Tag: boom

  • ಮಧ್ಯಾಹ್ನ ಕೇಳಿಬಂದ ಭಯಾನಕ ಶಬ್ಧಕ್ಕೆ ಬೆಚ್ಚಿ ಬಿದ್ದ ಬೆಂಗ್ಳೂರು ಜನ

    ಮಧ್ಯಾಹ್ನ ಕೇಳಿಬಂದ ಭಯಾನಕ ಶಬ್ಧಕ್ಕೆ ಬೆಚ್ಚಿ ಬಿದ್ದ ಬೆಂಗ್ಳೂರು ಜನ

    ಬೆಂಗಳೂರು: ಇಂದು ಮಧ್ಯಾಹ್ನ 1.20ರ ವೇಳೆಗೆ ಬೆಂಗಳೂರಿನ ಹಲವೆಡೆ ಬಾರೀ ದೊಡ್ಡ ಶಬ್ಧ ಕೇಳಿಸಿದೆ.

    ಭಯಾನಕ ಶಬ್ಧ ಕೇಳಿದ ಹಿನ್ನೆಲೆಯಲ್ಲಿ ಜನ ಭಯಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಬೆಂಗಳೂರಿನ ಒಂದು ಕಡೆ ಮಾತ್ರ ಕೇಳಿಸಿದ್ರೆ ಯಾವುದೇ ಭಯ ಇರಲಿಲ್ಲ. ಆದರೆ ನಗರದ ಹಲವೆಡೆ ಈ ಶಬ್ಧ ಕೇಳಿಸಿದೆ.

    ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಚ್‍ಎಎಲ್, ಇಸ್ರೋ ಲೇಔಟ್, ವಸಂತಪುರ, ಬನಶಂಕರಿ, ಸೇರಿದಂತೆ ಹಲವೆಡೆ ಈ ಶಬ್ಧ ಕೇಳಿಬಂದಿದೆ.

    ಇದು ಭೂಕಂಪನವಲ್ಲ. ಗೌರಿಬಿದನೂರಿನ ಕಚೇರಿಗೂ ಕರೆ ಮಾಡಿ ಮಾಹಿತಿ ತೆಗೆದುಕೊಂಡಿದ್ದೇವೆ. ಭೂಕಂಪನದ ತೀವೃತೆ ಯಾವುದೂ ದಾಖಲಾಗಿಲ್ಲ. ಭೂಗರ್ಭದ ಧ್ವನಿಯೋ ಅಥವಾ ಯಾವುದು ಎನ್ನುವುದರ ಬಗ್ಗೆ ನಾವು ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‍ಎನ್‍ಡಿಎಂಸಿ) ತಿಳಿಸಿದೆ. ಇದನ್ನೂ ಓದಿ: ಏನಿದು ಸೋನಿಕ್ ಬೂಮ್? ಯುದ್ಧ ವಿಮಾನ ಎಷ್ಟು ವೇಗದಲ್ಲಿ ಹೋದ್ರೆ ಈ ಶಬ್ಧ ಬರುತ್ತೆ?

    ಇದೂವರೆಗೂ ಈ ಶಬ್ಧದ ಮೂಲ ಎಲ್ಲಿದೆ ಇನ್ನುವುದು ಪತ್ತೆಯಾಗಿಲ್ಲ. ಈ ಬಗ್ಗೆ ಜನ ಸಾಮಾಜಿಕ ಜಾಲತಾಣದಲ್ಲಿ ತಮ್ಮದೆ ಅಭಿಪ್ರಾಯವನ್ನು ಹಾಕಿ ಪೋಸ್ಟ್ ಮಾಡುತ್ತಿದ್ದಾರೆ.   ಇದು ಸುಖೋಯ್ ಯುದ್ಧವಿಮಾನದಿಂದ ಆಗಿರುವ ಸೋನಿಕ್ ಬೂಮ್ ಪೊಲೀಸ್ ಮೂಲಗಳು ತಿಳಿಸಿವೆ.