Tag: booking

  • ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಕರಿನೆರಳು | ಹೈದರಾಬಾದ್‌ ಉದ್ಯಮಿ ಸಂರ್ಪಕಿಸಿದ್ರೆ ಕೂಡ್ಲೇ ತಿಳಿಸಿ – ಆಟಗಾರರಿಗೆ ವಾರ್ನಿಂಗ್‌

    ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಕರಿನೆರಳು | ಹೈದರಾಬಾದ್‌ ಉದ್ಯಮಿ ಸಂರ್ಪಕಿಸಿದ್ರೆ ಕೂಡ್ಲೇ ತಿಳಿಸಿ – ಆಟಗಾರರಿಗೆ ವಾರ್ನಿಂಗ್‌

    ಮುಂಬೈ: ಐಪಿಎಲ್‌ನಲ್ಲಿ (IPL) ಮತ್ತೆ ಫಿಕ್ಸಿಂಗ್‌ (Fixing) ಭೂತ ಆವರಿಸಿದೆ. ಹೈದರಾಬಾದ್‌ (Hyderabad) ಮೂಲದ ಉದ್ಯಮಿ ಫಿಕ್ಸಿಂಗ್‌ ಮಾಡಲು ಮುಂದಾಗುತ್ತಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ವರದಿ ಪ್ರಕಟವಾದ ಬೆನ್ನಲ್ಲೇ ಬಿಸಿಸಿಐನ (BCCI) ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಲೀಗ್‌ನ ಎಲ್ಲಾ 10 ತಂಡಗಳಿಗೆ ಎಚ್ಚರಿಕೆ ನೀಡಿದೆ. ಆ ಉದ್ಯಮಿ ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೆ ಕೂಡಲೇ ತಿಳಿಸಿ ಎಂದು ತಂಡಗಳಿಗೆ ಸೂಚಿಸಿದೆ.  ಇದನ್ನೂ ಓದಿ: ಲಕ್ನೋ ಸೂಪರ್‌ ಜೈಂಟ್ಸ್‌ಗೆ ಬಿಗ್‌ ಬೂಸ್ಟ್‌ – ರಾಕೆಟ್‌ ವೇಗಿ ಮಯಾಂಕ್‌ ಯಾದವ್‌ ಕಂಬ್ಯಾಕ್‌

    ಉದ್ಯಮಿ ಯಾರು ಎನ್ನುವುದು ಬಹಿರಂಗವಾಗಿಲ್ಲ. ಆದರೆ ಈ ಉದ್ಯಮಿ ಬುಕ್ಕಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಈ ಹಿಂದೆಯೂ ಬುಕ್ಕಿಗಳ ಜೊತೆ ಆ ಉದ್ಯಮಿಗೆ ಸಂಪರ್ಕ ಇತ್ತು ಎಂದು ವರದಿಯಾಗಿದೆ.

     

    ಅಭಿಮಾನಿಯಂತೆ ನಟಿಸುವ ಮೂಲಕ ಮತ್ತು ದುಬಾರಿ ಆಭರಣಗಳಂತಹ ಉಡುಗೊರೆಗಳನ್ನು ನೀಡುವ ಮೂಲಕ ಆಟಗಾರರು, ತರಬೇತುದಾರರು, ತಂಡದ ಮಾಲೀಕರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸಲಾಗುತ್ತದೆ. ಇದು ವ್ಯಕ್ತಿಗಳನ್ನು ಭ್ರಷ್ಟಾಚಾರದ ಸೆಳೆಯುವ ಸಂಭಾವ್ಯ ಪ್ರಯತ್ನವೆಂದು ಪರಿಗಣಿಸಲಾಗಿದೆ. ಹೀಗಾಗಿ ತಂಡಗಳು ಜಾಗರೂಕವಾಗಿರಬೇಕು ಎಂದು ಸೂಚಿಸಿದೆ.

    ತಂಡ ಉಳಿಯುವ ಹೋಟೆಲ್ ಮತ್ತು ಪಂದ್ಯಗಳ ವೇಳೆಯೂ ಉದ್ಯಮಿ ಕಾಣಿಸಿಕೊಂಡಿದ್ದಾನೆ.ಆಟಗಾರರನ್ನು ಅಥವಾ ಆಟಗಾರರಿಗೆ ಆಪ್ತರಾಗಿರುವವರನ್ನು ತನ್ನ ಖಾಸಗಿ ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದಾನೆ. ತಂಡದ ಸದಸ್ಯರಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೂ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಸೆಳೆಯುತ್ತಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್‌ ರಾಹುಲ್‌, ಮಾವ ಸುನೀಲ್‌ ಶೆಟ್ಟಿ

    ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​ಈಗಾಗಲೇ ಭಾರತದ ಅತ್ಯಂತ ಭ್ರಷ್ಟ ಕ್ರಿಕೆಟ್ ಮಂಡಳಿ ಎಂಬ ಆರೋಪಗಳನ್ನು ಎದುರಿಸುತ್ತಿದೆ. ಈ ಆರೋಪದ ಮಧ್ಯೆ ಹೈದರಾಬಾದ್ ಉದ್ಯಮಿಯ ವಿರುದ್ಧದ ಬಂದಿರುವ ಆರೋಪಗಳು ಮತ್ತಷ್ಟು ಚರ್ಚೆಗಳಿಗೆ ಕಾರಣವಾಗುತ್ತಿವೆ.

    ಈ ಹಿಂದೆ 2013ರ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2016 ಮತ್ತು 2017 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSSSK) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳನ್ನು ಐಪಿಎಲ್​ನಿಂದಲೇ ಬ್ಯಾನ್ (Ban) ಮಾಡಲಾಗಿತ್ತು.

     

  • ಇಂದಿನಿಂದ ‘ಸಲಾರ್’ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್

    ಇಂದಿನಿಂದ ‘ಸಲಾರ್’ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್

    ತೀ ನಿರೀಕ್ಷಿತ ಸಲಾರ್ ಸಿನಿಮಾದ ಟಿಕೆಟ್ ಅನ್ನು ಇಂದಿನಿಂದ ಖರೀದಿಸಬಹುದು ಎಂದು ಹೊಂಬಾಳೆ ಸಂಸ್ಥೆ ತಿಳಿಸಿದೆ. ಕರ್ನಾಟಕದಲ್ಲಿ ಇಂದಿನಿಂದಲೇ ಅಡ್ವಾನ್ಸ್ ಟಿಕೆಟ್ ಬುಕ್ (Booking) ಮಾಡಬಹುದು ಎಂದು ಅದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ಇದನ್ನು ಕಂಡು ಸಹಜವಾಗಿಯೇ ಪ್ರಭಾಸ್ ಫ್ಯಾನ್ಸ್ ಗೆ ಖುಷಿಯಾಗಿದೆ.

    ‘ಸಲಾರ್ ಪಾರ್ಟ್‍ 1: ಸೀಸ್‍ಫೈರ್’. ಪ್ರಶಾಂತ್‍ ನೀಲ್‍ (Prashant Neel) ನಿರ್ದೇಶನದ, ಪ್ರಭಾಸ್‍ ಅಭಿನಯದ ಈ ಚಿತ್ರವು ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಈ ಚಿತ್ರವು ಡಿ.22ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

    ಭಾರತದ ಬೃಹತ್‍ ಆ್ಯಕ್ಷನ್‍ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರದ ‘ಆಕಾಶ ಗಾಡಿಯ’ ಎಂಬ ಮೊದಲ ಲಿರಿಕಲ್‍ ಹಾಡು (Song), ಹೊಂಬಾಳೆ ಫಿಲಂಸ್‍ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆ ಆಗಿದೆ. ಈ ಹಾಡಿಗೆ ಮೊದಲ ದಿನವೇ ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿದೆ.

    ಇದೊಂದು ಭಾವನಾತ್ಮಕ ಹಾಡಾಗಿದ್ದು, ಇಬ್ಬರು ಗೆಳೆಯರ ನಡುವಿನ ಬಾಂಧವ್ಯವನ್ನು ಸಾರುತ್ತದೆ. ಅವರಿಬ್ಬರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ವಿಶ್ಲೇಷಿಸುತ್ತದೆ.  ಈ ಹಾಡನ್ನು ಕಿನ್ನಾಲ್ ರಾಜ್‍ ಬರೆದಿದ್ದು, ವಿಜಯಲಕ್ಷ್ಮೀ ಮೆತ್ತಿನಹೊಳೆ ಹಾಡಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

    ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣ ಪತ್ರ ಪಡೆದಿರುವ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’  (Salaar Part 1) ಚಿತ್ರವು ಎರಡು ಗಂಟೆ 55 ನಿಮಿಷಗಳ ಅವಧಿಯಾಗಿದ್ದು, ಈ ಚಿತ್ರದಲ್ಲಿ ಬೃಹತ್‍ ಪ್ರಮಾಣ ಆ್ಯಕ್ಷನ್‍ ದೃಶ್ಯಗಳಿದೆ.

     

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‍ನಡಿ ವಿಜಯ್‍ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

  • ಗಣೇಶ ಹಬ್ಬ: KSRTC ಬಸ್‌ಗಳಿಗೆ ಫುಲ್ ಡಿಮ್ಯಾಂಡ್ – ಮೂರೇ ದಿನಕ್ಕೆ 22 ಸಾವಿರ ಸೀಟ್ ಬುಕ್ಕಿಂಗ್

    ಗಣೇಶ ಹಬ್ಬ: KSRTC ಬಸ್‌ಗಳಿಗೆ ಫುಲ್ ಡಿಮ್ಯಾಂಡ್ – ಮೂರೇ ದಿನಕ್ಕೆ 22 ಸಾವಿರ ಸೀಟ್ ಬುಕ್ಕಿಂಗ್

    ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಬೆಂಗಳೂರಿನಿಂದ ಸಾವಿರಾರು ಜನರು ತಮ್ಮ-ತಮ್ಮ ಊರಿನತ್ತ ಮುಖ ಮಾಡಿದ್ದು, ಎಲ್ಲ ಬಸ್‌ಗಳು ಫುಲ್ ರಶ್ ಆಗಿ ಪ್ರಯಾಣಿಸುತ್ತಿವೆ.

    ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಈಗಾಗಲೇ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿದ್ದು, ಆದಾಯವೂ ಹರಿದುಬರುತ್ತಿದೆ. ಇಂದಿನಿಂದಲೇ ಬುಕ್ಕಿಂಗ್ ಹೌಸ್‌ಫುಲ್ ಆಗಿದ್ದು, ಸ್ಥಳದಲ್ಲೇ ಟಿಕೆಟ್ ಖರೀದಿಸಿ ಹೋಗುವವರು ನಿಂತುಕೊಂಡೇ ಪ್ರಯಾಣಿಸಬೇಕಿದೆ. ಸದ್ಯ ಮೂರು ದಿನಗಳ ಕಾಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬಾರೀ ಬೇಡಿಕೆ ಹೆಚ್ಚಿದೆ. ಇದನ್ನೂ ಓದಿ: ಅಂದು ಗಾಯಾಳು, ಇಂದು ಮ್ಯಾಚ್ ವಿನ್ನರ್ – ಹಳೆಯ ಘಟನೆ ಬಿಚ್ಚಿಟ್ಟ ಪಾಂಡ್ಯ

    22 ಸಾವಿರ ಸೀಟುಗಳು ಬುಕ್: ಇಂದು (ಆ.29) 8, 8,006, ಆ.30 ರಂದು 9,206, ಆ.31 ರಂದು 5,692 ಸೀಟುಗಳು ಈಗಾಗಲೇ ಕಾಯ್ದಿರಿಸಲಾಗಿದೆ. ಇಂದು 40 ಬಸ್ಸುಗಳು ಹಾಗೂ ನಾಳೆ ಆಗಸ್ಟ್ 30 ರಂದು 67 ಬಸ್ಸುಗಳನ್ನು ಕಾಯ್ದಿರಿಸಲಾಗಿದ್ದು, ಹೆಚ್ಚುವರಿಯಾಗಿ 500 ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಥಾರ್ ಬಿಡುಗಡೆಯಾದ ಆರು ತಿಂಗಳೊಳಗೆ 50 ಸಾವಿರ ದಾಟಿದ ಬುಕ್ಕಿಂಗ್

    ಹೊಸ ಥಾರ್ ಬಿಡುಗಡೆಯಾದ ಆರು ತಿಂಗಳೊಳಗೆ 50 ಸಾವಿರ ದಾಟಿದ ಬುಕ್ಕಿಂಗ್

    ನವದೆಹಲಿ: ‘ಹೊಸ ಥಾರ್’ ಬಿಡುಗಡೆಯಾದ ಆರು ತಿಂಗಳೊಳಗೆ 50 ಸಾವಿರ ಬುಕ್ಕಿಂಗ್ ದಾಟಿದೆ ಎಂದು ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ತಿಳಿಸಿದೆ.

    ಥಾರ್‍ನ ಬೇಡಿಕೆಯನ್ನು ಪೂರೈಸಲು ಮತ್ತು ಗ್ರಾಹಕರಿಗೆ ಕಾಯುವಿಕೆ ಅವಧಿಯನ್ನು ಕಡಿಮೆ ಮಾಡಲು ಕಂಪನಿಯು ನಾಸಿಕ್‍ನಲ್ಲಿರುವ ತನ್ನ ಘಟಕದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ.

    2.2-ಲೀಟರ್ ಎಂ-ಹಾಕ್ ಡೀಸೆಲ್ ಎಂಜಿನ್ ಮತ್ತು 2.0-ಲೀಟರ್ ಎಂ-ಸ್ಟಾಲಿಯನ್ ಪೆಟ್ರೋಲ್ ಎಂಜಿನ್‍ನಲ್ಲಿ ಹೊಸ ಥಾರ್ ಲಭ್ಯವಿದೆ. ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

    ಮಹೀಂದ್ರ ಥಾರ್ ಸುರಕ್ಷತೆಯಲ್ಲಿ ಗ್ಲೋಬಲ್ ಎನ್‍ಕ್ಯಾಪ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ. ಥಾರ್ ಪೆಟ್ರೋಲ್ ಅವತರಣಿಕೆ ರೂ 12.10 – 13.95 ಲಕ್ಷದವರೆಗೆ ಇದ್ದರೆ, ಡೀಸೆಲ್ ಅವತರಣಿಕೆ ರೂ 12.30 – 14.15 ಲಕ್ಷದವರೆಗೆ(ಎಕ್ಸ್-ಶೋರೂಂ) ಇದೆ.

  • ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್‌ – ಮಹೀಂದ್ರಾ ಥಾರ್‌ ಮೈಲುಗಲ್ಲು

    ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್‌ – ಮಹೀಂದ್ರಾ ಥಾರ್‌ ಮೈಲುಗಲ್ಲು

    ಮುಂಬೈ: ಮಹೀಂದ್ರಾ ಕಂಪನಿಯ  ಸ್ಫೋಟ್ಸ್‌ ಯುಟಿಲಿಟಿ ವೆಹಿಕಲ್‌ ಕಾರು ಥಾರ್ ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್‌ ಕಂಡಿದೆ. ಅಕ್ಟೋಬರ್‌ 2 ರಂದು ಥಾರ್‌ ಬಿಡುಗಡೆಯಾಗಿದ್ದು ಈಗಾಗಲೇ 9 ಸಾವಿರ ಬುಕ್ಕಿಂಗ್‌ ಆಗಿದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

    ಬಿಡುಗಡೆಯಾದ ಹೊಸ ಥಾರ್‌ 4*4 ಲೈಫ್‌ಸ್ಟೈಲ್‌ನಲ್ಲಿರುವ ಏಕೈಕ ಎಸ್‌ಯುವಿ. ಬುಕ್ಕಿಂಗ್‌ನಲ್ಲಿ ಕಡಿಮೆ ಅವಧಿಯಲ್ಲಿ ಹೊಸ ಮೈಲಿಗಲ್ಲು ಬರೆದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ದೆಹಲಿಯ ಎಕ್ಸ್‌ ಶೋರೂಮ್‌ನಲ್ಲಿ ಹೊಸ ಥಾರ್‌ ಬೆಲೆ 9.80 ಲಕ್ಷ ರೂ. ನಿಗದಿಯಾಗಿದೆ. ಅಟೋ ತಜ್ಞರ ಮೆಚ್ಚುಗೆಗೆ ಥಾರ್‌ ಪಾತ್ರವಾಗಿದೆ. ಅ.2 ರಂದು ಬಿಡುಗಡೆಯಾದ ಬಳಿಕ 36 ಸಾವಿರ ಮಂದಿ ವಿಚಾರಣೆ ನಡೆಸಿದ್ದಾರೆ 3.3 ಲಕ್ಷ ಮಂದಿ ವೆಬ್‌ಸೈಟಿಗೆ ಭೇಟಿ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಪ್ರತಿ 2 ನಿಮಿಷಕ್ಕೆ 1 ಕಿಯಾ ಸೋನೆಟ್‌ ಕಾರು ಮಾರಾಟ

    ಆಫ್‌ ರೋಡ್‌ ಪ್ರಿಯರು ಈ ಕಾರನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್, ಕನ್ವರ್ಟಬಲ್ ಟಾಪ್ , ಇನ್ಫೋಟೈನ್ಮೆಂಟ್ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಥಾರ್‌ನಲ್ಲಿದೆ. ಮಲೆಯಾಳಂ ನಟ ಪೃಥ್ವಿ ರಾಜ್, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸೇರಿದಂತೆ ಹಲವು ಗಣ್ಯರು ಮಹೀಂದ್ರ ಥಾರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಎಸ್‌ಯುವಿ ವಿಭಾಗದಲ್ಲಿ 12 ದಿನದಲ್ಲಿ ಕಿಯಾ ಸೆಲ್ಟೋಸ್‌ ಕಾರಿಗೆ 12 ಸಾವಿರ ಬುಕ್ಕಿಂಗ್‌ ಆಗಿತ್ತು. ಇದೀಗ ಥಾರ್ ಕೇವಲ 4 ದಿನಕ್ಕೆ ಈ ಸಂಖ್ಯೆ ತಲುಪಿರುವುದು ವಿಶೇಷ. ಆರಂಭಿಕ ಹಂತದಲ್ಲಿ ಭಾರತದ 18 ನಗರಗಳಲ್ಲಿ ಥಾರ್  ಬಿಡುಗಡೆಯಾಗಿದೆ. ಅಕ್ಟೋಬರ್ 10ರೊಳಗಗೆ 100 ನಗರಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

  • ಮುಸ್ಲಿಂ ಪುರುಷ, ಹಿಂದೂ ಮಹಿಳೆಗೆ ಪ್ರವೇಶ ನಿರಾಕರಿಸಿದ ಹೋಟೆಲ್

    ಮುಸ್ಲಿಂ ಪುರುಷ, ಹಿಂದೂ ಮಹಿಳೆಗೆ ಪ್ರವೇಶ ನಿರಾಕರಿಸಿದ ಹೋಟೆಲ್

    ಜೈಪುರ: ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆ ಇಬ್ಬರೂ ಬೇರೆ ಬೇರೆ ಧರ್ಮದವರು ಎಂಬ ಕಾರಣಕ್ಕೆ ಜೈಪುರದ ಹೋಟೆಲ್ ಒಂದು ಪ್ರವೇಶ ನೀಡಲು ನಿರಾಕರಿಸಿದೆ.

    ಜೈಪುರದಲ್ಲಿ ಶನಿವಾರ ಸಹಾಯಕ ಪ್ರಾಧ್ಯಾಪಕರು ಓಯೋದ ಸಿಲ್ವರ್‍ಕೆ ಹೋಟೆಲ್‍ಗೆ ಚೆಕ್ ಇನ್ ಮಾಡಲು ಹೋದಾಗ ಪ್ರವೇಶ ನಿರಾಕರಿಸಲಾಗಿದೆ. ನನ್ನ ಸ್ನೇಹಿತರೊಬ್ಬರು ದೆಹಲಿಯಿಂದ ಜೈಪುರಕ್ಕೆ ಆಗಮಿಸುತ್ತಿದ್ದರು ಹೀಗಾಗಿ ಹೋಟೆಲ್‍ಗೆ ತೆರಳಿದ್ದೇವು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

    ವರದಿಯ ಪ್ರಕಾರ 31 ವರ್ಷದ ಪ್ರಾಧ್ಯಾಪಕ ಟ್ರಾವೆಲ್ ಆ್ಯಪ್ ಮೂಲಕ ಇಬ್ಬರಿಗೆ ರೂಂ ಬುಕ್ ಮಾಡಿದ್ದಾರೆ. ನಂತರ ಚೆಕ್ ಇನ್ ಆಗಲು ಹೋದಾಗ ಹೋಟೆಲ್ ಸಿಬ್ಬಂದಿ ಇನ್ನೊಬ್ಬರ ಹೆಸರನ್ನು ಕೇಳಿದ್ದಾರೆ. ಈ ವೇಳೆ ಅಧ್ಯಾಪಕರು ಹಿಂದೂ ಸ್ನೇಹಿತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಇಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದರಿಂದ ಸಮಸ್ಯೆ ಇದೆ. ಹೀಗಾಗಿ ಹೋಟೆಲ್ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಈ ಬಗ್ಗೆ ಪ್ರಾಧ್ಯಾಪಕ ಪ್ರತಿಕ್ರಿಯಿಸಿ, ಆ್ಯಪ್‍ನಲ್ಲಿ ಹಾಗೂ ಹೋಟೆಲ್ ವೆಬ್‍ಸೈಟ್‍ನಲ್ಲಿ ಇಂತಹ ಯಾವುದೇ ಷರತ್ತುಗಳಿಲ್ಲ. ನೀವು ಹೇಳುತ್ತಿರುವುದು ಸಮಾನತೆಯನ್ನು ಸಾರುವ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

    ಇದಕ್ಕೆ ಸಿಬ್ಬಂದಿ ಪೊಲೀಸರ ಸೂಚನೆಯ ಮೇರೆಗೆ ಈ ನಿಯಮ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಲಿಖಿತ ದಾಖಲೆಯನ್ನು ತೋರಿಸಲು ನಿರಾಕರಿಸಿದ್ದಾರೆ. ಎಲ್ಲಿಯೂ ಅಂತಹ ನಿಯಮ ಅಥವಾ ಕಾನೂನು ಇಲ್ಲ ಎಂದು ನಾನು ವಾದಿಸಿದೆ. ಇಲ್ಲಿ ವಿವಿಧ ಧರ್ಮಗಳು ಮತ್ತು ಲಿಂಗದ ಜನರು ಒಟ್ಟಿಗೆ ಇರುವುದನ್ನು ನಿಷೇಧಿಸಲಾಗಿದೆ ಎಂದು ತಿರಸ್ಕಾರದ ಮಾತುಗಳನ್ನಾಡಿದ್ದಾರೆ. ಈ ಕುರಿತು ಆ್ಯಪ್‍ನಲ್ಲಿ ದೂರು ನೀಡಿದ್ದು, ಬುಕ್ಕಿಂಗ್ ಹಣವನ್ನು ವಾಪಸ್ ಪಡೆದಿದ್ದಾರೆ. ನಂತರ ಬೇರೆ ಹೋಟೆಲ್‍ನ್ನು ಕಾಯ್ದಿರಿಸಿದೆ ಎಂದು ಪ್ರೊಫೆಸರ್ ತಿಳಿಸಿದ್ದಾರೆ.

    ಹೋಟೆಲ್‍ನವರ ನಡವಳಿಕೆಯನ್ನು ಕಂಡು ಆಘಾತವಾಯಿತು. ಇನ್ನೂ 21ನೇ ಶತಮಾನದಲ್ಲಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ. ನಾವಿಬ್ಬರೂ ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ನಡುವೆ ಧರ್ಮವೂ ಎಂದು ಅಡ್ಡಿಬಂದಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

    ಈ ಕುರಿತು ಹೋಟೆಲ್ ವ್ಯವಸ್ಥಾಪಕ ಗೋವರ್ಧನ್ ಸಿಂಗ್ ಪ್ರತಿಕ್ರಿಯಿಸಿ, ಹೋಟೆಲ್ ನೀತಿ ಹಾಗೂ ಪೊಲೀಸ್ ಸೂಚನೆಗಳ ಪ್ರಕಾರ ಬೇರೆ ಬೇರೆ ಧರ್ಮದ ಮಹಿಳೆ ಹಾಗೂ ಪುರುಷರನ್ನು ಒಟ್ಟಿಗೆ ಚೆಕ್-ಇನ್ ಮಾಡಲು ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.

    ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ್ ಈ ಕುರಿತು ಪ್ರತಿಕ್ರಿಯಿಸಿ, ಪೊಲೀಸರಿಂದ ಯಾವುದೇ ರೀತಿಯ ಲಿಖಿತ ಅಥವಾ ಮೌಖಿಕ ಸೂಚನೆಗಳಿಲ್ಲ. ಹೋಟೆಲ್‍ಗಳು ಪೊಲೀಸರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ದೂರಿದರು. ಓಯೋ ಟ್ರಾವೆಲ್ ಆ್ಯಪ್ ಈ ಕುರಿತು ಸ್ಪಷ್ಟಪಡಿಸಿದ್ದು, ಹೋಟೆಲ್ ವ್ಯವಸ್ಥಾಪಕರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

  • ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕ್ ಬಿಡುಗಡೆ: ಬೆಲೆ ಎಷ್ಟು?

    ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕ್ ಬಿಡುಗಡೆ: ಬೆಲೆ ಎಷ್ಟು?

    ನವದೆಹಲಿ: ರಾಯಲ್ ಎನ್‍ಫೀಲ್ಡ್ ಕಂಪೆನಿಯು ಭಾರತೀಯ ಸೇನೆಗೆ ಗೌರವಾರ್ಥಕವಾಗಿ ತನ್ನ ನೂತನ ಕ್ಲಾಸಿಕ್ ಸಿಗ್ನಲ್ 350 ಎಬಿಎಸ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಮಾಡಿದೆ.

    ಭಾರತೀಯ ಸೇನೆಯೊಂದಿಗೆ 1952 ರಿಂದ ಸುದೀರ್ಘ 65 ವರ್ಷಗಳ ಪಯಣವನ್ನು ಮುಂದುವರಿಸಿರುವ ರಾಯಲ್ ಎನ್‍ಫೀಲ್ಡ್ ಮೋಟಾರ್‌ಸೈಕಲ್ ತಯಾರಿಕಾ ಸಂಸ್ಥೆಯು, ಸೇನೆಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ತನ್ನ ನೂನತ ಕ್ಲಾಸಿಕ್ ಸಿಗ್ನಲ್ 350 ಎಬಿಎಸ್ ಆವೃತ್ತಿಯನ್ನು ಬಿಡುಗಡೆಮಾಡಿದೆ.

    ವಿಶೇಷವಾಗಿ ಈ ಬಾರಿಯ ಬೈಕಿನ ಇಂಜಿನ್ ಹಾಗೂ ಚಕ್ರದ ರಿಮ್ ಅನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ನಿರ್ಮಿಸಿದ್ದು, ಪ್ರತಿ ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಸೇನೆಯ ವಿಶಿಷ್ಟವಾದ ಸರಣಿಯ ಸಂಖ್ಯೆಯನ್ನು ಮುದ್ರಿಸಿದೆ.

    ಏನಿದು ಎಬಿಎಸ್?
    ಪ್ರಸ್ತುತ ಬೈಕ್ ಮತ್ತು ಕಾರುಗಳಲ್ಲಿ ವೇಗವನ್ನು ಕೂಡಲೇ ನಿಯಂತ್ರಿಸಲು ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಅಳವಡಿಸಲಾಗಿರುತ್ತದೆ. ವೇಗವಾಗಿ ಹೋಗುತ್ತಿದ್ದಾಗ ಸಡನ್ ಆಗಿ ಬ್ರೇಕ್ ಹಾಕಿದಾಗ ವಾಹನ ಪಲ್ಟಿ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇದ್ದಾಗ ಸ್ವಲ್ಪ ಅಪಾಯ ಜಾಸ್ತಿ ಇರುತ್ತದೆ. ಈ ಅಪಾಯವನ್ನು ತಪ್ಪಿಸಲು ಬ್ರೇಕ್ ಹಿಡಿದ ಕೂಡಲೇ ವೇಗವನ್ನು ನಿಯಂತ್ರಿಸಲು ಎಬಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಸಾಧಾರಣವಾಗಿ ಸ್ಫೋರ್ಟ್ಸ್ ಬೈಕ್ ಗಳಲ್ಲಿ ಎಬಿಎಸ್ ಹೊಂದಿರುವ ಮತ್ತು ಎಬಿಎಸ್ ಇಲ್ಲದ ಮಾದರಿಗಳು ಮಾರುಕಟ್ಟೆಯಲ್ಲಿರುತ್ತದೆ. ಎಬಿಎಸ್ ಹೊಂದಿರುವ ಬೈಕ್ ಬೆಲೆ ಜಾಸ್ತಿ ನಿಗದಿಯಾಗಿರುತ್ತದೆ.

    ಬೆಲೆ ಎಷ್ಟು? ಯಾವ ಬಣ್ಣಗಳಲ್ಲಿ ಸಿಗುತ್ತೆ?
    ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕಿನ ಬೆಲೆ ಅಂದಾಜು 1.68 ಲಕ್ಷ ರೂಪಾಯಿಗಳಾಗಿದ್ದು, ಹಳೆಯ ಕ್ಲಾಸಿಕ್ ಮಾದರಿಗಿಂತ 16 ಸಾವಿರ ರೂ. ಹೆಚ್ಚಿರಲಿದೆ. ಗ್ರಾಹಕರು ಈ ಮಾದರಿಯನ್ನು ಬುಕ್ಕಿಂಗ್ ಮಾಡಲು ನೇರವಾಗಿ ಷೋರೂಂಗಳಿಗೆ ತೆರಳಬೇಕಾಗಿದೆ. ಯಾವುದೇ ಆನ್‍ಲೈನ್ ಬುಕ್ಕಿಂಗ್ ಇಲ್ಲ. ನೂತನ ಕ್ಲಾಸಿಕ್ ಸಿಗ್ನಲ್ಸ್ ಕೇವಲ ಎರಡು ಬಣ್ಯಗಳಲ್ಲಿ ಲಭ್ಯವಿದ್ದು, ಒಂದು ಏರ್‌ಬಾರ್ನ್ ಬ್ಲೂ ಹಾಗೂ ಸ್ಟೋರ್ಮ್‍ರೈಡ್ ಸ್ಯಾಂಡ್ ಬಣ್ಣಗಳಲ್ಲಿ ಲಭ್ಯವಿದೆ.

    ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಎಂಜಿನ್ ಮತ್ತು ಸಸ್ಪೆನ್ಷನ್:
    346 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 19.8-ಬಿಎಚ್‍ಪಿ @ 5250 ಆರ್‌ಪಿಎಂ ಜೊತೆಗೆ 28-ಎನ್‍ಎಂ ಟಾರ್ಕ್ ಹಾಗೂ 4000 ಆರ್‌ಪಿಎಂ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಫ್ರಂಟ್ ಸಸ್ಪೆನ್ಷನ್ ಟೆಲಿಸ್ಕೋಪಿಕ್ 35 ಎಂಎಂ ಫೋರ್ಕ್ಸ್ 130 ಎಂಎಂ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಟ್ವಿನ್ ಗ್ಯಾಸ್ 5-ಹಂತದಲ್ಲಿ ಹೊಂದಾಣಿಕೆಯ ಮಾಡುವ 80 ಎಂಎಂ ಸಸ್ಪೆನ್ಷನ್ ಹೊಂದಿದೆ.

    ಬ್ರೇಕ್ ಹಾಗೂ ಟೈರ್ ಗಳು:
    ಮುಂದುಗಡೆ 90/90 ಅಳತೆಯ 19 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಬ್ರೇಕ್ ಹೊಂದಿದ್ದು, ಹಿಂದುಗಡೆ 120/80 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಜೊತೆಗೆ ಎಬಿಎಸ್(ಆ್ಯಂಟಿಲಾಕ್ ಬ್ರೇಕಿಂಗ್) ಸಿಸ್ಟಮ್ ಅನ್ನು ಹೊಂದಿದೆ.

    ಸುತ್ತಳತೆ ಹಾಗೂ ತೂಕ:
    ಬೈಕ್ ನ ಉದ್ದ x ಅಗಲ x ಎತ್ತರ: 2160ಎಂಎಂ x 790ಎಂಎಂ x 1090ಎಂಎಂ ಆಗಿದ್ದು, ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ ಆಗಿದೆ. ಇಂಧನ ಸಾಮರ್ಥ್ಯ 13.5 ಲೀಟರ್ ಆಗಿದ್ದು, ಒಟ್ಟು ತೂಕ 134 ಕೆಜಿ ಇದೆ.

    ಇತರೆ ಫೀಚರ್ ಗಳು:
    ಹ್ಯಾಂಡಲ್ ಬಾರ್, ಹೆಡ್‍ಲೈಟ್, ಎಕ್ಸಾಸ್ಟ್ ಮಫ್ಲರ್, ಲೆದರ್ ಸ್ಟ್ಯಾಪ್, ಕ್ರಶ್ ಗಾರ್ಡ್, ಸೈಡ್ ಬ್ಯಾಗ್ಸ್ ಹಾಗೂ ದೊಡ್ಡದಾದ ವಿಂಡ್ ಸ್ಕ್ರೀನ್ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾಖಲೆ ನಿರ್ಮಿಸಿದ ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 500 ಪೆಗಾಸಸ್ ಬೈಕ್: ಬೆಲೆ ಎಷ್ಟು? ವೈಶಿಷ್ಟ್ಯವೇನು?

    ದಾಖಲೆ ನಿರ್ಮಿಸಿದ ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 500 ಪೆಗಾಸಸ್ ಬೈಕ್: ಬೆಲೆ ಎಷ್ಟು? ವೈಶಿಷ್ಟ್ಯವೇನು?

    ನವದೆಹಲಿ: ಜನಪ್ರಿಯ ಬೈಕ್ ತಯಾರಿಕಾ ಕಂಪೆನಿಯಾದ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತನ್ನ ನೂತನ ಲಿಮಿಟೆಡ್ ಆವೃತ್ತಿಯ ಕ್ಲಾಸಿಕ್ 500 ಪೆಗಾಸಸ್ ಬೈಕನ್ನು ಆನ್‍ಲೈನ್‍ನಲ್ಲಿ 178 ಸೆಕೆಂಡ್‍ನಲ್ಲಿ ಮಾರಾಟ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

    ಹೌದು, ರಾಯಲ್ ಎನ್‍ಫೀಲ್ಡ್ ತನ್ನ ನೂತನ ಮಾದರಿ ಹಾಗೂ ಲಿಮಿಟೆಡ್ ಎಡಿಷನ್ ನ ಕ್ಲಾಸಿಕ್ 500 ಪೆಗಾಸಸ್ ಬೈಕನ್ನು ಬುಧವಾರ ಸಂಜೆಯಿಂದ ಆನ್‍ಲೈನ್ ಬುಕ್ಕಿಂಗ್ ಪ್ರಾರಂಭಿಸಿತ್ತು. ಈ ವೇಳೆ ಬಿಡುಗಡೆಗೊಂಡ ಕೇವಲ 178 ಸೆಕೆಂಡುಗಳಲ್ಲೇ ಎಲ್ಲಾ ಬೈಕ್‍ಗಳು ಸೋಲ್ಡ್ ಔಟ್ ಆಗಿದೆ.

    ಕ್ಲಾಸಿಕ್ 500 ಪೆಗಾಸಸ್ ಆವೃತ್ತಿಯು ರಾಯಲ್ ಎನ್‍ಫೀಲ್ಡ್ ನಲ್ಲಿ ಲಿಮಿಟೆಡ್ ಎಡಿಷನ್ ಆಗಿದ್ದು, ಒಟ್ಟಾರೆ ವಿಶ್ವದಲ್ಲಿ ಕೇವಲ 1000 ಬೈಕ್‍ಗಳನ್ನು ರೋಡಿಗಿಳಿಸಲು ಸಂಸ್ಥೆ ನಿರ್ಧರಿಸಿತ್ತು. ಭಾರತೀಯ ಗ್ರಾಹಕರಿಗಾಗಿ 250 ಬೈಕುಗಳನ್ನು ಮೀಸಲಿಟ್ಟಿತ್ತು. ಭಾರತದಲ್ಲಿ ಬಿಡುಗಡೆಗೊಂಡ ಬಳಿಕ ನೂತನ ಪೆಗಾಸಸ್ ಬೈಕ್ 178 ಸೆಕೆಂಡ್‍ನಲ್ಲಿ ಸೋಲ್ಡ್ ಔಟ್ ಆಗಿ ದಾಖಲೆ ನಿರ್ಮಿಸಿದೆ.

    ಈ ಮೊದಲು ಸಂಸ್ಥೆ ಜುಲೈ 18 ರಂದು ಬುಕ್ಕಿಂಗ್ ಶುರುಮಾಡಿತ್ತು, ಆದರೆ ಸಾವಿರಾರು ಬುಲೆಟ್ ಪ್ರೇಮಿಗಳು ಇದನ್ನು ಖರೀದಿಸಲು ಮುಗಿಬಿದ್ದಿದ್ದರು. ಅಲ್ಲದೇ ಅತಿ ಹೆಚ್ಚಿನ ಗ್ರಾಹಕರು ಏಕಕಾಲಕ್ಕೆ ಬೈಕ್ ಬುಕ್ಕಿಂಗ್‍ಗೆ ಪ್ರತಿಕ್ರಿಯಿಸಿದ್ದರಿಂದ ವೆಬ್‍ಸೈಟ್‍ನಲ್ಲಿ ತಾಂತ್ರಿಕದೋಷ ಕಾಣಿಸಿತ್ತು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಬುಲೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯು ವೆಬ್‍ಸೈಟನ್ನು ಸರಿಪಡಿಸಿ ನೂತನ ಮಾದರಿಯನ್ನು ಬುಧವಾರ ಸಂಜೆಯಿಂದ ಆರಂಭಿಸುವುದಾಗಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು.

    ಕ್ಲಾಸಿಕ್ 500 ಪೆಗಾಸಸ್ ವಿಶೇಷತೆ ಏನು?
    2ನೇ ಮಹಾಯುದ್ಧದಲ್ಲಿ `ಫ್ಲೈಯಿಂಗ್ ಫ್ಲಿಯಾ’ ಎಂದು ಜನಪ್ರಿಯವಾಗಿದ್ದ (RE/WD125) ಮೊಟಾರ್ ಸೈಕಲ್ ಪ್ರೇರಣೆಯಿಂದ ಕ್ಲಾಸಿಕ್ 500 ಪೆಗಾಸಸ್ ಬೈಕನ್ನು ಕಂಪೆನಿ ವಿನ್ಯಾಸಗೊಳಿಸಿತ್ತು. ಯುದ್ಧದ ವೇಳೆ ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಸೈನಿಕರು ಬಳಸಿದ್ದ ಬೈಕುಗಳನ್ನು ಹೋಲುವ ರೂಪದಲ್ಲಿಯೇ ನಿರ್ಮಿಸಿದೆ.

    ಬೆಲೆ ಎಷ್ಟು? ಯಾವ ಬಣ್ಣಗಳಲ್ಲಿ ಸಿಗುತ್ತೆ?
    ಭಾರತದಲ್ಲಿ ಕ್ಲಾಸಿಕ್ 500 ಪೆಗಾಸಸ್‍ನ ಬೆಲೆ ದೆಹಲಿ ಎಕ್ಸ್ ಶೋ ರೂಂಗೆ 2.4 ಲಕ್ಷ ರೂಪಾಯಿ ಆಗಿದೆ. ಈ ಲಿಮಿಟೆಡ್ ಎಡಿಷನ್‍ನ ಬುಲೆಟ್ ಕೇವಲ ಎರಡು ಬಣ್ಯಗಳಲ್ಲಿ ಲಭ್ಯವಿದ್ದು, ಒಂದು ಸೈನ್ಯದ ಬಣ್ಣವನ್ನು ಪ್ರತಿನಿಧಿಸುವ ಸರ್ವೀಸ್ ಬ್ರೌನ್ ಆಗಿದ್ದರೆ ಮತ್ತೊಂದು ಒಲಿವ್ ಡ್ರಾಬ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿತ್ತು.

    ಕ್ಲಾಸಿಕ್ 500 ಪೆಗಾಸಸ್ ಎಂಜಿನ್ ಮತ್ತು ಸಸ್ಪೆನ್ಷನ್:
    ಕ್ಲಾಸಿಕ್ 500 ಪೆಗಾಸಸ್ ಬೈಕ್‍ಗಳು 499 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ 27.2-ಬಿಎಚ್‍ಪಿ ಮತ್ತು 41.3-ಎನ್‍ಎಂ ಟಾರ್ಕ್ ಹಾಗೂ 4000 ಆರ್ ಪಿಎಂ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಫ್ರಂಟ್ ಸಸ್ಪೆನ್ಷನ್ ಟೆಲಿಸ್ಕೋಪಿಕ್ 35 ಎಂಎಂ ಫೋಕ್ರ್ಸ್ 130 ಎಂಎಂ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಟ್ವಿನ್ ಗ್ಯಾಸ್ 5-ಹಂತದಲ್ಲಿ ಹೊಂದಾಣಿಕೆಯ ಮಾಡುವ 80 ಎಂಎಂ ಸಸ್ಪೆನ್ಷನ್ ಹೊಂದಿದೆ.

    ಬ್ರೇಕ್ ಹಾಗೂ ಟೈರ್ ಗಳು:
    ಮುಂದುಗಡೆ 90/90 ಅಳತೆಯ 19 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಹಿಂದುಗಡೆ 120/80 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.

    ಸುತ್ತಳತೆ ಹಾಗೂ ತೂಕ:
    ಪೆಗಾಸಸ್ ಬೈಕ್ ನ ಉದ್ದxಅಗಲxಎತ್ತರ: 2140ಎಂಎಂ x 790ಎಂಎಂ x 1090ಎಂಎಂ ಆಗಿದ್ದು, ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ ಆಗಿದೆ. ಇಂಧನ ಸಾಮರ್ಥ್ಯ 13.5 ಲೀಟರ್ ಆಗಿದ್ದು, ಒಟ್ಟು ತೂಕ 194 ಕೆಜಿ ಇದೆ.

    ಇತರೆ ಫೀಚರ್ ಗಳು:
    ಹ್ಯಾಂಡಲ್ ಬಾರ್, ಹೆಡ್‍ಲೈಟ್, ಎಕ್ಸಾಸ್ಟ್ ಮಫ್ಲರ್, ಲೆದರ್ ಸ್ಟ್ಯಾಪ್, ಕ್ಯಾನವಾಸ್ ಪ್ಯಾನಿಯರ್ಸ್ ಮತ್ತು ಫ್ಯೂಲ್ ಟ್ಯಾಂಕ್ ಮೇಲೆ ಪೆಗಾಸಸ್ ಲೊಗೊ ಬೈಕಿನ ಅಂದವನ್ನು ಹೆಚ್ಚಿಸಿದೆ. RE/WD125 ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಚಾಸಿಸ್, ಬ್ರೇಕ್ ಹಾಗೂ ಟೈಯರ್ ಗಳು ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 500 ಮಾದರಿಯನ್ನೇ ಹೋಲುತ್ತದೆ.

  • ಇನ್ಮುಂದೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲೂ ಎಲ್‍ಪಿಜಿ ಸಿಲಿಂಡರ್ ಬುಕ್ ಮಾಡಬಹುದು

    ಇನ್ಮುಂದೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲೂ ಎಲ್‍ಪಿಜಿ ಸಿಲಿಂಡರ್ ಬುಕ್ ಮಾಡಬಹುದು

    ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಮೂಲಕ ಎಲ್‍ಪಿಜಿ ಸಿಲಿಂಡರ್‍ಗಳನ್ನ ಬುಕ್ ಮಾಡುವ ವ್ಯವಸ್ಥೆಯನ್ನ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪರಿಚಯಿಸಿದೆ.

    ಈವರೆಗೆ ಗ್ರಾಹಕರು ಫೋನ್ ಅಥವಾ ಮೆಸೇಜ್ ಮೂಲಕ ಗ್ಯಾಸ್ ಸಿಲಿಂಡರ್‍ಗಳನ್ನ ಬುಕ್ ಮಾಡಬಹುದಿತ್ತು. ಇನ್ಮುಂದೆ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದಾಗಿದೆ.

    ಪ್ರಧಾನಿ ಮೋದಿ ಡಿಜಿಟಲೈಸೇಷನ್‍ಗೆ ಒತ್ತು ನೀಡುತ್ತಿರೋ ಸಮಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೊಸ ಡಿಜಿಟಲ್ ಬುಕಿಂಗ್ ಸೇವೆಯನ್ನ ಆರಂಭಿಸಿದೆ. ಈ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್, ತೈಲೋತ್ಪನ್ನ ಕಂಪನಿಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ರೀಫಿಲ್ಲಿಂಗ್ ಸೇವೆ ಒದಗಿಸುತ್ತಿರೋ ಮೊದಲ ಸಂಸ್ಥೆ ಎನಿಸಿಕೊಂಡಿದೆ.

    ಫೇಸ್‍ಬುಕ್ ಮೂಲಕ ಇಂಡೇನ್ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ
    * ಫೇಸ್‍ಬುಕ್‍ಗೆ ಲಾಗಿನ್ ಆಗಬೇಕು.
    * ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ ಅಧಿಕೃತ ಫೇಸ್‍ಬುಕ್ ಪೇಜ್ IndianOilCorpLimited ಗೆ ಭೇಟಿ ನೀಡಿ.
    * ಬುಕ್ ನೌ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

    ಟ್ವಿಟ್ಟರ್‍ನಲ್ಲಿ ಇಂಡೇನ್ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ
    * ರೀಫಿಲ್ @indianoilcorplimited ಎಂದು ಟ್ವೀಟ್ ಮಾಡಿ
    * ಮೊದಲ ಬಾರಿಯ ರಿಜಿಸ್ಟ್ರೇಷನ್‍ಗಾಗಿ ರಿಜಿಸ್ಟರ್ ಎಲ್‍ಪಿಜಿಐಡಿ ಎಂದು ಟ್ವೀಟ್ ಮಾಡಿ.