Tag: born

  • ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

    ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

    ಲಂಡನ್: ತನ್ನ ಜನನ ಮಾಡಿಸಿದ ವೈದ್ಯರ ಮೇಲೆ ಕೇಸು ಹಾಕಿ ಮಹಿಳೆ ಗೆದ್ದಿರುವ ವಿಚಿತ್ರ ಘಟನೆ ಲಂಡನ್‍ನಲ್ಲಿ ನಡೆದಿದೆ.

    ಮೆದುಳು ಬಳ್ಳಿ ಮತ್ತು ಬೆನ್ನು ಮೂಳೆ ಸರಿಯಾಗಿ ಜೋಡಣೆಯಾದಿರುವಂತಹ ಸ್ಟೈನಾ ಬಿಫಿಡಾ ಖಾಯಿಲೆಯಿಂದ ಬಳಲುತ್ತಿರುವ ಇವಿ ಟೂಂಬಿಸ್ ಎಂಬ ಮಹಿಳೆ ತನ್ನ ತಾಯಿಯ ವೈದ್ಯ ಡಾ.ಫಿಲಿಪ್ ವಿಡುದ್ಧ ದೂರು ನೀಡಿದ್ದಾರೆ. ತನ್ನ ತಾಯಿ ಗರ್ಭಿಣಿಯಾಗಿದ್ದಾಗ ವೈದರು ಸರಿಯಾದ ಮಾರ್ಗದರ್ಶನ ನೀಡಿದ್ದರೆ, ಅವರು ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದರು. ಆಗ ಈ ಸಮಸ್ಯೆ ತನ್ನನ್ನು ಕಾಡುತ್ತಿರಲಿಲ್ಲ. ಆದರೆ ವೈದ್ಯರು ಸರಿಯಾದ ಮಾರ್ಗದರ್ಶನ ನೀಡದೇ ಇದ್ದುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ. ತನ್ನಾ ಆರೋಗ್ಯ ಸಮಸ್ಯೆಗೆ ತನ್ನ ತಾಯಿಯ ವೈದ್ಯರೇ ಕಾರಣ ಎಂದು  ಪ್ರಕರಣ ದಾಖಲಿಸಿ ಗೆದ್ದ ಘಟನೆ ಲಂಡನ್‍ನಲ್ಲಿ ನಡೆದಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

    20 ವರ್ಷದ ಇವಿ ದಾಖಲಿಸಿರುವ ಮೊಕದ್ದಮೆಯನ್ನು ಆಲಿಸಿರುವ ಲಂಡನ್ ಹೈಕೋರ್ಟ್, ಇವರ ಈ ಪರಿಸ್ಥಿತಿಗೆ ಅವರ ತಾಯಿಯ ವೈದ್ಯರೇ ಕಾರಣ ಎಂದು ತೀರ್ಪುನೀಡಿದ್ದು, ಅವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ

  • ಮಗನ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆತ್ತವರು

    ಮಗನ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆತ್ತವರು

    ಹೈದರಾಬಾದ್: ತಂದೆ ತಾಯಿ ಇಬ್ಬರೂ ಮಗು ಹುಟ್ಟಿದ ಮೇಲೆ ಮದುವೆಯಾಗಿರುವ ಘಟನೆ ತಮಿಳುನಾಡಿನ ಕುಡಲ್ಲೋರು ಊರಿನಲ್ಲಿ ನಡೆದಿದೆ.

    ವೆಲ್ಮುರುಗನ್ ಯುವತಿಯನ್ನು ಪ್ರೀತಿಸಿ ಗರ್ಭವತಿಯನ್ನಾಗಿ ಮಾಡಿದ್ದ. ಆದರೆ ಅದಾದ ನಂತರ ಮೋಸ ಮಾಡಿದ್ದ. ಆದರೆ ಮಗು ಜನಿಸಿದ ನಂತರ ಪೊಲೀಸರ ಭಯಕ್ಕೆ ಯುವತಿಯನ್ನು ಮದುವೆಯಾಗಿದ್ದಾನೆ.

    ಈ ಜೋಡಿ ಪ್ರಿತಿಸುತ್ತಿದ್ದರು. ಮದುವೆಯಾಗುತ್ತೇನೆ ಎಂದು ಹೇಳಿ ವೆಲ್ಮುರುಗನ್ ಲೈಂಗಿಕ ಸಂಪರ್ಕ ನಡೆಸಿದ್ದನು. ಯುವತಿ ಗರ್ಭವತಿಯಾಗಿದ್ದಾಳೆ, ಅದಾದ ನಂತರ ವೆಲ್ಮುರುಗನ್ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಯುವತಿ ಆತನ ಮನೆಗೆ ಹೋಗಿ ಗಲಾಟೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಆಕೆ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಬೇಕಾಯಿತು. ಇದನ್ನೂ ಓದಿ:  ಪುನೀತ್ ರಾಜ್‌ಕುಮಾರ್‌ಗೆ ಲಘು ಹೃದಯಾಘಾತ

    ನಂತರ ಯುವತಿ ಒಂಭತ್ತು ತಿಂಗಳು ನೋವಿನಲ್ಲೇ ಕಳೆದು ಗಂಡು ಮಗುವನ್ನು ಹೆತ್ತಳು ಆಸ್ಪತ್ರೆಯಲ್ಲಿ ಮಗುವಿನ ತಂದೆಯ ಹೆಸರು ಕೇಳಿದಾಗ, ಅವಳು ಅನಿವಾರ್ಯವಾಗಿ ವೆಲ್ಮುರುಗನ್ ಹೆಸರು ಹೇಳಬೇಕಾಯ್ತು. ಜೊತೆಗೆ ತಾನು ಅನುಭವಿಸಿದ ನೋವನ್ನು ಕೂಡ ನರ್ಸ್‍ಗೆ ಯುವತಿ ಹೇಳಿದ್ದಳು. ಆಗ ಈ ವಿಚಾರವಾಗಿ ಅದಾದ ನಂತರ ನರ್ಸ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವೆಲ್ಮುರುಗನ್‍ಗೆ ಕಿವಿ ಮಾತು ಹೇಳಿದ್ದಾರೆ. ಆಗ ಜೈಲಿಗೆ ಹೋಗುವ ಭಯಕ್ಕೋ, ತಪ್ಪಿನ ಅರಿವಾಗಿಯೋ ವೆಲ್ಮುರುಗನ್ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಹಸುಗೂಸಿನ ಮುಂದೆಯೇ ಇಬ್ಬರೂ ಮದುವೆಯಾಗಿದ್ದಾರೆ.ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!

  • ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ

    ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಒಂಟಿಗಾಲಿನ ಅಪರೂಪದ ಮಗುವಿನ ಜನನವಾಗಿದೆ. ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

    ಭಾನುವಾರ ಹೆರಿಗೆ ನೋವಿನಿಂದ ಬಳಲುತಿದ್ದ ಮಹಿಳೆ ಕಿಮ್ಸ್ ಗೆ ದಾಖಲಾಗಿದ್ದರು. ಪ್ರಸವದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಸಿಜೇರಿಯನ್ ಮುಖಾಂತರ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಮಗುವನ್ನು ನೋಡಿದಾಗ ಕೇವಲ ಒಂದು ಕಾಲು ಮಾತ್ರ ಕಾಣಿಸಿಕೊಂಡಿದೆ. ಮಗು ವಿಚಿತ್ರ ಅಂಗಾಂಗ ಹೊಂದಿರುವುದು ವೈದ್ಯರಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ. ಇದನ್ನೂ ಓದಿ: ಬರೋಬ್ಬರಿ 54 ದಿನಗಳ ಬಳಿಕ ಇಂದಿನಿಂದ ಸಾರಿಗೆ ಬಸ್ ಸಂಚಾರ ಆರಂಭ

    ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇಲ್ಲವಾಗಿವೆ. ವಿಚಿತ್ರ ಮಗು ಜನಿಸಿದ ನಂತರ ಮಗುವಿನ ಹೆತ್ತವರ ಹೆಸರು ಮತ್ತು ವಿಳಾಸವನ್ನು ವೈದ್ಯರು ಬಹಿರಂಗ ಪಡಿಸದೆ ರಹಸ್ಯವಾಗಿಟ್ಟಿದ್ದಾರೆ.

  • ಡಿಸೆಂಬರ್‌ನಲ್ಲಿ ಹುಟ್ಟಿದ ಮಕ್ಕಳು ಲಕ್ಕಿ, ಕಾಯಿಲೆ ಬರಲ್ವಂತೆ!

    ಡಿಸೆಂಬರ್‌ನಲ್ಲಿ ಹುಟ್ಟಿದ ಮಕ್ಕಳು ಲಕ್ಕಿ, ಕಾಯಿಲೆ ಬರಲ್ವಂತೆ!

    ಸಾಮಾನ್ಯವಾಗಿ ಕೆಲವರು ತಮ್ಮ ಮಗು ಇಂತಹ ದಿನವೇ ಜನಿಸಬೇಕು ಎಂದು ಇಷ್ಟ ಪಟ್ಟಿರುತ್ತಾರೆ. ಅಂದರೆ ತಮ್ಮ ಹುಟ್ಟುಹಬ್ಬದಂದು ಅಥವಾ ತಮ್ಮ ಮದುವೆ ವಾರ್ಷಿಕೋತ್ಸವದಂದು ಹುಟ್ಟಬೇಕು ಎಂದು ಆಸೆ ಪಟ್ಟಿರುತ್ತಾರೆ. ಆದರೆ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಹೆಚ್ಚು ಆರೋಗ್ಯವಾಗಿರುತ್ತಾರೆ ಎಂದು ಅಧ್ಯಯನ ಒಂದು ತಿಳಿಸಿದೆ.

    ಯೂರೋಪಿಯನ್ ಕಾಲೇಜ್ ಆಫ್ ನ್ಯೂರೊಸೈಕೋಫಾರ್ಮಾಕಾಲಜಿ ಸುಮಾರು 366 ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ವೈಜ್ಞಾನಿಕವಾಗಿ ಪ್ರಶ್ನೆ ಕೇಳಿ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಮತ್ತು ಹೆಚ್ಚು ಲವಲವಿಕೆಯಿಂದ ಇರುತ್ತಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಡಿಸೆಂಬರ್ ತಿಂಗಳ ಮಕ್ಕಳು ಹೇಗೆ ಭಿನ್ನ ಎನ್ನುವುದಕ್ಕೂ ಅಧ್ಯಯನ ಕಾರಣಗಳನ್ನು ನೀಡಿದೆ. ಇದನ್ನೂ ಓದಿ: ಕೊನೆಗೂ ಯಶ್ ಕನಸು ನೆರವೇರಿತು-ತಂದೆಯಾದ ರಾಕಿಂಗ್ ಸ್ಟಾರ್

    1. ತುಂಬಾ ಅಪರೂಪ: ಡಿಸೆಂಬರ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಹೆರಿಗೆಯಾಗುತ್ತದೆ. ಅದರಲ್ಲೂ ಡಿಸೆಂಬರ್ 24 ಮತ್ತು 25 ರಂದು ಮಕ್ಕಳ ಬರ್ತ್ ಡೇ ದಿನಾಂಕ ಬರುವುದು ಬಹಳ ಕಡಿಮೆ.

    2. ಕಡಿಮೆ ಕೋಪ: ಬೇಸಿಗೆಯಲ್ಲಿ ಹುಟ್ಟಿದವರು ಯಾವಾಗಲೂ ಮೂಡಿಯಾಗಿ ಇರುತ್ತಾರೆ. ಆದರೆ ಚಳಿಗಾಲದಲ್ಲಿ ಹುಟ್ಟಿದವರು ಸ್ಥಿರವಾಗಿರುತ್ತಾರೆ. ನಿರ್ದಿಷ್ಟವಾಗಿ ಡಿಸೆಂಬರ್ ನಲ್ಲಿ ಹುಟ್ಟಿದವರ ಸ್ವಾಭಾವದಲ್ಲಿ ಕೋಪ ಸ್ವಲ್ಪ ಕಡಿಮೆ ಇರುತ್ತದೆ.

    3. ಜಾಸ್ತಿ ಕಾಯಿಲೆ ಬರಲ್ಲ: ಕೊಲಂಬಿಯಾ ಯುನಿವರ್ಸಿಟಿ ಡಿಪಾರ್ಟ್ ಮೆಂಟ್ ಆಫ್ ಮೆಡಿಸಿನ್ ಸಂಶೋಧಕರು, ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ 1900 ಮತ್ತು 2000 ರ ನಡುವೆ ಜನಿಸಿದ ಸುಮಾರು 1.75 ದಶಲಕ್ಷ ರೋಗಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಅವರಲ್ಲಿ 1,668 ರೋಗಿಗಳಿಗೆ ಜನಿಸಿದ ತಿಂಗಳು, ಆಹಾರದ ಮೂಲಕ ಕಾಯಿಲೆ ಬರುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳಿನಲ್ಲಿ ಜನಿಸಿದ ಮಕ್ಕಳಲ್ಲಿ ಹೆಚ್ಚಾಗಿ ಕಾಯಿಲೆ ಕಂಡು ಬಂದಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಒಂದು ವಾಷಿಂಗ್ಟನ್ ಪೋಸ್ಟ್ ಚಾರ್ಟ್ ಸಿದ್ಧಪಡಿಸಿ ಮಾಹಿತಿಯನ್ನು ಉಲ್ಲೇಖಿಸಿದೆ.

    4. ಆಯಸ್ಸು ಹೆಚ್ಚು: ಪ್ರತಿಯೊಬ್ಬ ತಂದೆ-ತಾಯಿ ಕೂಡ ನಮ್ಮ ಮಕ್ಕಳು ಸದಾ ಖುಷಿಯಾಗಿ ಜೀವನ ನಡೆಸಬೇಕು ಎಂದು ಬಯಸುತ್ತಿರುತ್ತಾರೆ. ಆದರಲ್ಲೂ ಡಿಸೆಂಬರ್ ನಲ್ಲಿ ಜನಿಸಿದ ಮಕ್ಕಳು 100 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಜರ್ಮನ್ ಜನಗಣತಿಯ ಪ್ರಕಾರ, ಡಿಸೆಂಬರ್ ಮತ್ತು ಜೂನ್ ತಿಂಗಳ ಜನನಕ್ಕೆ ಹೋಲಿಸಿದರೆ 105 ವರ್ಷ ಬದುಕು ಸಾಧ್ಯತೆ ಇದೆ ಎಂದು ಜರ್ನಲ್ ಆಫ್ ಏಜಿಂಗ್ ರಿಸರ್ಚ್ ಮೂಲಕ ತಿಳಿದು ಬಂದಿದೆ.

    5. ಹುಡುಗರು ಎಡಗೈ ಬರಹಗಾರರು: ಅಕ್ಟೋಬರ್ ನಿಂದ ಫೆಬ್ರವರಿಯೊಳಗೆ ಜನಿಸಿದ ಗಂಡು ಮಕ್ಕಳು ಹೆಚ್ಚಾಗಿ ಎಡಗೈ ಬಳಸುತ್ತಾರೆ. ಬೇರೆ ತಿಂಗಳಿಗೆ ಹೋಲಿಕೆ ಮಾಡಿದರೆ ಡಿಸೆಂಬರ್ ನಲ್ಲಿ ಈ ಸಂಖ್ಯೆ ಜಾಸ್ತಿ.

    6. ತರಗತಿಯಲ್ಲಿ ಕಿರಿಯರಾಗಿರುತ್ತಾರೆ: ಡಿಸೆಂಬರ್ ನಲ್ಲಿ ಹುಟ್ಟಿದ ಮಗು ಶಾಲೆಯ ಪ್ರಾರಂಭವಾದಾಗ ತರಗತಿಯಲ್ಲಿ ಎಲ್ಲರಿಗಿಂತ ಕಿರಿಯವರಾಗಿರುತ್ತಾರೆ  ಒಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನೆಯನ್ನು ಹೋಲುವ ಮರಿಗೆ ಜನ್ಮ ನೀಡಿದ ಹಂದಿ!

    ಆನೆಯನ್ನು ಹೋಲುವ ಮರಿಗೆ ಜನ್ಮ ನೀಡಿದ ಹಂದಿ!

    ಮಡಿಕೇರಿ: ಈ ಸೃಷ್ಟಿ ತನ್ನೊಡಲಲ್ಲಿ ಅದ್ಯಾವ ವಿಚಿತ್ರವನ್ನು ಅಡಗಿಸಿಟ್ಟುಕೊಂಡಿದೆಯೋ ಗೊತ್ತಿಲ್ಲ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕಾಲೋನಿಯೊಂದರಲ್ಲಿ ಸಾಕಿದ ಹಂದಿಯೊಂದು ಆನೆಯನ್ನು ಹೋಲುವ ಮರಿಗೆ ಜನ್ಮ ನೀಡುವ ಮೂಲಕ ಆಶ್ಚರ್ಯ ಸೃಷ್ಟಿಸಿದೆ.

    ಕಾಲೋನಿ ನಿವಾಸಿ ಕುಳ್ಳ ಎಂಬವರ ಮನೆಯ ಹಂದಿ ಈ ವಿಚಿತ್ರ ಪ್ರಾಣಿಗೆ ಜನ್ಮ ನೀಡಿದೆ. ಮರಿ ಜನ್ಮ ಪಡೆಯುತ್ತಿದಂತೆ ಮೃತಪಟ್ಟಿದ್ದು ಕಿವಿ, ಸೊಂಡಿಲುಗಳಿದ್ದು ಮುಖದ ಭಾಗ ಆನೆಯನ್ನು ಹೋಲುತ್ತಿತ್ತು.

    ಹಂದಿ 12 ಮರಿಗಳಿಗೆ ಜನ್ಮ ನೀಡಿದ್ದು ಒಂದು ಮರಿ ಈ ರೀತಿ ಜನ್ಮ ಪಡೆದಿದ್ದು ಮೃತಪಟ್ಟಿದೆ.

  • ಹೊಟ್ಟೆಯಲ್ಲೆ ಮಗು ಸತ್ತಿದೆ ಅಂದ್ರು ವೈದ್ಯರು- ಸ್ಥಳೀಯರ ಸಹಾಯದಿಂದ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ

    ಹೊಟ್ಟೆಯಲ್ಲೆ ಮಗು ಸತ್ತಿದೆ ಅಂದ್ರು ವೈದ್ಯರು- ಸ್ಥಳೀಯರ ಸಹಾಯದಿಂದ ಗಂಡು ಮಗುವಿಗೆ ಜನ್ಮವಿತ್ತ ಮಹಿಳೆ

    ಭೋಪಾಲ್: ಹೊಟ್ಟೆಯಲ್ಲೇ ಮಗು ಸತ್ತಿದೆ ಅಂತ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ ಪರಿಣಾಮ ಮಹಿಳೆಯೊಬ್ಬರು ಸ್ಥಳೀಯರ ಸಹಾಯದಿಂದ ತೆರೆದ ಜಾಗದಲ್ಲೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆಯೊಂದು ನಡೆದಿದೆ.

    ಈ ಘಟನೆ ಸೋಮವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ನಡೆದಿದೆ. ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯೊಂದರ ಪುಟ್ಟ ಗ್ರಾಮದ ನಿವಾಸಿ ಸಮರ್ವತಿ ದೇವಿ(24) ಎಂಬ 8 ತಿಂಗಳ ಗರ್ಭಿಣಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು ಮಗು ಹೊಟ್ಟೆಯಲ್ಲಿಯೇ ಪ್ರಾಣಬಿಟ್ಟಿದೆ ಅಂತ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಮಹಿಳೆ, ನಾನು ಆಸ್ಪತ್ರೆಗೆ ತೆರಳಿ ಹೊಟ್ಟೆ ನೋವಾಗುತ್ತಿದೆ ಅಂತ ಹೇಳಿದೆ. ಆದ್ರೆ ಅಲ್ಲಿನ ವೈದ್ಯರು ನನ್ನ ಸರಿಯಾಗಿ ಪರೀಕ್ಷೆ ಮಾಡದೇ ಹೊಟ್ಟೆಯಲ್ಲಿಯೇ ಮಗು ಸತ್ತಿದೆ ಅಂತ ಹೇಳಿದ್ರು. ವೈದ್ಯರ ಮಾತಿನಿಂದ ಗಾಬರಿಗೊಂಡ ನನಗೆ ಒಂದು ಬಾರಿ ದಿಕ್ಕುತೋಚದಂತಾಗಿದ್ದು, ಕೂಡಲೇ ಆಸ್ಪತ್ರೆಯಲ್ಲಿಯೇ ಜೋರಾಗಿ ಕಿರುಚಾಡಿದೆ. ಈ ವೇಳೆ ಅಲ್ಲಿನ ನರ್ಸ್ ನನ್ನ ಕೆನ್ನೆಗೆ ಹೊಡೆದರು. ಅಲ್ಲದೇ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳದೇ ಕೂಡಲೇ ಇಲ್ಲಿಂದ ತೊಲಗುವಂತೆ ಎಚ್ಚರಿಸಿದ್ದಾರೆ. ಹೀಗಾಗಿ ಬೇರೆ ದಾರಿ ಕಾಣದೇ ನಾನು ಆಸ್ಪತ್ರೆಯಿಂದ ಹೊರಬಂದೆ ಅಂತ ಆರೋಪಿಸಿದ್ದಾರೆ.

    ಅಂತೆಯೇ ತನ್ನ ಸಂಬಂಧಿಕರೊಂದಿಗೆ ಮರಳಿ ಮನೆಗೆ ಹಿಂದುರುತ್ತಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಸಂಬಂಧಿಕರು ಹಾಗೂ ಕೆಲ ಮಹಿಳೆಯರ ಸಹಾಯದಿಂದ ಮಾರ್ಗ ಮಧ್ಯೆಯೇ ಮುಂಜಾನೆ 5 ಗಂಟೆ ಸುಮಾರಿಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯರು ಸಾರಿ ಮತ್ತು ಹೊದಿಕೆಯಿಂದ ಗರ್ಭಿಣಿಯನ್ನು ಸುತ್ತುವರಿದ್ರು. ಉಳಿದ ಮಹಿಳೆಯರು ನೀರು ತರಲು ಸಹಾಯ ಮಾಡಿದ್ರು. ಒಟ್ಟಿನಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಆಕೆಯನ್ನು ಅದೇ ಆಸ್ಪತ್ರೆಗೆ ದಾಖಲಿಸಿ ತಾಯಿ- ಮಗುವನ್ನು ಪರೀಕ್ಷಿಸಲು ಕರೆದುಕೊಂಡು ಹೋಗಿದ್ದಾರೆ.

    ಇನ್ನು ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ ಮುಖ್ಯ ವೈದ್ಯಾಧಿಕಾರಿ ಆರ್ ಕೆ ಮೆಹ್ರಾ ಅವರು, ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯಿಂದ ಹೇಳಿಕೆಗಳನ್ನು ಪಡೆದುಕೊಳ್ಳುತ್ತೇವೆ. ಅಲ್ಲದೇ ಈ ಕುರಿತು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ಬಿದ್ದರೆ ಅಂತಹ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡುತ್ತೇವೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    ಸದ್ಯ ಸಮರ್ವತಿ ಮತ್ತು ಮುದ್ದಾದ ಗಂಡು ಮಗು ಸಂಬಂಧಿಕರ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಅಲ್ಲದೇ ತನ್ನ ಗಂಡು ಮಗುವಿನೊಂದಿಗೆ ಸಮರ್ವತಿ ಕೂಡ ಸಂತೋಷದಿಂದಿದ್ದಾರೆ ಎಂಬುದಾಗಿ ವರದಿಯಾಗಿದೆ.

  • ಮೊದಲ ಮಗುವಿನ ಹೆರಿಗೆ ಆಟೋದಲ್ಲಿ, 2ನೇ ಮಗುವಿಗೆ ರೈಲ್ವೇ ಸ್ಟೇಷನ್‍ನಲ್ಲಿ ಜನ್ಮ ನೀಡಿದ ಮಹಿಳೆ

    ಮೊದಲ ಮಗುವಿನ ಹೆರಿಗೆ ಆಟೋದಲ್ಲಿ, 2ನೇ ಮಗುವಿಗೆ ರೈಲ್ವೇ ಸ್ಟೇಷನ್‍ನಲ್ಲಿ ಜನ್ಮ ನೀಡಿದ ಮಹಿಳೆ

    ಥಾಣೆ: ರೈಲ್ವೇ ಸ್ಟೇಷನ್ ನಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಥಾಣೆಯಲ್ಲಿ ನಡೆದಿದೆ.

    ಮೀನಾಕ್ಷಿ ಎಂಬವರು ಥಾಣೆ ರೈಲ್ವೆ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದು, ರೈಲ್ವೇ ಭದ್ರತಾ ಪಡೆಯ ಮಹಿಳಾ ಪೇದೆಯೊಬ್ಬರು ಇವರಿಗೆ ಸಹಾಯ ಮಾಡಿದ್ದಾರೆ.

    ನಿಲ್ದಾಣದಲ್ಲಿ ಸ್ಕ್ಯಾನಿಂಗ್ ಮಷೀನ್ ನೋಡಿಕೊಳ್ಳೋ ಮಹಿಳಾ ಪೇದೆ ಶೋಭಾ ಮೊಟೆ, ಮೀನಾಕ್ಷಿ ಎಂಬವರಿಗೆ ಸಹಾಯ ಮಾಡಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ತಾಯಿ ಮಗು ಇಬ್ಬರನ್ನೂ ಥಾಣೆಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

    ಏನಿದು ಘಟನೆ?: ಶೋಭಾ ಮೋಟೆ ಅವರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಫ್ಲಾಟ್‍ಫಾರಂನಲ್ಲಿ ಮಹಿಳೆಯೊಬ್ಬರು ನರಳಾಡುತ್ತಿರುವುದು ಕೇಳಿತ್ತು. ಕೂಡಲೇ ಶೋಭಾ ಸ್ಥಳಕ್ಕೆ ತೆರಳಿದಾಗ ಗರ್ಭಿಣಿಯೊಬ್ಬರು ಪ್ರಸವ ವೇದನೆಯಿಂದ ನರಳಾಡುತ್ತಿದ್ದರು. ಇದನ್ನು ಕಂಡ ಶೋಭಾ ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಒಂದು ಕಂಬಳಿ ತರಿಸಿ ಮಹಿಳೆಗೆ ಸಹಾಯ ಮಾಡಿ ಹೆರಿಗೆ ಮಾಡಿಸಿದ್ದಾರೆ.

    ಗರ್ಭಿಣಿಯಾಗಿದ್ದ 24 ವರ್ಷದ ಮೀನಾಕ್ಷಿ ಸಂದೇಶ್ ಜಾಧವ್ ಬದ್ಲಾಪುರ್ ನಿವಾಸಿಯಾಗಿದ್ದು ಅವರ ಹೆಸರನ್ನು ಪತಿ ಸಂದೇಶ್ ಘಾಟ್ಕೋಪರ್ ಮೂಲದ ರಾಜವಾಡಿ ಆಸ್ಪತ್ರೆಯಲ್ಲಿ ನೊಂದಾಯಿಸಿದ್ದರು. ಮೀನಾಕ್ಷಿ ಅವರ ಹೆರಿಗೆಗೆ ಇನ್ನೂ 25 ದಿನಗಳ ಸಮಯವಿತ್ತು.

    ನನ್ನ ಸಹೋದರಿಯೊಬ್ಬಳು ಘೋಟ್ಕೋಪರ್ ನಲ್ಲಿ ನೆಲೆಸಿದ್ದು, ನಾವು ಕೂಡ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆವು. ಆದ್ರೆ ಕಳೆದ ಸಂಜೆ ಮೀನಾಕ್ಷಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಯನ್ನು ಥಾಣೆಗೆ ಕರೆದುಕೊಂಡು ಬರಲು ತಾಯಿಗೆ ಹೇಳಿದ್ದೆ. ಅಲ್ಲಿಂದ ಕಾರ್‍ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದೆ ಅಂತಾ ಸಂದೇಶ್ ಹೇಳಿದ್ದಾರೆ. ಮೀನಾಕ್ಷಿ ಅವರಿಗೆ ಈ ಮಗು ಎರಡನೆಯದಾಗಿದ್ದು, ಮೊದಲ ಮಗುವಿನ ಹೆರಿಗೆ ಆಟೋ ರಿಕ್ಷಾದಲ್ಲಿ ಆಗಿತ್ತು ಅಂತಾ ಸಂದೇಶ್ ಹೇಳಿದ್ದಾರೆ.