Tag: borewell

  • ಖಟಕಬಾವಿ ಗದ್ದೆಯ ಕೊಳವೆಬಾವಿಯಲ್ಲಿ ಜೈನಮುನಿ ಮೃತದೇಹ ಪತ್ತೆ – ಪೀಸ್ ಪೀಸ್ ಮಾಡಿ ಎಸೆದ ಹಂತಕರು

    ಖಟಕಬಾವಿ ಗದ್ದೆಯ ಕೊಳವೆಬಾವಿಯಲ್ಲಿ ಜೈನಮುನಿ ಮೃತದೇಹ ಪತ್ತೆ – ಪೀಸ್ ಪೀಸ್ ಮಾಡಿ ಎಸೆದ ಹಂತಕರು

    ಚಿಕ್ಕೋಡಿ: ಹೀರೆಕುಡಿ (Hirekudi) ನಂದಿ ಪರ್ವತ ಆಶ್ರಮದ (Nandi Parvatha Ashram) ಜೈನಮುನಿ ಹತ್ಯೆಗೆ ಸಂಬಂಧಿಸಿದಂತೆ ಶೋಧಕಾರ್ಯ ಮುಗಿದಿದ್ದು, ಖಟಕಬಾವಿ ಗದ್ದೆಯ ಕೊಳವೆಬಾವಿಯಲ್ಲಿ (Borewell) ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ.

    ಜುಲೈ 6ರಿಂದ ನಂದಿ ಪರ್ವತ ಆಶ್ರಮದ ಜೈನಮುನಿಗಳು ನಾಪತ್ತೆಯಾಗಿದ್ದು, ಸ್ವಾಮೀಜಿಯ ನಾಪತ್ತೆಯ ಕುರಿತು ಭಕ್ತರು ಚಿಕ್ಕೋಡಿ (Chikkodi) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಸ್ವಾಮೀಜಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಜೈನಮುನಿಯ ಮೃತದೇಹವನ್ನು ಖಟಕಬಾವಿಯ ಗದ್ದೆಯಲ್ಲಿದ್ದ ತೆರೆದ ಕೊಳವೆಬಾವಿಗೆ ಹಾಕಿರುವುದಾಗಿ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿ ಕೊಲೆ- ಆರೋಪಿಗಳಿಂದ ತಪ್ಪೊಪ್ಪಿಗೆ

    ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಶುಕ್ರವಾರ ರಾತ್ರಿಯಿಂದ ಖಟಕಬಾವಿಯಲ್ಲಿ ಶೋಧಕಾರ್ಯ ನಡೆಸಿದ್ದರು. ಸ್ವಾಮೀಜಿ ಮೃತದೇಹ ಪತ್ತೆಯಾಗದ ಹಿನ್ನೆಲೆ ಶನಿವಾರವೂ ಜೆಸಿಬಿ ಸಹಾಯದಿಂದ ಶೋಧ ಕಾರ್ಯ ಮುಂದುವರೆಸಿದ್ದು, ಕೊಳವೆ ಬಾವಿಯ 20 ಅಡಿ ಆಳದಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ. ಸ್ವಾಮೀಜಿಗೆ ಕರೆಂಟ್ ಶಾಕ್ (Current Shock) ನೀಡಿ ಹತ್ಯೆಗೈದ ಹಂತಕರು ಅವರ ಮೃತದೇಹವನ್ನು ಪೀಸ್ ಪೀಸ್ ಮಾಡಿ ಬಟ್ಟೆಯಲ್ಲಿ ಸುತ್ತಿ ಗಂಟುಕಟ್ಟಿ ಕೊಳವೆ ಬಾವಿಯಲ್ಲಿ ಎಸೆದಿದ್ದಾರೆ. ನಿರಂತರ 10 ಗಂಟೆಗಳ ಕಾರ್ಯಾಚರಣೆಯ ಬಳಿಕ ಕೊಳವೆಬಾವಿಯಲ್ಲಿ ಸ್ವಾಮೀಜಿ ಮೃತದೇಹವಿರುವ ಗಂಟು ಪತ್ತೆಯಾಗಿದ್ದು, ಎಸ್‌ಡಿಆರ್‌ಎಫ್ ಸಿಬ್ಬಂದಿ, ಎಫ್‌ಎಸ್‌ಎಲ್ ತಂಡದ ಸಹಾಯದೊಂದಿಗೆ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ – ಸ್ವಾಮೀಜಿ ನೆನೆದು ಭಕ್ತರ ಕಣ್ಣೀರು, ಆಶ್ರಮದಲ್ಲಿ ನೀರವ ಮೌನ

    ಹಣಕಾಸಿನ (Money) ವಿಚಾರವಾಗಿ ಸ್ವಾಮೀಜಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿಗಳು, ಅವರ ಮೃತದೇಹವನ್ನು ಸುಮಾರು 400 ಅಡಿ ಉದ್ದದ ಕೊಳವೆ ಬಾವಿಯಲ್ಲಿ ಎಸೆದಿರುವುದಾಗಿ ಮಾಹಿತಿಯನ್ನು ನೀಡಿದ್ದರು. ಈ ಹಿನ್ನೆಲೆ 400 ಅಡಿ ಉದ್ದದ ಕೊಳವೆಬಾವಿಯಲ್ಲಿ 40 ಅಡಿಗೆ ಕೇಸಿಂಗ್ ಪೈಪ್ ಅಳವಡಿಸಿದ್ದು, ಸುಮಾರು 20 ಅಡಿ ಆಳದಲ್ಲಿ ಪತ್ತೆಯಾದ ಸ್ವಾಮೀಜಿ ಮೃತದೇಹವನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಚಿಕ್ಕೋಡಿಯಲ್ಲಿ ನಾಪತ್ತೆಯಾಗಿದ್ದ ಜೈನಮುನಿ ಹತ್ಯೆ – ಭಕ್ತರ ದೂರಿನ ಬಳಿಕ ಪ್ರಕರಣ ಬೆಳಕಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 55 ಅಡಿ ಆಳದ ಬೋರ್‌ವೆಲ್‍ಗೆ ಬಿದ್ದು 8ರ ಬಾಲಕ ಸಾವು

    55 ಅಡಿ ಆಳದ ಬೋರ್‌ವೆಲ್‍ಗೆ ಬಿದ್ದು 8ರ ಬಾಲಕ ಸಾವು

    ಭೋಪಾಲ್: ಬೋರ್‌ವೆಲ್‍ಗೆ (Borewell) ಬಿದ್ದ 8 ವರ್ಷದ ಬಾಲಕ (Boy) 65 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಹೊರತೆಗೆದರೂ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ (Madya Pradesh) ಬೇತುಲ್‍ನಲ್ಲಿ ನಡೆದಿದೆ.

    ತನ್ಮಯ್ ಸಾಹು (8) ಮೃತ ಬಾಲಕ. ಡಿಸೆಂಬರ್ 6 ರಂದು ಜಮೀನಿನಲ್ಲಿ ಆಟವಾಡುತ್ತಿದ್ದ. ಈ ವೇಳೆ ಜಮೀನಿನಲ್ಲಿ ಇದ್ದ 55 ಅಡಿ ಆಳದ ಬೋರ್‌ವೆಲ್‍ಗೆ ತನ್ಮಯ್ ಬಿದ್ದಿದ್ದ. ಇದನ್ನು ನೋಡಿದ ಪೋಷಕರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತನ್ಮಯ್‌ ಬಿದ್ದು ಒಂದು ಗಂಟೆಯಲ್ಲೇ ಸಿಬ್ಬಂದಿಯನ್ನು ಕರೆಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಜಂಪಿಂಗ್ ಪಾಲಿಟಿಕ್ಸ್ ಶುರು- ತೆನೆ ಇಳಿಸಿ ಕೈ ಹಿಡಿದ ರೇವು ನಾಯಕ್ ಬೆಳಮಗಿ

    ಎಸ್‍ಡಿಆರ್‌ಎಫ್, ಗೃಹರಕ್ಷಕ ದಳ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನುಸತತ 4 ದಿನಗಳಿಂದ ಕೆಲಸದಲ್ಲಿ ನಿಯೋಜಿಸಲಾಗಿತ್ತು. ತನ್ಮಯ್ ಸಾಹುನನ್ನು ಸತತ 65 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿ ಹೊರತೆಗೆದಿದ್ದರು. ಆದರೆ ಆತನನ್ನು ಬೇತುಲ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ. ಆದರೆ ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಮಾಜಿ ಸೈನಿಕನ ಬಳಿ 5 ಲಕ್ಷ ಲಂಚಕ್ಕೆ ಬೇಡಿಕೆ- ಮೂವರು ಭ್ರಷ್ಟ ಅಧಿಕಾರಿಗಳು ಜೈಲುಪಾಲು

    Live Tv
    [brid partner=56869869 player=32851 video=960834 autoplay=true]

  • 4 ದಿನ, 80 ಅಡಿ ಕೊಳವೆ ಬಾವಿಯಲ್ಲೇ ಸಿಲುಕಿದ್ದ ಹುಡುಗ – 104 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

    4 ದಿನ, 80 ಅಡಿ ಕೊಳವೆ ಬಾವಿಯಲ್ಲೇ ಸಿಲುಕಿದ್ದ ಹುಡುಗ – 104 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

    ರಾಯ್ಪುರ: ಕಳೆದ ನಾಲ್ಕು ದಿನಗಳಿಂದಲೂ ಕೊಳವೆ ಬಾವಿಯಲ್ಲೇ ಸಿಲುಕಿದ್ದ 11 ವರ್ಷದ ಹುಡುಗನನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸತತ 104 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ ರೋಚಕ ಘಟನೆ ಛತ್ತಿಸ್‌ಘಡದಲ್ಲಿ ನಡೆದಿದೆ.

    ಕಳೆದ ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಯಲ್ಲಿ ಆಟವಾಡುತ್ತಿದ್ದ ಬಾಲಕ ರಾಹುಲ್ ಸಾಹು (11) ಜಾಂಜ್‌ಗೀರ್ ಚಂಪಾ ಜಿಲ್ಲೆಯ ಪಿಹ್ರಿದ್ ಗ್ರಾಮದಲ್ಲಿ ತಮ್ಮ ಮನೆಯ ಹಿಂಬದಿಯಲ್ಲೇ ಕೊರೆದಿದ್ದ 80 ಅಡಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ಇದನ್ನೂ ಓದಿ: ಉತ್ತರಪ್ರದೇಶ ಮಾದರಿಯಲ್ಲೇ ಕಾಫಿನಾಡಿನಲ್ಲೂ ಬುಲ್ಡೋಜರ್ ಪ್ರಯೋಗ

    ಇದರಿಂದ ಎನ್‌ಡಿಆರ್‌ಎಫ್, ಸ್ಥಳೀಯ ಪೊಲೀಸ್, ಭಾರತೀಯ ಸೇನೆ ಯೋಧರು ಹಾಗೂ ಆಡಳಿತಾಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಅಧಿಕಾರಿ ವರ್ಗ ಬಾಲಕನನ್ನು ರಕ್ಷಿಸಲು ಸತತ ಕಾರ್ಯಾಚರಣೆ ಕೈಗೊಂಡಿತ್ತು. ಬಾಲಕನಿಗೆ ಆಮ್ಲಜನಕ ಪೂರೈಕೆಗಾಗಿ ಪೈಪ್ ಲೈನ್ ಅಳವಡಿಸಲಾಗಿತ್ತು. ರಾಹುಲ್‌ನ ಪ್ರತಿ ನಡೆಯ ಮೇಲೆ ನಿಗಾ ಇಡಲು ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿ, ಆಹಾರ ಪದಾರ್ಥಗಳನ್ನೂ ನೀಡಲಾಗಿತ್ತು. ಸದ್ಯ ಬಾಲಕನನ್ನು ರಕ್ಷಿಸಿದ್ದು ಬಿಲಾಸ್‌ಪುರ ಜಿಲ್ಲೆಯ ಅಪೊಲೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬಿಲಾಸ್‌ಪುರ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.

    ಹಾವು – ಚೇಳುಗಳ ಅಪಾಯ: ಕೊಳವೆ ಬಾವಿಯಿಂದ ಹುಡುಗನನ್ನು ರಕ್ಷಿಸಲು ಅದಕ್ಕೆ ಸಮನಾಗಿ ಸುರಂಗ ಕೊರೆಸುವ ಕಾಮಗಾರಿಯಲ್ಲೂ ಬಿಕ್ಕಟ್ಟು ಕಡಿಮೆ ಆಗಿರಲಿಲ್ಲ. ಕಲ್ಲಿನ ಬಂಡೆಯಿಂದಾಗಿ ಹಾವು, ಚೇಳುಗಳು ಬರುವ ಅಪಾಯವಿತ್ತು. ಅತ್ಯಂತ ವಿಷಕಾರಿ ಹಾವುಗಳನ್ನು ತೆರವುಗೊಳಿಸಲು ಉರಗ ತಜ್ಞರನ್ನು ಹಾಗೂ ಅಪಾಯ ಸಂಭವಿಸಿದರೆ ತಕ್ಷಣ ಚಿಕಿತ್ಸೆ ನೀಡಲು ವೈದ್ಯರಿಗೆ ವ್ಯವಸ್ಥೆಯನ್ನೂ ಮಾಡುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿತ್ತು ಎಂದು ರಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಲೋಕಾಯುಕ್ತ ಬಿ.ಎಸ್. ಪಾಟೀಲ್

    ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಎಲ್ಲರ ಪ್ರಾರ್ಥನೆ, ರಕ್ಷಣಾ ತಂಡದ ನಿರಂತರ ಕಾರ್ಯಾಚಾರಣೆ ಹಾಗೂ ಸಮರ್ಪಿತ ಪ್ರಯತ್ನದಿಂದಾಗಿ ರಾಹುಲ್ ಸಾಹುವನ್ನು ರಕ್ಷಿಸಲಾಗಿದೆ. ಆಸ್ಪತ್ರೆಯಿಂದ ಆದಷ್ಟು ಬೇಗ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದಿದ್ದಾರೆ.

  • ಕೊಳವೆಬಾವಿಗೆ ಬಿದ್ದು ಬಾಲಕ ಸಾವು

    ಕೊಳವೆಬಾವಿಗೆ ಬಿದ್ದು ಬಾಲಕ ಸಾವು

    ಚಂಡೀಗಢ: 300ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕನೊಬ್ಬ ಮೃತಪಟ್ಟ ಘಟನೆ ಪಂಜಾಬ್‍ನ ಹೋಶಿಯಾರ್‌ಪುರದ ಗಾದ್ರಿವಾಲಾ ಗ್ರಾಮದಲ್ಲಿ ನಡೆದಿದೆ.

    ರಿತೀಕ್ (6) ಕೊಳವೆಬಾವಿಗೆ ಬಿದ್ದ ಬಾಲಕ. ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ಕರೆಸಲಾಗಿತ್ತು. ಈ ರಕ್ಷಣಾ ಕಾರ್ಯಾಚರಣೆ ಒಂಬತ್ತು ಗಂಟೆಗಳ ಕಾಲ ನಡೆಯಿತು.

    ಕೊಳವೆಬಾವಿ ಕಡೆಗೆ ಸುರಂಗ ಕೊರೆಯಲು ಜೆಸಿಬಿ ಯಂತ್ರವನ್ನು ಅಳವಡಿಸಲಾಗಿದೆ. ಬಾಲಕ ಕೊಳವೆಬಾವಿಗೆ ತಲೆಕೆಳಗಾಗಿ ಬಿದ್ದಿದ್ದರಿಂದ ಯಂತ್ರದ ಸಹಾಯದಿಂದ ಬಾಲಕನನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಆದರೆ ಒಂದೂವರೆ ಗಂಟೆಯಲ್ಲಿ 15 ಅಡಿ ಮಾತ್ರ ಅಗೆಯಲು ಈ ಜೆಸಿಬಿಗೆ ಸಾಧ್ಯವಾಯಿತು. ಬಾಲಕ ಕೊಳವೆಬಾವಿಯಲ್ಲಿ 65 ಅಡಿಯ ಜಾಗದಲ್ಲಿ ಸಿಲುಕಿಕೊಂಡಿದ್ದನು. ಇದನ್ನೂ ಓದಿ: ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

    ಹೆಚ್ಚಿನ ಚಿಕಿತ್ಸೆಗಾಗಿ ಚಿಕಿತ್ಸೆಗಾಗಿ ರಿತಿಕ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ರಿತಿಕ್ ಬೀದಿ ನಾಯಿಗಳಿಂದ ರಕ್ಷಿಸಿಕೊಳ್ಳಲು ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕ್ವಾಡ್ ಸಭೆಗಾಗಿ ನರೇಂದ್ರ ಮೋದಿ ಜಪಾನ್ ಪ್ರವಾಸ

  • ಕೊಳವೆ ಬಾವಿಗೆ ಬಿದ್ದ ಮಗು- 10 ಗಂಟೆಗಳ ಕಾರ್ಯಾಚರಣೆ ನಂತ್ರ ರಕ್ಷಣೆ

    ಕೊಳವೆ ಬಾವಿಗೆ ಬಿದ್ದ ಮಗು- 10 ಗಂಟೆಗಳ ಕಾರ್ಯಾಚರಣೆ ನಂತ್ರ ರಕ್ಷಣೆ

    ಭೋಪಾಲ್: 80 ಅಡಿ ಆಳದ ಕೊಳವೆ ಬಾವಿಗೆ ಬಿದ್ದ, ಒಂದು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಮತ್ತು ರಾಜ್ಯ ವಿಪತ್ತು ತುರ್ತು ಮೀಸಲು ಪಡೆ (SDERF) 10 ಗಂಟೆ ಕಾರ್ಯಾಚರಣೆ ಮಾಡಿ ರಕ್ಷಿಸಿದ್ದಾರೆ.

    ಜಮೀನಿನಲ್ಲಿ ತಾಯಿ ಕೆಲಸ ಮಾಡುತ್ತಿದ್ದ ವೇಳೆ ದಿವ್ಯಾಂಶಿ ಆಟವಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ದಿವ್ಯಾಂಶಿ ಕಣ್ಮರೆಯಾಗಿದ್ದಳು. ಈ ವೇಳೆ ಹುಡುಕಾಡಿದಾಗ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿರುವುದು ತಿಳಿದು ಬಂದಿದೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    80 ಅಡಿ ಆಳ ಇರುವ ಕೊಳವೆ ಬಾವಿಯಲ್ಲಿ, ಸುಮಾರು 15 ಅಡಿ ಆಳದಲ್ಲಿ ದಿವ್ಯಾಂಶಿ ಸಿಲುಕಿಕೊಂಡಿರುವುದು ಗೊತ್ತಾಗಿದೆ. ಮಗುವಿನ ಅಳುವ ಶಬ್ದ ಕೇಳಿಸಿದ ಪೊಲೀಸರು ಆಮ್ಲಜನಕದ ಒದಗಿಸಿದ್ದಾರೆ. ಬಳಿಕ ಗ್ವಾಲಿಯರ್‍ನಿಂದ ಬಂದ SDERF ತಂಡವು ಕಾರ್ಯಾಚರಣೆ ಕೈಗೊಂಡಿತು. ಕೊಳವೆ ಬಾವಿಗೆ ಸಿಸಿಟಿವಿ ಆಳವಡಿಸಿ ಮಗುವಿನ ಚಲನೆಯನ್ನು ಗಮನ ವಹಿಸಲಾಯಿತು. ನಂತರ ಜೆ.ಸಿ.ಬಿ ಯಂತ್ರಗಳನ್ನು ಬಳಸಿ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ತೋಡಿ ಬಾಲಕಿಯನ್ನು ರಕ್ಷಿಸಲಾಯಿತು. ಇದನ್ನೂ ಓದಿ: ಒಂಟಿಯಾಗಿದ್ದ ಅಮ್ಮನಿಗೆ ಮದುವೆ ಮಾಡಿಸಿದ ಮಗಳು

    ಛತ್ತರ್‍ಪುರ ಜಿಲ್ಲೆಯ ಗೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ 3.30ರ ಹೊತ್ತಿಗೆ ಕೊಳವೆ ಬಾವಿಗೆ ಬಿದ್ದ ದಿವ್ಯಾಂಶಿಯನ್ನು ಸುಮಾರು 10 ಗಂಟೆ ನಡೆದ ಸತತ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಛತ್ತರ್‍ಪುರ ಜಿಲ್ಲಾಧಿಕಾರಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್‌ ಮುಂದೂಡಿಕೆ

  • ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು

    ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು

    ಯಾದಗಿರಿ: ಬೋರ್‌ವೆಲ್ ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಜಮೀನಿಗೆ ನೀರು ತರಲು ಹೋಗಿದ್ದ ಯುವಕ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಮಹೇಶ್ ತಂದೆ ಮಲ್ಲಪ್ಪ ಯಾದವ್(25) ಈ ಅವಘಡದಲ್ಲಿ ಮೃತಪಟ್ಟ ವ್ಯಕ್ತಿ. ತನ್ನ ಚಿಕ್ಕಮ್ಮನೊಂದಿಗೆ ಹೊಲಕ್ಕೆ ತೆರಳಿದ್ದ ಮಹೇಶ್, ಕ್ರಿಮಿನಾಶಕ ಔಷಧಿಗೆ ನೀರು ಮಿಶ್ರಣ ಮಾಡುವುದಕ್ಕಾಗಿ ಪಕ್ಕದ ಜಮೀನಿನಲ್ಲಿದ್ದ ಬೋರ್ ವೇಲ್ ನಿಂದ ನೀರು ತರಲು ಹೋಗಿದ್ದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ

    ಮೋಟರ್ ಸ್ಟಾರ್ಟ್ ಮಾಡಿ, ಬಳಿಕ ಬೋರ್ ಪೈಪ್ ಬಳಿಗೆ ತೆರಳಿದ್ದಾರೆ. ಈ ವೇಳೆ ಪೈಪ್ ಗೆ ಹೊಂದಿಕೊಂಡಿದ್ದ ಕರೆಂಟ್ ವೈರ್ ಕಟ್ ಆಗಿರುವುದನ್ನು ಮಹೇಶ್ ಅವರು ಗಮನಿಸಿರಲಿಲ್ಲ. ಇದರಿಂದಾಗಿ ವಿದ್ಯುತ್ ತಂತಿ ತಗುಲಿ ಮಹೇಶ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

    ಸ್ಥಳದಲ್ಲಿ ಮೃತ ಮಹೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬೋರ್​ವೆಲ್​ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ

    ಬೋರ್​ವೆಲ್​ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ

    ಚಿಕ್ಕೋಡಿ(ಬೆಳಗಾವಿ): ಎರಡೂವರೆ ವರ್ಷದ ಮಗುವೊಂದು ಬೋರ್​ವೆಲ್​ಗೆ ಬಿದ್ದು, ಪ್ರಾಣಬಿಟ್ಟಿರುವ ಕರುಣಾಜನಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ನಡೆದಿದೆ.

    ಶರತ್ ಸಿದ್ದಪ್ ಹಸರೆ (2) ಮೃತ ದುರ್ದೈವಿ. ನಿನ್ನೆ ಸಂಜೆಯಿಂದಲೇ ಮಗು ನಾಪತ್ತೆಯಾಗಿತ್ತು. ಕುಟುಂಬದವರು ಮಗುವಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಮನೆಯಿಂದ 200 ಮೀ. ದೂರದಲ್ಲಿ ಕೊರೆಸಿದ್ದ ಬೋರ್​ವೆಲ್​ಗೆ ಮಗು ಶರತ್ ಬಿದ್ದಿರುವುದು ತಿಳಿದುಬಂದಿದೆ. 15 ಅಡಿ ಆಳದಲ್ಲಿ ಮಗು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಮಗು ಶವವಾಗಿ ಪತ್ತೆಯಾಗಿದೆ. ಇದನ್ನೂ ಓದಿ: ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು

    ಆಟವಾಡುತ್ತ ಹೋಗಿ ಮನೆಯಿಂದ ನೂರು ಅಡಿ ದೂರದಲ್ಲಿದ್ದ ಬೋರ್​ವೆಲ್​ಗೆ ಶರತ್ ಬಿದ್ದಿದ್ದಾನೆ. ಆದರೆ ಮಗು ಕಾಣದಿರುವುದುನ್ನು ಗಮನಿಸಿದ ಪೋಷಕರು ಮಗು ಅಪಹರಣವಾಗಿರಬಹದು ಎಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೋಟದ ಮನೆಯಲ್ಲಿ ವಾಸವಿರುವ ಮಗು ಶರತ್ ತಂದೆ ಸಿದ್ದಪ್ಪ ಮತ್ತು ಕುಟುಂಟದವರು ಮಗು ಮನೆಯಿಂದ ಇನ್ನೂರು ಮೀಟರ್ ದೂರದಲ್ಲಿ ಕೊರೆಸಿದ್ದ ಬೋರ್​ವೆಲ್​ಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದರು. ಮಗುವನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

    ಈ ವೇಳೆ ನಿನ್ನೆ ಕಾಣೆಯಾಗಿದ್ದ ಮಗು ಇಂದು ಬೋರ್​ವೆಲ್​ನಲ್ಲಿ ಶವವಾಗಿ ಪತ್ತೆಯಾಗಿದೆ. ಸುಮಾರು 7 ಅಡಿಗಳಷ್ಟು ಆಳದಲ್ಲಿ ಬೋರ್​ವೆಲ್​ನಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿ ಶಾಮಕದಳದ ಕಾರ್ಯಾಚರಣೆ, ಹಗ್ಗ ಬಿಟ್ಟು ಶವ ತೆಗೆಯಲಾಗಿದೆ. ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆ ಮಾಡಿ ಎಸೆಯಲಾಗಿದೆಯಾ ಅಥವಾ ಆಟವಾಡುತ್ತಾ ಬೋರ್​ವೆಲ್​ಗೆ ಬಿದ್ದಿದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೃಷ್ಣಾ ನದಿ ಪ್ರವಾಹದ ಎಫೆಕ್ಟ್ – ಅಂತರ್ಜಲ ಹೆಚ್ಚಳದಿಂದ ಉಕ್ಕುತ್ತಿರುವ ಬೋರ್ ವೆಲ್

    ಕೃಷ್ಣಾ ನದಿ ಪ್ರವಾಹದ ಎಫೆಕ್ಟ್ – ಅಂತರ್ಜಲ ಹೆಚ್ಚಳದಿಂದ ಉಕ್ಕುತ್ತಿರುವ ಬೋರ್ ವೆಲ್

    ರಾಯಚೂರು: ಕೃಷ್ಣಾ ನದಿ ತುಂಬಿ ಹರಿಯುವುದಲ್ಲದೆ ನದಿ ಪಾತ್ರದ ಸಾವಿರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ನದಿ ಪಾತ್ರದಲ್ಲಿ ಅಂತರ್ಜಲ ಹೆಚ್ಚಾಗಿ ಬೋರ್ ವೆಲ್ ಗಳಲ್ಲಿ ತಾನಾಗೇ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಜಮೀನುಗಳ ಬೆಳೆಗಳು ಹಾಳಾಗುತ್ತಿವೆ.

    ರಾಯಚೂರು ತಾಲೂಕಿನ ಗುರ್ಜಾಪುರ, ಕಾಡ್ಲೂರು ಗ್ರಾಮದ ಜಮೀನುಗಳಿಗೆ ಹೆಚ್ಚು ಪರಿಣಾಮ ಬೀರಿದ್ದು, ಇಲ್ಲಿನ ಬೋರ್ ವೆಲ್ ಗಳಲ್ಲಿ ನಿರಂತರವಾಗಿ ನೀರು ಉಕ್ಕುತ್ತಲೇ ಇದೆ. ಬೋರ್ ವೆಲ್ ನೀರಿನಿಂದಾಗಿ ಜಮೀನುಗಳು ಜಲಾವೃತವಾಗುತ್ತಿವೆ. ಮುಖ್ಯವಾಗಿ ಲಕ್ಷಾಂತರ ರೂಪಾಯಿ ಭತ್ತದ ಬೆಳೆ ಹಾನಿಯಾಗಿದೆ.

    ನದಿಯಿಂದ ನೂರಾರು ಮೀಟರ್ ದೂರದಲ್ಲಿರುವ ಬೋರ್ ವೆಲ್‍ಗಳು ಸಹ ಉಕ್ಕುತ್ತಿರುವುದು ರೈತರನ್ನ ಆತಂಕಕ್ಕೀಡು ಮಾಡಿದೆ. ನದಿ ಪ್ರವಾಹದಿಂದ ಹಾನಿಯಾದ ಬೆಳೆಗೆ ಪರಿಹಾರ ಸಿಗಬಹುದು ಆದ್ರೆ ಅಂತರ್ಜಲ ಹೆಚ್ಚಾಗಿ ಬೋರ್ ವೆಲ್ ನೀರಿನಿಂದ ಹಾಳಾಗುತ್ತಿರುವ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡುತ್ತಾ ಅನ್ನೋ ಆತಂಕ ರೈತರನ್ನ ಕಾಡುತ್ತಿದೆ. ಇದನ್ನೂ ಓದಿ: ಕೊರೊನಾ ಕರಿನೆರಳು- ಇಂದು ಪ್ರಾರಂಭವಾಗಬೇಕಿದ್ದ ಮೀನುಗಾರಿಕೆ ಸಂಪೂರ್ಣ ಬಂದ್!

  • 150 ಅಡಿ ಆಳದ ಬೋರ್‌ವೆಲ್‌ಗೆ ಬಿತ್ತು 5ರ ಮಗು

    150 ಅಡಿ ಆಳದ ಬೋರ್‌ವೆಲ್‌ಗೆ ಬಿತ್ತು 5ರ ಮಗು

    ಲಕ್ನೋ: ಆಟ ಆಡುತ್ತಿದ್ದ ವೇಳೆ 5 ವರ್ಷದ ಮಗು 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ಆಗ್ರಾದ ಧರಿಯೈ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸದ್ಯ ಘಟನೆ ಕುರಿತಂತೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಬೆಳಗ್ಗೆ ಸುಮಾರು 8:30ಕ್ಕೆ ಆಗ್ರಾ ಗ್ರಾಮೀಣ ಪ್ರದೇಶದ ಫತೇಹಾಬಾದ್‍ನ ನಿಬೋಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಯಲ್ಲಿ ಜರುಗಿದೆ. ಮಗುವಿನ ಚಲನೆಯನ್ನು ಗಮನಿಸಬಹುದಾಗಿದ್ದು, ಪ್ರತಿಕ್ರಿಯೆ ನೀಡುತ್ತಿದೆ. ಅಲ್ಲದೆ ಘಟನೆ ಕುರಿತಂತೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಟೇಷನ್ ಹೌಸ್ ಸೂರಜ್ ಪ್ರಸಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಲಾರಿ ,ಕಾರ್ ಡಿಕ್ಕಿ – ಊರಿಗೆ ಹೊರಟವನು ಸ್ಥಳದಲ್ಲೇ ಸಾವು

    ತನ್ನ ಸ್ವಂತ ತಂದೆ ಅಗೆದ ಬೋರ್‌ವೆಲ್‌ಗೆ ಹೋಗಿ ಮಗು ಬಿದ್ದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • 120 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವು

    120 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವು

    – ತಾಯಿ ಸೀರೆ ಬಿಚ್ಚಿ ಬಾವಿಯೊಳಗೆ ಕೊಟ್ರೂ ಮಗು ಉಳಿಲಿಲ್ಲ
    – 25ಕ್ಕೂ ಅಧಿಕ ಸಿಬ್ಬಂದಿಯಿಂದ ಸತತ 12 ಗಂಟೆ ಕಾರ್ಯಾಚರಣೆ

    ಹೈದರಾಬಾದ್: 120 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಮೂರು ವರ್ಷದ ಮಗುವನ್ನು ನಿರಂತರ ರಕ್ಷಣಾ ಕಾರ್ಯಚರಣೆಯ ನಂತರವೂ ಉಳಿಸಲು ಸಾಧ್ಯವಾಗದಿರುವ ಘಟನೆ ತೆಲಂಗಾಣದ ಮೆಡಕ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಬಾಲಕನನ್ನು ಸಾಯಿ ವರ್ಧನ್ ಎಂದು ಗುರುತಿಸಲಾಗಿದೆ. ವರ್ಧನ್ ಬುಧವಾರ ರಾತ್ರಿ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಹೊಸದಾಗಿ ಕೊರೆಸಿದ್ದ ಬೋರ್‌ವೆಲ್‌ಗೆ ಬಿದ್ದಿದ್ದನು. ಮಾಹಿತಿ ತಿಳಿದು ತಕ್ಷಣ ಬಾಲಕನ ಪ್ರಾಣ ಉಳಿಸಲು ಅಧಿಕಾರಿಗಳು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

    ಇಂದು ಬೆಳಗ್ಗೆ ಬಾಲಕನ ಮೃತದೇಹವನ್ನು ಬೋರ್‌ವೆಲ್‌ನಿಂದ ಹೊರತೆಗೆಯಲಾಗಿದೆ. ಬೋರ್‌ವೆಲ್‌ ಒಳಗೆ 17 ಅಡಿ ಆಳದಲ್ಲಿ ವರ್ಧನ್ ಮೃತದೇಹ ಪತ್ತೆಯಾಗಿದೆ. ಈ ಮೂಲಕ ನಿರಂತರ ರಕ್ಷಣಾ ಕಾರ್ಯಚರಣೆಯ ನಂತರವೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

    ಬೋರ್‌ವೆಲ್‌ಗೆ ಬಾಲಕ ಬಿದ್ದ ತಕ್ಷಣ ಹೈದರಾಬಾದ್ ಮತ್ತು ಗುಂಟೂರಿನಿಂದ ಬಂದಿದ್ದ ಎನ್‌ಡಿಆರ್‌ಎಫ್ ತಂಡದ 25ಕ್ಕೂ ಅಧಿಕ ಸಿಬ್ಬಂದಿ ಸತತ 12 ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಇಂದು ಬೆಳಗ್ಗೆ ಬಾಲಕನ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಧರ್ಮ ರೆಡ್ಡಿ ತಿಳಿಸಿದರು.

    ನಡೆದಿದ್ದೇನು?
    ಇತ್ತೀಚೆಗೆ ವರ್ಧನ್ ತಾತ ಕೊಳವೆ ಬಾವಿಗಳನ್ನು ಕೊರೆಸಿದ್ದರು. ನೀರು ಸಿಗದಿದ್ದಾಗ ಬುಧವಾರ ಮತ್ತೊಂದು ಬೋರ್‌ವೆಲ್‌ ಕೊರೆಸಿದ್ದರು. ಅದರಲ್ಲಿಯೂ ನೀರು ಸಿಗಲಿಲ್ಲ. ಇದರಿಂದ ಬೇಸರಗೊಂಡು ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಟ್ಟುಬಿಟ್ಟರು. ಗದ್ದೆ ಪಕ್ಕದ ಮನೆಯಲ್ಲಿ ಸಾಯಿ ವರ್ಧನ್ ತಂದೆ ಮತ್ತು ತಾಯಿ ಮತ್ತಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

    ಬುಧವಾರ ಸಂಜೆ ಸುಮಾರು 5 ಗಂಟೆ ಜಿಲ್ಲೆಯ ಪಪನ್ನಪೇಟೆ ಮಂಡಲ್‍ದಲ್ಲಿರುವ ತೋಟದಲ್ಲಿ ಬಾಲಕ ತನ್ನ ಅಜ್ಜ ಮತ್ತು ತಂದೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ಮಾಹಿತಿ ತಿಳಿದು ಎನ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ಬಂದು 120 ಅಡಿ ತೆರೆದ ಬೋರ್‌ವೆಲ್‌ಗೆ ಆಮ್ಲಜನಕ ಸರಬರಾಜು ಮಾಡಿದೆ. ಅಲ್ಲದೇ ಬಾಲಕನನ್ನು ರಕ್ಷಿಸಲು ಪಕ್ಕದಲ್ಲಿ ಮಣ್ಣನ್ನು ಅಗೆಯಲಾಗಿತ್ತು. ಆದರೆ ಬಾಲಕನಿಗೆ ಸರಿಯಾಗಿ ಆಮ್ಲಜನಕ ಸಿಗದೆ ಮೃತಪಟ್ಟಿದ್ದು, ಇಂದು ಬೆಳಗ್ಗೆ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬಾಲಕ ಬೋರ್‌ವೆಲ್‌ಗೆ ಬಿದ್ದ ತಕ್ಷಣ ತಾಯಿ ತಾನು ಉಟ್ಟಿದ್ದ ಸೀರೆಯನ್ನು ಬಿಚ್ಚಿ ಕೊಳವೆ ಬಾವಿಯೊಳಗೆ ಇಳಿಸಿದ್ದಾರೆ. ಅದನ್ನು ಹಿಡಿದುಕೊಂಡು ಮಗು ಮೇಲಕ್ಕೆ ಬರಬಹುದು ಎಂದು ಪ್ರಯತ್ನಿಸಿದ್ದಾರೆ. ಆದರೆ ಬಾಲಕ ಬಾವಿಯೊಳಗೆ ಆಳದವರೆಗೆ ಹೋಗಿದ್ದು, ಸೀರೆಯನ್ನು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ.

    ಸದ್ಯಕ್ಕೆ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅನುಮತಿಯಿಲ್ಲದೆ ಮೂರು ಬೋರ್‌ವೆಲ್‌ಗಳನ್ನು ಕೊರೆಸಿದ್ದಾರೆ. ಆದರೆ ನೀರು ಸಿಗಲಿಲ್ಲ ಎಂದು ಅದನ್ನು ಮುಚ್ಚದ ಬಿಟ್ಟಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.