Tag: borewell

  • ಮಳೆಗಾಲದ ಮಧ್ಯೆ ನೀರಿಗೆ ಹಾಹಾಕಾರ – ಬೀದರ್‌ನ ಕುಗ್ರಾಮದ ಜನರಿಗೆ ಕೆಮಿಕಲ್ ನೀರು ಕುಡಿಯುವ ಕರ್ಮ

    ಮಳೆಗಾಲದ ಮಧ್ಯೆ ನೀರಿಗೆ ಹಾಹಾಕಾರ – ಬೀದರ್‌ನ ಕುಗ್ರಾಮದ ಜನರಿಗೆ ಕೆಮಿಕಲ್ ನೀರು ಕುಡಿಯುವ ಕರ್ಮ

    – ಫ್ಯಾಕ್ಟರಿಗಳಿಂದ ಕುತ್ತು; ಬೋರ್‌ವೇಲ್‌ನಲ್ಲಿ ಕೆಮಿಕಲ್ ನೀರು

    ಬೀದರ್‌: ಬೇಸಿಗೆ ಬಂದ್ರೆ ಸಾಕು ಕುಗ್ರಾಮಗಳಲ್ಲಿ ನೀರಿನ (Water) ಸಮಸ್ಯೆಯಾಗೋದು ಸಾಮಾನ್ಯ. ಆದ್ರೆ ಬೀದರ್‌ನ ಕುಗ್ರಾಮದಲ್ಲಿ ಮಳೆಗಾಲ ಮುಗಿದ ಬೆನ್ನಲ್ಲೇ ಹನಿ ಹನಿ ನೀರಿಗೆ ಹಾಹಾಕಾರ ಶುರುವಾಗಿದೆ. ಗ್ರಾಮದಲ್ಲಿರುವ ಏಕೈಕ ಕುಡಿಯುವ ನೀರಿನ ಬೋರ್ ವೆಲ್‌ನಿಂದ ಕೆಮಿಕಲ್ ನೀರು (Chemical water) ಬರುತ್ತಿದೆ.

    ಹೌದು. ಬೀದರ್ (Bidar) ತಾಲೂಕಿನ ಕಮಲಾಪೂರ್ ಗ್ರಾಮದಲ್ಲಿ ಜನರು ಕುಡಿಯುವ ಹನಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಇಡೀ ಗ್ರಾಮಕ್ಕೆ ಇರುವ ಏಕೈಕ ಬೋರ್‌ವೆಲ್‌ ಮುಂದೆ ಗಂಟೆಗಟ್ಟಲೇ ನಿಲ್ಲಬೇಕಿದೆ. ಈ ಬೋರ್ವೆಲ್‌ನಿಂದ ಕೆಮಿಕಲ್ ಯುಕ್ತ ನೀರು ಬರುತ್ತಿದ್ದು ಗ್ರಾಮದ ಜನ ಈ ನೀರನ್ನೇ ಕುಡಿಯುವ ಅನಿವಾರ್ಯತೆ ಬಂದೊದಗಿದೆ.

    ಕೆಮಿಕಲ್ ನೀರು ಕುಡಿದು ಜನ್ರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದು, ಕೆಮಿಕಲ್ ಫ್ಯಾಕ್ಟರಿ ಮಾಲೀಕರಿಗೆ ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಯಾಕೆಂದ್ರೆ ಕೊಳ್ಳಾರ ಕೆಮಿಕಲ್ ಫ್ಯಾಕ್ಟರಿಗಳಿಂದ ಪ್ರತಿದಿನ ಗ್ರಾಮದ ಪಕ್ಕದ ಕೆರೆಗೆ ಕೆಮಿಕಲ್ ಸೇರುತ್ತಿದೆ. ಈ ಮೂಲಕ ಗ್ರಾಮದ ಬೋರ್ವೆಲ್‌ಗಳಲ್ಲಿ ಕೆಮಿಕಲ್ ಮಿಶ್ರಿತ ನೀರು ಬರುತ್ತಿದೆ. ಈ ಕೆಮಿಕಲ್ ನೀರನ್ನು ಅನಿವಾರ್ಯವಾಗಿ ಕುಡಿಯುತ್ತಿರುವ ಗ್ರಾಮಸ್ಥರು ಪ್ರತಿದಿನ ಸತ್ತು ಬದುಕುತ್ತಿದ್ದಾರೆ. ಇನ್ನು ಕೆಲವರು 2 ಕಿಲೋ ಮೀಟರ್ ದೂರದ ಗ್ರಾಮಗಳಿಗೆ ಹೋಗಿ 30 ರೂಪಾಯಿ ಕೊಟ್ಟು ಫಿಲ್ಟರ್ ನೀರು ತಂದು ಕುಡಿಯುತ್ತಿದ್ದಾರೆ.

    ಕೋಟಿ ಕೋಟಿ ಅನುದಾನದಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಗ್ರಾಮದ ಪ್ರತಿಯೊಂದು ಮನೆಗಳಲ್ಲಿ ನಲ್ಲಿಗಳನ್ನು ಹಾಕಲಾಗಿದೆ. ಆದ್ರೆ ಐದಾರು ವರ್ಷಗಳಿಂದ ಈ ನಲ್ಲಿಗಳಲ್ಲಿ ಒಂದು ಹನಿ ನೀರು ಬಂದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೋಟಿ ಕೋಟಿ ಹಣ ಗುಳುಂ ಮಾಡಿದ್ದಾರೆ. 40 ವರ್ಷಗಳ ಹಿಂದೇ ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಜನ್ರು ತಮ್ಮ ಗ್ರಾಮವನ್ನೇ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಆದ್ರೆ ಇಲ್ಲಿ ಯಾವುದೇ ಮೂಲಭೂತ ಸೌಕರ್ಯ ನೀಡದೆ ನಿರ್ಲಕ್ಷಿಸಲಾಗಿದೆ.

  • ನಗರಸಭೆಗೆ ಸಂಬಂಧಿಸಿದ ಬೋರ್‌ವೆಲ್ ಬಳಿ ಭೂಕುಸಿತ; ಸ್ಥಳಿಯರಲ್ಲಿ ಹೆಚ್ಚಿದ ಆತಂಕ

    ನಗರಸಭೆಗೆ ಸಂಬಂಧಿಸಿದ ಬೋರ್‌ವೆಲ್ ಬಳಿ ಭೂಕುಸಿತ; ಸ್ಥಳಿಯರಲ್ಲಿ ಹೆಚ್ಚಿದ ಆತಂಕ

    ಗದಗ: ಕುಡಿಯುವ ನೀರಿನ ಬೋರ್‌ವೆಲ್ ಬಳಿ ಭೂಕುಸಿತದಿಂದ ಜನ ಆತಂಕಕ್ಕೆ ಒಳಗಾದ ಘಟನೆ ಗದಗದ (Gadag) ಅಂಬೇಡ್ಕರ್ ನಗರದಲ್ಲಿ ನಡೆದಿದೆ.

    ಗದಗ-ಬೆಟಗೇರಿ ನಗರಸಭೆಗೆ ಸಂಬಂಧಿಸಿದ ಕುಡಿಯುವ ನೀರಿನ ಬೋರವೆಲ್ ಇದಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಭೂಕುಸಿತವಾಗಿದೆ ಎನ್ನಲಾಗುತ್ತಿದೆ. ಇದನ್ನು ಕಂಡು ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್

    ರಸ್ತೆಗೆ ಹೊಂದಿಕೊಂಡಿರುವ ಬೋರ್‌ವೆಲ್ ಆದ್ದರಿಂದ ಪ್ರತಿನಿತ್ಯ ಇದೇ ರಸ್ತೆ ಮೂಲಕ ನೂರಾರು ಜನ ಓಡಾಡುತ್ತಾರೆ. ಅಷ್ಟೇ ಅಲ್ಲ ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಹಾಗೂ ಸಮೀಪದಲ್ಲೇ ಶಾಲೆ ಸಹ ಇದೆ. ಸುಮಾರು ಮೂರ್ನಾಲ್ಕು ಅಡಿ ಭೂಮಿ ಕುಸಿತವಾದ್ದರಿಂದ ಈ ಬಗ್ಗೆ ಸುರಕ್ಷತೆ ವಹಿಸುವಂತೆ ಗದಗ-ಬೆಟಗೇರಿ ನಗರಸಭೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

  • Rajasthan| 10 ದಿನಗಳ ಹಿಂದೆ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕಿ ಸಾವು

    Rajasthan| 10 ದಿನಗಳ ಹಿಂದೆ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕಿ ಸಾವು

    ಜೈಪುರ: 10 ದಿನಗಳ ಹಿಂದೆ ರಾಜಸ್ಥಾನದ (Rajasthan) ಕೋಟ್‌ಪುಟ್ಲಿಯಲ್ಲಿ (Kotputli) 700 ಅಡಿ ಆಳದ ಬೋರ್‌ವೆಲ್‌ಗೆ (Borewell) ಬಿದ್ದಿದ್ದ ಮೂರು ವರ್ಷದ ಬಾಲಕಿ ಬುಧವಾರ ಮೃತಪಟ್ಟಿದ್ದಾಳೆ.

    ಚೇತನಾ (3) ಮೃತ ಬಾಲಕಿ. 10 ದಿನಗಳ ಸತತ ಕಾರ್ಯಾಚರಣೆಯ ಬಳಿಕ ಬಾಲಕಿಯನ್ನು ಬೋರ್‌ವೆಲ್‌ನಿಂದ ಹೊರತೆಗೆದು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದರು. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಸಚಿನ್ ಗುತ್ತಿಗೆದಾರನಲ್ವಾ? ಕೇಸ್ ಮುಚ್ಚಿ ಹಾಕಲು ಸರ್ಕಾರದಿಂದ ಸಂಚು?

    ಡಿಸೆಂಬರ್ 23ರಂದು ಮಧ್ಯಾಹ್ನ ಹೊರಗೆ ಆಟವಾಡುತ್ತಿದ್ದ ಸಂದರ್ಭ ಚೇತನಾ ಬೋರ್‌ವೆಲ್‌ಗೆ ಬಿದ್ದಿದ್ದಳು. ಸುಮಾರು 10 ನಿಮಿಷಗಳ ನಂತರ ಆಕೆಯ ಕೂಗು ಕೇಳಿದ ಮನೆಯವರು ಬಂದು ನೋಡಿದಾಗ ಬೋರ್‌ವೆಲ್‌ನಲ್ಲಿ ಬಾಲಕಿ ಸಿಲುಕಿರುವುದು ಕಂಡುಬಂದಿದೆ. ತಕ್ಷಣವೇ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳು, ವೈದ್ಯಕೀಯ ತಂಡದೊಂದಿಗೆ ಆಗಮಿಸಿ ಬಾಲಕಿಯನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದ್ದವು. ಇದನ್ನೂ ಓದಿ: ವರ್ಷದ ಮೊದಲ ದಿನ: 2 ಲಕ್ಷ ಜನರಿಂದ ಅಯೋಧ್ಯೆ ರಾಮನ ದರ್ಶನ!

    ಕಾರ್ಯಾಚರಣೆ ವೇಳೆ ಪೈಪ್ ಮೂಲಕ ಬಾಲಕಿಗೆ ಆಮ್ಲಜನಕವನ್ನು ಪೂರೈಸಲಾಗಿತ್ತು. ಇದಕ್ಕೂ ಮೊದಲು ಹಗ್ಗಕ್ಕೆ ಜೋಡಿಸಲಾದ ಕಬ್ಬಿಣದ ರಿಂಗ್ ಬಳಸಿ ಬಾಲಕಿಯನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಕಾರ್ಯಾಚರಣೆಯನ್ನು ಚುರುಕುಗೊಳಿಸಲು, 50 ಟನ್ ಸಾಮರ್ಥ್ಯದ ಯಂತ್ರವನ್ನು ಬದಲಿಸಿ 100 ಟನ್ ಸಾಮರ್ಥ್ಯದ ಕ್ರೇನ್ ಅನ್ನು ಗುರುವಾರ ತರಲಾಯಿತು. ಶುಕ್ರವಾರ ಈ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದಾದ ಬಳಿಕ ಬಾಲಕಿಗೆ ಆಹಾರ ಮತ್ತು ಆಮ್ಲಜನಕವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಆಕೆಯ ಸ್ಥಿತಿ ಹದಗೆಟ್ಟಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಆದೇಶ

  • ಇನ್ನೂ ಮುಂದೆ ಭಾರತಕ್ಕೆ ಅಂತರ್ಜಲ ಸಂರಕ್ಷಣೆ ಅನಿವಾರ್ಯ! ಯಾಕೆ?

    ಇನ್ನೂ ಮುಂದೆ ಭಾರತಕ್ಕೆ ಅಂತರ್ಜಲ ಸಂರಕ್ಷಣೆ ಅನಿವಾರ್ಯ! ಯಾಕೆ?

    ಭಾರತದ ಜಿಡಿಪಿಗೆ 17% ಕೊಡುಗೆ ನೀಡುವ ಕೃಷಿ, ಕೈಗಾರಿಕೆ ಸೇರಿದಂತೆ ಕಾರ್ಖಾನೆಗಳು, ನೈಸರ್ಗಿಕ ಸಂಪನ್ಮೂಲ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿವೆ. ನೀರಿಲ್ಲದೇ ಯಾವುದೂ ಕೂಡ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೆ ದೇಶವು ವೇಗವಾಗಿ ಅಂತರ್ಜಲ ಕುಸಿತದ ತುದಿಯನ್ನು ತಲುಪುತ್ತಿದೆ.

    ವಿಶ್ವದಲ್ಲಿ ಅತೀ ಹೆಚ್ಚು ಅಂತರ್ಜಲದ ಬಳಕೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದ್ದು, ಅಮೆರಿಕಾ ಹಾಗೂ ಚೀನಾದ ಬಳಕೆಯನ್ನು ಮೀರಿದೆ. ದೇಶದ ವಾಯುವ್ಯ ಭಾಗವು ಕಡಿಮೆ ಅಂತರ್ಜಲ ಮಟ್ಟವನ್ನು ಹೊಂದಿದ್ದು, ಸುಮಾರು 78% ಬಾವಿಗಳು ಬಳಕೆಯಲ್ಲಿವೆ. ಈ ಮೂಲಕ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ದೇಶದ ಅಕ್ಕಿ ಪೂರೈಕೆಯ 50% ಹಾಗೂ 85% ಗೋಧಿಯನ್ನು ಉತ್ಪಾದಿಸುತ್ತವೆ.

    ಭಾರತದಾದ್ಯಂತ ಅಂತರ್ಜಲ ಕುಸಿತದಿಂದಾಗಿ ಆಹಾರ ಭದ್ರತೆಗೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ. ಗಂಗಾ ಮತ್ತು ಸಿಂಧೂ ಬಯಲು ಪ್ರದೇಶಗಳನ್ನು ಒಂದು ಕಾಲದಲ್ಲಿ ಪ್ರಪಂಚದ ಅತ್ಯಂತ ಸಂಪನ್ಮೂಲ-ಸಮೃದ್ಧ ಪ್ರದೇಶಗಳೆಂದು ಪರಿಗಣಿಸಲಾಗಿತ್ತು. ವಿಶೇಷವಾಗಿ ಅಂತರ್ಜಲದ ಲಭ್ಯತೆಯ ದೃಷ್ಟಿಯಿಂದ ಪರಿಗಣಿಸಲಾಗಿತ್ತು. ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಸಾಮಾನ್ಯ ತೋಟಗಾರಿಕೆ ಉಪಕರಣಗಳನ್ನು ಬಳಸಿ ನೆಲ ಅಗೆದರೂ ನೀರು ಸಿಗುತ್ತಿತ್ತು ಎಂಬ ನಂಬಿಕೆಯಿದೆ. ಆದರೆ ಈಗಿನ ಪರಿಸ್ಥಿತಿ ಅದನ್ನು ಸುಳ್ಳು ಎಂದು ಸೂಚಿಸುವಂತೆ ಮಾಡಿದೆ.

    2023ರ ವಿಶ್ವಸಂಸ್ಥೆಯ ವರದಿಯ ಪ್ರಕಾರ, ಪಂಜಾಬ್‌ನಲ್ಲಿನ ಸುಮಾರು 78% ಬಾವಿಗಳನ್ನು ಅತಿಯಾಗಿ ಬಳಸಲಾಗಿದೆ ಎಂದು ಪರಿಗಣಿಸಲಾಗಿದೆ. ಜೊತೆಗೆ ವಾಯುವ್ಯ ಪ್ರದೇಶವು 2025ರ ವೇಳೆಗೆ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸಲಿದೆ ಎಂದು ಊಹಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ ಸರಿಸುಮಾರು 64.6 ಶತಕೋಟಿ ಘನ ಮೀಟರ್‌ಗಳಷ್ಟು ನೀರು ನಷ್ಟವಾಗಿದೆ.

    ಭಾರತದ ಉತ್ತರ ಮತ್ತು ವಾಯುವ್ಯ ಪ್ರದೇಶಗಳು ಅಂತರ್ಜಲ ಕುಸಿತದ ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿಕೊಳ್ಳಲಿದ್ದು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಮತ್ತು ಕೇರಳ ನಾಲ್ಕು ಪ್ರಮುಖ ರಾಜ್ಯಗಳಾಗಲಿವೆ. ಋತುಮಾನಗಳಲ್ಲಿ ನೀರಿನ ಕೊರತೆಯನ್ನು ಪರಿಹರಿಸಲು ದೇಶವು ಅಂತರ್ಜಲವನ್ನು ತೀವ್ರವಾಗಿ ಅವಲಂಬಿಸಿದೆ. ವಿಶೇಷವಾಗಿ ಬೇಸಿಗೆಯಲ್ಲಿ, ಅನಿರೀಕ್ಷಿತ ಬರಗಾಲದಲ್ಲಿ ಅಂತರ್ಜಲವು ಸುಮಾರು 62% ನೀರಾವರಿ ಅಗತ್ಯಗಳನ್ನು, 85% ಗ್ರಾಮೀಣ ನೀರು ಸರಬರಾಜು ಹಾಗೂ 45% ನಗರಗಳಲ್ಲಿ ನೀರನ್ನು ಹರಿಸುತ್ತದೆ. ಈ ಅವಲಂಬನೆ ಅಂತರ್ಜಲ ಕುಸಿತ ತೀವ್ರ ಒತ್ತಡಕ್ಕೆ ತಳ್ಳಲಿದೆ.

    ಮಿಷಿಗನ್ ವಿಶ್ವವಿದ್ಯಾನಿಲಯದ ಅಧ್ಯಯನವು ಭಾರತದಲ್ಲಿ ಅಂತರ್ಜಲ ಕುಸಿತದ ವೇಗವನ್ನು ಎತ್ತಿ ತೋರಿಸುತ್ತದೆ. ಇದು ರಾಷ್ಟ್ರದ ಭವಿಷ್ಯದಲ್ಲಿ ನೀರಿನ ಭದ್ರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಪ್ರಸ್ತುತ ಸ್ಥಿತಿ ಮುಂದುವರಿದರೆ, ಅಂತರ್ಜಲ ಕುಸಿತದ ದರ 2080ರ ವೇಳೆಗೆ ಮೂರು ಪಟ್ಟು ಹೆಚ್ಚಾಗಬಹುದು. ಇದು ಆಹಾರ ಮತ್ತು ನೀರಿನ ಭದ್ರತೆಗೆ ಗಮನಾರ್ಹವಾಗಿ ಅಪಾಯವನ್ನುಂಟುಮಾಡುತ್ತದೆ ಎಂದು ವರದಿ ಊಹಿಸಿದೆ. ಈ ಸ್ಥಿತಿಗೆ ಮೂಲ ಕಾರಣವೆಂದರೆ ತಾಪಮಾನ ಏರಿಕೆ, ಇದು ದೇಶದ ರೈತರನ್ನು ನೀರಾವರಿಗಾಗಿ ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸುವಂತೆ ಮಾಡಿದೆ.

    ಅಂತರ್ಜಲ ಸಂಪನ್ಮೂಲದ ಕುಸಿತವನ್ನು ತಡೆಯಲು ಸರ್ಕಾರವು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದಾದ್ಯಂತ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು ದೇಶದ ಆಹಾರ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಭಾರತದ ದೊಡ್ಡ ಪ್ರದೇಶಗಳು ಮರುಭೂಮಿಯಾಗುವುದನ್ನು ತಡೆಯಲು ಅಂತರ್ಜಲ ಸಂರಕ್ಷಣೆಗಾಗಿ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರುವುದು ಬಹಳ ಮುಖ್ಯ. ಇದು ಅಂತರ್ಜಲದ ಅನಿಯಂತ್ರಿತ ಬಳಕೆಯನ್ನು ಉತ್ತೇಜಿಸುವ ನೀತಿಗಳು ಮತ್ತು ಸಬ್ಸಿಡಿಗಳನ್ನು ಮರುಪರಿಶೀಲಿಸಬೇಕು.

  • ಪುತ್ತೂರಿನಲ್ಲಿ ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

    ಪುತ್ತೂರಿನಲ್ಲಿ ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

    – ಸಣ್ಣ ಸಣ್ಣ ಮಕ್ಕಳು ಕೂಡ ಕಲ್ಲು ತೂರಾಟದಲ್ಲಿ ಭಾಗಿ

    ಮಂಗಳೂರು: ಬೋರ್‌ವೆಲ್ (Borewell) ಕೊರೆಯುತ್ತಿದ್ದ ಲಾರಿ (Lorry) ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಿದ (Stone Pelting) ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಪುರುಷರಕಟ್ಟೆ ಬಳಿ ನಡೆದಿದೆ.

    ನೀರಿನ ಫ್ಯಾಕ್ಟರಿಗೆ ಸೇರಿದ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ನೀರಿನ ಘಟಕದ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುವ ಬದಲು ಹೊಸದಾಗಿ ಬೋರ್‌ವೆಲ್ ಕೊರೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಈ ಬಾರಿ ಶಾಲಾ ಪಠ್ಯ ಪರಿಷ್ಕರಣೆ ಇಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ

    ಸಣ್ಣ ಸಣ್ಣ ಮಕ್ಕಳು ಕೂಡ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ನೀರಿನ ಘಟಕದವರು ಕೂಡ ಕಲ್ಲು ತೂರಾಟ ಮಾಡಿದ್ದಾರೆ. ಪುತ್ತೂರು ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಹೆರಿಗೆಗೂ ಮುನ್ನ ಲಿಂಗಪರೀಕ್ಷೆ- ಗರ್ಭಪಾತವಾಗಿ ಮಹಿಳೆ ಸಾವು

  • ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

    ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

    ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ (Borewell) ಬಿದ್ದ 2 ವರ್ಷದ ಸಾತ್ವಿಕ್‌ ರಕ್ಷಣೆಗಾಗಿ ಅಹೋರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದೆ.

    400 ಅಡಿ ಆಳದ ಕೊಳವೆ ಬಾವಿ ಇದಾಗಿದ್ದು ಕಳೆದ 13 ಗಂಟೆಯಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಳಗಾವಿ, ಕಲಬುರಗಿಯಿಂದ ಎಸ್‌ಡಿಆರ್‌ಎಫ್‌ (NDRF), ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್‌ (NDRF) ತಂಡ ರಾತ್ರಿಯೇ ಸ್ಥಳಕ್ಕೆ ಬಂದಿದೆ. ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಜೊತೆಗೂಡಿದ್ದು ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಸುತ್ತಿದೆ.

     

    20 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದು ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಿ ಮಣ್ಣನ್ನು ಹೊರತೆಗೆದು ಮಗುವಿರುವ ಸ್ಥಳದ ಬಳಿಗೆ ರಕ್ಷಣಾ ತಂಡ ಸಮೀಪಿಸುತ್ತಿದೆ. ಇನ್ನೊಂದು ಅಡಿ ಕೊರೆದರೆ ಮಗುವಿನ ಬಳಿಗೆ ರಕ್ಷಣಾ ತಂಡ ತಲುಪಲಿದೆ. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿದೆ.  ಜಿಲ್ಲಾಡಳಿತ ಪೈಪ್‌ ಮೂಲಕ ಆಕ್ಸಿಜನ್‌ ಕಳುಹಿಸಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದ್ದರಿಂದ ಬಿರುಸಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಬಂದ ದಾರಿಗಿಲ್ಲ ಸುಂಕ – ಅಮಿತ್‌ ಶಾರನ್ನು ಭೇಟಿಯಾಗದೇ ಬರಿಗೈಯಲ್ಲಿ ಈಶ್ವರಪ್ಪ ವಾಪಸ್‌

    ಕಾರ್ಯಾಚರಣೆಗೆ ಬಂಡೆ ಕಲ್ಲುಗಳು ಅಡ್ಡಿಯಾಗುತ್ತಿದ್ದು, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ ಪಿ ಋಷಿಕೇಶ ಸೋನಾವಣೆ, ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಗಮನಿಸುತ್ತಿದ್ದಾರೆ.

    ಸತೀಶ್-ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಕೊಳವೆ ಬಾವಿ ಕೊರೆಸಿದ್ದರು. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಟ್ಟಿದ್ದರು.

     

  • ತೀವ್ರ ಬರ – ಯಾದಗಿರಿ ಜಿಲ್ಲೆಯ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

    ತೀವ್ರ ಬರ – ಯಾದಗಿರಿ ಜಿಲ್ಲೆಯ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

    – 36 ಗ್ರಾಮಗಳಿಗೆ ಖಾಸಗಿ ಬೋರ್ವೆಲ್‌ಗಳಿಂದ ನೀರು ಪೂರೈಕೆ
    – ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ ಮಾಹಿತಿ

    ಯಾದಗಿರಿ: ತೀವ್ರ ಬರದಿಂದಾಗಿ ಯಾದಗಿರಿ (Yadgiri) ಜಿಲ್ಲೆಯಲ್ಲಿ 65 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಿತ್ತಿವೆ. ಆದ್ದರಿಂದ ಜನ – ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ ಸುಶೀಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಡಿಸಿ, ಜಿಲ್ಲೆಯಲ್ಲಿ ಸದ್ಯ 65 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಿತ್ತಿವೆ. 36 ಗ್ರಾಮಗಳಿಗೆ ಖಾಸಗಿ ಬೋರ್ವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ. 28 ಗ್ರಾಮಗಳಿಗೆ ಹೊಸದಾಗಿ ಕೊಳವೆಬಾವಿ ಕೊರೆಯಿಸಿ ನೀರು ಪೂರೈಸಲಾಗುತ್ತಿದೆ. 1 ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಗಳಿದ್ದು, ಈಗಲೇ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿ ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ನೋಡಿದ ಖುಷಿಯಲ್ಲಿ ಏಟುಗಳು ಬಿದ್ರು ನೋವಾಗಲಿಲ್ಲ: ಕೊಹ್ಲಿ ಅಭಿಮಾನಿ ಮಾತು

    ಈಗಾಗಲೇ ನಾವು ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದ್ದೇವೆ. ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ ಗುರುತಿಸಿ, ಮಾಲೀಕರೊಂದಿಗೆ ಎಸ್.ಡಿ.ಆರ್.ಎಫ್ ನಿಯಮಾವಳಿ ಅನ್ವಯ ಒಡಂಬಡಿಕೆ ಮಾಡಿಕೊಳ್ಳಬೇಕು. ತೀವ್ರ ಬರ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಟೆಂಡರ್ ಪ್ರಕ್ರಿಯೆಗಳ ಸಮಸ್ಯೆ ತಕ್ಷಣ ಬಗೆಹರಿಸಿಕೊಳ್ಳಬೇಕು. ಅದಕ್ಕೆ ಸೂಕ್ತ ಟಾಸ್ಕ್‌ ಫೋರ್ಸ್‌ ರಚಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಕೈಯಲ್ಲಿದೆ 55,000 ಕ್ಯಾಶ್‌ – ‘ಕೈ’ ಸಂಸದನ ಆಸ್ತಿ ಎಷ್ಟು ಗೊತ್ತಾ?

    ಅಲ್ಲದೇ ದುರಸ್ತಿ ಇರುವ ಪೈಪ್‌ಲೈನ್‌ಗಳನ್ನು ತಕ್ಷಣವೇ ದುರಸ್ತಿಗೊಳಿಸಿ, ನೀರು ಪೋಲಾಗದಂತೆ ಎಚ್ಚಕೆ ವಹಿಸಬೇಕು. ವಿವಿಧ ಜಲಾಶಯ ಹಾಗೂ ನದಿಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತುವುದನ್ನು ತಡೆಯಬೇಕು. ಆಯಾ ತಹಸಿಲ್ದಾರರು, ವಿದ್ಯುತ್ ಇಲಾಖೆಯ ಅಧಿಕಾರಿಗಳು ತಕ್ಷಣ ಹಾಗೂ ತೀವ್ರ ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಯಾವುದೇ ಪರಿಸ್ಥಿತಿಯಲ್ಲೂ ಜನ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: 2ನೇ ಬಾರಿಗೆ ಆರ್‌ಸಿಬಿ ದಾಖಲೆ ನುಚ್ಚುನೂರು – ಐಪಿಎಲ್‌ ಇತಿಹಾಸದಲ್ಲಿ ಮತ್ತೊಂದು ವಿಶೇಷ ಸಾಧನೆ

  • ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು

    ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು

    ವಿಜಯಪುರ: ಆಟವಾಡಲು ಹೋಗಿದ್ದ 2 ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಸಾತ್ವಿಕ್ ಮುಜಗೊಂಡ (2) ಕೊಳವೆ ಬಾವಿಗೆ ಬಿದ್ದ ಮಗು. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ಘಟನೆ ನಡೆದಿದೆ. ಮಗು ಆಟವಾಡಲು ಹೋಗಿದ್ದ ವೇಳೆ ಹೀಗಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕೋಟಿ ಕೋಟಿ ಆಸ್ತಿ ಒಡತಿ ಶೋಭಾ ಕರಂದ್ಲಾಜೆ ಬಳಿಯಿದೆ 1 ಕೆಜಿ ಚಿನ್ನದ ಬಿಸ್ಕೆಟ್‌ – ಆಸ್ತಿ ಎಷ್ಟಿದೆ ಗೊತ್ತಾ?

    ಮಗುವಿನ ತಂದೆ ಸತೀಶ ಮುಜಗೊಂಡ, ತಾಯಿ ಪೂಜಾ ಮುಜಗೊಂಡ. ಸತೀಶ ಅವರ 4 ಎಕರೆ ಜಮೀನಿನಲ್ಲಿ ಬೋರ್‌ವೆಲ್‌ ಕೊರೆಯಲಾಗಿತ್ತು. ಆದರೆ ಕೊಳವೆ ಬಾವಿ ಮುಚ್ಚಿರುವ ಕೆಲಸ ಮಾಡಿರಲಿಲ್ಲ. ಮಗು ಆಟವಾಡಲು ಹೋಗಿದ್ದಾಗ ಕೊಳವೆ ಬಾವಿಗೆ ಬಿದ್ದಿದೆ.

    ಕಬ್ಬು, ಲಿಂಬೆಗೆ ನೀರಿಲ್ಲ ಎಂದು ಬೋರ್‌ ಹೊಡೆಸಲಾಗಿತ್ತು. 400 ಅಡಿ ವರೆಗೂ ಬಾವಿ ಕೊರೆಸಲಾಗಿದೆ ಎನ್ನಲಾಗಿದೆ.‌ ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಹೈಕೋರ್ಟ್‌ನಲ್ಲಿ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನ – ವ್ಯಕ್ತಿಯ ರಕ್ಷಣೆ

  • ನಮ್ಮ ಮನೆ ಬೋರ್‌ವೆಲ್‌ನಲ್ಲೇ ನೀರಿಲ್ಲ: ಡಿ.ಕೆ ಶಿವಕುಮಾರ್

    ನಮ್ಮ ಮನೆ ಬೋರ್‌ವೆಲ್‌ನಲ್ಲೇ ನೀರಿಲ್ಲ: ಡಿ.ಕೆ ಶಿವಕುಮಾರ್

    – ಡಿಸಿಎಂ ಮನೆಗೂ ತಟ್ಟಿದ ನೀರಿನ ಹಾಹಾಕಾರದ ಬಿಸಿ

    ಬೆಂಗಳೂರು: ನಗರದಲ್ಲಿ (Bengaluru) ಉಂಟಾಗಿರುವ ನೀರಿನ ಹಾಹಾಕಾರದ ಬಿಸಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಗೂ ತಟ್ಟಿದೆ. ನಮ್ಮ ಮನೆಯ ಬೋರ್‌ವೆಲ್‌ನಲ್ಲೂ (Borewell) ನೀರಿಲ್ಲ. ನೀರನ್ನು ಹೊರಗಿನಿಂದ ತರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೇನೂ ಇಲ್ಲ. ಸಲಹೆ ಕೊಟ್ಟರೆ ನಾವು ಸ್ವೀಕಾರ ಮಾಡ್ತೀವಿ. ಚರಿತ್ರೆಯಲ್ಲೇ ಟ್ಯಾಂಕರ್ ಕಂಟ್ರೋಲ್ ಮಾಡಿರೋದು ನಾವು. ಈ ದಂಧೆಗೆ ಕಡಿವಾಣ ಹಾಕಿರೋದು ನಾವು. ಅವರಿಗೆ ಒಂದು ದರ ಫಿಕ್ಸ್ ಕುರಿತು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: ನಾನು ಮೈಸೂರು-ಕೊಡಗು ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ: ಪ್ರತಾಪ್ ಸಿಂಹ

    ಕಾವೇರಿ ನೀರು (Cauvery water) ಹೆಚ್ಚಾಗಿ ಬರುತ್ತಿದೆ. ನೀರಿಗೆ ಹಾಹಾಕಾರ ಇಲ್ಲ ಎಂದು ನಾವು ಹೇಳ್ತಾ ಇಲ್ಲ. ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲದೆ, ಬೇರೆ ಕಡೆಯಿಂದ ತರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾರು ತೊಳೆಯಲು, ದನಕರು ತೊಳೆಯಲು ನೀರನ್ನು ಬಳಸಬೇಡಿ ಎಂದು ಹೇಳಿದ್ದೇವೆ. ಆರ್‌ಓ ವಾಟರ್ ಎಲ್ಲೆಲ್ಲಿ ಕೆಟ್ಟಿದಿಯೋ ಅದನ್ನ ಸರಿ ಮಾಡುತ್ತಿದ್ದೇವೆ ಎಂದಿದ್ದಾರೆ.

    ನೋಡೆಲ್ ಆಫೀಸರ್‌ಗಳನ್ನು ಬೆಂಗಳೂರು ನಗರಕ್ಕೂ ಹಾಕಿದ್ದೇವೆ. ಬೆಂಗಳೂರು ಗ್ರಾಮಾಂತರ ಪೂರ್ತಿ ಬೋರ್‌ವೆಲ್‌ಗಳಿವೆ. ನಗರದಲ್ಲಿ ಕಾವೇರಿ ವಾಟರ್ ಬರುತ್ತದೆ. ಹಾಗಾಗಿ ಅಲ್ಲಿಗೆ ನೋಡಲ್ ಆಫೀಸರ್‌ಗಳನ್ನು ಹಾಕಿದ್ದೇವೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಗೀತಕ್ಕ ಗೆಲ್ತಾರೆ: ಮಧು ಬಂಗಾರಪ್ಪ

  • ಬೆಂಗಳೂರಲ್ಲಿ ಅನಧಿಕೃತ ಬೋರ್‌ವೆಲ್ ಕೊರೆದ್ರೆ ಕಂಪ್ಲೆಂಟ್

    ಬೆಂಗಳೂರಲ್ಲಿ ಅನಧಿಕೃತ ಬೋರ್‌ವೆಲ್ ಕೊರೆದ್ರೆ ಕಂಪ್ಲೆಂಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾವೇರಿ ನೀರಿಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಬೋರ್‌ವೆಲ್ (Borewell) ಕೊರೆಯುವ ಹಾವಳಿ ಜಲಮಂಡಳಿ ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ಅಂತರ್ಜಲದ ಸಮಸ್ಯೆಯಿಂದಾಗಿ ಹಿಗ್ಗಾಮುಗ್ಗ ಬೋರ್‌ವೆಲ್ ಕೊರೆಯುವವರ ಸಂಖ್ಯೆಯೂ ಹೆಚ್ಚಿದೆ. ಅನಧಿಕೃತ ಬೋರ್‌ವೆಲ್ ಕೊರೆಯುವವರಿಗೆ ಜಲಮಂಡಳಿ (BWSSB) ಬಿಗ್ ಶಾಕ್ ಕೊಡೋಕೂ ಸಜ್ಜಾಗಿದೆ.

    ಹೌದು. ಬೆಂಗಳೂರಿನಲ್ಲಿ ಬೋರ್‌ವೆಲ್ ಕೊರೆಯುವ ಮುನ್ನಾ ಅನುಮತಿ ಕಡ್ಡಾಯ ಇದಕ್ಕಾಗಿ ಸಾಕಷ್ಟು ಪ್ರಕ್ರಿಯೆ ಇದೆ. ಹೀಗಾಗಿ ಕಾಯುವ ತಾಳ್ಮೆ ಇಲ್ಲದೇ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಯುವ ಸಾಹಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಜಲಮಂಡಳಿ ಈಗ ಇಂತವರಿಗೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ.

    ಬೆಂಗಳೂರಿನ ಮೇಡಹಳ್ಳಿಯಲ್ಲಿ ಸಾಯಿ ಬಡಾವಣೆಯವರು ಕೂಡ ಇದೇ ಎಡವಟ್ಟನ್ನು ಮಾಡಿದ್ದಕ್ಕೆ ಜಲಮಂಡಳಿಯವರು ಈಗ ಠಾಣೆಯ ಮೆಟ್ಟಿಲೇರಿದ್ದಾರೆ. ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟು ಬೋರ್‌ವೆಲ್ ಕೊರೆಯೋದನ್ನು ನಿಲ್ಲಸಿ ಅನಧಿಕೃತವಾಗಿ ಕೊರೆಯುವವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸರ್ಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರ ದುರ್ಮರಣ, 7 ಮಂದಿ ನಾಪತ್ತೆ

    ಅನಧಿಕೃತವಾಗಿ ಬೋರ್‌ವೆಲ್ ಕೊರೆಯೋದ್ರಿಂದ ಅಂತರ್ಜಲ ಮಟ್ಟ ಕುಗ್ಗುವ ಆತಂಕ ಇದೆ. ಹೀಗಾಗಿ ಜಲಮಂಡಳಿ ಪೊಲೀಸರ ಅಸ್ತ್ರವನ್ನು ಬಳಸಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಯುವವರ ವಿರುದ್ಧ ಸಮರ ಸಾರಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]