ್ಳರ ವಿರುದ್ಧ ಈಗಾಗಲೇ ಸಮರ ಸಾರಿರುವ ಬೌನ್ಸ್ ಕಂಪನಿಗೆ ಈಗ ಮತ್ತೊಂದು ತಲೆನೋವು ಎದುರಾಗಿದೆ. ನಗರದಲ್ಲಿ ಬೌನ್ಸ್ ವಾಹನದ ಪೆಟ್ರೋಲ್ ಕದಿಯೋ ಹೊಸ ತಂಡವೊಂದು ಈಗ ತಲೆ ಎತ್ತಿದೆ.

    ಬೆಂಗಳೂರಿನ ಮಾರತಹಳ್ಳಿ ಬಳಿಯ ನಂದಗೋಕುಲ ಬಡಾವಣೆ ಸುತ್ತ ಮುತ್ತ ಹುಟ್ಟಿಕೊಂಡ ಖದೀಮರ ತಂಡ ಬೌನ್ಸ್ ವಾಹನವನ್ನು ತಳ್ಳಿಕೊಂಡು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಪೈಪ್ ಕಿತ್ತು ಪೆಟ್ರೋಲ್ ಕಳ್ಳತನ ಮಾಡುತ್ತಿದೆ.

    ಖಾಲಿ ನೀರಿನ ಬಾಟಲ್ ಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮತ್ತೊಂದು ಬೈಕಿನಲ್ಲಿ ಮೂವರು ಪರಾರಿಯಾಗಿದ್ದಾರೆ. ಅಕ್ಟೋಬರ್ 29ರ ಸಂಜೆ 5 ಗಂಟೆಗೆ ಈ ಕೃತ್ಯ ನಡೆದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಸ್ಥಳೀಯರಿಂದ ಸಿಸಿಟಿವಿ ದೃಶ್ಯ ಸಂಗ್ರಹಿಸಿರುವ ಬೌನ್ಸ್ ಬೈಕ್ ಕಂಪನಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ.

    ದೃಶ್ಯದಲ್ಲಿ ಏನಿದೆ?
    ವಾಹನವನ್ನು ನಿರ್ಜನಕ್ಕೆ ಪ್ರದೇಶಕ್ಕೆ ಮೂವರು ತಂದಿದ್ದಾರೆ. ಇಬ್ಬರು ಒಂದು ಕಡೆಯಲ್ಲಿ ನಿಂತು ಜನರು ಬುತ್ತಿದ್ದಾರೋ ಇಲ್ಲವೋ ಎನ್ನುವುದನ್ನು ಗಮನಿಸುತ್ತಾರೆ. ಈ ವೇಳೆ ಓರ್ವ ಬೌನ್ಸ್ ವಾಹನದ ಪೆಟ್ರೋಲ್ ಪೈಪ್ ತೆಗೆದು ಖಾಲಿ ನೀರಿನ ಬಾಟಲಿಗೆ ತುಂಬಿಸಿದ್ದಾನೆ.

    https://www.youtube.com/watch?v=76Gy6vVeBiA

  • ಕದ್ದರೂ ಎಲ್ಲೇ ಇರಿಸಿದರೂ ಗೊತ್ತಾಗುತ್ತೆ – ಬೌನ್ಸ್ ಹೆಲ್ಮೆಟ್ ಕಳ್ಳರ ವಿರುದ್ಧ ಬೀಳುತ್ತೆ ಕೇಸ್

    ಕದ್ದರೂ ಎಲ್ಲೇ ಇರಿಸಿದರೂ ಗೊತ್ತಾಗುತ್ತೆ – ಬೌನ್ಸ್ ಹೆಲ್ಮೆಟ್ ಕಳ್ಳರ ವಿರುದ್ಧ ಬೀಳುತ್ತೆ ಕೇಸ್

    ಬೆಂಗಳೂರು: ಇತ್ತೀಚಿಗೆ ಸಿಲಿಕಾನ್ ಸಿಟಿಯಲ್ಲಿ ಹೆಲ್ಮೆಟ್ ಕಳ್ಳರ ಕೈಚಳಕ ಜಾಸ್ತಿಯಾಗಿದ್ದು ಈಗ ಬೌನ್ಸ್ ಕಂಪನಿ ಹೆಲ್ಮೆಟ್ ಕಳ್ಳರ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಬೌನ್ಸ್ ಕಂಪನಿಯ ನಿರ್ದೇಶಕ ನಿಶ್ಚಯ್ ಅವರು, ನಾವು ಬೈಕ್ ಜೊತೆ ಹೆಲ್ಮೆಟ್ ಕೊಡಲೇ ಬೇಕು ಎಂಬ ನಿಯಮ ಇಲ್ಲ. ಆದರೆ ನಾವು ನಮ್ಮ ಗ್ರಾಹಕರ ಸುರಕ್ಷತೆಗೆಂದು ನೀಡುತ್ತೇವೆ. ಆದರೆ ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಇದನ್ನು ತಡೆಗಟ್ಟಲು ಹೆಲ್ಮೆಟ್‍ನಲ್ಲಿ ಸೆನ್ಸರ್ ಫಿಕ್ಸ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ನಮ್ಮ ಗ್ರಾಹಕರಲ್ಲಿ ಎಲ್ಲರೂ ಈ ರೀತಿ ಕಳ್ಳತನ ಮಾಡುವುದಿಲ್ಲ ಆದರೆ ಕೆಲ ಜನರಿದ್ದಾರೆ ಅವರು ಈ ರೀತಿ ಮಾಡುತ್ತಾರೆ. ಒಬ್ಬರು ಈ ರೀತಿ ಕಳ್ಳತನ ಮಾಡಿದರೆ ಆ ಗಾಡಿಯನ್ನು ನಂತರ ಓಡಿಸುವ ಗ್ರಾಹಕರಿಗೆ ತೊಂದರೆಯಾಗುತ್ತದೆ. ನಾವು ಈ ವಿಚಾರದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇವೆ. ಹೆಲ್ಮೆಟ್ ಅನ್ನು ಕಳ್ಳತನ ಮಾಡುವವರಿಗೆ ಮತ್ತು ನಾವು ಹೋಗಿ ಕೇಳಿದಾಗ ವಾಪಸ್ ನೀಡದವರ ವಿರುದ್ಧ ನಾವು ನೇರವಾಗಿ ಎಫ್‍ಐಆರ್ ದಾಖಲಿಸಬಹುದಾಗಿದೆ ಎಂದು ನಿಶ್ಚಯ್ ಹೇಳಿದ್ದಾರೆ. ಇದನ್ನು ಓದಿ: ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳೋಕೆ ಹೆಲ್ಮೆಟ್ ಜೊತೆಗೆ ಮಿರರ್, ವ್ಹೀಲ್‍ಗೂ ಕನ್ನ

    ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಖಾಸಗಿ ದ್ವಿಚಕ್ರ ವಾಹನಗಳು ಬಾಡಿಗೆಗೆ ಸಿಗುತ್ತಿವೆ. ಕಿ.ಮೀಗೆ 4 ರಿಂದ 6 ರೂ. ಗೆ ಈ ವಾಹನಗಳು ಸಿಗುತ್ತಿವೆ. ಇದನ್ನ ಬಳಸಿಕೊಂಡು ಹಾಗೇ ಬೈಕ್ ಬಿಟ್ಟರೆ ಸಮಸ್ಯೆಯಾಗಲ್ಲ. ಆದರೆ ಹಲವರು ಉಂಡು ಹೋದ ಕೊಂಡು ಹೋದ ಎಂಬಂತೆ ಮೊದಲು ಹೆಲ್ಮೆಟ್, ಮಿರರ್, ವ್ಹೀಲ್‍ಗಳನ್ನೂ ಎಗರಿಸ್ತಾರೆ. ಇದನ್ನು ಚಿಲ್ಲರೆಗೆ ಕದ್ದು ಚಿಲ್ಲರೆ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ.