Tag: Boris Johnson

  • ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ

    ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ

    ಲಂಡನ್: ಬ್ರಿಟನ್‌ನ (Britain) ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    2020ರಲ್ಲಿ ಕೊರೊನಾ (Corona) ಸಮಯದಲ್ಲಿ ಲಾಕ್‌ಡೌನ್ (Lockdown) ನಿಯಮಗಳನ್ನು ಉಲ್ಲಂಘಿಸಿ ಔತಣಕೂಟ ಮಾಡಿದ್ದಕ್ಕೆ ಬೋರಿಸ್ ಜಾನ್ಸನ್ ಈ ಹಿಂದೆ ಬ್ರಿಟನ್‌ನ ಪ್ರಧಾನಿ (Biritain PM) ಹುದ್ದೆಯನ್ನು ಕಳೆದುಕೊಂಡಿದ್ದರು.

    ಪಾರ್ಟಿ ಗೇಟ್ (Partygate) ಹಗರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್ ಮಾಜಿ ಪ್ರಧಾನಿ ಅವರಿಗೆ ಪತ್ರವೊಂದನ್ನು ಬರೆದಿದೆ. ಅಂದು ಔತಣಕೂಟದಲ್ಲಿ ಕೊರೊನಾಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿರುವುದಾಗಿ ಜಾನ್ಸನ್ ಹೇಳಿದ್ದರು. ಈ ಕುರಿತು ಹೌಸ್ ಆಫ್ ಕಾಮನ್ಸ್ ಸಮಿತಿ ಪತ್ರ ಬರೆದು ಸ್ಪಷ್ಟೀಕರಣ ಕೇಳಿರುವ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಸಂಸತ್ ಸದಸ್ಯತ್ವವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ

    ಈ ಬಗ್ಗೆ ತಿಳಿಸಿರುವ ಬೋರಿಸ್, ಹೌಸ್ ಆಫ್ ಕಾಮನ್ಸ್ ಕಳುಹಿಸಿರುವ ಪತ್ರದಿಂದ ತಮಗೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಬಹುಪಾಲು ಕನ್ಸರ್ವೇಟಿವ್ ಸಂಸದರನ್ನು ಹೊಂದಿರುವ ಸಂಸದ ನೇತೃತ್ವದ ಸಮಿತಿ ಸೋಮವಾರ ತನ್ನ ವಿಚಾರಣೆಯನ್ನು ಮುಕ್ತಾಯಗೊಳಿಸಲಿದೆ. ತನ್ನ ವರದಿಯನ್ನು ಶೀಘ್ರವೇ ಪ್ರಕಟಿಸುವುದಾಗಿ ಹೇಳಲಾಗಿದೆ. ಇದನ್ನೂ ಓದಿ: ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

  • ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್‌ ಶಾರ್ಪ್‌ ರಾಜೀನಾಮೆ

    ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್‌ ಶಾರ್ಪ್‌ ರಾಜೀನಾಮೆ

    ಲಂಡನ್‌: ದಿಢೀರ್‌ ಬೆಳವಣಿಗೆಯೊಂದರಲ್ಲಿ ಬಿಬಿಸಿ (BBC) ಮುಖ್ಯಸ್ಥ ಹುದ್ದೆಗೆ ರಿಚರ್ಡ್‌ ಶಾರ್ಪ್‌ (Richard Sharp) ರಾಜೀನಾಮೆ ನೀಡಿದ್ದಾರೆ.

    ಇಂಗ್ಲೆಂಡ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Johnson) ಅವರಿಗೆ 8 ಲಕ್ಷ ಪೌಂಡ್‌ (ಅಂದಾಜು 8.15 ಕೋಟಿ ರೂ.) ಸಾಲದ ಗ್ಯಾರಂಟಿ ನೀಡಲು ರಿಚರ್ಡ್‌ ಶಾರ್ಪ್‌ ನೆರವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು

     

    ಕೆಲ ತಿಂಗಳ ಹಿಂದೆ ಸಂಡೆ ಟೈಮ್ಸ್‌ ರಿಚರ್ಡ್‌ ಶಾರ್ಪ್‌ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಬೋರಿಸ್‌ ಜಾನ್ಸನ್‌ ಮತ್ತು ರಿಚರ್ಡ್‌ ಶಾರ್ಪ್‌ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ – 1,700 ಮುಸ್ಲಿಂ ಮುಖಂಡರ ವಿರುದ್ಧ ಕೇಸ್‌

    ಈ ಅದ್ಭುತ ಸಂಸ್ಥೆಯ ಅಧ್ಯಕ್ಷರಾಗಿರುವುದು ಒಂದು ಗೌರವ ಎಂದು ರಿಚರ್ಡ್‌ ಶಾರ್ಪ್‌ ಹೇಳಿದ್ದಾರೆ. ಹೊಸ ಮುಖ್ಯಸ್ಥರ ಆಯ್ಕೆಯಾಗುವವರೆಗೂ ರಿಚರ್ಡ್‌ ಶಾರ್ಪ್‌ ಮುಖ್ಯಸ್ಥರಾಗಿಯೇ ಮುಂದುವರಿಯಲಿದ್ದಾರೆ.

  • ಕ್ಷಿಪಣಿ ದಾಳಿ ಮಾಡಿ ಕೊಲೆ ಬೆದರಿಕೆ – ಪುಟಿನ್ ವಿರುದ್ಧ ಜಾನ್ಸನ್ ಆರೋಪ

    ಕ್ಷಿಪಣಿ ದಾಳಿ ಮಾಡಿ ಕೊಲೆ ಬೆದರಿಕೆ – ಪುಟಿನ್ ವಿರುದ್ಧ ಜಾನ್ಸನ್ ಆರೋಪ

    ಲಂಡನ್: ಬ್ರಿಟನ್ (Britain) ಅನ್ನು ಹೊಡೆದುರುಳಿಸಲು ಕ್ಷಿಪಣಿಯನ್ನು ಕಳುಹಿಸಬಲ್ಲೆ ಎಂದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ಬಾರಿ ಹೇಳಿಕೆ ನೀಡಿರುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಹೇಳಿಕೊಂಡಿದ್ದಾರೆ.

    ಈ ವಿಚಾರ ಬಿಬಿಸಿಯ ‘ಪುಟಿನ್ ವಿ ದಿ ವೆಸ್ಟ್’ ಹೆಸರಿನ 3 ಭಾಗಗಳ ಸಾಕ್ಷ್ಯಚಿತ್ರದಲ್ಲಿ ಬಹಿರಂಗವಾಗಿದೆ. ರಷ್ಯಾ-ಉಕ್ರೇನ್ (Russia-Ukraine) ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲು ಜಾನ್ಸನ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದಾಗ, ಬ್ರಿಟನ್ ಅನ್ನು ಹೊಡೆದುರುಳಿಸಲು ಒಂದೇ ನಿಮಿಷ ಸಾಕು. ನಾವು ಕ್ಷಿಪಣಿ ಕಳುಹಿಸಬಲ್ಲೆವು ಎಂದು ಬೆದರಿಕೆ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಖಲಿಸ್ತಾನಿಯರ ಅಟ್ಟಹಾಸ – ತ್ರಿವರ್ಣಧ್ವಜ ಹಿಡಿದ ಭಾರತೀಯರ ಮೇಲೆ ದಾಳಿ

    ಜಾನ್ಸನ್ ಪುಟಿನ್ ಅವರ ಹೇಳಿಕೆಯನ್ನು ಬೆದರಿಕೆ ಎಂದು ಪರಿಗಣಿಸದೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಬೆಂಬಲಿಸಿದ್ದಾರೆ. ಪುಟಿನ್ ಒಂದು ಬಾರಿ ನನಗೆ ಬೆದರಿಕೆ ಹಾಕಿದ್ದರು. ಬೋರಿಸ್, ನಾನು ನಿನ್ನನ್ನು ನೋಯಿಸಲು ಬಯಸುವುದಿಲ್ಲ. ಆದರೆ ಕ್ಷಿಪಣಿ ದಾಳಿ ಮಾಡಿದರೆ ಕೇವಲ 1 ನಿಮಿಷ ಸಾಕು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.

    ಪುಟಿನ್ ಅತ್ಯಂತ ಶಾಂತ ಸ್ವರದಿಂದಲೇ ಈ ಹೇಳಿಕೆಯನ್ನು ನೀಡಿದ್ದರು ಎಂದು ಜಾನ್ಸನ್ ಹೇಳಿದ್ದಾರೆ. ಇದನ್ನೂ ಓದಿ: India China Border Rowː ಚೀನಾ ಗಡಿ ಸಂಘರ್ಷ – ಕೇಂದ್ರದ ನಡೆ ಅತ್ಯಂತ ಅಪಾಯಕಾರಿ ಎಂದ ರಾಗಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬ್ರಿಟನ್ ಪ್ರಧಾನಿ ಗದ್ದುಗೆ ಏರಲು ಸಿದ್ಧರಾದ ರಿಷಿ ಸುನಕ್ – ಅಂತಿಮ ಸುತ್ತಿನಲ್ಲಿ ಲಿಜ್ ಟ್ರಸ್

    ಬ್ರಿಟನ್ ಪ್ರಧಾನಿ ಗದ್ದುಗೆ ಏರಲು ಸಿದ್ಧರಾದ ರಿಷಿ ಸುನಕ್ – ಅಂತಿಮ ಸುತ್ತಿನಲ್ಲಿ ಲಿಜ್ ಟ್ರಸ್

    ಲಂಡನ್: ಬ್ರಿಟನ್ ಹಣಕಾಸು ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಗದ್ದುಗೆ ಏರಲು ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಇಂದು ನಡೆದ 5ನೇ ಸುತ್ತಿನ ಮತದಾನದಲ್ಲಿ 137 ಮತಗಳನ್ನು ಪಡೆಯುವ ಮೂಲಕ ರಿಷಿ ಸುನಕ್ ಮುನ್ನಡೆ ಪಡೆದುಕೊಂಡಿದ್ದಾರೆ.

    ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ನಡೆಯುತ್ತಿರುವ ಮತದಾನದ 5ನೇ ಸುತ್ತಿನಲ್ಲಿ ರಿಷಿ ಸುನಕ್ 137 ಮತಗಳನ್ನು ಪಡೆದರೆ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 113 ಮತಗಳನ್ನು ಪಡೆದುಕೊಂಡು ಅಂತಿಮ ಹಂತಕ್ಕೇರಿದ್ದಾರೆ. ಇದನ್ನೂ ಓದಿ: ಅಂತ್ಯಕ್ರಿಯೆಗೆ GST ಸುಳ್ಳೆಂದ ಕೇಂದ್ರ ಸರ್ಕಾರ- ತೆರಿಗೆ ವಾಪಸ್‍ಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

    ಕನ್ಸರ್ವೇಟಿವ್ ಪಕ್ಷದ ನಾಯಕನಾಗುವ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿರುವ ಸುನಕ್ 5ನೇ ಸುತ್ತಿನ ಮತದಾನದಲ್ಲಿ ಮುನ್ನಡೆ ಪಡೆದು ಅಂತಿಮ ಸುತ್ತಿನ ಇಬ್ಬರು ಅಬ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಲಿಜ್ ಟ್ರಸ್ ಮತ್ತು ಸುನಕ್ ನಡುವೆ ಯಾರು ಪ್ರಧಾನಿಯಾಗಿ ಆಯ್ಕೆ ಆಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಟೋಲ್‍ಗೇಟ್‍ನಲ್ಲಿ ಅಂಬುಲೆನ್ಸ್ ಅಪಘಾತ ಪ್ರಕರಣ- ಸಾವಿನ ಸಂಖ್ಯೆ 4ಕ್ಕೆ ಏರಿಕೆ

    3ನೇ ಸುತ್ತಿನ ಮತದಾನದಲ್ಲಿ ಸುನಾಕ್ 115 ಮತಗಳನ್ನು ಪಡೆದಿದ್ದರು. 4ನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದರೆ, 5ನೇ ಸುತ್ತಿನಲ್ಲೂ 137 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರಿದು ಪ್ರಧಾನಿ ಸ್ಥಾನಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ. ಇದೀಗ ಉಳಿದಿರುವ ಇಬ್ಬರಲ್ಲಿ ಪಕ್ಷದ ಸಂಸದರಿಂದ 120 ಮತ ಗಳಿಸಿದ ಅಥವಾ ಕನ್ಸರ್ವೇಟಿವ್ ಪಕ್ಷದ ಸಂಸದರ ಮೂರನೇ ಒಂದು ಭಾಗದಷ್ಟು ಮತ ಪಡೆದವರು ಪ್ರಧಾನಿ ಹುದ್ದೆಗೇರಲಿದ್ದಾರೆ.

    ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ಆ ಬಳಿಕ ರಿಷಿ ಸುನಕ್ ಅಥವಾ ಲಿಜ್ ಟ್ರಸ್ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೋರಿಸ್ ಜಾನ್ಸನ್ ಬಳಿಕ ಯುಕೆ ಪಿಎಂ ಯಾರು? ಭಾರತ ಮೂಲದ ರಿಷಿಗಿದೆ ಚಾನ್ಸ್

    ಬೋರಿಸ್ ಜಾನ್ಸನ್ ಬಳಿಕ ಯುಕೆ ಪಿಎಂ ಯಾರು? ಭಾರತ ಮೂಲದ ರಿಷಿಗಿದೆ ಚಾನ್ಸ್

    ಲಂಡನ್: ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಸಜ್ಜಾಗಿದ್ದಾರೆ. ಆದರೆ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಭಾರತ ಮೂಲದ ರಿಷಿ ಸುನಾಕ್ ಹೆಸರು ಕೇಳಿ ಬರುತ್ತಿದೆ. ಒಂದು ವೇಳೆ ಇದು ನಿಜವಾದರೆ, ಬ್ರಿಟನ್ ಪ್ರಧಾನಿಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರಿಷಿ ಸುನಾಕ್ ಪಾತ್ರರಾಗುತ್ತಾರೆ.

    ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್, ಬೋರಿಸ್ ಜಾನ್ಸನ್ ರಾಜೀನಾಮೆಗೆ ಒಪ್ಪಿಗೆ ನೀಡಿದ ಬಳಿಕ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಕೇಳಿ ಬರುತ್ತಿದೆ. ರಿಷಿ ಸುನಾಕ್‌ರೊಂದಿಗೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಾಸ್, ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಕೂಡಾ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಗಳಾಗಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ

    ರಿಷಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯ ಪತಿಯಾಗಿದ್ದು, ಬ್ರಿಟನ್‌ನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ ಎನ್ನಲಾಗುತ್ತದೆ. ಇವರನ್ನು ಬೋರಿಸ್ ಜಾನ್ಸನ್ ಆಯ್ಕೆ ಮಾಡಿ, 2020ರಲ್ಲಿ ಮೊದಲ ಪೂರ್ಣ ಕ್ಯಾಬೆನೆಟ್ ಸ್ಥಾನವನ್ನು ಪಡೆದಿದ್ದರು.

    ಬ್ರಿಟನ್ ಸರ್ಕಾರದ ಹಣಕಾಸು ಖಾತೆ ಸಚಿವರಾಗಿದ್ದ ಸುನಾಕ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೋರಿಸ್ ಜಾನ್ಸನ್ ವಿರುದ್ಧ ಭಿನ್ನಾಭಿಪ್ರಾಯದಿಂದ ಸಾಜಿದ್ ಜಾವೇಜ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಿಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಉದ್ಯೋಗಿಯಿಂದ ಅವಳಿ ಮಕ್ಕಳು – 51ರ ಮಸ್ಕ್‌ ಈಗ 9 ಮಕ್ಕಳ ತಂದೆ

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ

    ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ

    ಲಂಡನ್: ಬ್ರಿಟನ್‌ನಲ್ಲಿ ಕಳೆದ 48 ಗಂಟೆಗಳಲ್ಲಿ 5 ಕ್ಯಾಬಿನೆಟ್ ಸಚಿವರು ಅಧಿಕಾರಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಹ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

    ಮಂಗಳವಾರ ರಾತ್ರಿಯಿಂದಲೇ ಪ್ರಮುಖ ಸಚಿವರು ಸರ್ಕಾರವನ್ನು ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನೇರವಾಗಿ ಒಪಿಡಿಗೆ ಓಡಿಬಂದ ಕತ್ತೆ- ಗಾಬರಿಗೊಂಡ ರೋಗಿಗಳು

    ಕಳೆದ ತಿಂಗಳು, ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವರಾದ ರಿಷಿ ಸುನಕ್ ಮತ್ತು ಸಾಜಿದ್ ಜಾವಿದ್ ಕೂಡ ಜಾನ್ಸನ್ ತಂಡವನ್ನು ತೊರೆದಿದ್ದಾರೆ.

    ಆರೋಗ್ಯ ಸಚಿವ ಸಾಜಿದ್ ಜಾವಿದ್ ಮತ್ತು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಕ್ ಅವರ ರಾಜೀನಾಮೆಯೊಂದಿಗೆ ಪ್ರಾರಂಭವಾದ ಸಂಚಲನ ನಿನ್ನೆಯೂ ಮುಂದುವರಿದಿತ್ತು. ಜಾನ್ ಗ್ಲೇನ್, ಭದ್ರತಾ ಕಾರ್ಯದರ್ಶಿ ರಾಚೆಲ್ ಮೆಕ್ಲೀನ್, ರಫ್ತು ಸಚಿವ ಮೈಕ್ ಫ್ರೀರ್, ವಸತಿ ಮತ್ತು ಸಮುದಾಯಗಳ ಜೂನಿಯರ್ ಸಚಿವ ನೀಲ್ ಒಬ್ರೇನ್, ಶಿಕ್ಷಣ ಇಲಾಖೆಯ ಕಿರಿಯ ಕಾರ್ಯದರ್ಶಿ ಅಲೆಕ್ಸ್ ಬರ್ಗರ್ಟ್ ಸೇರಿದಂತೆ 40ಕ್ಕೂ ಹೆಚ್ಚು ಸಚಿವರು ಜಾನ್ಸನ್ ಅವರ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್

    ಲಂಡನ್: ಬ್ರಿಟನ್ ಸರ್ಕಾರದ ಹಣಕಾಸು ಖಾತೆ ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್ ಹಾಗೂ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

    ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ಭಿನ್ನಾಭಿಪ್ರಾಯದಿಂದ ಸಜ್ಜಿದ್ ಜಾವೇದ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಿಷಿ ಸುನಾಕ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜೀನಾಮೆ ಪತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲದಿನಗಳ ಹಿಂದೆ ಅಮಾನತುಗೊಂಡಿರುವ ಸಂಸದ ಕ್ರಿಸ್ ಪಿಂಚರ್ ವಿರುದ್ಧ ಡೌನಿಂಗ್ ಸ್ಟ್ರೀಟ್‍ನ ಆರೋಪಗಳ ನಿರ್ವಹಣೆ ಬಗ್ಗೆ ಮಾಜಿ ನಾಗರಿಕ ಸೇವಕರು ದನಿಎತ್ತಿದ ಬಳಿಕ ಪ್ರಧಾನಿ ಹಾಗೂ ಸಚಿವರ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಆರಂಭಕೊಂಡಿತ್ತು. ಇದೀಗ ಹಣಕಾಸು ಸಚಿವರು ಹಾಗೂ ಆರೋಗ್ಯ ಕಾರ್ಯದರ್ಶಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ನಡೆದಿದ್ದಾರೆ. ಇದನ್ನೂ ಓದಿ: 6 ತಿಂಗಳಲ್ಲಿ 309 ಸಾಮೂಹಿಕ ಗುಂಡಿನ ದಾಳಿ – ಅಮೆರಿಕದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಬಲಿ

    ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ರಿಷಿ ಸುನಾಕ್, ಸರ್ಕಾರವನ್ನು ಸರಿಯಾದ ರೀತಿಯಲ್ಲಿ ಸಮರ್ಥವಾಗಿ ಮತ್ತು ಗಂಭೀರವಾಗಿ ನಡೆಸಬೇಕೆಂದು ಸಾರ್ವಜನಿಕರ ನಿರೀಕ್ಷೆ ಆಗಿರುತ್ತದೆ. ಇದು ನನ್ನ ಕೊನೆಯ ಮಂತ್ರಿ ಹುದ್ದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡಿ ಹೋರಾಡಲು ನಿರ್ಧರಿಸಿದ್ದು ಸರಿಯಾದ ನಿರ್ಧಾರವೆಂದು ನಂಬಿದ್ದೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

    ಬೋರಿಸ್ ಜಾನ್ಸನ್ ಸರ್ಕಾರದ ಸಂಸದರಾಗಿದ್ದ ಕ್ರಿಸ್ ಪಿಂಚರ್ ವಿರುದ್ಧದ ದುರ್ವರ್ತನೆ ಆರೋಪದ ಬಳಿಕ ಉಪ ಮುಖ್ಯ ಸಚೇತಕರಾಗಿ ಸರ್ಕಾರದಲ್ಲಿ ನೀಡಿದ್ದಕ್ಕೆ ವಿಷಾದಿಸುತ್ತೇನೆ ಎಂದು ಹೇಳಿಕೆ ನೀಡಿದ ನಂತರ ಬ್ರಿಟನ್‍ನಲ್ಲಿ ರಾಜಕೀಯ ಹೈಡ್ರಾಮಾ ಆರಂಭವಾಗಿದೆ. ಇದೀಗ ಬೋರಿಸ್ ಜಾನ್ಸನ್ ರಾಜಕೀಯ ಒತ್ತಡಕ್ಕೆ ಸಿಲುಕಿದ್ದು, ಸಚಿವರ ರಾಜೀನಾಮೆಯಿಂದ ಕಂಗೆಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುಟಿನ್ ಮಹಿಳೆಯಾಗಿದ್ದರೆ, ಯುದ್ಧದ ಹುಚ್ಚು ಆತನಿಗೆ ಬರುತ್ತಿರಲಿಲ್ಲ: ಬೋರಿಸ್ ಜಾನ್ಸನ್

    ಪುಟಿನ್ ಮಹಿಳೆಯಾಗಿದ್ದರೆ, ಯುದ್ಧದ ಹುಚ್ಚು ಆತನಿಗೆ ಬರುತ್ತಿರಲಿಲ್ಲ: ಬೋರಿಸ್ ಜಾನ್ಸನ್

    ಬರ್ಲಿನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹಿಳೆಯಾಗಿದ್ದರೆ, ಉಕ್ರೇನ್ ಮೇಲೆ ಯುದ್ಧವನ್ನು ಘೊಷಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದಾರೆ.

    ಜರ್ಮನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಾನ್ಸನ್, ಪುಟಿನ್‌ಗೆ ಒಬ್ಬ ಮಹಿಳೆಗೆ ಇರುವ ಮನಸ್ಥಿತಿ ಖಂಡಿತವಾಗಿಯೂ ಇಲ್ಲ. ಒಂದು ವೇಳೆ ಆತ ಮಹಿಳೆಯಾಗಿದ್ದರೆ, ಖಂಡಿತವಾಗಿಯೂ ಈ ರೀತಿ ಆಕ್ರಮಣ, ಹಿಂಸಾಚಾರದ ಹುಚ್ಚುತನವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಗ್ನಿಪಥ್ ಯೋಜನೆ – ಇಲ್ಲಿಯವರೆಗೆ 1.83 ಲಕ್ಷ ನೋಂದಣಿ

    ಉಕ್ರೇನ್ ಮೇಲೆ ಪುಟಿನ್ ಅವರ ಆಕ್ರಮಣ ವಿಷಕಾರಿ ಪುರುಷತ್ವದ ಪರಿಪೂರ್ಣ ಉದಾಹರಣೆಯಾಗಿದೆ. ಪ್ರಪಂಚದಾದ್ಯಂತ ಮಹಿಳೆಯರಿಗೆ ಅಧಿಕಾರಗಳಲ್ಲಿ ಉತ್ತಮ ಸ್ಥಾನಗಳನ್ನು ನೀಡುವಂತೆ ಬೋರಿಸ್ ಜಾನ್ಸನ್ ಕರೆ ನೀಡಿದರು. ಇದನ್ನೂ ಓದಿ: ಬೈಡನ್ ಪತ್ನಿ, ಮಗಳು ಸೇರಿದಂತೆ 23 ಅಮೆರಿಕನ್ನರಿಗೆ ನಿಷೇಧ ಹೇರಿದ ರಷ್ಯಾ

    ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಜನರು ಕೊನೆಗೊಳಿಸಬೇಕೆಂದು ಬಯಸುತ್ತಾರೆ. ಆದರೆ ಯಾವುದೇ ಒಪ್ಪಂದಗಳಿಲ್ಲದೇ ಪುಟಿನ್ ಶಾಂತಿಯುತ ಮಾತುಕತೆಗೆ ಮುಂದಾಗುತ್ತಿಲ್ಲ. ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಉಕ್ರೇನ್ ಅನ್ನು ಬೆಂಬಲಿಸಬೇಕು. ಮಾಸ್ಕೊದೊಂದಿಗೆ ಶಾಂತಿಯುತ ಮಾತುಕತೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

    Live Tv

  • ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

    ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

    ಲಂಡನ್: ಬ್ರಿಟನ್ ಸಂಸತ್‍ನಲ್ಲಿ ಸೋಮವಾರ ಸಂಜೆ ನಡೆದ ಗೌಪ್ಯ ಮತದಾನದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವಿಶ್ವಾಸ ಮತ ಗೆಲ್ಲುವ ಮೂಲಕ ತಮ್ಮ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.

    ಸಂಸತ್‍ನಲ್ಲಿ ನಡೆದ ರಹಸ್ಯ ಮತದಾನದಲ್ಲಿ ಬೋರಿಸ್ ಜಾನ್ಸನ್ ಅವರ ಪರ 211 ಮತಗಳು ಚಲಾವಣೆಯಾದರೆ, ವಿರುದ್ಧ 148 ಮತಗಳನ್ನು ಅವರದ್ದೇ ಪಕ್ಷದ (ಕನ್ಸರ್‌ವೇಟಿವ್) ಸಂಸದರು ಹಾಕಿದ್ದಾರೆ. ಇದನ್ನೂ ಓದಿ:  ಭ್ರಷ್ಟಾಚಾರ ಆರೋಪ – ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಬಂಧನ

    ಅವಿಶ್ವಾಸ ಮತದಾನ ಪ್ರಕ್ರಿಯೆಲ್ಲಿ ಬೋರಿಸ್ ಜಾನ್ಸನ್ ಅವರು ಗೆಲುವು ಸಾಧಿಸುವ ಮೂಲಕ ಒಂದು ವರ್ಷದ ಮಟ್ಟಿಗೆ ತಮ್ಮ ಪಟ್ಟವನ್ನು ಭದ್ರಪಡಿಸಿಕೊಂಡಿದ್ದು, ಹೀಗಿದ್ದರೂ ಪ್ರಧಾನಿ ಪಟ್ಟ ಉಳಿಸಲು ಇನ್ನೂ ತೂಗುಗತ್ತಿಯಲ್ಲಿ ನಡೆಯಬೇಕಾಗಬಹುದು, ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ವಿರುದ್ಧ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಕೋವಿಡ್ ಸಾಂಕ್ರಾಮಿಕ ಲಾಕ್‍ಡೌನ್ ಇದ್ದರೂ ಬೋರಿಸ್ ಜಾನ್ಸನ್ ಮಾತ್ರ ಡೌನಿಂಗ್ ಸ್ಟ್ರೀಟ್‍ನಲ್ಲಿ ಪಾರ್ಟಿ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಔತಣಕೂಟದಲ್ಲಿ ಮದ್ಯ ಸೇವಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಸ್ವಪಕ್ಷದ ಸದಸ್ಯರೇ ಬೋರಿಸ್ ಜಾನ್ಸನ್ ವಿರುದ್ಧ ವಿರೋಧ ವ್ಯಕ್ತಪಡಿಸಿ ರಾಜೀನಾಮೆಗೆ ಆಗ್ರಹಿಸಿದ್ದರು. ವಿವಾದದ ಕುರಿತು ತಾನು ಎರಡೆರಡು ಬಾರಿ ಕ್ಷಮೆಯಾಚಿಸಿದ್ದರೂ ವಿವಾದ ಕಾವು ಹಾಗೇ ಇತ್ತು. ಇದನ್ನೂ ಓದಿ:  ಕಾಂಗ್ರೆಸ್‍ನಲ್ಲಿ ನಲಪಾಡ್ ರೌಡಿಸಂ ಆರೋಪ – ಡಿಕೆಶಿಗೆ ದೂರು

    ಸದ್ಯ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಏರುತ್ತಿರುವ ಬೋರಿಸ್ ಜಾನ್ಸನ್, ಈ ಫಲಿತಾಂಶವನ್ನು ಗುಡ್ ನ್ಯೂಸ್ ಮತ್ತು ನಿರ್ಣಾಯಕ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ  ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು

    ಲಂಡನ್: ಯುದ್ಧಪೀಡಿತ ಉಕ್ರೇನ್‌ಗೆ ಬ್ರಿಟನ್ ಹೊಸದಾಗಿ 1.3 ಶತಕೋಟಿ ಪೌಂಡ್(12 ಸಾವಿರ ಕೋಟಿ ರೂ.) ಮಿಲಿಟರಿ ಸಹಾಯ ನೀಡುವುದಾಗಿ ಬ್ರಿಟನ್ ಭರವಸೆ ನೀಡಿದೆ. ಭಾನುವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಗ್ರೂಪ್ ಆಫ್ ಸೆವೆನ್ ಸಂಪರ್ಕಕ್ಕೆ ಮುಂದಾಗಿರುವುದಾಗಿ ವರದಿಗಳು ತಿಳಿಸಿವೆ.

    ಫೆಬ್ರವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಉಕ್ರೇನ್ ಬೆಂಬಲಕ್ಕೆ ನಿಂತವರಲ್ಲಿ ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಒಬ್ಬರು. ಅಂದಿನಿಂದ ಜಾನ್ಸನ್ ಉಕ್ರೇನ್‌ಗೆ ಕ್ಷಿಪಣಿ, ವಾಯು ರಕ್ಷಣಾ ವ್ಯವಸ್ಥೆ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

    ಬ್ರಿಟನ್ ಉಕ್ರೇನ್‌ಗೆ ಕಳೆದ ಬಾರಿ ನೀಡಿದ ಸಹಾಯಕ್ಕಿಂತಲೂ ಈ ಬಾರಿ ದ್ವಿಗುಣ ಪ್ರಮಾಣದಲ್ಲಿ ನೀಡಿದೆ. ಇದು ಇರಾಕ್ ಹಾಗೂ ಅಫ್ಘಾನಿಸ್ತಾನಗಳಲ್ಲಿ ನಡೆದ ಯುದ್ಧದ ವೆಚ್ಚಕ್ಕಿಂತಲೂ ಅತ್ಯಧಿಕ ದರವಾಗಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಆದರೆ ಬ್ರಿಟನ್ ಸರಿಯಾದ ಲೆಕ್ಕಾಚಾರದ ವಿವರಗಳನ್ನು ನೀಡಿಲ್ಲ.

    ಕಳೆದ ವಾರ ಜಾನ್ಸನ್ ಉಕ್ರೇನ್ ಸಂಸತ್ತಿನಲ್ಲಿ ಭಾಷಣ ಮಾಡಿ, ಉಕ್ರೇನ್ ಮೇಲಿನ ರಷ್ಯಾದ ದಾಳಿ ವಿವರಿಸಲು ಅಸಾಧ್ಯವಾದ ವಿನಾಶವನ್ನೇ ಮಾಡುತ್ತಿದೆ. ಇದು ಯುರೋಪಿನಾದ್ಯಂತ ಶಾಂತಿ ಹಾಗೂ ಭದ್ರತೆಗೆ ಬೆದರಿಕೆಯೂ ಆಗಿದೆ ಎಂದು ಹೇಳಿದರು. ಈ ಮೂಲಕ ಜಾನ್ಸನ್ ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭವಾದ ಬಳಿಕ ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ ಮೊದಲ ಪಾಶ್ಚಿಮಾತ್ಯ ನಾಯಕರಾದರು. ಇದನ್ನೂ ಓದಿ: ಮಸೀದಿಗಳ ಮುಂದೆ ಕ್ಯಾಮೆರಾ ಅಳವಡಿಸುವಂತೆ ಓವೈಸಿ ಕರೆ

    ಬ್ರಿಟನ್ ಉಕ್ರೇನ್‌ಗೆ ಭಾರೀ ಪ್ರಮಾಣದ ಮಿಲಿಟರಿ ನೆರವು ನೀಡಿರುವುದರೊಂದಿಗೆ ನಾಗರಿಕರಿಗೆ ಆಶ್ರಯವನ್ನೂ ನೀಡಿದೆ. ಇದುವರೆಗೆ ಸುಮಾರು 86,000 ಉಕ್ರೇನಿಯನ್ನರಿಗೆ ವೀಸಾಗಳನ್ನು ಒದಗಿಸಿದ್ದು, ಅದರಲ್ಲಿ ಸುಮಾರು 27,000 ಜನರು ಬ್ರಿಟನ್‌ಗೆ ತಲುಪಿದ್ದಾರೆ ಎಂದು ಬ್ರಿಟಿಷ್ ಸರ್ಕಾರ ಶನಿವಾರ ತಿಳಿಸಿದೆ.