Tag: Boss

  • ಸುದೀಪ್ ಗೆ ‘ಬಾಸ್’ ಎಂದ ಸಿಎಂ ಬೊಮ್ಮಾಯಿ : ವಿಡಿಯೋ ವೈರಲ್

    ಸುದೀಪ್ ಗೆ ‘ಬಾಸ್’ ಎಂದ ಸಿಎಂ ಬೊಮ್ಮಾಯಿ : ವಿಡಿಯೋ ವೈರಲ್

    ಮೊನ್ನೆಯಷ್ಟೇ ಕಿಚ್ಚ ಸುದೀಪ್ (Kiccha Sudeep) ತಾವು ಬಸವರಾಜ ಬೊಮ್ಮಾಯಿ (Basavaraja Bommai) ಅವರನ್ನು ‘ಮಾಮ’ (Maama)ಎಂದು ಕರೆಯುವುದಾಗಿ ಹೇಳಿಕೊಂಡಿದ್ದರು. ಚಿಕ್ಕ ವಯಸ್ಸಿನಿಂದಲೇ ಬೊಮ್ಮಾಯಿ ಅವರ ಜೊತೆ ಒಡನಾಟ ಹೊಂಡಿದ್ದೇನೆ. ಆವತ್ತಿನಿಂದಲೂ ಅವರನ್ನು ಮಾಮ ಎಂದೇ ಕರೆಯುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದರು. ಈ ಮಾತು ಸಾಕಷ್ಟು ಟ್ರೋಲ್ ಆಗಿತ್ತು.

    ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದೀಪ್ ಗೆ ‘ಬಾಸ್’ (Boss) ಎಂದು ಕರೆದಿದ್ದಾರೆ. ಈ ಮಾತು ಕೂಡ ಟ್ರೋಲ್ ಆಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಸುದೀಪ್ ಅಭಿಮಾನಿಗಳು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸುದೀಪ್ ಅಭಿಮಾನಿಗಳು ಈ ವಿಡಿಯೋ ಹಂಚಿಕೊಳ್ಳುವುದಕ್ಕೆ ಕಾರಣವೂ ಇದೆ. ಬಾಸ್ ಅನ್ನುವ ಪದಕ್ಕಾಗಿ ಹಲವು ವರ್ಷಗಳಿಂದ ಗಾಂಧಿನಗರದಲ್ಲಿ ಕಿತ್ತಾಟ ಶುರುವಾಗಿದೆ. ಇದನ್ನೂ ಓದಿ: ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್

    ತಮ್ಮನ್ನು ಬೆಂಬಲಿಸಿದ ಕಾರಣಕ್ಕಾಗಿ ಸುದೀಪ್ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಈ ಕುರಿತು ಏನು ಹೇಳುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆ ಉತ್ತರಿಸಿದ ಬೊಮ್ಮಾಯಿ, ‘ನಾನೇನಪ್ಪ ಮಾಡ್ಲಿ? ಬೆಂಬಲದ ವಿಷಯವಾಗಿ ಬಾಸ್ (ಸುದೀಪ್) ಮೊನ್ನೆ ಎಲ್ಲವನ್ನೂ ಸ್ಪಷ್ಟ ಪಡಿಸಿದ್ದಾರಲ್ಲ. ಮತ್ತೆ ಏನು ಹೇಳೋದು’ ಎಂದಷ್ಟೇ ಉತ್ತರಿಸಿದ್ದಾರೆ. ಈ ಮಾತಿನ ಮಧ್ಯ ಬಂದ ‘ಬಾಸ್’ ಪದವು ಸಾಕಷ್ಟು ವೈರಲ್ ಆಗಿದೆ.

    ಸುದೀಪ್ ಅವರ ಖಾಸಗಿ ವಿಡಿಯೋ ವಿಚಾರವಾಗಿಯೂ ಸಿಎಂ ಪ್ರತಿಕ್ರಿಯೆ ನೀಡಿದ್ದು, ಅದಕ್ಕೂ ಅವರು ಬೆಂಬಲಿಸಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಮುಗಿದ ನಂತರವೇ ಅವರು ಪತ್ರಿಕಾಗೋಷ್ಠಿಗೆ ಬಂದಿದ್ದು. ಬೆಂಬಲಿಸಿದ್ದಕ್ಕೆ ವಿಡಿಯೋ ಬೆದರಿಕೆ ಹಾಕಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

  • ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ವರೆಗೂ ಯಶ್ ಅವರನ್ನು ಅಭಿಮಾನಿಗಳು ‘ರಾಕಿಂಗ್ ಸ್ಟಾರ್’ ಎಂದು ಕರೆಯುತ್ತಿದ್ದರು. ಕೆಜಿಎಫ್ ಸಿನಿಮಾ ಬಂದ ಮೇಲೆ ‘ರಾಕಿ ಭಾಯ್’ ಕೂಡ ಆದರು. ಇದೀಗ ಯಶ್ ಅವರನ್ನು ಅಭಿಮಾನಿಗಳು ‘ಬಾಸ್’ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಅಭಿಮಾನದಿಂದಲೇ ‘ಯಶ್ ಬಾಸ್’ ಎಂದು ಕರೆಯುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ‘ಬಾಸ್’ ಪದವನ್ನು ಯಶ್ ಕೂಡ ಎಂಜಾಯ್ ಮಾಡುತ್ತಾರೆ. ಅವರ ಕಾರಿನ ಸಂಖ್ಯೆ ‘8055’ ಇದನ್ನು ಸ್ಟೈಲ್ ಆಗಿ ಇಂಗ್ಲಿಷ್ ನಲ್ಲಿ ‘ಬಾಸ್’ ಎಂದು ಕಾಣುವಂತೆ ಬರೆಸಲಾಗಿದೆ. ಅಲ್ಲದೇ, ಇದೀಗ ಅವರ ಕನಸು ಕೂಡ ನನಸಾಗಿದೆ. ಅಭಿಮಾನಿಗಳು ನೆಚ್ಚಿನ ನಟನ ‘ಬಾಸ್’ ಎಂದು ಕರೆಯುವ ಮೂಲಕ ಹೊಸ ಖುಷಿಗೆ ಕಾರಣರಾಗಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಕೆಜಿಎಫ್ 2 ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ‘ಯಶ್ ಬಾಸ್’ ಟ್ವಿಟರ್ ನಲ್ಲಿ ಭಾರೀ ಟ್ರೆಂಡಿಂಗ್ ಆಗಿದೆ. ಯಶ್ ಅಭಿಮಾನಿಗಳು ಏನೇ ಪೋಸ್ಟ್ ಮಾಡಿದರೂ, ಹ್ಯಾಶ್ ಟ್ಯಾಗ್ ಅನ್ನು ಯಶ್ ಬಾಸ್ ಎಂದೇ ಬರೆಯುತ್ತಿದ್ದಾರೆ. ಹಾಗಾಗಿ ಟ್ರೆಂಡಿಂಗ್ ನಲ್ಲಿ ಯಶ್ ಮೊದಲ ಸ್ಥಾನದಲ್ಲಿದ್ದಾರೆ.

  • ಕೊಹ್ಲಿ ಭಾರತೀಯ ಕ್ರಿಕೆಟ್‍ನ ಬಾಸ್: ರವಿಶಾಸ್ತ್ರಿ

    ಕೊಹ್ಲಿ ಭಾರತೀಯ ಕ್ರಿಕೆಟ್‍ನ ಬಾಸ್: ರವಿಶಾಸ್ತ್ರಿ

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟಿನ ಬಾಸ್ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

    ಸ್ಕೈ ಕ್ರಿಕೆಟ್ ಪಾಡ್‍ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಶಾಸ್ತ್ರಿ ಇಂಗ್ಲೆಂಡ್‍ನ ಮಾಜಿ ನಾಯಕ ನಾಸರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಮತ್ತು ರಾಬ್ ಕೀ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ಭಾರತೀಯ ಕ್ರಿಕೆಟಿನ ಬಾಸ್, ಜೊತೆಗೆ ನಾಯಕನ ಹೊರೆಯನ್ನು ಹೊರಹಾಕಲು ಅವರಿಗೆ ಸಹಾಯ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ಅವರು ತವರು ನೆಲದಲ್ಲಿ 12 ಟೆಸ್ಟ್ ಅನ್ನು ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿ ಭಾರತೀಯರ ಹೃದಯದಲ್ಲಿದ್ದಾರೆ. ಒಂದು ತಂಡದಲ್ಲಿ ನಾಯಕ ಯಾವಗಲೂ ಬಾಸ್ ಆಗಿ ಇರುತ್ತಾರೆ. ಕೋಚಿಂಗ್ ಸಿಬ್ಬಂದಿಯ ಕೆಲಸ ನನ್ನ ಪ್ರಕಾರ ಕ್ರಿಕೆಟ್ ಮೈದಾನದಲ್ಲಿ ಹುಡುಗರನ್ನು ಧೈರ್ಯಶಾಲಿಯಾಗಿ, ಸಕಾರತ್ಮಕವಾಗಿ ಮತ್ತು ಭಯಪಡದೇ ಆಡುವಂತೆ ಸಿದ್ಧ ಮಾಡುವುದು ಎಂದು ನಾನು ನಂಬುತ್ತೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

    ತಂಡದ ನಾಯಕ ತಂಡವನ್ನು ಮುನ್ನೆಡೆಸುತ್ತಿರುತ್ತಾನೆ. ತಂಡದ ಜವಾಬ್ದಾರಿ ನಮಗೂ ಇರುತ್ತದೆ. ಆದರೆ ಮೈದಾನದ ಮಧ್ಯೆದಲ್ಲಿ ಅವರ ಆಟವನ್ನು ಅವರಿಗೆ ಆಡಲು ಬಿಡಬೇಕು. ತಂಡದ ನಾಯಕ ಮೈದಾನದ ಮಧ್ಯೆದಲ್ಲಿ ನಿಂತು ಎಲ್ಲವನ್ನು ಮಾಡುತ್ತಿರುತ್ತಾನೆ. ಅವನಿಗೆ ಎಲ್ಲವನ್ನು ಎದುರಿಸಲು ನಾವು ಪ್ರೋತ್ಸಾಹಿಸಬೇಕು. ಆಗ ನಾಯಕ ತಂಡವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಪಂದ್ಯವನ್ನು ಮುನ್ನೆಡೆಸುತ್ತಾನೆ ಎಂದು ಶಾಸ್ತ್ರಿ ಕೋಚ್ ಅನುಭವವನ್ನು ವಿವರಿಸಿದ್ದಾರೆ.

    ಇದೇ ವೇಳೆ ಕೊಹ್ಲಿ ಅವರು ಫಿಟ್ನೆಸ್ ಮತ್ತು ಅವರು ತಂಡದ ಇತರ ಆಟಗಾರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಫಿಟ್ನೆಸ್ ಬಗ್ಗೆ ಮಾತನಾಡುವುದಾದರೆ ಕೊಹ್ಲಿ ನಾಯಕತ್ವದ ಮುಂಚೂಣಿಗೆ ಬರುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಅವರು ಗೊಂದಲ ಮಾಡಿಕೊಳ್ಳುವುದಿಲ್ಲ. ಕೊಹ್ಲಿ ಬೆಳಗ್ಗೆ ಎದ್ದು ಇತರ ಆಟಗಾರರಿಗೆ ನೀವು ಈ ಪಂದ್ಯ ಆಡಬೇಕು ಎಂದರೆ ಫಿಟ್ ಆಗಿ ಇರಬೇಕು. ಯಾವುದೇ ಪರಿಸ್ಥಿತಿಯಲ್ಲೂ ತಂಡಕ್ಕೆ ನೆರವಾಗಬೇಕು ಎಂದು ಎಚ್ಚರಿಕೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಸದ್ಯ ಭಾರತ ತಂಡದಲ್ಲಿ ವಿಶ್ರಾಂತಿ ಪಡೆಯದೇ ನಿರಂತರವಾಗಿ ಆಟವಾಡುತ್ತಿರುವ ಕೆಲ ಆಟಗಾರಲ್ಲಿ ಕೊಹ್ಲಿ ಅವರು ಒಬ್ಬರು. ನಾನು ಕೇವಲ ತರಬೇತಿ ನೀಡಬಹುದು. ಆದರೆ ಕೊಹ್ಲಿ ತನ್ನ ಆಹಾರ ಕ್ರಮದಲ್ಲಿ ಫಿಟ್ ಆಗಿ ಇರಲು ಬಹಳ ತ್ಯಾಗ ಮಾಡಿದ್ದಾರೆ. ಈ ಕಟ್ಟು ನಿಟ್ಟಿನ ಅವರ ನಿಯಮಗಳು ಬೇರೆ ಆಟಗಾರರನ್ನು ಹುರಿದುಂಬಿಸುತ್ತದೆ ಎಂದು ರವಿಶಾಸ್ತ್ರಿ ಕೊಹ್ಲಿ ಅವರನ್ನು ಹಾಡಿಹೊಗಳಿದ್ದಾರೆ.

  • 2 ವರ್ಷದ ಸೇಡು- ದರೋಡೆ ಮಾಡಿ ಹಳೆಯ ಬಾಸ್‍ನಿಂದ 5 ಲಕ್ಷ ದೋಚಿದ್ರು!

    2 ವರ್ಷದ ಸೇಡು- ದರೋಡೆ ಮಾಡಿ ಹಳೆಯ ಬಾಸ್‍ನಿಂದ 5 ಲಕ್ಷ ದೋಚಿದ್ರು!

    – ಓರ್ವ 40 ಸಾವಿರ ಅಕೌಂಟಿಗೆ ಹಾಕ್ಕೊಂಡ
    – ಇನೋರ್ವ ದುಬಾರಿ ಬೆಲೆಯ ಮೊಬೈಲ್ ಖರೀದಿಸಿದ

    ನವದೆಹಲಿ: ಮಾಜಿ ಬಾಸ್‍ಗೆ ಗನ್ ತೋರಿಸಿ 5 ಲಕ್ಷ ರೂ. ಹಣ ದರೋಡೆ ಮಾಡಿದ ಘಟನೆಯೊಂದು ಕೇಂದ್ರ ದೆಹಲಿಯ ಕರೋಲ್ ಬಾಗ್‍ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಬಂಧಿತರನ್ನು ಚಂದನ್(30) ಹಾಗೂ ರಂಜಿತ್(24) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಜಾನ್ ಮೊಹಮ್ಮದ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪ್ರಮುಖ ಆರೋಪಿ ಚಂದನ್‍ಗೆ ತನ್ನ ಹಳೆಯ ಬಾಸ್ ಮೇಲೆ ವಿಪರೀತ ಸೇಡಿತ್ತು. ಈ ಸೇಡು ತೀರಿಸಿಕೊಳ್ಳಲು ತನ್ನಿಬ್ಬರು ಗೆಳೆಯರನ್ನು ಸೇರಿಸಿಕೊಂಡು ಆತ ಹಲವು ಸಮಯಗಳಿಂದ ಕಾದು ಕುಳಿತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಜನವರಿ 23ರಂದು ರಾತ್ರಿ 8.30ರ ಸುಮಾರಿಗೆ ಗಾರ್ಮೆಂಟ್ ವ್ಯಾಪಾರಿಯಾಗಿದ್ದ ಚಂದನ್ ಹಳೆಯ ಬಾಸ್ ಸಂಜಯ್ ಸಹದೇವರನ್ನು ಅವರ ಮನೆಯ ಹೊರಗಡೆಯೇ ದರೋಡೆ ಮಾಡಿದ್ದಾರೆ. ಅಲ್ಲದೆ ಬಾಸ್ ಭಯದಿಂದ ಕಿರುಚಿಕೊಳ್ಳಬಹುದೆಂಬ ನಿಟ್ಟಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸೈಲೆಂಟಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. ನಂತರ ಸಹದೇವ್ ಬ್ಯಾಗ್ ಕಸಿದು ಅದರಲ್ಲಿದ್ದ ಹಣ ಹಾಗೂ ಕೆಲ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಗಾಡಿ ಹತ್ತಿ ಪರಾರಿಯಾಗಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮಂದೀಪ್ ಸಿಂಗ್ ರಾಂಧವಾ ತಿಳಿಸಿದ್ದಾರೆ.

    ಘಟನೆಯ ಬಳಿಕ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ದರೋಡೆ ಮಾಡಿದ ಸ್ಥಳದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸರಿಗೆ ಈ ವಿಚಾರ ತಿಳಿದಿದೆ ಎಂದು ಗೊತ್ತಾದ ತಕ್ಷಣವೇ ಅಜಾದ್ ಪುರ್ ಹಾಗೂ ಮಾಡೆಲ್ ಟೌನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಚಂದನ್ ಹಾಗೂ ರಂಜಿತ್ ಅಲ್ಲಿಂದ ಎಸ್ಕೇಪ್ ಆಗಿದ್ದು, ಕೊನೆಗೆ ಇಬ್ಬರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

    ಬಂಧಿತರಿಂದ ದರೋಡೆಗೆ ಬಳಸಿದ ಸ್ಕೂಟರ್, ಹಣ, ದಾಖಲೆಗಳು ಹಾಗೂ ದರೋಡೆಯ ಬಳಿಕ ಖರೀದಿಸಿದ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ”ಸಹದೇವ್ ನಮ್ಮನ್ನು ಕೆಲಸದಿಂದ ವಜಾ ಮಾಡಿದ್ದರು. ಇದರಿಂದ ಸಿಟ್ಟುಗೊಂಡು ಒಂದಲ್ಲ ಒಂದು ದಿನ ಆತನಿಗೆ ಪಾಠ ಕಲಿಸಲೇಬೇಕೆಂದು ನಿರ್ಧಾರ ಮಾಡಿದ್ದೆ” ಎಂದು ತನಿಖೆಯ ವೇಳೆ ಪೊಲೀಸರ ಬಳಿ ಚಂದನ್ ತಿಳಿಸಿದ್ದಾನೆ.

    ಕೆಲಸದಿಂದ ವಜಾ ಮಾಡಿದ ನಂತರ ಚಂದನ್, ತನ್ನ ಹಳೆಯ ಆಫೀಸ್ ಪಕ್ಕದಲ್ಲೇ ಇರುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೆ ಸಹದೇವ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದನು.

    ಇತ್ತ ಚಳಿಗಾಲದಲ್ಲಿ ಜಾಕೆಟ್ ಗಳು ಹೆಚ್ಚು ಸೇಲ್ ಆಗುತ್ತಿದ್ದು, ಈ ಸಮಯದಲ್ಲಿ ಸಹದೇವ್ ಬಳಿ ಹೆಚ್ಚಿನ ಹಣವಿರುತ್ತೆ ಎಂಬುದು ಚಂದನ್‍ಗೆ ಮೊದಲೇ ತಿಳಿದಿರುತ್ತದೆ. ಹೀಗಾಗಿ ಇದೇ ಸಮಯವನ್ನು ಉಪಯೋಗಿಸಿಕೊಂಡು ದರೋಡೆ ಮಾಡಿದ್ದಾನೆ.

    ಹಳೆಯ ಬಾಸ್ ನ್ನು ದರೋಡೆ ಮಾಡಿದ ನಂತರ ಚಂದನ್ ತನ್ನ ಅಕೌಂಟಿಗೆ 40 ಸಾವಿರ ರೂ. ಹಾಕಿಕೊಂಡರೆ, ಇತ್ತ ರಂಜಿತ್ ದುವಾರಿ ಬೆಲೆಯ ಮೊಬೈಲ್ ಫೋನ್ ಖರೀದಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

  • ಡಿಸ್‍ಕನೆಕ್ಟ್ ಕಾಯ್ದೆ ಜಾರಿಯಾದ್ರೆ ಬಾಸ್‍ಗೆ ನೀವು ಹೆದರುವ ಅಗತ್ಯವೇ ಇಲ್ಲ!

    ಡಿಸ್‍ಕನೆಕ್ಟ್ ಕಾಯ್ದೆ ಜಾರಿಯಾದ್ರೆ ಬಾಸ್‍ಗೆ ನೀವು ಹೆದರುವ ಅಗತ್ಯವೇ ಇಲ್ಲ!

    ನವದೆಹಲಿ: “ಕಾಲ್ ರಿಸೀವ್ ಮಾಡಿಲ್ಲ ಯಾಕೆ? ಮೇಲ್ ಕಳುಹಿಸಿದ್ರು ರಿಪ್ಲೈ ಮಾಡಿಲ್ಲ ಯಾಕೆ?” ಈ ರೀತಿಯ ಪ್ರಶ್ನೆಗಳನ್ನು ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದರೂ ಉದ್ಯೋಗಿಗಳಿಗೆ ಬಾಸ್ ಸಾಮಾನ್ಯವಾಗಿ ಕೇಳುತ್ತಿರುತ್ತಾರೆ. ಆದರೆ ಈ ಬಾರಿ ಮಂಡನೆಯಾಗಿರುವ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಈ ರೀತಿಯಾಗಿ ಬಾಸ್ ಕೇಳುವ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಬೀಳಲಿದೆ.

    ಹೌದು. ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ‘ರೈಟ್ ಟು ಡಿಸ್‍ಕನೆಕ್ಟ್’ ಮಸೂದೆ ಮಂಡನೆಯಾಗಿದೆ. ಮನೆಗೆ ತೆರಳಿದ ಬಳಿಕವೂ ಉದ್ಯೋಗಿಯ ಖಾಸಗಿ ಬದುಕನ್ನು ರಕ್ಷಿಸುವ ಸಲುವಾಗಿ ಎನ್‍ಸಿಪಿ ನಾಯಕಿ ಸುಪ್ರಿಯಾ ಸುಳೆ ಈ ಮಸೂದೆಯನ್ನು ಮಂಡಿಸಿದ್ದಾರೆ.

     

    ಮಸೂದೆಯಲ್ಲಿ ಏನಿದೆ?
    ಆಫೀಸ್ ಅವಧಿ ಮುಗಿದ ಬಳಿಕವೂ ಮನೆಯಲ್ಲಿ ಬಾಸ್ ಕರೆ, ಇ ಮೇಲ್‍ಗೆ ಉತ್ತರಿಸದೇ ಇರುವ ಸಂಪೂರ್ಣ ಸ್ವಾತಂತ್ರ್ಯ ನೀಡುವ ಅಂಶ ಈ ಮಸೂದೆಯಲ್ಲಿದೆ. ಉದ್ಯೋಗಿಯ ವೃತ್ತಿಜೀವನ ಮತ್ತು ಖಾಸಗಿ ಜೀವನದ ನಡುವೆ ಅಂತರ ಕಾಯ್ದುಕೊಳ್ಳಲು ಮತ್ತು ವೃತ್ತಿಜೀವನದ ಒತ್ತಡವನ್ನು ಕಡಿಮೆ ಮಾಡಲು ಈ ಮಸೂದೆಯನ್ನು ಮಂಡಿಸಲಾಗಿದೆ.

    ಹೇಗೆ ಕೆಲಸ ಮಾಡುತ್ತೆ?
    ಒಂದು ಕಂಪನಿಯಲ್ಲಿ 10ಕ್ಕೂ ಅಧಿಕ ಉದ್ಯೋಗಿಗಳಿದ್ದು, ಅವರು ಉದ್ಯೋಗಿಗಳ ಕಲ್ಯಾಣ ಸಮಿತಿ ರಚಿಸಿಕೊಂಡಿದ್ದರೆ ಇದು ಸಹಾಯವಾಗಲಿದೆ. ಆಫೀಸಿನಿಂದ ಮನೆಗೆ ತೆರಳಿದ ಬಳಿಕ ಬಾಸ್ ಕರೆಯನ್ನು ನಿರ್ಲಕ್ಷ್ಯಿಸಬಹುದು. ಇಮೇಲ್ ನೋಡಿದರೂ ರಿಪ್ಲೈ ಮಾಡುವ ಅಗತ್ಯ ಇರುವುದಿಲ್ಲ. ಬಾಸ್ ಕರೆಯನ್ನು ನಿರ್ಲಕ್ಷ್ಯ ಮಾಡಿದರೂ ಉದ್ಯೋಗಿಗಳನ್ನು ಪ್ರಶ್ನಿಸಬಾರದು ಮತ್ತು ಯಾವುದೇ ಶಿಸ್ತು ಕ್ರಮ ಕೈಗೊಳ್ಳುವಂತಿಲ್ಲ ಎನ್ನುವ ವಿಶೇಷ ಅಂಶ ಈ ಮಸೂದೆಯಲ್ಲಿದೆ. ಕೇವಲ ಕೆಲಸದ ಅವಧಿ ಅಲ್ಲದೇ ರಾಜಾ ದಿನಕ್ಕೂ ಈ ನಿಯಮ ಅನ್ವಯವಾಗುತ್ತದೆ.

    ಬೇರೆ ಕಡೆ ಜಾರಿಯಲ್ಲಿದೆ:
    ಫ್ರಾನ್ಸ್ ದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಈ ಕಾಯ್ದೆ ಜಾರಿಗೆ ಬಂದಿದ್ದು, ನಂತರ ಸ್ಪೇನ್, ಜರ್ಮನಿ ಮತ್ತು ಅಮೆರಿಕದ ಕೆಲ ಕಂಪನಿಗಳು ಈ ನಿಯಮವನ್ನು ಅಳವಡಿಸಿಕೊಂಡಿದೆ. ಆಫೀಸ್ ಸಮಯದ ನಂತರವೂ ಇಮೇಲ್ ಚೆಕ್, ಫೋನ್ ಕಾಲ್ ರಿಸೀವ್ ಮಾಡಿದ್ದರಿಂದ ಒತ್ತಡ ಹೆಚ್ಚಾಗಿ ಮನೆಯ ವಾತಾವರಣ ಹಾಳಾಗಿ ಸಾಂಸಾರಿಕ ಜೀವನದ ಮೇಲೂ ಪೆಟ್ಟು ಬೀಳುತ್ತದೆ. ಇದರಿಂದಾಗಿ ಉದ್ಯೋಗಿಯ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಅಧ್ಯಯನಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ವಿದೇಶದಲ್ಲಿ ಈ ಕಾಯ್ದೆ ಜಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಒಡೆಯ’ನಿಗಾಗಿ ಮಿನಿ ಸ್ಕಾಟ್ಲೆಂಡ್‍ನಿಂದ ಹಾರಿ ಬಂದ ಕನ್ನಡದ ಒಡತಿ!

    ‘ಒಡೆಯ’ನಿಗಾಗಿ ಮಿನಿ ಸ್ಕಾಟ್ಲೆಂಡ್‍ನಿಂದ ಹಾರಿ ಬಂದ ಕನ್ನಡದ ಒಡತಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ `ಒಡೆಯ’. ಈ ಸಿನಿಮಾದ ಟೈಟಲ್ ಕಾಂಟ್ರವರ್ಸಿಯಿಂದ ಬಜಾರ್ ಲ್ಲಿ ಹವಾ ಎಬ್ಬಿಸಿತ್ತು. ಇದೀಗ ನಾಯಕಿ ಆಯ್ಕೆ ವಿಚಾರವಾಗಿ ಸುದ್ದಿಯಲ್ಲಿದೆ. ಕನ್ನಡತಿಯೇ ಬೇಕು ಅಂತ ಹಠಹಿಡಿದ ಚಿತ್ರತಂಡಕ್ಕೆ ಬೊಂಬೆಯಂತಹ ಬೆಡಗಿ ಸಿಕ್ಕಿದ್ದಾಳೆ.

    ಒಡೆಯ ಸಿನಿಮಾದ ಮೂಲಕ ಮತ್ತೊಬ್ಬ ಕನ್ನಡತಿಯನ್ನ ಪರಿಚಯಿಸಬೇಕು ಅನ್ನೋದು ಚಿತ್ರತಂಡದ ಮಹದಾಸೆಯಾಗಿತ್ತು. ಹೀಗಾಗಿ ಇಡೀ ಒಡೆಯ ಚಿತ್ರತಂಡ ಕನ್ನಡದ ಹುಡುಗಿಗಾಗಿ ಹುಡುಕಾಟದಲ್ಲಿ ನಿರತರಾಗಿದ್ದರು. ಅದರಂತೇ ಕನ್ನಡದ ಹೊಸ ಪ್ರತಿಭೆಗಳಿಗೆ ಮಣೆಹಾಕಿದ್ದರು. ಸಾಕಷ್ಟು ಜನ ನ್ಯೂ ಕಮ್ಮರ್  ಗಳು ಒಡೆಯ ಚಿತ್ರತಂಡವನ್ನ ಸಂಪರ್ಕ ಕೂಡ ಮಾಡಿದ್ದರು. ಆದರೆ ಸಾರಥಿಯ ಜತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಕೊಡಗಿನ ಕಿನ್ನರಿಗೆ ಸಿಕ್ಕಿದೆ.

    ಕೊಡಗಿನ ಬೆಡಗಿ ರಾಘವಿ ‘ಒಡೆಯ’ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಇವರು ಸಿನಿಮಾಗಾಗಿ ರಾಘವಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲೇ ಒಡೆಯ ಸಿನಿಮಾದ ಫೋಟೋಶೂಟ್‍ನಲ್ಲಿ ರಾಘವಿ ಅವರು ಪಾಲ್ಗೊಳ್ಳಲಿದ್ದಾರೆ.

    ಎಂ.ಡಿ.ಶ್ರೀಧರ್ ಹಾಗೂ ದರ್ಶನ್ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಮೂರನೇ ಸಿನಿಮಾ `ಒಡೆಯ’ ಆಗಿದೆ. ಒಡೆಯ ಸಿನಿಮಾಗೆ ನಟಿ ಮಾತ್ರವಲ್ಲ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಕನ್ನಡದವರೇ ಆಗಿರಬೇಕು ಎಂದು ದರ್ಶನ್ ತಿಳಿಸಿದ್ದರು. ಹೀಗಾಗಿಯೇ ಕನ್ನಡ ನೆಲದ ಕಲಾವಿದರು- ತಂತ್ರಜ್ಞರನ್ನ ಆಯ್ಕೆ ಮಾಡಲಾಗುತ್ತಿದೆ.

    ಈಗಾಗಲೇ, ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾಶೆಣೈ, ಪಂಕಜ್, ಯಶಸ್ ಸೂರ್ಯ, ಶರತ್ ಲೋಹಿತಾಶ್ವ, ಅವಿನಾಶ್, ಸೇರಿದಂತೆ ಹಲವರನ್ನ ಚಿತ್ರಕ್ಕೆ ಆಯ್ಕೆಮಾಡಲಾಗಿದೆ. ಸದ್ಯಕ್ಕೆ ಡಿಸೆಂಬರ್ ನಲ್ಲಿ ಒಡೆಯ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಡೆಯನಿಗೆ ಸಾಥ್ ನೀಡಿದ್ರು ರೆಬಲ್ ಅಂಬಿ

    ಒಡೆಯನಿಗೆ ಸಾಥ್ ನೀಡಿದ್ರು ರೆಬಲ್ ಅಂಬಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಹೊಸ ಸಿನಿಮಾ `ಒಡೆಯ’ ಲಾಂಚ್ ಆಗಿದೆ. ಈ ಸಿನಿಮಾಕ್ಕೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಸಾಥ್ ನೀಡಿದ್ದಾರೆ.

    `ಒಡೆಯ’ ದರ್ಶನ್ ಅವರ 52ನೇ ಸಿನಿಮಾವಾಗಿದೆ. ಈ ಸಿನಿಮಾದ ಮುಹೂರ್ತ ಗುರುವಾರ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಈ ಸಿನಿಮಾವನ್ನು ನಿರ್ಮಾಪಕ ಸಂದೇಶ್ ನಾಗರಾಜ್ ಅವರು ನಿರ್ಮಿಸುತ್ತಿದ್ದು, ನಿನ್ನೆ ಇವರ ಹುಟ್ಟುಹಬ್ಬವಾದ ಹಿನ್ನೆಲೆಯಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಅಂಬರೀಶ್ ಭಾಗಿಯಾಗಿದ್ದು, ದರ್ಶನ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.


    ಸಂದೇಶ್ ನಾಗರಾಜ್ ಅವರು ನಟ ಅಂಬರೀಶ್ ಮತ್ತು ದರ್ಶನ್ ಇಬ್ಬರಿಗೂ ಆಪ್ತರಾಗಿದ್ದಾರೆ. ಈ ಹಿಂದೆ ಕೂಡ ಸಂದೇಶ್ ನಾಗರಾಜ್, ದರ್ಶನ್ ಅವರ `ಐರಾವತ’ ಸಿನಿಮಾಗೆ ಬಂಡವಾಳ ಹಾಕಿದ್ದರು. ಈಗ ಮತ್ತೆ ಇವರೇ ದರ್ಶನ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ನಟ ಅಂಬರೀಶ್ ಅವರ ಮಗ ಅಭಿಷೇಕ್ ಅವರ ಚೊಚ್ಚಲ ಚಿತ್ರ `ಅಮರ್’ ಸಿನಿಮಾ ಕೂಡ ಸಂದೇಶ್ ನಾಗರಾಜ್ ಅವರ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ.

    `ಒಡೆಯ’ ಸಿನಿಮಾವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀಧರ್ ದರ್ಶನ್ ಜೊತೆಗೆ `ಬುಲ್ ಬುಲ್’ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದ ನಂತರ ಮತ್ತೆ ಈ ಜೋಡಿ ಒಂದಾಗಿದೆ. ಈ ಸಿನಿಮಾಕ್ಕೆ ಮೊದಲು `ಒಡೆಯರ್’ ಎಂದು ಟೈಟಲ್ ಇಡಲಾಗಿತ್ತು. ಆದರೆ ಇದು ಮೈಸೂರು ಒಡೆಯರ್ ಅವರ ಮನೆತನದ ಹೆಸರು ಎಂದು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ `ಒಡೆಯರ್’ ಟೈಟಲನ್ನು `ಒಡೆಯ’ ಎಂದು ಬದಲಿಸಲಾಗಿದೆ. ಸದ್ಯ ದರ್ಶನ್ ಅವರು `ಕುರುಕ್ಷೇತ್ರ’, `ಯಜಮಾನ’ ಮತ್ತು `ಒಡೆಯ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/DarshanFanz/status/1030006819890974720

  • ತನ್ನ ಬೆಂಜ್ ಕಾರಿಗೆ ಸ್ಪೆಶಲ್ ‘ಬಾಸ್’ ನಂಬರ್ ಪಡೆದ್ರು ಯಶ್!

    ತನ್ನ ಬೆಂಜ್ ಕಾರಿಗೆ ಸ್ಪೆಶಲ್ ‘ಬಾಸ್’ ನಂಬರ್ ಪಡೆದ್ರು ಯಶ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕಳೆದ ವರ್ಷ ಮೂರು ಬೆಂಜ್ ಕಾರನ್ನು ಖರೀದಿಸಿದ್ದರು. ಆ ಕಾರುಗಳಲ್ಲಿ ಒಂದು ಕಾರಿಗೆ ‘ಬಾಸ್’ ನಂಬರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಅವರ ಬೆಂಜ್ ಕಾರಿಗೆ ಕೆಎ 05 ಎಂವೈ 8055 ನಂಬರ್ ಸಿಕ್ಕಿದೆ. 8055 ಬಾಸ್ ಅರ್ಥ ಕೊಡುತ್ತದೆ. ಹಾಗಾಗಿ ಇಷ್ಟು ದಿನ ಯಶ್ ಈ ಫ್ಯಾನ್ಸಿ ನಂಬರ್ ಗೆ ಕಾದು ಇದನ್ನು ಖರೀದಿ ಮಾಡಿದ್ದಾರೆ.

    ಮಂಗಳವಾರ ಶಾಂತಿನಗರದ ಆರ್ ಟಿಒ ಕೇಂದ್ರ ಕಚೇರಿಯಲ್ಲಿ ನಾಲ್ಕು ಚಕ್ರದ ವಾಹನಗಳ ಫ್ಯಾನ್ಸಿ ನಂಬರ್ ಹರಾಜಾಗಿದೆ. ಈ ವೇಳೆ ಯಶ್ ಪರವಾಗಿ ರಾಕೇಶ್ 78,000 ರೂ. ಕೊಟ್ಟು ಕೆಎ 05 ಎಂವೈ 8055 ನಂಬರ್ ಖರೀದಿ ಮಾಡಿದ್ದಾರೆ.

    ಈ ನಂಬರ್ ಯಶ್ ಇಷ್ಟಪಟ್ಟಿದ್ದು, ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಅದನ್ನು ಖರೀದಿಸಲು ಯಶ್ ರಾಕೇಶ್ ಗೆ ತಿಳಿಸಿದ್ದರು. ಅಲ್ಲದೇ ಹರಾಜಿನಲ್ಲಿ ಯಾರೂ ಬಿಡ್ ಮಾಡದ ಹಿನ್ನೆಲೆಯಲ್ಲಿ ಯಶ್ ಕಡಿಮೆ ಮೊತ್ತದಲ್ಲಿ ಈ ನಂಬರ್ ಅನ್ನು ಖರೀದಿಸಿದ್ದಾರೆ.

    ಕಳೆದ ವರ್ಷ ಡಿಸೆಂಬರ್ 9ಕ್ಕೆ ಯಶ್ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವಕ್ಕಾಗಿ ಬೆಂಜ್ ಕಾರುಗಳನ್ನು ಖರೀದಿಸಿದ್ದರು. ಬೆಂಗಳೂರಿನ ಶೋ ರೂಂಗೆ ಯಶ್ ಭೇಟಿ ನೀಡಿ ಮೂರು ಟಾಪ್ ಎಂಡ್ ಮಾಡಲ್ ಕಾರು ಖರೀದಿ ಮಾಡಿದ್ದರು. ಬೆಂಜ್ ಜಿಎಲ್‍ಸಿ, ಬೆಂಜ್ ಇ ಕ್ಲಾಸ್, ಬೆಂಜ್ ಬಿಎಲ್‍ಸಿ ಎಎಂಜಿ ಕಾರುಗಳನ್ನು ಇಷ್ಟಪಟ್ಟು ಖರೀದಿಸಿದ್ದರು. ಬೆಂಜ್ ಇ ಕ್ಲಾಸ್ ಕಾರು ಅಪ್ಪ-ಅಮ್ಮನಿಗೆ, ಬೆಂಜ್ ಜಿಎಲ್‍ಸಿ ಪತ್ನಿ ರಾಧಿಕಾಗೆ ಹಾಗೂ ಬೆಂಜ್ ಬಿಎಲ್‍ಸಿ ಎಎಂಜಿ ಕಾರನ್ನು ತಮಗಾಗಿ ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದರು.