Tag: bother

  • ದಸರಾ ತಾಲೀಮು ವೇಳೆ ಅರಮನೆ ಬಳಿ ಆನೆ ರಂಪಾಟ

    ದಸರಾ ತಾಲೀಮು ವೇಳೆ ಅರಮನೆ ಬಳಿ ಆನೆ ರಂಪಾಟ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಆನೆಯ ತಾಲೀಮಿನಲ್ಲಿ ಆನೆ ರಂಪಾಟ ಮಾಡಿರುವ ಘಟನೆ ಅರಮನೆ ಮೈದಾನಲ್ಲಿ ನಡೆದಿದೆ.

    ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ದಸರಾ ಅಂಗವಾಗಿ ಇಂದಿನಿಂದ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭ ಆಗಿದೆ. ಆದರೆ ತಾಲೀಮು ವೇಳೆ ಆನೆ ರಂಪಾಟ ಮಾಡಿದೆ. ಸರಪಳಿ ಕಿತ್ತುಕೊಂಡು ರೋಷದಿಂದ ಆನೆ ಜೆಮಿನಿ ಓಡಿ ಹೋಗಿದೆ. ಈ ವೇಳೆ ಆನೆಗಳನ್ನು ನಿಯಂತ್ರಿಸಲು ಮಾವುತರು- ಕಾವಾಡಿಗರು ಹರಸಾಹಸ ಪಟ್ಟಿದ್ದಾರೆ. ಆದರೆ ಕೊನೆಗೆ ದಸರಾ ಆನೆಗಳಾದ ಅಭಿಮನ್ಯು, ಧನಂಜಯನಿಂದ ಜೆಮಿನಿಯನ್ನು ನಿಯಂತ್ರಂಣವನ್ನು ಮಾಡಲಾಗಿದೆ. ಕೆಲವು ಸಮಯ ಆನೆ ರಂಪಾಟದಿಂದ ಅರಮನೆ ಆವರಣದಲ್ಲಿ ಆತಂಕ ಉಂಟಾಗಿತ್ತು. ಇದನ್ನೂ ಓದಿ:  2 ತಿಂಗಳ ಬಳಿಕ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು

    ಮೈಸೂರಿನ ಅರಮನೆಯಂಗಳದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ನಡೆಸಲಾಯಿತು. ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ವಿಕ್ರಮ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ಶುರುವಾಗಿದೆ. ಡಿಸಿಎಫ್ ಕರಿಕಾಳನ್ ವೈದ್ಯ ರಮೇಶ್ ಅರಮನೆ ಎಸಿಪಿ ಚಂದ್ರಶೇಖರ್ ಸೇರಿ ಹಲವು ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು.

  • ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಬೆಂಗಳೂರು: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಎಲ್ ಹನಿಟ್ರ್ಯಾಪ್ ಪ್ರಕರಣದಲ್ಲಿ ನಿಮ್ಮ ಮತ್ತು ವಂದನಾ ಜೈನ್ ಹೆಸರು ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಕೆಪಿಎಲ್ ಅಂದ್ರೇನು ಗೊತ್ತಿಲ್ಲ. ಕೆಪಿಎಲ್ ಕರ್ನಾಟಕ ಪ್ರೀಮಿಯರ್ ಲೀಗ್ ಅಂತಾ ಗೊತ್ತಾಗಿದ್ದೇ ಇವತ್ತು ಎಂದು ಹೇಳಿದ್ದಾರೆ.

    ನನಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೊತ್ತು. ಕೆಪಿಎಲ್ ಮೂಲಕ ವಂದನಾ ನನಗೆ ಪರಿಚಯವಿಲ್ಲ. ಆಕೆಯ ಜೊತೆ ಯಾವ ಗೆಳೆತನವೂ ನನಗೆ ಇಲ್ಲ. ಆಕೆ ನಿನ್ನ ಬಿಡೋದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ನನಗೆ ಜೀವ ಭಯವಿದೆ ಎಂದು ಸಂಜನಾ ತಿಳಿಸಿದ್ದಾರೆ.

    ಇದೇ ವೇಳೆ ವಿಸ್ಕಿ ಬಾಟೆಲ್ ನಲ್ಲಿ ನಾನು ಹೊಡೆದ ಎಂದು ಹೇಳಿದವರು ಯಾರು? ಯಾವ ಆಧಾರ ಇದೆ ನಿಮ್ಮ ಬಳಿ? ನಾನು ಎಲ್ಲಿ ವಿಸ್ಕಿ ಬಾಟಲ್‍ನಿಂದ ಹೊಡೆದೆ. ನಿಮ್ಮ ಬಳಿ ಏನಾದರೂ ಸಿಸಿಟಿವಿ ಇದ್ಯಾ ಎಂದರು. ಇದಕ್ಕೆ ಸಂಜನಾ ಗಲ್ರಾಣಿ ವಿಸ್ಕಿ ಬಾಟೆಲ್ ನಲ್ಲಿ ಹೊಡೆದರು ಅಂತಾ ವಂದನಾರೇ ಹೇಳಿದ್ದು ಎಂದು ಮಾಧ್ಯಮದವರು ಹೇಳಿದಾಗ, ನಾನೇನು ಕುಡಿದು ತೂರಾಡುತ್ತಿದ್ನಾ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ನಾನು ಗಲಾಟೆಯಾದಾಗ ಕುಡಿದಿರಲಿಲ್ಲ. ಇನ್ನು ವಿಸ್ಕಿ ಬಾಟೆಲ್ ನಿಂದ ಹೊಡೆಯೋದು ಎಲ್ಲಿಂದ ಬಂತು? ನಾನು ನನ್ನ ಕಾರ್ ಬಳಿ ಹೋಗುವಾಗ ತೂರಾಡ್ಕೊಂಡು ಹೋಗುವ ವೀಡಿಯೊವನ್ನು ಅವರೇ ಬಿಟ್ಟಿದ್ದಾರಲ್ಲ. ಸ್ಟಿಫ್ ಆಗಿ ನನ್ನ ಕಾರಿಗೆ ಹೋಗಿದ್ದೇನೆ. ಆಕೆಗೆ ಪ್ರಚಾರದ ಹುಚ್ಚಿಂದ ನನ್ನ ಮೇಲೆ ಇಲ್ಲಸಲ್ಲದ ದೂರು ಹೊರಿಸಿದ್ದಾಳೆ ಎಂದು ವಂದನಾ ಜೈನ್ ವಿರುದ್ಧ ಗಲ್ರಾನಿ ಗರಂ ಆಗಿದ್ದಾರೆ.

  • ಅಣ್ಣನ ಗುಂಡೇಟಿಗೆ ತಮ್ಮ ಬಲಿ: ಕೊಡಗಿನಲ್ಲಿ ಅಮಾನವೀಯ ಘಟನೆ

    ಅಣ್ಣನ ಗುಂಡೇಟಿಗೆ ತಮ್ಮ ಬಲಿ: ಕೊಡಗಿನಲ್ಲಿ ಅಮಾನವೀಯ ಘಟನೆ

    ಮಡಿಕೇರಿ: ಆಸ್ತಿವಿಚಾರಕ್ಕೆ ಕಲಹ ಏರ್ಪಟ್ಟು ಅಣ್ಣನೇ ತಮ್ಮನನ್ನ ಗುಂಡಿಕ್ಕಿ ಕೊಂದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಸುಂಟಿಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಣ್ಣ ಹರೀಶ್ 46 ವರ್ಷದ ಸುರೇಶ್‍ಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಹರೀಶ್ ಹಾಗೂ ಸುರೇಶ್ ನಡುವೆ ಈ ಹಿಂದಿನಿಂದಲೇ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಇತ್ತು ಎನ್ನಲಾಗಿದ್ದು, ಇಂದು ಬೆಳಗ್ಗೆ ಹರೀಶ್ ತನ್ನ ಮನೆಯಲ್ಲಿದ್ದ ಸಿಂಗಲ್ ಬ್ಯಾರಲ್ ಗನ್‍ನಿಂದ ಸುರೇಶ್ ಮೇಲೆ ಗುಂಡು ಹಾರಿಸಿದ್ದಾರೆ.

    ಗುಂಡೇಟಿನಿಂದ ಗಾಯಗೊಂಡ ಸುರೇಶ್ ಮೃತಪಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸುಂಟಿಕೊಪ್ಪ ಠಾಣಾ ಪೊಲೀಸರು ಆರೋಪಿ ಹರೀಶ್‍ನನ್ನ ಬಂಧಿಸಿದ್ದಾರೆ.

  • ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅಣ್ಣನಿಂದಲೇ ತಮ್ಮನ ಕಗ್ಗೊಲೆ!

    ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅಣ್ಣನಿಂದಲೇ ತಮ್ಮನ ಕಗ್ಗೊಲೆ!

    ಮುಂಬೈ: ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ತಮ್ಮನನ್ನು ಕೊಲೆ ಮಾಡಿದ ಆರೋಪದ ಮೇಲೆ 35 ವರ್ಷದ ಅಣ್ಣನನ್ನು ಪೊಲೀಸರು ಬಂಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಆರೋಪಿ ಅಜಯ್ ಮುಕ್ವಾನಾ ತನ್ನ ತಮ್ಮ ಮುಕೇಶ್ ಮುಕ್ವಾನನ್ನು ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಅಜಯ್ ನ್ನು ಪೊಲಿಸರು ಬಂಧಿಸಿದ್ದು, ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.

    ಏನಿದು ಪ್ರಕರಣ?: ಆರೋಪಿ ಅಜಯ್ ಮಕ್ವಾನಾ ಮತ್ತು ತಮ್ಮ ಮುಖೇಶ್ ಮಕ್ವಾನಾ ಮಧ್ಯೆ ಮನೆಯಲ್ಲಿ ವಾಗ್ದಾನ ನಡೆದಿದ್ದೇ ಮುಖೇಶ್ ಕೊಲೆಗೆ ಕಾರಣ ಅಂತ ಭೋವಾಡಾ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

    ಅಜಯ್ ಮದ್ಯವ್ಯಸನಿಯಾಗಿದ್ದು, ಕೆಇಎಂ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ. ಮುಕೇಶ್ ಅನಕ್ಷರಸ್ಥನಾಗಿದ್ದನು. ಹೀಗಾಗಿ ಆತ ಮನೆಯಲ್ಲೇ ಇದ್ದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಇದರಿಂದ ತಾಯಿಗೂ ಮುಕೇಶ್ ಮೇಲೆ ಜಾಸ್ತಿ ಪ್ರೀತಿ ಇತ್ತು. ಈ ಹಿನ್ನೆಲೆಯಲ್ಲಿ ಮೊದಲೇ ಮದ್ಯ ವ್ಯಸನಿಯಾಗಿದ್ದ ಅಜಯ್ ಕುಡಿದು ಬಂದು ತನ್ನ 75 ವರ್ಷದ ತಾಯಿಯ ಜೊತೆ ಪ್ರತೀದಿನ ಜಗಳವಾಡುತ್ತಿದ್ದನು. ಇದೇ ಕಾರಣಕ್ಕೆ ಅಣ್ಣ- ತಮ್ಮನ ಜೊತೆ ಕೂಡ ಜಗಳವಾಗಿದ್ದು, ಈ ವೇಳೆ ತಾಯಿ ಮುಕೇಶ್ ಜೊತೆ ಸೇರಿ ಅಣ್ಣ ಅಜಯ್‍ಗೆ ಬೈದಿದ್ದಾರೆ.

    ಇದ್ರಿಂದ ಕೋಪೋದ್ರಿಕ್ತನಾದ ಅಣ್ಣ ಅಜಯ್ ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟಿನಿಂದ ತಮ್ಮ ಮುಕೇಶ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಮುಕೇಶ್ ಅಲ್ಲೇ ಕುಸಿದುಬಿದ್ದಿದ್ದಾನೆ. ಇದರಿಂದ ಭಯಗೊಂಡ ಆರೋಪಿ ಅಜಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಗಂಭೀರ ಗಾಯಗೊಂಡ ಮುಕೇಶ್‍ನನ್ನು ಕೂಡಲೇ ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

    ಘಟನೆಯಿಂದಾಗಿ ಅಜಯ್ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಜಯ್ ನನ್ನು ಭಾನುವಾರ ಪೊಲೀಸರು ಬಂಧಿಸಿದ್ದು, ಜುಲೈ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.