Tag: booster dose

  • ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ

    ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ

    ಬರ್ನ್/ ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಆರೋಗ್ಯಕಾರ್ಯಕರ್ತರಿಗೆ 6 ಅಥವಾ 12 ತಿಂಗಳ ಬಳಿಕ ಮತ್ತೊಂದು ಬೂಸ್ಟರ್ ಡೋಸ್ (Booster dose) ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ (World Health Organization) ತಜ್ಞರ ಸಮಿತಿ ಸಲಹೆ ನೀಡಿದೆ.

    ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು, ರಕ್ಷಣಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಬೂಸ್ಟರ್ ಡೋಸ್ ನೀಡಬೇಕು. ಒಂದು ವೇಳೆ ಇವರು ಕೋವಿಡ್‍ಗೆ (COVID-19) ತುತ್ತಾದರೆ ಹೆಚ್ಚಿನ ತೊಂದರೆ ಎದುರಿಸ ಬೇಕಾಗಬಹುದು ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.

    ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಯುವಕರಿಗೆ ಈಗಾಗಲೇ ನೀಡಿರುವ ಬೂಸ್ಟರ್ ಡೋಸ್ ಸಾಕಾಗುತ್ತದೆ ಎಂಬ ಅಭಿಪ್ರಾಯವನ್ನು ಸಮಿತಿ ವ್ಯಕ್ತಪಡಿಸಿದೆ.

    9 ಮಂದಿ ಬಲಿ:
    ಕೋವಿಡ್ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು ಶನಿವಾರ 2994 ಪ್ರಕರಣಗಳು ದಾಖಲಾಗಿವೆ. 9 ಮಂದಿ ಸಾವಿಗೀಡಾಗಿದ್ದಾರೆ. ಕೋವಿಡ್‍ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆ ಇರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 16,354ಕ್ಕೆ ಏರಿದೆ. ಪಾಸಿಟಿವಿಟಿ ದರ ಅಪಾಯಕಾರಿ ಮಟ್ಟ ಶೇ.2.09ರಷ್ಟು ದಾಖಲಾಗಿದೆ. ಈ ನಡುವೆ ದೆಹಲಿಯಲ್ಲಿ (Delhi) 416 ಪ್ರಕರಣ ದಾಖಲಾಗಿದ್ದು, 7 ತಿಂಗಳಲ್ಲಿ ಗರಿಷ್ಠ ಪ್ರಮಾಣವಾಗಿದೆ. ಮುಂಬೈನಲ್ಲಿ (Mumbai) 669 ಪ್ರಕರಣಗಳು ದಾಖಲಾಗಿವೆ.

  • ಕೋವಿಡ್‌ನ 2ನೇ ಬೂಸ್ಟರ್ ಡೋಸ್ ಅಗತ್ಯವಿಲ್ಲ: ಆರೋಗ್ಯ ಸಚಿವಾಲಯ ಮೂಲಗಳು

    ಕೋವಿಡ್‌ನ 2ನೇ ಬೂಸ್ಟರ್ ಡೋಸ್ ಅಗತ್ಯವಿಲ್ಲ: ಆರೋಗ್ಯ ಸಚಿವಾಲಯ ಮೂಲಗಳು

    ನವದೆಹಲಿ: ಕೋವಿಡ್-19 (Covid-19) ಸೋಕಿನ ವಿರುದ್ಧ ಹೋರಾಡಲು 2ನೇ ಬೂಸ್ಟರ್ ಡೋಸ್ (2nd Booster Dose) ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಮೊದಲು ನಾವು ದೇಶದಲ್ಲಿ ಕೋವಿಡ್‌ನ ಮೊದಲನೇ ಬೂಸ್ಟರ್ ಡ್ರೈವ್ ಅನ್ನು ಪೂರ್ಣಗೊಳಿಸಬೇಕಿದೆ. ಸದ್ಯ ಮೊದಲನೇ ಬೂಸ್ಟರ್ ಡೋಸ್ ತೆಗೆದುಕೊಂಡಿರುವವರು 2ನೇ ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದೆ.

    ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 220.11 ಕೋಟಿ ಲಸಿಕೆಗಳನ್ನು (Vaccine) ನೀಡಲಾಗಿದ್ದು, ಅದರಲ್ಲಿ 95.13 ಕೋಟಿ ಜನರು 2ನೇ ಡೋಸ್ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ 22.41 ಕೋಟಿ ಜನರು ಮಾತ್ರವೇ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: BPL ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ – ಸರ್ಕಾರ ಆದೇಶ

    ಕೋವಿಡ್‌ನ ಹೊಸ ರೂಪಾಂತರಗಳಿಂದಾಗಿ ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳವಾರ ಭಾರತದಲ್ಲಿ 134 ಹೊಸ ಕೋವಿಡ್ ಕೇಸ್ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,582 ಇದೆ. ಇಲ್ಲಿಯವರೆಗೆ ಸುಮಾರು 4.46 ಕೋಟಿ ಪ್ರಕರಣಗಳು ದಾಖಲಾಗಿವೆ. ಒಟ್ಟು ಕೋವಿಡ್‌ನಿಂದಾಗಿ 5,30,707 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ರ‍್ಯಾಲಿಯಲ್ಲಿ ಕಾಲ್ತುಳಿತಕ್ಕೆ 11 ಸಾವು- ರ‍್ಯಾಲಿ, ಸಾರ್ವಜನಿಕ ಸಭೆಗೆ ಆಂಧ್ರ ಸರ್ಕಾರ ನಿಷೇಧ

    Live Tv
    [brid partner=56869869 player=32851 video=960834 autoplay=true]

  • ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆ- ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಲೆ ಎಷ್ಟು?

    ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆ- ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಲೆ ಎಷ್ಟು?

    ನವದೆಹಲಿ: ಕೋವ್ಯಾಕ್ಸಿನ್ (Covaxin) ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಹೈದರಾಬಾದ್‌ನ ಭಾರತ್ ಬಯೋಟೆಕ್ (Bharat Biotech) ಇಂಟ್ರಾನಾಸನಲ್ ಕೋವಿಡ್ ಲಸಿಕೆಯನ್ನು (Intranasal Covid Vaccine) ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೀಗ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಿಷ್ಟು ಹಣ ಪಾವತಿಸಿ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

    ವರದಿಗಳ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಯನ್ನು ಜಿಎಸ್‌ಟಿ ಹೊರತುಪಡಿಸಿ 800 ರೂ.ಗೆ ಪಡೆದುಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಇದರ ಪ್ರತಿ ಡೋಸ್‌ಗೆ 325 ರೂ. ಬೆಲೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

    ಭಾರತ ಸರ್ಕಾರ ಮೂಗಿನ ಮೂಲಕ ಪಡೆಯಬಹುದಾದ ಲಸಿಕೆಗೆ ಅನುಮೋದನೆ ನೀಡಿದೆ. ಇದನ್ನು ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ತೆಗೆದುಕೊಂಡವರು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದು. ಸೂಜಿ ರಹಿತವಾಗಿರುವ iNCOVACC  ಲಸಿಕೆ ಜನವರಿ 4ನೇ ವಾರದಲ್ಲಿ ಲಭ್ಯವಾಗಲಿದೆ. ಇದನ್ನೂ ಓದಿ: ಜನರಿಗೆ ಮಾಸ್ಕ್ ಹಾಕಿ ಅನ್ನೋ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಿ: ಖಾದರ್ ಆಗ್ರಹ

    ಮೂಗಿನಿಂದ ಪಡೆಯಬಹುದಾದ iNCOVACC  ಲಸಿಕೆಯನ್ನು 2 ಡ್ರಾಪ್‌ನಂತೆ ಹಾಕಲಾಗುತ್ತದೆ. ಒಂದು ಬಾರಿ ಈ ಲಸಿಕೆಯನ್ನು ಪಡೆದ ಬಳಿಕ ಇನ್ನೊಂದು ಲಸಿಕೆಯನ್ನು 4 ವಾರಗಳ ಬಳಿಕ ಹಾಕಿಸಿಕೊಳ್ಳಬೇಕಾಗುತ್ತದೆ.

    ನವೆಂಬರ್‌ನಲ್ಲಿ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ನಂತೆ iNCOVACC  ಲಸಿಕೆಯನ್ನು ನೀಡಬಹುದು ಎಂದು ಅನುಮೋದನೆ ನೀಡಿತ್ತು. ಇದನ್ನೂ ಓದಿ: ವೈಕುಂಠ ಏಕಾದಶಿ, ಸಂಕ್ರಾಂತಿಗೂ ಕೊರೊನಾ ಕರಿನೆರಳು – ದೇವಾಲಯಗಳಿಗೆ ಟಫ್ ರೂಲ್ಸ್?

    Live Tv
    [brid partner=56869869 player=32851 video=960834 autoplay=true]

  • ಶೀಘ್ರವೇ 2ನೇ ಬೂಸ್ಟರ್ ಡೋಸ್? – ಕೇಂದ್ರ ಆರೋಗ್ಯ ಸಚಿವರಿಗೆ ವೈದ್ಯಾಧಿಕಾರಿಗಳ ಡಿಮಾಂಡ್

    ಶೀಘ್ರವೇ 2ನೇ ಬೂಸ್ಟರ್ ಡೋಸ್? – ಕೇಂದ್ರ ಆರೋಗ್ಯ ಸಚಿವರಿಗೆ ವೈದ್ಯಾಧಿಕಾರಿಗಳ ಡಿಮಾಂಡ್

    ನವದೆಹಲಿ: ನೆರೆಯ ರಾಷ್ಟ್ರ ಚೀನಾದಲ್ಲಿ (China) ಕೋವಿಡ್-19 (Covid-19) ಪ್ರಕರಣಗಳು ಹಠಾತ್ತನೆ ಏರಿಕೆ ಕಾಣುತ್ತಿರುವುದರಿಂದ ಭಾರತದಲ್ಲಿ (India) ಮತ್ತೊಂದು ಅಲೆಯ ಭೀತಿಯನ್ನು ಹುಟ್ಟುಹಾಕಿದೆ. ಇದೀಗ ಕೇಂದ್ರ ಸರ್ಕಾರ ಕಟ್ಟುನಿಟ್ಟಾದ ಮಾರ್ಗಸೂಚಿಗಳು ಹಾಗೂ ಸಲಹೆಗಳನ್ನು ನೀಡುವ ಮೂಲಕ ಸೋಂಕು ಹರಡುವಿಕೆ ವಿರುದ್ಧ ಹೋರಾಡಲು ಸಜ್ಜಾಗಿದೆ.

    ಭಾರತದಲ್ಲಿ ಕೊರೊನಾ (Corona) ಹರಡುವುದನ್ನು ತಡೆಗಟ್ಟುವ ಪ್ರಯತ್ನದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತೀಯ ವೈದ್ಯಕೀಯ ಸಂಘದ (IMA) ವೈದ್ಯರು ಹಾಗೂ ಆರೋಗ್ಯ ತಜ್ಞರೊಂದಿಗೆ ಸಭೆ ನಡೆಸಿದ್ದಾರೆ. ಕೋವಿಡ್ ಮತ್ತೆ ಭಾರತಕ್ಕೆ ಪ್ರವೇಶಿಸಿದರೆ ಅದರ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಚರ್ಚೆಯ ವೇಳೆ ವೈದ್ಯಾಧಿಕಾರಿಗಳು ದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ತಡೆಗಟ್ಟಲು ಕೋವಿಡ್-19 ಲಸಿಕೆಯ 2ನೇ ಬೂಸ್ಟರ್ ಡೋಸ್‌ಗೆ ಅನುಮತಿ ನೀಡುವಂತೆ ಮನ್ಸುಖ್ ಮಾಂಡವಿಯಾ ಅವರನ್ನು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿಗೆ ಶಿಕ್ಷಣ ಇಲಾಖೆ ಅಲರ್ಟ್- ಶಾಲಾ-ಕಾಲೇಜುಗಳಲ್ಲಿ ಕೆಲ ನಿಯಮ ಜಾರಿಗೆ ಚಿಂತನೆ

    ವರದಿಗಳ ಪ್ರಕಾರ, ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ನೀಡಲು 1 ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಸಮಯ ಕಳೆದಂತೆ ಲಸಿಕೆಯ ಪ್ರತಿರಕ್ಷೆ ಕ್ಷೀಣಿಸುವುದರಿಂದ ಅಪಾಯದಲ್ಲಿರುವ ಜನರಿಗೆ, ವಿಶೇಷ ವೈದ್ಯರಿಗೆ, ನರ್ಸ್‌ಗಳಿಗೆ, ಇತರ ಆಸ್ಪತ್ರೆ ಸಿಬ್ಬಂದಿಗೆ 4ನೇ ಮುನ್ನೆಚ್ಚರಿಕಾ ಲಸಿಕೆಯನ್ನು ಪಡೆಯಲು ಅನುಮತಿ ನೀಡುವಂತೆ ಸಚಿವರನ್ನು ಕೇಳಲಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

    ದೇಶದಲ್ಲಿ ಕೋವಿಡ್‌ನ ಹೊಸ ರೂಪಾಂತರಗಳು ಹರಡುವುದನ್ನು ತಡೆಯಲು ಜನನಿಬಿಡ ಸ್ಥಳಗಳು ಹಾಗೂ ಹಲವಾರು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಮಾಸ್ಕ್ ಕಡ್ಡಾಯವನ್ನು ಕಟ್ಟುನಿಟ್ಟಾಗಿ ಹೇರಬೇಕು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: 8 ತಿಂಗಳು ಬಂದ್ ಆಗಲಿದೆ ತಿರುಪತಿಯ ಗರ್ಭಗುಡಿ!

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ 12 ರಿಂದ ಕೋವಿಡ್ ಬೂಸ್ಟರ್ ಆಗಿ ವಯಸ್ಕರಿಗೆ ಸಿಗಲಿದೆ ಕಾರ್ಬೆವಾಕ್ಸ್

    ಆಗಸ್ಟ್ 12 ರಿಂದ ಕೋವಿಡ್ ಬೂಸ್ಟರ್ ಆಗಿ ವಯಸ್ಕರಿಗೆ ಸಿಗಲಿದೆ ಕಾರ್ಬೆವಾಕ್ಸ್

    ನವದೆಹಲಿ: ಕೊರೊನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ, ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ 2 ಡೋಸ್ ಪಡೆದ ವಯಸ್ಕರಿಗೆ ಸರ್ಕಾರ ಜೈವಿಕ ಇ ಕಾರ್ಬೆವಾಕ್ಸ್ ನೀಡಲು ಒಪ್ಪಿಗೆ ನೀಡಿದೆ. ಇದು ಆಗಸ್ಟ್ 12 ರಿಂದ ಜಾರಿಗೆ ಬರಲಿದೆ.

    ಈ ನಿರ್ಧಾರದ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದು, ಕೋವಿಡ್-19 ವಿರುದ್ಧ ಭಾರತದ ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ 2 ಡೋಸ್ ಪಡೆದು 6 ಅಥವಾ 26 ವಾರಗಳಾಗಿದ್ದರೆ, ಬೂಸ್ಟರ್ ಡೋಸ್ ಆಗಿ ಕಾರ್ಬೆವಾಕ್ಸ್ ನೀಡಲು ಅನುಮೋದಿಸಿದೆ. ಈ ಕ್ರಮ ಆಗಸ್ಟ್ 12 ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆ – ಶೇ.40 ರಿಂದ 70ರಷ್ಟು ಮರಣ ಸಾಧ್ಯತೆ

    ಭಾರತ ಇದೇ ಮೊದಲ ಬಾರಿಗೆ ಕೋವಿಡ್ ವಿರುದ್ಧದ ಪ್ರಾಥಮಿಕ ಲಸಿಕೆಗಳಿಗಿಂತ ಭಿನ್ನವಾದ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡಿದೆ. ಕಾರ್ಬೆವಾಕ್ಸ್ ಅನ್ನು ಆಗಸ್ಟ್ 12ರಿಂದ ಬೂಸ್ಟರ್ ಡೋಸ್ ಆಗಿ ವಯಸ್ಕರು ಪಡೆಯಬಹುದು. ಇದನ್ನೂ ಓದಿ: ರಾಜ್ಯದಲ್ಲಿಂದು 1,680 ಮಂದಿಗೆ ಕೊರೊನಾ – ಐವರು ಸಾವು

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ‘ಬೂಸ್ಟರ್ ಡೋಸ್’ ಅನ್ನು ‘ವಯಾಗ್ರ’ಕ್ಕೆ ಹೋಲಿಸಿದ ರಾಖಿ ಸಾವಂತ್

    ಕೋವಿಡ್ ‘ಬೂಸ್ಟರ್ ಡೋಸ್’ ಅನ್ನು ‘ವಯಾಗ್ರ’ಕ್ಕೆ ಹೋಲಿಸಿದ ರಾಖಿ ಸಾವಂತ್

    ಕೋವಿಡ್ ಅಪಾಯದಿಂದ ಪಾರಾಗಲು ಬೂಸ್ಟರ್ ಡೋಸ್ ತಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸತತ ಮನವಿ ಮಾಡಿಕೊಳ್ಳುತ್ತಿವೆ. ಆದರೆ, ಬೂಸ್ಟರ್ ಡೋಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ, ಸಖತ್ ಟ್ರೋಲ್ ಆಗಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್. ಬೂಸ್ಟರ್ ಡೋಸ್ ಅನ್ನು ಅವರು ವಯಾಗ್ರಕ್ಕೆ ಹೋಲಿಸಿದ್ದಾರೆ. ಸದ್ಯ ಬೂಸ್ಟರ್ ಡೋಸ್ ತಗೆದುಕೊಂಡಿರುವ ಅವರು ,ಎರಡು ದಿನದಿಂದ ವಯಾಗ್ರ ತಿಂದಂತೆ ನೋವಾಗುತ್ತಿದೆ ಎಂದಿದ್ದಾರೆ.

    ಬಾಯ್ ಫ್ರೆಂಡ್ ಊರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಾಖಿ ಸಾವಂತ್ ಅವರನ್ನು ಪಾಪರಾಜಿಗಳ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ನನ್ನ ಜೀವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಳು ಮಾಡಿಬಿಟ್ಟರು. ಬೂಸ್ಟರ್ ಡೋಸ್ ತಗೆದುಕೊಂಡು ಎದೆಬಡಿತ ಜಾಸ್ತಿ ಅನಿಸುತ್ತಿದೆ. ಎದೆಯೊಳಗೆ ಏನೋನೋ ಆಗುತ್ತಿದೆ. ವಯಾಗ್ರ ತಿಂದಂತಹ ನೋವದು. ಬೂಸ್ಟರ್ ಡೋಸ್ ತಗೆದುಕೊಂಡು ಎರಡು ದಿನದಿಂದ ಒದ್ದಾಡ್ತಾ ಇದ್ದೇನೆ ಎಂದು ಹೇಳಿದರು.  ಇದನ್ನೂ ಓದಿ:ಲಲಿತ್ ಮೋದಿ ಡೇಟಿಂಗ್ ವಿಚಾರ: ಟ್ರೋಲಿಗರಿಗೆ ಸುಶ್ಮಿತಾ ಸೇನ್ ತಿರುಗೇಟು

    ಸದ್ಯ ಬಾಯ್ ಫ್ರೆಂಡ್ ಆದಿಲ್ ಮೈಸೂರಿನಲ್ಲಿದ್ದು, ಅವರನ್ನು ನೋಡಲು ಮೈಸೂರಿಗೆ ತೆರಳುತ್ತಿರುವುದಾಗಿ ರಾಖಿ ಸಾವಂತ್ ಹೇಳಿದರು. ಈ ಕಡೆ ಬಾಯ್ ಫ್ರೆಂಡ್ ಇಲ್ಲ, ಆ ಕಡೆ ಬೂಸ್ಟರ್ ಡೋಸ್ ತಗೆದುಕೊಂಡಿರುವ ನೋವು. ನನ್ನ ಸ್ಥಿತಿ ಯಾರಿಗೂ ಬರಬಾರದು ಅಂದಿರುವ ರಾಖಿ, ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • 18 ತಿಂಗಳಲ್ಲಿ 200 ಕೋಟಿ ಡೋಸ್‌ ಕೊರೊನಾ ಲಸಿಕೆ- ದಾಖಲೆ ಸೃಷ್ಟಿಸಿದ ಭಾರತ

    18 ತಿಂಗಳಲ್ಲಿ 200 ಕೋಟಿ ಡೋಸ್‌ ಕೊರೊನಾ ಲಸಿಕೆ- ದಾಖಲೆ ಸೃಷ್ಟಿಸಿದ ಭಾರತ

    ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ವಿಶ್ವದಲ್ಲೇ ಅತಿದೊಡ್ಡ ಲಸಿಕಾಕರಣವನ್ನು ಪ್ರಾರಂಭಿಸಿದ ಭಾರತವು 18 ತಿಂಗಳಲ್ಲಿ 200 ಕೋಟಿ ಡೋಸ್‌ ಲಸಿಕೆಯನ್ನು ನೀಡುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ.

    ಭಾರತದಲ್ಲಿ 2021ರ ಜನವರಿ 16ರಂದು ಲಸಿಕೆಯನ್ನು ನೀಡಲು ಪ್ರಾರಂಭಿಸಲಾಯಿತು. ಈವರೆಗೆ ದೇಶದಲ್ಲಿ 200 ಕೋಟಿ ಡೋಸ್‌ ಲಸಿಕೆಯನ್ನು ನೀಡುವ ಮೂಲಕ ಮೈಲುಗಲ್ಲನ್ನು ಸಾಧಿಸಿದೆ. ಶನಿವಾರ ರಾತ್ರಿಯವರೆಗೆ ದೇಶಾದ್ಯಂತ 199.97 ಕೋಟಿ ಡೋಸ್‍ ಕೋವಿಡ್ ಲಸಿಕೆಗಳನ್ನು ನೀಡಲಾಗಿದ್ದು, ಇದರಲ್ಲಿ 5.48 ಕೋಟಿ ಬೂಸ್ಟರ್ ಡೋಸ್‍ಗಳು ಸೇರಿವೆ.

    100 ಕೋಟಿ ಡೋಸ್‍ಗಳನ್ನು ತಲುಪಲು 277 ದಿನಗಳನ್ನು ತೆಗೆದುಕೊಂಡಿತ್ತು. ಕಳೆದ ವರ್ಷ ಸೆ. 17ರಂದು, ಒಂದೇ ದಿನದಲ್ಲಿ 2.5 ಕೋಟಿ ಡೋಸ್‍ ಲಸಿಕೆಗಳನ್ನು ನೀಡಲಾಯಿತು. ಇದು ಈವರೆಗಿನ ಗರಿಷ್ಠ ಲಸಿಕಾಕರಣವಾಗಿದೆ.

    ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಭಾರತ ಮತ್ತೆ ಇತಿಹಾಸವನ್ನು ಸೃಷ್ಟಿಸಿದೆ. ಈವರೆಗೆ ದೇಶದಲ್ಲಿ 200 ಕೋಟಿ ಡೋಸ್‍ ಲಸಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆದ ಭಾರತೀಯರಿಗೆಲ್ಲರಿಗೂ ಅಭಿನಂದನೆಗಳು. ಭಾರತದ ಲಸಿಕಾಕರಣದ ಪ್ರಮಾಣ ಹಾಗೂ ವೇಗ ಹೆಚ್ಚಿಸಲು ಕೊಡುಗೆ ನೀಡಿದವರ ಬಗ್ಗೆ ಹೆಮ್ಮೆ ಇದೆ. ಇದು ಕೊರೊನಾ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.

    ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಶೇ. 98ರಷ್ಟು ವಯಸ್ಕರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಹಾಗೂ ಶೇಕಡಾ 90ರಷ್ಟು ವಯಸ್ಕರು ಎರಡು ಡೋಸ್‍ ಲಸಿಕೆಯನ್ನು ಪಡೆದಿದ್ದಾರೆ. ವಿಶ್ವದಲ್ಲಿ 62.1 ಪ್ರತಿಶತದಷ್ಟು ಜನರು ವೈರಸ್ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ.

    ಈವರೆಗೆ ಶೇ. 71ರಷ್ಟು ಜನರು ಗ್ರಾಮೀಣದಲ್ಲಿರುವ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಮತ್ತು ಶೇಕಡಾ 29ರಷ್ಟು ಜನರು ನಗರ ಪ್ರದೇಶಗಳಲ್ಲಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಡೋಸ್‍ಗಳಲ್ಲಿ 48.9 ಪ್ರತಿಶತವನ್ನು ಮಹಿಳೆಯರಿಗೆ ನೀಡಿದರೆ, 51.5 ಪ್ರತಿಶತವನ್ನು ಪುರುಷರಿಗೆ ನೀಡಲಾಗಿದೆ.

    ಈ ವಾರ, ಕೇಂದ್ರ ಆರೋಗ್ಯ ಸಚಿವಾಲಯವು 18ರಿಂದ 59ನೇ ವಯಸ್ಸಿನ ಜನರಿಗೆ ಬೂಸ್ಟರ್ ಡೋಸ್‍ಗಳನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದೆ. ಈವರೆಗೆ ಒಟ್ಟು 5,63,67,888 ಜನರಿಗೆ ಬೂಸ್ಟರ್ ಡೋಸ್‍ಗಳನ್ನು ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 75 ದಿನಗಳಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್ ಡೋಸ್: ಸುಧಾಕರ್

    75 ದಿನಗಳಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್ ಡೋಸ್: ಸುಧಾಕರ್

    ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಉತ್ತಮ ಸಾಧನೆ ಮಾಡಿದ್ದು, ಮುಂದಿನ 75 ದಿನಗಳಲ್ಲಿ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಉಚಿತ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಬೆಂಗಳೂರಿನಲ್ಲಿ ಲಸಿಕಾಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಶೇ.100ಕ್ಕೂ ಅಧಿಕ ಪ್ರಮಾಣದಲ್ಲಿ ಎರಡೂ ಡೋಸ್ ಲಸಿಕೆ ನೀಡಿದೆ. 3ನೇ ಡೋಸ್ ಅನ್ನು ಕೂಡ ಮುಂದಿನ 75 ದಿನಗಳಲ್ಲಿ ರಾಜ್ಯದ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಕೊಡಬೇಕು ಎನ್ನುವ ಗುರಿ ಇದೆ. ಈ ಗುರಿ ತಲುಪಲು ಪೂರಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ರಾಜ್ಯದ ವಿವಿಧೆಡೆ ಏಳೂವರೆ ಸಾವಿರ ಸರ್ಕಾರಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರು ಇದರ ಸಂಪೂರ್ಣ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.

    ಮೋದಿ ಸರ್ಕಾರವು ಇಡೀ ದೇಶಕ್ಕೆ ಕೊರೊನಾ ಲಸಿಕೆಯ 2 ಡೋಸ್‍ಗಳನ್ನು ಉಚಿತವಾಗಿ ನೀಡಿದೆ. ಶುಕ್ರವಾರದಿಂದ ಬೂಸ್ಟರ್ ಡೋಸ್ ಅನ್ನು ಕೂಡ ಉಚಿತವಾಗಿ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಈ ರೀತಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯದ 75 ವಿವಿಧ ಕ್ಷೇತ್ರಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಅಮೃತಹಸ್ತದಿಂದ ಏಕಕಾಲಕ್ಕೆ ಆರಂಭ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಇತ್ತೀಚೆಗೆ ಅನೇಕರಿಗೆ ಕೋವಿಡ್ ಬಂದರೆ ಏನಾಗುತ್ತದೆ ಅನ್ನುವ ಉದಾಸೀನತೆ ಇದೆ. 2 ಡೋಸ್ ಲಸಿಕೆ ತೆಗೆದುಕೊಂಡು 6 ತಿಂಗಳುಗಳ ಮೇಲಾಗಿದೆ. ಇನ್ನೂ ಕೆಲವರು 2ನೇ ಡೋಸ್ ತೆಗೆದುಕೊಂಡು 1 ವರ್ಷದ ಮೇಲಾಗಿದೆ. ಇಂತಹವರಿಗೆ ಅಪಾಯ ಇರುತ್ತದೆ. ಹೀಗಾಗಿ ಲಸಿಕಾಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಇಲ್ಲಿಯ ತನಕ ಕೋವಿಡ್ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಲು ಲಸಿಕಾಕರಣದ ವೇಗವೇ ಕಾರಣವಾಗಿದೆ. ಹೀಗಾಗಿ ಎಲ್ಲರೂ ಬೂಸ್ಟರ್ ಡೋಸ್ ಪಡೆದುಕೊಳ್ಳಿ ಎಂದರು.

    ಮುಖ್ಯಮಂತ್ರಿ ಬೊಮ್ಮಾಯಿ ಅವರು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಶೀಘ್ರದಲ್ಲಿ ರಾಜ್ಯದಲ್ಲಿ 470 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಆರಂಭವಾಗಲಿದೆ. ಮುಂದಿನ ಮೂರು ತಿಂಗಳ ಒಳಗೆ ಈ ಕ್ಲಿನಿಕ್‍ಗಳು ಆರಂಭವಾಗಲಿವೆ. ರಾಜಧಾನಿ ಬೆಂಗಳೂರಿನಲ್ಲಿ 243 ನಮ್ಮ ಕ್ಲಿನಿಕ್ ಆರಂಭವಾಗಲಿದೆ. ಜು. 28ಕ್ಕೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮೊದಲ ಕ್ಲಿನಿಕ್ ಆರಂಭಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದ್ರೌಪದಿ ಮುರ್ಮು ಗೌರವಿಸುತ್ತೇವೆ, ಸಿನ್ಹಾರನ್ನು ಬೆಂಬಲಿಸುತ್ತೇವೆ: ಎಎಪಿ

    ಯಾವ ದೇಶದಲ್ಲೂ ಕೊರೊನಾ ಲಸಿಕೆಯನ್ನು ಉಚಿತ ನೀಡಿಲ್ಲ. ವಿದೇಶದಲ್ಲಿ ಕೊರೊನಾ ಪರೀಕ್ಷೆ ಮಾಡಲು ಕೂಡ 10,000 ರೂ. ಕೊಡಬೇಕು. ಆದರೆ 133 ಕೋಟಿ ಜನರಿರುವ ದೇಶದಲ್ಲಿ ಕೊರೊನಾ ಟೆಸ್ಟ್, ಲಸಿಕೆ ಎಲ್ಲವೂ ಉಚಿತ. ಕೊರೊನಾ ನಿಯಂತ್ರಣ ಮಾಡುವಲ್ಲಿ ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ದೊಡ್ಡದು. ಇಂತಹ ಸಮರ್ಥ ನಾಯಕತ್ವವನ್ನು ಜನರು ಮರೆಯುವ ಹಾಗಿಲ್ಲ ಎಂದರು. ಇದನ್ನೂ ಓದಿ: ಸಚಿವ ಜೆ.ಸಿ ಮಾಧುಸ್ವಾಮಿಗೆ ಆನೆಯಿಂದ ಮಾಲಾರ್ಪಣೆ

    Live Tv
    [brid partner=56869869 player=32851 video=960834 autoplay=true]

  • ಲಕ್ನೋನಲ್ಲಿ ಇಂದಿನಿಂದ ವಯಸ್ಕರಿಗೆ ಬೂಸ್ಟರ್ ಡೋಸ್ ಉಚಿತ

    ಲಕ್ನೋನಲ್ಲಿ ಇಂದಿನಿಂದ ವಯಸ್ಕರಿಗೆ ಬೂಸ್ಟರ್ ಡೋಸ್ ಉಚಿತ

    ಲಕ್ನೋ: ಇಂದಿನಿಂದ ಲಕ್ನೋನ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಎಲ್ಲಾ ವಯಸ್ಕರಿಗೆ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್‍ಗಳನ್ನು ಉಚಿತವಾಗಿ ನೀಡಲು ಉತ್ತರ ಪ್ರದೇಶ ಆರೋಗ್ಯ ಇಲಾಖೆ ಸೂಚಿಸಿದೆ.

    ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜುಲೈ 15 ರಿಂದ 75 ದಿನಗಳವರೆಗೆ ಎಲ್ಲಾ ವಯಸ್ಕರಿಗೆ ಸರ್ಕಾರಿ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್‍ಗಳನ್ನು ಉಚಿತವಾಗಿ ನೀಡುವುದಾಗಿ ಬುಧವಾರ ಕೇಂದ್ರವು ತಿಳಿಸಿತ್ತು.  ಇದನ್ನೂ ಓದಿ: ನಮ್ಗೆ ನ್ಯಾಯ ಬೇಕು, ದುಡ್ಡು ಬೇಡ – ಸಿದ್ದು ಕೊಟ್ಟ 2 ಲಕ್ಷ ರೂ. ಎಸೆದ ಮುಸ್ಲಿಂ ಮಹಿಳೆ

    ಇದಕ್ಕೂ ಮುನ್ನ ಸರ್ಕಾರಿ ಕೇಂದ್ರಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಬೂಸ್ಟರ್ ಡೋಸ್‍ಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. 18 ಮತ್ತು 60 ವರ್ಷ ವಯಸ್ಸಿನ ಜನರು ಹಣ ಪಾವತಿಸಿದ ನಂತರ ಖಾಸಗಿ ಕೇಂದ್ರಗಳಲ್ಲಿ ಲಸಿಕೆಯನ್ನು ಪಡೆಯಬೇಕಾಗಿತ್ತು. ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ಕೊಲೆ ಅಂದ ಸಹೋದರಿ

    ಲಕ್ನೋದಲ್ಲಿ ಇಲ್ಲಿಯವರೆಗೂ 18-44 ವಯಸ್ಸಿನ ಸುಮಾರು 26.68 ಲಕ್ಷ ಮಂದಿ ತಮ್ಮ ಮೊದಲ ಡೋಸ್ ಪಡೆದಿದ್ದಾರೆ. ಸುಮಾರು 22.72 ಲಕ್ಷ ಜನರು ಎರಡನೇ ಡೋಸ್ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ 17,58,99,067 ಜನರು ತಮ್ಮ ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ ಮತ್ತು 16,40,30,246 ಜನರು ತಮ್ಮ ಎರಡನೇ ಡೋಸ್ ಅನ್ನು ಪಡೆದಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ 37,35,194 ಮಂದಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 366 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮತ್ತು ಸುಮಾರು 377 ರೋಗಿಗಳು ಚೇತರಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ ಉಚಿತ: ಕೇಂದ್ರ

    18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ ಉಚಿತ: ಕೇಂದ್ರ

    ನವದೆಹಲಿ: 18ರಿಂದ 59 ವಯೋಮಾನದವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

    ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದೆ. 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಭಾಗವಾಗಿ ಬೂಸ್ಟರ್‌ ಡೋಸ್‌ನ್ನು ದೇಶದ ಜನತೆಗೆ ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಜು.15ರಿಂದ 75 ದಿನಗಳ ವರೆಗೆ ಉಚಿತವಾಗಿ ಬೂಸ್ಟರ್‌ ಡೋಸ್‌ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು RSS, SDPIನಿಂದ ಸಾಧ್ಯವಿಲ್ಲ: ಪಿಣರಾಯಿ ವಿಜಯನ್

    18-59 ವಯೋಮಾನದ 77 ಕೋಟಿ ಜನಸಂಖ್ಯೆ ದೇಶದಲ್ಲಿದ್ದು, ಈ ಪೈಕಿ ಕೇವಲ ಶೇ.1 ಕ್ಕಿಂತ ಕಡಿಮೆ ಮಂದಿ ಬೂಸ್ಟರ್‌ ಡೋಸ್‌ ಪಡೆದುಕೊಂಡಿದ್ದಾರೆ. 60 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಅಂದಾಜು 16 ಕೋಟಿ ಜನರ ಪೈಕಿ ಶೇ.26 ಮಂದಿ ಸೇರಿದಂತೆ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ.

    ಸರ್ಕಾರವು 75 ದಿನಗಳ ಕಾಲ ಲಸಿಕೆ ನೀಡಿಕೆಯ ವಿಶೇಷ ಆಂದೋಲನವನ್ನು ಪ್ರಾರಂಭಿಸಲು ಯೋಜಿಸಿದೆ. ಈ ಅವಧಿಯಲ್ಲಿ 18 ರಿಂದ 59 ವರ್ಷ ವಯಸ್ಸಿನವರಿಗೆ ಜುಲೈ 15 ರಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್‌ ಡೋಸ್‌ನ್ನು ಉಚಿತವಾಗಿ ನೀಡಲಾಗುವುದು. ಇದನ್ನೂ ಓದಿ: ಉತ್ತರ ಪ್ರದೇಶ ಒತ್ತುವರಿ ತೆರವು ಕಾರ್ಯಾಚರಣೆ – ತಡೆ ನೀಡಲ್ಲ ಎಂದ ಸುಪ್ರೀಂ

    ಕೋವಿಡ್‌ ಲಸಿಕೆಯ ಎರಡನೇ ಡೋಸ್ ಮತ್ತು ಬೂಸ್ಟರ್‌ ಡೋಸ್‌ ನಡುವಿನ ಅಂತರವನ್ನು 9ರಿಂದ 6 ತಿಂಗಳಿಗೆ ಇಳಿಸಲಾಗಿದೆ. ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಶಿಫಾರಸನ್ನು ಆಧರಿಸಿ ಅಂತರವನ್ನು ಕಡಿತಗೊಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]