Tag: book

  • ಪಠ್ಯ ಪುಸ್ತಕದಲ್ಲೂ ಗೋಲ್ ಮಾಲ್- ಎನ್‍ಸಿಇಆರ್ ಟಿಯಿಂದ ಸರ್ಕಾರಕ್ಕೆ ಮುಜುಗರ

    ಪಠ್ಯ ಪುಸ್ತಕದಲ್ಲೂ ಗೋಲ್ ಮಾಲ್- ಎನ್‍ಸಿಇಆರ್ ಟಿಯಿಂದ ಸರ್ಕಾರಕ್ಕೆ ಮುಜುಗರ

    ಬೆಂಗಳೂರು: ರಾಜ್ಯದ ಮಕ್ಕಳು ಓದುತ್ತಿರೋದು ಕ್ವಾಲಿಟಿ ಬುಕ್ ಅಲ್ಲ. ಗುಣಮಟ್ಟದ ಪಠ್ಯ ನೀಡುತ್ತಿದ್ದೇವೆ ಅಂತ ಬಡಾಯಿ ಕೊಚ್ಚಿಕೊಂಡಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ.

    ರಾಜ್ಯ ಪಠ್ಯವನ್ನು ಕಳೆದ ವರ್ಷ ಪರಿಷ್ಕರಣೆ ಮಾಡಿದ್ದು, ಸರ್ಕಾರದ ಪುಸ್ತಕಗಳು ನಿಯಮದ ವಿರುದ್ಧವಾಗಿದೆ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ ಆಂಡ್ ಟ್ರೈನಿಂಗ್ ಸಂಸ್ಥೆ (ಎನ್‍ಸಿಇಆರ್ ಟಿ) ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಎರಡು ವರ್ಷಗಳ ಕಾಲ ನಡೆದ ಪಠ್ಯಪುಸ್ತಕ ಪರಿಷ್ಕರಣೆ ವ್ಯರ್ಥವಾಗಿದೆ.

    ಎನ್‍ಸಿಇಆರ್ ಟಿ ಅಸಮಾಧಾನಕ್ಕೆ ಬೆಚ್ಚಿ ಬಿದ್ದಿರೋ ರಾಜ್ಯ ಸರ್ಕಾರ, ಗುಣಮಟ್ಟದ ಪಠ್ಯ ರಚನೆಗೆ ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. 6 ಪರಿಷತ್ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಬಿಜೆಪಿಯ ಅರುಣ್ ಶಹಾಪುರ ಸಮಿತಿ ಅಧ್ಯಕ್ಷರಾಗಿದ್ದಾರೆ. ಗುಣಮಟ್ಟದ ಶಿಕ್ಷಣದ ಅಂಶಗಳು, ಎನ್‍ಸಿಇಆರ್ ಟಿ ಪುಸ್ತಕ ಪರಿಶೀಲಿಸಿ, ಈ ಸಮಿತಿ ವರದಿ ನೀಡುತ್ತೆ. ಬಳಿಕ ಪಠ್ಯ ಪುಸ್ತಕದಲ್ಲಿ ಈ ಅಂಶಗಳನ್ನ ಸರ್ಕಾರ ಅಳವಡಿಸಲಿದೆ.

    ವಿಪರ್ಯಾಸ ಅಂದ್ರೆ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕೃತಗೊಂಡ ಪಠ್ಯಪುಸ್ತಕವನ್ನು ಕಳೆದ ವರ್ಷ ಸರ್ಕಾರ ಅಳವಡಿಸಿಕೊಂಡಿತ್ತು. ಆದ್ರೆ ಇದೀಗ ರಾಜ್ಯದ ಪರಿಷ್ಕೃತ ಪಠ್ಯಕ್ಕೆ ಎನ್ ಸಿಇಆರ್‍ಟಿ ಆಕ್ಷೇಪ ವ್ಯಕ್ತಪಡಿಸಿದ್ದು, ಪಠ್ಯ ಪುಸ್ತಕದ ಮೌಲ್ಯದ ಮೇಲೆ ಅನುಮಾನ ಬೀಳುವಂತೆ ಮಾಡಿದೆ.

     

     

  • ಇಂದು ದೇವೇಗೌಡರ `ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆ

    ಇಂದು ದೇವೇಗೌಡರ `ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ಕುರಿತಾದ `ಸಾಧನೆಯ ಶಿಖರಾರೋಹಣ’ ಎಂಬ ಪುಸ್ತಕ ಇಂದು ಬಿಡುಗಡೆಯಾಗುತ್ತಿದೆ.

    ಪುಸ್ತಕ ಬಿಡುಗಡೆಗಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

    ಡಾ.ಪ್ರಧಾನ್ ಗುರುದತ್ತ, ಡಾ.ಸಿ.ನಾಗಣ್ಣ ಅವರು ಬರೆದಿರುವ ಪುಸ್ತಕ ಇದಾಗಿದ್ದು, ಪ್ರಧಾನ ಮಂತ್ರಿಯಾಗಿ ದೇವೇಗೌಡ ಅವರು ಮಾಡಿರುವ ಸಾಧನೆಗಳು, ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಷಡ್ಯಂತ್ರಗಳು ಸೇರಿದಂತೆ ಹಲವು ಮಜಲುಗಳು ಈ ಪುಸ್ತಕದಲ್ಲಿ ಅಡಕವಾಗಿದೆ.

    ಇನ್ನು ಈ ಪುಸ್ತಕದಲ್ಲಿ ರಾಮಕೃಷ್ಣ ಹೆಗಡೆ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದ್ದು, ಅವರಿಗೆ ಪಾದರಕ್ಷೆಯಲ್ಲಿ ಹೊಡೆತ ಬಿದ್ದಿದ್ದು, ಈ ವೇಳೆ ಬೊಮ್ಮಾಯಿಯವರಿಗೆ ಪೆಟ್ಟಾದ ವಿಷಯ ಉಲ್ಲೇಖ ಮಾಡಲಾಗಿದೆ. ಅಷ್ಟೇ ಅಲ್ಲದೇ ಎರಡು ದಿನಗಳ ಹಿಂದೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಹೆಗಡೆ, ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದು, ಇದಕ್ಕೆ ಜನ ರೊಚ್ಚಿಗೆದ್ದಿದ್ದರ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • ಮಂಗ್ಳೂರಿಂದ ನಿರ್ಗಮಿಸುವಾಗ ಪ್ರಧಾನಿ ಮೋದಿಗೆ ಸಂಸದ ನಳಿನ್ ಗಿಫ್ಟ್!

    ಮಂಗ್ಳೂರಿಂದ ನಿರ್ಗಮಿಸುವಾಗ ಪ್ರಧಾನಿ ಮೋದಿಗೆ ಸಂಸದ ನಳಿನ್ ಗಿಫ್ಟ್!

    ಮಂಗಳೂರು: ಲಕ್ಷದ್ವೀಪಕ್ಕೆ ತೆರಳಲೆಂದು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ತಡರಾತ್ರಿ ಮಂಗಳೂರಿಗೆ ಬಂದಿಳಿದಿದ್ದು, ಅಲ್ಲಿಂದ ನಿರ್ಗಮಿಸುವಾಗ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉಡುಗೊರೆಯೊಂದನ್ನು ನೀಡಿದ್ದಾರೆ.

    ಶ್ರೀಕ್ಷೇತ್ರ ಧರ್ಮಸ್ಥಳದಿಂದ ರಚಿತವಾದ ಮೋದಿಯ ಧರ್ಮಸ್ಥಳ ಭೇಟಿಯ ಸಚಿತ್ರ ವರದಿಯ ಪುಸ್ತಕವನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಲಾಗಿದೆ. ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಹೊತ್ತಿಗೆ ಸಂಸದ ನಳಿನ್‍ಕುಮಾರ್ ಕಟೀಲ್ ಪ್ರಧಾನಿಗೆ ಈ ಪುಸ್ತಕ ನೀಡಿದ್ದಾರೆ.

    ಧರ್ಮಸ್ಥಳದಿಂದ ರಚಿತವಾಗಿದ್ದು ಅಂದಾಕ್ಷಣ ಖುಷಿಯಿಂದ ಸ್ವೀಕರಿಸಿದ ಮೋದಿ ಸಂಪೂರ್ಣ ಓದೋದಾಗಿ ಹೇಳಿದ್ದಾರೆ. ಕಳೆದ ಅಕ್ಟೋಬರ್ 29ರಂದು ಧರ್ಮಸ್ಥಳ ಕ್ಕೆ ಭೇಟಿ ನೀಡಿದ ಮೋದಿ ಶ್ರೀ ಕ್ಷೇತ್ರದಲ್ಲಿ ಹೆಗ್ಗಡೆ ಕುಟುಂಬದ ಆತಿಥ್ಯ ಸ್ವೀಕರಿಸಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂಪೇ ಕಾರ್ಡ್ ಬಿಡುಗಡೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಪ್ರಧಾನಿಯ ಐತಿಹಾಸಿಕ ಭೇಟಿಯ ಪ್ರತಿಯೊಂದು ಕ್ಷಣವನ್ನು ಪುಸ್ತಕದಲ್ಲಿ ಸಚಿತ್ರ ವರದಿ ಮಾಡಲಾಗಿದ್ದು, ಈಗ ಸ್ವತಃ ನರೇಂದ್ರ ಮೋದಿಯವರಿಗೇ ನೆನಪಿನ ಉಡುಗೊರೆಯಾಗಿ ನೀಡಲಾಗಿದೆ.

    ಸೋಮವಾರ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದ ಮೋದಿ ಬೆಳಗ್ಗೆ 7.30ಕ್ಕೆ ರಸ್ತೆ ಮಾರ್ಗ ಮೂಲಕ ಹೊರಟರು. ಮಂಗಳೂರಿನ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿ, ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ಪ್ರಯಾಣಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕೆಲ ನಿಮಿಷಗಳ ಕಾಲ ತಡೆಹಿಡಿಯಲಾಗಿತ್ತು.

    ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಪ್ರವಾಸಕ್ಕೆ ಎರಡು ವಿಶೇಷ ವಿಮಾನಗಳನ್ನು ರೆಡಿ ಮಾಡಲಾಗಿತ್ತು. ಈ ಪೈಕಿ ಒಂದು ವಿಮಾನದ ಮೂಲಕ ಮೋದಿ ಲಕ್ಷದ್ವೀಪಕ್ಕೆ ತೆರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ಮತ್ತೊಂದು ವಿಶೇಷ ವಿಮಾನ ಕೂಡ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿದೆ. ಇತ್ತೀಚೆಗೆ ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಭೇಟಿ ನೀಡಿ, ಪುನರ್ವಸತಿ ಕಾರ್ಯಗಳನ್ನು ವೀಕ್ಷಿಸಲಿದ್ದಾರೆ. ಸಂಜೆ ಅಲ್ಲಿಂದ ತಿರುವನಂತಪುರದ ಮೂಲಕ ದೆಹಲಿಗೆ ಪ್ರಯಾಣಿಸಲಿದ್ದಾರೆ.

     

  • ಪ್ರಧಾನಿ ಮೋದಿ ಸ್ವಾಗತಕ್ಕೆ ಇನ್ಮುಂದೆ ಹೂಗುಚ್ಛ ನೀಡುವಂತಿಲ್ಲ- ಈ ವಸ್ತುಗಳನ್ನ ಮಾತ್ರ ನೀಡ್ಬಹುದು

    ಪ್ರಧಾನಿ ಮೋದಿ ಸ್ವಾಗತಕ್ಕೆ ಇನ್ಮುಂದೆ ಹೂಗುಚ್ಛ ನೀಡುವಂತಿಲ್ಲ- ಈ ವಸ್ತುಗಳನ್ನ ಮಾತ್ರ ನೀಡ್ಬಹುದು

     

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ರಾಜ್ಯಗಳ ಪ್ರವಾಸದಲ್ಲಿ ತೊಡಗಿದಾಗ ಅವರನ್ನ ಸ್ವಾಗತಿಸಲು ಹೂಗುಚ್ಛ ಬಳಸದಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

    ಹೂಗುಚ್ಛದ ಬದಲು ಪ್ರಧಾನಿ ಮೋದಿಗೆ ಒಂದು ಹೂ ಜೊತೆಗೆ ಖಾದಿ ಕರವಸ್ತ್ರ ಅಥವಾ ಪುಸ್ತಕ ನೀಡಿ ಅವರನ್ನು ಸ್ವಾಗತಿಸಬಹುದು ಎಂದು ಹೇಳಿದೆ. ಈ ಸೂಚನೆಯನ್ನು ಎಲ್ಲಾ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಪಾಲಿಸಬೇಕು ಎಂದು ಹೇಳಿದೆ. ಈ ಸೂಚನೆಯನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.

    ಜೂನ್ 17ರಂದು ಕೇರಳದಲ್ಲಿ ಪಿಎನ್ ಪಣಿಕ್ಕರ್ ನ್ಯಾಷನಲ್ ರೀಡಿಂಗ್ ಡೇ ಗೆ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಿ ಮೋದಿ, ಜನರು ಸ್ವಾಗತ ಕೋರಲು ಹೂಗುಚ್ಛದ ಬದಲು ಪುಸ್ತಕ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ಇದರಿಂದ ದೊಡ್ಡ ಬದಲಾವಣೆಯಾಗಬಹುದು ಎಂದು ಹೇಳಿದ್ದರು. ಅಲ್ಲದೆ ಸಾಕ್ಷರತೆಯ ವಿಷಯದಲ್ಲಿ ಕೇರಳ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಓದುವುದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ಹಾಗೂ ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ ಎಂದು ಹೇಳಿದ್ದರು.

    ಜೂನ್ 25ರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಕೂಡ ಮೋದಿ ಹೂಗುಚ್ಛಗಳ ಕೊಡುಕೊಳುಗೆಯನ್ನು ನಿಲ್ಲಿಸಿ ಖಾದಿ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವಂತೆ ಹೇಳಿದ್ದರು. ಒಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಅವರು ಹೂಗುಚ್ಛಗಳ ಬದಲಾಗಿ ಪುಸ್ತಕವನ್ನ ಉಡುಗೊರೆಯಾಗಿ ನೀಡ್ತೀವಿ ಅಂದ್ರು. ನನಗದು ಇಷ್ಟವಾಯಿತು ಎಂದು ಮೋದಿ ಹೇಳಿದ್ದರು.

  • 10-12ನೇ ಕ್ಲಾಸ್ ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆಯಲಿದ್ದಾರೆ ಮೋದಿ

    10-12ನೇ ಕ್ಲಾಸ್ ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆಯಲಿದ್ದಾರೆ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಯುವ ಜನತೆಗಾಗಿ ಒಂದು ಪುಸ್ತಕವನ್ನ ಬರೆಯಲಿದ್ದಾರೆ. ಈ ಪುಸ್ತಕದಲ್ಲಿ ಅವರು ಪರೀಕ್ಷೆಯ ಒತ್ತಡ, ಏಕಾಗ್ರತೆ ಕಾಯ್ದುಕೊಳ್ಳುವುದು ಹೇಗೆ, ಪರೀಕ್ಷೆ ಮುಗಿದ ಮೇಲೆ ಏನು ಮಾಡಬೇಕು ಎಂಬ ವಿಷಯಗಳ ಬಗ್ಗೆ ಹೇಳಲಿದ್ದಾರೆ.

    ಈ ಪುಸ್ತಕ ವಿವಿಧ ಭಾಷೆಗಳಲ್ಲಿ ಮುದ್ರಣವಾಗಲಿದ್ದು, ಇದೇ ವರ್ಷ ಬಿಡುಗಡೆಯಾಗಲಿದೆ ಎಂದು ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿದೆ.

    ವಿದ್ಯಾರ್ಥಿಗಳಿಗೆ ಸಂಬಂಧಿಸಿದ, ಅದರಲ್ಲೂ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಅನ್ವಯಿಸುವ ಅನೇಕ ವಿಷಯಗಳನ್ನ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಪುಸ್ತಕದ ಮೂಲಕ ಪ್ರಧಾನಿ ಮೋದಿ ಮಕ್ಕಳಿಗೆ ಗೆಳೆಯನಾಗಿ ಅವರು ಪರೀಕ್ಷೆಗೆ ತಯಾರಾಗಲು ನೆರವಾಗಲಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ.

    ಅಂಕಗಳಿಗಿಂತ ಜ್ಞಾನವನ್ನು ಯಾಕೆ ಮುಖ್ಯವಾಗಿಸಿಕೊಳ್ಳಬೇಕು, ಭವಿಷ್ಯಕ್ಕಾಗಿ ಹೇಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮೋದಿ ಸಂವಾದದಂತೆ ಮುಕ್ತವಾಗಿ ಮಾತನಾಡಲಿದ್ದಾರೆ. ಈ ಪುಸ್ತಕದ ಐಡಿಯಾ ಮೋದಿ ಅವರಿಂದಲೇ ಬಂದಿದ್ದಂತೆ. ಅವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಅಂತಹದ್ದೇ ಆಲೋಚನೆಗಳನ್ನ ಒಟ್ಟುಗೂಡಿಸಿ ಕೆಲವು ಸತ್ಯ ಸಂಗತಿಗಳೊಂದಿಗೆ ಮತ್ತಷ್ಟು ಚೆನ್ನಾಗಿ ಪುಸ್ತಕ ರೂಪದಲ್ಲಿ ಹೊರತರಲಿದ್ದಾರೆ.

    ನನ್ನ ಮನಸ್ಸಿಗೆ ಹತ್ತಿರವಿರುವ ವಿಷಯದ ಬಗ್ಗೆ ನಾನೊಂದು ಪುಸ್ತಕ ಬರೆಯಬೇಕೆಂದಿದ್ದೇನೆ. ‘ಯುವಕರು ಮುನ್ನಡೆಸುವ ನಾಳೆ’ಯ ಬಗ್ಗೆ ನನ್ನ ದೂರದೃಷ್ಟಿಗೆ ಇದು ಮೂಲಭೂತವಾದುದು ಎಂದು ಮೋದಿ ಹೇಳಿರುವುದಾಗಿ ಪ್ರಕಾಶಕರು ಹೇಳಿಕೆ ನಿಡಿದ್ದಾರೆ. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್ ಎಂಬ ಸಂಸ್ಥೆ ಈ ಪುಸ್ತಕಕ್ಕಾಗಿ ತಂತ್ರಜ್ಞಾನ ಹಾಗೂ ನಾಲೆಜ್ಡ್ ಪಾಟ್ರ್ನರ್ ಆಗಿದೆ.

    ದೇಶದ ಯುವ ಜನತೆಗೆ ಮೋದಿ ಅವರ ಸಂದೇಶವನ್ನ ತಲುಪಿಸುವ ನಿಟ್ಟಿನಲ್ಲಿ ಅವರ ಪುಸ್ತಕ ಪ್ರಕಟಿಸಲು ನಮಗೆ ತುಂಬಾ ಸಂತೋಷವಿದೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ನ ಸಿಇಓ ಗೌರವ್ ಸ್ರೀನಾಗೇಶ್ ಹೇಳಿದ್ದಾರೆ.