Tag: Border Gavaskar

  • ಭಾರತದ ಡ್ರೆಸ್ಸಿಂಗ್ ರೂಮ್ ಮಾತುಕತೆ ಬಹಿರಂಗಪಡಿಸಿದ ಜಡೇಜಾ

    ಭಾರತದ ಡ್ರೆಸ್ಸಿಂಗ್ ರೂಮ್ ಮಾತುಕತೆ ಬಹಿರಂಗಪಡಿಸಿದ ಜಡೇಜಾ

    – ಅಡಿಲೇಡ್ ಟೆಸ್ಟ್ ಸೋಲಿನ ಬಳಿಕ ಆಟಗಾರರ ಮಾತುಕತೆ

    ನವದೆಹಲಿ: ಭಾರತ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗಾವಸ್ಕರ್ ಟ್ರೋಫಿ ಗೆದ್ದ ಬಳಿಕ, ಇದೀಗ ಮೊದಲ ಟೆಸ್ಟ್ ಸೋಲಿನ ನಂತರ ಡ್ರೆಸ್ಸಿಂಗ್ ರೂಮ್‍ನಲ್ಲಿ ಏನೆಲ್ಲಾ ಮಾತುಕತೆ ನಡೆಯಿತು ಎಂಬುದನ್ನು ಭಾರತದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ ಬಹಿರಂಗ ಪಡೆಸಿದ್ದಾರೆ.

    ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿತ್ತು. ಇದರೊಂದಿಗೆ ಭಾರತದ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದು ಎಲ್ಲರ ಟೀಕೆಗೆ ಗುರಿಯಾಗಿತ್ತು. ಈ ನಡುವೆ ಭಾರತಕ್ಕೆ ಕಾಡಿದ ಗಾಯದ ಸಮಸ್ಯೆ ಮತ್ತು ತಂಡದ ನಾಯಕ ವಿರಾಟ್ ಕೊಹ್ಲಿ ತಂಡದಿಂದ ರಜೆ ಪಡೆದು ದೂರ ಹೋದಾಗ ಭಾರತ ಮತ್ತೆ ಹಿನ್ನಡೆಗೆ ಒಳಪಟ್ಟಿತ್ತು.

    ಈ ಎಲ್ಲಾ ಆಗುಹೋಗುಗಳ ನಡುವೆ ಭಾರತ ಆಸ್ಟ್ರೇಲಿಯಾದ ವೇಗಿಗಳ ಉರಿಚೆಂಡಿನ ದಾಳಿಗೆ ತಡೆಯೊಡ್ಡಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಸೆಟೆದುನಿಂತು ಭಾರತ ಸರಣಿ ಜಯಿಸಿಕೊಂಡಿತ್ತು. ಆದರೆ ಇದರ ಹಿಂದೆ ಆಟಗಾರರ ಮನಸ್ಥಿತಿ ಯಾವ ರೀತಿ ಬದಲಾಗಿತ್ತು ಎಂಬುದನ್ನು ಜಡೇಜಾ ರಿವೀಲ್ ಮಾಡಿದ್ದಾರೆ.

    ಮೊದಲ ಟೆಸ್ಟ್ ಸೋಲಿನ ಬಳಿಕ ಎಲ್ಲರೂ ಡ್ರೆಸ್ಸಿಂಗ್ ರೂಮ್‍ನಲ್ಲಿ ಕೂತು ಸೋಲಿನ ಬಗ್ಗೆ ಯೋಚಿಸದೆ ಆಸ್ಟ್ರೇಲಿಯಾಗೆ ಯಾವರೀತಿ ಮುಂದಿನ ಪಂದ್ಯಗಳಲ್ಲಿ ಪ್ರತ್ಯುತ್ತರ ಕೊಡಬಹುದು ಎಂಬುದನ್ನು ಯೋಚಿಸಿದೆವು. ನಾವು ಬರಿ ಮುಂದಿನ ಮೂರು ಪಂದ್ಯಗಳ ಬಗ್ಗೆ ಯೋಚನೆ ಮಾಡಿದೆವು ಹೊರತು ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಎಲ್ಲ ಆಟಗಾರರೂ ತಮ್ಮ ಮನಸ್ಸಿತಿಯನ್ನು ಬದಲಾಯಿಸಿಕೊಂಡು, ಪ್ರತಿಯೊಬ್ಬರು ತಮಗೆ ತಾವೇ ಆತ್ಮಸೈರ್ಯ ತುಂಬಿಕೊಂಡು ಮೈದಾನಕ್ಕೆ ಇಳಿದ ಪರಿಣಾಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಜಡ್ಡು ತಿಳಿಸಿದ್ದಾರೆ.

    ಹಾಗೇ ನಾನು ನನ್ನ ಚಿಂತನೆಯನ್ನು ಬದಲಾಯಿಸಿಕೊಂಡು ಸಕಾರಾತ್ಮಕವಾಗಿ ಚಿಂತಿಸಿ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನಹರಿಸಿದೆ. ಮೈದಾನಕ್ಕೆ ಇಳಿದಾಗ ತಂಡಕ್ಕೆ ನೆರವಾಗಬೇಕೆಂದು ನಾನು ಯೋಚಿಸಿದ ಪರಿಣಾಮ ನನ್ನಿಂದ ಉತ್ತಮ ಪ್ರದರ್ಶನ ಬಂದಿದೆ ಎಂದು ಅಭಿಪ್ರಯಾಪಟ್ಟಿದ್ದಾರೆ.