Tag: Bosaraju

  • ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ: ಬೋಸರಾಜು

    ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ: ಬೋಸರಾಜು

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕೆ ಯಾವುದು ಇಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು (Bosaraju) ಸ್ಪಷ್ಟಪಡಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ (CM Siddaramaiah) ದೆಹಲಿ ಪ್ರವಾಸದ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಂಪುಟ ಪುನರ್ ರಚನೆ ಬಗೆಗಿನ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಅವರು,ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಜೆಂಡಾದಲ್ಲೇ‌‌ ಇಲ್ಲ.ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಊಹಾಪೋಹಗಳು ಅಷ್ಟೇ ಎಂದರು. ಇದನ್ನೂ ಓದಿ: ಚಿಕ್ಕಮಗಳೂರು: ಪಕ್ಕದ ಊರಿಗೆ ಪಾತ್ರೆ ಕೊಟ್ಟಿದ್ದಕ್ಕೆ ಬಹಿಷ್ಕಾರ – 6,000 ರೂ. ದಂಡ!

     

    ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ‌ಯಾವುದು ಇಲ್ಲ. ನಾನು 55 ವರ್ಷಗಳಿಂದ ಪಕ್ಷದಲ್ಲಿ ‌ಇದ್ದೇನೆ. ಕಾಂಗ್ರೆಸ್ ‌ನಲ್ಲಿ ಎಲ್ಲಾ ಜವಾಬ್ದಾರಿ ಪಡೆದುಕೊಂಡು ಬಂದಿದ್ದೇನೆ. ಏನೇ ಬದಲಾವಣೆ ಆಗಬೇಕಾದ್ರೆ ಸಮಯ ಬಂದಾಗ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತ ನೇಣಿಗೆ ಶರಣು

    ಕೆಪಿಸಿಸಿ ಬದಲಾವಣೆ ಸದ್ಯದ ಸ್ಥಿತಿಯಲ್ಲಿ ಇಲ್ಲ. ಸಚಿವ ಸಂಪುಟ ಪುನರ್ ರಚನೆ ಕೂಡಾ ಇಲ್ಲ. ಇದನ್ನ ಸಿಎಂ ಕೂಡಾ ಹೇಳಿದ್ದಾರೆ. ಸಿಎಂ ಅವರು ರಾಜ್ಯದ ಬಗ್ಗೆ, ಪಕ್ಷದ ಬಗ್ಗೆ ಹೈಕಮಾಂಡ್ ‌ಜೊತೆ ಮಾತಾಡಿದ್ದಾರೆ. ರಾಜ್ಯದ ಸ್ಥಿತಿ ಬಗ್ಗೆ ಅವರಿಗೆ ತಿಳಿಸಿರುತ್ತಾರೆ. ಪಕ್ಷದ ವಿಷಯ ‌ಮಾತ್ರ ಹೈಕಮಾಂಡ್ ಬಳಿ ಸಿಎಂ ಚರ್ಚೆ ಮಾಡಿರುತ್ತಾರೆ ಎಂದು  ಸ್ಪಷ್ಟಪಡಿಸಿದರು.

     

  • ಸಂಸದೆ ಸುಮಲತಾ ಕಾಂಗ್ರೆಸ್‌ಗೆ ಬರಬಹುದು – ಸಚಿವ ಬೋಸರಾಜು ಹೊಸ ಬಾಂಬ್‌

    ಸಂಸದೆ ಸುಮಲತಾ ಕಾಂಗ್ರೆಸ್‌ಗೆ ಬರಬಹುದು – ಸಚಿವ ಬೋಸರಾಜು ಹೊಸ ಬಾಂಬ್‌

    ರಾಯಚೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ (BJP-JDS Alliance) ಚುನಾವಣಾ ಪೂರ್ವ ಮೈತ್ರಿ ಹಿನ್ನೆಲೆ ಸಂಸದೆ ಸುಮಲತಾ ಕಾಂಗ್ರೆಸ್ ಸೇರ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು ಸುಮಲತಾ (Sumalatha Ambareesh) ಕಾಂಗ್ರೆಸ್‌ ಪಕ್ಷಕ್ಕೆ ಬರಬಹುದು, ಈಗಲೇ ಏನೂ ಹೇಳೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

    ರಾಯಚೂರಿನಲ್ಲಿ (Raichur) ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ರಮ್ಯಾ (ನಟಿ/ಮಾಜಿ ಸಂಸದೆ) (Ramya) ಬೇಕಂತಿಲ್ಲ, ಇಬ್ಬರು ಮೂವರು ಅಭ್ಯರ್ಥಿ ರೆಡಿ ಇದ್ದಾರೆ. ಸರ್ವೆ ನಡೆಯುತ್ತಿದೆ, ಜನರ ಅಭಿಪ್ರಾಯದ ಮೇಲೆ ಅಭ್ಯರ್ಥಿ ಅಂತಿಮವಾಗುತ್ತೆ. ಸುಮಲತಾ ಪಕ್ಷಕ್ಕೆ ಬಂದರೂ ಬರಬಹುದು. ತುಂಬಾ ಪವರಫುಲ್ ಕ್ಯಾಂಡಿಡೇಟ್ಸ್ ಪೈಪೋಟಿಯಲ್ಲಿದ್ದಾರೆ. 100% ಗೆಲ್ಲುವಂತ ಅಭ್ಯರ್ಥಿ ಮಂಡ್ಯದಲ್ಲಿ ಇದ್ದಾರೆ. ಯಾರು ಸೂಕ್ತ ಅನ್ನೋದನ್ನ ಮುಂದೆ ಹೈಕಮಾಂಡ್‌ ತೀರ್ಮಾನ ಮಾಡುತ್ತೆ ಎಂದು ತಿಳಿಸಿದ್ದಾರೆ.

    ಇನ್ನೂ ಖಾಸಗಿ ವಾಹನ ಮಾಲೀಕರ ಹೋರಾಟ ಕುರಿತು ಪ್ರತಿಕ್ರಿಯಿಸಿದ ಎನ್.ಎಸ್.ಬೋಸರಾಜು, ಖಾಸಗಿ ವಾಹನಗಳ ಮಾಲೀಕರು ಅವರ ಲಾಭಕ್ಕೆ ಹೋರಾಟ ಮಾಡುತ್ತಿದ್ದಾರೆ. ಶಕ್ತಿಯೋಜನೆ ಬಗ್ಗೆ ಅವರಿಗೆ ವಿರೋಧ, ಅಸಮಧಾನವಿಲ್ಲ. ಅವರ ಬಸ್‌ಗಳಿಗೆ ಯೋಜನೆ ಕೊಟ್ಟಿಲ್ಲ, ಅವರ ವ್ಯವಹಾರ ಕಡಿಮೆಯಾಗುತ್ತೆ ಅಂತ ಹೋರಾಟ ಮಾಡ್ತಿದ್ದಾರೆ. ಸಾಧಕ-ಬಾಧಕಗಳನ್ನ ನೋಡಿ ಸರ್ಕಾರ ತೀರ್ಮಾನ ಮಾಡುತ್ತದೆ. ಅವರಿಗೆ ತೊಂದರೆ ಕೊಡಬೇಕು ಅನ್ನೋದು ಸರ್ಕಾರದ ಉದ್ದೇಶವಲ್ಲ ಎಂದಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಹೊರಗಿನವರು ನಮ್ಮವರೂ ಮೋಸ ಮಾಡ್ತಾರೆ, ಅನುಭವವಿದೆ: ಪರಮೇಶ್ವರ್

    ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಹೆಚ್ಚಾಗಿ ಓಡಾಡುತ್ತವೆ. ಅವರಿಗೆ ಯಾವ ರೀತಿ ಅನುಕೂಲ ಮಾಡಬೇಕು ಅನ್ನೋದನ್ನ ಸರ್ಕಾರ ತೀರ್ಮಾನ ಮಾಡುತ್ತೆ. ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಶಕ್ತಿ ಯೊಜನೆ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ಮಧ್ಯವರ್ತಿಗಳಿಗೆ ಒಂದು ಪೈಸೆ ಸಿಗದಂತೆ 5 ಗ್ಯಾರೆಂಟಿಗಳನ್ನ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್‌ ವೇಳೆ ಕಾನೂನು ಉಲ್ಲಂಘನೆ – 13 ಕೇಸ್‌, 12 ಮಂದಿ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರಿಪ್ರಸಾದ್ ವೈಯಕ್ತಿಕ ಅಸಮಾಧಾನ ಹೊರಹಾಕ್ತಿದ್ದಾರೆ, ಹೈಕಮಾಂಡ್‌ ನೋಡಿಕೊಳ್ಳುತ್ತೆ – ಸಚಿವ ಬೋಸರಾಜು

    ಹರಿಪ್ರಸಾದ್ ವೈಯಕ್ತಿಕ ಅಸಮಾಧಾನ ಹೊರಹಾಕ್ತಿದ್ದಾರೆ, ಹೈಕಮಾಂಡ್‌ ನೋಡಿಕೊಳ್ಳುತ್ತೆ – ಸಚಿವ ಬೋಸರಾಜು

    ರಾಯಚೂರು: ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ತಮ್ಮ ವೈಯಕ್ತಿಕ ಅಸಮಾಧಾನ ಹೊರಹಾಕುತ್ತಿದ್ದಾರೆ. ಎಲ್ಲೂ ಪಕ್ಷ ಹಾಗೂ ಸಿದ್ದರಾಮಯ್ಯ (Siddaramaiah) ಹೆಸರು ಬಳಕೆ ಮಾಡಿಲ್ಲ. ಅವರ ಅಸಮಾಧಾನ ಹೈಕಮಾಂಡ್ ನೋಡಿಕೊಂಡು ಸರಿಪಡಿಸುತ್ತೆ ಅಂತ ಸಚಿವ ಎನ್.ಎಸ್ ಬೋಸರಾಜು (NS Bosaraju) ಹೇಳಿದ್ದಾರೆ.

    ರಾಯಚೂರಿನಲ್ಲಿ (Raichur) ಮಾತನಾಡಿದ ಎನ್.ಎಸ್.ಬೋಸರಾಜು ಕಾಂಗ್ರೆಸ್ ಪಕ್ಷದಲ್ಲಿ ಏನೇ ನಿರ್ಧಾರ ಆಗಬೇಕಾದರೂ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತೆ. ಬಿ.ಕೆ ಹರಿಪ್ರಸಾದ್ ನಮ್ಮ ಪಕ್ಷದ ಹಿರಿಯ ನಾಯಕರು. ಸಂಪುಟದಲ್ಲಿ ಸ್ಥಾನಮಾನ ಸಿಗುತ್ತೆ ಅಂತ ನಿರೀಕ್ಷೆ ಹೊಂದಿದ್ದರು. ಅವರಿಗೆ ಮಂತ್ರಿ ಸ್ಥಾನ ಸಿಗುತ್ತೆ ಅಂತ ಮಾತಿತ್ತು, ಏನಾಯ್ತೋ ಗೊತ್ತಿಲ್ಲ ಅದು ಹೈಕಮಾಂಡ್ ತೀರ್ಮಾನ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಕುಂಬ್ಳೆಗೂ ತಟ್ಟಿದ ಬೆಂಗಳೂರು ಬಂದ್ ಬಿಸಿ – ಬಿಎಂಟಿಸಿಯಲ್ಲಿ ಪ್ರಯಾಣʼ

    ನಮ್ಮ ಪಕ್ಷದಲ್ಲಿ ಯಾರೇ ಸಿಎಂ ಇರಲಿ, ಯಾರೇ ಪಕ್ಷದ ಅಧ್ಯಕ್ಷರಿರಲಿ ಅಂತಿಮ ತೀರ್ಮಾನ ಹೈಕಮಾಂಡ್ ಮಾಡುತ್ತೆ. ಸಿದ್ದರಾಮಯ್ಯನವರ ಹೆಸರನ್ನ ಎಲ್ಲೂ ನೇರವಾಗಿ ಹೇಳಿಲ್ಲ, ಆದ್ರೆ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಸಂಪರ್ಕವಿದೆ, ಹೈಕಮಾಂಡ್ ಜೊತೆ ವಿಶ್ವಾಸವಿಟ್ಟುಕೊಂಡಿದ್ದಾರೆ. ಹರಿಪ್ರಸಾದ ಭಾಷಣದಲ್ಲಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ ಅಂತ ಕೆಲವರು ತಿಳಿದುಕೊಂಡಿರಬಹುದು. ಅವರು ಯಾವುದೇ ನಾಯಕರ ಹೆಸರನ್ನ ನೇರವಾಗಿ ಬಳಸಿ ಮಾತಾಡಿಲ್ಲ. ಹಿಂದುಳಿದ ವರ್ಗಗಳ ಸಭೆ ಮಾಡಿದ್ದಾರೆ. ಅಷ್ಟುಬಿಟ್ಟರೆ ಪಕ್ಷದ ಬಗ್ಗೆ, ಪಕ್ಷದ ನಾಯಕರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಸಮಸ್ಯೆಯಿದ್ದರೆ ಹೈಕಮಾಂಡ್ ಸರಿಪಡಿಸುವ ಕೆಲಸ ಮಾಡುತ್ತೆ ಎಂದಿದ್ದಾರೆ.

    ಜಿ.ಪರಮೇಶ್ವರ್‌ ಅವರಿಗೆ ಸಿಎಂ ಸ್ಥಾನ ತಪ್ಪಿಸುವಂತಹ ಪ್ರಶ್ನೆಯೇ ಬರುವುದಿಲ್ಲ. ರಾಜ್ಯದ ರಾಜಕೀಯ ಸ್ಥಿತಿಗತಿ ನೋಡಿಕೊಂಡು ಹೈಕಮಾಂಡ್ ನಿಂದ ಸಿಎಂ ಆಯ್ಕೆ ಆಗಿರುತ್ತೆ. ಹರಿಪ್ರಸಾದ್‌ ಅವರ ಅಸಮಾಧಾನವನ್ನ ಹೈಕಮಾಂಡ್ ಸರಿಪಡಿಸುತ್ತೆ ಇದು ಮುಂದುವರಿಯಲ್ಲ ಅಂತ ಬೋಸರಾಜು ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 5,500 ಕೋಟಿ ಬೇಕು: ರಾಮಲಿಂಗಾ ರೆಡ್ಡಿ

    ಜೆಡಿಎಸ್‌ಗೆ ತತ್ವಸಿದ್ಧಾಂತಕ್ಕಿಂತ ಪಕ್ಷ ಮುಖ್ಯ:
    ಇದೇ ವೇಳೆ ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಸಚಿವರು, ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ 123 ಸೀಟು ಬರುತ್ತೆ ಅಂತಾ ಹೇಳಿದ್ದರು, ಆದ್ರೆ ಬಂದಿರೋದು ಕೇವಲ 19 ಸೀಟು. ಪಕ್ಷ ಉಳಿಯುವುದಕ್ಕಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಅಂತ ದೇವೆಗೌಡರು ಹೇಳಿದ್ದಾರೆ. ಪಕ್ಷ ಉಳಿವಿಗಾಗಿ ಮೋದಿಯವರ ಜೊತೆ ಮಾತನಾಡಿದ್ದೇನೆ ಅಂತ ಹೇಳಿದ್ದಾರೆ. ತತ್ವಸಿದ್ಧಾಂತಗಳು ಅವರಿಗೆ ಮುಖ್ಯ ಅಲ್ಲಾ ಪಕ್ಷ ಮುಖ್ಯ. ಪ್ರತಿ ಬಾರಿ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಾಗ ಬಿಜೆಪಿ ಜೊತೆ ಸೇರಿದರು, ನಮ್ಮ ಜೊತೆಯೂ ಮೈತ್ರಿ ಮಾಡಿಕೊಂಡಿದ್ದರು. ಈಗ ಪುನಃ ಬಿಜೆಪಿ ಜೊತೆ ಸೇರುತ್ತಿದ್ದಾರೆ. ಅಧಿಕಾರಕ್ಕಾಗಿ ಜೆಡಿಎಸ್‌ನವರು ಮೈತ್ರಿ ಮಾಡಿಕೊಳ್ಳುತ್ತಾರೆ. ಅವರ ಮೈತ್ರಿಯಿಂದ ನಮಗೆ ಭಯವಿಲ್ಲ ನಮ್ಮ ಭಯಕ್ಕೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]