Tag: Boondi Raita

  • ಒಮ್ಮೆ ನೀವೂ ಮಾಡಿ ನೋಡಿ ಬೂಂದಿ ರಾಯಿತ

    ಒಮ್ಮೆ ನೀವೂ ಮಾಡಿ ನೋಡಿ ಬೂಂದಿ ರಾಯಿತ

    ವಿವಿಧ ತರಕಾರಿ, ಹಣ್ಣುಗಳನ್ನು ಬಳಸಿ ನಾವೆಲ್ಲರೂ ರಾಯಿತವನ್ನು ಮಾಡಿ ಸವಿದಿರುತ್ತೇವೆ. ಎಂದಾದರೂ ಬೂಂದಿಯಿಂದ ರಾಯಿತ ಮಾಡಿ ಸವಿದಿದ್ದೀರಾ? ಸಖತ್ ಟೆಸ್ಟ್‌ನೊಂದಿಗೆ ಮಜವಾದ ಕೂಲಿಂಗ್ ಅನುಭವ ನೀಡುವ ಬೂಂದಿ ರಾಯಿತವನ್ನು ಒಮ್ಮೆ ನೀವೂ ಕೂಡಾ ಮಾಡಿ ಸವಿಯಿರಿ. ಬೂಂದಿ ರಾಯಿತ ಮಾಡುವ ಸರಳ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಬೂಂದಿ ತಯಾರಿಸಲು:
    ಕಡಲೆ ಹಿಟ್ಟು – ಒಂದೂವರೆ ಕಪ್
    ಉಪ್ಪು – ಕಾಲು ಟೀಸ್ಪೂನ್
    ನೀರು – 1 ಕಪ್
    ಎಣ್ಣೆ – 1 ಟೀಸ್ಪೂನ್
    ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು
    ರಾಯಿತಗೆ:
    ಬೆಚ್ಚಗಿನ ನೀರು – 1 ಕಪ್
    ಮೊಸರು – 1 ಕಪ್
    ಜೀರಿಗೆ ಪುಡಿ – ಕಾಲು ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಬೂಂದಿ ತಯಾರಿಸಲು ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಕಾಲು ಟೀಸ್ಪೂನ್ ಉಪ್ಪು ಹಾಗೂ 1 ಕಪ್ ನೀರು ಸೇರಿಸಿ ಚೆನ್ನಾಗಿ ಕಲಸಿ.
    * ನಯವಾದ ಹಿಟ್ಟು ಆಗುವವರೆಗೆ ಮಿಕ್ಸ್ ಮಾಡಿ, ಬಳಿಕ 1 ಟೀಸ್ಪೂನ್ ಎಣ್ಣೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ.
    * ಸಣ್ಣ ರಂಧ್ರಗಳಿರುವ ದೊಡ್ಡ ಚಮಚವನ್ನು ತೆಗೆದುಕೊಂಡು, ಅದರ ಮೇಲೆ ತಯಾರಿಸಿದ ಕಡಲೆ ಹಿಟ್ಟನ್ನು ಬಿಸಿ ಎಣ್ಣೆಗೆ ನಿಧಾನವಾಗಿ ಹಾಕಿ.
    * ಕಡಲೆ ಹಿಟ್ಟು ಹನಿಗಳಾಗಿ ಎಣ್ಣೆಗೆ ಬೀಳುವಂತೆ ನೋಡಿಕೊಳ್ಳಿ. ಒಂದೇ ಬಾರಿಗೆ ಸಂಪುರ್ಣ ಹಿಟ್ಟನ್ನು ಸುರಿಯದೇ ಸ್ವಲ್ಪ ಸ್ವಲ್ಪವೇ ಹಾಕಿ ಬೂಂದಿಯನ್ನು ತಯಾರಿಸಿ.
    * ಈಗ ಗರಿಗರಿಯಾದ ಬೂಂದಿಯನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಈಗ ರಾಯಿತ ತಯಾರಿಸಲು ತಣ್ಣಗಾದ ಬೂಂದಿಯನ್ನು ತೆಗೆದುಕೊಳ್ಳಿ(ಬೇಕೆಂದರೆ ಅಂಗಡಿಯಿಂದಲೂ ಖರೀದಿಸಬಹುದು). ಅದನ್ನು ಬೆಚ್ಚಗಿನ ನೀರಿನಲ್ಲಿ 5-10 ನಿಮಿಷ ನೆನೆಸಿಡಿ.
    * ಬಳಿಕ ಬೂಂದಿಯನ್ನು ತೆಗೆದು ಅದರಲ್ಲಿರುವ ನೀರಿನಾಂಶವನ್ನು ನಿಧಾನವಾಗಿ ಹಿಸುಕಿ ಹಾಕಿ, ಪಕ್ಕಕ್ಕೆ ಇರಿಸಿ.
    * ಒಂದು ಬಟ್ಟಲಿನಲ್ಲಿ ಮೊಸರು, ಜೀರಿಗೆ ಪುಡಿ, ಮೆಣಸಿನ ಪುಡಿ ಮತ್ತು ಉಪ್ಪು ತೆಗೆದುಕೊಳ್ಳಿ.
    * ಈಗ ನೆನೆಸಿದ ಬೂಂದಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಪಲಾವ್, ಬಿರಿಯಾನಿ ಅಥವಾ ಪರೋಟಾಗಳೊಂದಿಗೆ ಬೂಂದಿ ರಾಯಿತಾವನ್ನು ಆನಂದಿಸಿ.

    Live Tv
    [brid partner=56869869 player=32851 video=960834 autoplay=true]