Tag: Bottle

  • ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

    ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

    ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮದ್ಯದ ಖಾಲಿ ಬಾಟಲಿಗಳು ಹಾಗೂ ಮಹಿಳೆಯರ ಚಪ್ಪಲಿಗಳನ್ನು ಪೋಸ್ಟ್ ಮಾಡುವ ಮೂಲಕ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ಚಾಮರಾಜನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆದು ಪ್ರತಿಭಟಿಸಿದ ರೈತರು, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಸಿಎಂ ಕುಮಾರಸ್ವಾಮಿ ಕುಡಿದ ನಶೆಯಲ್ಲಿ ರೈತ ಮಹಿಳೆಯನ್ನು ಎಲ್ಲಿ ಮಲಗಿದ್ದೆ ಎಂದು ಕೇಳುತ್ತಾರೆ. ಪ್ರತಿಭಟನಾನಿರತ ರೈತರನ್ನು ಗೂಂಡಾಗಳು ಎಂದು ಹೀಯಾಳಿಸುತ್ತಾರೆ. ಇವರ ಹೇಳಿಕೆಯಿಂದ ಇಡೀ ರೈತ ಸಮುದಾಯಕ್ಕೆ ಹಾಗು ರೈತ ಮಹಿಳೆಯರಿಗೆ ಅವಮಾನವಾಗಿದ್ದು, ಕೂಡಲೇ ಅವರು ರೈತರ ಕ್ಷಮೆ ಕೇಳಬೇಕೆಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಗುರುಪ್ರಸಾದ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮದ್ವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು

    ಮದ್ವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು

    ತುಮಕೂರು: ಮದುವೆ ಸಮಾರಂಭಕ್ಕೆ ತಂದಿದ್ದ ಮಿನರಲ್ ವಾಟರ್ ಬಾಟಲಿಯಲ್ಲಿ ಕಸಕಡ್ಡಿ, ಹುಳು ಕಂಡು ಬಂದಿದ್ದರಿಂದ ಮದುವೆ ಬಂದ ಅತಿಥಿಗಳು ಹೌಹಾರಿದ ಘಟನೆ ನಡೆದಿದೆ.

    ತುಮಕೂರು ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯುತಿತ್ತು. ಇಲ್ಲಿ ಬ್ಲೂ ಬ್ರೀಜ್ ಹೆಸರಿನ ನೀರಿನ ಬಾಟಲನ್ನು ತರಿಸಲಾಗಿತ್ತು. ಅದರಲ್ಲಿ 7 ಬಾಕ್ಸನಲ್ಲಿರುವ ಬಾಟಲ್ ಗಳಲ್ಲಿ ಕಸಕಡ್ಡಿಗಳು ಕಂಡು ಬಂದಿದೆ.

    ನೂರಾರು ಅಥಿತಿಗಳು ಅರಿವಿಗೆ ಬಾರದೇ ಈ ನೀರನ್ನು ಕುಡಿದಿದ್ದು ಕಾಯಿಲೆ ಬರುವ ಆತಂಕದಲ್ಲಿದ್ದಾರೆ. ಶೈಲಾ ಇಂಡಸ್ಟ್ರೀಸ್ ಗೆ ಸೇರಿದ ನೀರಿನ ಬಾಟಲ್ ಇದಾಗಿದ್ದು ತುಮಕೂರಿನ ರಂಗಾಪುರ ಕೈಗಾರಿಕಾ ಪ್ರದೇಶದಲ್ಲಿ ತಯಾರು ಮಾಡಲಾಗುತ್ತಿದೆ. ತಯಾರಿಕಾ ಘಟಕದಲ್ಲಿ ಮುಂಜಾಗೃತೆ ವಹಿಸದೇ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಕಂಪೆನಿ ವಿರುದ್ಧ ದೂರು ನೀಡಲು ಗ್ರಾಹಕರು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಹಕನಿಗೆ ಮೂತ್ರ ತುಂಬಿದ ಬಾಟಲ್ ಕಳುಹಿಸಿದ ಅಮೆಜಾನ್

    ಗ್ರಾಹಕನಿಗೆ ಮೂತ್ರ ತುಂಬಿದ ಬಾಟಲ್ ಕಳುಹಿಸಿದ ಅಮೆಜಾನ್

    ಲಂಡನ್: ಆನ್‍ಲೈನ್ ಮಾರುಕಟ್ಟೆಯಲ್ಲಿ ಅಮೆಜಾನ್ ತನ್ನದೇ ಆದ ಚಾಪನ್ನು ವಿಶ್ವದಾದ್ಯಂತ ಮೂಡಿಸಿದೆ. ಆದ್ರೂ ಕೆಲವೊಂದು ಬಾರಿ ಎಡವಟ್ಟುಗಳು ಆಗುತ್ತಿರುತ್ತವೆ. ಇತ್ತೀಚೆಗೆ ಗ್ರಾಹಕರೊಬ್ಬರಿಗೆ ಅಮೇಜಾನ್ ಮೂತ್ರ ತುಂಬಿದ ಬಾಟಲ್ ಕಳುಹಿಸಿದೆ.

    30 ವರ್ಷದ ಗ್ರಾಹಕರೊಬ್ಬರು ಅಮೇಜಾನ್ ನಲ್ಲಿ 65 ಪೌಂಡ್ (5,875 ರೂ.ಬೆಲೆಯ) ವಸ್ತುವೊಂದನ್ನು ಆನ್‍ಲೈನ್ ನಲ್ಲಿ ಬುಕ್ ಮಾಡಿದ್ರು. ಆದ್ರೆ ಮನೆಗೆ ಡ್ಯಾಮೇಜ್ ಆಗಿರುವ ಬಾಕ್ಸ್ ನಲ್ಲಿ ಮೂತ್ರ ತುಂಬಿದ ಬಾಟಲ್ ಕಳುಹಿಸಲಾಗಿದೆ. ನನಗೆ ಬಂದ ಬಾಕ್ಸ್ ತೆರೆದು ನೋಡಿದಾಗ ಬಾಟಲ್ ಇತ್ತು. ಬಾಟಲ್ ನಲ್ಲಿ ಏನಿದೆ ನೋಡಿದಾಗ ಅದರಲ್ಲಿ ಮೂತ್ರವನ್ನು ತುಂಬಲಾಗಿತ್ತು. ತುಂಬಾ ಕೆಟ್ಟ ವಾಸನೆಯನ್ನು ಹೊಂದಿದ್ದು, ನಾನು ಪದೇ ಪದೇ ನನ್ನ ಕೈಗೊಳನ್ನು ಶುಚಿ ಮಾಡಿಕೊಂಡಿದ್ದೇನೆ ಎಂದು ಗ್ರಾಹಕ ಹೇಳುತ್ತಾರೆ.

    ಈ ಬಗ್ಗೆ ಗ್ರಾಹಕ ಅಮೆಜಾನ್ ಗೆ ಫೇಸ್‍ಬುಕ್ ನಲ್ಲಿ ದೂರು ಸಲ್ಲಿಸಿದ್ದಾರೆ. ಗ್ರಾಹಕರಿಗೆ ವಸ್ತು ಖರೀದಿಸಿದ ಹಣದ ಜೊತೆಗೆ 150 ಪೌಂಡ್ (13,600 ರೂ.) ಬೆಲೆಯ ವೋಚರ್ ಸಹ ನೀಡಲಾಗಿದೆ. ಈ ವಿಚಾರ ಗಂಭೀರವಾದದ್ದು, ಇದರ ಕುರಿತು ತನಿಖೆ ನಡೆಸಲಾಗುವುದು. ದೂರು ನೀಡುವ ಮೂಲಕ ನಮ್ಮನ್ನು ಎಚ್ಚರಿಸಿದಕ್ಕೆ ಧನ್ಯವಾದಗಳು ಎಂದು ಅಮೆಜಾನ್ ತಿಳಿಸಿದೆ.

    ಡಿಸೆಂಬರ್ ನಲ್ಲಿ ಅಮೆಜಾನ್ ನಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಸಮಯದ ಅಭಾವದಿಂದಾಗಿ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ವಿಸರ್ಜನೆ ಮಾಡ್ತಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇಂಗ್ಲೆಂಡ್ ನಲ್ಲಿ ವಾಹನ ಚಾಲಕರು 11 ಗಂಟೆಗಿಂತಲೂ ಹೆಚ್ಚಿಗೆ ಕೆಲಸ ಮಾಡಬಾರದು ಎಂಬ ಕಾನೂನು ಇದ್ರೂ ಅಮೆಜಾನ್ ನೌಕರರು ಹೆಚ್ಚು ಅವಧಿ ಕೆಲಸ ಮಾಡ್ತಾರೆ ಎಂದು ವರದಿಯಾಗಿದೆ.

  • ಅನುಚಿತ ವರ್ತನೆ ತೋರಿದ್ದ ವ್ಯಕ್ತಿಯನ್ನು ತಳ್ಳಿದ್ದಕ್ಕೆ 19ರ ಯುವತಿಗೆ ಗಾಜಿನ ಬಾಟಲಿಯಿಂದ ಹೊಡ್ದ!

    ಅನುಚಿತ ವರ್ತನೆ ತೋರಿದ್ದ ವ್ಯಕ್ತಿಯನ್ನು ತಳ್ಳಿದ್ದಕ್ಕೆ 19ರ ಯುವತಿಗೆ ಗಾಜಿನ ಬಾಟಲಿಯಿಂದ ಹೊಡ್ದ!

    ಸ್ವೀಡನ್: ನೈಟ್ ಕ್ಲಬ್‍ನಲ್ಲಿ ಯುವತಿಯೊಬ್ಬಳು ಅನುಚಿತವಾಗಿ ವರ್ತನೆ ತೋರಿದ ವ್ಯಕ್ತಿಯನ್ನು ತಳ್ಳಿದ್ದಕ್ಕೆ ಬಾಟಲಿನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಸ್ವೀಡನ್ ನ ಮಾಲ್ಮೋದಲ್ಲಿ ನಡೆದಿದೆ.

    ಸೋಫಿ ಜೋಹನ್‍ಸನ್ ಹಲ್ಲೆಗೊಳ್ಳಗಾದ ಯುವತಿ. ಜನವರಿ 24ರಂದು ಸೋಫಿ ತನ್ನ ಸ್ನೇಹಿತರ ಜೊತೆ ನೈಟ್‍ಕ್ಲಬ್ ಹೋಗಿದ್ದಾಳೆ. ಅಲ್ಲಿ ಡ್ಯಾನ್ಸ್ ಮಾಡುವಾಗ ಅಪರಿಚಿತ ವ್ಯಕ್ತಿ ಆಕೆ ಹತ್ತಿರ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಸೋಫಿ ವ್ಯಕ್ತಿಯನ್ನು ತಳ್ಳಿದ್ದಾಳೆ. ಇದ್ದರಿಂದ ಕೋಪಗೊಂಡ ವ್ಯಕ್ತಿ ತನ್ನ ಮುಷ್ಟಿಯನ್ನು ಮುಚ್ಚಿ ಆಕೆಯ ಮುಖದ ಮೇಲೆ ಹೊಡೆದಿದ್ದಾನೆ. ನಂತರ ಸೋಫಿ ಅಲ್ಲಿಂದ ಹೋಗಲು ನಿರ್ಧರಿಸುತ್ತಾಳೆ. ಆಗ ಆ ವ್ಯಕ್ತಿ ಗಾಜಿನ ಬಾಟಲಿಯನ್ನು ಆಕೆಯ ತಲೆಗೆ ಹೊಡೆದಿದ್ದಾನೆ. ಬಾಟಲ್ ಮುರಿದು ಹೋಗಿ ಸೋಫಿ ತೀವ್ರವಾಗಿ ಗಾಯಗೊಂಡಿದ್ದಾಳೆ.

    ನನಗೆ ಆತ ಹೊಡೆದಿದ್ದು, ಅನುಭವವಾಯಿತ್ತು. ಆದರೆ ಯಾವುದೇ ನೋವಾಗಲಿಲ್ಲ. ಬಾಟಲಿಯಿಂದ ಹೊಡೆದಿದ್ದಾನೆಂಬುದು ಆ ಶಬ್ಧದಿಂದ ತಿಳಿಯಿತು. ಬಾಟಲಿಯಿಂದ ಹೊಡೆದಿದ್ದಕ್ಕೆ ಅದರಲ್ಲಿದ್ದ ನೀರು ತಲೆಯ ಬೀಳುತ್ತಿದೆ ಎಂದುಕೊಂಡೆ. ಆದರೆ ಅದು ರಕ್ತ ಎಂದು ನನ್ನ ಸ್ನೇಹಿತೆ ನನಗೆ ತಿಳಿಸಿದ್ದಳು. ನನಗೆ ಆಘಾತವಾಯಿತ್ತು. ಆಗ ನನ್ನ ಮುಖ ತುಂಬಾನೇ ಕೆಟ್ಟದಾಗಿ ಕಾಣುತ್ತಿತ್ತು. ನಾನು ಆಗ ಗಾರ್ಡ್ ಬಳಿ ಹೋದೆ ಎಂದು ಸೋಫಿ ಅಲ್ಲಿನ ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.

    ನನಗೆ ಆ ವ್ಯಕ್ತಿ ಯಾರೆಂಬುದು ಸರಿಯಾಗಿ ತಿಳಿದಿಲ್ಲ. ಆದರೆ ಆತ ಹೇಗಿದ್ದಾನೆ ಎಂಬುದು ನನಗೆ ಗೊತ್ತು. ಆತ 5.10 ಅಡಿ ಎತ್ತರವಿದ್ದನು. ಡಾರ್ಕ್ ಕೂದಲನ್ನು ಹೊಂದಿದ್ದನು. ಉದ್ದನೆಯ ತೋಳಿನ ಶರ್ಟ್ ಧರಿಸಿದ್ದನು ಎಂದು ಸೋಫಿ ಹೇಳಿದ್ದಾಳೆ.

    ತೀವ್ರವಾಗಿ ಗಾಯಗೊಂಡಿದ್ದ ಸೋಫಿಯನ್ನು ಆಸ್ಪತ್ರೆಗೆ ಕಡೆದುಕೊಂಡು ಹೋಗಲಾಗಿತ್ತು. ತಲೆಯ ಮೇಲೆ ಆಗಿದ್ದ ಗಾಯಕ್ಕೆ ಹಲವು ಹೊಲಿಗೆಗಳು ಬಿದ್ದಿವೆ. ಸೋಫಿ ಒಂದು ರಾತ್ರಿ ಆಸ್ಪತ್ರೆಯಲ್ಲೇ ಕಳೆದಿದ್ದಾಳೆ ಎಂದು ಹೇಳಲಾಗಿದೆ.